ಆಲ್ಪ್ರೆಡ್ ವೆರ್ನೆರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಲ್ಪ್ರೆಡ್ ವೆರ್ನೆರ್
ಆಲ್ಪ್ರೆಡ್ ವೆರ್ನೆರ್
Born
ಆಲ್ಪ್ರೆಡ್ ವೆರ್ನೆರ್

1866 ಡಿಸೆಂಬರ್ 12
ಫ್ರಾನ್ಸ್
Nationalityಫ್ರಾನ್ಸ್

ಫ್ರಾನ್ಸಿನಲ್ಲಿ ಜನಿಸಿದ ಸ್ವಿಟ್ಝರ್ಲೆಂಡಿನ ರಸಾಯನವಿಜ್ಞಾನಿಯಾಗಿದ್ದ ಆಲ್ಪ್ರೆಡ್ ವೆರ್ನೆರ್ರವರು 1866ರ ಡಿಸೆಂಬರ್ 12ರಂದು ಅಲ್ಸೇಸ್ನ ಮುಲ್ಹೌಸ್ ನಲ್ಲಿ ಜನಿಸಿದರು. ವೆರ್ನೆರ್ರವರು 1890ರಲ್ಲಿ ತಮ್ಮ ಗುರು ಆರ್ಥರ್ ಹಂಟ್ಸ್ಝ್ರವರ (1857-1935) ಕೆಲಸ ಮಾಡುವ ಸಂದರ್ಭದಲ್ಲಿ ಕಆಕ್ಸೈಮ್ಸ್ಕಿಗಳ (oximes) ರಚನೆ ಮತ್ತು ನರಾಸಾಯನಿಕ (stereochemical) ಗುಣಸ್ವಭಾವಗಳನ್ನು ವಿವರಿಸಿದರು.[೧] ಆಕ್ಸೈಮ್ಸ್ಗಳೆಂದರೆ NOH ಗುಂಪಿನ ಕಾರ್ಬನಿಕ ಸಂಯುಕ್ತಗಳಾಗಿವೆ (organic compounds). ಈ ಸಂಯುಕ್ತಗಳು ಕಾರ್ಬನ್-ಕಾರ್ಬನ್ ದ್ವಿ-ಬಂಧಗಳಂತೆಯೇ (double bond) ಜ್ಯಾಮಿತೀಯ ಸಮಾಂಗತೆಯನ್ನು (geometrical isomerism) ಪ್ರದರ್ಶಿಸುತ್ತವೆ ಎಂಬುದಾಗಿ ಅವರು ತೋರಿಸಿಕೊಟ್ಟರು. ಹಾಗೆಯೇ ಅವರು ಸಹಯೋಜಕ ಸಂಯುಕ್ತಗಳಲ್ಲಿನ (coordination compounds) ಬಂಧಗಳ ಬಗ್ಗೆ ಸಿದ್ಧಾಂತಗಳನ್ನು ಮಂಡಿಸಿದರು. [ಸಹಯೋಜಕ ಸಂಯುಕ್ತಗಳೆಂದರೆ ಕೇಂದ್ರೀಯ ಪರಮಾಣುವೊಂದಿದ್ದು ಅದಕ್ಕೆ ಇತರ ಪರಮಾಣುಗಳು ಬಂಧಿತವಾಗಿರುವಂಥ ಅಥವಾ ಸಹಯೋಜಕವಾಗಿರುವಂಥ (ಅವುಗಳಿಗೆ ಕಲಿಗ್ಯಾಂಡ್ಕಿಗಳೆಂದು ಕರೆಯಲಾಗುತ್ತದೆ) ಸಂಯುಕ್ತವಾಗಿದೆ.] ಎಲೀನ್ ಡೈಯಾಮಿನ್ (Ethylene diamine) ಸಹಯೋಜಕ ಬಂಧಗಳ (coordinate bonds) ಜೋಡಿಯ ನಡುವಿನ ಸೇತುವೆಯಾಗಿ ವರ್ತಿಸುತ್ತದೆ ಎಂಬುದಾಗಿಯೂ ಅವರು ಕಂಡುಹಿಡಿದರು. ವೆರ್ನೆರ್ರವರ ಸಹಯೋಜಕ ಬಂಧಗಳ ಬಗ್ಗೆಯ ಸಂಶೋಧನೆಗಳಿಗೆ 1913ರ ರಸಾಯನವಿಜ್ಞಾನಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು.[೨] ವೆರ್ನೆರ್ರವರು 1919ರ ನವೆಂಬರ್ 15ರಂದು ಝೂರಿಚ್ನಲ್ಲಿ ನಿಧನರಾದರು.

ಉಲ್ಲೇಖಗಳು[ಬದಲಾಯಿಸಿ]