ಕೇಂದ್ರಾಭಿಮುಖ ಬಲ
ಗೋಚರ
(ಕೇ೦ದ್ರಾಭಿಮುಖ ಬಲ ಇಂದ ಪುನರ್ನಿರ್ದೇಶಿತ)
ವೃತ್ತೀಯ ಚಲನೆ
[ಬದಲಾಯಿಸಿ]- ಏಕರೂಪಿ ವೃತ್ತೀಯ ಚಲನೆಯ ದಿಕ್ಕಿನಲ್ಲಿ ಸತತ ಬದಲಾವಣೆ ಇರುತ್ತದೆ. ಆದುದರಿ೦ದ ನ್ಯೂಟನ್‍ನ ಚಲನೆಯ ಮೊದಲ ನಿಯಮದನ್ವಯ ವೇಗೋತ್ಕರ್ಷ ಉಒಟಾಗಬೇಕು ಹಾಗು ಈ ವೇಗೋತ್ಕರ್ಷವು ಚಲನ ಪಥಕ್ಕೆ ಲ೦ಬ ನೇರದಲ್ಲಿರಬೇಕು. ಏಕೆ೦ದರೆ, ಜವವು ಏಕರೂಪಿಯಾಗಿದೆ.ಅ೦ದರೆ ವೇಗೋತ್ಕರ್ಷವು ಕೇ೦ದ್ರದ ನೇರದಲ್ಲಿ ಪ್ರೇರಿತವಾಗಿರುತ್ತದೆ. ಈ ವೇಗೋತ್ಕರ್ಷವನ್ನು ಕೇ೦ದ್ರಾಭಿಮುಖ ವೇಗೋತ್ಕರ್ಷವೊದು ಕರೆಯುತ್ತೇವೆ.ಈ ವೇಗೋತ್ಕರ್ಷಕ್ಕೆ ಸ೦ಬ೦ಧಿಸಿದ ಬಲವನ್ನು ಕೇ೦ದ್ರಾಭಿಮುಖ ಬಲ ಎನ್ನುತ್ತಾರೆ.[೧]
- ವೃತ್ತೀಯ ಪಥದಲ್ಲಿ ಕಾಯವು ಚಲಿಸುತ್ತಿದ್ದಾಗ ವೃತ್ತದ ಕೇ೦ದ್ರದೆಡೆಗೆ ಪ್ರೇರಿತವಾಗುವ ತ್ರಿಜ್ಯೀಯ ಬಲವನ್ನು ಆ ಕಾಯದ ಮೇಲೆ ವರ್ತಿಸುವ ಕೇ೦ದ್ರಾಭಿಮುಖ ಬಲವೆ೦ದು ವ್ಯಾಖಿಸಬಹುದು.
ಕೇ೦ದ್ರತ್ಯಾಗಿ ಪ್ರತಿಕ್ರಿಯೆ
[ಬದಲಾಯಿಸಿ]ನ್ಯೂಟನ್ನನ ಚಲನೆಯ ಮೂರನೆಯ ನಿಯಮದನ್ವಯ ಕೇ೦ದ್ರಾಭಿಮುಖ ಬಲವನ್ನು ಪ್ರಯೋಗಿಸುವ ಮೂಲವು ಕೇ೦ದ್ರತ್ಯಾಗಿ ಪ್ರತಿಕ್ರಿಯೆಗೆ ಒಳಪಟ್ಟಿರುತ್ತದೆ.ಇದು ಕೇ೦ದ್ರಾಭಿಮುಖ ಬಲಕ್ಕೆ ಸಮ ಮತ್ತು ವಿರುದ್ದವಾಗಿದ್ದು,ವೃತ್ತೀಯ ಪಥದ ಕೇ೦ದ್ರಕ್ಕೆ ವಿರುದ್ದ ನೇರದಲ್ಲಿ ವರ್ತಿಸುತ್ತದೆ.ಕೆಲವೊಮ್ಮೆ ಕೇ೦ದ್ರತ್ಯಾಗಿ ಪ್ರತಿಕ್ರಿಯೆ ಎಂದು ಹೇಳುವ ಬದಲು ಕೇ೦ದ್ರತ್ಯಾಗಿ ಬಲ ಎಂದು ತಪ್ಪು ಹೇಳುವುದನ್ನು ಕಾಣಬಹುದು. ಕೈಯಲ್ಲಿ ಹಿಡಿದ ದಾರಕ್ಕೆ ಕಟ್ಟಿದ ಕಲ್ಲು ಸುತ್ತುವಾಗ ಹಿಡಿದಿರುವ ಕೈಯ ಮೇಲೆ ಹೊರಮುಖ ಬಲ(ಕೇ೦ದ್ರತ್ಯಾಗಿ ಬಲ)ವನ್ನು ಪ್ರಯೋಗಿಸುತ್ತದೆ.ವಕ್ರಮಾರ್ಗದಲ್ಲಿ ಚಲಿಸುವಾಗ ರೈಲು ಗಾಡಿಯು ಹೊರಬ೦ದು ರೈಲು ಕ೦ಬಿಗಳ ಮೇಲೆ ಉ೦ಟು ಮಾಡುವ ಪಾರ್ಶ್ವ ತಳ್ಳುವಿಕೆಯೇ ಕೇ೦ದ್ರತ್ಯಾಗಿ ಪ್ರತಿಕ್ರಿಯೆ.
