ಗಿಜಿಗಿಜಿ ಗಿಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗಿಜಿಗಿಜಿ ಗಿಡ

ಬೀಳುಭೂಮಿ , ಪಾಳುಜಾಗ, ರಸ್ತೆಬದಿಗಳಲ್ಲಿ ಬೆಳೆಯುವ ಕಳೆಗಿಡದಂತೆ ಕಾಣುವ ಸಸ್ಯ , ಕ್ರೋಟಾರಿಯ ಪಲ್ಲಿಡ (Crotalaria pallida) ಇದರ ಸಸ್ಯಶಾಸ್ತ್ರೀಯ ಹೆಸರು  .    ಇದನ್ನು rattlepod ಎಂದು  ಇಂಗ್ಲೀಷಿನಲ್ಲಿ ಕರೆಯುತ್ತಾರೆ .

ಮೂಲ[ಬದಲಾಯಿಸಿ]

ಆಫ್ರಿಕಾದಿಂದ ಈ ಸಸ್ಯ ಭಾರತಕ್ಕೆ ಬಂದಿದೆ.

ವಿವರಣೆ[ಬದಲಾಯಿಸಿ]

ಇದರ ಒಣ ಕಾಯಿಗಳಿಂದ ಗಿಜಿಗಿಜಿ ಶಬ್ದ ಉಂಟಾಗುತ್ತದೆ.

ಪ್ರತಿ ಎಲೆಯು ಅಂಡಾಕಾರವಾಗಿದ್ದು ಬುಡದಲ್ಲಿ ಮೂರು ಕಿರು ಎಲೆಗಳಿರುತ್ತವೆ. ಕಾಂಡದ ತುದಿಯಲ್ಲಿ ಗೋಪುರದಂತೆ ಹಲದಿ ಹೂಗಳು ಇರುತ್ತವೆ. ಕಾಯಿಗಳು ಗೊಂಚಲುಗಳಲ್ಲಿದ್ದು ಪ್ರತಿ ಕಾಯಿಯು ೪-೫ ಸೆ.ಮೀ. ಉದ್ದ ಇದ್ದು ಒಳಗೆ ಗಾಳಿಯೂ ೨೦-೩೦ ಬೀಜಗಳೂ ಇರುತ್ತವೆ.

ಸಸ್ಯದ ಉದ್ದ ೨-೩ ಅಡಿ. ಹೂವುಗಳು ಮತ್ತು ಕಾಯಿಗಳ ಕಾಲ ಜುಲೈನಿಂದ ಜನವರಿವರೆಗೆ.

ಉಪಯೋಗ[ಬದಲಾಯಿಸಿ]

ಕಜ್ಜಿ ರೋಗವನ್ನು ವಾಸಿ ಮಾಡುತ್ತದೆ