ಕ್ರಿಸ್ಟಿನಾ ಕೋಚ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದೀರ್ಘ ಗಗನಯಾತ್ರೆಯ ವಿಶ್ವ ದಾಖಲೆ- 2020[ಬದಲಾಯಿಸಿ]

ಕ್ರಿಸ್ಟಿನಾ ಕೋಚ್ ಇಎಂಯುನಲ್ಲಿ ಅಧಿಕೃತ ಭಾವಚಿತ್ರ
  • ಕ್ರಿಸ್ಟಿನಾ ಹ್ಯಾಮಕ್ ಕೋಚ್ (ಜನನ ಜನವರಿ 29, 1979-ವರ್ಷ41)) ಒಬ್ಬ ಅಮೇರಿಕನ್ ಮಹಿಳಾ ಎಂಜಿನಿಯರ್ ಮತ್ತು 2013 ರ ವರ್ಗದ ನಾಸಾ ಗಗನಯಾತ್ರಿ. ಅವರು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮತ್ತು ಭೌತಶಾಸ್ತ್ರದಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿಗಳನ್ನು ಪಡೆದರು ಮತ್ತು ಉತ್ತರ ಕೆರೊಲಿನಾ ಸ್ಟೇಟ್ ಯೂನಿವರ್ಸಿಟಿಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಮಾಸ್ಟರ್ ಆಫ್ ಸೈನ್ಸ್ ಪಡೆದರು. ಗೊಡ್ಡಾರ್ಡ್ ಬಾಹ್ಯಾಕಾಶ ಹಾರಾಟ ಕೇಂದ್ರದಲ್ಲಿ (ಜಿಎಸ್‌ಎಫ್‌ಸಿ) ಕೆಲಸ ಮಾಡುವಾಗ ಅವರು ಸುಧಾರಿತ ಅಧ್ಯಯನವನ್ನೂ ಮಾಡಿದರು. ಗಗನಯಾತ್ರಿ ಆಗುವ ಮುನ್ನ, ಅವರು ನ್ಯಾಷನಲ್ ಓಷಿಯಾನಿಕ್ ಮತ್ತು ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಶನ್‌ನೊಂದಿಗೆ ಅಮೆರಿಕನ್ ಸಮೋವಾಕ್ಕೆ ಸ್ಟೇಷನ್ ಚೀಫ್ ಆಗಿ ಸೇವೆ ಸಲ್ಲಿಸಿದರು. [೧]

ಬಾಹ್ಯಾಕಾಶ ಯಾತ್ರೆ ಅಧ್ಯಯನ[ಬದಲಾಯಿಸಿ]

  • ಮಾರ್ಚ್ 14, 2019 ರಂದು, ಕ್ರಿಸ್ಟಿನಾ ಕೋಚ್ ದಂಡಯಾತ್ರೆ 59, 60 ಮತ್ತು 61 ರಲ್ಲಿ ಫ್ಲೈಟ್ ಎಂಜಿನಿಯರ್ ಆಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಪ್ರಾರಂಭಿಸಿದರು. ಅಕ್ಟೋಬರ್ 18, 2019 ರಂದು, ಅವರು ಮತ್ತು ಜೆಸ್ಸಿಕಾ ಮೀರ್ ಅವರು 'ಪೂರ್ಣ ಮಹಿಳಾ ತಂಡದ' ಬಾಹ್ಯಾಕಾಶ ನಡಿಗೆಯಲ್ಲಿ ಭಾಗವಹಿಸಿದ ಮೊದಲ ಮಹಿಳೆಯರು. ಡಿಸೆಂಬರ್ 28, 2019 ರಂದು, ಕ್ರಿಸ್ಟಿನಾ ಕೋಚ್ ಮಹಿಳೆಯು ಬಾಹ್ಯಾಕಾಶದಲ್ಲಿ ಅತಿ ಹೆಚ್ಚು ಸಮಯದವರೆಗೆ ಉಳಿದುಕೊಂಡ ಯಾತ್ರಿಗಳ ದಾಖಲೆಯನ್ನು ಮುರಿದರು. ಅವರು ಫೆಬ್ರವರಿ 6, 2020 ರಂದು ಬಾಹ್ಯಾಕಾಶದಿಂದ ಮರಳಿದರು.[೨]

ಕ್ಷೇಮವಾಗಿ ಭೂಮಿಗೆ[ಬದಲಾಯಿಸಿ]

  • 2019ರ ಮಾರ್ಚ್ 14ರಂದು ನಾಸಾದ ನಿಕ್‍ಹಾಗ್ ಮತ್ತು ರಷ್ಯಾದ ಅಲೆಕ್ಸಿ ಹೊಚಿನಿನ್‍ರ ಜೊತೆಗೆ ಕ್ರಿಸ್ಟಿನಾ ಕೋಚ್ ಸೂಯಜ್ ನೌಕೆಯ ಮೂಲಕ ನಭಕ್ಕೆ ಚಿಮ್ಮಲ್ಪಟ್ಟು ಐಎಸ್‌ಎಸ್‌ ತಲುಪಿದರು. ತಮ್ಮ ವಾಸ್ತವ್ಯದ ಅವಧಿಯಲ್ಲಿ ಸಹಗಗನಯಾತ್ರಿಗಳ ಜೊತೆಗೂಡಿ ಆರು ಬಾರಿ ಸ್ಪೇಸ್‍ವಾಕ್ (ಅಂತರಿಕ್ಷ ನಡಿಗೆ) ಮಾಡಿ, ಹಲವು ಪ್ರಯೋಗಗಳನ್ನು ಮಾಡಿದ್ದಾರೆ. ಇದಕ್ಕೂ ಮುಂಚೆ 2016-17ರಲ್ಲಿ 288 ದಿನಗಳ ಕಾಲ ಅಂತರಿಕ್ಷದಲ್ಲಿದ್ದು ಬಂದ ನಾಸಾದ ಪೆಗ್ಗಿ ವಿಟ್‍ಸನ್‍ರ ದಾಖಲೆ ಮುರಿದಿರುವ ಕೋಚ್‌, ಫೆಬ್ರವರಿ 6, 2020 ರಂದು ಯುರೋಪ್ ಸ್ಪೇಸ್ ಏಜೆನ್ಸಿಯ ಲುಕಾಪರ್ಮಿಟಾನೊ ಮತ್ತು ರಷ್ಯಾದ ಅಲೆಗ್ಸಾಂಡರ್ ಸ್ಕೊವೊರ್ಟ್ ಸೋವ್ ಅವರ ಜೊತೆಗೂಡಿ ಕಜಕಿಸ್ತಾನದ ಹಿಮಹಾಸಿನ ಝೆಕಾಗನ್ ಪಟ್ಟಣದ ಹೊರವಲಯದಲ್ಲಿ ಕ್ಷೇಮವಾಗಿ ಲ್ಯಾಂಡ್ ಆಗಿದ್ದಾರೆ.[೩]

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. ["NASA announces eight new astronauts, half are women". Phys.org. June 17, 2013. Retrieved October 21, 2019.]
  2. Rincon, Paul (February 6, 2020). "New female space record for Nasa astronaut". BBC News. Retrieved February 6, 2020.
  3. ಅಂತರಿಕ್ಷಯಾನ: ದಾಖಲೆಯ ಅಧ್ಯಯನ;ಶ್ರೀಗುರು Updated: 17 ಫೆಬ್ರವರಿ 2020,