ಆಚಾರ್ಯ ಪ್ರಫುಲ್ಲಚಂದ್ರ ರಾಯ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ರಾಯ್ ಅವರು 2 ನೇ ಆಗಸ್ಟ್ 1861 ರಲ್ಲಿ ಬಂಗಾಳದ ಖುಲ್ನಾ ಜಿಲ್ಲೆಯಲ್ಲಿ ಜನಿಸಿದರು. ಅವರ ತಂದೆ ಹರೀಶಚಂದ್ರ ರಾಯ್ ಜಮೀನುದಾರರು ಮತ್ತು ಶ್ರೀಮಂತರಾಗಿದ್ದರು. 1870 ರಲ್ಲಿ ತಮ್ಮ ಮಕ್ಕಳ ವಿದ್ಯಾಭ್ಯಾಸದ ಕಾರಣ ಅವರು ಕಲ್ಕತ್ತೆಗೆ ವಲಸೆ ಹೋದರು. ಇಲ್ಲಿ ಪ್ರಫುಲ್ಲಚಂದ್ರರನ್ನು ಹರೇ ಶಾಲೆಗೆ ಸೇರಿಸಲಾಯಿತು. ರಾಯ್ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ ಇದ್ದುದರಿಂದ ಹಲವಾರು ಪುಸ್ತಕಗಳನ್ನು ಓದುವುದರಲ್ಲಿ ನಿರತರಾದರು. ಕೇವಲ ತಮ್ಮ 10 ನೇ ವಯಸ್ಸಿಗೆ ಅವರು ಲ್ಯಾಟಿನ್ ಮತ್ತು ಗ್ರೀಕ್ ಭಷಗಳನ್ನು ಕಲಿತರು. ಅವರು ಇಂಗ್ಲೆಂಡ್, ರೋಮ್ ಮತ್ತು ಸ್ಪೇನ್ ದೇಶಗಳ ಇತಿಹಾಸದ ಅಧ್ಯಯನ ಗೈದರು. 1874 ರಲ್ಲಿ ಅವರು ಅಲ್ಬರ್ಟ್ ಶಾಲೆಗೆ ಸೇರಿದರು.

1879 ರಲ್ಲಿ ಅವರು ಪ್ರವೇಶ ಪರಿಕ್ಷೆಯಲ್ಲಿ ಪಾಸಾಗಿ, ಮೆಟ್ರೋಪಾಲಿಟನ್ ಕಾಲೇಜಿಗೆ ಸೇರಿದರು. ಮೆಟ್ರೋಪಾಲಿಟನ್ ಕಾಲೇಜಿನಲ್ಲಿ ಅವರು ಶ್ರೇಷ್ಠ ಅಧ್ಯಾಪಕರಾದ ಸುರೇಂದ್ರನಾಥ ಬ್ಯಾನರ್ಜಿ ಮತ್ತು ಪ್ರಸನ್ನಕುಮಾರ ಲಾಹಿರಿ ಅವರ ಪ್ರಭಾವಕ್ಕೆ ಒಳಗಾದರು. ಅವರು ರಾಯ್ ಯವರಲ್ಲಿ ಸ್ವಾತಂತ್ರಕ್ಕಾಗಿ ಹೋರಾಡುವ ರಾಷ್ಟ್ರ ಭಕ್ತಿ ಮತ್ತು ಭಾರತೀಯರ ಏಳಿಗೆಯ ಬೀಜ ಬಿತ್ತಿದರು. ರಾಯ್ ಅವರು ಮೆಟ್ರೋಪಾಲಿಟನ್ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ, ಆಗಾಗ್ಗೆ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಅಲೆಗ್ಜ್ಅಂಡರ್ ಪೆಡ್ಲ್ಯಾರ್ ಅವರ ರಸಾಯನ ಶಾಸ್ತ್ರದ ತರಗತಿಗಳಿಗೆ ಹಾಜರಾಗುತ್ತಿದ್ದರು. ಪೆಡ್ಲ್ಯಾರ್ ರವರು ಪ್ರಭಾವಿ ಶಿಕ್ಷಕರಲ್ಲದೆ, ಕುಶಲ ಪ್ರಯೋಗ-ಪರಿಣತರೂ ಆಗಿದ್ದರು. ಪ್ರಫ್ಫುಲ್ಲಚಂದ್ರರಿಗೆ ಸಾಹಿತ್ಯದಲ್ಲಿ ಅಭಿರುಚಿ ಇದ್ದರೂ, ಪೆಡ್ಲ್ಯಾರರವರ ಉಪನ್ಯಾಸಗಳು, ರಾಯ್ ಅವರು ಉನ್ನತ ಶಿಕ್ಷಣದಲ್ಲಿ ರಸಾಯನ ಶಾಸ್ತ್ರ ಆರಿಸಿಕೊಳ್ಳುವಂತೆ ಪ್ರಭಾವ ಬೀರಿದವು. ಆದರೂ ರಾಯ್ ಅವರು ಲ್ಯಾಟಿನ್, ಫ್ರೆಂಚ್ ಮತ್ತು ಸಂಸ್ಕೃತ ಭಾಷಗಳನ್ನು ಮನೆಯಲ್ಲಿ ಕಲಿತರು. ಹೀಗಾಗಿ ಅವರ ಬಹುಭಾಷಾ ಪಂಡಿತರಾದರು.

