ವಿಷಯಕ್ಕೆ ಹೋಗು

ಎ. ಆರ್. ರಹಮಾನ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎ. ಆರ್. ರಹಮಾನ್‌
A.R. Rahman in 2007
ಹಿನ್ನೆಲೆ ಮಾಹಿತಿ
ಜನ್ಮನಾಮA. S. Dileep Kumar
ಅಡ್ಡಹೆಸರುA. R. Rahman, ARR, AR
ಸಂಗೀತ ಶೈಲಿFilm score, theatre, world music
ವೃತ್ತಿComposer, record producer, music director, singer, instrumentalist, arranger, programmer
ಸಕ್ರಿಯ ವರ್ಷಗಳು1984–present
L‍abelsK M Musiq
ಅಧೀಕೃತ ಜಾಲತಾಣarrahman.com

ಅಲ್ಲಾಹ್‌ ರಖಾ ರಹಮಾನ್‌ (ತಮಿಳು:அல்லா ரக்கா ரஹ்மான் (ಉರ್ದು: اللہ رکھا رحمان); (ಜನನ 6 ಜನವರಿ 1966; ಜನ್ಮನಾಮ: ಎ. ಎಸ್‌. ದಿಲೀಪ್‌ ಕುಮಾರ್ ) ಒಬ್ಬ ಭಾರತೀಯ ಚಲನಚಿತ್ರ ಸಂಗೀತ ಸಂಯೋಜಕ, ಧ್ವನಿಸುರಳಿ-ಧ್ವನಿಮುದ್ರಣ ನಿರ್ಮಾಪಕ, ಸಂಗೀತಗಾರ ಹಾಗೂ ಗಾಯಕ. ಆಗ 1990ರ ದಶಕದ ಆರಂಭದಲ್ಲಿ ಅವರು ತಮ್ಮ ಚಲನಚಿತ್ರ ಸಂಗೀತ ಸಂಯೋಜನಾ ವೃತ್ತಿ ಆರಂಭಿಸಿದರು. ಅವರಿಗೆ ಇದುವರೆಗೂ ಹದಿನಾಲ್ಕು ಫಿಲ್ಮ್‌ಫೇರ್‌ ಪ್ರಶಸ್ತಿಗಳು, ಹನ್ನೊಂದು ದಕ್ಷಿಣ ಫಿಲ್ಮ್‌ಫೇರ್‌ ಪ್ರಶಸ್ತಿಗಳು, ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಎರಡು ಅಕಾಡೆಮಿ (ಆಸ್ಕರ್‌) ಪ್ರಶಸ್ತಿಗಳು, ಎರಡು ಗ್ರ್ಯಾಮಿ ಪ್ರಶಸ್ತಿಗಳು, ಒಂದು ಬಾಫ್ತಾ BAFTA [ಬ್ರಿಟಿಶ್ ಅಕ್ಯಾಡಮಿ ಆಫ್ ಫಿಲ್ಮ್ಸ್ ಅಂಡ್ ಟೆಲೆವಿಜನ್ ಅವಾರ್ಸ್ಡ್] (BAFTA) ಪ್ರಶಸ್ತಿ ಹಾಗೂ ಒಂದು ಗೊಲ್ಡನ್‌ ಗ್ಲೋಬ್‌ ಪ್ರಶಸ್ತಿ ಲಭಿಸಿವೆ.[][] ಲಂಡನ್‌ನ ಟ್ರಿನಿಟಿ ಕಾಲೇಜ್‌ ಆಫ್‌ ಮ್ಯೂಸಿಕ್‌ನಲ್ಲಿ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ ಅಧ್ಯಯನ ಮಾಡಿ ಆ ಕ್ಷೇತ್ರದಲ್ಲಿ ಪದವಿ ಗಳಿಸಿದರು. ನಂತರ, ತಮ್ಮ ಮೂಲ ನಗರ ಚೆನ್ನೈಯಲ್ಲಿ ತಮ್ಮದೇ ಆದ 'ಪಂಚತನ್‌ ರೆಕಾರ್ಡ್‌ ಇನ್‌' ಎಂಬ ಸುಸಜ್ಜಿತ ಸ್ಟುಡಿಯೊ ಸ್ಥಾಪಿಸಿದರು. ಪಂಚತನ್‌ ಬಹುಶಃ ಇಡೀ ಏಷ್ಯಾದಲ್ಲೇ ಅತ್ಯಂತ ಸುಸಜ್ಜಿತ ಹಾಗೂ ಆಧುನೀಕೃತ (ಧ್ವನಿಸಂಯೋಜನಾ ಮತ್ತು ಧ್ವನಿ-ವಿನ್ಯಾಸ) ಸ್ಟುಡಿಯೊ ಆಗಿದೆ.[] ಭಾರತದ ವಿವಿಧ ಚಲನಚಿತ್ರೋದ್ಯಮಗಳು, ಅಂತರರಾಷ್ಟ್ರೀಯ ಚಲನಚಿತ್ರಗಳು ಮತ್ತು ರಂಗಮಂದಿರಗಳಲ್ಲಿ ತಮ್ಮ ಸಂಗೀತ ಸಂಯೋಜನೆ ಮಾಡಿದ ರಹಮಾನ್‌ರ ವೃತ್ತಿಯು‌, 2004ರಷ್ಟರಲ್ಲಿ ಎರಡು ದಶಕಗಳ ಅವಧಿ ಪೂರೈಸಿತ್ತು. ಚಲನಚಿತ್ರಗಳಿಗಾಗಿ ತಾವು ರಚಿಸಿದ ಸಂಗೀತ ಸಂಯೋಜನೆಗಳು ಮತ್ತು ಧ್ವನಿಪಥಗಳ ಸಂಗ್ರಹಗಳು ಸುಮಾರು 150 ದಶಲಕ್ಷಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿವೆ.[][] ಅಲ್ಲದೆ, ಸುಮಾರು 200 ದಶಲಕ್ಷಕ್ಕಿಂತಲೂ ಹೆಚ್ಚು ಧ್ವನಿಸುರುಳಿಗಳು ಮಾರಾಟವಾಗಿವೆ.[] ಇದರಿಂದಾಗಿ ಅವರು ವಿಶ್ವದಲ್ಲಿ ಸಾರ್ವಕಾಲಿಕ ಅತಿಹೆಚ್ಚು ಮಾರಾಟವಾಗುವಂತಹ ಸಂಯೋಜನೆಗಳನ್ನು ರಚಿಸಿ, ಧ್ವನಿಮುದ್ರಣಗಳ ದಾಖಲಿಸಿದ ಕಲಾವಿದರಾಗಿದ್ದಾರೆ. ನಂತರ 2005ರಲ್ಲಿ ಟೈಮ್‌ ಮ್ಯಾಗ್ಜಿನ್ ಪತ್ರಿಕೆಯು ರಹಮಾನ್‌ರನ್ನು ಭಾರತದ ಪ್ರಖ್ಯಾತ ಚಲನಚಿತ್ರ ಸಂಗೀತ ಸಂಯೋಜಕ ಎಂದು ವರ್ಣಿಸಿತು.[] ವಿದ್ಯುನ್ಮಾನ ವಿನ್ಯಾಸದ ಸಂಗೀತ ಧ್ವನಿ-ಸ್ವರಗಳೊಂದಿಗೆ ಪೌರಾತ್ಯ ಶಾಸ್ತ್ರೀಯ ಸಂಗೀತದ ಮಿಶ್ರಣ, ವಿಶ್ವದರ್ಜೆಯ ಸಂಗೀತ ಶೈಲಿಗಳು, ಹೊಸ ತಂತ್ರಜ್ಞಾನ ಹಾಗೂ ಸಾಂಪ್ರದಾಯಿಕ ವಾದ್ಯಮೇಳಗಳ ವಿನ್ಯಾಸ-ಸಮಾಗಮಗಳು ಇತ್ಯಾದಿ ಅವರ ಸಂಗೀತ ಶೈಲಿಯ ಪ್ರಮುಖ ಅಂಶಗಳಾಗಿವೆ. ಟೈಮ್‌ ಪತ್ರಿಕೆಯು ಅವರನ್ನು "ಮೊಝಾರ್ಟ್‌ ಆಫ್ ಮದ್ರಾಸ್‌"ಎಂದು ಬಣ್ಣಿಸಿದೆ. ಹಲವು ತಮಿಳು ವಿಮರ್ಶಕರು ಅವರನ್ನು Isai Puyal 'ಸಂಗೀತದ ಬಿರುಗಾಳಿ' ಎಂದು ಉಲ್ಲೇಖಿಸಿದ್ದಾರೆ. (ತಮಿಳು: இசைப் புயல்;ಆಂಗ್ಲ:Music Storm).[] ನಂತರ 2009ರಲ್ಲಿ ಟೈಮ್ ಮತ್ರಿಕೆಯು ತಾನು ಸಿದ್ದಪಡಿಸಿದ ವಿಶ್ವದ ಅತಿ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ರಹಮಾನ್‌ರನ್ನು ಸೇರಿಸಿತು.[]

ಆರಂಭಿಕ ಜೀವನ

[ಬದಲಾಯಿಸಿ]
ತಮ್ಮ ಬಾಲ್ಯದಲ್ಲಿ ಎ ಆರ್‌ ರಹಮಾನ್‌.

ಭಾರತ ದೇಶದ, ತಮಿಳುನಾಡು ರಾಜ್ಯದ ರಾಜಧಾನಿ ಚೆನ್ನೈಯಲ್ಲಿ, ಸಂಗೀತ ಪರಂಪರೆಯುಳ್ಳ, ಶ್ರೀಮಂತ ಮೊದಲಿಯಾರ್ ಕುಟುಂಬದಲ್ಲಿ ಎ. ಎಸ್‌‌. ದಿಲೀಪ್‌ ಕುಮಾರ್ ಆಗಿ ಜನಿಸಿದರು. ದಿಲೀಪ್‌‌ರ ತಂದೆ ಆರ್. ಕೆ. ಶೇಖರ್ ಚೆನ್ನೈಯಲ್ಲಿ ವಾಸವಾಗಿದ್ದರು,‌ ಮಲಯಾಳಂ ಚಲನಚಿತ್ರಗಳಿಗಾಗಿ ಸಂಗೀತ ಸಂಯೋಜಕ ಮತ್ತು ಸಂಗೀತ ನಿರ್ವಾಹಕರಾಗಿದ್ದರು. ದಿಲೀಪ್‌‌ ಒಂಬತ್ತನೆಯ ವಯಸ್ಸಿನವರಾಗಿದ್ದಾಗ ಅವರ ತಂದೆ ತೀರಿಕೊಂಡರು. ರಹಮಾನ್‌ರ ತಂದೆ ಬಳಸುತ್ತಿದ್ದ ಸಂಗೀತ ವಾದ್ಯಗಳನ್ನು ಬಾಡಿಗೆಗೆ ನೀಡುವುದರ ಮೂಲಕ ಅವರ ಕುಟುಂಬ ಆದಾಯ ಪಡೆಯುವಂತಾಯಿತು. ಮುಂಚೆ 'ಕಸ್ತೂರಿ' ಎಂಬ ಹೆಸರಿನ ಅವರ ತಾಯಿ ಕರೀಮಾ ದಿಲೀಪ್‌ನನ್ನು ಬೆಳೆಸಿದರು. ಈ ಸಾಮಾನ್ಯ,ಸ್ವಾಭಾವಿಕವಾದ ಬೆಳೆಯುವ ವರ್ಷಗಳಲ್ಲಿ ದಿಲೀಪ್‌ (ರಹಮಾನ್‌) ಒಬ್ಬ ಕೀಬೋರ್ಡ್‌ ವಾದಕರಾಗಿ ಸಕ್ರಿಯರಾದರು. ಅಲ್ಲದೆ, ತಮ್ಮ ಬಾಲ್ಯ ಸ್ನೇಹಿತ ಮತ್ತು ತಾಳವಾದ್ಯಕಾರ ಶಿವಮಣಿ, ಜಾನ್‌ ಆಂಟೊನಿ, ಸುರೇಶ್‌ ಪೀಟರ್ಸ್‌, ಜೊಜೊ ಮತ್ತು ರಾಜಾ ಇವರೊಂದಿಗೆ "ರೂಟ್ಸ್‌" ಎಂಬ ವಾದ್ಯತಂಡ, ಹಾಗೂ ಇತರೆ ವಾದ್ಯತಂಡಗಳಲ್ಲಿ ರಹಮಾನ್‌ ಸಂಗೀತ ವಿನ್ಯಾಸಗಾರರಾಗಿ ಕೆಲಸ ಮಾಡಿದರು.[೧೦] "ನೆಮೆಸಿಸ್‌ ಅವೆನ್ಯೂ" ಎಂಬ ಚೆನ್ನೈ ಮೂಲದ ರಾಕ್‌ ಶೈಲಿಯ ಸಂಗೀತವೃಂದಕ್ಕೆ ರಹಮಾನ್‌ ಸಂಸ್ಥಾಪರಾದರು.[೧೧] ಕೀಬೋರ್ಡ್‌ ಮತ್ತು ಪಿಯಾನೋ,ಸಂಗೀತ ಸಂಯೋಜಕ ಸಿಂಥಸೈಜರ್‌, ಹಾರ್ಮೋನಿಯಂ ಮತ್ತು ಗಿಟಾರ್‌ ಮೊದಲಾದ ವಾದ್ಯಗಳನ್ನು ಸ್ವತಃ ರಹಮಾನ್‌ ನುಡಿಸುತ್ತಿದ್ದರು. ನಿರ್ದಿಷ್ಟವಾಗಿ ಹೇಳಬೇಕೆಂದರೆ, ಅವರೇ ಹೇಳುವಂತೆ ಸಿಂಥಸೈಜರ್‌ ಸಂಯೋಜಕ ವಾದ್ಯವು “ಸಂಗೀತ ಮತ್ತು ತಂತ್ರಜ್ಞಾನದ ಒಂದು ವ್ಯವಸ್ಥಿತ ಮಾದರಿ ಸಂಯೋಜನೆ"ಯಾಗಿದ್ದರಿಂದ ಸಿಂಥಸೈಜರ್‌ನಲ್ಲಿ ಅವರಿಗೆ ಕುತೂಹಲ ಹೆಚ್ಚಿತು.[೧೨] ಮಾಸ್ಟರ್‌ ಧನರಾಜ್‌ ಎಂಬ ಗುರುಗಳ ಮಾರ್ಗದರ್ಶನದಲ್ಲಿ ರಹಮಾನ್‌ ತಮ್ಮ ಜೀವನದಲ್ಲಿ ಬಹಳಷ್ಟು ಮುಂಚಿತವಾಗಿಯೇ ಸಂಗೀತ ತರಬೇತಿ ಪಡೆದುಕೊಂಡರು. ರಹಮಾನ್‌ ತಮ್ಮ ಹನ್ನೊಂದನೆಯ ವಯಸ್ಸಿನಲ್ಲಿ, ತಮಿಳುನಾಡಿನ ಸಂಗೀತ ದಿಗ್ಗಜ ಇಳಯರಾಜಾ[೧೨] ಅವರ ವಾದ್ಯತಂಡದಲ್ಲಿ ಕೀಬೋರ್ಡ್‌ ವಾದಕರಾಗಿ ಸೇರಿ, ಹತ್ತು ವರ್ಷಗಳ ಕಾಲ ಅದರೊಂದಿಗಿದ್ದರು.[೧೩] ರಹಮಾನ್‌ ತಂದೆಯವರ ವಾದ್ಯಗಳನ್ನು ಇಳಯರಾಜಾ ಅವರಿಗೂ ಸಹ ಬಾಡಿಗೆ ನೀಡಲಾಗುತ್ತಿತ್ತು. ನಂತರದ ವರ್ಷಗಳಲ್ಲಿ, ಎಂ. ಎಸ್‌. ವಿಶ್ವನಾಥನ್,‌ ರಮೇಶ್‌ ನಾಯ್ಡು ಹಾಗೂ ರಾಜ್-ಕೋಟಿ ಮುಂತಾದವರ ವಾದ್ಯವೃಂದಗಳಲ್ಲಿ ರಹಮಾನ್‌ ಕೀಬೋರ್ಡ್‌ ನುಡಿಸಿದ್ದರು. ಅಲ್ಲದೇ, ಜಾಕಿರ್‌ ಹುಸೇನ್‌‌, ಕುನ್ನಕುಡಿ ವೈದ್ಯನಾಥನ್‌ ಮತ್ತು ಎಲ್‌. ಶಂಕರ್‌‌ರಂತಹ ಖ್ಯಾತನಾಮರ ವಾದ್ಯವೃಂದದಲ್ಲಿ ರಹಮಾನ್‌ ವಾದಕರಾಗಿದ್ದರು. ಇವರೊಂದಿಗೆ ವಿಶ್ವ ಪ್ರವಾಸ ಸಹ ಮಾಡಿದ್ದರು. ಟ್ರಿನಿಟಿ ಕಾಲೇಜ್‌ ಆಫ್‌ ಮ್ಯೂಸಿಕ್‌ ಸಂಸ್ಥೆಗೆ ಸೇರಿಕೊಳ್ಳಲು ವಿದ್ಯಾರ್ಥಿ ವೇತನವನ್ನೂ ಪಡೆದ ರಹಮಾನ್‌, ಅಲ್ಲಿ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದಲ್ಲಿ ಪದವಿ ಗಳಿಸಿದರು.[೧೪] ಅವರ ತಂದೆ ಮರಣಶಯ್ಯೆಯಲ್ಲಿದ್ದು, ತಂಗಿ ತೀವ್ರ ಅನಾರೋಗ್ಯ ಸ್ಥಿತಿ ತಲುಪಿದಾಗ, ದಿಲೀಪ್‌ರನ್ನು ಖಾದಿರಿ ಇಸ್ಲಾಮ್‌ ಧರ್ಮಕ್ಕೆ ಪರಿಚಯಿಸಲಾಯಿತು. ಈ ಪ್ರಕ್ರಿಯೆಯು ಐದು ವರ್ಷ ತೆಗೆದುಕೊಂಡಿತ್ತು ಎಂದರು, ತಮ್ಮ 23ನೆಯ ವಯಸ್ಸಿನಲ್ಲಿ, ಅಂದರೆ 1998ರಲ್ಲಿ, ಕುಟುಂಬದ ಇತರೆ ಸದಸ್ಯರೊಂದಿಗೆ ದಿಲೀಪ್‌ ಇಸ್ಲಾಮ್‌ ಧರ್ಮಕ್ಕೆ ಮತಾಂತರಗೊಂಡರು.[೧೦]

