ಕೋತಿಗಳು ಸಾರ್ ಕೋತಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

"ಕೋತಿಗಳು ಸಾರ್ ಕೋತಿಗಳು" ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ೨೦೦೧ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ. ಈ ಚಿತ್ರದಲ್ಲಿ ರಮೇಶ್ ಅರವಿಂದ್, ಎಸ್.ನಾರಾಯಣ್, ಮೋಹನ್, ಪ್ರೇಮಾ, ತಾರಾ ಮತ್ತು ಊರ್ವಶಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಬಾಬು ನಿರ್ದೇಶಿಸಿದ ಸಾರ್ ಸರಣಿಯಲ್ಲಿ "ಕುರಿಗಳು ಸಾರ್‌ ಕುರಿಗಳು" ನಂತರದ ಎರಡನೇ ಚಲನಚಿತ್ರವಾಗಿದೆ ಮತ್ತು ೨೮ ಡಿಸೆಂಬರ್ ೨೦೦೧ರಂದು ಬಿಡುಗಡೆಯಾಯಿತು. ಈ ಚಲನಚಿತ್ರವನ್ನು ತೆಲುಗಿನಲ್ಲಿ ಸಂದಡೆ ಸಂದಡಿ (೨೦೦೨), ಹಿಂದಿಯಲ್ಲಿ ಶಾದಿ ನಂ. 1 (೨೦೦೫) ಮತ್ತು ಬೆಂಗಾಲಿ (ಬಾಂಗ್ಲಾದೇಶ) ನಲ್ಲಿ ತೋಮಕೀ ಖುಜ್ಚಿ (೨೦೦೮) ಎಂಬ ಶೀರ್ಷಿಕೆಗಳಲ್ಲಿ ಮರುನಿರ್ಮಾಣವಾಯಿತು. ಇದು "ಅನುರಾಗ ಅರಳಿತು" ಮತ್ತು "ಅಪ್ಪು" ಚಿತ್ರಗಳ ನಂತರ ವಿದೇಶಿ ಭಾಷೆಯಲ್ಲಿ ರೀಮೇಕ್ ಆದ ಮೂರನೇ ಕನ್ನಡ ಚಲನಚಿತ್ರವಾಗಿದೆ.