ಎಚ್. ಎಸ್. ಸತ್ಯನಾರಾಯಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಚ್. ಎಸ್. ಸತ್ಯನಾರಾಯಣ
ಜನನಆಗಸ್ಟ್ ೦೧, ೧೯೬೯
ಹೊಕ್ಕಳಿಕೆ, ಕರ್ನಾಟಕ
ವೃತ್ತಿಸಾಹಿತಿ, ವಿಮರ್ಶಕ, ಲೇಖಕ, ಅಧ್ಯಾಪಕ
ರಾಷ್ಟ್ರೀಯತೆಭಾರತೀಯ
ಕಾಲ೨೦ನೆಯ ಶತಮಾನದಿಂದ ೨೧ನೇ ಶತಮಾನ
ಪ್ರಕಾರ/ಶೈಲಿವಿಮರ್ಶೆ, ಜೀವನ ಚರಿತ್ರೆ, ಪ್ರಬಂಧ
ವಿಷಯಪ್ರೇಮ, ದೇಶಪ್ರೇಮ, ಪ್ರಕೃತಿ, ವಿಚಾರ, ವ್ಯಕ್ತಿಚರಿತ್ರೆ, ಆದರ್ಶ
ಸಾಹಿತ್ಯ ಚಳುವಳಿಆಧುನಿಕ
ಪ್ರಮುಖ ಪ್ರಶಸ್ತಿ(ಗಳು)ಮೇಘಮೈತ್ರಿ ಪುಸ್ತಕ ಬಹುಮಾನ(ಅಪೂರ್ವ ಒಡನಾಟ ಕೃತಿಗೆ), ಹಾ.ಮಾ.ನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನ(ಅಪೂರ್ವ ಒಡನಾಟ ಕೃತಿಗೆ), ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಬಹುಮಾನ(ಕುವೆಂಪು: ಅಲಕ್ಷಿತರೆದೆಯ ದೀಪ ಕೃತಿಗೆ), ಬೇಂದ್ರೆ ನುಡಿಸಿರಿ ಪ್ರಶಸ್ತಿ (ಕಣ್ಣೋಟ ವಿಮರ್ಶಾ ಕೃತಿಗೆ) ರಜತ ಪದಕ ೨೦೨೩(ಪನ್ನೇರಳೆ ಕೃತಿಗೆ)


ಎಚ್. ಎಸ್. ಸತ್ಯನಾರಾಯಣ, ಚಿಕ್ಕಮಗಳೂರು (ಆಗಸ್ಟ್ ೦೧, ೧೯೬೯) ಇವರು ಕನ್ನಡದ ವಿಮರ್ಶಕ ಮತ್ತು ಸಂಸ್ಕೃತಿ ಚಿಂತಕರಾಗಿದ್ದಾರೆ. ಹಲವು ವಿದ್ಯಾರ್ಥಿಗಳ ನೆಚ್ಚಿನ ಮೇಷ್ಟ್ರು ಹಾಗೂ ಸಂಸ್ಕೃತಿ ಕುರಿತ ಯಾವುದೇ ವಿಚಾರದ ಮೇಲೆ ಅರ್ಥಪೂರ್ಣವಾಗಿ ಮಾತನಾಡಬಲ್ಲ ಕನ್ನಡದ ಸಾಹಿತಿ ಇವರು. ಹೊಸ ತಲೆಮಾರಿನ ವಿಮರ್ಶಕರೂ ಆದ ಎಚ್.ಎಸ್. ಸತ್ಯನಾರಾಯಣ ಅವರು ಮೂಲತಃ ಮಲೆನಾಡಿನವರು. ಕುವೆಂಪು ಅವರ ಕುಪ್ಪಳಿಗೆ ಸಮೀಪವೇ ಇರುವ, ಚಿಕ್ಕಮಗಳೂರಿನ ಹೊಕ್ಕಳಿಕೆಯಲ್ಲಿ ಜನಿಸಿದ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿತರು.