ವೃತ್ತಿಜೀವನ

[ಬದಲಾಯಿಸಿ]

ರಹಮಾನ್‌ರ ಚಲನಚಿತ್ರ ಸಂಗೀತ ಸಂಯೋಜನಾ ವೃತ್ತಿಯು 1992ರಲ್ಲಿ ಆರಂಭಗೊಂಡರೂ, 1975ಲ್ಲಿ ಚಲನಚಿತ್ರವೊಂದಕ್ಕಾಗಿ ತಮ್ಮ ತಂದೆ ಧ್ವನಿಮುದ್ರಣ ನಡೆಸುತ್ತಿದ್ದಾಗ, 9 ವರ್ಷದ ರಹಮಾನ್‌, ಆಕಸ್ಮಿಕವಾಗಿ ಪಿಯಾನೊ ನುಡಿಸಿದರು. ನಂತರ, ಈ ನಾದವನ್ನು ಆರ್‌ ಕೆ ಶೇಖರ್ ಮಲಯಾಳಂ ಚಲನಚಿತ್ರ 'ಪೆಣ್‌ಪಾಡಾ'ಗಾಗಿ ವೆಲ್ಲಿಥಿನ್ ಕಿಣ್ಣಮ್ ಪೊಲ್Vellithen Kinnam Pol' ಎಂಬ ಸಂಪೂರ್ಣ ಹಾಡನ್ನಾಗಿ ರಚಿಸಿದರು. ಆರ್ ಕೆ ಶೇಖರ್‌ ಸಂಯೋಜನೆ ಎಂದು ನಮೂದಿಸಲಾದ, ಭರಣಿಕ್ಕವು ಶಿವಕುಮಾರ್ ರಚಿಸಿದ ಈ ಹಾಡನ್ನು ಜಯಚಂದ್ರನ್‌ ಹಾಡಿದ್ದರು.[೧೫]

ಚಲನಚಿತ್ರದ ಸಂಗೀತ ಸಂಯೋಜನೆ ಹಾಗೂ ಧ್ವನಿಪಥಗಳು

[ಬದಲಾಯಿಸಿ]

