ಕುಡುಪು
ಕುಡುಪು ಎನ್ನುವಂತಹದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಗ್ರಾಮ. ಈ ಗ್ರಾಮದಲ್ಲಿ ಶ್ರೀ ಅನಂತ ಪದ್ಮನಾಭ ಸ್ವಾಮಿಯ ದೇವಸ್ಥಾನವಿದೆ.[೧] ಕುಡುಪು ಮಂಗಳೂರಿನಿಂದ ೧೦ಕಿ.ಮೀ. ದೂರದಲ್ಲಿದೆ. ಕುಡುಪು ಮಂಗಳೂರಿನಿಂದ ಮೂಡುಬಿದಿರೆಗೆ ಹೋಗುವ ದಾರಿಯಲ್ಲಿ ಸಿಗುವ ಗ್ರಾಮ.
ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನ
[ಬದಲಾಯಿಸಿ]ಈ ದೇವಸ್ಥಾನದಲ್ಲಿ ನಾಗ ದೇವರು ಹಾಗೂ ಅನಂತ ಪದ್ಮನಾಭ ದೇವರನ್ನು ಪೂಜಿಸುತ್ತಾರೆ. ನಾಗರ ಪಂಚಮಿ ಮತ್ತು ಷಷ್ಠಿ ಹಬ್ಬವನ್ನು ಇಲ್ಲಿ ಬಹಳ ಸಡಗರದಿಂದ ಆಚರಿಸುತ್ತಾರೆ.[೨] ಈ ದೇವಸ್ಥಾನದಲ್ಲಿ ಒಂದು ನಾಗಬನವಿದೆ. ಇಲ್ಲಿ ಮುನ್ನೂರಕ್ಕೂ ಹೆಚ್ಚು ನಾಗನ ಕಲ್ಲುಗಳಿವೆ.
ಆಚರಿಸುವ ಹಬ್ಬಗಳು
[ಬದಲಾಯಿಸಿ]ಸುಬ್ರಹ್ಮಣ್ಯ ಷಷ್ಠಿ ( ನವೆಂಬರ್/ ಡಿಸೆಂಬರ್ ತಿಂಗಳು)[೩]
ಕಿರು ಷಷ್ಠಿ ( ಡಿಸೆಂಬರ್/ ಜನವರಿ ತಿಂಗಳು)
ನಾಗರ ಪಂಚಮಿ ( ಜುಲೈ/ ಆಗಸ್ಟ್ ತಿಂಗಳು)
ವಾರ್ಷಿಕ ಜಾತ್ರೆ (ಡಿಸೆಂಬರ್/ ಜನವರಿ ತಿಂಗಳು)
ಬ್ರಹ್ಮಕಲಶೋತ್ಸವ
ದೇವಾಲಯದ ವಿನ್ಯಾಸ
[ಬದಲಾಯಿಸಿ]ಮುಖ್ಯ ಗರ್ಭಗುಡಿಯಲ್ಲಿ ಅನಂತ ಪದ್ಮನಾಭ ಸ್ವಾಮಿಯನ್ನು ಪಶ್ಚಿಮ ದಿಕ್ಕಿಗೆ ಸ್ಥಾಪಿಸಲಾಗಿದೆ.[೪] ನಾಗಬನ (ಸರ್ಪ ದೇವತೆಗಳ ಆರಧ್ಯ ಸ್ಥಳ) ಪೂರ್ವ ಭಾಗದಲ್ಲಿದ್ದರೂ ಪಶ್ಚಿಮ ದಿಕ್ಕಿಗೆ ಎದುರಿಸಲಾಗಿದೆ.[೫] ಈ ದೇವಸ್ಥಾನದ ಎಡ ಭಾಗದಲ್ಲಿ ಭದ್ರ ಸರಸ್ವತಿ ತೀರ್ಥ ಎಂಬ ಪವಿತ್ರ ಕೆರೆಯಿದೆ. ಈ ದೇವಸ್ಥಾನದಲ್ಲಿ ಶ್ರೀ ದೇವಿ ಮತ್ತು ಮಹಾಗಣಪತಿಯ ಗುಡಿಯಿದೆ. ಜಾರಂದಾಯ ಎಂಬ ದೈವವನ್ನು ಇಲ್ಲಿ ನಂಬುತ್ತಾರೆ. ಈ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ಕಲ್ಲಿನ ಮೂರ್ತಿಯಿದೆ. ಮೂರ್ತಿಯ ಎರಡು ಕಡೆಯಲ್ಲೂ ಜಯ, ವಿಜಯರ ಕಲ್ಲಿನ ಮೂರ್ತಿಯಿದೆ. ಹೊರಗಡೆ ದೇವಸ್ಥಾನದ ಎದುರಿಗೆ ವಾಲ್ಮೀಕ ಮಂಟಪವಿದೆ. ಅದರ ಬಳಿಯಲ್ಲಿ ನವಗೃಹ ಹಾಗೂ ಅಯ್ಯಪ್ಪ ಸ್ವಾಮಿಯ ಮೂರ್ತಿಯಿದೆ.[೬]