ಜೀವನ[ಬದಲಾಯಿಸಿ]

ನಿತ್ಯ ಕನ್ನಡದ ಉಪಾಸಕರಾಗಿ, ಸಂಸ್ಕೃತಿ ಚಿಂತನೆಯೊಂದಿಗೆ ನಾಡಿನಾದ್ಯಂತ ಹಲವು ಉಪನ್ಯಾಸಗಳನ್ನು ನೀಡುತ್ತಾ, ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಕನ್ನಡ ಉಪನ್ಯಾಸಕರಾಗಿ ಸದ್ಯ ಚಿಕ್ಕಮಗಳೂರಿನಲ್ಲಿ ವಾಸಿಸುತ್ತಿದ್ದಾರೆ.

ಶಿಕ್ಷಣ[ಬದಲಾಯಿಸಿ]

೧. ಅಂತಿಮ ಬಿ.ಎ. ಪದವಿ ಪರೀಕ್ಷೆಯಲ್ಲಿ ವಿಶ್ವವಿದ್ಯಾಲಯಕ್ಕೆ ಮೊದಲಿಗರಾಗಿ ಪ್ರೊ. ತೀ.ನಂ.ಶ್ರೀ. ಚಿನ್ನದ ಪದಕ ಮತ್ತು ಹಲವು ನಗದು ಪುರಸ್ಕಾರ ವಿಜೇತರು. ೨. ಕನ್ನಡ ಎಂ.ಎ. ಪರೀಕ್ಷೆಯಲಿ ತೃತೀಯ ರ್ಯಾಂಕ್. ೩. "ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಥನ ಸಾಹಿತ್ಯದ ಸಾಂಸ್ಕೃತಿಕ ನೆಲೆಗಳು" ಎಂಬ ಪ್ರೌಢ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ದೊರೆತಿದೆ.

ವೃತ್ತಿಜೀವನ[ಬದಲಾಯಿಸಿ]

ಇವರು ಕಳೆದ ಇಪ್ಪತ್ತೈದು ವರ್ಷಗಳಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಾಹಿತ್ಯ ಕೃಷಿ[ಬದಲಾಯಿಸಿ]

ಪ್ರಕಟಿತ ಕೃತಿಗಳು[ಬದಲಾಯಿಸಿ]

೧. ಅಪೂರ್ವ ಒಡನಾಟ (ಕವಿಸಮಯದ ಬರಹಗಳು)

೨. ಕುವೆಂಪು: ಅಲಕ್ಷಿತರೆದೆಯ ದೀಪ (ವಿಮರ್ಶೆ)

೩. ಅಕ್ಷರ ಲೋಕದ ಆನೆ – ತೇಜಸ್ವಿ (ವಿಮರ್ಶೆ)

೪. ನುಡಿಚಿತ್ರ (ಅಂಕಣ ಬರಹಗಳು)

೫. ಕಣ್ಣೋಟ (ವಿಮರ್ಶೆ)

೬. ಗಿರೀಶ್ ಕಾರ್ನಾಡ್: ಬದುಕು - ಬರಹ (ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ)

೭. ನಗೆಮೊಗದ ಅಜ್ಜ-ಮಾಸ್ತಿ (ಜೀವನ ಚರಿತ್ರೆ)

೮. ಪನ್ನೇರಳೆ (ಲಲಿತ ಪ್ರಬಂಧಗಳು)

೯. ಅಧ್ಯಾಪಕನಾಗಿ ಕಾಲುಶತಮಾನ (ನೆನಪುಗಳ ಸಂಗ್ರಹ)

೧೦. ಬಿದಿರ ತಡಿಕೆ (ಲಲಿತ ಪ್ರಬಂಧ)

೧೧. ಗಿರೀಶ ಕಾರ್ನಾಡ (ಮೊನಾಗ್ರಾಫ್)


ಸಂಪಾದಿತ ಕೃತಿಗಳು[ಬದಲಾಯಿಸಿ]