ರಹಮಾನ್‌ರ ವೃತ್ತಿಯ ಗಮನಾರ್ಹ ಹಂತವು 1992ರಲ್ಲಿ ಆರಂಭವಾಯಿತು. ಅದೇ ವೇಳೆಗೆ ತಮ್ಮ ಮನೆಯ ಹಿತ್ತಲಿನಲ್ಲಿಯೇ, ಪಂಚತನ್‌ ರೆಕಾರ್ಡ್‌ ಇನ್‌ ಎಂಬ ಸಂಗೀತ ಧ್ವನಿಮುದ್ರಣ ಮತ್ತು ಮಿಶ್ರಣ ಮಾಡುವ ಸ್ಟುಡಿಯೊ ಸ್ಥಾಪಿಸಿದರು. ಕೆಲವು ವರ್ಷಗಳ ನಂತರ, ಇದು ಮುಂದೆ ಭಾರತದಲ್ಲೇ ಅತ್ಯಾಧುನಿಕ ಧ್ವನಿಮುದ್ರಣಾ ಸ್ಟುಡಿಯೊ ಆಯಿತು.[೧೬] ಮೊದಲಿಗೆ ಅವರು ಸಾಕ್ಷ್ಯಚಿತ್ರಗಳು, ಜಾಹೀರಾತುಗಳು, ಭಾರತೀಯ ದೂರದರ್ಶನ ಮತ್ತು ಇತರೆ ಕಾರ್ಯಕ್ರಮಗಳಿಗೆ ಚುಟುಕು ಸಂಗೀತ ಸಂಯೋಜಿಸಿದರು. 1992ರಲ್ಲಿ, ಚಲನಚಿತ್ರ ನಿರ್ದೇಶಕ ಮಣಿರತ್ನಂ ರಹಮಾನ್‌ರನ್ನು ಸಂಪರ್ಕಿಸಿ, ತಾವು ನಿರ್ದೇಶಿಸುತ್ತಿದ್ದ ತಮಿಳು ಚಲನಚಿತ್ರ ರೋಜಾ ಗಾಗಿ ಸಂಗೀತ ಹಾಗೂ ಧ್ವನಿಪಥ ಸಂಯೋಜಿಸಲು ಕೇಳಿಕೊಂಡರು.[೧೬] ತಮ್ಮ ಮೊದಲ ಚಿತ್ರದಲ್ಲಿಯೇ ಅತ್ಯುತ್ತಮ ಸಂಗೀತ ನೀಡಿದ್ದಕ್ಕಾಗಿ ರಹಮಾನ್‌ರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಸಂಗೀತ ನಿರ್ದೇಶಕರ ರಜತಕಮಲ ಪ್ರಶಸ್ತಿ ದೊರೆಯಿತು. ಮೊದಲ ಚಲನಚಿತ್ರಕ್ಕೇ ಈ ತರಹದ ಅಪಾರ ಯಶಸ್ಸು, ರಹಮಾನ್‌ ಪಾಲಿಗೆ ಮಹತ್ವದ ತಿರುವಾಯಿತು. ಇನ್ನೂ ಮೂರು ಸಲ, ರಹಮಾನ್‌ರಿಗೆ ರಜತಕಮಲ ಲಭಿಸಿದೆ. 1997ರಲ್ಲಿ ಮಿನ್ಸಾರ ಕಣವು (Electric Dreams , ತಮಿಳು), 2002ರಲ್ಲಿ ಲಗಾನ್‌ (Tax , ಹಿಂದಿ), ಕಣ್ಣತಿಲ್‌ ಮುತ್ತಮ್‌ಇಟ್ಟಾಳ್‌‌‌‌ (A Peck on the Cheek , ತಮಿಳು) 2003ರಲ್ಲಿನ ಈ ಚಲನಚಿತ್ರಗಳಿಗಾಗಿ ಮಧುರ ಸಂಗೀತ ನೀಡಿದ ರಹಮಾನ್‌ರಿಗೆ ರಜತಕಮಲ ದೊರಕಿತು. ಹೀಗೆ ರಹಮಾನ್‌ ಸಂಗೀತ ಸಂಯೋಜಕರಾಗಿ ಹೆಚ್ಚು ಬಾರಿ ರಜತಕಮಲ ಗಳಿಸಿದವರಾದರು.[೧೭] ಆ ಕಾಲದಲ್ಲಿ, ರೋಜಾ ಚಲನಚಿತ್ರದ ಸಂಗೀತವು ಅತಿಹೆಚ್ಚು ಮಾರಾಟವಾಗಿ, ಮೂಲ ಹಾಗೂ ಡಬ್ಬಿಂಗ್‌ ಆವೃತ್ತಿಯಲ್ಲಿ ಬಹಳಷ್ಟು ಪ್ರಶಂಸೆಗಳಿಸಿತು. ಚಲನಚಿತ್ರ ಸಂಗೀತ ಕ್ಷೇತ್ರದಲ್ಲಿ ಬಹಳಷ್ಟು ಪರಿವರ್ತನೆಯ ಅಲೆಯಬ್ಬಿಸಿತು. ನಂತರ, ಚೆನ್ನೈ ಚಲನಚಿತ್ರೋದ್ಯಮದ ಹಲವು ತಮಿಳು ಭಾಷಾ ಚಲನಚಿತ್ರಗಳಿಗೆ ಹಲವು ಯಶಸ್ವೀ ಸಂಗೀತ ಸಂಯೋಜನೆ ಮಾಡಿದರು. ಇವುಗಳಲ್ಲಿ, ಮಣಿರತ್ನಂ ನಿರ್ದೇಶನದ, ರಾಜಕೀಯ ಕಥಾಹಂದರವುಳ್ಳ ಬಾಂಬೆ, ನಗರವಲಯಗಳಲ್ಲಿ ಜನಪ್ರಿಯವಾದ ಕಾದಲನ್‌, ಭಾರತಿರಾಜ ನಿರ್ದೇಶಿಸಿದ ಕಾರುತ್ತಮ, ಸ್ಯಾಕ್ಸೊಫೊನ್‌ ಪ್ರಧಾನ ಸಂಗೀತಮಯ ಡ್ಯುಯೆಟ್‌, ಇಂದಿರಾ, ಹಾಗೂ ಪ್ರೇಮ-ಹಾಸ್ಯ ಮಿಶ್ರಣದ ಮಿ. ರೋಮಿಯೊ ಹಾಗೂ ಲವ್‌ ಬರ್ಡ್ಸ್‌ ಇವುಗಳ ಮೂಲಕ ರಹಮಾನ್ ಬಹಳಷ್ಟು ಗಮನ ಸೆಳೆದರು.[೧೮][೧೯] ಅಲ್ಲಿ ಕಂಡುಬಂದ ಮುತ್ತು ಚಿತ್ರದ ಯಶಸ್ಸಿನಿಂದಾಗಿ ಜಪಾನ್‌ನಲ್ಲಿನ ಅವರ ಅಭಿಮಾನಿ ಬಳಗ ಮತ್ತಷ್ಟು ಹೆಚ್ಚಾಯಿತು .[೨೦] ಅವರ ಧ್ವನಿಪಥಗಳು ವೈವಿಧ್ಯಮಯ ಪಾಶ್ಚಾತ್ಯ ಶಾಸ್ತ್ರೀಯ, ಕರ್ನಾಟಕ ಮತ್ತು ತಮಿಳು ಸಾಂಪ್ರದಾಯಿಕ/ಲೋಕ ಸಂಗೀತ ಪರಂಪರೆಗಳು, ಜಾಝ್ ಸಂಗೀತ‌, ರೆಗ್ಗೆ ಮತ್ತು ರಾಕ್‌ ಶೈಲಿಯ ಸಂಗೀತಗಳನ್ನು ಒಳಗೊಂಡ ಅವರ ವೈವಿಧ್ಯಮಯ ಧ್ವನಿಪಥಗಳಿಂದಾಗಿ, ತಮಿಳುನಾಡು ಚಲನಚಿತ್ರೋದ್ಯಮವಷ್ಟೇ ಅಲ್ಲ, ಇಡೀ ವಿಶ್ವದಲ್ಲೇ ಜನಪ್ರಿಯತೆ ಗಳಿಸಿದವು.[೨೧][೨೨][೨೩] ಮಣಿರತ್ನಂ ನಿರ್ದೇಶನದ ಬಾಂಬೆ ಚಿತ್ರದಲ್ಲಿನ ಬಾಂಬೆ ಹಾಡುಗಳಲ್ಲಿನ ರಾಗ ವು ಕಾಲಾನಂತರದಲ್ಲಿ ದೀಪಾ ಮೆಹ್ತಾರ ಫೈರ್‌ ಚಲನಚಿತ್ರದಲ್ಲಷ್ಟೇ ಅಲ್ಲದೇ , ಹಲವಾರು ಸಂಕಲನಗಳು ಹಾಗೂ ಮಾಧ್ಯಮದಲ್ಲಿ ಮತ್ತೆ ಕಾಣಿಸಿಕೊಂಡವು. ರಾಮ್‌ ಗೋಪಾಲ್‌ ವರ್ಮಾ ನಿರ್ದೇಶಿಸಿದ ರಂಗೀಲಾ ಚಿತ್ರಕ್ಕೆ ಸಂಗೀತ ನೀಡುವ ಮೂಲಕ, ರಹಮಾನ್‌ [[ಬಾಲಿವುಡ್|ಮುಂಬಯಿ ಹಿಂದಿ ಚಲನಚಿತ್ರೋದ್ಯಮ]] ಪ್ರವೇಶಿಸಿದರು. ನಂತರ , ಶಾರುಕ್‌ಖಾನ್‌ ಖಾನ್‌ ಅಭಿನಯದ, ಮಣಿರತ್ನಂ ನಿರ್ದೇಶಿಸಿದ ದಿಲ್‌ ಸೆ, ಹಾಗೂ ಸುಭಾಷ್‌ ಘೈ ನಿರ್ದೇಶಿಸಿದ, ತಾಳ-ಪ್ರಧಾನ ತಾಲ್‌ ಸೇರಿದಂತೆ, ಹಲವು ಯಶಸ್ವೀ ಚಲನಚಿತ್ರಗಳಿಗೆ ರಹಮಾನ್‌ ಸಂಗೀತ ನಿರ್ದೇಶಿಸಿದರು .[೨೪][೨೫] ಸೂಫಿ ಅನುಭಾವವು ದಿಲ್‌ ಸೆ ಚಲನಚಿತ್ರದ ಛಯ್ಯಾ ಛಯ್ಯಾ ಹಾಡಿಗೆ ಹಾಗೂ ಅವರ ಚಲನಚಿತ್ರ Netaji Subhas Chandra Bose: The Forgotten Heroಝಿಕ್ರ್‌ ಹಾಡಿಗೆ ಸ್ಫೂರ್ತಿಮೂಲವಾಗಿತ್ತು. ಇದಕ್ಕಾಗಿ ಅವರು ವಿಶಾಲ ಮೇಳವೃಂದ ಮತ್ತು ಸಂಗಡಿಗ ಗಾಯಕರ ವಿನ್ಯಾಸ ಮಾಡಿದರು .[೧೦] ಸಂಗಮಂ ಮತ್ತು ಇರುವರ್‌ ಚಿತ್ರಗಳ ಸಂಗೀತ ಸಂಯೋಜನೆಗಳಲ್ಲಿ, ರಹಮಾನ್ಕರ್ನಾಟಕ ಶೈಲಿಯ ಗಾಯನ ಮತ್ತು ವೀಣೆಯಂತಹ ವಾದ್ಯಗಳು, ಹಾಗೂ, ರಾಕ್‌ ಗಿಟಾರ್‌ ಮತ್ತು ಜಾಝ್‌ ಶೈಲಿಗಳನ್ನು ಮೇಲ್ಪಂಕ್ತಿ ಹಾಗೂ ಪ್ರಮುಖ ವಾದ್ಯಗಳನ್ನಾಗಿ ಬಳಸಿದರು .[೨೬] ನಂತರ 2000ರ ಸಮಯದಲ್ಲಿ, ರಾಜೀವ್ ಮೆನನ್‌ರ ಕಂಡುಕೊಂಡೈನ್ ಕಂಡುಕೊಂಡೈನ್, ಮಣಿರತ್ನಮ್‌ರ ಅಲೈಪಯುತೆಯ್, ಆಶುತೋಷ್‌ ಗೋವಾರೀಕರ್‌ ನಿರ್ದೇಶಿಸಿದ ಸ್ವದೇಶ್‌ ಹಾಗೂ ರಾಕೇಶ್‌ ಓಂಪ್ರಕಾಶ್‌ ಮೆಹ್ರಾ ನಿರ್ದೇಶಿಸಿದ ರಂಗ್‌ ದೇ ಬಸಂತಿ ಚಲನಚಿತ್ರಗಳಿಗಾಗಿ ರಹಮಾನ್ ಸಂಯೋಜಿಸಿದ ಹಾಡುಗಳು ಅಪಾರ ಜನಪ್ರಿಯತೆ ಗಳಿಸಿದವು. [೨೭] ವಾಟರ್‌ (2005) ಚಲನಚಿತ್ರಕ್ಕಾಗಿ ಅವರು ಹಿಂದೂಸ್ಥಾನಿ ಸ್ವರಶ್ರೇಣಿಗಳೊಂದಿಗಿನ ಹಾಡುಗಳನ್ನು ಸಂಯೋಜಿಸಿದರು . ಜಾವೇದ್‌ ಅಕ್ತರ್‌‌, ಗುಲ್ಜಾರ್‌, ವೈರಮುತ್ತು ಹಾಗೂ ವಾಲಿಯಂತಹ ಭಾರತೀಯ ಕವಿಗಳು ಮತ್ತು ಗೀತೆ ರಚನಾಕಾರರ ಹಾಡುಗಳಿಗೆ ಅವರು ಸಂಗೀತ ಸಂಯೋಜಿಸಿದ್ದಾರೆ. ವಿಶಿಷ್ಠ ಚಲನಚಿತ್ರ ನಿರ್ದೇಶಕರೊಂದಿಗೆ ಸಹಯೋಗದಲ್ಲಿದ್ದಾಗ ಅವರು ನಿರಂತರ ಜನಪ್ರಿಯತೆ ಗಳಿಸಿದ ಸಂಗೀತ ಸಂಯೋಜಿಸಿದ್ದರು. ಉದಾಹರಣೆಗೆ, ತಾವು ಸಂಗೀತ ಸಂಯೋಜಿಸಿದ ಮೊಟ್ಟಮೊದಲ ಚಲನಚಿತ್ರ ರೋಜಾ ದಿಂದ ಆರಂಭಿಸಿ, ನಿರ್ದೇಶಕ ಮಣಿರತ್ನಂ ನಿರ್ದೇಶಿಸಿದ ಎಲ್ಲಾ ಚಿತ್ರಗಳಿಗೂ ರಹಮಾನ್ ಸಂಗೀತ ನಿರ್ದೇಶಿಸಿ, ಜನಪ್ರಿಯತೆ ಗಳಿಸುವ ಹಾಡುಗಳನ್ನು ಸಂಯೋಜಿಸಿದರು. ಅಲ್ಲದೆ, ಎಸ್‌. ಶಂಕರ್‌ ನಿರ್ದೇಶಿಸಿದ ಜೆಂಟ್ಲ್‌ಮನ್‌ , ಕಾದಲನ್‌ , ಇಂಡಿಯನ್‌ , ಜೀನ್ಸ್‌ , ಮುಧಲ್ವನ್‌ , ನಾಯಕ್‌ , ಬಾಯ್ಸ್‌ , ಶಿವಾಜಿ ದಿ ಬಾಸ್‌ ಹಾಗೂ ಏಂಥಿರನ್‌ ಚಲನಚಿತ್ರಗಳಿಗಾಗಿ ರಹಮಾನ್‌ ನೀಡಿದ ಸಂಗೀತ ಬಹಳ ಜನಪ್ರಿಯತೆ ಗಳಿಸಿತು.[೨೮] ನಂತರ 2005ರಲ್ಲಿ, ಚೆನ್ನೈನ ಕೊಡಂಬಾಕಂ ಪ್ರದೇಶದಲ್ಲಿ ಎಎಂ ಸ್ಟೂಡಿಯೊಸ್‌ ಸ್ಥಾಪಿಸುವುದರ ಮೂಲಕ ರಹಮಾನ್‌ ತಮ್ಮ ಪಂಚತನ್‌ ರೆಕಾರ್ಡ್‌ ಇನ್‌ ಸ್ಟೂಡಿಯೊವನ್ನು ವಿಸ್ತರಿಸಿದರು. ಇದು ಏಷ್ಯಾದಲ್ಲೇ ಅತ್ಯಾಧುನಿಕ ಧ್ವನಿಮುದ್ರಣಗಳ ದಾಖಲಿಸುವ ಸ್ಟೂಡಿಯೊ ಎಂದಾಯಿತು.[೨೯][೩೦] ಹೀಗೆ 2006ರಲ್ಲಿ, ರಹಮಾನ್‌ ತಮ್ಮದೇ ಆದ ಕೆಎಂ ಮ್ಯೂಸಿಕ್‌ ಎಂಬ ಧ್ವನಿಮುದ್ರಣಾ ಬ್ರ್ಯಾಂಡ್ ನ ಹೆಸರಾಂತ ಉದ್ದಿಮೆ ಸ್ಥಾಪಿಸಿದರು.[೩೧] ಅವರು ಸಂಗೀತ ಸಂಯೋಜಿಸಿದ ಚಲನಚಿತ್ರ ಸಿಲ್ಲುನು ಒರು ಕಾದಲ್‌‌ ಕೆಎಂ ಮ್ಯೂಸಿಕ್‌ ಉದ್ದಿಮೆಯ ಮೊದಲ ಬಿಡುಗಡೆಯಾಗಿತ್ತು.[೩೨] ಚೀನಿ ಮತ್ತು ಜಪಾನಿ ಶಾಸ್ತ್ರೀಯ ಸಂಗೀತದಲ್ಲಿ ಸಂಶೋಧನೆ ನಡೆಸಿ, ತಮ್ಮ ಸಂಯೋಜನೆಗಳಲ್ಲಿ ಬಳಸಿಕೊಂಡು, 2003ರಲ್ಲಿ ಮ್ಯಾಂಡರಿನ್‌ ಭಾಷೆಯ ವಾರಿಯರ್ಸ್‌ ಆಫ್ ಹೆವನ್‌ ಅಂಡ್‌ ಅರ್ಥ್ ‌ ಎಂಬ ಚಲನಚಿತ್ರಕ್ಕೆ ರಹಮಾನ್‌ ಸಂಗೀತ ನಿರ್ದೇಶಿಸಿದರು. ಅಲ್ಲದೇ 2007ರಲ್ಲಿ ಶೇಖರ್‌ ಕಪೂರ್‌ ನಿರ್ದೇಶನದ Elizabeth: The Golden Age ಚಿತ್ರಕ್ಕೆ ಸಂಗೀತದ ಸಹ-ಸಂಯೋಜಕರಾಗಿ ಕಾರ್ಯನಿರ್ವಹಿಸಿದರು. ಭಾರತದಲ್ಲೇ ಸಿದ್ದಪಡಿಸಿದ ಇತರೆ ಸಂಗೀತಗಳಲ್ಲಿ ಇವರ ಸಂಯೋಜನೆಗಳ ಕೆಲವು ಅಂಶಗಳನ್ನು ಸೇರಿಸಿಕೊಳ್ಳಲಾಗಿದೆ.[೩೩] ಇವು ಇನ್ಸೈಡ್‌ ಮ್ಯಾನ್‌ , ಲಾರ್ಡ್‌ ಆಫ್‌ ವಾರ್‌ , ಡಿವೈನ್‌ ಇಂಟರ್ವೆಂಷನ್‌ ಹಾಗೂ ದಿ ಆಕ್ಸಿಡೆಂಟಲ್‌ ಹಸ್ಬಂಡ್‌ ಚಲನಚಿತ್ರಗಳಲ್ಲಿ ಇಂತಹ ಧ್ವನಿಪಥಗಳು ಕೇಳಿಬಂದಿವೆ. ಹಾಗೆಯೇ 2008ರಲ್ಲಿ, ರಹಮಾನ್‌ ತಮ್ಮ ಮೊಟ್ಟಮೊದಲ ಹಾಲಿವುಡ್‌ ಚಲನಚಿತ್ರ 'ಕಪಲ್ಸ್‌ ರಿಟ್ರೀಟ್ ‌'ಗಾಗಿ ಹಿನ್ನೆಲೆ ಸಂಗೀತ ಸಂಯೋಜಿಸಿದರು. ಈ ಹಾಸ್ಯ ಚಲನಚಿತ್ರವು ಮರು ವರ್ಷ ಬಿಡುಗಡೆಯಾಯಿತು. 2008ರಲ್ಲಿ ಬಿಡುಗಡೆಯಾದ ಸ್ಲಮ್‌ಡಾಗ್‌ ಮಿಲಿಯನೇರ್ ‌ ಚಲನಚಿತ್ರಕ್ಕಾಗಿ ರಹಮಾನ್‌ ಸಂಗೀತ ನೀಡಿದ್ದರು. ಅವರ ಈ ರಚನೆಗಾಗಿ ಗೋಲ್ಡನ್‌ ಗ್ಲೋಬ್‌ ಹಾಗೂ ಎರಡು ಅಕಾಡೆಮಿ ಪ್ರಶಸ್ತಿ ಲಭಿಸಿದವು. ಇಂಥ ಅದ್ದೂರಿ,ವೈಭಪೂರ್ಣ ಪ್ರಶಸ್ತಿಗಳಿಸಿದ ಅವರು, ಮೊದಲ ಭಾರತೀಯರಾದರು. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ, ಈ ಧ್ವನಿಪಥವು ನೃತ್ಯ‌/ಇಲೆಕ್ಟ್ರಾನಿಕ್‌ ಗೀತೆಗಳ ಅಲ್ಬಮ್‌ ಪಟ್ಟಿಯಲ್ಲಿ [೩೪] ಅಗ್ರಸ್ಥಾನ ಹಾಗೂ ಬಿಲ್‌ಬೋರ್ಡ್‌ 200 ಪಟ್ಟಿಯಲ್ಲಿ ನಾಲ್ಕನೆಯ ಸ್ಥಾನ ಗಳಿಸಿತು.[೩೫] 'ಜೈ ಹೋ' ಹಾಡು ಯುರೋಚಾರ್ಟ್‌ ಹಾಟ್‌ 100 ಸಿಂಗಲ್ಸ್‌ ಪಟ್ಟಿಯಲ್ಲಿ [೩೬] ಎರಡನೆಯ ಸ್ಥಾನ ಹಾಗೂ ಬಿಲ್ಬೋರ್ಡ್‌ ಹಾಟ್‌ 100 ಪಟ್ಟಿಯಲ್ಲಿ 15ನೆಯ ಸ್ಥಾನ ಗಳಿಸಿತು.[೩೭]