ಪ್ರಫುಲ್ಲಚಂದ್ರರು 1882 ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿ ವೇತನ ಪಡೆದು ಇಂಗ್ಲೆಂಡಿಗೆ ತೆರಳಿದರು. ಇಂಗ್ಲೆಂಡಿನ ಎಡಿನ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಬಿ.ಎಸ.ಸಿ. ತರಗತಿಗಳಿಗೆ ಸೇರಿದರು. ವಿಶ್ವವಿದ್ಯಾಲಯದಲ್ಲಿ ರಸಾಯನ ಶಾಸ್ತ್ರದ ಉಪನ್ಯಾಸಕರಾದ ಕ್ರುಮ್ ಬ್ರೌನ್ ಅವರಿಂದ ಅತ್ಯಂತ ಪ್ರಭಾವಿತರಾದರು. ರಸಾಯನ ಶಾಸ್ತ್ರ ಅವರ ಪ್ರಿಯ ವಿಷಯವಾಯಿತು. ರಾಯ್ ಅವರು 1885 ರಲ್ಲಿ ವಿಜ್ಞಾನ ಪದವಿ ಪಡೆದು, ಸಂಶೋಧನೆಗೆ ಸೇರಿಕೊಂಡು, 1887 ರಲ್ಲಿ ತಮ್ಮ 27 ನೇ ವಯಸ್ಸಿಗೆ ಡಾಕ್ಟರೇಟ್ ಪದವಿಯನ್ನು ಸಂಪಾದಿಸಿದರು. 1888 ರಲ್ಲಿ ಅವರು ಸ್ವದೇಶಕ್ಕೆ ಮರಳಿದರು.

1889 ರಲ್ಲಿ ಪ್ರಫುಲ್ಲಚಂದ್ರರು ಕಲ್ಕತ್ತೆಯ ಪ್ರಸಿಡೆನ್ಸಿ ಕಾಲೇಜಿನಲ್ಲಿ ಸಹಾಯಕ ಉಪನ್ಯಾಸಕರಾಗಿ ನೇಮಕ ಗೊಂಡರು. ಬೇಗನೆ ಅವರು ಪ್ರಭಾವಿ ಮತ್ತು ಹುರಿದುಂಬಿಸುವ ಗುರುಗಳಾಗಿ ಖ್ಯಾತರಾದರು. ಅವರ ಉಪನ್ಯಾಸಗಳು ಚುಟುಕು ಮತ್ತು ಹರ್ಷದ ನಗುವಿನಿಂದ ತುಂಬಿರುತ್ತಿದ್ದವು. ಅವರು ರವೀಂದ್ರನಾಥರ ಪದ್ಯಗಳಿಂದ ಮತ್ತು ಅದಿಕಾಲದಲ್ಲಿ ನಾಗಾರ್ಜುನ ಬರೆದ, ರಸರತ್ನಾಕರದ ಉಕ್ತಿಗಳಿಂದ ವಿದ್ಯಾರ್ಥಿಗಳ ನಮರಂಜನೆ ಮಾಡುತ್ತಿದ್ದರು. ಎಲುಬುಗಳು ಸುಟ್ಟಾಗ ಶುದ್ಧ ಕ್ಯಾಲ್ಸಿಯಂ ಫಾಸ್ಫೇಟ್ ಆಗಿ ರೂಪಾಂತರ ವಾಗುವುದೆಂದು ತೋರಿಸಲು, ತರಗತಿಯಲ್ಲಿ ಎಲುಬು ಸುಟ್ಟ ಬೂದಿಯನ್ನು ತಮ್ಮ ಬಾಯಿಗೆ ಹಾಕಿಕೊಂಡು ತೋರಿಸುವರು. ಔದ್ಯೋಗೀಕರಣದಿಂದಲೇ ರಾಷ್ಟ್ರ ನಿರ್ಮಾಣ ಸಾದ್ಯ ಎಂದು ಪದೇ ಪದೇ ಹೇಳುತ್ತಿದ್ದರು. ಶಾಲೆಗಳಲ್ಲಿ ಮಾತೃಭಾಶೆಯಲ್ಲಿಯೇ ಕಲಿಯಬೇಕೆಂದು ನುಡಿಯುವರು. ಅದಕ್ಕಾಗಿ ಬೆಂಗಾಲಿಯಲ್ಲಿ ವಿಜ್ಞಾನ ಪಠ್ಯಸಾಹಿತ್ಯ ರಚಿಸಲಾರಿಂಭಿಸಿದರು. ಅವರು ಆಗಾಗ್ಗೆ ಸೈಬೀರಿಯಾದ ವಿಖ್ಯಾತ ವಿಜ್ಞಾನಿ ಮೆಂಡೆಲೀವರ ಕಥೆ ಹೇಳುತ್ತಿದ್ದರು. ಮೆಂಡೆಲೀವರು ಮೊದಲಬಾರಿಗೆ ಧಾತುಗಳ ಆವರ್ತಕ ಕೋಷ್ಟಕವನ್ನು ನಿರ್ಮಿಸಿದರು. ಮತ್ತು ತಮ್ಮ ತತ್ವಗಳನ್ನು ರಸಿಯನ್ ಭಾಷೆಯಲ್ಲಿ ಬರೆದಿದ್ದರು.

