ಕಾಮನಬಿಲ್ಲು (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾಮನಬಿಲ್ಲು (ಚಲನಚಿತ್ರ)
ಕಾಮನಬಿಲ್ಲು
ನಿರ್ದೇಶನಚಿ.ದತ್ತರಾಜ್
ನಿರ್ಮಾಪಕಜೆ.ಜಯಮ್ಮ
ಕಥೆಅಶ್ವಿನಿ
ಪಾತ್ರವರ್ಗಡಾ.ರಾಜ್‍ಕುಮಾರ್ ಸರಿತಾ ಅನಂತನಾಗ್, ಅಶ್ವಥ್, ಬಾಲಕೃಷ್ಣ, ತೂಗುದೀಪ ಶ್ರೀನಿವಾಸ್, ಉಮಾ ಶಿವಕುಮಾರ್, ತಿಮ್ಮಯ್ಯ, ಉಮೇಶ್, ಮಾಲತಿ ಹೊಳ್ಳ
ಸಂಗೀತಉಪೇಂದ್ರಕುಮಾರ್
ಛಾಯಾಗ್ರಹಣಬಿ.ಸಿ.ಗೌರಿಶಂಕರ್
ಬಿಡುಗಡೆಯಾಗಿದ್ದು೧೯೮೩
ಚಿತ್ರ ನಿರ್ಮಾಣ ಸಂಸ್ಥೆಪದ್ಮಾವತಿ ಸಿನಿ ಆರ್ಟ್ಸ್ ಫಿಲಂಸ್
ಸಾಹಿತ್ಯಚಿ.ಉದಯಶಂಕರ್, ಕುವೆಂಪು
ಹಿನ್ನೆಲೆ ಗಾಯನಡಾ.ರಾಜ್‍ಕುಮಾರ್, ವಾಣಿ ಜಯರಾಂ, ಸಿ.ಅಶ್ವಥ್, ಎಸ್.ಪಿ.ಬಾಲಸುಬ್ರಹ್ಮಣ್ಯಮ್, ಸುಲೋಚನಾ
ಇತರೆ ಮಾಹಿತಿಅಶ್ವಿನಿ ಬರೆದಿರುವ ಮೃಗತೃಷ್ಣಾ ಕಾದಂಬರಿ ಆಧಾರಿತ ಚಿತ್ರ.

ಕಥೆ[ಬದಲಾಯಿಸಿ]