೧. ಕನ್ನಡ ಸಾಹಿತ್ಯ ಸಂಗಾತಿ (ಇತರರೊಂದಿಗೆ, ಕರ್ನಾಟಕ ಸಾಹಿತ್ಯ ಅಕಾಡೆಮಿ)

೨. ಸಾಹಿತ್ಯ ವಿಮರ್ಶೆ- ೨೦೧೬ (ಕರ್ನಾಟಕ ಸಾಹಿತ್ಯ ಅಕಾಡೆಮಿ)

೩. ದುಂಡಿಮಲ್ಲಿಗೆ (ಎಚ್. ಡುಂಡಿರಾಜ್ ಸಾಹಿತ್ಯ ಕುರಿತ ಪ್ರತಿಕ್ರಿಯೆ)

೪. ಗೆಳೆಯ ಲಕ್ಷ್ಮಣ (ಬಿ.ಆರ್. ಲಕ್ಷ್ಮಣರಾವ್ ಸಾಹಿತ್ಯ ಕುರಿತ ಪ್ರತಿಕ್ರಿಯೆ)

೫. ನಂಗ್ಲಿ-ಜಂಗ್ಲಿ (ವಿ. ಚಂದ್ರಶೇಖರ ನಂಗ್ಲಿಯವರ ಸಾಹಿತ್ಯ ಕುರಿತು)

೬. ಬತ್ತದ ಕಾವ್ಯದೊರತೆ (ಟಿ. ಯಲ್ಲಪ್ಪ ಅವರ ಕಾವ್ಯ ಕುರಿತು)

೭. ಬಾ.ರಾ.ಗೋಪಾಲ್ ಆಯ್ದ ಬರಹಗಳು


ಪ್ರಮುಖ ಸೇವೆಗಳು[ಬದಲಾಯಿಸಿ]

೧. ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಕನ್ನಡ ಭಾಷಾ ವಿಷಯದ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿ.

೨. ಇಲಾಖೆಯ ಅಕಾಡೆಮಿಕ್ ಕೌನ್ಸಿಲ್ ಸದಸ್ಯರು.

೩. ಪ್ರಥಮ ಪಿ.ಯು.ಸಿ. ಐಚ್ಛಿಕ ಪಠ್ಯ ರಚನಾ ಸಮಿತಿಯ ಸದಸ್ಯರು.

೪. ದ್ವಿತೀಯ ಪಿ.ಯು.ಸಿ. ಕನ್ನಡ ಭಾಷಾ ಪಠ್ಯ ರಚನಾ ಸಮಿತಿಯ ಸಂಚಾಲಕರು.

೫. ಒಂದರಿಂದ ಹತ್ತನೇ ತರಗತಿವರೆಗಿನ ಪ್ರಥಮ ಭಾಷೆ, ದ್ವಿತೀಯ ಭಾಷೆ, ತೃತೀಯ ಭಾಷೆ ಕನ್ನಡ ಪಠ್ಯ ಪುಸ್ತಕಗಳ ರಚನಾ ಸಮಿತಿಯಲ್ಲಿ ಉನ್ನತ ಮಟ್ಟದ ಸಲಹಾಸಮಿತಿ ಸದಸ್ಯರು

೬. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಪರೀಕ್ಷಾ ಸಲಹಾ ಸಮಿತಿ ಸದಸ್ಯರು.

೭. ಗಮಕ ಪರಿಷತ್ತಿನ ಪರೀಕ್ಷಾ ವಿಭಾಗದ ಸದಸ್ಯರು.

೮. ಹಲವು ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಪಠ್ಯರಚನಾ ಸಮಿತಿಯ ಗೌರವ ಸಲಹೆಗಾರರು.

೯. ಇವರು ರಚಿಸಿದ ಸಂಗೊಳ್ಳಿರಾಯಣ್ಣ ವ್ಯಕ್ತಿ ಚಿತ್ರವು ಐದನೇ ತರಗತಿಗೆ ಕನ್ನಡ ಪಠ್ಯವಾಗಿದೆ.