ರಾಯ್ ಅವರು ಔಷಧಗಳನ್ನು ಭಾರತದಲ್ಲಿಯೇ ತಯ್ಯಾರಿಸಬೇಕೆಂದು ತೀರ್ಮಾನಿಸಿದರು . ಇದನ್ನು ಬೇಗನೆ ಆರಂಭಿಸಬೇಕೆಂದು ನಿರ್ಧರಿಸಿದರು. ರಾಯ್ ಅವರು ಶ್ರೀಮಂತರಾಗಿರಲಿಲ್ಲ. ಅವರು ಕೆಲವು ರಾಸಾಯನಗಳನ್ನು ಮನೆಯಲ್ಲಿಯೇ ತಯ್ಯಾರಿಸಿದರು. ಅವರ ಕೆಲಸವೂ ಅತಿ ರಭಸದಿಂದ ಸಾಗಿತು ಮತ್ತು ಅದಕ್ಕಾಗಿ ಒಂದು ಪ್ರತ್ತೇಕ ಕಂಪೆನಿಯನ್ನೇ ಆರಂಭಿಸಬೇಕಾಯಿತು. ಆದರೆ ಅದಕ್ಕೆ ರೂ 800ಗಳ ಹಣಕಾಸಿನ ನೆರವು ಬೇಕಾಗಿತ್ತು. ಆದರೆ ಇಷ್ಟು ಹಣವನ್ನು ಸಂಗ್ರಹಿಸಲು ಬಲ ಕಷ್ಟ ಪಡಬೇಕಾಯಿತು. ಇಷ್ಟೆಲ್ಲ ತೊಂದರೆಗಳಿದ್ದರೂ, ಅವರು ದಿ ಬೆಂಗಾಲ್ ಕೆಮಿಕಲ್ ಐಂಡ್ ಫಾರ್ಮಸೆಟಿಕಲ್ ವರ್ಕ್ಸ್ ಎನ್ನುವ ಕಂಪನಿಯನ್ನು ಸ್ಥಾಪಿಸಿದರು. ಈ ಹೊಸ ಫ್ಯಾಕ್ಟರಿಯನ್ನು ಧೈರ್ಯವಾಗಿ ಮುಂದುವರಿಸಿದರು. ಆರಂಭದಲ್ಲಿ ಇಲ್ಲಿ ತಯ್ಯಾರಿಸಿದ ರಾಸಾಯನಗಳನ್ನು ಮಾರಾಟ ಮಾಡುವುದು ಕಷ್ಟಕರವಾಗಿತ್ತು. ಅವು ಆಮುದು ಮಾಡಿಕೊಂಡ ರಸಾಯನಗಳೊಂದಿಗೆ ಸ್ಪರ್ಧಿಸಲು ಸಾಧ್ಯವಾಗಲಿಲ್ಲ. ಆದರೆ ಡಾಕ್ಟರ್ ಅಮೂಲ್ಯ ಚರಣ ಭೋಸ್ ರಂತಹ ಕೆಲವು ಗೆಳೆಯರು ಇವರ ಸಾಹಸವನ್ನು ಎತ್ತಿ ಹಿಡಿದರು. ಡಾಕ್ಟರ್ ಭೋಸರು ವೈದ್ಯಕೀಯ ಪ್ರಾಕ್ಟಿಷನರ್ ಆಗಿದ್ದರು. ಮತ್ತು ಅವರು ಹಲವಾರು ವೈದ್ಯರ ಸಹಾಯ-ಹಸ್ತ ನೀಡಿದರು. ಇವರೆಲ್ಲ ಹೊಸದಾಗಿ ಭಾರತೀಯ ಕಂಪನಿ ತಯ್ಯಾರಿಸಿದ ರಾಸಾಯನಗಳನ್ನು ಬಳಸಲು ಆರಂಭಿಸಿದರು. ಹಲವಾರು ರಸಾಯನ ಪದವೀಧರರು ಈ ಹೊಸ ಕಂಪನಿಗೆ ಕೆಲಸ ಮಾಡಲು ಸೇರಿಕೊಂಡರು. ಮತ್ತು ಸ್ವದೇಶಿ ಕಂಪೆನಿಯ ಅಭಿವೃದ್ದಿಗಾಗಿ ಕಠಿಣ ಕೆಲಸ ಮಾಡಿದರು. ಬಂಗಾಲ ಕೆಮಿಕಲ್ಸ್ ಪ್ರಸಿದ್ಧ ಫ್ಯಾಕ್ಟರಿ ಆಯಿತು.

