ಉಳುವಾರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಳುವಾರು ಮನೆತನ ಕಾಲದ ದೃಷ್ಟಿಯಿಂದ ಉಳುವಾರು ಮನೆತನ ಮತ್ತು ಕುಂಚಡ್ಕ ಮನೆತನ ಸಮಕಾಲೀನವಾಗಿದ್ದು ಸುಮಾರು ೩೫೦ ವರ್ಷಗಳಿಂತ ಮೇಲ್ಪಟ್ಟ ಹಳೆಯ ಇತಿಹಾಸವನ್ನು ಹೊಂದಿದೆ. ಐಗೂರು ಸೀಮೆಯಿಂದ ವಲಸೆ ಬಂದ ಉಳುವಾರಿನ ಗೌಡ ಕುಟುಂಬ ಈಗಿನ ಅರಂತೋಡಿನ ಪಕ್ಕದ ಅರ್ತೋಟು ನಲ್ಲಿ ನೆಲೆಯಾಯಿತು. ಸಾಮಾನ್ಯ ಮುಳಿಮನೆಯಾಗಿದ್ದ ಮನೆಗೆ ೨೦೦ ವರ್ಷಗಳ ಹಿಂದೆ ಬೆಂಕಿ ಬಿದ್ದು ನಾಶವಾಯಿತು. ತರುವಾಯ ಎಂಟು ಸೂತ್ರದ ಮನೆಯನ್ನು ನಿರ್ಮಿಸಲಾಯಿತು. ಒಂದು ಪ್ರತೀತಿ ಪ್ರಕಾರ ತೊಡಿಕ್ಕಾನ ದೇವಸ್ಥಾನದ ಹೊರ PCಗೋಪುರಗಳ ನಿರ್ಮಾಣಕ್ಕೆ 'ಕುಟ್ಟಿ' ಹಾಕಿದ ದಿನವೇ ಉಳುವಾರಿನ ಈ ಎಂಟು ಸೂತ್ರದ ಮನೆಗೂ 'ಕುಟ್ಟಿ' ಹಾಕಲಾಯಿತು ಎನ್ನುತ್ತಾರೆ. ಉಳುವಾರಿಗೂ ತೊಡಿಕ್ಕಾನ ದೇವಸ್ಥಾನಕ್ಕೂ ಇದ್ದ ಸಂಬಂಧದ ಹಿನ್ನೆಲೆಯಲ್ಲಿ ಈ ಪ್ರತೀತಿ ಮಹತ್ವ ಪಡೆಯುತ್ತದೆ.

ಹಿನ್ನಲೆ[ಬದಲಾಯಿಸಿ]

ಈ ಮನೆತನದ ಮೂಲಪುರುಷ ತಿಮ್ಮಪ್ಪ ಎಂಬ ವ್ಯಕ್ತಿ. ಇಲ್ಲಿ ಬಲ್ಲಾಳಿದ್ದರು. ಇಲ್ಲಿ ಅಕ್ಕು ಬಲ್ಲಾಳ್ತಿಗೆ ತೊಡಿಕ್ಕಾನ ಪ್ರದೇಶದ ಅಧಿಕಾರ ಇತಹತು. ಈ ಬಲ್ಲಾಳ್ತಿಯಲ್ಲಿ ಅಧಿಕಾರಸ್ಠನಾಗಿ ಸೇರಿಕೊಂಡ ತಿಮ್ಮಪ್ಪ, ಮುಂದೆ ಸಂತಾನ ಹೀನೆಯಾಗಿ ಬಲ್ಲಾಳ್ತಿ ಸತ್ತಾಗ ಆ ಮನೆತನದ ಹಕ್ಕು ಬಾಧ್ಯತೆಗಳು ಉಳುವಾರು ಮನೆತನದ ಕೈಸೇರಿತು.[೧]

ಭೂಮಿಯ ಮಹತ್ವ[ಬದಲಾಯಿಸಿ]