ಅರ್ಚಕರ ಮಗ ಸೂರ್ಯನಾರಾಯಣ, ಊರಿನ ಎಲ್ಲಾ ಒಳ್ಳೆಯ ಕೆಲಸಗಳಿಗೆ ಹೆಗಲೆಣೆಯಾಗಿ ನಿಂತು, ಹಿರಿಗೌಡನ ಪ್ರೀತಿಗೆ ಪಾತ್ರನಾಗಿ ಸೂರಿ ಎಂದೇ ಜನಪ್ರಿಯನಾದವ,ಹಿರಿಗೌಡನ ತಮ್ಮ ಕಿರಿಗೌಡನ ಕೋಪಕ್ಕೆ ತುತ್ತಾಗುತ್ತ್ತಾನೆ. ಪಕ್ಕದ ಊರಿನಲ್ಲಿನ ತನ್ನ ಮಿತ್ರ ಚಂದ್ರನ ಮಗುವಿನ ಮೇಲೆ ಸೂರಿಗೆ ಅಪಾರ ಮಮತೆ. ಮದುವೆಯಾಗುವಂತೆ ಚಂದ್ರನಿಗೆ ಎಷ್ಟೇ ಒತ್ತಾಯ ಮಾಡಿದರೂ ಆತ ಒಪ್ಪುವುದಿಲ್ಲ.ಚಂದ್ರನಿಗೆ ಒಳ್ಳೆಯ ಹೆಣ್ಣುಹುಡುಕುವುದಾಗಿ, ಚಂದ್ರನ ತಾಯಿಗೆ ಸುರಿ ವಚನ ನೀಡುತ್ತಾನೆ. ತನ್ನ ತಾಯಿಯ ಅಣತಿಯಂತೆ, ತನಗೆ ಬರುವ ಪೌರೋಹಿತ್ಯ ಮತ್ತು ಪಶುವೈದ್ಯವನ್ನು ಬಿಟ್ಟು, ತನ್ನ ಗೆಳೆಯ ಚಂದ್ರನ ಒತ್ತಾಸೆಯಿಂದ ಕೃಷಿಕನಾಗಿ ನೆಲೆನಿಲ್ಲುತ್ತಾನೆ. ನದಿಗೆ ಬಿದ್ದು ಜೀವ ಕಳೆದುಕೊಳ್ಳುತ್ತಿದ್ದ ಗಂಗೆಯನ್ನು ರಕ್ಷಿಸಿದ ಸೂರಿ, ತನ್ನ ಗದ್ದೆಗೆ ಬೆಂಕಿ ಇಡುತ್ತಿದ್ದ ಗಂಗೆಯ ತಂದೆಯನ್ನು ಕಂಡುಹಿಡಿಯುತ್ತಾನೆ. ಕಿರಿಗೌಡನ ಮಗ ಆಕೆಯನ್ನು ಬಸುರಿ ಮಾಡಿದುದಾಗಿಯೂ, ಆಕೆಯ ಬಾಳನ್ನು ಉಳಿಸಲು, ಕಿರಿಗೌಡನ ಆಙ್ನೆಯಂತೆ ಸೂರಿಯ ಗದ್ದೆಯನ್ನು ಸುಡಲು ಬಂದುದಾಗಿಯೂ ತಪ್ಪು ಒಪ್ಪಿಕೊಂಡ ಆತನನ್ನು ರಕ್ಷಿಸುವ ಹೊಣೆ ಹೊತ್ತು, ಆಕೆಯನ್ನು ರಕ್ಷಿಸುವ ಸಲುವಾಗಿ, ಗೌಡನ ಗದ್ದೆಗೆ ಬೆಂಕಿ ಹಚ್ಚಿದ ಆರೋಪವನ್ನು ತನ್ನ ಮೇಲೆ ಹೊತ್ತುಕೊಳ್ಳುತ್ತಾನೆ. ಗಂಗೆಯ ತಾಯಿ ಪಂಚಾಯಿತಿ ಕಟ್ಟೆಯಲ್ಲಿ ನಿಜ ಹೇಳಿದಾಗ, ಸೂರಿ ಊರಿಗೆ ಕಾಮನಬಿಲ್ಲಾಗುತ್ತಾನೆ. ಗೆಳೆಯನಿಗೆ ಊರಿನಿಂದ ಬಹಿಷ್ಕಾರ ಹಾಕಿಸಲು ಈ ರೀತಿ ಸಂಚು ಮಾಡಿದ ಕಿರಿಗೌಡನನ್ನು ಕೊಲ್ಲಲು ಚಂದ್ರ ರಾತ್ರಿಯಲ್ಲಿ ಕಿರಿಗೌಡನ ಮನೆಗೆ ನುಗ್ಗುತ್ತಾನೆ.ಮೋಟಾರ್ ಬೈಕ್ ಸದ್ದು ಕೇಳಿ ಸೂರಿ, ಓಡಿ ಬಂದು ಕಿರಿಗೌಡನನ್ನು ಉಳಿಸುತ್ತಾನೆ.
ಹಿರಿಗೌಡರ ಮೊಮ್ಮಗಳು ಕೃಷಿ ಪದವಿ ಪಡೆದು ಗೌಡರ ಜಮೀನಿನಲ್ಲಿಯೇ ಬೇಸಾಯ ಮಾಡುತ್ತಾಳೆ. ಸೂರಿ ಮತ್ತು ಆಕೆ ಇಬ್ಬರೂ ಪ್ರೀತಿಸಲು ತೊಡಗುತ್ತಾರೆ.
ಚಂದ್ರನ ತಾಯಿ, ಚಂದ್ರನಿಗೆ ಹಿರಿಗೌಡರ ಮೊಮ್ಮಗಳ ಸಂಬಂಧವನ್ನು ಕೊಡಿಸಲು ಸೂರಿಗೆ ಕೇಳುತ್ತಾಳೆ. ಸೂರಿ, ವಿಧಿ ಇಲ್ಲದೆಯೇ, ಹಿರಿಗೌಡರ ಮೊಮ್ಮಗಳಿಗೆ ತನ್ನನ್ನು ತೊರೆದು, ಚಂದ್ರನನ್ನು ಮದುವೆಯಾಗಲು ಬೇಡಿಕೊಳ್ಳುತ್ತಾನೆ. ಆದರೆ, ಆಕೆ ಒಪ್ಪದಾದಾಗ, ಸೂರಿ, ತನ್ನ ಸಂಬಂಧಿ ಕುಂಟಿಯಾದ ಪದ್ಮಳನ್ನು ಮದುವೆಯಾಗಿ, ತನ್ನ ಪ್ರೀತಿ ತ್ಯಾಗ ಮಾಡುತ್ತಾನೆ. ತನ್ನವರಿಗಾಗಿ ತನ್ನ ಎಲ್ಲವನ್ನೂ ಕೊಡಮಾಡುವ ಸೂರಿ, ಕಾಮನಬಿಲ್ಲಿನಂತೆ ಆಗುತ್ತಾನೆ.

