ಆತ್ಮಜ್ಞಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
  • ದ್ವೈತಮತದಲ್ಲಿ ಜೀವಾತ್ಮ ಪರಮಾತ್ಮರಿಗೆ ಭೇದವಿದೆ. ಜೀವ ಕರ್ಮಾನುಸಾರವಾಗಿ ದೇಹದಲ್ಲಿ ಸುಖದುಃಖಗಳನ್ನನುಭವಿಸಿ, ಸಂಸಾರಬಂಧನಕ್ಕೆ ಕಾರಣವಾದ ವಿದ್ಯೆಯಿಂದ ಮುಕ್ತನಾಗಿ, ಸ್ವಾಭಾವಿಕ ಜ್ಞಾನವನ್ನು ಪಡೆದಾಗ, ಮೋಕ್ಷಪದವಿ ಹಂತಗಳ ತನ್ನ ಸಾಧನೆ, ಅನುಷ್ಠಾನಗಳಿಗೆ ಅನುಸಾರವಾದ ಪ್ರಮಾಣದಲ್ಲಿ ಆನಂದವನ್ನು ಅನುಭವಿಸುತ್ತಾನೆ. ಜೀವ ಜೀವರುಗಳಿಗೆ ಸ್ವಭಾವತಃ ತಾರತಮ್ಯವಿರುವುದಲ್ಲದೆ, ಮೋಕ್ಷಾನುಭವದಲ್ಲೂ ತಾರತಮ್ಯವುಂಟು. ಈ ಮತದ ಪ್ರಕಾರ ಕೆಲವು ಜೀವಾತ್ಮರು ಮುಕ್ತಿಗೆ ಅನರ್ಹರು ಮತ್ತು ನಿತ್ಯಬದ್ಧರು, ನಿತ್ಯ ಸಂಸಾರಿಗಳು.
  • ಅದ್ವೈತ ಸಿದ್ದಾಂತದ ಪ್ರಕಾರ, ಆತ್ಮವು, ಜೀವಿಗಳ ಶರೀರವನ್ನು ಆವೃತವಾಗಿರುವ ಒಂದು ಅದೃಶ್ಯ ಶಕ್ತಿಯಾಗಿದೆ. ಇದನ್ನು ಬ್ರಹ್ಮನ್ ಶಬ್ದದ ಸಮಾನವಾಚಕವಾಗಿಯೂ ಪ್ರಯೋಗಿಸಲಾಗುತ್ತದೆ. ಆತ್ಮವು, ಒಂದು ಪ್ರಾಪಂಚಿಕ ತತ್ವವಾಗಿದ್ದು, ಇದು ಪ್ರಪಂಚದ ಸಕಲ ಜೀವಿಗಳಲ್ಲೂ ವ್ಯಾಪ್ತವಾಗಿರುತ್ತದೆ. ಆತ್ಮಕ್ಕೆ ಅಳಿವಿಲ್ಲ. ಶರೀರ ನಾಶವಾದರೂ ಅದರಲ್ಲಿರುವ ಆತ್ಮ ನಾಶವಾಗದು. ಆತ್ಮ ತತ್ವದ ಜ್ಞಾನದಿಂದ ಮನುಷ್ಯನಿಗೆ ಶಾರೀರಿಕ ಬಿಡುಗಡೆ ಸಿಗುತ್ತದೆ. ನಾವು ಶರೀರದೊಂದಿಗೆ ವ್ಯವಹರಿಸುವಾಗ 'ನಾನು' ಮತ್ತು 'ನನ್ನದು' ಎ೦ಬುದಾಗಿ ಎರಡು ರೀತಿಯಲ್ಲಿ ವ್ಯವಹರಿಸುತ್ತೇವೆ. ಉದಾ. 'ನನ್ನ ಕೈ', 'ನನ್ನ ಮನಸ್ಸು', 'ನನ್ನ ಬುದ್ಧಿ', ಇತ್ಯಾದಿ. ಇದು ದೇಹಕ್ಕೆ ಸಂಬಂಧಿಸಿದ ತಿಳುವಳಿಕೆ. 'ನನ್ನದು' ಎನ್ನುವುದು ದೇಹ, ಮನಸ್ಸು ಇವುಗಳಾದರೆ, 'ನಾನು' ಎಂಬುದೇ ಆತ್ಮ. ಇದು ನಿರ್ಗುಣ, ನಿರಾಕಾರ. ಎಲ್ಲ 'ನಿರ್‍' ಗಳೂ ಇದರ ಲಕ್ಷಣ. ಶರೀರಕ್ಕೆ ಸ್ವತಃ ಚೈತನ್ಯ ಇಲ್ಲ. ಶರೀರ,ಮನಸ್ಸು , ಬುದ್ಧಿಗಳು ಆತ್ಮದಿಂದಲೇ ಚೈತನ್ಯ ಪಡೆದು ಕೆಲಸ ನಿರ್ವಹಿಸು ತ್ತವೆ.ಹೇಗೆ ಚಂದ್ರನು ಸೂರ್ಯನಿಂದ ಬೆಳಗುತ್ತಾನೊ ಹಾಗೆ ಶರೀರ,ಮನಸ್ಸು,ಬುದ್ಧಿಗಳು ಆತ್ಮನಿಂದ ಬೆಳಗುತ್ತವೆ. ಪರಮಾತ್ಮ ಎಂಬುದು ಅನಂತವಾದ ಆಕಾಶ (ಸ್ಪೇಸ್) ಎಂದುಕೊಂಡರೆ, ಅಲ್ಲಿರುವ ಒಂದು ಪಾತ್ರೆಯೊಳಗಿನ ಆಕಾಶ ಅಥವಾ ಸ್ಪೇಸ್ ಅನ್ನು ಆತ್ಮಕ್ಕೆ ಸಮೀಕರಿಸಬಹುದು. ಅದ್ವೈತ ತತ್ವದ ಪ್ರಕಾರ ಆತ್ಮ - ಪರಮಾತ್ಮ ಒಂದೇ. ಸಾಗರ ಮತ್ತು ಅಲೆಗಳ ನಡುವಿನ ಸಂಬಂಧವಿದ್ದ೦ತೆ. ಇಡೀ ಸಾಗರವೇ ಪರಮಾತ್ಮವಾದರೆ ಅದರಲ್ಲಿ ಹುಟ್ಟಿ , ಸಾಯುವ ಅಲೆಗಳು ಜೀವಾತ್ಮಗಳು.