ಉತ್ತಮಾರ್ಥ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉತ್ತಮಾರ್ಥ[ಬದಲಾಯಿಸಿ]

ಒಂದು ಕಾಲದಲ್ಲಿ ನೀಚ ಅರ್ಥವಿದ್ದು[೧] ಕ್ರಮೇಣ ಅದು ಉತ್ತಮ ಅರ್ಥವನ್ನು ಪಡೆದಿದ್ದರೆ ಉತ್ತಮಾರ್ಥ[೨].[೩].ಭಾಷೆಯಲ್ಲಿ ನಡೆಯುವ ಅರ್ಥ ಮತ್ತು ಧ್ವನಿ ಬದಲಾವಣೆಯಿಂದ ರೂಢಿಯಲ್ಲಿರುವ, ನಿತ್ಯ ಬಳಸುತ್ತಿರುವ ಅನೇಕ ಶಬ್ದಗಳು ಹೊಸ- ಹೊಸ ರೂಪ ಪಡೆದುಕೊಂಡು ಬಳಕೆಗೊಳ್ಳಬಹುದು, ಇಲ್ಲವೇ ಶಬ್ದಗಳಲ್ಲಿ ಕೆಲವು ಉತ್ತಮ ಅರ್ಥದಲ್ಲಿ ವ್ಯತ್ಯಾಸವನ್ನು ಹೊಂದುವುದರ ಮೂಲಕ ಕನ್ನಡ ಭಾಷೆಯ ಶಬ್ದಗಳು ಕಾಲಕ್ರಮದಲ್ಲಿ ಬದಲಾಗುತ್ತಾ ಬಂದುದನ್ನು ಗುರುತಿಸುವೆವು. ಕನ್ನಡ ಭಾಷೆಯಲ್ಲಿ ಧ್ವನಿ ವ್ಯತ್ಯಾಸ ಹೊಂದಿದ ಕೆಲವು ಶಬ್ದಗಳನ್ನು ಉದಾಹರಿಸಬಹುದು.

ಉದಾಹರಣೆ[ಬದಲಾಯಿಸಿ]

  1. ಇಂಗ್ಲಿಷ್‍ನಲ್ಲಿ 'Knight' ಎಂದರೆ 'Sarvent' ಎಂಬ ಅರ್ಥವಿತ್ತು. ಈಗ ಅದು 'ಸರದಾರ' ಎಂಬ ಅರ್ಥ ಪಡೆದಿದೆ.
  2. ಇಂಗ್ಲಿಷ್‍ನಲ್ಲಿ 'Madam' ಎಂಬುದು 'ತಲೆಹಿಡುಕ' ಎನ್ನುವ ಅರ್ಥವನ್ನು ನೀಡುತ್ತಿತ್ತು. ಈಗ ಅದು 'ಸ್ತ್ರೀ ಗೌರವ ಸೂಚಕ' ಪದವಾಗಿದೆ.
  3. 'ಬಂದಿ' ಎಂದರೆ 'ಕಳ್ಳ', 'ಖೈದಿ' ಎನ್ನುವ ಅರ್ಥವನ್ನು ಪಡೆದಿತ್ತು ಆದರೆ ಈಗ 'ಸ್ವಾತಂತ್ರ್ಯ ಹೋರಾಟಗಾರ' ಎನ್ನುವ ಅರ್ಥ ಪಡೆದಿದೆ.
ಶಬ್ದ ಮೊದಲಿದ್ದ ಅರ್ಥ ಈಗಿನ ಅರ್ಥ
ಮರ್ಯಾದೆ ಗಡಿ, ಎಲ್ಲೆ ಗೌರವ
ಸಭಿಕ ಜೂಜುಗಾರ ಸಭೆಯಲ್ಲಿ ಉಪಸ್ಥಿತ[೪]
ದಿಗ್ಗಜ ಎಂಟು ದಿಕ್ಕುಗಳನ್ನು ಹೊತ್ತುನಿಂತ ಆನೆಗಳು ಆಸ್ಥಾನ ಪಂಡಿತ, ಪ್ರಕಾಂಡ ಪಾಂಡಿತ್ಯ ಹೊಂದಿದವ

ಹೆಚ್ಚಿನ ಮಾಹಿತಿಗೆ[ಬದಲಾಯಿಸಿ]

ಸಾಹಿತ್ಯ ಮತ್ತು ಸಾಧನೆ ಪುಸ್ತಕ ಓದಿ.

ಉಲ್ಲೇಖ[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2020-09-18. Retrieved 2018-11-13.
  2. https://books.google.co.in/books?id=W1mYAwAAQBAJ&pg=PT229&lpg=PT229&dq=%E0%B2%89%E0%B2%A4%E0%B3%8D%E0%B2%A4%E0%B2%AE%E0%B2%BE%E0%B2%B0%E0%B3%8D%E0%B2%A5&source=bl&ots=tF6JI-ueOY&sig=kjXcqnYdRMvyNy-ToBhQnUPU9Uc&hl=en&sa=X&ved=2ahUKEwj23uzQ0bzeAhVYfCsKHRC-A_wQ6AEwAnoECAcQAQ#v=onepage&q=%E0%B2%89%E0%B2%A4%E0%B3%8D%E0%B2%A4%E0%B2%AE%E0%B2%BE%E0%B2%B0%E0%B3%8D%E0%B2%A5&f=false
  3. ರಾಜಪ್ಪ ದಳವಾಯಿ (೧೯೯೬). ಕನ್ನಡ ಸಾಹಿತ್ಯ ಕೋಶ. ಬೆಂಗಳೂರು: ದಳವಾಯಿ ಪ್ರಕಾಶನ ಬೆಂಗಳೂರು. pp. ೪೩೭-೩೮.
  4. "ಆರ್ಕೈವ್ ನಕಲು". Archived from the original on 2020-09-18. Retrieved 2018-11-13.