ಗೊಗ್ಗವ್ವೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೊಗ್ಗವ್ವೆ
ಜನನ೧೧೬೦
ಅಂಕಿತನಾಮನಾಸ್ತಿನಾಥಾ


ಗೊಗ್ಗವ್ವೆ ಬಾಲ್ಯದಿಂದಲೂ ವಿಶಿಷ್ಟ ಶಿವಭಕ್ತೆ. ಇವಳ ಜೀವನ ಒಂದು ಬಗೆಯ ಹೋರಾಟದಿಂದ ಕೂಡಿದೆ. ಹೆತ್ತವರು ಈಕೆಗೆ ವಿವಾಹ ಮಾಡಲು ಬಯಸಿದಾಗ, ಮದುವೆ ಬಗ್ಗೆ ಆಸಕ್ತಿ ಇರದ ಈಕೆ 'ಗೊಗ್ಗಳೇಶ್ವರ' ದೇಗುಲದಲ್ಲಿ ಅಡಗಿ ಕುಳಿತು ವಿವಾಹ ಆಗುವ ಸಂದರ್ಭವನ್ನು ತಪ್ಪಿಸಿಕೊಂಡ ಳಂತೆ. ಇವಳು ಗೊಗ್ಗಳೇಶ್ವರ ದೇವಾಲಯದಲ್ಲಿ ಧೂಪದ ಕಾಯಕ ಮಾಡುತ್ತಿದ್ದುದರಿಂದ ಈಕೆಯನ್ನು 'ಧೂಪದ ಗೊಗ್ಗವ್ವೆ'ಯೆಂದೂ ಕರೆಯುವರು. ಈಕೆಯ ವಚನಗಳ ಅಂಕಿತ 'ನಾಸ್ತಿನಾಥಾ'.

ಅನಲಕೊಂಡ ಭೋಗಕ್ಕೆ ಪರಿ ಪ್ರಕಾರವುಂಟೇ ?
ಶರಧಿಕೊಂಡ ಸಾಗರಕ್ಕೆ ಕುರುಹಿನ ತಲೆಯೇ ?
ಲಿಂಗ ಮುಟ್ಟಿದ ಅಂಗಕ್ಕೆ ಮತ್ತೆ
ಪುಣ್ಯವುಂಟೇ ? ಹುಸಿ ನಾಸ್ತಿನಾಥಾ!

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಇವರು ರಚಿಸಿರುವ ಆರು ವಚನಗಳು ಲಭ್ಯವಿವೆ... ವಚನ... ॥॥ಉದ್ದವನೇರುವದಕ್ಕೆ ಗದ್ದುಗೆಯಿಲ್ಲದೆ ಎಯ್ದಬಾರದು, ಚಿದ್ರೋಪನರಿಯುವದಕ್ಕೆ,ಅರ್ಚನೆ,ಪೂಜೆ ನಿತ್ಯ ನಿಯಮವಿಲ್ಲದೆ ಕಾಣಬಾರದು.ಅದು ಸತ್ಯದಿಂದ ಮಾಡಿ,ಅಸತ್ಯವ ಮೆರೆದೆಡೆ ಅದೇ ಸತ್ಯವೆಂಬೆ ನಾಸ್ತಿನಾಥ॥॥

3ನೇ ವಚನ ॥॥ಗಂಡು ಮೋಹಿಸಿ,ಹೆಣ್ಣು ಹಿಡಿದೆಡೆ ಒಬ್ಬರ ಒಡವೆ ಎಂದರಿಯಬೇಕು.ಹೆಣ್ಣು ಮೊಹಿಸಿ,ಗಂಡು ಹಿಡಿದೆಡೆ ಉತ್ತರವಾವುದೆಂದರಿಯಬೇಕು.ಇ ಎರಡು ಉಭಯವ ಕಳೆದು ಸುಖಿ ತಾನಾಗಬಲ್ಲೆದು ನಾಸ್ತಿನಾಥನು ಪರಿಪೂರ್ಣನೆಂಬೆ॥॥

4 ನೇ ವಚನ

॥॥ಮಾರುತನಲ್ಲಿ ಬೆರೆದ ಗಂಧದಂತೆ,ಸುರತದಲ್ಲಿ ಬೆರೆದ ಸುಖದಂತೆ,ಮಚ್ಚಿನಲ್ಲಿ ಕೊಡುವ ಉಚಿತದಂತೆ ಭಕ್ತರಿಗದೆ ಹಾದಿಎಂಬೇ ನಾಸ್ತಿನಾಥ॥॥

5 ನೇ ವಚನ

॥॥ಭಕ್ತರು ಜಂಗಮರಲ್ಲಿ ಕಟ್ಟಿ ಹೋರಬೇಕೆ.. ಧೂಪದ ಹೊಗೆ ಎತ್ತೆ ಹೋದರು ಅದು ಸತ್ಯವೆಂಬೆ ನಾಸ್ತಿನಾಥ॥॥

6 ನೇ ವಚನ

॥॥ಮೊಲೆ ಮೂಡಿ ಬಂದೆಡೆ ಹೆಣ್ಣೆಂಬರು, ಮಿಸೆ,ಕಾಸಿ ಬಂದೆಡೆ ಗಂಡೆಂಬರು ಇ ಎರಡು ಉಭಯವು ಹೆಣ್ಣೊ ಗಂಡೊ ಹುಸಿ ನಾಸ್ತಿನಾಥ॥॥