ಕಾಮನಬಿಲ್ಲು ಚಿ.ದತ್ತರಾಜ್ ನಿರ್ದೇಶನದ ಕನ್ನಡ ಭಾಷೆಯ ಚಿತ್ರ. ಈ ಚಲನಚಿತ್ರವು ೧೯೮೩ ರಲ್ಲಿ ಬಿಡುಗಡೆಯಾಯಿತು. ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಡಾ.ರಾಜ್‍ಕುಮಾರ್, ಅನಂತ್ ನಾಗ್ ಮತ್ತು ಸರಿತ ನಟಿಸಿದ್ದಾರೆ. ಈ ಚಿತ್ರವು ಅಶ್ವಿನಿಯವರು ಬರೆದಿರುವ ಮೃಗತೃಷ್ಣಾ ಎಂಬ ಕಾದಂಬರಿಯಿಂದ ಆಧಾರಿತವಾಗಿದೆ.

ಪಾತ್ರ[ಬದಲಾಯಿಸಿ]

ಹಾಡುಗಳು[ಬದಲಾಯಿಸಿ]

ಈ ಚಿತ್ರದ ಹಾಡುಗಳನ್ನು ಚಿ.ಉದಯ ಶಂಕರ ರಚಿಸಿದ್ದಾರೆ. ಕುವೆಂಪುರ "ನೇಗಿಲ ಹಿಡಿದು ಹೊಲದಲಿ ಹಾಡುತ ಉಳುವಾ ಯೋಗಿಯ ನೋಡಲ್ಲಿ" ಗೀತೆಯನ್ನು ಬಳಸಿಕೊಳ್ಳಲಾಗಿದೆ.

ಸ್ವಾರಸ್ಯ[ಬದಲಾಯಿಸಿ]

