ಎಚ್. ಗಿರಿಜಮ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಾ. ಎಚ್. ಗಿರಿಜಮ್ಮ
ಡಾ. ಎಚ್. ಗಿರಿಜಮ್ಮ
ಜನನಹರಿಹರ, ಕರ್ನಾಟಕ
ಮರಣಆಗಸ್ಟ್ ೧೭, ೨೦೨೧
ದಾವಣಗೆರೆ, ಕರ್ನಾತಕ
ವೃತ್ತಿವೈದ್ಯೆ, ಲೇಖಕಿ
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿಕಥೆ, ಕಾದಂಬರಿ, ವೈದ್ಯ ವಿಜ್ಞಾನ

ಪ್ರಭಾವಗಳು

ಡಾ. ಎಚ್. ಗಿರಿಜಮ್ಮ ಒಬ್ಬರು ವೈದ್ಯೆ ಹಾಗೂ ಕನ್ನಡ ಸಾಹಿತಿ. ಹಲವು ಕಥಾಸಂಕಲನಗಳನ್ನು, ವೈದ್ಯವಿಜ್ಞಾನ ಕೃತಿಗಳನ್ನು ರಚಿಸಿದವರು. ಸಾಹಿತ್ಯ ಕ್ಷೇತ್ರದಲ್ಲಷ್ಟೇ ಅಲ್ಲದೆ ಚಲನಚಿತ್ರ, ಸಾಕ್ಷ್ಯಚಿತ್ರಗಳ ಬರೆವಣಿಗೆ, ನಿರ್ಮಾಣಗಳಲ್ಲಿ ಕೂಡ ತೊಡಗಿಸಿಕೊಂಡಿದ್ದರು.

ಜೀವನ[ಬದಲಾಯಿಸಿ]

ಇವರು ಹರಿಹರದಲ್ಲಿ ಜನಿಸಿದರು. ಪಿಯುಸಿವರೆಗೆ ದಾವಣಗೆರೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ಹರಿಹರದಲ್ಲಿ ವೈದ್ಯಕೀಯ ವೃತ್ತಿ ಆರಂಭಿಸಿದರು. ಅನಂತರ ಬೆಂಗಳೂರಿನಲ್ಲಿ ವೃತ್ತಿಜೀವನವನ್ನು ಮುಂದುವರೆಸಿದರು. ೨೦ಕ್ಕೂ ಹೆಚ್ಚು ವರ್ಷಗಳ ಕಾಲ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದರು.[೧]

ವೃತ್ತಿ ಪ್ರವೃತ್ತಿ[ಬದಲಾಯಿಸಿ]

ವೃತ್ತಿಯಿಂದ ವೈದ್ಯೆಯಾಗಿದ್ದು ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆಯಾಗಿದ್ದರು. ಪ್ರವೃತ್ತಿಯಿಂದ ಸಾಹಿತ್ಯ, ಚಲನಚಿತ್ರ, ಸಾಕ್ಷ್ಯಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದರು. ೧೫ ಟೆಲಿಫಿಲ್ಮ್‌ಗಳು, ೫ ಟೆಲಿ ಧಾರಾವಾಹಿಗಳು ಮತ್ತು ೧೦ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದಾರೆ.[೨] 'ಪಂಚವಟಿ', 'ಗಾಜಿನ ಮನೆ', 'ಮೇಘ ಮಲ್ಹಾರ' ಸಿನೆಮಾಗಳಿಗೆ ಕತೆ ಬರೆದಿದ್ದಾರೆ.[೩]'ಅಂತರಗಂಗೆ' ಎಂಬ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ.

ಸಾಹಿತ್ಯ[ಬದಲಾಯಿಸಿ]

ಹಲವು ವಾರಪತ್ರಿಕೆ, ಮಾಸಪತ್ರಿಕೆಗಳಲ್ಲಿ ಕತೆಗಳನ್ನು, ನೀಳ್ಗತೆಗಳನ್ನು ಬರೆದಿದ್ದಾರೆ. ಅವರು ಒಟ್ಟು ೫೦ ಕತೆಗಳನ್ನು, ಹದಿನೇಳು ಕಾದಂಬರಿ, ಒಂಭತ್ತು ಕಥಾ ಸಂಕಲನ, ಹತ್ತೊಂಬತ್ತು ವೈದ್ಯ ವಿಜ್ಞಾನದ ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ.[೪] (ಕೆಳಗಿನದು ಅಪೂರ್ಣ ಪಟ್ಟಿ)

