ಕಿಶನ್‌ಗಂಗಾ ಜಲವಿದ್ಯುತ್ ಸ್ಥಾವರ
ಗೋಚರ
ಕಿಶನ್ಗಂಗಾ ಜಲವಿದ್ಯುತ್ ಸ್ಥಾವರ | |
---|---|
ಅಕ್ಷಾಂಶ ರೇಖಾಂಶ | 34°38′51″N 74°45′53″E / 34.64750°N 74.76472°E |
ಸ್ಥಿತಿ | Under construction |
ಕಟ್ಟುವಿಕೆ ಪ್ರಾರಂಭ | 2007 |
ಉದ್ಘಾಟನಾ ದಿನಾಂಕ | 2016 est. |
ತಯಾರಿಕೆಯ ವೆಚ್ಚ | Rs. 5783.17 crore ($864 million USD 2016)[೧] |
ಯಜಮಾನ್ಯ | NHPC Limited |
Dam and spillways | |
Type of dam | Concrete-face rock-fill |
ಇಂಪೌಂಡ್ಸ್ | ಕಿಶನ್ಗಂಗಾ ನದಿ (ನೀಲಂ ನದಿ) |
ಎತ್ತರ | 37 m (121 ft) |
Power station | |
Name | ಕಿಶನ್‌ಗಂಗಾ ಜಲವಿದ್ಯುತ್ ಸ್ಥಾವರ |
Hydraulic head | 697 m (2,287 ft) |
Turbines | 3 x 110 ಮೆಗಾವ್ಯಾಟ್(MW) Pelton-type |
Installed capacity | 330 MW |
ಕಿಶನ್‌ಗಂಗಾ ಜಲವಿದ್ಯುತ್ ಸ್ಥಾವರ ಮತ್ತು ವಿವಾದ
[ಬದಲಾಯಿಸಿ]- ಜಮ್ಮು ಮತ್ತು ಕಾಶ್ಮೀರದ ವಾಯವ್ಯದಲ್ಲಿರುವ ಕಿಶನ್‌ಗಂಗಾ ಜಲವಿದ್ಯುತ್ ಸ್ಥಾವರವು ಝೀಲಂ ನದಿಯ ಜಲಾನಯನ ಪ್ರದೇಶದ ಒಂದು ವಿದ್ಯುತ್ ಸ್ಥಾವರ. ಕಿಶನ್‌ಗಂಗಾ ನದಿ ನೀರನ್ನು ತಿರುಗಿಸುವ ಯೋಜನೆಯಲ್ಲಿ ವಿನ್ಯಾಸಗೊಳಿಸಲಾಗಿದೆ . ಈ ನದಿ ಜಲವಿದ್ಯುತ್ ಯೋಜನೆಯ ಭಾಗವಾಗಿ ರೂ.5783.17 ಕೋಟಿ ($ 864 ಮಿಲಿಯನ್) ಯೋಜನೆಯ ಜಲಾಶಯ. ಇದು ಬಂಡಿಪೋರ್ ನಿಂದ 5 ಕಿಮೀ (3 ಮೈಲಿ) ಉತ್ತರಕ್ಕೆ , ಜಮ್ಮು ಮತ್ತು ಕಾಶ್ಮೀರ (ಭಾರತ) ದಲ್ಲಿ ಇದೆ ಈ ವಿದ್ಯುತ್ ಸ್ಥಾವರ 330 ಮೆ.ವ್ಯಾ ಅಳವಡಿಕೆಯಾದ ಸಾಮರ್ಥ್ಯ ಹೊಂದಿರುತ್ತದೆ. ಯೋಜನೆಯ ನಿರ್ಮಾಣ 2007 ರಲ್ಲಿ ಆರಂಭವಾಯಿತು ಮತ್ತು 2016 ರಲ್ಲಿ ಪೂರ್ಣಗೊಳ್ಳುವ ಯೋಜನೆ. 