ಇತರ ಸಂಗೀತ ಕೃತಿಗಳು

[ಬದಲಾಯಿಸಿ]

ಚಲನಚಿತ್ರಗಳಿಗೆ ಸಂಗೀತ ಸಂಯೋಜನೆಯಲ್ಲದೆ, ಇತರೆ ಕಾರ್ಯಕ್ರಮಗಳಿಗಾಗಿಯೂ ಸಹ ರಹಮಾನ್‌ ಸಂಗೀತ ನಿರ್ದೇಶನದಲ್ಲಿ ತೊಡಗಿಕೊಂಡಿದ್ದಾರೆ. 1997ರಲ್ಲಿ ಭಾರತ ಸ್ವಾತಂತ್ರ್ಯದ ಸ್ವರ್ಣ ಮಹೋತ್ಸವದ ಅಂಗವಾಗಿ ರಹಮಾನ್‌ ಸಂಗೀತ ನಿರ್ದೇಶನದ ವಂದೇ ಮಾತರಮ್ ‌ ಎಂಬ ಅಲ್ಬಮ್‌ ಬಹಳಷ್ಟು ವಾಣಿಜ್ಯಿಕ ದೃಷ್ಟಿಕೋನದಲ್ಲಿ ಯಶಸ್ವಿಯಾಯಿತು.[೩೮][೩೯] ಇದಾದ ನಂತರ, ಭಾರತೀಯ ಶಾಸ್ತ್ರೀಯ ಸಂಗೀತದ ಹಲವು ಪ್ರಮುಖ ಕಲಾವಿದರನ್ನು ಒಳಗೊಂಡು, ಭಾರತ್‌ ಬಾಲಾ ನಿರ್ದೇಶಿಸಿದ ಜನ ಗಣ ಮನ ಎಂಬ ವೀಡಿಯೊ ಸಂಕಲನಕ್ಕಾಗಿ ರಹಮಾನ್‌ ಅಲ್ಬಮ್‌ ರಚಿಸಿ ಹೊರತಂದರು. ಅಲ್ಲದೆ, ಜಾಹೀರಾತುಗಳಿಗೆ ಚುಟುಕು ಸಂಗೀತ ಸಂಯೋಜಿಸಿದರು. ಅಲ್ಲದೆ, ಅಥ್ಲೆಟಿಕ್ಸ್‌ ಕ್ರೀಡಾಕೂಟಗಳು, ದೂರದರ್ಶನ ಮತ್ತು ಅಂತರಜಾಲ ಮಾಧ್ಯಮ ಪ್ರಕಾಶನಗಳು, ಸಾಕ್ಷ್ಯಚಿತ್ರಗಳು ಮತ್ತು ಕಿರುಚಿತ್ರಗಳಿಗಾಗಿ ಹಿನ್ನೆಲೆ ವಾದ್ಯಗೋಷ್ಟಿಯ ಮೇಳವೃಂದಗಳನ್ನು ಸಂಯೋಜಿಸಿದರು.

ನೊಬೆಲ್‌ ಶಾಂತಿ ಪುರಸ್ಕಾರ ಸಮಾರಂಭದ 2010ರ ವಾದ್ಯಗೋಷ್ಠಿಯಲ್ಲಿ ಪ್ರದರ್ಶನ ನೀಡುತ್ತಿರುವ ರಹಮಾನ್‌.

1999ರಲ್ಲಿ ರಹಮಾನ್‌ ನೃತ್ಯನಿರ್ದೇಶಕರಾದ ಶೋಭನಾ ಮತ್ತು ಪ್ರಭುದೇವ ಸುಂದರಂ ಹಾಗೂ ತಮಿಳು ಚಲನಚಿತ್ರರಂಗದ ನೃತ್ಯಸಮೂಹದ ಸಹಯೋಗದೊಂದಿಗೆ ಜತೆಗೂಡಿ, ಜರ್ಮನಿಯ ಮ್ಯೂನಿಕ್‌ ನಗರದಲ್ಲಿ ಮೈಕಲ್‌ ಜ್ಯಾಕ್ಸನ್‌ರೊಂದಿಗೆ ಪ್ರದರ್ಶನ ನೀಡಿದರು. ಈ ಪ್ರದರ್ಶನ ಕಾರ್ಯಕ್ರಮಕ್ಕೆ ಮೈಕಲ್‌ ಜ್ಯಾಕ್ಸನ್‌ ಅಂಡ್‌ ಫ್ರೆಂಡ್ಸ್‌ ಎನ್ನಲಾಗಿತ್ತು. 2002ರಲ್ಲಿ, ರಹಮಾನ್‌ ಮೊದಲ ಬಾರಿಗೆ ನಾಟಕವೊಂದಕ್ಕೆ ಸಂಗೀತ ಸಂಯೋಜಿಸಿದರು. ಸಂಗೀತಪ್ರಧಾನ ರಂಗಮಂದಿರದ ಸಂಗೀತ ಸಂಯೋಜಕ ಆಂಡ್ರ್ಯೂ ಲಾಯ್ಡ್‌ ವೆಬ್ಬರ್ ಆಯೋಜಿಸಿದ ಬಾಂಬೆ ಡ್ರೀಮ್ಸ್ ‌ ರಹಮಾನ್‌ರ ಮೊದಲ ರಂಗಮಂದಿರ ಸಂಗೀತ ಸಂಯೋಜನೆಯಾಗಿತ್ತು. ಫಿನ್ಲೆಂಡ್‌ ಮೂಲದ ಜಾನಪದ ಸಂಗೀತ ತಂಡ ವಾರ್ಟಿನಾ 'ದಿ ಲಾರ್ಡ್‌ ಆಫ್‌ ದಿ ರಿಂಗ್ಸ್ ‌' ಎಂಬ ತನ್ನ ನಾಟಕಕ್ಕಾಗಿ ಸಂಗೀತ ಸಂಯೋಜಿಸಲು ರಹಮಾನ್‌ರೊಂದಿಗೆ ಸಹಯೋಗ ನಡೆಸಿತು. 2004ರಲ್ಲಿ, ವ್ಯಾನೆಸಾ-ಮೇ ಅಲ್ಬಮ್‌ ಕೊರಿಯೊಗ್ರಾಫಿ ಗಾಗಿ ರಾಗಾಸ್‌ ಡ್ಯಾನ್ಸ್‌ ಎಂಬ ಗೀತೆಗೆ ಸಂಗೀತ ಸಂಯೋಜನೆ ಮಾಡಿದರು.[೧೭] 2004ರಿಂದಲೂ, ಸಿಂಗಪುರ, ಆಸ್ಟ್ರೇಲಿಯಾ, ಮಲೇಷ್ಯಾ, ದುಬೈ, ಯುನೈಟೆಡ್‌ ಕಿಂಗ್ಡಮ್‌, ಕೆನಡಾ, ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಭಾರತ ದೇಶಗಳಲ್ಲಿನ ವೀಕ್ಷಕರಿಗಾಗಿ ರಹಮಾನ್‌ ಮೂರು ಯಶಸ್ವೀ ವಿಶ್ವ ಪ್ರವಾಸಗಳಲ್ಲಿ ತಮ್ಮ ಸಂಗೀತ ಕಲೆಯನ್ನು ಪ್ರದರ್ಶಿಸಿದರು.[೧೭][೪೦] ಕರೇನ್‌ ಡೇವಿಡ್‌ ಸದ್ಯದಲ್ಲಿಯೇ ಹೊರತರಲಿರುವ ತಮ್ಮ ಸ್ಟೂಡಿಯೊ ಅಲ್ಬಮ್ ಸಂಪುಟಕ್ಕಾಗಿ ರಹಮಾನ್‌ ತಮ್ಮ ಸಹಯೋಗ ನೀಡುತ್ತಿದ್ದಾರೆ. 2006ರ ಮೇ ತಿಂಗಳಲ್ಲಿ, ಇಂಟ್ರೊಡ್ಯೂಸಿಂಗ್‌ ಎ. ಆರ್‌. ರಹಮಾನ್‌ ಎಂಬ ಎರಡು ಸಿಡಿಗಳ ಸಂಪುಟ ಬಿಡುಗಡೆಯಾಯಿತು. ಇದು, ತಮಿಳು ಚಲನಚಿತ್ರಗಳಿಗಾಗಿ ರಹಮಾನ್‌ ಸಂಯೋಜಿಸಿದ ಹಾಡುಗಳಲ್ಲಿ 25 ಹಾಡುಗಳ ಸಂಕಲನವಾಗಿತ್ತು. ಕನೆಕ್ಷನ್ಸ್ ‌ ಎಂಬ ಅವರ ಫಿಲ್ಮೇತರ ಅಲ್ಬಮ್‌ 2008ರ ಡಿಸೆಂಬರ್‌ 12ರಂದು ಬಿಡುಗಡೆಯಾಯಿತು. 2009ರ ನವೆಂಬರ್‌ 24ರಂದು ಭಾರತದ ಪ್ರಧಾನಿ ಮನ್ಮೋಹನ್‌ ಸಿಂಗ್‌ ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ಅಧಿಕೃತ ಭೇಟಿ ನೀಡಿದಾಗ, ಅಲ್ಲಿನ ರಾಷ್ಟ್ರಾಧ್ಯಕ್ಷ ಬರಾಕ್‌ ಒಬಾಮಾ ಆತಿಥ್ಯದಲ್ಲಿ, ಶ್ವೇತಭವನದಲ್ಲಿ ನಡೆಸಲಾದ ಔಪಚಾರಿಕ ಭೋಜನದ ಸಂದರ್ಭದಲ್ಲಿ ರಹಮಾನ್‌ ಸಂಗೀತ ಕಾರ್ಯಕ್ರಮ ನೀಡಿದರು.[೪೧][೪೨] 2010ರಲ್ಲಿ ಸಂಭವಿಸಿದ ಹೈಟಿ ಭೂಕಂಪ ಪೀಡಿತರಿಗಾಗಿ ತುರ್ತು ಸಹಾಯ ನಿಧಿಗಾಗಿ ಧನ ಸಂಗ್ರಹಿಸಲು 'We Are the World: 25 for Haiti' ಎಂಬ ಒಂದು ಸಹಾಯಾರ್ಥ ಏಕಗೀತೆಯಲ್ಲಿ ವಾದ್ಯಗೋಷ್ಠಿ ನೀಡಿದ ಸಂಗೀತ ಕಲಾವಿದರ ಪೈಕಿ ರಹಮಾನ್‌ ಸಹ ಒಬ್ಬರು. 2010ರಲ್ಲಿ, ಗುಜರಾತ್‌ ರಾಜ್ಯದ ಸ್ವರ್ಣಮಹೋತ್ಸವದ ಅಂಗವಾಗಿ, 'ಜಯ್‌ ಜಯ್‌ ಗರ್ವೀ ಗುಜರಾತ್‌' [೪೩], ಆ ವರ್ಷದಲ್ಲೇ ನಡೆದ ವಿಶ್ವ ಶಾಸ್ತ್ರೀಯ ತಮಿಳ್‌ ಸಮ್ಮೇಳನಕ್ಕಾಗಿ 'ಸೆಮ್ಮೊಝಿಯಾನ ತಮಿಳ್‌ ಮೊಝಿಯಾಮ್‌', ಹಾಗೂ, 2010 ಕಾಮನ್ವೆಲ್ತ್‌ ಕ್ರೀಡಾಕೂಟಕ್ಕಾಗಿ ಲಾಂಛನಗೀತೆ ಜಿಯೊ ಉಠೊ ಬಢೋ ಜೀತೋ ಹಾಡುಗಳಿಗಾಗಿ ರಹಮಾನ್‌ ಸಂಗೀತ ಸಂಯೋಜಿಸಿದರು. 2010ರಲ್ಲಿ ರಹಮಾನ್‌ A. R. Rahman Jai Ho Concert: The Journey Home World Tour ಎಂಬ ತಮ್ಮದೇ ಮೊದಲ ವಿಶ್ವ ಪ್ರವಾಸ ನಡೆಸಿದರು. 2010ರ ಜೂನ್‌ 11ರಂದು ನ್ಯೂಯಾರ್ಕ್‌ನ ನಾಸ್ಸಾವ್‌ ಕೊಲಿಸಿಯಮ್‌ನಲ್ಲಿ ಪ್ರವಾಸದ ಮೊದಲ ಗೋಷ್ಠಿ ನಡೆಯಿತು. ನಂತರ ವಿಶ್ವಾದ್ಯಂತ 16 ಪ್ರಮುಖ ನಗರಗಳಲ್ಲಿ ಸಂಗೀತ ಗೋಷ್ಠಿಗಳು ನಡೆದವು.[೪೪] ರಹಮಾನ್‌ ಏರ್ಟೆಲ್‌ ಸಂಚಾರಿ ದೂರವಾಣಿ ಸೇವಾ ಸಂಸ್ಥೆಗಾಗಿ ಸಂಯೋಜಿಸಿದ ಅತಿ-ಜನಪ್ರಿಯ ಸಂಗೀತದ ಹೊಸ ಆವೃತ್ತಿಯನ್ನು 2010ರ ನವೆಂಬರ್‌ 18ರಂದು ಬಿಡುಗಡೆಗೊಳಿಸಿದರು.[೪೫][೪೬] ಎರಡು ದಿನಗಳ ನಂತರ, ಅವರು ರೇಡಿಯೊ ದೇಸಿ ಬೀಟ್ಸ್‌ಗಾಗಿ ಶೀರ್ಷಿಕೆ ಗೀತೆಯನ್ನು ಬಿಡುಗಡೆಗೊಳಿಸಿದರು. ರಹಮಾನ್‌ ಈ ರೇಡಿಯೊ ವಾಹಿನಿಯ ಪ್ರಧಾನ ರೂಪದರ್ಶಿಯಾಗಿದ್ದಾರೆ.[೪೭] 2010ರಲ್ಲಿ, ಟೊಯೊಟಾದವರು ಭಾರತೀಯ ರಸ್ತೆಗಳಿಗಾಗಿ ಹೇಳಿ ಮಾಡಿಸಿದ ಇಟಿಯೊಸ್‌ ಕಾರ್‌ ಮಾರಾಟದ ಉತ್ತೇಜನಕ್ಕೆ ಜಾಹೀರಾತಿಗಾಗಿ ರಹಮಾನ್ ಚುರುಕು-ಚುಟುಕು ಸಂಗೀತ ನೀಡಿದ್ದಾರೆ.[೪೮][೪೯] ಅವರು ಈ ಜಾಹೀರಾತಿಗೆ ಸಂಗೀತ ನೀಡಿದರಲ್ಲದೆ, ಇದರಲ್ಲಿ ಅವರು ಕಾಣಿಸಿಕೊಂಡರು. ಅದಕ್ಕಾಗಿ ರಹಮಾನ್‌ 'ಪಹಲೀ ಬಾರ್'‌ ಎಂಬ ಹಾಡನ್ನು ರಚಿಸಿದರು. ಇದರಲ್ಲಿ ಚಿನ್ಮಯಿ, ಜಾವೇದ್ ಅಲಿ ಮತ್ತು ಮಧುಶ್ರೀ ಹಾಡಿದ್ದಾರೆ.[೫೦]

