ಎಂ.ಎಸ್.ವೇದಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾ. ಎಂ.ಎಸ್.ವೇದಾ ಕನ್ನಡ ಸಾಹಿತ್ಯದ ಗಂಭೀರ ವಿಚಾರಧಾರೆಯುಳ್ಳ ಸೃಜನಶೀಲ ಲೇಖಕಿ. ಇವರ ಸಾಹಿತ್ಯದ ಹರುಹು ದೊಡ್ಡದು. ಕವಿತೆ, ಕಥೆ, ಕಾದಂಬರಿ, ನಾಟಕಗಳನ್ನು ರಚಿಸಿದ್ದಾರೆ.

ಜನನ, ಶಿಕ್ಷಣ[ಬದಲಾಯಿಸಿ]

ಇವರು ಮೇ ೦೪- ೧೯೬೫ ಮೈಸೂರಿನಲ್ಲಿ ಜನಿಸಿದರು. ಎಂ.ಎ(ಕನ್ನಡ), ಪಿಎಚ್.ಡಿ ಪದವೀಧರೆಯಾಗಿದ್ದಾರೆ. ಕನ್ನಡ ಸಾಹಿತಿ ಬಿ.ಪುಟ್ಟಸ್ವಾಮಯ್ಯನವರ ನಾಟಕ ಹಾಗೂ ಕಾದಂಬರಿಗಳನ್ನು ಕುರಿತು ಸಂಶೋಧನಾ ವ್ಯಾಸಂಗ ಮಾಡಿದ್ದಾರೆ.

ವೃತ್ತಿ ಜೀವನ[ಬದಲಾಯಿಸಿ]

ಪ್ರಸ್ತುತ ಪಿರಿಯಾಪಟ್ಟಣದ ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿದ್ದಾರೆ. ಸೂಕ್ಷ್ಮ ಸಂವೇದನೆಯ ಲೇಖಕಿಯಾದ ವೇದಾ ತಮ್ಮ ರಚನಾ ಕೌಶಲ್ಯ ಮತ್ತು ಪ್ರತಿಭೆಗಳನ್ನು ಸ್ತ್ರೀ ಬದುಕಿನ ಮೀಮಾಂಸೆಗಾಗಿ ದುಡಿಸಿಕೊಳ್ಳುತ್ತಾರೆ.

ಕಥಾ ಸಂಕಲನಗಳು[ಬದಲಾಯಿಸಿ]

  • ಪ್ರೀತಿ ಮತ್ತು ಸಾವು
  • ಪಾಲು (೧೯೯೭)
  • ಬಿಳಿಯೆಣ್ಣು ಮತ್ತು ದುಂಡವ್ವನ ದೆವ್ವ(೨೦೦೨)
  • ಈ ತನಕ(೨೦೧೦)

ಕಾದಂಬರಿಗಳು[ಬದಲಾಯಿಸಿ]

  • ಜಮೀನು (೨೦೦೦)
  • ಜಯ (೨೦೦೪)
  • ಕಪ್ಪುಕಿವಿಯ ಬಿಳಿಯ ಕುದುರೆಗಳು (೨೦೦೭)
  • ರಾಜ ಒಡೆಯರು (೨೦೧೪)
  • ದೊಡ್ಡ ತಾಯಿ.

ಕಾವ್ಯ ಸಂಕಲನಗಳು[ಬದಲಾಯಿಸಿ]

  • ಕಾವ್ಯಕೂಸು (೧೯೮೫)
  • ಗಂಗೋತ್ರಿಯಲ್ಲಿ (೧೯೮೭)
  • ಬಿಳಲುಗಳು (೧೯೮೯)

ನಾಟಕ[ಬದಲಾಯಿಸಿ]

  • ಉತ್ತರ ಶಾಕುಂತಲಾ

ಪಿ.ಎಚ್ ಡಿ.ಮಹಾಪ್ರಬಂಧ[ಬದಲಾಯಿಸಿ]

  • ಬಿ.ಪುಟ್ಟಸ್ವಾಮಯ್ಯನವರ ನಾಟಕ ಹಾಗೂ ಕಾದಂಬರಿಗಳ ಸಮಗ್ರ ಅಧ್ಯಯನ (೧೯೯೨)

ಸಾಹಿತ್ಯ ವಿಮರ್ಶೆ[ಬದಲಾಯಿಸಿ]

  • ಆರ್ದ್ರಗರ್ವದ ಹುಡುಗಿ (೨೦೧೦)
  • ಮಹಿಳಾ ಕಾವ್ಯ ಕಾರಣ (೨೦೧೬)

ವ್ಯಕ್ತಿ ಚಿತ್ರ[ಬದಲಾಯಿಸಿ]

  • ಚದುರಂಗ (೨೦೦೧)

ಪ್ರಶಸ್ತಿಗಳು[ಬದಲಾಯಿಸಿ]

  • ರಾಜ ಒಡೆಯರು ಕೃತಿಗೆ - ಎಚ್.ವಿ.ಸಾವಿತ್ರಮ್ಮ ಪ್ರಶಸ್ತಿ.
  • ಸಾಹಿತ್ಯ ಶ್ರೀ ಪ್ರಶಸ್ತಿ - ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ.

ಉಲ್ಲೇಖಗಳು[ಬದಲಾಯಿಸಿ]

  • .