ದೇವಾಲಯದ ದೇವತೆಗಳು ಹಾಗೂ ಉಪ ದೇವತೆಗಳು
[ಬದಲಾಯಿಸಿ]ಅನಂತ ಪದ್ಮನಾಭ ದೇವರು
ನಾಗ ದೇವರು
ಸುಬ್ರಹ್ಮಣ್ಯ ದೇವರು
ಶ್ರೀ ದೇವಿ ಅಮ್ಮನವರು
ಮಹಾ ಗಣಪತಿ ದೇವರು
ಜಾರಂದಾಯ ದೈವ
ಅಯ್ಯಪ್ಪ ಸ್ವಾಮಿ
ನವಗೃಹ
ದೇವಾಲಯದ ವಿಶೇಷ ಪೂಜೆಗಳು ಮತ್ತು ಆಚರಣೆಗಳು
[ಬದಲಾಯಿಸಿ]ಆಷಾಡ ಹುಣ್ಣಿಮೆ
ಗೋಕುಲಷ್ಟಮಿ
ವಿನಾಯಕ ಚತುರ್ಥಿ
ಅನಂತ ಚತುದರ್ಶಿ
ನವರಾತ್ರಿ
ದೀಪಾವಳಿ
ತುಳಸಿ ಪೂಜೆ
ಕಾರ್ತಿಕ ಹುಣ್ಣಿಮೆ ದೀಪೊತ್ಸವ
ಮಹಾ ಶಿವರಾತ್ರಿ ದೀಪೊತ್ಸವ
ವಿಷು ಸಂಕ್ರಮಣ
ಜಾರಾಂದಾಯ ನೇಮ
ದೊಂಪದ ಬಲಿ ನೇಮ
ಬೇಷದ ಬಂಡಿ ನೇಮ
ಸೇವೆಗಳು
[ಬದಲಾಯಿಸಿ]ನಾಗ ತಂಬಿಲ
ಪಂಚಾಮೃತ ಅಭಿಷೇಕ
ಅಶ್ಲೇಷಾ ಬಲಿ
ಹಾಲು ಪಾಯಸ
ರಾತ್ರಿಯ ಹೂವಿನ ಪೂಜೆ
ಮಧ್ಯಾಹ್ನದ ಹೂವಿನ ಪೂಜೆ
ಪಂಚಕಜ್ಜಾಯ
ಕಾರ್ತಿಕ ಪೂಜೆ
ಶಾಶ್ವತ ಸೇವೆ
ಶಾಶ್ವತ ಅನ್ನದಾನ ಸೇವೆ
ಸರ್ಪ ಸಂಸ್ಕಾರ
ನಾಗ ಪ್ರತಿಷ್ಠೆ
ಆಶ್ಲೇಷಾ ಬಲಿ ಉಧ್ಯಾಪನೆ
ಕ್ಷೀರಾಭಿಷೇಕ
ಸಹಸ್ರನಾಮರ್ಚನೆ
ಪುರುಷ ಸೂಕ್ತ ಅಭಿಷೇಕ
ಅಮೃತಪಡಿ ನಂದಾದೀಪ
ಅಪ್ಪ ಕಜ್ಜಾಯ
ಪವಮಾನ ಅಭಿಷೇಕ
ಒಂದು ದಿನದ ಮಹಾಪೂಜೆ
ಅಯ್ಯಪ್ಪ ಸ್ವಾಮಿ ಪೂಜೆ
ನವಗ್ರಹ ಪೂಜೆ
ನವಗ್ರಹ ಜಪ - ಜಪ
ಅಷ್ಟೋತ್ತರ ಅರ್ಚನೆ
ಆಶ್ಲೇಷ ಬಲಿ
[ಬದಲಾಯಿಸಿ]ಆಶ್ಲೇಷ ಬಲಿ ದೇವಾಲಯದ ಪ್ರಮುಖ ಸೇವೆಗಳಲ್ಲಿ ಒಂದಾಗಿದೆ. ಏಕಾದಶಿ ಮತ್ತು ವಾರ್ಷಿಕ ಉತ್ಸವವನ್ನು ಹೊರತುಪಡೆಸಿ ಈ ಸೇವೆಯನ್ನು ಎಲ್ಲಾ ದಿನಗಳಲ್ಲು ಮಾಡಬಹುದು. ಈ ಸೇವೆಯು ಸಂಜೆ ೫:೦೦ಗಂಟೆಗೆ ಪ್ರಾರಂಭಗೊಂಡು ೬:೩೦ ಕ್ಕೆ ಮುಕ್ತಾಯಗೊಳ್ಳುತ್ತದೆ.