೧೦. “ಯುವ ಜನಾಂಗ ಮತ್ತು ಧಾರ್ಮಿಕ ಸಾಮರಸ್ಯ” ಹಾಗೂ “ಕನ್ನಡಕ್ಕೆ ಅನ್ನ ಬ್ರಹ್ಮನ ಸ್ಥಾನ” ಎಂಬ ಲೇಖನಗಳು ಬೆಂಗಳೂರು ವಿ.ವಿ.ಯ ಪದವಿ ತರಗತಿಗಳಿಗೆ ಪಠ್ಯವಾಗಿವೆ.

೧೧. ೫ನೇ ತರಗತಿಯ ಪ್ರಥಮಭಾಷೆ ಕನ್ನಡ ಪಠ್ಯದಲ್ಲಿ ಸಂಗೊಳ್ಳಿ ರಾಯಣ ಲೇಖನವು ಸೇರ್ಪಡೆಯಾಗಿದೆ.

೧೨. ೬ನೇತರಗತಿ ಪ್ರಥಮಭಾಷೆ ಕನ್ನಡದಲ್ಲಿ 'ಡಾ. ರಾಜಕುಮಾರ್' ಲೇಖನ ಪಠ್ಯವಾಗಿದೆ.

೧೩. ಕರ್ನಾಟಕ ಸರ್ಕಾರವು ಒಂದರಿಂದ ಹತ್ತನೇ ತರಗತಿವರೆಗಿನ ದ್ವಿತೀಯ ಭಾಷೆ ಕನ್ನಡ ಪಠ್ಯ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದೆ.

೧೪. ಕನ್ನಡಕ್ಕೆ ಅನ್ನಬ್ರಹ್ಮನ ಸ್ಥಾನ ಲೇಖನವು ಬೆಂಗಳೂರು ವಿ ವಿಯ ಬಿಬಿಎ ತೃತೀಯ ಸೆಮಿಸ್ಟರ್ ಪಠ್ಯದಲ್ಲಿ ಸೇರಿದೆ.

೧೫. “ಯುವ ಜನಾಂಗ ಮತ್ತು ಧಾರ್ಮಿಕ ಸಾಮರಸ್ಯ” ಎಂಬ ಲೇಖನವು ಕುವೆಂಪು ವಿ ವಿಯ ಬಿಎಸ್ಸಿ. ತೃತೀಯ ಸೆಮಿಸ್ಟರ್ ಪಠ್ಯದಲ್ಲಿ ಸೇರ್ಪಡೆಗೊಂಡಿದೆ. ಇದೇ ಪಠ್ಯವನ್ನು ಕ್ರಿಸ್ತು ಜಯಂತಿ ಕಾಲೇಜು, ಬೆಂಗಳೂರು ಇವರು 2020-22 ನೇ ಸಾಲಿನ ಬಿ.ಕಾಂ ಪಠ್ಯ, ನಂತರ 2021-23ನೇ ಸಾಲಿನ ಬಿಎಸ್.ಸಿ ಪಠ್ಯವನ್ನಾಗಿ ಸೇರ್ಪಡೆಗೊಳಿಸಿದ್ದಾರೆ.

ಇತರ ಸೇವೆಗಳು[ಬದಲಾಯಿಸಿ]