2011 ರಲ್ಲಿ ಹೇಗ್ ನ ಶಾಶ್ವತ ಕೋರ್ಟ್ ಮಧ್ಯಸ್ಥಿಕೆಯ ತೀರ್ಮಾನದಂತೆ ಅಣೆಕಟ್ಟು ತಾತ್ಕಾಲಿಕವಾಗಿ ಅಕ್ಟೋಬರ್ 2011ರಲ್ಲಿ ಸ್ಥಗಿತಗೊಳಿಸಲಾಗಿತ್ತು. ಕಾರಣ ನದಿಯ ಹರಿವಿನ ಮೇಲೆ ಪರಿಣಾಮ ಬೀರುವುದೆಂದು ಪಾಕಿಸ್ತಾನ ಪ್ರತಿಭಟನೆ ಮಾಡಿತ್ತು. (ನೀಲಂ ಎಂದು ಕರೆಯವ ಈ ನದಿ ಪಾಕಿಸ್ತಾನದಲ್ಲಿದೆ). ಫೆಬ್ರವರಿ 2013 ರಲ್ಲಿ, ಹೇಗ್ ಭಾರತ ವಿದ್ಯುತ್ ಉತ್ಪಾದನೆಗೆ ನೀರಿನ ಕನಿಷ್ಠ ಪ್ರಮಾಣದಷ್ಟನ್ನು ದಿಕ್ಕು ಬದಲಿಸಬಹುದು ಎಂದು ತಿಳಿಸಿತು.[೨]
ಪಾಕಿಸ್ತಾನದ ತಕರಾರು
[ಬದಲಾಯಿಸಿ]Lua error in ಮಾಡ್ಯೂಲ್:Location_map/multi at line 27: Unable to find the specified location map definition: "Module:Location map/data/India Jammu and Kashmir" does not exist.
- ಪಾಕಿಸ್ತಾನ ಈ ಯೋಜನೆಯಿಂದ ತಮ್ಮ ದೇಶದೊಳಗೆ ಹರಿದು ಬರುವ ಝೀಲಂ ನದಿ ಸೇರುವ ನದಿಯ ಹರಿವಿನ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ ಎಂದು ಚಿಂತೆ ಮಾಡುತ್ತದೆ. ಪಾಕಿಸ್ತಾನವೂ ಕೂಡ ಈ ನದಿ ಪ್ರವಾಹದ ಕೆಳಗೆ ನೀಲಂ-ಝೀಲಂ ಜಲವಿದ್ಯುತ್ ಸ್ಥಾವರ ನಿರ್ಮಿಸುತ್ತಿದೆ. ಕಿಶನ್‌ಗಂಗಾ ಜಲವಿದ್ಯುತ್ ಸ್ಥಾವರವು ನೀಲಂ-ಝೀಲಂ ಜಲವಿದ್ಯುತ್ ಸ್ಥಾವರ ದಂತೆಯೇ ಕೆಲಸ ಮಾಡುತ್ತದೆ. ಅದೇ ಝೀಲಂ ನದಿಯಿಂದ ಉಣಿಸಿದ ವೂಲರ್ ಸರೋವರ ದಿಂದ ಬಿಡುಗಡೆಗೊಂಡ ನೀರು ವಿದ್ಯುತ್ ಸ್ಥಾವರಕ್ಕೆ ಉಪಯೋಗಿಸಲ್ಪಡುವುದು. ಕಿಶನ್‌ಗಂಗಾ (ನೀಲಂ) ನದಿ ತಿರುಗಿಸಲು ಅಣೆಕಟ್ಟು ಬಳಸಿಕೊಳ್ಳುತ್ತದೆ, ನೀಲಂ -ಝೀಲಂ ಜಲವಿದ್ಯುತ್ ಸ್ಥಾವರ ಇದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಕಿಶನ್ಗಂಗಾ ಪ್ರಾಜೆಕ್ಟ್ ನೀಲಂ-ಝೀಲಂ ಜಲ ಪ್ಲಾಂಟ್ನಲ್ಲಿ ವಿದ್ಯುತ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ ಎಂದು ಪಾಕಿಸ್ತಾನ ದೂರುತ್ತದೆ. ಭಾರತವು ಯೋಜನೆಯ ನದಿಯ ಹರಿವಿನಲ್ಲಿ ಶೇ. 