ಗಗನ ಮಹಲ್, ಬಿಜಾಪುರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಬಿಜಾಪುರಕ್ಕೆ ಆಗಮಿಸುವ ಪ್ರವಾಸಿಗರು ಇಲ್ಲಿನ ಅರಮನೆ ಗಗನ ಮಹಲ್ ನೋಡಲೇಬೇಕು. ಬಿಜಾಪುರ ಪಟ್ಟಣದಿಂದ 2 ಕಿ.ಮೀ. ದೂರದಲ್ಲಿರುವ ಈ ಅರಮನೆ. ಮೊಘಲ್ ಸಾಮ್ರಾಜ್ಯದ ದೊರೆ ಒಂದನೇ ಆದಿಲ ಶಾಹನು ಕ್ರಿ.ಶ.1561 ರಲ್ಲಿ ಈ ಅರಮನೆಯನ್ನು ಎರಡು ಉದ್ದೇಶಗಳಿಗೆಂದು ನಿರ್ಮಿಸಲು ಆದೇಶಿಸಿದನು. ಒಂದನೇ ಆದಿಲ ಶಾಹನು ತನ್ನ ಆರಾಮದ ಇರುವಿಕೆಗಾಗಿ ಹಾಗೂ ತನ್ನ ಆಸ್ಥಾನವನ್ನಾಗಿ ಇದೇ ಗಗನ ಮಹಲ್ ನ್ನು ಉಪಯೋಗಿಸುತ್ತಿದ್ದನೆಂದು ಇತಿಹಾಸದಲ್ಲಿ ದಾಖಲಾಗಿದೆ.[೧] ಮುಂಭಾಗದಲ್ಲಿ 21 ಮೀಟರ್ ಅಗಲದ ಬೃಹತ್ತಾದ ಕಟ್ಟಿಗೆಯ ಕಂಬಗಳು ಮತ್ತು ಗೋಡೆಗಳನ್ನು ಹೊಂದಿರುವ ಈ ಅರಮನೆಯ ಆವರಣವು ಆದಿಲ ಶಾಹನ ಆಸ್ತಾನವಾಗಿತ್ತು. ಅರಮನೆಯ ಮೊದಲನೇ ಮಹಡಿಯು ಗಣ್ಯ ವ್ಯಕ್ತಿಗಳ ಮತ್ತು ತನ್ನ ವಿಶೇಷ ಅತಿಥಿಗಳಿಗೆಂದು ಮೀಸಲಾಗಿರಿಸಿದ್ದನೆಂಬುದು ಇತಿಹಾಸದಲ್ಲಿ ಉಲ್ಲೇಖವಾಗಿದೆ.ಬಿಜಾಪುರದಲ್ಲಿನ ಎಲ್ಲ ಕಮಾನುಗಳಲ್ಲಿಯೇ ಈ ಅರಮನೆಯಲ್ಲಿರುವ ಕಮಾನು ಅತೀ ದೊಡ್ಡದಾದ ಮತ್ತು ಎತ್ತರವಾದ ಅಗಲವಾದ ಕಮಾನು ಎಂದು ದಾಖಲಾಗಿದೆ. ಸದ್ಯ ಈ ಕಮಾನ್ ಹೆಚ್ಚುಕಮ್ಮಿ ಪಳೆಯುಳಿಕೆಯಂತಾಗಿರುವುದರಿಂದ ಇಲ್ಲಿ ಸುಂದರವಾದ ಉದ್ಯಾನವನ ಮಾಡಲಾಗಿದೆ.ಗಗನ ಮಹಲ್ ನಲ್ಲಿರುವ ದರ್ಬಾರ್ ಹಾಲ್ ನಲ್ಲಿ ದೊಡ್ಡದಾದ ಆಸ್ಥಾನವಿದೆ. ಆಸ್ಥಾನದಲ್ಲಿ ನಡೆಯುತ್ತಿದ್ದ ಎಲ್ಲ ಚಟುವಟಿಕೆಗಳನ್ನು ಅರಮನೆ ಒಳಗಿನಿಂದಲೇ ಮತ್ತು ಹೊರಗಿನಿಂದಲೂ ಕೂಡ ವೀಕ್ಷಕರು ನೋಡಲು ಅನುಕೂಲವಾಗುವಂತೆ ಈ ದರ್ಬಾರ್ ಹಾಲ್ ನ್ನು ಕಟ್ಟಲಾಗಿದೆ. ಈ ಅರಮನೆ ಗೋಡೆ ಮತ್ತು ಕಂಬಗಳಿಗೆ ವಿಶಿಷ್ಟ ರೀತಿಯಲ್ಲಿ ಚಿತ್ರಕಲೆಯನ್ನು ಬಿಡಿಸಲಾಗಿದೆ. ಇಂದಿಗೂ ಕೂಡ ಆ ಚಿತ್ರಗಳು ಪ್ರವಾಸಿಗರಿಗೆ ಮನಸೆಳೆಯುತ್ತಲಿವೆ.[೨]

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2016-11-14. Retrieved 2016-11-11.
  2. http://wikimapia.org/7146121/Gagan-Mahal