೧. ನಾಡಿನಾದ್ಯಂತ ಮೂರು ಸಾವಿರಕ್ಕೂ ಅಧಿಕ ಉಪನ್ಯಾಸ ನೀಡುವ ಮೂಲಕ ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ಪಸರಿಸುವ ‘ಸಾಹಿತ್ಯ ಪರಿಚಾರಿಕೆ’ಯಲ್ಲಿ ತೊಡಗಿದ್ದಾರೆ. ೨. ಹಲವು ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಸೇವೆ ಸಲ್ಲಿಸಿದ್ದಾರೆ. ೩. ದೆಹಲಿ ಕನ್ನಡ ಸಂಘದ, ಹೈದರಾಬಾದ್ ಕನ್ನಡ ಸಂಘ ಮುಂತಾದ ಹಲವಾರು ಹೊರನಾಡಿನ ಕನ್ನಡಪರ ಸಂಘಟನೆಗಳ ವಿವಿಧ ಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ೪. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ತು, ಸುಚಿತ್ರಾ ಫಿಲಂ ಸೊಸೈಟಿ ಮುಂತಾದ ಸಂಸ್ಥೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ೫. ಹಲವು ರಾಷ್ಟçಮಟ್ಟದ, ರಾಜ್ಯಮಟ್ಟದ ವಿಚಾರ ಸಂಕೀರ್ಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ೬. ಇಂದಿಗೂ ಸಾಹಿತ್ಯ ವಲಯದ ಹಿರಿಯರೊಂದಿಗೆ ಸಮಾನಾಂತರ ಸಂಬಂಧ ಸ್ಥಾಪಿಸಿಕೊಂಡು ಓದು ಬರಹ, ವಿಮರ್ಶೆಯ ಚಟುವಟಿಕೆಗಳಲ್ಲಿನ ಕ್ರಿಯಾಶೀಲರಾಗಿದ್ದಾರೆ.

ಗೌರವ/ ಪ್ರಶಸ್ತಿ ಪುರಸ್ಕಾರಗಳು[ಬದಲಾಯಿಸಿ]

೧. ಮೇಘಮೈತ್ರಿ ಪುಸ್ತಕ ಬಹುಮಾನ(ಅಪೂರ್ವ ಒಡನಾಟ ಕೃತಿಗೆ)

೨. ಹಾ.ಮಾ.ನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನ(ಅಪೂರ್ವ ಒಡನಾಟ ಕೃತಿಗೆ)

೩. ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಬಹುಮಾನ(ಕುವೆಂಪು: ಅಲಕ್ಷಿತರೆದೆಯ ದೀಪ ಕೃತಿಗೆ)

೪. ಬೇಂದ್ರೆ ನುಡಿಸಿರಿ ಪ್ರಶಸ್ತಿ (ಕಣ್ಣೋಟ ವಿಮರ್ಶಾ ಕೃತಿಗೆ)

೫. ಕೇಂದ್ರ ಸಾಹಿತ್ಯ ಪರಿಷತ್ತಿನ ಪ್ರೊ.ಸಿ.ಎಚ್. ಮರಿದೇವರು ದತ್ತಿ ಪ್ರಶಸ್ತಿ - ಸಾಹಿತ್ಯ ಸೇವೆಗಾಗಿ.

೬. ಉದಯೋನ್ಮುಖ ವರ್ಧಮಾನ ಪ್ರಶಸ್ತಿ, ೨೦೨೧ನೇ ಸಾಲಿನ ಸಾಹಿತ್ಯ ಸಾಧನೆಗಾಗಿ.

೭.ಕರ್ನಾಟಕ ಸರ್ಕಾರದಿಂದ ೨೦೧೭-೧೮ನೇ ಸಾಲಿನ ಅತ್ಯತ್ತಮ ಉಪನ್ಯಾಸಕ ರಾಜ್ಯ ಪ್ರಶಸ್ತಿ.

೮. ಅಂತಾರಾಷ್ಟ್ರೀಯ ಖ್ಯಾತಿಯ ಸಮಾಜಶಾಸ್ತ್ರಜ್ಞ ಡಾ.ಹಿರೇಮಲ್ಲೂರು ಈಶ್ವರನ್ ರಾಜ್ಯ ಪ್ರಶಸ್ತಿ - ಶೈಕ್ಷಣಿಕ ಸಾಧನೆಗಾಗಿ.

೯. ಪನ್ನೇರಳೆ ಕೃತಿಗೆ ರಜತ ಪದಕ ೨೦೨೩

೧೦. ಕುವೆಂಪು ಸಾಹಿತ್ಯ ಪರಿಚಾರಕ ೨೦೨೩

ಹೊರಗಿನ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]