10 (ಪ್ರತಿಶತ) ಮಾತ್ರಾ ದಿಕ್ಕು ಬದಲಿಸುತ್ತದೆ ಎನ್ನುವುದು. ಇತರ ಅಂದಾಜುಗಳು ಶೇಕಡಾ 33 ಕ್ಕೆ ಹೆಚ್ಚು ಎಂದು ಭಾವಿಸುವರು. ಆದಾಗ್ಯೂ ನೀಲಂ ನದಿಯ ಒಂದು ಭಾಗದ ನೀರನ್ನು ಭಾರತ ಮತ್ತು ಪಾಕಿಸ್ತಾನಗಳು , ನೀಲಂ -ಝೀಲಂ ಅಣೆಕಟ್ಟುಗಳ ಕಾರಣ ಎರಡೂ ಯೋಜನೆಗಳಿಗೆ ಝೀಲಂ ನದಿ ನೀರಿನ್ನು ಬೇರೆಡೆ ತಿರುಗಿಸುವುದರಿಂದ ಕೆಳಗಿನ ನೀರಿನ ಹರಿವು ನೀಲಂ ಕಣಿವೆಯಲ್ಲಿ, ಕನಿಷ್ಠ ಮಟ್ಟಕ್ಕೆ ಇಳಿಯುವುದೆಂದು ಎಂದು ನಿರೀಕ್ಷಿಸಲಾಗಿದೆ. ಈ ಕ್ರಮ ನೀಲಂ ಕಣಿವೆಯಲ್ಲಿ ಪ್ರತಿಕೂಲ ಪರಿಣಾಮಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದೆ.[೩]
ವಿಶ್ವಬ್ಯಾಂಕ್ ಅಥವಾ ಪಂಚಾಯತಿ
[ಬದಲಾಯಿಸಿ]- ಕಿಶನ್‌ಗಂಗಾ ಮತ್ತು ರ್‍ಯಾಟಲ್ ಜಲವಿದ್ಯುತ್ ಯೋಜನೆಗಳಲ್ಲಿ (Kishenganga and Ratle hydroelectric projects) ಪಂಚಾಯ್ತಿ ಪ್ರಕ್ರಿಯೆಯಲ್ಲಿ ಇಸ್ಲಾಮಾಬಾದ್‍ನ ಬೇಡಿಕೆಯನ್ನು ವಿಶ್ವ ಬ್ಯಾಂಕ್ ಸ್ವೀಕರಿಸಿದೆ. ವಿಶ್ವ ಬ್ಯಾಂಕ್ 1960 ರಲ್ಲಿ ಸಿಂಧೂ ನೀರಿನ ಒಪ್ಪಂದದ ಮಧ್ಯವರ್ತಿಯಾಗಿ ಮತ್ತು ಭಿನ್ನಾಭಿಪ್ರಾಯಗಳನ್ನು ತೀರ್ಮಾನ ಮಾಡುವ ವಿಶಿಷ್ಟ ಪಾತ್ರವನ್ನು ಹೊಂದಿದೆ. ಝೀಲಂ ಉಪನದಿಯಾದ ಕಿಶನ್‌ಗಂಗಾ ನದಿ 57.8 ಶತಕೋಟಿ ರೂಪಾಯಿಗಳ ನದಿತಿರುವು ಯೋಜನೆಯು ಜಮ್ಮು ಮತ್ತು ಕಾಶ್ಮೀರದಲ್ಲಿರುವ ಬಂಡಿಪುರದಲ್ಲಿದೆ. ದೋಡ ಜಿಲ್ಲೆಯಲ್ಲಿ ಚೆನಾಬ್ ಮೇಲೆ. 850 ಮೆವ್ಯಾ ರ್‍ಯಾಟಲ್ ಜಲವಿದ್ಯುತ್ ಯೋಜನೆ ಇದೆ.
- ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ ನಿರ್ಮಿಸುತ್ತಿರುವ ಕಿಶನ್‌ಗಂಗಾ ಮತ್ತು ರ್‍ಯಾಟಲ್ ಜಲವಿದ್ಯುತ್ ಯೋಜನೆಗಳನ್ನು ಸ್ಥಗಿತಗೊಳಿಸಬೇಕು ಎಂದು ಪಾಕಿಸ್ತಾನ ಒತ್ತಾಯಿಸಿದೆ. ಭಾರತದೊಂದಿಗಿನ ಜಲವಿವಾದದ ಕುರಿತು ಚರ್ಚಿಸಲು ಪಾಕಿಸ್ತಾನ ರಚಿಸಿದ್ದ ಎರಡು ಸಂಸದೀಯ ಸಮಿತಿಗಳ ಜಂಟಿ ಸಭೆಯಲ್ಲಿ ಸರ್ವಾನುಮತದಿಂದ ಈ ನಿರ್ಣಯವನ್ನು ಅಂಗೀಕರಿಸಲಾಗಿದೆ. ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ವಿವಾದಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದೂ ಸಭೆ ಒತ್ತಾಯಿಸಿದೆ.
- ಭಾರತ ದ್ವಿಪಕ್ಷೀಯ ಪಂಚಾಯ್ತಿಯ ಮೂಲಕ ವಿವಾದ ಪರಿಹರ ಕೇಳಿದರೆ ಪಾಕಿಸ್ತಾನ ನ್ಯಾಯಾಲಯದ ತೀರ್ಮಾನ ಕೇಳಿದೆ. ವಿಶ್ವ ಬ್ಯಾಂಕ್ ಎರಡೂ ಕ್ರಮಗಳಲ್ಲಿ ಮುಂದುವರೆಯಲು ನಿರ್ಧರಿಸಿದೆ, ಮತ್ತು ಭಾರತ ಇದು ಸಿಂಧೂ ನೀರಿನ ಒಪ್ಪಂದಕ್ಕೆ ಅನ್ವಯಿಸುವುದಿಲ್ಲ ಎಂದು ಹೇಳುತ್ತದೆ. ಪಾಕಿಸ್ತಾನದ ಆಕ್ಷೇಪಣೆಗಳು ದ್ವಿಪಕ್ಷೀಯ ಶಾಶ್ವತ ಸಿಂಧೂ ಆಯೋಗಕ್ಕೆ (bilateral Permanent Indus Commission (PIC)), ಈ ತಾಂತ್ರಿಕ ಸಮಸ್ಯೆಗಳಿಗೆ 'ಅನ್ವಯಿಸುತ್ತದೆ ಎಂದಿದೆ, ಭಾರತ. ನ್ಯಾಯಾಲಯ ನೇಮಿಸಿದ ತಟಸ್ಥ ತಜ್ಞರ ಪಂಚಾಯ್ತಿಯು (COA) ಪರಿಹರಿಸಬಹುದು ಎಂದು ಭಾರತ ಹೇಳುತ್ತದೆ.
