ಅಂಗಾರ ಎಸ್
ಅಂಗಾರ ಎಸ್ | |
---|---|
ಕರ್ನಾಟಕದ ಹಾಲಿ ಸಚಿವ
| |
ಹಾಲಿ | |
ಅಧಿಕಾರ ಸ್ವೀಕಾರ ೨೦೨೧ | |
ಮತಕ್ಷೇತ್ರ | ಸುಳ್ಯ |
ವೈಯಕ್ತಿಕ ಮಾಹಿತಿ | |
ಜನನ | 01.07.1964 - 59 ವರ್ಷ ದಕ್ಷಿಣ ಕನ್ನಡ, ಕರ್ನಾಟಕ |
ರಾಜಕೀಯ ಪಕ್ಷ | ಬಿಜೆಪಿ |
ಸಂಗಾತಿ(ಗಳು) | ವೇದಾವತಿ(ಪತ್ನಿ) |
ಮಕ್ಕಳು | ಗೌತಮ್(ಮಗ), ಪೂಜಾಶ್ರೀ(ಮಗಳು) |
ವಾಸಸ್ಥಾನ | ಸುಳ್ಯ, ಕರ್ನಾಟಕ |
ಧರ್ಮ | ಹಿಂದೂ |
ಕರ್ನಾಟಕ ರಾಜ್ಯದವರಾದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನವರಾದ ಎಸ್. ಅಂಗಾರ ಒಬ್ಬ ಭಾರತೀಯ ರಾಜಕಾರಣಿಯಾಗಿದ್ದಾರೆ. ಅವರು ಜನವರಿ 2021 ರಿಂದ ಕರ್ನಾಟಕ ರಾಜ್ಯದ ಮೀನುಗಾರಿಕೆ, ಬಂದರುಗಳು ಮತ್ತು ಒಳನಾಡು ಸಾರಿಗೆ ಇಲಾಖೆಯ ಸಚಿವರಾಗಿದ್ದರು.[೧] ಅವರು ಕರ್ನಾಟಕ ವಿಧಾನಸಭೆಯಿಂದ ಆರು ಬಾರಿ ಎಂ.ಎಲ್.ಎ.ಯಾಗಿ ಆಯ್ಕೆಯಾಗಿ ವಿಧಾನ ಸಭೆಯ ಸದಸ್ಯರಾಗಿದ್ದಾರೆ.[೨] ೨೦೨೧೦ನೇ ಆಗಷ್ಟ್ ೦೪ ರಂದು ಎರಡನೇ ಬಾರಿಗೆ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.[೩]
ಆರಂಭಿಕ ಜೀವನ
[ಬದಲಾಯಿಸಿ]ಅಂಗಾರ ಸುಳ್ಯ ತಾಲೂಕಿನ ಅಮರಮುಡ್ನೂರು ಗ್ರಾಮದ ದಾಸನಕಜೆ ಮನೆಯಲ್ಲಿ ಜನಿಸಿದರು. ಪ್ರಸ್ತುತ ಅಮರಮೂಡ್ನೂರು ಗ್ರಾಮದ ಕುಂಟಿಕಾನದಲ್ಲಿ ನೆಲೆಸಿದ್ದಾರೆ. ಅವರ ಆರಂಭಿಕ ಶಿಕ್ಷಣವು ಚೊಕ್ಕಾಡಿ ಪ್ರೌಢ ಶಾಲೆಯಲ್ಲಿ ಆಯಿತು. [೪]
ಕೌಟುಂಬಿಕ ವಿವರ
[ಬದಲಾಯಿಸಿ]ಪತ್ನಿ-ವೇದಾವತಿ, ಮಗ-ಗೌತಮ್, ಮಗಳು-ಪೂಜಾಶ್ರೀ.
ಕ್ಷೇತ್ರ
[ಬದಲಾಯಿಸಿ]ಸುಳ್ಯ ವಿಧಾನ ಸಭಾ(ಮೀಸಲು) ಕ್ಷೇತ್ರದಿಂದ ಅಂಗಾರ ಎಸ್ ಅವರು ೧೯೯೪ರಿಂದ[೫] ಸತತವಾಗಿ ಆರು ಬಾರಿ ಬಿಜೆಪಿ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಶಾಸಕರಾಗಿ ಗೆದ್ದ ವರ್ಷಗಳು
[ಬದಲಾಯಿಸಿ]೧೯೯೪, ೧೯೯೯, ೨೦೦೪, ೨೦೦೮, ೨೦೧೩, ೨೦೧೮, ಸತತ ಆರು ಅವಧಿಗಳಿಗೆ ಶಾಸಕರಾಗಿ ಸುಳ್ಯ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.
ಸಚಿವ ಸ್ಥಾನ
[ಬದಲಾಯಿಸಿ]- ಬಿ.ಎಸ್. ಯಡಿಯೂರಪ್ಪ ಮಂತ್ರಿ ಮಂಡಲದಲ್ಲಿ ಬಂದರು ಮತ್ತು ಮೀನುಗಾರಿಕಾ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರು.
- ಬಸವರಾಜ ಬೊಮ್ಮಾಯಿ ಮಂತ್ರಿ ಮಂಡಲಕ್ಕೆ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಉಸ್ತುವಾರಿ ಸಚಿವರು.[೬]
ರಾಜಕೀಯ ಪಕ್ಷ
[ಬದಲಾಯಿಸಿ]ಅಂಗಾರ ಅವರು ಭಾರತೀಯ ಜನತಾ ಪಕ್ಷದವರು.[೭]
ಉಲ್ಲೇಖಗಳು
[ಬದಲಾಯಿಸಿ]- ↑ https://timesofindia.indiatimes.com/city/mangaluru/karnataka-cabinet-expansion-six-time-sullia-mla-s-angara-finally-gets-nod/articleshow/80247388.cms
- ↑ "Sitting and previous MLAs from Sullia Assembly Constituency". elections.in. Archived from the original on 8 ಏಪ್ರಿಲ್ 2016. Retrieved 30 May 2016.
- ↑ https://www.kannadaprabha.com/politics/2021/aug/04/today-29-ministers-will-be-taking-oath-says-basavaraja-bommai-451451.html
- ↑ https://myneta.info/karnataka2013/candidate.php?candidate_id=593, Personal Profile of MLA
- ↑ "Assns seek cabinet berth for Angara". Deccan Herald. 10 August 2011. Retrieved 22 October 2019.
- ↑ https://vijaykarnataka.com/news/mangaluru/angara-may-become-dakshina-kannada-district-incharge-minister/articleshow/80345912.cms
- ↑ "Karnataka election results 2013 S Angara, sitting BJP MLA from Sullia". timesofindia.indiatimes.com. Retrieved 30 May 2016.