ಎರ್ನ್‌ಸ್ಟ್ ಬೋರಿಸ್ ಚೈನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎರ್ನ್‌ಸ್ಟ್ ಬೋರಿಸ್ ಚೈನ್
ಜನನ
ಎರ್ನ್‌ಸ್ಟ್ ಬೋರಿಸ್ ಚೈನ್

೧೯೦೬ ಜೂನ್ ೧೯
ಆರ್ಮನ್
ರಾಷ್ಟ್ರೀಯತೆಬ್ರಿಟನ್ನ್

ಆರ್ಮನಿಯಲ್ಲಿ ಹುಟ್ಟಿ, ಬ್ರಿಟನ್ನಿನ ಜೈವಿಕರಸಾಯನವಿಜ್ಞಾನಿಯಾಗಿದ್ದ ಎರ್ನ್‌ಸ್ಟ್ ಬೋರಿಸ್ ಚೈನ್‌ರವರು ೧೯೦೬ರ ಜೂನ್ ೧೯ರಂದು ಬರ್ಲಿನ್‌ನಲ್ಲಿ ಜನಿಸಿದರು. sಸ್ಕಾಟ್‌ಲೆಂಡಿನ ಜೀವವಿಜ್ಞಾನಿಯಾಗಿದ್ದ ಅಲೆಕ್ಸಾಂಡರ್ ಫ್ಲೆಮಿಂಗ್‌ರವರು (೧೮೮೯-೧೯೫೫) ೧೯೨೯ರಲ್ಲಿ ’ಪೆನ್ಸಿಲಿನ್’ (penicillin) ಕಂಡುಹಿಡಿದಿದ್ದರು. ಚೈನ್‌ರವರು ೧೯೩೯ರಲ್ಲಿ ಹೊವಾರ್ಡ್ ವಾಲ್ಟರ್ ಫ್ಲೋರಿಯವರ ಜೊತೆ ಸೇರಿಕೊಂಡು ಸೂಕ್ಷಾಣುಜೀವಿಗಳಿಂದ (microorganisms) ಉತ್ಪತ್ತಿಯಾಗುವ ಸ್ವಾಭಾವಿಕ ಪ್ರತಿ-ಬ್ಯಾಕ್ಟೀರಿಯಾ ಕಾರಕಗಳ (agents) ಬಗ್ಗೆ ಅಧ್ಯಯನ ನಡೆಸಿದರು. ಆಗ ಅವರಿಬ್ಬರೂ ಪೆನ್ಸಿಲಿನ್‌ನ ಚಿಕಿತ್ಸಕ ಕ್ರಿಯೆ ಮತ್ತು ರಾಸಾಯನಿಕ ಸಂಯೋಜನೆಯನ್ನು ಕಂಡುಹಿಡಿದರು. ಅಲ್ಲದೆ ಚೈನ್‌ರವರು ಪೆನ್ಸಿಲಿನ್‌ನ ರಚನೆಯ ಬಗ್ಗೆ ಪರಿಕಲ್ಪನೆಯನ್ನು ಮಂಡಿಸಿದರು. ಮುಂದೆ ಬ್ರಿಟನ್ನಿನ ಮಹಿಳಾ ರಸಾಯನವಿಜ್ಞಾನಿ ಡೊರೋಥಿ ಹಾಡ್ಕಿನ್‌ರವರು (೧೯೧೦-೧೯೯೪) ’ಕ್ಷ-ಕಿರಣ ಸ್ಪಟಿಕವಿಜ್ಞಾನ’ದ (X-ray crystallography) ವಿಧಾನದಿಂದ ಚೈನ್‌ರವರ ಪರಿಕಲ್ಪನೆಯನ್ನು ದೃಢೀಕರಿಸಿದರು. ಪೆನ್ಸಿಲಿನ್ ಬಗ್ಗೆ ನಡೆಸಿದ ಸಂಶೋಧನೆಗಳಿಗೆ ೧೯೪೫ರ ವೈದ್ಯಕೀಯ ವಿಜ್ಞಾನಕ್ಷೇತ್ರಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನು ಚೈನ್‌ರವರ ಜೊತೆ ಫ್ಲೋರಿ ಮತ್ತು ಫ್ಲೆಮಿಂಗ್‌ರವರುಗಳ ಜೊತೆ ಜಂಟಿಯಾಗಿ ನೀಡಲಾಯಿತು.[೧] ಚೈನ್‌ರವರು ಚೈನ್‌ರವರು ೧೯೭೯ರ ಆಗಸ್ಟ್ ೧೨ರಂದು ಬ್ರಿಟನ್ನಿನಲ್ಲಿ ನಿಧನರಾದರು.

ಉಲ್ಲೇಖಗಳು[ಬದಲಾಯಿಸಿ]