ಸಂಗೀತದ ಶೈಲಿ ಮತ್ತು ಪ್ರಭಾವ

[ಬದಲಾಯಿಸಿ]

ಕರ್ನಾಟಕ ಸಂಗೀತ, ಪಾಶ್ಚಾತ್ಯ ಶಾಸ್ತ್ರೀಯ, ಹಿಂದೂಸ್ತಾನಿ ಸಂಗೀತ ಹಾಗೂ ನುಸ್ರತ್‌ ಫತಹ್‌ ಆಲಿ ಖಾನ್‌ರವರ ಕವ್ವಾಲಿ ಶೈಲಿಯಲ್ಲಿ ರಹಮಾನ್‌ ಪರಿಣತರು. ಈ ಸಂಗೀತ ಶೈಲಿಗಳು ಹಾಗೂ ಇತರೆ ಅನ್ಯ ಸಂಗೀತ ಶೈಲಿಗಳ ಸಮ್ಮಿಶ್ರಣ ಸಂಗೀತವನ್ನು, ವಿಭಿನ್ನ ಸಂಗೀತ ವಾದ್ಯಗಳನ್ನು ಒಂದರ ಮೇಲೊಂದು ಪಂಕ್ತಿ ಮಾಡಿ, ಆಶುರಚನೆಯ ಸ್ವರೂಪದಲ್ಲಿ ರಹಮಾನ್‌ ಸಂಯೋಜಿಸುವರು.[೧೦][೫೧] ಸ್ವರಮೇಳದ ವಿಷಯಗಳು ಅವರ ಸಂಗೀತಗಳ ಅವಿಭಾಜ್ಯ ಅಂಗವಾಗಿವೆ. ಕೆಲವೊಮ್ಮೆ, ಆವರ್ತಕ ಸ್ವರಗುಚ್ಛಗಳನ್ನು ಒಳಗೊಳ್ಳುವುದು. 1980ರ ದಶಕದಲ್ಲಿ, ತಮ್ಮ ಪೂರ್ವವರ್ತಿಗಳಾದ ಕೆ. ವಿ. ಮಹಾದೇವನ್‌ ಮತ್ತು ವಿಶ್ವನಾಥನ್‌-ರಾಮಮೂರ್ತಿ ಜೋಡಿಯಂತೆ, ರಹಮಾನ್‌ ಸಹ ಏಕ-ಧ್ವನಿಮಾರ್ಗದಲ್ಲಿ ವಾದ್ಯಗಳನ್ನು ನುಡಿಸುತ್ತಿದ್ದರು. ಆನಂತರದಲ್ಲಿ ರಹಮಾನ್‌ ತಮ್ಮ ಧ್ವನಿಮುದ್ರಣ ಶೈಲಿ ಬದಲಾಯಿಸಿದರು. ಅವರು ಸಾಂಪ್ರದಾಯಿಕ ವಾದ್ಯಗಳು ಹಾಗೂ ನವೀನ ವಿದ್ಯುನ್ಮಾನ ವಾದ್ಯಗಳು ಹಾಗೂ ತಂತ್ರಜ್ಞಾನಗಳ ಧ್ವನಿಗಳನ್ನು ಮಿಶ್ರಣಗೊಳಿಸಿ ಸಂಗೀತ ಸಂಯೋಜನೆ ಮಾಡತೊಡಗಿದರು.[೧೦] ರಹಮಾನ್‌ರ ಸಂಗೀತ ಶೈಲಿಗಳು ಅವರ ಪ್ರಯೋಗಶೀಲತೆಗಳ ಒಲವನ್ನು ಸೂಚಿಸುತ್ತವೆ. ಹಳೆಯ ಮತ್ತು ಸಮಕಾಲೀನ ಚೆನ್ನೈ ಚಲನಚಿತ್ರ ಸಂಯೋಜಕರ ಸಂಗೀತದ ಧಾಟಿಯಲ್ಲಿರುವ ರಹಮಾನ್‌ರ ಸಂಗೀತ ಸಂಯೋಜನೆಗಳು, ಸಂವಾದಿ ರಾಗ, ವಾದ್ಯವೃಂದದ ಸಂಯೋಜನೆ ಮತ್ತು ಮಾನವ ಧ್ವನಿಯ ವಿಶಿಷ್ಟ ಬಳಕೆಯನ್ನು ಹೊರಹೊಮ್ಮಿಸುತ್ತವೆ. ಇವೆಲ್ಲ ಅಂಶಗಳ ಮೇಲೆ ರಹಮಾನ್‌ರ ಅಗಾಧ ಪ್ರಭಾವವನ್ನೂ ಸೂಚಿಸುತ್ತವೆ. ತನ್ಮೂಲಕ, ಅನನ್ಯ ನಾದಗುಣಗಳು, ಧ್ವನಿ ಸ್ವರೂಪಗಳು ಹಾಗೂ ವಾದ್ಯಸಂಯೋಜನೆಯೊಂದಿಗೆ ಭಾರತೀಯ ಪಾಪ್‌ ಸಂಗೀತದ ವಿಕಾಸಕ್ಕೆ ಇದು ಕಾರಣವಾಗುತ್ತದೆ. ಈ ಗುಣಗಳು, ವಿಶಾಲ ಶ್ರೇಣಿಯ ಗೀತೆಗಳು ಮತ್ತು ರಹಮಾನ್‌ರ ಸಮನ್ವಯದ ಶೈಲಿಯಿಂದಾಗಿ, ಅವರ ಸಂಗೀತದ ಅಭಿರುಚಿಯು, ಭಾರತೀಯ ಸಮಾಜದಲ್ಲಿನ ಶ್ರೋತೃಗಳ ವಿವಿಧ ವರ್ಗ ಮತ್ತು ಸಂಸ್ಕೃತಿಗಳ ವ್ಯಾಪ್ತಿಗಳನ್ನೂ ಮೀರುತ್ತದೆ.[೫೨] ರೋಜಾ ಚಿತ್ರಕ್ಕಾಗಿ ರಹಮಾನ್‌ರ ಮೊಟ್ಟಮೊದಲ ಸಂಯೋಜನೆಯು, 2005ರಲ್ಲಿ ಟೈಮ್‌‌ನ ಸಾರ್ವಕಾಲಿಕ "10 ಅತ್ಯುತ್ತಮ ಧ್ವನಿಪಥಗಳ" ಪಟ್ಟಿಯಲ್ಲಿ ಸ್ಥಾನ ಗಳಿಸಿತು. ಚಲನಚಿತ್ರ ವಿಮರ್ಶಕ ರಿಚರ್ಡ್‌ ಕಾರ್ಲಿಸ್‌ ವ್ಯಕ್ತಪಡಿಸುವ ಅಭಿಪ್ರಾಯದ ಪ್ರಕಾರ, 'ರಹಮಾನ್‌ರ ಮೊಟ್ಟಮೊದಲ ಸಂಗೀತ ಸಂಯೋಜನೆಯು ಬಹಳ ನಿಬ್ಬೆರಗಾಗಿಸುವಂತಹದ್ದು. ಬಾಹ್ಯ ಶೈಲಿಯ ಸಂಗೀತ ಪ್ರಭಾವಗಳನ್ನು ಸಂಪೂರ್ಣವಾಗಿ ತಮಿಳು ಸ್ವರೂಪಕ್ಕೆ ಬರುವವರೆಗೂ, ಸಂಪೂರ್ಣವಾಗಿ ರಹಮಾನ್‌ ಶೈಲಿಗೆ ದಕ್ಕುವವರೆಗೂ, ಅವುಗಳನ್ನು ರೂಪಾಂತರಿಸುವ ಅಪಾರ ಕ್ಷಮತೆಯನ್ನು ಈ ಸಂಯೋಜನೆಯು ಶ್ರೋತೃಗಳಿಗೆ ತಲುಪಿಸುತ್ತದೆ.'[೫೩] ರಹಮಾನ್‌ರ ವೃತ್ತಿಯ ಆರಂಭದಲ್ಲೇ ಜಾಗತಿಕ ಪ್ರಭಾವದ ಪ್ರಸರಣಕ್ಕೆ ಅನಿವಾಸಿ ದಕ್ಷಿಣ ಏಷ್ಯಾ ಜನಾಂಗದವರು ಕಾರಣರಾಗಿದ್ದಾರೆ ಎನ್ನಬಹುದು. ಚಲನಚಿತ್ರೋದ್ಯಮದಲ್ಲಿ ಅತ್ಯಂತ ನವೀನತೆಯುಳ್ಳ ಸಂಗೀತಗಾರರೆನಿಸಿಕೊಂಡ ರಹಮಾನ್‌ರ ಅಪೂರ್ವ ಶೈಲಿ ಮತ್ತು ಅಪಾರ ಯಶಸ್ಸಿನಿಂದಾಗಿ, 1990ರ ದಶಕದಲ್ಲಿ ಚಲನಚಿತ್ರ ಸಂಗೀತ ಕ್ಷೇತ್ರದ ಪುನರ್ಜನ್ಮಕ್ಕೆ ಕಾರಣವಾಯಿತು. ಹಲವು ಚಲನಚಿತ್ರ ನಿರ್ಮಾಪಕರು ಚಲನಚಿತ್ರ ಸಂಗೀತವನ್ನು ಇನ್ನಷ್ಟು ಗಂಭೀರವಾಗಿ ಪರಿಗಣಿಸುವಂತೆ ಮಾಡಿತು.[೫೪] ವಿಶ್ವದಲ್ಲಿರುವ ಯಾವುದೇ ಶೈಲಿಯ ಮಹಾನ್‌ ಸಂಗೀತಗಾರರಲ್ಲಿ ರಹಮಾನ್‌ ಸಹ ಒಬ್ಬರು' ಎಂದು ಸಂಗೀತ ನಿರ್ಮಾಪಕ ರಾನ್‌ ಫೇರ್‌ ಪರಿಗಣಿಸಿದ್ದಾರೆ.[೫೫] ಹಾಲಿವುಡ್‌ ಚಲನಚಿತ್ರ ನಿರ್ದೇಶಕ, ಆಸ್ಟ್ರೇಲಿಯಾ ಮೂಲದ ಬಝ್‌ ಲುಹ್ರ್‌ಮನ್‌ ಈ ರೀತಿ ಹೇಳಿದ್ದಾರೆ:

I had come to the music of A. R. Rahman through the emotional and haunting score of Bombay and the wit and celebration of Lagaan. But the more of AR's music I encountered the more I was to be amazed at the sheer diversity of styles: from swinging brass bands to triumphant anthems; from joyous pop to West-End musicals. Whatever the style, A. R. Rahman's music always possesses a profound sense of humanity and spirit, qualities that inspire me the most.[೫೬]

ಪ್ರಶಸ್ತಿಗಳು

[ಬದಲಾಯಿಸಿ]