॥॥ ಗೊಗ್ಗವ್ವೆ ॥॥

ಇವರು ೧೨ನೇ ಶತಮಾನದ ವಚನಕಾರರಲ್ಲಿ ಒಬ್ಬರು. ಇವರು ಬಾಲ್ಯದಿಂದಲೆ ಶಿವನ ಆರಾಧಕರಾಗಿದ್ದರು. ಇವರು ಮೂಲತಃ ಕೇರಳ ರಾಜ್ಯದ ಅವಲೂರಿನವರು. ಇವರು ತಮ್ಮ ಮದುವೆಯ ವಯಸ್ಸಿಗೆ ಬಂದಾಗ ಮನೆಯವರು ಇವರ ಮದುವೆ ವಿಷಯದ ಪ್ರಸ್ತಾವನೆ ಇವರ ಮುಂದಿಟ್ಟರು. ಆದರೆ ಇವರಿಗೆ ಮದುವೆಯ ವೈವಾಹಿಕ ಜೀವನ ಆಸಕ್ತಿ ಇಲ್ಲದಿರುವ ಕಾರಣ ಅವರೂರಿನ ಗೊಗ್ಗಳೇಶ್ವರ ದೇವಾಲಯದಲ್ಲಿ ಅಡಗಿ ಕುಳಿತಿದ್ದರಂತೆ.‌ ಮನೆಯವರು ಎಷ್ಟೇ ಕರೆದರು ಇವೆಲ್ಲವೂ ಬೇಡವೆಂದು ಆ ದೇವಾಲಯದಲ್ಲಿಯೇ ಶಿವನಿಗೆ ಪೂಜೆ ಕೈಂಕರ್ಯಗಳನ್ನು ಮಾಡತೊಡಗಿದರು. ಶಿವನಿಗೆ ದಿನಾಲು ಧೂಪ ಹಾಕುವ ಕಾಯಕವನ್ನು ಮಾಡುತಿದ್ದರಂತೆ. ಒಂದು ದಿನ ಸಾಕ್ಷಾತ್ ಪರಶಿವನೇ ಇವರನ್ನು ಪರೀಕ್ಷಿಸಲು ಬಂದಿದ್ದರಂತೆ. ಇವರ ಬಳಿ ಬಂದು ಕೈಲಾಸಕ್ಕೆ ಹೋಗುವ ದಾರಿಯನ್ನು ಕೇಳಿದ್ದರಂತೆ. ಇವರು ಗೊಗ್ಗವ್ವೆಯವರು ಶಿವನಿಗೆ ತಮ್ಮ ಧೂಪದ ಹೊಗೆಯ ಮೂಲಕ ಶಿವನಿಗೆ ಕೈಲಾಸದ ದಾರಿ ತೋರಿಸಿದರಂತೆ. ಹೀಗೆ ಮುಂದುವರಿದಂತೆ ಇತ್ತ ಕರ್ನಾಟಕದತ್ತ ಬಂದು ಅನುಭವ ಮಂಟಪದಲ್ಲಿ ಬಂದು ನೆಲೆಸಿದರಂತೆ. ಇವರು ಭಾಷೆ ಗಡಿಗೂ ಮೀರಿದ ಶಿವಶರಣೆಯಲ್ಲಿ ಒಬ್ಬರು. ಇಲ್ಲಿ ಕರ್ನಾಟಕಕ್ಕೆ ಬಂದು ಇಲ್ಲಿ ನೆಲೆಸಿ ಭಾಷೆ ಸಾಹಿತ್ಯವನ್ನು ಅರಿತು ವಚನಗಳನ್ನು ರಚಿಸಿದರೆಂದರೆ ಇವರ ಸಾಧನರ ಅಮೋಘ ಕೊಡುಗೆ.

     ವಿಶೇಷ.....

ಹೀಗೆ ಕಲ್ಯಾಣದ ಕ್ರಾಂತಿ ನಡೆದಾಗ ಎಲ್ಲ ಶಿವಶರಣೆಯರು ಚದುರಿ ಹೋದರು ಒಂದೊಂದು ಸ್ಥಳಕ್ಕೆ. ಇವರು ಗೊಗ್ಗವ್ವೆಯವರು ಬಂದು ನೆಲೆಸಿದ್ದು. ಕರ್ನಾಟಕದ ಬೀದರ ಜಿಲ್ಲೆಯ ಔರಾದ ತಾಲ್ಲೂಕಿನ ಧೂಪತಮಾಹಾಗಾಂವ ಎಂಬ ಗ್ರಾಮದಲ್ಲಿ ಈ ಊರಿಗೆ ಈ ಹೆಸರು ಬರಲು ಇವರೇ ಕಾರಣ ಇವರು ಧೂಪ ಉರಿಸುತಿದ್ದ ಕಾರಣ ಇದ್ದ ಹೆಸರನ್ನು ಬದಲಿಸಿ ಧೂಪತಮಾಹಾಗಂವ ಎಂದು ಮರುನಾಮಕರಣ ಮಾಡಿದ್ದರಂತೆ ಇ ಗ್ರಾಮಕ್ಕೆ ಉಲ್ಲೇಖವಿದೆ.

ಇವರು ಐಕ್ಯವಾದ ಸ್ಥಳದಲ್ಲಿ ಒಂದು ದೇವಾಲಯವು ನಿರ್ಮಾಣವಾಗಿದೆ. ಇವಾಗ ಮತ್ತೆ ಆ ದೇವಾಲಯದಲ್ಲಿ ಭವ್ಯವಾದ ತೋಟವನ್ನು ನಿರ್ಮಿಸಿದ್ದಾರೆ. ಇಲ್ಲಿ ಗೊಗ್ಗವ್ವೆ ಕೆರೆ ಎಂತಲೂ ಕೂಡ ಇದೆ.