ಭಾರತೀಯ ಸ್ವದೇಶಿಯ ಉದ್ಯೋಗಕ್ಕೆ ಪ್ರಫುಲ್ಲಚಂದ್ರರ ಕೊಡುಗೆ ಇನ್ನು ಹೆಚ್ಚಿತು. ಪ್ರತ್ಯಕ್ಷೆಯೋ ಅಪ್ರತ್ಯಕ್ಷೆಯೋ ಅವರು ಹಲವಾರು ಫ್ಯಾಕ್ಟಾರಿಗಳನ್ನು ಆರಂಭಿಸಲು ಸಹಾಯಕರಾದರು. ಬಟ್ಟೆ ಗಿರಣಿ, ಸಾಬೂನು ತಯ್ಯಾರಿಕೆ, ಸಕ್ಕರೆ ಕಾರ್ಖಾನೆ, ರಸಾಯನ ಉತ್ಪಾದನೆ, ಸೇರ್ಯಾಮಿಕ್ ಫ್ಯಾಕ್ಟಾರಿ ಮತ್ತು ಪುಸ್ತಕ ಮುದ್ರಣ ಮತ್ತು ಬಿಡುಗಡೆ, ಅದಿಗಳನ್ನು ಅವರ ಕ್ರಿಯಾತ್ಮಕ ಸಹಕಾರದಿಂದ ನಿರ್ಮಾಣಗೊಂಡವು. ಪರಕೀಯರ ಆಳ್ವಿಕೆಯ ಕಾಲದಲ್ಲಿ ಅವರು ದೇಶದ ಔದ್ಯೋಗೀಕರಣದಲಿ ಸಹಾಯಕ ಶಕ್ತಿಯಾಗಿ ನಿಂತರು. ಇದೇ ಸಮಯಕ್ಕೆ ಅವರು ತಮ್ಮ ಪ್ರೆಸಿಡೆನ್ಸಿ ಕಾಲೇಜಿನ ಪ್ರಯೋಗ ಶಾಲೆಯಲ್ಲಿ ಸಂಶೋಧನೆಯಲ್ಲಿ ನಿರತರಾಗಿರುತ್ತಿದ್ದರು.

ಪಾದರಸದ ನೈಟ್ರೈಟ್ ಹರಳುಗಳ  ಪ್ರಕಟಣೆ, ಅವರಿಗೆ ಜಗತ್ತಿನಾದ್ದೆಂತ ಕೀರ್ತಿ ತಂದಿತು. ಅವರು ತಮ್ಮ ಪ್ರಯೋಗಶಾಲೆಯಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಸಂಶೋದನೆಯಲ್ಲಿ ದಾರಿದೀಪವಾದರು. ಅಂತರರಾಷ್ಟ್ರೀಯ ಪ್ರಮುಖ ವಿಜ್ಞಾನಿಕ ನಿಯತಕಾಲಿಕಗಳು, ಇವರ ಸಂಶೋಧನಗಳನ್ನು ಪ್ರಕಟಿಸಿದವು. ಆರಂಭದಿಂದಲೂ ಪ್ರಫುಲ್ಲಚಂದ್ರರು ಹಿಂದಿನ ಭಾರತೀಯ ರಸಾಯನ ವಿಜ್ಞಾನಿಗಳ ಕೆಲಸದಲ್ಲಿ ಅಭಿರುಚಿ ಉಳ್ಳವರಾಗಿದ್ದರು. ಫ್ರಂಚ್ ವಿಜ್ಞಾನಿ ಬೆರ್ತಲಾಟ್ ಅವರ  ಪ್ರಸಿದ್ಧ ಪುಸ್ತಕ, ಗ್ರೀಕ್ ಆಲ್ಕೆಮಿ  ಓದಿದಮೇಲೆ, ಅವರ ಕುತೂಹಲ  ಹಿಂದಿನ ಭಾರತೀಯ ರಸಾಯನ ಪಂಡಿತರ ಕಡೆಗೆ ಹರಿಯಿತು. ಅವರು ಭಾರತದ ಹಿಂದಿನ ಕಾಲದ ಸಂಸ್ಕೃತ, ಪಾಳಿ, ಬೆಂಗಾಲಿಯಂತಹ, ಹಲವಾರು ಪುಸ್ತಕಗಳನ್ನು ಓದಲು ಆರಂಭಿಸಿದರು. ಅವರು ಪ್ರಸಿದ್ದ ಸಂಸ್ಕೃತ ಕೃತಿಯಾದ ರಸೇಂದ್ರಸಾರ-ಸಂಗ್ರಹದ ಮೇಲೆ ಒಂದು ಲೇಖನ ಬರೆದು ಬೇರ್ತ್ಲ್ಯಾಟ್ ರಿಗೆ ಕಳುಹಿಸಿದರು.