ಸಂಗೀತ ಕ್ಷೇತ್ರದಲ್ಲಿ ಅಪಾರ ಪ್ರತಿಭೆ ಪ್ರದರ್ಶಿಸಿ ಕೊಡುಗೆ ನೀಡಿದ ರಹಮಾನ್‌ಗೆ ಅನೇಕ ಪ್ರಶಸ್ತಿ-ಪುರಸ್ಕಾರಗಳು ದೊರಕಿವೆ. ಅವುಗಳ ಪೈಕಿ 1995ರಲ್ಲಿನ ಮಾರಿಷಸ್‌ ರಾಷ್ಟ್ರೀಯ ಪ್ರಶಸ್ತಿ ಹಾಗೂ ಮಲೇಷ್ಯನ್‌ ಪ್ರಶಸ್ತಿಗಳು ಗಮನಾರ್ಹವಾದವು. ಮೊಟ್ಟಮೊದಲ ಬಾರಿಗೆ ವೆಸ್ಟ್‌-ಎಂಡ್‌ ನಿರ್ಮಾಣದ ಚಲನಚಿತ್ರವೊಂದಕ್ಕೆ ಅವರು ಸಂಗೀತ ನೀಡಿದ್ದಕ್ಕಾಗಿ, ಲಾರೆನ್ಸ್‌ ಒಲಿವಿಯರ್‌ ಪ್ರಶಸ್ತಿಗೆ ನಾಮನಿರ್ದೇಶಿತರಾಗಿದ್ದರು. ತಮ್ಮ ಸಂಗೀತ ಹಾಗೂ ಸ್ವರ ಪ್ರಸ್ತಾರಗಳಲ್ಲಿ ಅಪಾರ ನವೀನತೆ ಮೆರೆದ ರಹಮಾನ್‌ಗೆ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ, ನಾಲ್ಕು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು‌, ಆರು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳು, ಹದಿನಾಲ್ಕು ಫಿಲ್ಮ್‌ಫೇರ್‌ ಪ್ರಶಸ್ತಿಗಳು ಹಾಗೂ ಹನ್ನೆರಡು ದಕ್ಷಿಣ ಫಿಲ್ಮ್‌ಫೇರ್‌ ಪ್ರಶಸ್ತಿಗಳು ಅವರ ಗೆಲುವಿಗಾಗಿ ಹುಡುಕಿಕೊಂಡು ಬಂದಿವೆ. ಜಾಗತಿಕ ಸಂಗೀತಕ್ಕೆ ನೀಡಿದ ಕೊಡುಗೆಗಳಿಗಾಗಿ, 2006ರಲ್ಲಿ ಸ್ಟಾನ್ಫರ್ಡ್‌ ವಿಶ್ವವಿದ್ಯಾನಿಲಯದಿಂದ ಅವರು ಗೌರವ ಪ್ರಶಸ್ತಿ ಸ್ವೀಕರಿಸಿದ್ದಾರೆ.[೫೭] ಸ್ಲಮ್‌ಡಾಗ್‌ ಮಿಲಿಯನೇರ್‌ ಚಿತ್ರಕ್ಕೆ ನೀಡಿದ ಸಂಗೀತಕ್ಕಾಗಿ ರಹಮಾನ್‌ಗೆ 2009ರಲ್ಲಿ ವಿಮರ್ಶಕರ ಆಯ್ಕೆಯ ಪ್ರಶಸ್ತಿ, ಅತ್ಯುತ್ತಮ ಮೂಲ ಸಂಗೀತ [೫೮] ಪ್ರಸ್ತಾರಕ್ಕಾಗಿ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ, ಅತ್ಯುತ್ತಮ ಚಲನಚಿತ್ರ ಸಂಗೀತಕ್ಕಾಗಿ ಬಾಫ್ಟಾ (BAFTA)[ಬ್ರಿಟಿಶ್ ಅಕ್ಯಾಡಮಿ ಫಾರ್ ಟೆಲೆವಿಜನ್ ಆರ್ಟ್ಸ್] ಚಲನಚಿತ್ರ ಸಂಗೀತ ಪ್ರಶಸ್ತಿ, ಅತ್ಯುತ್ತಮ ಮೂಲ ಸಂಗೀತ ಸಂಯೋಜನೆ ಹಾಗೂ ಅತ್ಯುತ್ತಮ ಮೂಲ ಗೀತೆಗಾಗಿ ಅಕಾಡೆಮಿ ಪ್ರಶಸ್ತಿಗಳೂ 2009ರ ಆಸ್ಕರ್ಸ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲಭಿಸಿದವು. ಮಿಡ್ಲ್‌ಸೆಕ್ಸ್‌ ವಿಶ್ವವಿದ್ಯಾನಿಲಯ ಮತ್ತು ಅಲಿಗಢ್‌ ಮುಸ್ಲಿಮ್‌ ವಿಶ್ವವಿದ್ಯಾನಿಲಯಗಳಿಂದ ರಹಮಾನ್‌, ಗೌರವ ಡಾಕ್ಟರೇಟ್‌ ಸ್ವೀಕರಿಸಿದ್ದಾರೆ.[೫೯][೬೦] ಅದೇ ವರ್ಷದ ಕೊನೆಯ ಭಾಗದಲ್ಲಿ ಚೆನ್ನೈನ ಅಣ್ಣಾ ವಿಶ್ವವಿದ್ಯಾನಿಲಯದಿಂದ ರಹಮಾನ್‌ ಗೆ ಗೌರವ ಡಾಕ್ಟರೇಟ್‌ ನೀಡಲಾಯಿತು.[೬೧] ಅತ್ಯುತ್ತಮ ಸಂಗ್ರಹದ ಧ್ವನಿಪಥ ಸಂಪುಟ ಹಾಗೂ ದೃಶ್ಯಮಾಧ್ಯಮವೊಂದಕ್ಕೆ ಬರೆದ ಅತ್ಯುತ್ತಮ ಗೀತೆಯ ವಿಭಾಗಗಳಲ್ಲಿಯೂ ರಹಮಾನ್‌ ಎರಡು ಗ್ರ್ಯಾಮ್ಮಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.[] ಇತ್ತೀಚಿಗೆ 2010ರಲ್ಲಿ ರಹಮಾನ್‌ ಭಾರತದ ಮೂರನೇ ಅತ್ಯುನ್ನತ ನಾಗರಿಕ ಗೌರವ ಪದ್ಮಭೂಷಣದಿಂದ ಪುರಸ್ಕೃತರಾದರು.[೬೨] ಚಲನಚಿತ್ರ 127 ಅವರ್ಸ್‌ ನ ಅತ್ಯುತ್ತಮ ಮೂಲ ಸಂಗೀತ ಸಂಯೋಜನೆಗಾಗಿ 2011ರ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಗೆ ನಾಮನಿರ್ದೇಶಿತರಾದರು.[೬೩] ಲಂಡನ್‌ನ ಟ್ರಿನಿಟಿ ಕಾಲೇಜ್‌ ಆಫ್‌ ಮ್ಯೂಸಿಕ್‌ನಲ್ಲಿ (ಆನರರೀ ಫೆಲೊ ಆಫ್ ಟ್ರಿನಿಟಿ)ಗೌರವ ಸದಸ್ಯತ್ವಹೊಂದಿದ್ದಾರೆ.[೬೪]

ವೈಯಕ್ತಿಕ ಜೀವನ

[ಬದಲಾಯಿಸಿ]

ರಹಮಾನ್‌, ಸಾಯಿರಾ ಬಾನುರನ್ನು ವಿವಾಹವಾಗಿದ್ದಾರೆ, ಈ ಜೋಡಿಗೆ ಖತೀಜಾ, ರಹೀಮಾ ಮತ್ತು ಅಮೀನ್‌ ಎಂಬ ಮೂವರು ಮಕ್ಕಳಿದ್ದಾರೆ. ರಹಮಾನ್‌ ಸಂಗೀತ ನಿರ್ದೇಶನದಲ್ಲಿ, ಪುತ್ರ ಅಮೀನ್,ಕಪಲ್ಸ್‌ ರಿಟ್ರೀಟ್ ಚಲನಚಿತ್ರದಲ್ಲಿ, ‌'ನಾ ನಾ' ಎಂಬ ಹಾಡನ್ನು ಹಾಡಿದ್ದಾರೆ. ಪುತ್ರಿ ಖತೀಜಾ ಏಂಥಿರನ್ ‌ ಚಲನಚಿತ್ರಕ್ಕಾಗಿ 'ಪುಧಿಯಾ ಮನಿಧಾ' ಹಾಡಿಗೆ ಧ್ವನಿ ನೀಡಿದ್ದಾರೆ.[೬೫][೬೬] ರಹಮಾನ್‌ರ ಹಿರಿಯ ಸಹೋದರಿ ಎ. ಆರ್‌. ರೆಹಾನಾ ಪುತ್ರ ಜಿ. ವಿ. ಪ್ರಕಾಶ್ ಕುಮಾರ್‌ ಸಹ ಒಬ್ಬ ಸಂಗೀತ ಸಂಯೋಜಕರಾಗಿದ್ದಾರೆ. ರಹಮಾನ್‌ ಅವರು ಪ್ರಕಾಶ್‌ರ ಸೋದರಮಾವ. ಕಣ್ಣತಿಲ್‌ ಮುತ್ತಮ್‌ಇಟ್ಟಾಳ್‌ ಚಲನಚಿತ್ರದಲ್ಲಿ "ವಿದಾಯಿ ಕೊಡು ಎಂಗಲ್ ನಾಡೆ" ಹಾಡನ್ನು ಹಾಡುವುದರೊಂದಿಗೆ ರೆಹಾನಾ ಚಲನಚಿತ್ರಗಳಲ್ಲಿ ಹಾಡುಗಾರಿಕೆಯ ವೃತ್ತಿ ಆರಂಭಿಸಿದರು. ಮಲಯಾಳಂ ಚಲನಚಿತ್ರ ನಟ ರಹಮಾನ್‌ರ ಭಾಮೈದುನರಾಗಿದ್ದಾರೆ. ತಮ್ಮ ಬಾಲ್ಯದಲ್ಲಿ ಕಷ್ಟಕಾಲ ಅನುಭವಿಸಿದ ಕಾರಣ ಅವರು ನಾಸ್ತಿಕರಾಗಬೇಕಾಯಿತು. ನಂತರ 1989ರಲ್ಲಿ ತಮ್ಮ ತಾಯಿಯ ಕುಟುಂಬದ ಇಸ್ಲಾಮ್‌ ಧರ್ಮಕ್ಕೆ ಮತಾಂತರಗೊಂಡಿದ್ದರು. ಟೈಮ್‌ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ತಾವು ಸೂಫಿಸಂ ಮೂಲಕ ಇಸ್ಲಾಮ್‌ ಧರ್ಮ ಸ್ವೀಕರಿಸಿದ್ದೇವೆಂದು ಹೇಳಿದ್ದರು.[೬೭] ಅವರಿಗೆ ತಮ್ಮ ತಾಯಿಯನ್ನು ಕಂಡರೆ ಅಚಲ ಭಕ್ತಿ-ನಿಷ್ಠೆ. 81ನೆಯ ಅಕ್ಯಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ, ರಹಮಾನ್‌ ತಮ್ಮ ತಾಯಿಗೆ ನಮನ ಸಲ್ಲಿಸಲು ಈ ರೀತಿ ಹೇಳಿದರು: 'ದೀವಾರ್‌' ಹಿಂದಿ ಚಲನಚಿತ್ರದಲ್ಲಿ 'ಮೇರೆ ಪಾಸ್‌ ಮಾಂ ಹೈ' ಎಂಬ ಮಾತಿದೆ. ಇದರ ಅರ್ಥ, ನನ್ನಲ್ಲಿ ಏನೂ ಇಲ್ಲದಿದ್ದರೂ, ಇಲ್ಲಿ ನನ್ನೊಂದಿಗೆ ನನ್ನ ತಾಯಿಯಿದ್ದಾರೆ' [೬೮] ಮುಂಚೆ ನಾಸ್ತಿಕರಾಗಿದ್ದರೂ, ರಹಮಾನ್‌ ತಮಿಳಿನಲ್ಲಿ ತಮ್ಮದೇ ಆದ ಪದಗುಚ್ಛವನ್ನು ಚಾಲ್ತಿಯಲ್ಲಿ ತಂದರು 'Ella pughazhum iraivanukke ' ಎಂದರೆ, ಎಲ್ಲಾ ಪ್ರಶಂಸೆಗಳೂ ಪರಮಾತ್ಮನಿಗೆ'. ರಹಮಾನ್‌ 81ನೆಯ ಅಕ್ಯಾಡಮಿ ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡುವಾಗ ಈ ಪದಗುಚ್ಛವನ್ನು ಬಳಸಿದ ನಂತರ ಈ ಮಾತು ಇನ್ನಷ್ಟು ಜನಪ್ರಿಯತೆ ಗಳಿಸಿತು.[೬೯]

ಸಮಾಜ ಸೇವೆ

[ಬದಲಾಯಿಸಿ]