ಉಳುವಾರು ಭೂ ಆಸ್ತಿ ಬಲ್ಲಾಳರಿಂದ ಬಂದದ್ದು ಎನ್ನುವುದಕ್ಕೆ ಉಲ್ಲಾಕುಳು ದೈವಗಳು ಹೇಳುವ 'ಬಲ್ಲಾಳ್ಡ್ರೆ ಪ್ರತಿ ಬಲ್ಲಾಳಾದ್ ಉಳುವಾರ್ದ ಕುಳೆ ಸೇರೊಂಡೊ' ಎಂಬ ನುಡಿಗಟ್ಟನ್ನು ಸಾಕ್ಷಿಯಾಗಿ ಕೊದುತ್ತಾರೆ. ಉಳುವಾರು ತರವಾಡು ಮನೆಯ ಆವರಣದಲ್ಲಿ ವಿಶೇಷವಾಗಿ 'ಮುನಿಸ್ವಾಮಿ' ಮಠ(ಗೊರವ) ಇದೆ. ಮನೆಯ ಆವರಣದಲ್ಲಿರುವ ಮುನಿಸ್ವಾಮಿ ಮಠಕ್ಕೆ ಸಂಬಂಧಿಸಿ, ಒಂದು ಕಿ.ಮೀ. ದೂರದಲ್ಲಿ 'ಕುಲ್ಚಾರು ಗುಹೆ' ಇದೆ. ಈ ಗುಹೆಯಲ್ಲಿ ತಪಸ್ಸು ಮಾಡಿಕೊಂಡಿದ್ದನೆಂದು ಹೇಳಲಾಗುತ್ತದೆ.ಒಂದು ಪ್ರತೀತಿ ಪ್ರಕಾರ 'ಹಿಂದೆ ಬ್ರಿಟಿಷರ ಕುಮ್ಮಕ್ಕಿನಿಂದ ಕೊಡಗಿನ ದೊಡ್ಡ ವೀರರಾಜ ಅನೇಕ ಬಾರಿ ದರೋಡೆ ಮಾಡಿಸಿರುವುದಕ್ಕೆ ಸಾಕ್ಷ್ಯಾಧಾರಗಳಿಗೆ ತನ್ನ ದರೋಡೆ ತಂಡಕ್ಕೆ ಆತ ತುರ್ಕರ ದಂಡು ಎಂಬ ಹೆಸರಿಟ್ಟು ಟಿಪ್ಪುವಿನ ಹೆಸರಿಗೆ ಕಳಂಕ ತರುವ ಮೂಲಕ ಬ್ರಿಟಿಷರಿಂದ ಪ್ರಯೋಜನ ಪಡೆಯುವ ಹುನ್ನಾರ ಮಾಡಿದ್ದನ್ನು.

ಪ್ರಾಣ ರಕ್ಷಣೆ[ಬದಲಾಯಿಸಿ]

ಉಳುವಾರು ಮನೆಗೆ ಲೂಟಿಗಾಗಿ ಬಂದಿದ್ದರಂತೆ ಆಗ ಮನೆಯಲ್ಲಿ ನೂರೊಂದು ತೊಟ್ಟಿಲುಗಳಿದ್ದವು. ದಂಗೆಕೋರರ ಸುಳಿವು ಸಿಕ್ಕ ಮನೆಯವರು,ಆ ತೊಟ್ಟಿಲ ಮಕ್ಕಳನ್ನು ಮತ್ತು ಒಂದು ಅಜ್ಜಿಯನ್ನು ಕೋಣೆಯೊಂದರಲ್ಲಿ ಕೂಡಿ ಬಿಟ್ಟು ಪಕ್ಕದಲ್ಲಿ ಇರುವ ಕುಲ್ಚಾರು ಗುಹೆಯಲ್ಲಿ ತಲೆಮರೆಸಿಕೊಂಡರು. ಮನೆಯಲ್ಲಿ ಇದ್ದ ಮಕ್ಕಳು ಮತ್ತು ಅಜ್ಜಿಯನ್ನು ಕಂಡು ಸಹಾನುಭೂತಿಯಿಂದ ಮನೆ ದೋಚುವ ಮತ್ತು ಬೆಂಕಿ ಹಚ್ಚುವ ಕೃತ್ಯವನ್ನು ಕೈಬಿಟ್ಟು ಹೋದರಂತೆ. ಇನ್ನೊಂದು ದಂತಕತೆ ಪ್ರಕಾರ ಮನೆತನದ ಪ್ರಕಾರ ಮನೆತನದ ನಂಬಿಕಸ್ಥ ದೈವ ವಿಷ್ಣುಮೂರ್ತಿಯೆ ಸ್ವತ: ದಂಗೆ ಕೋರನ್ನು ತಡೆಯಿತೆದೆಂದು ಹೇಳುತ್ತಾರೆ.

ಆಡಳಿತ[ಬದಲಾಯಿಸಿ]

