ವಿಷಯಕ್ಕೆ ಹೋಗು

ಅಂಬುತೀರ್ಥ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶರಾವತಿ ನದಿಯ ಉಗಮ ಸ್ಥಾನವಾಗಿರುವ ಅಂಬುತೀರ್ಥ ಕ್ಷೇತ್ರವು ಶಿವಮೊಗ್ಗ ಜಿಲ್ಲೆತೀರ್ಥಹಳ್ಳಿಯಿಂದ ಸುಮಾರು ೧೮ ಕಿಮೀ ದೂರದಲ್ಲಿದೆ.[]

ಇಲ್ಲಿರುವ ಶಿವ ದೇವಾಲಯದಲ್ಲಿರುವ ಶಿವನ ಪಾದದ ಬಳಿಯಿಂದ ಹುಟ್ಟುವ ಶರಾವತಿ ನದಿ ಅಲ್ಲಿರುವ ಕೊಳ್ಳವೊಂದಕ್ಕೆ ಹರಿದು ನಂತರ ಗುಪ್ತಗಾಮಿನಿಯಾಗಿ ಹರಿದು ಹೊಸನಗರ ಸಾಗರ ಸಿರ್ಸಿ ಗೇರುಸೊಪ್ಪ ಮೂಲಕ ನದಿಯಾಗಿ, ನಂತರ ಹಲವು ಉಪನದಿಗಳಿಂದ ಕೂಡಿಕೊಂಡು ಸುಮಾರು ೧೨೮ ಕಿಮೀ ಹರಿದು ಅರಬ್ಬಿ ಸಮುದ್ರ ಸೇರುತ್ತದೆ.

ಶರಾವತಿ ನದಿಯ ಪ್ರಾಮುಖ್ಯತೆ

[ಬದಲಾಯಿಸಿ]

ಶರಾವತಿ ನದಿಯಿಂದಲೇ ವಿಶ್ವವಿಖ್ಯಾತ ಜೋಗ ಜಲಪಾತವು ಸೃಷ್ಟಿಯಾಗಿರುವುದು. ಇದಲ್ಲದೇ ಲಿಂಗನಮಕ್ಕಿಯಲ್ಲಿ ಶರಾವತಿಗೆ ಕಟ್ಟಿರುವ ಅಣೆಕಟ್ಟಿನಿಂದ ವಿದ್ಯುತ್ ಉತ್ಪಾದನೆಯನ್ನೂ ಮಾಡಲಾಗುತ್ತದೆ.

ಐತಿಹ್ಯ

[ಬದಲಾಯಿಸಿ]

ತ್ರೇತಾಯುಗದಲ್ಲಿ ರಾಮನು ಅರಣ್ಯವಾಸದಲ್ಲಿದ್ದಾಗ ಸೀತಾ ಸಮೇತನಾಗಿ ಇಲ್ಲಿ ನೆಲೆಸಿದ್ದನಂತೆ. ಆ ಸಮಯದಲ್ಲಿ ತಮ್ಮ ನಿತ್ಯದ ಪೂಜಾಕಾರ್ಯ, ಬಾಯಾರಿಕೆ ನೀಗಿಸುವ ಪ್ರಯುಕ್ತ ಹಾಗೂ ಇತರ ಕಾರ್ಯಗಳಿಗಾಗಿ ಬೇಕಾಗುವ ನೀರನ್ನು ಹೊಂದುವ ಸಲುವಾಗಿ ನೆಲಕ್ಕೆ ಬಾಣವನ್ನು ಬಿಟ್ಟಾಗ ತೀರ್ಥೋದ್ಭವವಾಯಿತಂತೆ. ಅಂಬು ಅಥವಾ ಬಾಣ ಬಿಟ್ಟಾಗ ಈ ತೀರ್ಥ ಉದ್ಭವವಾದ್ದರಿಂದ ಇದಕ್ಕೆ ಅಂಬುತೀರ್ಥವೆಂದು ಹೆಸರಾಗಿದೆ.[] ಶ್ರೀರಾಮನ ಶರದಿಂದ ಹುಟ್ಟಿದ್ದರಿಂದ ಈ ನದಿಗೆ ಶರಾವತಿ ಎಂಬ ಹೆಸರು ಬಂದಿದೆಯಂತೆ. ಇಲ್ಲಿರುವ ಶಿವಲಿಂಗವನ್ನು ಶ್ರೀರಾಮನು ಸೀತಾ ಸಮೇತನಾಗಿ ಪೂಜಿಸುತ್ತಿದ್ದನಂತೆ.

ಉಲ್ಲೇಖ

[ಬದಲಾಯಿಸಿ]
  1. ಪ್ರಜಾವಾಣಿ ಲೇಖನ
  2. ಶಿವಮೊಗ್ಗದ ಅಂಬುತೀರ್ಥದ ಬಗ್ಗೆ ನಿಮಗೆಷ್ಟು ಗೊತ್ತು?

ಛಾಯಾಂಕಣ

[ಬದಲಾಯಿಸಿ]