ಪ್ರೇಕ್ಷಣೀಯ ಸ್ಥಳಗಳು
[ಬದಲಾಯಿಸಿ]ಅಜ್ಜಿನ ಸಾನ, ಕುಡುಪು
ಕುಡುಪು ಕಟ್ಟೆ
ಸಂತ ಶ್ರಮಿಕ ಜೋಸೆಫರ ಇಗರ್ಜಿ, ವಾಮಂಜೂರು
ಕುಡುಪು ವಿವಿದೋದ್ದೇಶ ಸಹಕಾರಿ ಸಂಘ
ಮಿತ್ರ ಮಂಡಳಿ, ಕುಡುಪು
ಪಿಲಿಕುಳ ನಿಸರ್ಗಧಾಮ
ಶ್ರೀ ಅಮೃತೇಶ್ವರ ದೇವಾಸ್ಥಾನ, ಕೆತ್ತಿಕಲ್
ಹತ್ತಿರದ ಸ್ಥಳಗಳು
[ಬದಲಾಯಿಸಿ]ವಾಮಂಜೂರು
ಕುಲಶೇಖರ
ಮೂಡುಶೆಡ್ಡೆ
ಪುರಲ್
ಗುರುಪುರ
ಶೈಕ್ಷಣಿಕ ಸಂಸ್ಥೆಗಳು
[ಬದಲಾಯಿಸಿ]ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಡುಪು
ಸಂತ ಶ್ರಮಿಕ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆ, ವಾಮಂಜೂರು
ಸಂತ ರೇಮಂಡರ ಪ್ರೌಢ ಶಾಲೆ, ವಾಮಂಜೂರು
ಮಂಗಳ ಜ್ಯೋತಿ[೭]
ಧರ್ಮ ಜ್ಯೋತಿ
ಸೈಂಟ್ ಜೋಸೇಫ ಎಂಜಿನಿಯರಿಂಗ್ ಕಾಲೇಜು, ವಾಮಂಜೂರು
ಕರಾವಾಳಿ ಕಾಲೇಜ್ ಆಫ್ ಫಾರ್ಮೆಸಿ
ಉಲ್ಲೇಖಗಳು
[ಬದಲಾಯಿಸಿ]- ↑ "Kudupu Shree ananthapadmanabha Temple - About". kuduputemple.com. Retrieved 4 January 2020.
- ↑ "ನಾಗಾರಾಧನೆಯ ಶ್ರೀಕ್ಷೇತ್ರ 'ಕುಡುಪು ಅನಂತ ಪದ್ಮನಾಭ ದೇವಸ್ಥಾನ'". ಅಂತರ್ಮುಖಿ. Archived from the original on 1 ನವೆಂಬರ್ 2019. Retrieved 4 January 2020.
{{cite news}}
: Cite has empty unknown parameter:|5=
(help) - ↑ "ಕುಡುಪು ದೇವಳದಲ್ಲಿ ಷಷ್ಠಿ ಮಹೋತ್ಸವ". Vijaya Karnataka. 8 December 2013. Retrieved 4 January 2020.
- ↑ "ಶ್ರೀ ಕ್ಷೇತ್ರ ಕುಡುಪು : ಶ್ರೀ ಅನಂತಪದ್ಮನಾಭ ದೇವಸ್ಥಾನ". rcmysore-portal.kar.nic.in. Retrieved 4 January 2020.
- ↑ "ನಾಗಾರಾಧನೆಯ ಶ್ರೀಕ್ಷೇತ್ರ, ಕುಡುಪು". 6 February 2019. Retrieved 4 January 2020.
{{cite news}}
: Cite has empty unknown parameters:|1=
and|2=
(help) - ↑ "kudupu Shree Ananthapadmanabha Temple - History". kuduputemple.com. Retrieved 4 January 2020.
- ↑ "SDM MANGALAJYOTHI INTEGRATED SCHOOL, VAMANJOOR". sdmmangalajyothi.in. Retrieved 4 January 2020.