ಆಲಿವರ್ ಜೋಸೆಫ್ ಲಾಡ್ಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಲಿವರ್ ಜೋಸೆಫ್ ಲಾಡ್ಜ್
ಆಲಿವರ್ ಜೋಸೆಫ್ ಲಾಡ್ಜ್
ಜನನ
ಆಲಿವರ್ ಜೋಸೆಫ್ ಲಾಡ್ಜ್

೧೮೫೧ ಜೂನ್ ೧೨
ಬ್ರಿಟನ್
ರಾಷ್ಟ್ರೀಯತೆಬ್ರಿಟನ್

ಬ್ರಿಟನ್ನಿನ ಭೌತವಿಜ್ಞಾನಿಯಾಗಿದ್ದ ಆಲಿವರ್ ಜೋಸೆಫ್ ಲಾಡ್ಜ್‌ರವರು ೧೮೫೧ರ ಜೂನ್ ೧೨ರಂದು ಸ್ಟೆಫರ್ಡ್‌ಷೈರಿನ ಪೆಂಕ್‌ಹಲ್‌ನಲ್ಲಿ ಜನಿಸಿದರು. ಡೇನಿಯಲ್‌ರವರು (೧೭೯೦-೧೮೪೫) ೧೮೩೬ರಲ್ಲಿ ಕಂಡುಹಿಡಿದಿದ್ದ ‘ಡೇನಿಯಲ್ ವಿದ್ಯುತ್ಕೋಶ’ದ ಪರಿಷ್ಕೃತ ಮಾದರಿಯನ್ನು ವಿದ್ಯುತ್ಚಾಲಕ ಬಲದ (electromotive force) ಅಳತೆಯಲ್ಲಿ ಮಾನಕವಾಗಿ ಹೇಗೆ ಉಪಯೋಗಿಸಬಹುದೆಂದು ಲಾಡ್ಜ್‌ರವರು ತೋರಿಸಿಕೊಟ್ಟರು.[೧] ಲಾಡ್ಜ್‌ರವರು ವಿದ್ಯುದಯಸ್ಕಾಂತ ತರಂಗಗಳನ್ನು ಗುರುತಿಸುವ ವಿಧಾನಗಳನ್ನು ಕಂಡುಹಿಡಿದು, ನಂತರ ದೂರದಲ್ಲಿರುವ ಪ್ರೇಷಕದಿಂದ (transmitter) ಹೊರಹೊಮ್ಮಿದ ರೇಡಿಯೋ ತರಂಗಗಳನ್ನು ಗುರುತಿಸುವ ಸಾಮರ್ಥ್ಯವುಳ್ಳ ‘ಕೊಹೆರರ್’ (coherer) ಉಪಕರಣವನ್ನು ಸುಮಾರು ೧೮೮೮ರಲ್ಲಿ ಕಂಡುಹಿಡಿದರು.[೨] ಆದರೆ ಭಾರತದ ವಿಜ್ಞಾನಿ ಜಗದೀಶ್ ಚಂದ್ರ ಬೋಸರು (೧೮೫೮-೧೯೩೭) ೧೮೯೮ರಲ್ಲಿಯೇ ಅತ್ಯಂತ ಪರಿಪೂರ್ಣವಾದ ‘ಕೊಹೆರರ್’ನಂತಹ ಸಾಧನವನ್ನು ಕಂಡುಹಿಡಿದಿದ್ದರೂ ಅದಕ್ಕೆ ಅಂತರರಾಷ್ಟ್ರೀಂii ಮಾನ್ಯತೆ ಸಿಗದಿದ್ದದು ವಿಪರ್ಯಾಸದ ಸಂಗತಿಯಾಗಿದೆ. ಫ್ರಾನ್ಸಿನ ವಿಜ್ಞಾನಿ ಬ್ರಾನ್ಲಿಯವರು (೧೮೪೪-೧೯೪೦) ೧೮೯೦ರಲ್ಲಿ ಕಂಡುಹಿಡಿದ ‘ಕೊಹೆರರ್’ ಉಪಕರಣ ವಿಶ್ವಮಾನ್ಯತೆ ಪಡೆಯಿತು! ಈಥರ್ ವಿದ್ಯುದಯಸ್ಕಾಂತ ತರಂಗಗಳ ಚಲನೆಗೆ ಮಾಧ್ಯಮವಾಗಿದೆ ಎಂಬುದಾಗಿ ಹಿಂದಿನ ವಿಜ್ಞಾನಿಗಳು ಪ್ರತಿಪಾದಿಸಿದ್ದರು. ೧೮೯೩ರಲ್ಲಿ ಲಾಡ್ಜ್‌ರವರು ಈಥರ್ ಅಸ್ತಿತ್ವದಲ್ಲಿಯೇ ಇಲ್ಲ ಎಂಬುದಾಗಿ ರುಜುವಾತು ಮಾಡಿದರು. ಲಾಡ್ಜ್‌ರವರು ೧೯೪೦ರ ಆಗಸ್ಟ್ ೨೨ರಂದು ಸಾಲಿಸ್‌ಬರಿಯಲ್ಲಿ ನಿಧನರಾದರು.

ಉಲ್ಲೇಖಗಳು[ಬದಲಾಯಿಸಿ]