ಆ ಫ್ರೆಂಚ್ ವಿಜ್ಞಾನಿ ಅದನ್ನು ಒಳ್ಳೆಯ ಅಭಿರುಚಿಯ ಲೇಖನವೆಂದು ಹೊಗಳಿ ಪ್ರಕಟಿಸಿದರು. ಅವರು ರಾಯ್ ಅವರಿಗೆ ಅದಿಕಾಲದ ಹಿಂದೂ ರಸಾಯನ ಶಾಸ್ತ್ರದ ಮೇಲೆ ತಮ್ಮ ಸಂಶೋಧನೆ ಮುಂದುವರಿಸಿ, ಎಂದು ಬರೆದರು. ನಂತರ ಪ್ರಫ್ಫುಲ್ಲಚಂದ್ರರು ಹಲವಾರು ವರುಷಗಳ ಅಧ್ಯಯನ ಗೈದು ತಮ್ಮ ಪ್ರಸಿದ್ಧ ಪುಸ್ತಕ, "ಹಿಂದೂ ರಸಾಯನ ಶಾಸ್ತ್ರದ ಇತಿಹಾಸ" ಎಂಬ ತೃತಿಯನ್ನು ಬಿಡುಗಡೆ ಮಾಡಿದರು. ಅದು ಜಾಗತಿಕ ಮಟ್ಟದಲ್ಲಿ ಪ್ರಸಿದ್ದಿಗೆ ಪಾತ್ರವಾಯಿತು. ಅದರಲ್ಲಿ ಅತಿ ಹಿಂದಿನ ಕಾಲದಿಂದಲೇ ಹಿಂದುಗಳಿಗೆ ಉಕ್ಕು ತಯ್ಯಾರಿಸುವ , ಭಟ್ಟಿ ಇಳಿಸುವ, ಲವಣಗಳ, ಪಾದರಸದ ಸಲ್ಫಾಯ್ಡ್, ಅದಿಗಳ ತಿಳುವಳಿಕೆ ಇತ್ತು ಎಂಬ ಕುತೂಹಕರಿ ಮಾಹಿತಿ ಇತ್ತು.

1904 ರಲ್ಲಿ ಪ್ರಫುಲ್ಲಚಂದ್ರರು ಹೆಚ್ಚಿನ ಅಧ್ಯಯನಕ್ಕಾಗಿ ಯುರೋಪದ ಪ್ರವಾಸ ಮಾಡಿ ಹಲವಾರು ಪ್ರಸಿದ್ಧ ರಸಾಯನ ಪ್ರಯೋಗಾಲಯಗಳನ್ನು ಸಂದರ್ಶಿಸಿದರು. ರಾಯ್ ಅವರನ್ನುಇಂಗ್ಲೆಡ್, ಜರ್ಮನಿ, ಫ್ರಾನ್ಸ್, ಮತ್ತು ಅನ್ಯ ಯುರೋಪದ ರಾಷ್ಟ್ರಗಳಲ್ಲಿ,  ವಿಶ್ವವಿದ್ಯಾಲಯಗಳ  ವಿಜ್ಞಾನಿಗಳಿಂದ ಮತ್ತು ಸಂಶೋಧನಾ ಕೇಂದ್ರಗಳಿಂದ ಸ್ವಾಗತಿಸಲಾಯಿತು. ಅಲ್ಲಿ ಅವರೊಂದಿಗಿನ ಉಪಯುಕ್ತ ಚರ್ಚೆಯಿಂದ  ಮಾಹಿತಿ ವಿನಿಮಯವಾಯಿತು. ಅವರು ರಾಯ್ ಅವರ ಪ್ರಸಿದ್ಧ ಪಾದರಸದ ನೈಟ್ರೈಟ್, ಅಮೋನಿಯಂ ನೈಟ್ರೈಟ್ ಹರಳುಗಳಂತಹ ಕೆಲಸಕ್ಕಾಗಿ ಹೊಗಳಿದರು. ಕೆಲವು ವಿಶ್ವವಿದ್ಯಾಲಯಗಳು ಅವರನ್ನು ಆನರರಿ ಡಾಕ್ಟರೇಟ್ ಪದವಿಯಿಂದ ಗೌರವಿಸಿದವು. ಅವರು ಪ್ರಸಿದ್ಧ ವಿಜ್ಞಾನಿಗಳಾದ ವಿಲಿಯಂ ರಾಮಸೇ, ಜೇಮ್ಸ್ ಡೇವರ್, ಪರ್ಕಿನ್, ವಾಂಟ್ ಹೊಫ್, ಮತ್ತು ಬೇರ್ತ್ಲ್ಯಾಟ್ ರೊಂದಿಗೆ ಸುಪರಿಚಿತರಾದರು.