- ಏಳು ಸದಸ್ಯರ ನ್ಯಾಯ ಸಮಿತಿಗೆ ವಿವಾದವನ್ನು ಒಪ್ಪಿಸಬೇಕೆಂದು ಭಾರತ ಹೇಳುತ್ತದೆ, ಏಳು ಸದಸ್ಯರ ಸಮಿತಿಯಲ್ಲಿ ಐವರನ್ನು ವಿಶ್ವಬ್ಯಾಂಕ್ ನೇಮಿಸುತ್ತದೆ.. ಉಳಿದ ಎರಡು ಪಂಚಾಯ್ತಿದಾರರಲ್ಲಿ ಭಾರತದಿಂದ ಒಬ್ಬರನ್ನು ಮತ್ತು ಪಾಕಿಸ್ತಾನದಿಂದ ಒಬ್ಬರನ್ನು ನೇಮಕ ಮಾಡಬೇಕು,[೪][೫]
ಕಿಶನ್‌ಗಂಗಾ ಮತ್ತು ರಾಟ್ಲೆಯಲ್ಲಿ ಜಲ ವಿದ್ಯುತ್ ಘಟಕಕ್ಕೆ ವಿಶ್ವಬ್ಯಾಂಕ್ ಒಪ್ಪಿಗೆ
[ಬದಲಾಯಿಸಿ]- ಭಾರತವು ಝೇಲಂ ಮತ್ತು ಚೆನಬ್ ನದಿ ವ್ಯಾಪ್ತಿಯ ಕಿಶನ್‌ಗಂಗಾದಲ್ಲಿ 330 ಮೆಗಾವಾಟ್ ಮತ್ತು ರಾಟ್ಲೆಯಲ್ಲಿ 850 ಮೆಗಾವಾಟ್ ಸಾಮರ್ಥ್ಯದ ಜಲ ವಿದ್ಯುತ್ ಘಟಕಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ಪಾಕಿಸ್ತಾನವು ಈ ಯೋಜನೆಗಳ ಅನುಷ್ಠಾನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಈ ಯೋಜನೆಯ ವಿನ್ಯಾಸದ ಬಗ್ಗೆ ಆತಂಕ ವ್ಯಕ್ತಪಡಿಸಿ ೨೦೧೬ರಲ್ಲಿ ಪಾಕಿಸ್ತಾನ ವಿಶ್ವ ಬ್ಯಾಂಕ್ ಮೊರೆ ಹೋಗಿತ್ತು. ಆದರೆ ವಿಶ್ವಬ್ಯಾಂಕ್, ಜಮ್ಮು ಮತ್ತು ಕಾಶ್ಮೀರದ ಕಿಶನ್‌ಗಂಗಾ ಮತ್ತು ರಾಟ್ಲೆಯಲ್ಲಿ ಜಲ ವಿದ್ಯುತ್ ಘಟಕಗಳನ್ನು ನಿರ್ಮಿಸಲು ಭಾರತಕ್ಕೆ ಅನುಮತಿನೀಡಿ, ಒಪ್ಪಿಗೆ ಸೂಚಿಸಿದೆ. ವಿಶ್ವಬ್ಯಾಂಕ್‌ನ ಈ ನಿರ್ಧಾರ ಭಾರತಕ್ಕೆ ಮಹತ್ವದ್ದಾಗಿದೆ.[೬]
ನೋಡಿ
[ಬದಲಾಯಿಸಿ]ಉಲ್ಲೇಖ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ http://www.dailyexcelsior.com/330-mw-kishanganga-power-project-to-be-commissioned-by-nov-next/
- ↑ 330 MW Kishanganga Power Project to be commissioned by Nov next
- ↑ [Neelum-Jhelum project contract awarding: delay led India to begin Kishanganga hydel works". FOREX.pk. 19 December 2011.]
- ↑ ಜಲವಿದ್ಯುತ್ ಯೋಜನೆ ತಡೆಯಲು ಪಾಕ್ ಒತ್ತಾಯ;22 Jan, 2017[ಶಾಶ್ವತವಾಗಿ ಮಡಿದ ಕೊಂಡಿ]
- ↑ Indus Waters Treaty: Another India-Pakistan showdown over hydro projects?;Nov 11, 2016
- ↑ "ಆರ್ಕೈವ್ ನಕಲು". Archived from the original on 2017-08-03. Retrieved 2017-08-03.