ಕಾದಂಬರಿಗಳು[ಬದಲಾಯಿಸಿ]

  • ಮೇಘ ಮಂದಾರ (ಈ ಕಾದಂಬರಿಯು ಚಲನಚಿತ್ರವಾಗಿದೆ. ೧೯೯೨)
  • ಚಂದಮಾಮ
  • ತಮಸೋಮ ಜ್ಯೋತಿರ್ಗಮಯ
  • ಅಂಬರತಾರೆ
  • ಬೆಂಕಿಹೂ

ಕಥಾಸಂಕಲನಗಳು[ಬದಲಾಯಿಸಿ]

ವೈದ್ಯ ವಿಜ್ಞಾನ ಕೃತಿಗಳು[ಬದಲಾಯಿಸಿ]

  • ನಿಮ್ಮ ಮಗು
  • ಸ್ತ್ರೀ ದೇಹ
  • ಬಸಿರು
  • ಬಂಜೆತನ ಮತ್ತು ಪರಿಹಾರೋಪಾಯಗಳು
  • ಬಂಜೆತನದ ಬವಣೆಗಳು
  • ಮಕ್ಕಳು ಮನಸ್ಸು ಮತ್ತು ಬೆಳವಣಿಗೆ
  • ಮಕ್ಕಳು-ಮನಸು
  • ಸಂತಾನಹೀನತೆ
  • ಗರ್ಭಕೋಶದ ಖಾಯಿಲೆಗಳಿಗೆ ಚಿಕಿತ್ಸೆ[೫]
  • ಮನುಷ್ಯ ದೇಹ ಮತ್ತು ಆರೋಗ್ಯ (ಡಾ. ಪೂರ್ಣಿಮಾ ಭಟ್ ಸಹಲೇಖಕಿ)
  • ರಕ್ತದ ಕಾಯಿಲೆಗಳು

ಆತ್ಮಕಥನ[ಬದಲಾಯಿಸಿ]

  • ಕಾಡತಾವ ನೆನಪುಗಳು

ಪ್ರಶಸ್ತಿ ಗೌರವಗಳು[೬][ಬದಲಾಯಿಸಿ]

ನಿಧನ[ಬದಲಾಯಿಸಿ]

೧೭ಆಗಸ್ಟ್ ೨೦೨೧ ರಂದು ದಾವಣಗೆರೆಯಲ್ಲಿ ನಿಧನರಾದರು.[೯] ಅವರಿಗೆ ೭೦ ವರ್ಷ ವಯಸ್ಸಾಗಿತ್ತು.

ಉಲ್ಲೇಖಗಳು[ಬದಲಾಯಿಸಿ]

  1. ಸಂಜೆವಾಣಿ ವರದಿ, ೧೭ ಆಗಸ್ಟ್ ೨೦೨೧
  2. http://www.viggy.com/english/current_ananya.asp
  3. "Dr H Girijamma: Filmography". Chiloka.com. Retrieved 28 September 2021.
  4. ಡಾ ಹೆಚ್ ಗಿರಿಜಮ್ಮ ಅವರೊಂದಿಗೆ ಬಿ ಎನ್ ಮಲ್ಲೇಶ್ ಸಂದರ್ಶನ, ಅವಧಿ ಮ್ಯಾಗಜೀನ್
  5. https://kanaja.karnataka.gov.in/ebook/wp-content/uploads/2020/PDF/667.pdf
  6. ಡಾ. ಎಚ್. ಗಿರಿಜಮ್ಮ, ೧೭ ಆಗಸ್ಟ್ ೨೦೨೧, ಕನ್ನಡಪ್ರಭ
  7. "Five writers selected for Kannada Sahitya Academy awards". The Hindu. Bangalore. 25 February 2006. Retrieved 1 November 2014.
  8. ‘ಶ್ರೇಷ್ಠ ವೈದ್ಯ’ರಾಗಿ ಡಾ.ಸಿ.ಆರ್‌.ಚಂದ್ರಶೇಖರ್‌ ಹಾಗೂಡಾ.ಗಿರಿಜಮ್ಮ, ೦೭ ಡಿಸೆಂಬರ್ ೨೦೦೧, ಕನ್ನಡ ಒನ್ ಇಂಡಿಯಾ
  9. ಗಿರಿಜಮ್ಮ ನಿಧನ, ೧೭ ಆಗಸ್ಟ್ ೨೦೨೧, ವಿಜಯವಾಣಿ

ಹೊರಕೊಂಡಿಗಳು[ಬದಲಾಯಿಸಿ]