1912 ರಲ್ಲಿ ಪ್ರಫುಲ್ಲಚಂದ್ರರು, ಬ್ರಿಟಿಷ್ ಸಾಮ್ರಾಜ್ಯದ ವಿಶ್ವವಿದ್ಯಾಲಯಗಳ ಸಭೆಯಲ್ಲಿ, ಕಲ್ಕತ್ತಾ ವಿಶ್ವವಿದ್ಯಾಲಯದ ಪರವಾಗಿ ಭಾಗವಹಿಸಲು, ಪುನಃ ಲಂಡನ್ ನಗರವನ್ನು ಭೇಟಿಕೊಟ್ಟರು. ವಿಶ್ವವಿದ್ಯಾಲಯಗಳ ಸಭೆಯಲ್ಲಿ ಸುದೀರ್ಘ ಮಾತನಾಡಿದರಲ್ಲದೆ ಲಂಡನ್ ರಸಾಯನ ಸಂಸ್ಥೆಯಲ್ಲಿ ಕೂಡ ಭಾಷಣಮಾಡಿದರು. ಅವರ ರಸಾಯನ ಶಾಸ್ತ್ರದ ಕೊಡುಗೆಗೆ ಸಅರ್ ವಿಲಿಯಮ್ ರಾಮಸೇಯವರು ಅಭಿನಂದಿಸಿದರು. ಈ ಸಂಧರ್ಭದಲ್ಲಿ ಮಾತನಾಡುತ್ತಾ " ಯುರೋಪಿಯನ್ನರಿಗೆ ಬಟ್ಟೆ ತಯ್ಯಾರಿಸುವ ವಿಷಯ ತಿಳಿಯದಕ್ಕಿಂತ ಮೊದಲೇ ಮತ್ತು ಅವರು ಪ್ರಾಣಿಗಳ ಚರ್ಮ ತೊಟ್ಟು ಕಾಡಿನಲ್ಲಿ ಅಡ್ಡಾಡುವಾಗ, ಭಾರತೀಯ ವಿಜ್ಞಾನಿಗಳು ಭವ್ಯವಾದ ರಸಾಯನಗಳ ಉತ್ಪಾದನೆ ಮಾಡುತ್ತಿದ್ದರು" ಎಂದರು.

1916 ರಲ್ಲಿ ರಾಯ್ ಅವರು ಪ್ರಸಿಡೆನ್ಸಿ ಕಾಲೇಜಿನಿಂದ ನಿವೃತ್ತರಾದರು. ಕಲ್ಕತ್ತ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಸಅರ್ ಅಶುತೋಷ್ ಮುಖರ್ಜಿ, ರಾಯ್ ಅವರನ್ನು ವಿಶ್ವವಿದ್ಯಾಲಯದ ವಿಜ್ಞಾನ ಕಾಲೇಜಿನಲ್ಲಿ ರಾಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿ ನೇಮಿಸಿದರು. ವಿಶ್ವವಿದ್ಯಾಲಯದ ವಿಜ್ಞಾನ ಕಾಲೇಜು ಹೊಸದಾಗಿ ಅದಾಗಲೇ ಆರಂಭ ಗೊಂಡಿತ್ತು. ಇಲ್ಲಿ ಪ್ರಫುಲ್ಲಚಂದ್ರರು ಹಲವಾರು ಯೋಗ್ಯ ವಿದ್ಯಾರ್ಥಿಗಳನ್ನು ಸಂಶೋಧನೆಯಲ್ಲಿ ತರಬೇತಿ ನೀಡಿದರು ಮತ್ತು ಅವರೊಂದಿಗೆ ಪ್ರಸಿದ್ಧ ರಾಸಾಯನಗಳನ್ನು ಕಂಡುಹಿಡಿದರು.