  • ಡಾ. ರಾಜ್‍ಕುಮಾರ್ ಅಂಗವಿಕಲ ಸಂಸ್ಥೆಯೊಂದರ ಸಮಾರಂಭಕ್ಕೆ ಅತಿಥಿಯಾಗಿ ಭಾಗವಹಿಸಿದಾಗ, ಶ್ರೀಮತಿ ಲಕ್ಷ್ಮಿ ನಿಜ಼ಾಮುದ್ದೀನ್ ರನ್ನು ಅವರ ಪತಿ ಐ.ಜಿ.ಪಿ ಶ್ರೀ ನಿಜ಼ಾಮುದ್ದೀನ್ ಕೈಯಲ್ಲಿ ಎತ್ತಿಕೊಂಡು ವೇದಿಕೆಗೆ ಕರೆದೊಯ್ದು ಪ್ರಶಸ್ತಿ ಸ್ವೀಕರಿಸಲಿಕ್ಕೆ ಅನುವು ಮಾಡಿಕೊಟ್ಟರು.[೧] ಆ ದೃಶ್ಯವನ್ನು ನೋಡಿ ಕಣ್ಣೀರುಗರೆದ ಡಾ. ರಾಜ್, ತಮ್ಮ ಮುಂದಿನ ಚಿತ್ರದಲ್ಲಿ ಅಂಗವಿಕಲ ಯುವತಿಯ ಪಾತ್ರ ಮತ್ತು ಆಕೆಗೆ ಸಾಂತ್ವನ ನೀಡುವ ಪಾತ್ರ ಇರಲೇಬೇಕು ಎಂದು ನಿರ್ಧರಿಸಿದರು. ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಮೃಗತೃಷ್ಣಾ ಕಾದಂಬರಿಯಲ್ಲಿ ಅಂಗವಿಕಲ ಪಾತ್ರವೊಂದನ್ನು ಸೃಷ್ಟಿಸಿ, ಅದಕ್ಕೆ ಅಂಗವಿಕಲ ಕ್ರೀಡಾಪಟು ಮಾಲತಿ ಹೊಳ್ಳರನ್ನು ಆಯ್ಕ್ಲೆ ಮಾಡಿದರು.[೨]
  • ಡಾ. ರಾಜ್‍ಕುಮಾರ್ ಚಿತ್ರದ ಶೀರ್ಷಿಕೆಯ ಸಮಯದಲ್ಲಿ ಮಾಡುವ ಯೋಗಾಭ್ಯಾಸ ಬಲು ಜನಪ್ರಿಯವಾಯಿತು.
  • ಡಾ. ರಾ‍ಜ್‍ಕುಮಾರ್ ಮತ್ತು ಅನಂತ್‍ನಾಗ್ ಜೊತೆಯಲ್ಲಿ ನಟಿಸಿದ್ದು ವಿಶೇಷ. ಹಾಲುಜೇನು ಚಿತ್ರ ಅನಂತ್‍ನಾಗ್ ನಾಯಕತ್ವದಲ್ಲಿ ತಯಾರಾಗಿ, ಅರ್ಧಕ್ಕೂ ಮುಂಚೆಯೇ ನಿಂತುಹೋಯಿತು. ಆ ಚಿತ್ರಕ್ಕೆ ಸಂಭಾಷಣೆ ಬರೆದ ಚಿ. ಉದಯಶಂಕರ್, ಪಾರ್ವತಮ್ಮನವರ ಜೊತೆ ಮಾತನಾಡಿ ರಾಜ್ ನಾಯಕತ್ವದಲ್ಲಿ ಆ ಚಿತ್ರ ತಯಾರಾಗಲು ಅನುವು ಮಾಡಿದರು.ಸ್ನೇಹಪೂರ್ವಕವಾಗಿ, ಅನಂತ್‍ನಾಗ್ ರನ್ನು ಹಾಕಿಕೊಂಡು ಚಿತ್ರ ಮಾಡಲು ತವಕಿಸುತ್ತಿದ್ದ ಡಾ. ರಾಜ್‍ಕುಮಾರ್, ಕಾಮನಬಿಲ್ಲು ಚಿತ್ರದಲ್ಲಿ ತಮ್ಮ ಸರಿಸಮನಾದ ಪಾತ್ರದಲ್ಲಿ ಇರುವಂತೆ ಅನಂತ್‍ನಾಗ್‍ರಿಗೆ ಕೋರಿದರು.ಅನಂತ್ ಒಪ್ಪಿ, ಚಿತ್ರದಲ್ಲಿ ನಟಿಸಿದರು.ಮುಂದೆ, ಭಕ್ತ ಪ್ರಹ್ಲಾದ ಚಿತ್ರದಲ್ಲಿ ನಾರದನ ಪಾತ್ರದಲ್ಲಿಯೂ ಕಾಣಿಸಿಕೊಂಡರು.

ಉಲ್ಲೇಖ[ಬದಲಾಯಿಸಿ]

[೩]

>

  1. https://www.amazon.in/Different-Spirit-Bestseller-International-Wheelchair/dp/1482851059
  2. https://books.google.co.in/books?id=9qorCgAAQBAJ&pg=PT35&lpg=PT35&dq=kamanabillu+movie&source=bl&ots=i6rd9N-qzC&sig=RWOamb3ZcKLDjKoJq_vEgIw7gzY&hl=en&sa=X&ved=2ahUKEwjc44-CnZ7eAhXCro8KHU7HA5o4ChDoATAEegQIBhAB#v=onepage&q&f=false
  3. https://kannadamoviesinfo.wordpress.com/2012/12/25/kamana-billu-1983/