ಎಚ್. ಜಿ ಗೋವಿಂದೇಗೌಡರು
ಗೋಚರ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಎಚ್. ಜಿ ಗೋವಿಂದೇಗೌಡರು | |
---|---|
ಜನನ | ಮೇ 25, 1926 |
ಮರಣ | ಜನವರಿ 6, 2016 |
ವೃತ್ತಿ | ರಾಜಕಾರಣಿ |
ಗಮನಾರ್ಹ ಕೆಲಸಗಳು | ಶಿಕ್ಷಣ ಮಂತ್ರಿ |
'ಮಲೆನಾಡ ಗಾಂಧಿ' ಎಂದೇ ಪ್ರಸಿದ್ಧರಾಗಿದ್ದ ಎಚ್ ಜಿ ಗೋವಿಂದೇಗೌಡರು ಕರ್ನಾಟಕ ಸರ್ಕಾರದ ಶಿಕ್ಷಣ ಮಂತ್ರಿಗಳಾಗಿ ಹೆಸರು ಮಾಡಿದವರು. ಅವರ ಅಧಿಕಾರಾವಧಿಯಲ್ಲಿ ಒಂದು ಲಕ್ಷದ ಐದು ಸಾವಿರ ಶಿಕ್ಷಕರನ್ನು ನೇಮಿಸಿದರು. 1999ರಲ್ಲಿ ರಾಜಕೀಯ ನಿವೃತ್ತಿ ಹೊಂದಿದರು.
ಜನನ
[ಬದಲಾಯಿಸಿ]ಎಚ್. ಜಿ. ಗೋವಿಂದೇಗೌಡರು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನ ಕಾನೂರು ಗ್ರಾಮದ ಹಿಣಚಿಯಲ್ಲಿ 1926 ಮೇ 26ರಂದು ಜನಿಸಿದರು. [೧] [೨]
ವೈವಾಹಿಕ ಬದುಕು
[ಬದಲಾಯಿಸಿ]ಅವರಿಗೆ ಐದು ಜನ ಹೆಣ್ಣು ಮಕ್ಕಳೂ, ಓರ್ವ ಪುತ್ರನೂ ಇದ್ದಾರೆ.
ಸಾಧನೆ
[ಬದಲಾಯಿಸಿ]ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಗೋವಿಂದೇಗೌಡರು ಕರ್ನಾಟಕದ ಶಿಕ್ಷಣ ಮಂತ್ರಿಯಾಗಿ ಒಂದು ಲಕ್ಷದ ಐದು ಸಾವಿರ ಶಿಕ್ಷಕರನ್ನು ನೇಮಿಸಿ ದಾಖಲೆಗೈದಿದ್ದಾರೆ. ಶಿಕ್ಷಕ ಹುದ್ದೆಯ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ.50 ಮೀಸಲಾತಿ ಕಲ್ಪಿಸಿದ ಹೆಗ್ಗಳಿಕೆಯೂ ಅವರಿಗಿದೆ.
ಮರಣ
[ಬದಲಾಯಿಸಿ]ಗೋವಿಂದೇಗೌಡರು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನ ಕೊಪ್ಪದಲ್ಲಿ 2016 ಜನವರಿ 6ರಂದು ನಿಧನರಾದರು.
ಉಲ್ಲೇಖಗಳು
[ಬದಲಾಯಿಸಿ]- ↑ https://www.google.co.in/?gfe_rd=cr&ei=nLV4WIKrF9aDuASUzYX4Aw&gws_rd=ssl#q=h+g+govindegowda
- ↑ "ಆರ್ಕೈವ್ ನಕಲು". Archived from the original on 2016-11-13. Retrieved 2017-01-13.