ಕಾದಲವೇಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾದಲವೇಣಿ (Kadalaveni)

ಕಾದಲವೇಣಿ (Kadalaveni)
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಚಿಕ್ಕಬಳ್ಳಾಪುರ
ನಿರ್ದೇಶಾಂಕಗಳು 13.60082° N 77.47658° E
ವಿಸ್ತಾರ
 - ಎತ್ತರ
 km²
 - ೬೮೬ ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೧೧)
 - ಸಾಂದ್ರತೆ
೨೫೧೨
 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - ೫೬೧೨೧೦
 - +೦೮೧೫೫
 - ಕೆಎ ೪೦

ಕಾದಲವೇಣಿ (ಇಂಗ್ಲೀಷ್: Kadalaveni) ದಕ್ಷಿಣ ಭಾರತದ ಕರ್ನಾಟಕ ರಾಜ್ಯದ ಒಂದು ಹಳ್ಳಿ ಪ್ರದೇಶ.[೧][೨] ಇದು ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನಲ್ಲಿದೆ. ಕಾದಲವೇಣಿಯು ಉಪ ಜಿಲ್ಲೆಯ ಕೇಂದ್ರ ಕಾರ್ಯಾಲಯ ಗೌರಿಬಿದನೂರಿನಿಂದ ಸುಮಾರು ೬ ಕಿ.ಮೀ ದೂರದಲ್ಲಿದೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಧಾನ ಕಛೇರಿಯಿಂದ ೪೪ ಕಿ.ಮೀ ದೂರದಲ್ಲಿದೆ.

ಇತಿಹಾಸ[ಬದಲಾಯಿಸಿ]

ಕಾದಲವೇಣಿ ಎಂಬ ಹೆಸರು ಮೂಲತಃ ಕನ್ನಡದ "ಕಾಲು ಹರಿದ ಓಣಿ" ಎಂಬ ಪದದಿಂದ ಬಂದಿದ್ದು, ಕಾಲಕ್ರಮೇಣ ಇದು "ಕಾದಲವೇಣಿ"ಯಾಗಿ ಮಾರ್ಪಾಡಾಗಿದೆ ಎಂದು ಹೇಳಲಾಗುತ್ತದೆ.

ಜನಸಂಖ್ಯಾಶಾಸ್ತ್ರ[ಬದಲಾಯಿಸಿ]

೨೦೧೧ರ ಜನಗಣತಿಯ ಪ್ರಕಾರ ಸ್ಥಳ ಸಂಕೇತ ಅಥವಾ ಕಾದಲವೇಣಿ ಹಳ್ಳಿಯ ಗ್ರಾಮ ಕೋಡ್ ೬೨೩೨೬೨ ಎಂದು ನಮೂದಿಸಿದೆ.[೧] ೨೦೦೯ರ ಅಂಕಿ ಅಂಶಗಳ ಪ್ರಕಾರ, ಕಾದಲವೇಣಿ ಗ್ರಾಮವು ಗ್ರಾಮ ಪಂಚಾಯತ್ ಕೂಡ ಆಗಿದೆ.[೩]

ಗ್ರಾಮದ ಒಟ್ಟು ಭೌಗೋಳಿಕ ಪ್ರದೇಶವು ೮೮೦.೩೨ ಹೆಕ್ಟೇರ್ ಆಗಿದೆ. ಕಾದಲವೇಣಿ ಗ್ರಾಮದಲ್ಲಿ ಒಟ್ಟು ೨,೫೧೨ ಜನಸಂಖ್ಯೆಯನ್ನು ಹೊಂದಿದ್ದು ೧,೨೫೪ ಪುರುಷರು ಮತ್ತು ೧,೨೫೮ ಹೆಂಗಸರಿದ್ದಾರೆ. ಈ ಗ್ರಾಮದಲ್ಲಿ ಸುಮಾರು ೫೯೯ ಮನೆಗಳಿವೆ. ಕಾದಲವೇಣಿ ಗ್ರಾಮಕ್ಕೆ ಸಮೀಪದಲ್ಲಿರುವ ಪಟ್ಟಣ ಗೌರಿಬಿದನೂರು, ಇದು ಸುಮಾರು ೬ ಕಿ.ಮೀ ದೂರದಲ್ಲಿದೆ.