ಪ್ರಯೋಗಾಲಯದಲ್ಲಿ ಸಾಧನಗಳ ಕೊರತೆ ಇತ್ತು. ಉಪಕರಣಗಳ ಸೌಲಭ್ಯ ಇಲ್ಲದ್ದರಿಂದ ಹೆಚ್ಚಿನ ಸಂಶೋಧನೆ ಕೆಲಸ ಮಾಡಲು ತೊಂದರೆಯಾಗುತ್ತಿತ್ತು. ಕಾಲೇಜಿನ ಕಾನೂನಿನ ಪ್ರಕಾರ ಎಲ್ಲಾ ಉಪನ್ಯಾಸಕರು ಭಾರತೀಯರೇ ಆಗಿರಬೇಕಿತ್ತು. ಬಹುಶಃ ಈ ಕಾರಣಕ್ಕಾಗಿ ಅಂದಿನ ಬ್ರಿಟಿಷ್ ಸರಕಾರ, ಈ ಕಾಲೇಜಿಗೆ ಹೆಚ್ಚಿನ ಆರ್ಥಿಕ ಸಹಾಯ ಒದಗಿಸಲಿಲ್ಲ. ಆದರೂ ಇದ್ದ ಸವಲತ್ತುಗಳನ್ನು ಬಳಸಿಕೊಂಡು, ರಾಯ್ ಅವರು ಮತ್ತು ಅವರ ವಿದ್ಯಾರ್ಥಿಗಳು ಗಣನೀಯವಾದ ಕೆಲಸ ಮಾಡಿದರು. ಬೇಗನೆ ಕಾಲೇಜು ಉತ್ತಮವಾದ ಪ್ರಸಿದ್ದಿ ಗಳಿಸಿತು. ಪ್ರಫುಲ್ಲಚಂದ್ರರು ಸತತವಾಗ 20 ವರುಷಗಳ ಕಾಲ ಈ ಕಾಲೇಜಿನಲ್ಲಿ ತಮ್ಮ ಸೇವೆ ಸಲ್ಲಿಸಿದರು. ಅವರು ಕೊನೆಯ ವರೆಗೆ ಆಜನ್ಮ ಬ್ರಹ್ಮಚಾರಿಯಾಗಿಯೇ ಉಳಿದರು. ಈ 20 ವರುಷ, ಅವರು ಕಾಲೇಜಿನ ಮೊದಲ ಮಹಡಿಯ ಒಂದು ಸಾಧಾರಣ ಕೋಣೆಯಲ್ಲಿ ಜೀವಿಸಿದರು. ಅವರ ಕೆಲವು ದುಡ್ಡಿಲ್ಲದ ಬಡ ವಿಧ್ಯರ್ಥಿಗಳು, ಬೇರೆಕಡೆಗೆ ಇರಲು ಸಾಧ್ಯವಾಗದಿರುವಾಗ, ಇವರ ಕೋಣೆಯನ್ನೇ ಹಂಚಿಕೊಂಡು ಇರುತ್ತಿದ್ದರು.1936 ರಲ್ಲಿ ಅವರ 75 ವರುಷ ವಯಸ್ಸಿನಲ್ಲಿ ರಾಯ್ ಯವರು ಉಪನ್ಯಾಸಕ ವೃತ್ತಿಯಿಂದ ಬಿಡುಗಡೆಯಾದರು.

