ಅಕ್ಷತಾ ಕೃಷ್ಣಮೂರ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಕ್ಷತಾ ಕೃಷ್ಣಮೂರ್ತಿ ಯವರು ಉತ್ತರ ಕನ್ನಡ ಜಿಲ್ಲೆಯ ಅತಿ ಹೆಚ್ಚು ಅರಣ್ಯ ಹೊಂದಿರುವ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿರುವ ಹಿಂದುಳಿದ ಜೊಹಿಡಾ ತಾಲೂಕಿನ ಹುಲಿ ಸಂರಕ್ಷಿತ ಪ್ರದೇಶದ ಅಣಶಿಯಲ್ಲಿ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಶಿಕ್ಷಕಿ ವೃತ್ತಿಯ ಜೊತೆಯಲ್ಲಿ ಕನ್ನಡದ ಹಲವಾರು,ದಿನ ಪತ್ರಿಕೆ ,ವಾರಪತ್ರಿಕೆ,ಪಾಕ್ಷಿಕಪತ್ರಿಕೆ ಹಾಗೂ ಮಾಸಿಕ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುವ ಮೂಲಕ ಹವ್ಯಾಸಿ ಬರಹಗಾರರಾಗಿದ್ದಾರೆ.ಹಲವಾರು ಕೃತಿ,ಕವನ ಸಂಕಲನಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ.ಇವರ ಸಾಹಿತ್ಯ ಸೇವೆಯನ್ನು ಗೌರವಿಸಿ ಬಂದ ಹಲವಾರು ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ.

ಜನನ[ಬದಲಾಯಿಸಿ]

ಅಕ್ಷತಾ ಕೃಷ್ಣಮೂರ್ತಿಯವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೆಲೆಕೇರಿಯಲ್ಲಿ ೦೨ ನೇ ನವೆಂಬರ್ ೧೯೮೧ ರಲ್ಲಿ ಜನಿಸಿದರು.

ವಿಧ್ಯಾಭ್ಯಾಸ[ಬದಲಾಯಿಸಿ]

  • ಕನ್ನಡದಲ್ಲಿ ಸ್ನಾತಕೋತ್ತರ ಪದವಿ
  • ಹಿಂದಿ ರತ್ನ ಪದವಿ

ವೃತ್ತಿ ಪ್ರವೃತ್ತಿ[ಬದಲಾಯಿಸಿ]

[೧]ವೃತ್ತಿಯಲ್ಲಿ ಶಿಕ್ಷಕಿಯಾಗಿ ಪ್ರವೃತ್ತಿಯಲ್ಲಿ ಬರಹಗಾರ್ತಿ,ನಿರೂಪಕಿಯಾಗಿ ಹಲವಾರು ಕವೀಗೋಷ್ಠಿಯಲ್ಲಿ ಪಾಲ್ಗೊಂಡು ತಮ್ಮ ಸ್ವ-ರಚಿತ ಕವಿತೆ ವಾಚನಮಾಡುವ ಹವ್ಯಾಸ ಹೊಂದಿದ್ದಾರೆ.

ಕೃತಿಗಳು[ಬದಲಾಯಿಸಿ]

  • ಹನ್ನೆರಡು ದಡೆ ಬೆಲ್ಲ(ಕವನ ಸಂಕಲನ-೨೦೧೩)
  • ಹಾಲಕ್ಕಿ ಒಕ್ಕಲಿಗರು(ಜನಾಂಗೀಯ ಬರಹ-೨೦೧೩)
  • ಮಧುರ ಚೆನ್ನ(ವ್ಯಕ್ತಿ ಪರಿಚಯ-೨೦೧೪)
  • ಕೋಳ್ಗಂಬ (ಕವನ ಸಂಕಲನ-೨೦೧೬)

ಪ್ರಶಸ್ತಿಗಳು[ಬದಲಾಯಿಸಿ]

[ಸೂಕ್ತ ಉಲ್ಲೇಖನ ಬೇಕು]

  • [೨][೩]ಸಂಕ್ರಮಣ ಕಾವ್ಯ ಪ್ರಶಸ್ತಿ(೨೦೧೧)
  • ಡಾ. ಡಿ.ಎಸ್.ಕರ್ಕಿ ಪ್ರಶಸ್ತಿ(೨೦೧೪)
  • ಉತ್ತರ ಕನ್ನಡ ಯುವ ರಾಜ್ಯೋತ್ಸವ ಪುಸ್ತಕ ಪ್ರಶಸ್ತಿ(೨೦೧೬)
  • ಕ.ಸಾ.ಪ ನೀಲಗಂಗಾ ದತ್ತಿ ಪ್ರಶಸ್ತಿ (೨೦೧೭)
  • ಅಂಕೋಲಾ ಉತ್ಸವ ಪ್ರಶಸ್ತಿ (೨೦೧೮)

ಉಲ್ಲೇಖ[ಬದಲಾಯಿಸಿ]

[೪]http://ladaiprakashanabasu.blogspot.com/2013/05/blog-post_15.html?m=1

http://m.prajavani.net/article/amp/2017_10_01/523021 Archived 2017-10-11 ವೇಬ್ಯಾಕ್ ಮೆಷಿನ್ ನಲ್ಲಿ.

http://avadhimag.com/?p=184170

ಉಲ್ಲೇಖಗಳು[ಬದಲಾಯಿಸಿ]

  1. http://enewspapr.com/News/UVANI/SWSS/2018/03/04/ArticleImages/1F62AF3.jpg[ಶಾಶ್ವತವಾಗಿ ಮಡಿದ ಕೊಂಡಿ]
  2. http://ladaiprakashanabasu.blogspot.com/2013/05/blog-post_15.html?m=1
  3. "ಆರ್ಕೈವ್ ನಕಲು". Archived from the original on 2017-10-11. Retrieved 2018-02-14.
  4. http://avadhimag.com/?p=184170