ಸಹಾಯಾರ್ಥದ ವಿವಿಧ ಉದ್ದೇಶಗಳಲ್ಲಿ ರಹಮಾನ್‌ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿಶ್ವ ಆರೋಗ್ಯ ಸಂಘಟನೆ WHO ಆರಂಭಿಸಿದ ಅಭಿಯಾನ ಯೋಜನೆಯಾದ, ಸ್ಟಾಪ್ ಟೀಬಿ ಪಾರ್ಟ್ನರ್ಶಿಪ್,ಕ್ಷಯರೋಗ ನಿವಾರಣಾ ಸಹಯೋಗಕ್ಕೆ ಜಾಗತಿಕ ರಾಯಭಾರಿ ಯಾಗಿ ರಹಮಾನ್‌, 2004ರಲ್ಲಿ ನೇಮಕಗೊಂಡರು.[೧೭] ಭಾರತದಲ್ಲಿ ಮಕ್ಕಳನ್ನು ಉಳಿಸಿ; ಅಭಿಯಾನವೂ ಸೇರಿದಂತೆ, ಹಲವಾರು ಸಹಾಯಾರ್ಥ ಚಟುವಟಿಕೆಗಳಲ್ಲಿ ರಹಮಾನ್‌ ಸಕ್ರಿಯರಾಗಿದ್ದಾರೆ. ತಮ್ಮ ಹಾಡು 'ಇಂಡಿಯನ್‌ ಓಷನ್ ‌'ಗಾಗಿ ಕ್ಯಾಟ್‌ ಸ್ಟೀವನ್ಸ್‌ / ಯುಸುಫ್‌ ಇಸ್ಲಾಮ್‌ರೊಂದಿಗಿನ ಸಹಯೋಗಲ್ಲಿ ಬೆಂಬಲ ಸೂಚಿಸಿದ್ದರು. ಏ-ಹಾ a-ha ಕೀಬೋರ್ಡ್‌ ವಾದಕ ಮ್ಯಾಗ್ನೆ ಫರುಹೋಲ್ಮನ್‌ ಮತ್ತು ಟ್ರಾವಿಸ್‌ ಡ್ರಮ್‌ ವಾದಕ ನೀಲ್‌ ಪ್ರಿಮ್‌ರೋಸ್‌‌ರ ದೃಶ್ಯವನ್ನು ಈ ಹಾಡು ಒಳಗೊಂಡಿತ್ತು. ಈ ಹಾಡಿನಿಂದ ಬಂದ ಆದಾಯವನ್ನು, 2004ರ ಡಿಸೆಂಬರ್‌ 26ರಂದು ಹಿಂದೂ ಸಾಗರದಲ್ಲಿ ಸಂಭವಿಸಿದ ಸುನಾಮಿ ಪೀಡಿತ ಬಂದಾ ಆಕೆಹ್‌ ಅನಾಥರಿಗೆ ನೀಡುವ ಪರಿಹಾರ ಧನಕ್ಕಾಗಿ ಬಳಸಲಾಯಿತು. ‌ ಮುಖ್ತಾರ್‌ ಸಹೋಟಾರೊಂದಿಗೆ ಡಾನ್‌ ಏಷ್ಯನ್‌ ಸೇರಿ ಹಾಡಿದ, "ವೀ ಕ್ಯಾನ್‌ ಮೇಕ್‌ ಇಟ್‌ ಬೆಟರ್‌ " ಎಂಬ ಏಕಗೀತೆಯನ್ನು ಸಹ ರಹಮಾನ್‌ ಸಂಯೋಜಿಸಿದ್ದಾರೆ.[೭೦] ರಹಮಾನ್‌ ತಮ್ಮ ಕೆಎಂ ಮ್ಯೂಸಿಕ್‌ ಕನ್ಸರ್ವೇಟರಿಯನ್ನು(ಸಂಗೀತ ಶಿಕ್ಷಣ ಪೋಷಕ ಸಂಸ್ಥೆ) 2008ರಲ್ಲಿ ಪ್ರಾರಂಭಿಸಿದರು. ಇಲ್ಲಿ ಸಂಗೀತಗಾರರಾಗಬಯಸುವವರಿಗೆ ಶ್ರವ್ಯ ಮಾಧ್ಯಮ ಶಿಕ್ಷಣ ವ್ಯವಸ್ಥೆಯ ಮೂಲಕ ಹಾಡುಗಾರಿಕೆ, ವಾದ್ಯಸಂಗೀತ, ಸಂಗೀತ ತಂತ್ರಜ್ಞಾನ ಹಾಗೂ ಧ್ವನಿವಿನ್ಯಾಸ ಕ್ಷೇತ್ರಗಳಲ್ಲಿ ಬೋಧನೆ ಮತ್ತು ತರಬೇತಿ ನೀಡಲಾಗುವುದು. ಈ ಶಾಲೆಯ ಬೋಧಕ ತಂಡದಲ್ಲಿ-ಸುಪ್ರಸಿದ್ಧ,ಸಾಧನೆಗೈದ ಸಂಗೀತಗಾರರು ಹಾಗೂ ಹೊಸದಾಗಿ ಸ್ಥಾಪಿತ ಸ್ವರಮೇಳ ವಾದ್ಯವೃಂದವನ್ನು ಸಹ ಈ ಲಲಿತಕಲಾ ಶಾಲೆ ಹೊಂದಿದೆ.ಇದು ಚೆನ್ನೈನ ಕೋಡಂಬಾಕಂನಲ್ಲಿ ಅವರ ಪಂಚತನ್‌ ಸ್ಟುಡಿಯೋದ ಸನಿಹದಲ್ಲೇ ನೆಲೆಗೊಂಡಿದೆ. ಆರಂಭಿಕವಾಗಿ, ಪ್ರಾಥಮಿಕ ಹಾಗೂ ಡಿಪ್ಲೊಮಾ ಮಟ್ಟಗಳಲ್ಲಿ ಪಠ್ಯಕ್ರಮಗಳನ್ನು ಬೋಧನಾ ತರಗತಿಯಲ್ಲಿ ನೀಡುತ್ತಿದೆ.[೭೧] ಈ ಕಲಾಶಾಲೆಯಲ್ಲಿ ಕಲಿತ ಹಲವು ವಿದ್ಯಾರ್ಥಿ-ಶಿಷ್ಯರು ಚಲನಚಿತ್ರಗಳಿಗೆ ಸಂಗೀತ ಸಂಯೋಜನಾ ವೃತ್ತಿಯಲ್ಲಿ ತೊಡಗಿದ್ದಾರೆ.[೭೨] ಚೆನ್ನೈನಲ್ಲಿರುವ ನಿರ್ಗತಿಕ ಮಹಿಳೆಯರ ನೆರವಿಗಾಗಿ ಸ್ಥಾಪಿಸಲಾಗಿರುವ ದಿ ಬ್ಯಾನ್ಯನ್‌ ಸಂಸ್ಥೆಗಾಗಿ ನಿರ್ಮಿಸಲ್ಪಟ್ಟ ಒಂದು ಕಿರುಚಿತ್ರಕ್ಕಾಗಿ 2006ರಲ್ಲಿ ರಹಮಾನ್‌ ಇದರ ವಿಷಯ ವಸ್ತುವಿನ ಶೀರ್ಷಿಕೆಯಾಗಿ ಆವರ್ತಕ ರಾಗ ಸಂಯೋಜಿಸಿದರು. ಆಗ 2008ರಲ್ಲಿ, ತಾಳವಾದ್ಯಕಾರ ಶಿವಮಣಿಯೊಂದಿಗೆ ಸೇರಿಕೊಂಡು 'ಜಿಯಾ ಸೆ ಜಿಯಾ ' ಎಂಬ ಹಾಡೊಂದನ್ನು ರಹಮಾನ್ ರಚಿಸಿದರು. ಇದು(ಫ್ರೀ ಹಗ್ಸ್ ಪ್ರಚಾರಾಂದೋಲನ) ಮುಕ್ತ ಅಪ್ಪುಗೆಯ ಆಂದೋಲನದಿಂದ ಪ್ರೇರೇಪಿಸಲ್ಪಟ್ಟಿತ್ತು. ಭಾರತದಲ್ಲಿನ ಅನೇಕ ನಗರಗಳಲ್ಲಿ ಚಿತ್ರೀಕರಿಸಲಾದ ವೀಡಿಯೊ ಮೂಲಕ ರಹಮಾನ್‌ ಇದನ್ನು ಪ್ರೊತ್ಸಾಹಿಸಿ ಪ್ರಚಾರ ಮಾಡಿದರು.

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]
  • ರೋಜಾ
  • ತಿರುಡಾ ತಿರುಡಾ
  • ಬಾಂಬೆ
  • ಕಾದಲನ್
  • ಜೀನ್ಸ್
  • ಕಾದಲ ಕೋಟೈ
  • ರಂಗೀಲಾ
  • ಗುರು