1921 ರಲ್ಲಿ ಅವರ 60 ವರುಷ ವಯಸ್ಸಿಗೆ, ಅವರು ತಮ್ಮ ಪಗಾರದ ಎಲ್ಲಾ ಹಣವನ್ನು ಮುಂಗಡವಾಗಿಯೇ ವಿಶ್ವವಿದ್ಯಾಲಯದ ರಾಸಾಯನ ವಿಭಾಗದ ಅಭಿವೃದ್ದಿಗಾಗಿ ಮತ್ತು ಎರಡು ರಿಸರ್ಚ್ ಫೆಲೋಶಿಪ್ ಹುಟ್ಟು ಹಾಕಲು ದೇಣಿಗೆಯಾಗಿ ನೀಡಿದರು. ಇದಲ್ಲದೆ, ಅವರು ಹತ್ತು ಸಾವಿರ ರೂಪಾಯಿಗಳನ್ನು ಪ್ರಸಿದ್ದ್ ಭಾರತೀಯ ರಸಾಯನ ಶಾಸ್ತ್ರಜ್ಞ ನಾಗಾರ್ಜುನ ಅವರ ಹೆಸರಲ್ಲಿ, ರಾಸಾಯನ ಶಾಸ್ತ್ರದ ವಾರ್ಸಿಕ ಸಂಶೋಧನೆಯ ಪಾರಿತೋಷಕಕ್ಕಾಗಿ ಕೊಟ್ಟರು. ಮತ್ತು ಹತ್ತು ಸಾವಿರ ರೂಪಾಯಿಗಳನ್ನು ಸಅರ್ ಅಸಿತೋಷ್ ಮುಖರ್ಜಿ ಹೆಸರಿನಲ್ಲಿ  ಜೀವಶಾಸ್ತ್ರದಲ್ಲಿ ಸಂಶೋಧನಾ ಬಹುಮಾನಕ್ಕಾಗಿ ಕೊಟ್ಟರು. ಅವರ ಶ್ರೇಷ್ಠ ಕೆಲಸ ಮನಗಂಡು, ಅವರನ್ನು ಭಾರತೀಯ ವಿಜ್ಞಾನ ಸಂಸ್ಥೆಯ ಅಧ್ಯಕ್ಷರಾಗಿ ಹಾಗು ಭಾರತೀಯ ರಾಸಾಯನ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಮಾಡಿದರು. ಹಲವಾರು ದೇಶಿಯ ಹಾಗು ವಿದೇಶಿಯ ವಿಶ್ವವದ್ಯಾಲಯಗಳು ಅವರನ್ನು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದವು.

ಪ್ರಫುಲ್ಲಚಂದ್ರರು ರಾಷ್ಟ್ರೀಯ ವಿದ್ಯಾ ಕೌನ್ಸಿಲ್ ನ ಅಧ್ಯಕ್ಷರಾಗಿದ್ದರು. ಕೇವಲ  ವಿಜ್ಞಾನದ, ಬಿಎಸ್.ಸಿ. ಅಥವಾ ಎಂ.ಎಸ.ಸಿ. ಡಿಗ್ರೀ ಪಡೆದುಕೊಂಡರೆ ಸಾಲದು, ಎಂದು ಅವರು ನಂಬಿದರು. ಬದಲಿಗೆ ವಿದ್ಯಾರ್ಥಿಗಳು ನಿಜವಾದ ಜ್ಞಾನ ಪಡೆಯಬೇಕು. ಅವರ ಆಯ್ಕೆಯಲ್ಲಿ, ಸರಕಾರಿ ನೌಕರಿಗಾಗಿ ಪದವಿ ಗಳಿಸುವುದು ವ್ಯರ್ಥ. ವಿದ್ಯಾರ್ಥಿಗಳು ತಾಂತ್ರಿಕ ವಿದ್ಯಪಡೆದು ತಮ್ಮದೇ ಆದ ವ್ಯವಹಾರದಲ್ಲಿ ತೊಡಗಿಸಿಕೊಳ್ಳಬೇಕು. ತರುಣರು ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು.

ಪ್ರಫುಲ್ಲಚಂದ್ರರು ತಮ್ಮ ವಿದ್ಯಾರ್ಥಿಗಳತ್ತ ಹೆಚ್ಚಿನ ಪ್ರೀತಿಯುಳ್ಳವರು. ತಮ್ಮ ಶಿಷ್ಯರು ಪಾರಿತೋಷಕ, ಗೌರವ ಪಡೆದಾಗ ಅವರಿಗೆ ಅಪಾರ ಸಂತೋಷ ತರುತ್ತಿತ್ತು. ತಮಗಿಂತ ತಮ್ಮ ಶಿಸ್ಯಸರು ಪ್ರಗತಿ ಗೈದರೆ ಅವರಿಗೆ ಇನ್ನೂ ಆನಂದದ ವಿಷಯ. ಭಾರತೀಯ ಪ್ರಸಿದ್ಧ ವಿಜ್ಞಾನಿಗಳಾದ ಮೇಘನಾಥ್ ಷಾಹ ಮತ್ತು ಶಾಂತಿಸ್ವರೂಪ ಭಟನಾಗರ್, ರಾಯ್ ಅವರ ಶಿಷ್ಯರು. ಪ್ರಫುಲ್ಲಚಂದ್ರರು ಶಿಸ್ತಿನ ಜೀವನ ನಡೆಸಿದ, ತಮ್ಮ ಕೆಲಸ ತಾವೇ ಮಾಡಿಕೊಳ್ಳುವ ಅಪರೂಪದ ವ್ಯಕ್ತಿಯಾಗಿದ್ದರು. ಅವರು ತಮ್ಮ 83ನೆಯ ವಯಸ್ಸಿಗೆ, 16 ನೇ ಜೂನ್ 1944ರಲ್ಲಿ ತೀರಿಕೊಂಡರು.