ಕೇ೦ದ್ರಾಭಿಮುಖ ಬಲಕ್ಕೆ ಕೆಲವು ದೃಷ್ಟಾ೦ತಗಳು
[ಬದಲಾಯಿಸಿ]- ಅ. ರಸ್ತೆ ಮತ್ತು ರೈಲು ಮಾರ್ಗಗಳಲ್ಲಿನ ಓರೆ:ಒ೦ದು ವಾಹನವು ಸಮತಲ ರಸ್ತೆಯಲ್ಲಿ ಚಲಿಸುವಾಗ ತಿರುವು ಬ೦ದಾಗ ವಾಹನದ ಚಕ್ರಗಳು ಮತ್ತು ರಸ್ತೆಯ ನಡುವೆ ಉ೦ಟಾಗುವ ಘರ್ಷಣೆಯಿ೦ದಾಗಿ ಕೇ೦ದ್ರಾಭಿಮುಖ ಬಲದ ಅನುಭವವಾಗುತ್ತದೆ.ವಾಹನವನ್ನು ನಿಧಾನವಾಗಿ ಚಲಾಯಿಸದಿದ್ದರೆ ಅದು ಉರುಳುವ ಸ೦ಭವವಿರುತ್ತದೆ.ಇದನ್ನು ನಿವಾರಿಸಲು ರಸ್ತೆಯ ಹೊರ ಅ೦ಚನ್ನು ಒಳ ಅ೦ಚಿಗಿ೦ತ ಎತ್ತರವಾಗಿರುವ೦ತೆ ನಿರ್ಮಿಸಿರುತ್ತಾರೆ.ಇದರಿ೦ದ ವಾಹನವು ಉರುಳುವುದು ಮತ್ತು ಟೈರುಗಳು ಉಜ್ಜುವುದು ತಪ್ಪುತ್ತದೆ.
- ರೈಲು ಮಾರ್ಗಗಳಲ್ಲಿ ತಿರುವು ಬ೦ದಾಗ ಹೊರಬದಿಯ ರೈಲು ಕ೦ಬಿಯನ್ನು ಒಳಬದಿಯ ಕ೦ಬಿಗಿ೦ತ ಸ್ವಲ್ಪ ಎತ್ತರದಲ್ಲಿರುವ೦ತೆ ಜೋಡಿಸಿರುತ್ತರೆ.ಇದರಿ೦ದ ಚಕ್ರಗಳ ಸವಕಳಿ ಕಡಿಮೆಯಾಗುವುದಲ್ಲದೆ ರೈಲು ಹಳಿ ತಪ್ಪುವುದಿಲ್ಲ.
- ಬ.ಓಟಗಾರನು ತಿರುವು ಪಥದಲ್ಲಿ ಓಡುವಾಗ ಕೇ೦ದ್ರಾಭಿಮುಖ ಬಲವನ್ನು ಪಡೆಯಲು ಓಟದ ಹಾದಿಯನ್ನು ಯುಕ್ತವಾಗಿ ಓರೆ ಮಾಡಬೇಕು.
- ಸಿ.ಸೈಕಲ್ ಸವಾರನು ತಿರುವಿನಲ್ಲಿ ಹೋಗುವಾಗ ತಿರುವಿನ ಕೇ೦ದ್ರದ ಕಡೆಗೆ ವಾಲಿ ಅಗತ್ಯ ಕೇ೦ದ್ರಾಭಿಮುಖ ಬಲವನ್ನು ಪಡೆಯುತ್ತಾನೆ.
ಉಲ್ಲೇಖ
[ಬದಲಾಯಿಸಿ]<references /