ಟಿಪ್ಪಣಿಗಳು

[ಬದಲಾಯಿಸಿ]
  1. ೧.೦ ೧.೧ "India's A.R. Rahman strikes Grammys gold". Agence France-Presse. 2010. Archived from the original on 2010-02-04. Retrieved 2010-02-01.
  2. "It's a bridge for Indian cinema: A R Rahman". ಟೈಮ್ಸ್ ಆಫ್ ಇಂಡಿಯ. Retrieved 26 February 2008.
  3. ಎ ಆರ್‌ ರಹಮಾನ್‌ರೊಂದಿಗೆ ಒಂದು ಸಂದರ್ಶನ, Bio apple.com/Logic Studio
  4. Richard Corliss (3 May 2004). "Culture: The Mozart of Madras". Time. Archived from the original on 2010-07-15. Retrieved 2010-02-03.
  5. "Indian film composer for Rings". BBC. 2003-10-21. Retrieved 15 November 2008.
  6. Das Gupta, Surajeet. "Composing a winning score". Rediff. Retrieved 15 November 2008. {{cite web}}: Unknown parameter |coauthors= ignored (|author= suggested) (help)
  7. ಕಾರ್ಲಿಸ್‌, ರಿಚರ್ಡ್‌. (ಜನವರಿ 1, 2005). That Old Feeling: Isn't It Rahmantic? ಟೈಮ್ ಮ್ಯಾಗಝೀನ್‌ . ಮರುಪಡೆದದ್ದು 2008-11-10.
  8. specials.msn.co.in/sp08/oscar/rahman.asp All About Rahman – Oscars 2009 Special. 2009ರ ಜನವರಿ 10ರಂದು ಪಡೆಯಲಾಯಿತು.
  9. The 2009 TIME 100 - A.R. Rahman Archived 2011-02-17 ವೇಬ್ಯಾಕ್ ಮೆಷಿನ್ ನಲ್ಲಿ.‌ TIME.
  10. ೧೦.೦ ೧೦.೧ ೧೦.೨ ೧೦.೩ ೧೦.೪ Rangan, Baradwaj (14 June 2008). "A R Rahman – The Rolling Stone Interview". Rolling Stone. Retrieved 16 November 2008. {{cite web}}: Unknown parameter |coauthors= ignored (|author= suggested) (help)[permanent dead link]
  11. Ganti, T. "Bollywood: A Guidebook to Popular Hindi Cinema": 112. {{cite journal}}: Cite journal requires |journal= (help)
  12. ೧೨.೦ ೧೨.೧ "Artist of the Month: AR Rahman". TFM Page Magazine. 2006. Archived from the original on 4 ಮೇ 2007. Retrieved 15 February 2007. {{cite web}}: Unknown parameter |month= ignored (help)
  13. ಹ್ಯಾಪಿ ಬರ್ತ್‌ಡೇ, ಎ ಆರ್‌ ರಹಮಾನ್‌ Archived 2011-01-09 ವೇಬ್ಯಾಕ್ ಮೆಷಿನ್ ನಲ್ಲಿ., ಹಿಂದೂಸ್ಥಾನ್‌ಟೈಮ್ಸ್‌, 05 ಜನವರಿ 2010.
  14. Wax, Emily (2009). "'Slumdog' Composer's Crescendo Of a Career". The Washington Post. Retrieved 8 November 2010. {{cite news}}: Unknown parameter |day= ignored (help); Unknown parameter |month= ignored (help)
  15. "Vellithen Kinnam: Rahman's first song". Malayalasangeetham. Retrieved 26 November 2010.
  16. ೧೬.೦ ೧೬.೧ Eur, Andy Gregory. "The International Who's Who in Popular Music 2002: A. R. Rahman": 419–420. {{cite journal}}: Cite journal requires |journal= (help)
  17. ೧೭.೦ ೧೭.೧ ೧೭.೨ ೧೭.೩ Iyer, Vijay. "A. R. Rahman". lotr.com. Archived from the original on 25 ಅಕ್ಟೋಬರ್ 2008. Retrieved 15 November 2008.
  18. Kasbekar, Asha (2006). Pop Culture India!: Media, Arts and Lifestyle. ABC-CLIO. p. 215. ISBN 9781851096367. Songs play as important a part in South Indian films and some South Indian music directors such as A. R. Rehman and Ilyaraja have an enthusiastic national and even international following
  19. Chaudhuri, S. "Cinema of South India and Sri Lanka". Contemporary World Cinema: Europe, the Middle East, East Asia and South Asia. p. 149. Now the South is believed to excel the North in many respects, including its colour labs, state of the art digital technology and sound processing facilities (which have improved the dubbing of Tamil and other South Indian languages into Hindi since the 1970s
  20. Prasad, Ayappa (2003). "Films don't believe in borders". Screen. Archived from the original on 18 ಡಿಸೆಂಬರ್ 2008. Retrieved 15 November 2008.
  21. Ramaswamy, V. "Historical Dictionary of the Tamils": 199. {{cite journal}}: Cite journal requires |journal= (help)
  22. Chaudhuri, S. "Cinema of South India and Sri Lanka". Contemporary World Cinema: Europe, the Middle East, East Asia and South Asia. p. 149. Southern filmmakers like Mani Ratnam, Ram Gopal Varma and Priyadarshan have altered the profile of Indian 'national' cinema. So too have southern specialists... cinematographers Santosh Sivan, P. C. Sriram and music composer A. R. Rahman who formed a highly successful team with Ratnam and have all attained star status in their own right
  23. http://www.indiainfo.com Archived 2020-12-30 ವೇಬ್ಯಾಕ್ ಮೆಷಿನ್ ನಲ್ಲಿ. ನಂಬಿಯಾರ್‌, ಸ್ಮಿತಾ. "ಎ ಆರ್‌ ರಹಮಾನ್‌ - ದಿ ಮೆಲೊಡಿ ಕಿಂಗ್‌." 2008ರ ನವೆಂಬರ್‌ 16ರಂದು ವೀಕ್ಷಿಸಲಾಯಿತು.
  24. Stafford, Roy. Understanding Audiences and the Film Industry. London: British Film Institute. p. 27. ISBN 9781844571413.
  25. Arnold, Alison (2000). "Film music in the late Twentieth century". The Garland Encyclopedia of World Music. Taylor & Francis. p. 540. ISBN 9780824049461. The recent success of the Tamil film music director A. R. Rehman in achieving widespread popularity in the world of Hindi film music is now possibly opening doors to new South-North relationships and collaborations
  26. "The A R Rahman Chat". Rediff On The Net. Rediff. 17 August 1998. Archived from the original on 16 ಡಿಸೆಂಬರ್ 2008. Retrieved 6 December 2008.
  27. Velayutham, Selvaraj (2008). Tamil Cinema: The Cultural Politics of India's Other Film Industry. p. 6.
  28. Ganti, T. "Bollywood: A Guidebook to Popular Hindi Cinema": 112. Rehman became a major star with his hit music in Roja followed by hit scores for Mani Ratnam's and Shankar's films in Tamil. {{cite journal}}: Cite journal requires |journal= (help)
  29. "Film Composer A.R. Rahman Selects Bag End Bass Speakers". Mix. 2006. Archived from the original on 16 ಡಿಸೆಂಬರ್ 2008. Retrieved 18 November 2008. {{cite web}}: Cite has empty unknown parameter: |lcoauthors= (help); Unknown parameter |month= ignored (help)
  30. Omkar, Ashanti (March 2008). "Interview with A. R. Rahman". The Score Magazine. Vol. 1, no. 1. Chennai. {{cite news}}: |access-date= requires |url= (help)
  31. Maria Verghis, Shana (11 August 2006). "A R Rahman Interview". The Pioneer. New Delhi.
  32. "Cine Scope" (PDF). Tamil Guardian. 19 October 2005. p. 7. Archived from the original (PDF) on 24 ಸೆಪ್ಟೆಂಬರ್ 2015. Retrieved 20 ಜನವರಿ 2011.
  33. "Cinemaya 1998". Cinemaya. No. 39–41. ನವ ದೆಹಲಿ. 1998. p. 9. ISSN 0970-8782. OCLC 19234070. However, the song was lifted by a whole range of well-known music directors from Bombay so much so that the original composition in Tamil by AR Rahman... {{cite news}}: line feed character in |quote= at position 82 (help)
  34. http://www.billboard.com ಬಿಲ್ಬೋರ್ಡ್‌ ಟಾಪ್‌ ಎಲೆಕ್ಟ್ರಾನಿಕ್‌ ಅಲ್ಬಮ್‌. 2009ರ ಆಗಸ್ಟ್‌‌ 29ರಂದು ವೀಕ್ಷಿಸಲಾಯಿತು.
  35. ವಿಶ್ವದ ಸಂಗೀತ ಅಲ್ಬಮ್‌ಗಳಲ್ಲಿ ಸ್ಲಂಡಾಗ್ ಚಲನಚಿತ್ರದ ಹಾಡುಗಳು
  36. http://www.billboard.com ಸಂಗೀತ ಪಟ್ಟಿಗಳು, ಅತಿ ಜನಪ್ರಿಯ ಸಂಗೀತ, ಸಂಗೀತ ಶೈಲಿಯ ಪ್ರಕಾರ, ಸಂಗೀತ ಹಾಗೂ ಅತಿ ಜನಪ್ರಿಯ ಸಂಗೀತ ಪಟ್ಟಿಗಳು. 2009ರ ಆಗಸ್ಟ್‌ 29ರಂದು ವೀಕ್ಷಿಸಲಾಯಿತು.
  37. http://www.billboard.com ಬಿನ್‌-ಯಹೂದಾ, ಆಯಲಾ. "ಸೌಲಜಾ ಬಾಯ್‌ ಕ್ಲೈಂಸ್‌ ಹಾಟ್‌ 100" 2009ರ ಮಾರ್ಚ್‌ 5ರಂದು ವೀಕ್ಷಿಸಲಾಯಿತು.
  38. Allen, John. "Refashioning pop music in Asia": 67. {{cite journal}}: Cite journal requires |journal= (help); Unknown parameter |coauthors= ignored (|author= suggested) (help)
  39. "A. R. Rahman: Summary Biography". A. R. Rahman: A Biography. 2002. Retrieved 15 February 2007. Particularly impressed with Vande Mataram, Jeremy Spencer, formerly of Fleetwood Mac stated that Rahman was the only Indian composer he knew about and liked {{cite web}}: Unknown parameter |month= ignored (help)
  40. Chander, Bhuvana (2006-04-19). "Tamil Cinema" (PDF). Tamil Guardian. p. 15. Archived from the original (PDF) on 2011-07-20. Retrieved 2010-10-24.
  41. "(ಪುಟ 6)" (PDF). Archived from the original (PDF) on 2016-02-02. Retrieved 2021-07-21.
  42. ದಿ ವಾಷಿಂಗ್ಟನ್‌ ಪೋಸ್ಟ್‌ Archived 2018-10-03 ವೇಬ್ಯಾಕ್ ಮೆಷಿನ್ ನಲ್ಲಿ., ಲೇಖಕರು: ಕ್ರಿಸ್‌ ರಿಚರ್ಡ್ಸ್‌, 24 ನವೆಂಬರ್‌ 2009; 3:34 PM ET
  43. TNN, May 2, 2010, 06.50am IST (2010-05-02). "Gujarat turns 50 in style – Ahmedabad – City – The Times of India". Timesofindia.indiatimes.com. Retrieved 2010-08-23.{{cite news}}: CS1 maint: multiple names: authors list (link) CS1 maint: numeric names: authors list (link)
  44. ಎ ಆರ್‌ ರಹಮಾನ್‌ ಜೈ ಹೋ ಕಾನ್ಸರ್ಟ್‌: ದಿ ಜರ್ನಿ ಹೋಮ್‌ ವರ್ಲ್ಡ್‌ ಟೂರ್‌ Archived 2010-06-05 ವೇಬ್ಯಾಕ್ ಮೆಷಿನ್ ನಲ್ಲಿ. 2010ರ ಜೂನ್‌ 11ರಂದು ಮರುಸಂಪಾದಿಸಲಾಯಿತು.
  45. "Airtel unveils new logo, tune". Deccan Herald. Retrieved 2010-11-18.
  46. Bharat. "Airtel New Signature Tune Available for Download". Indiamag.in. Archived from the original on 2010-11-20. Retrieved 2010-11-19.
  47. "A.R.Rahman's exclusive tune for Radio Desi Beats". Musicaloud. Retrieved 2010-11-28.
  48. "Toyota ropes in Rahman to endorse Etios in India". The Economic Times. Retrieved 2010-10-16.
  49. "AR Rahman is Toyota Etios' brand ambassador". Rediff. Retrieved 2010-10-15.
  50. "A.R. Rahman performs at the launch of the Toyota Etios". Motoism. Retrieved 2010-12-05.[permanent dead link]
  51. Viswanathan, T.; Harper Allen, Matthew. "Music in South India": 139. {{cite journal}}: Cite journal requires |journal= (help)
  52. ಈ ತರಹದ ನಾವೀನ್ಯಗಳಿಂದ, ರಹಮಾನ್‌ರ ಸಂಯೋಜನೆಗಳು, 'ಜಾಝ್‌ ವಾದ್ಯಸಮೂಹಗಳು, ಸ್ವರಮೇಳ ವೃಂದಗಳು ಹಾಗೂ ಅಮೆರಿಕನ್‌ ಪಾಪ್‌ ಗೀತೆಗಳ ಕಟ್ಟುನಿಟ್ಟಾದ ವಿನ್ಯಾಸಗಳಂತಹ ಪಾಶ್ಚಾತ್ಯ ವಾದ್ಯಮೇಳಗಳನ್ನು ಮೀರುತ್ತವೆ.' Todd Titon, Jeff. "India/South India". Worlds of Music: An Introduction to the Music of the World's Peoples. pp. 202–205. {{cite book}}: Unknown parameter |coauthors= ignored (|author= suggested) (help)
  53. Corliss, Richard (2005). "Best Soundtracks – ALL TIME 100 MOVIES – TIME". TIME. Archived from the original on 12 ಮಾರ್ಚ್ 2010. Retrieved 24 February 2008.
  54. Ganti, T. "Bollywood: A Guidebook to Popular Hindi Cinema": 112. Rehman is an innovative and phenomenally successful contemporary Tamil and Hindi composer whose style transformed film music in the 1990s...he is considered a genius in the Bombay film industry, and in terms of how much control and autonomy he is allowed over his compositions and working style, he holds tremendous power over film producers and directors {{cite journal}}: Cite journal requires |journal= (help)
  55. Smith, Ethan (27 February 2009). "'Slumdog' Remix: The Oscar-winning song 'Jai Ho' is reworked with help from a Pussycat Doll". The Wall Street Journal. Retrieved 2009-03-01.
  56. "Baz Luhrrman comments on A. R. Rahman". Charindaa. 2005. Archived from the original on 2 ಫೆಬ್ರವರಿ 2009. Retrieved 15 November 2008.
  57. Prakash, B.S. (6 July 2006). "Stanford University honours A R Rahman". Rediff. Rediff.com. Retrieved 16 December 2008.
  58. "66th Annual Golden Globe Awards". IMDb. Archived from the original on 14 ಡಿಸೆಂಬರ್ 2008. Retrieved 12 December 2008.
  59. "Rahman to be awarded an Honorary Degree in July". The Hindu. Chennai, India. 1 April 2009. Archived from the original on 20 ಆಗಸ್ಟ್ 2009. Retrieved 26 May 2009.
  60. "Rahman to be conferred honorary doctorate by AMU". The Hindu. Chennai, India. 26 May 2009. Archived from the original on 4 ಜೂನ್ 2011. Retrieved 26 May 2009. {{cite news}}: Cite has empty unknown parameter: |coauthors= (help)
  61. ಸ್ಟ್ಯಾಲಿನ್‌, ಎ.ಆರ್‌ ರಹಮಾನ್‌ ಹಾಗೂ 'ಚಂದ್ರ ಮಾನವ' ಅಣ್ಣಾದುರೈ ಅವರನ್ನು ಸನ್ಮಾನಿಸಿದ ಅಣ್ಣಾ ವಿಶ್ವವಿದ್ಯಾನಿಲಯ[permanent dead link], ಹಿಂದೂಸ್ಥಾನ್‌ ಟೈಮ್ಸ್‌, ಎಂಆರ್‌ ವೆಂಕಟೇಶ್‌, 01 ಆಗಸ್ಟ್‌ 2009 Venkatesh August 01, 2009
  62. "This Year's Padma Awards announced" (Press release). Ministry of Home Affairs. 25 January 2010. Retrieved 25 January 2010.
  63. "The 68th Annual Golden Globe Award". Golden Globe Award. 14 December 2010. Archived from the original on 5 ಮೇ 2012. Retrieved 14 December 2010.
  64. Ashanti Omkar, A. R. Rahman (January 13, 2010). A.R Rahman interview 2010 part 1 - Vinnaithandi Varuvaayaa (VTV) - Thai Pongal special (Web interview). London: Thamarai.com. {{cite AV media}}: External link in |title= (help); Text "Interviewer" ignored (help)
  65. Vickey Lalwani. "AR Rahman's son sings for Hollywood". TNN. ಟೈಮ್ಸ್ ಆಫ್ ಇಂಡಿಯ. Retrieved 2010-07-29.
  66. "A R Rahman's daughter sings song in 'Yanthram'". Indiaglitz. Retrieved 2010-07-29.
  67. https://www.youtube.com/watch?v=TqUbiOgEb0w&feature=fvw
  68. ಮೇರೆ ಪಾಸ್‌ ಮಾಂ ಹೈ: ಎಆರ್‌ ರಹಮಾನ್‌
  69. "Front Page : Great composer, greater human feted". Chennai, India: The Hindu. 2009-02-24. Archived from the original on 2009-02-24. Retrieved 2010-08-23.
  70. "LA Phil presents Hollywood Bowl: About the Performer: AR Rahman". Hollywood Bowl Official Website. Archived from the original on 2009-02-16. Retrieved June 2006. {{cite web}}: Check date values in: |accessdate= (help)
  71. "Rahman's music conservatory in June". Screen. Archived from the original on 2008-12-18. Retrieved November 2008. {{cite web}}: Check date values in: |accessdate= (help)
  72. "Briefly Tamil Cinema". Tamil Guardian. 19 April 2006. Archived from the original on 3 ಮಾರ್ಚ್ 2016. Retrieved 24 October 2010.

ಉಲ್ಲೇಖಗಳು

[ಬದಲಾಯಿಸಿ]
  • Allen, John (2004). Refashioning pop music in Asia. USA: Routledge. ISBN 9780700714018. {{cite book}}: Unknown parameter |coauthors= ignored (|author= suggested) (help)
  • Arnold, Alison (2000). The Garland Encyclopedia of World Music. Taylor & Francis. ISBN 9780824049461.
  • "Cinemaya 1998". Cinemaya (39–41). ನವ ದೆಹಲಿ: 9. 1998. ISSN 0970-8782. OCLC 19234070.
  • Chaudhuri, Shohini (2005). "Cinema of South India and Sri Lanka". Contemporary World Cinema: Europe, the Middle East, East Asia and South Asia. Edinburgh: Edinburgh University Press. ISBN 074861799X.
  • Eur, Andy Gregory (2002). "A. R. Rahman". The International Who's Who in Popular Music 2002. Routledge. ISBN 9781857431612.
  • Ganti, Tejaswini (2004). Bollywood: A Guidebook to Popular Hindi Cinema. Routledge. ISBN 0415288541.
  • Ramaswamy, Vijaya (2007). Historical Dictionary of the Tamils. Michigan: The Scarecrow Press. ISBN 0810853795.
  • Terska Ciecko, Anne (2006). Contemporary Asian Cinema: Popular culture in a Global Frame. Berg: Berg Publishers. ISBN 1845202376.
  • Todd Titon, Jeff (2005). "India/South India". Worlds of Music: An Introduction to the Music of the World's Peoples. USA: Thomson Shirmer. ISBN 9780534627577. {{cite book}}: Unknown parameter |coauthors= ignored (|author= suggested) (help)
  • Velayutham, Selvaraj (2008). Tamil Cinema: The Cultural Politics of India's Other Film Industry. Routledge. ISBN 9780415396806.
  • Vishwanathan, T. (2004). Music in South India: The Karṇāṭak Concert Tradition and Beyond : Experiencing Music, Expressing Culture. USA: Oxford University Press. ISBN 9780195145915. {{cite book}}: Unknown parameter |coauthors= ignored (|author= suggested) (help)

ಹೊರಗಿನ ಕೊಂಡಿಗಳು

[ಬದಲಾಯಿಸಿ]