ಅಳತೆಗೋಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗ್ರೀಕೋ-ಈಜಿಪ್ಷಿಯನ್ ದೇವತೆ ಸೆರಾಪಿಸ್‍ನ ಕೈಯಲ್ಲಿ ಅಳತೆಗೋಲು

ಅಳತೆಗೋಲು ದೈಹಿಕವಾಗಿ ಉದ್ದಗಳು ಮತ್ತು ವಿವಿಧ ಗಾತ್ರಗಳ ಮೋಜಣಿ ಪ್ರದೇಶಗಳನ್ನು ಅಳೆಯಲು ಬಳಸಲಾಗುವ ಒಂದು ಉಪಕರಣ. ಬಹುತೇಕ ಅಳತೆಗೋಲುಗಳು ದುಂಡಗೆ ಅಥವಾ ಚೌಕ ವಿಭಾಗಗಳನ್ನು ಹೊಂದಿರುತ್ತವೆ; ಆದರೆ ಅವು ಚಪ್ಪಟೆ ಫಲಕಗಳು ಕೂಡ ಆಗಿರಬಹುದು. ಕೆಲವು ನಿಯಮಿತ ಅಂತರಗಳಲ್ಲಿ ಗುರುತುಗಳನ್ನು ಹೊಂದಿರುತ್ತವೆ. ಆಧುನಿಕ ಮಾಪನದಲ್ಲಿ ಬಳಸಲಾಗುವ ರೇಖಾ, ಸರಪಣಿ ಅಥವಾ ಉಕ್ಕಿನ ಪಟ್ಟಿಗಳ ಮುನ್ನ ಅಳತೆಗೋಲನ್ನು ಬಳಸಲಾಗುತ್ತಿದ್ದಿದ್ದ ಸಾಧ್ಯತೆಯಿದೆ.[೧]

ಪ್ರಾಚೀನ ಭಾರತ[ಬದಲಾಯಿಸಿ]

ದಂತದಿಂದ ತಯಾರಿಸಿದ ಅಳತೆಪಟ್ಟಿಗಳು ಸಿಂಧೂ ಕಣಿವೆಯ ನಾಗರಿಕತೆಯಲ್ಲಿ, ಮತ್ತು ಪಶ್ಚಿಮ ಭಾರತದ ಕೆಲವು ಭಾಗಗಳಲ್ಲಿ ಕ್ರಿ.ಪೂ. ೧೫೦೦ರ ಮೊದಲು ಬಳಕೆಯಲ್ಲಿದ್ದವು. ಲೋಥಲ್‍ನಲ್ಲಿ ಕ್ರಿ.ಪೂ. ೨೪೦೦ ರ ಕಾಲಮಾನದ್ದೆಂದು ನಿರ್ಧರಿಸಲಾದ ಉತ್ಖನ್ನಗಳಿಂದ ಒಂದು ಅಂಗುಲದ ಸುಮಾರು ೧/೧೬ಕ್ಕೆ ಮಾಪನಾಂಕಗಳನ್ನು ಗುರುತಿಸಿರುವ (೨ ಮಿ.ಮೀ ಗಿಂತ ಕಡಿಮೆ) ಅಂತಹ ಒಂದು ಅಳತೆಪಟ್ಟಿ ದೊರಕಿದೆ. ಮೋಹನ್‍ಜೋದಡೊ ಅಳತೆಪಟ್ಟಿಯನ್ನು ೧.೩೨ ಅಂಗುಲಗಳಿಗೆ ಅನುಗುಣವಾದ ಏಕಮಾನಗಳಲ್ಲಿ ವಿಭಜಿಸಲಾಗಿದೆ ಮತ್ತು ಇವನ್ನು ಗಮನಾರ್ಹ ನಿಖರತೆಯೊಂದಿಗೆ ದಶಮಾನ ಉಪವಿಭಾಗಗಳಲ್ಲಿ ಗುರುತು ಮಾಡಲಾಗಿದೆ ಎಂದು ವೈಟ್‍ಲಾ ಅಭಿಪ್ರಾಯಪಡುತ್ತಾರೆ. ಈ ಪ್ರದೇಶದಾದ್ಯಂತ ಕಂಡುಬಂದಿರುವ ಪ್ರಾಚೀನ ಇಟ್ಟಿಗೆಗಳು ಈ ಏಕಮಾನಗಳಿಗೆ ಅನುಗುಣವಾದ ಆಯಾಮಗಳನ್ನು ಹೊಂದಿವೆ.

ಉಲ್ಲೇಖಗಳು[ಬದಲಾಯಿಸಿ]

  1. American Society of Civil Engineers (1891). Transactions of the American Society of Civil Engineers. American Society of Civil Engineers. Retrieved 6 April 2011.