ಸೀಮೆ ದೇವಸ್ಥಾನ ತೊಡಿಕಾನದ ಮುಕ್ತೇಶ್ವರಿಗೆ ಬಲ್ಲಾಳರ ತರುವಾಯ ಉಳುವಾರು ಮನೆತನಕ್ಕೆ ನಡೆದುಬಂದಿದೆ. ಸೀಮೆ ಗೌಡರ ಸ್ಥಾನಮಾನ, ಗ್ರಾಮ ಪಟೇಲತಿಕೆ, ಈ ಮನೆತನಕ್ಕೆ ಇತ್ತು. ಈ ಮನೆತನದ ಕೃಷ್ಣಪ್ಪ ಗೌಡರ ಕಾಲದಲ್ಲಿ, ಗ್ರಾಮ ಪಂಚಾಯತ್ ರಚನೆಯಾಗುದರೊಂದಿಗೆ ಪಟೇಲ ಸ್ಥಾನ ರದ್ದಾಯಿತು.ಬಲ್ಲಾಳರ ಕಾಲದಲ್ಲಿ ಊರಿನ ನ್ಯಾಯ ತೀರ್ಮಾನ ಬಂಟೋಡಿಚಾವಡಿಯಲ್ಲಿ ನಡೆಯುತ್ತಿತ್ತು. ಈ ನ್ಯಾಯ ತೀರ್ಮಾನ ಉಳುವಾರಿನ ಎಂಟು ಸೂತ್ರದ ಮನೆಯಲ್ಲಿ ಮಾತ್ರ ಕಂಡು ಬರುವ ನ್ಯಾಯ ಕಟ್ಟೆಯಲ್ಲಿ ನಡೆಯುತ್ತಿತ್ತು.ನ್ಯಾಯ ತೀರ್ಮಾನದಲ್ಲಿ ಉಳುವಾರಿನವರು ನಿಷ್ಪಕ್ಷಪಾತಿಗಳಾಗಿದ್ದರು.[೨]

ದೈವಾರಧನೆ[ಬದಲಾಯಿಸಿ]

"ಎರಡು ಗುತ್ತು ನೂದಾಳ್ ಸೀಮೆಡ್ ಉಳುವಾರ್ದ ಕುಳು ಬುದ್ಧಿ ವಂತೆರ್" ಎನ್ನುವ ಉಲ್ಲಾಕುಳೆ[೩] ಮದಿಪು ಈ ಮಾತನ್ನು ಪುಷ್ಟೀಕರಿಸುತ್ತದೆ. ಎಂಟು ಸೂತ್ರದ ಮಾಳಿಗೆಯ ಹುಲ್ಲುಮಾಡಿನ ಮನೆ ಸುಮಾರು ೨೦೦ ವರ್ಷಗಳಷ್ಟು ಹಳೆಯದಾದ ಮನೆ.ಆಡಳಿತಾತ್ಮಕ ಮತ್ತು ಧಾರ್ಮಿಕವಾಗಿ ಉಳುವಾರು ಮನೆತನ ತೊಡಿಕಾನ ಸೀಮೆಗೆ ಕೇಂದ್ರ ಸ್ಥಾನವಾಗಿತ್ತು. ಈ ಸ್ಥಾನವನ್ನು ಮತ್ತೆ ಕಂಡುಕೊಳ್ಳವ ಪ್ರಯತ್ನವಾಗಿ ಹಿಂದೆ ಎಂಟು ಸೂತ್ರದ ಮನೆಯಿದ್ದ ನಿವೇಶನದಲ್ಲಿಯೇ ಸಣ್ಣದಾದ ನಾಲ್ಕು ಸೂತ್ರದ ಹೊಸಮನೆಯನ್ನು ನಿರ್ಮಿಸಲಾಗಿದೆ. ಕೂಡುಕುಟುಂಬವಾಗಿದ್ದ, ಈ ಮನೆಯ ಸದಸ್ಯರು ಒಟ್ಟುಸೇರಿ ಹೊಸಮನೆಯನ್ನು ನಿರ್ಮಿಸಿದ್ಧಾರೆ. ಐತಿಹಾಸಿಕವಾಗಿ ಸುಳ್ಯ ಪರಿಸರದಲ್ಲಿ ಸಾಮಾಜಿಕ, ಧಾರ್ಮಿಕ, ಆಡಳಿತಾತ್ಮಕವಾಗಿ ಸ್ಥಾನ ಪಡೆದಿದ್ದ ಮನೆಯಾಗಿದೆ.[೪]


ಉಲ್ಲೇಖಗಳು[ಬದಲಾಯಿಸಿ]

  1. https://www.radiocity.in/radiocity-kannada-gold?gclid=EAIaIQobChMIuvrBtfaw4AIVTyUrCh0DfwX1EAMYAiAAEgJzA_D_BwE[ಶಾಶ್ವತವಾಗಿ ಮಡಿದ ಕೊಂಡಿ]
  2. http://shodhganga.inflibnet.ac.in/handle/10603/131921
  3. http://shodhganga.inflibnet.ac.in/handle/10603/131817
  4. ಪೂಕರೆ ಮತ್ತು ಜನಪದ ಲೇಖನಗಳು, ೨೦೦೪, ಪೂವಪ್ಪ ಕಣೀಯೂರು, ಪುಟ ಸಂಖ್ಯೆ;೨೮ ೩೦, ಪ್ರಕಾಶಕರು; ರಾಜ್ ಪ್ರಕಾಶನ ಮೈಸೂರು
"https://kn.wikipedia.org/w/index.php?title=ಉಳುವಾರು&oldid=1158773" ಇಂದ ಪಡೆಯಲ್ಪಟ್ಟಿದೆ