ಕಾದಲವೇಣಿ ಗ್ರಾಮ ಪಂಚಾಯತ್ ಗ್ರಾಮಗಳು[ಬದಲಾಯಿಸಿ]

  • ಗುಂಡಾಪುರ
  • ಮರಳೂರು
  • ವೈಚಕುರಾಹಳ್ಳಿ
  • ಕಾದಲವೇಣಿ
  • ಉಡಮಲೋಡು

ಸೌಲಭ್ಯಗಳು[ಬದಲಾಯಿಸಿ]

ಕಾದಲವೇಣಿ ಗ್ರಾಮವು ಈ ಕೆಳಕಂಡ ಸೌಲಭ್ಯಗಳನ್ನು ಒಳಗೊಂಡಿದೆ

  • ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
  • ಸರ್ಕಾರಿ ಪ್ರೌಢಶಾಲೆ
  • ಕೆನರಾ ಬ್ಯಾಂಕ್ - ಈ ಬ್ಯಾಂಕ್ ಕಾದಲವೇಣಿ ಗ್ರಾಮದಿಂದ ಗೌರಿಬಿದನೂರು ರಸ್ತೆಯ ಕಡೆಗೆ ಇದೆ.[೪]
  • ಗ್ರಾಮ ಪಂಚಾಯತ್ ಕಚೇರಿ (ಮಂಡಲ್ ಕಚೇರಿ) - ಗ್ರಾಮದ ಕೇಂದ್ರಭಾಗದಲ್ಲಿ.
  • ಕೆ.ಎಂ.ಎಫ್ (ಕರ್ನಾಟಕ ಹಾಲು ಒಕ್ಕೂಟ) ಡೈರಿ - ಕಾದಲವೇಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಬಾಗದಲ್ಲಿದೆ.
  • ಸರ್ಕಾರಿ ನ್ಯಾಯಬೆಲೆ ಅಂಗಡಿ - ಕರ್ನಾಟಕ ಸರ್ಕಾರದ ಸ್ವಾಮ್ಯದ್ದಾಗಿದೆ.
  • ರಾಷ್ಟ್ರೀಯ ಹೆದ್ದಾರಿ-೨೦೬ - ಗೌರಿಬಿದನೂರು ಹಾಗೂ ಮಧುಗಿರಿಯನ್ನು ಸಂಪರ್ಕಿಸುತ್ತದೆ.

ದೇವಾಲಯಗಳು[ಬದಲಾಯಿಸಿ]

  • ಹನುಮಾನ್ ದೇವಸ್ಥಾನ
  • ಮಾರಮ್ಮ ದೇವಸ್ಥಾನ
  • ಗಣೇಶ ದೇವಾಲಯ
  • ಮಸೀದಿ

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ Village code= 623262 Office of the Registrar General & Census Commissioner, India. "Census of India : Town and Village Level data".
  2. "Kadalaveni in Google Map :". {{cite web}}: Unknown parameter |deadurl= ignored (help) Kadalaveni, Chikkaballapura, Karnataka
  3. villageinfo.in. "INDIAN VILLAGE DIRECTORY: Kadalaveni". {{cite web}}: Unknown parameter |deadurl= ignored (help)
  4. BankIFSCcode.com. "IFSC Code:- CNRB0008836, CANARA BANK, KADALVENI". {{cite web}}: Unknown parameter |deadurl= ignored (help)

ಬಾಹ್ಯ ಕೊಂಡಿಗಳು[ಬದಲಾಯಿಸಿ]