ಚರ್ಚೆಪುಟ:ಸರ್ವಜ್ಞ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Can do with a **lot** more information, but couldn't find much more. --ಅಶ್ವತ್ಥ ೦೨:೫೩, ೧ ಡಿಸೆಂಬರ್ ೨೦೦೪ (UTC)

ಆಧಾರವಿಲ್ಲದೆ ತಿದ್ದುವಿಕೆ[ಬದಲಾಯಿಸಿ]

  • ಈಗ ಮೊಬೈಲಿನಲ್ಲಿ ತಿದ್ದುವವರು ಆಧಾರವಿಲ್ಲದೆ/ ಆಧಾರ/ ಉಲ್ಲೇಖ ಹಾಕದೆ ತಿದ್ದುತ್ತಿದ್ದಾರೆ- ಅದು ಸರಿಕಾಣುವುದಿಲ್ಲ. ಹಾಗೆ ತಿದ್ದಿದ ಅವನ್ನು ತೆಗೆದು ಮೂಲವನ್ನು ಉಳಿಸಲು ಸಂಪಾದಕರಲ್ಲಿ ಕೋರುತ್ತೇನೆ.Bschandrasgr (ಚರ್ಚೆ) ೧೨:೧೩, ೨೧ ಏಪ್ರಿಲ್ ೨೦೧೯ (UTC)

ಕೆಲವು ಸರ್ವಜ್ಞ ಪದಗಳು[ಬದಲಾಯಿಸಿ]

  • 1.
  • ನಂದಿಯನು ಏರಿದನ
  • ಚಂದಿರನ ಮುಡಿದವನ ಕಂದನಂ ಬೇಡಿ ನೆನೆವುತ್ತ
  • ಮುಂದೆ ಹೇಳುವೆನು ಸರ್ವಜ್ಞ
  • 2.
  • ಮುನ್ನ ಕಾಲದಲಿ ಪನ್ನಗಧರನಾಳು
  • ಎನ್ನೆಯ ಪೆಸರು, ಪುಷ್ಪದತ್ತನು ಎಂದು
  • ಮನಿಪರು ದಯದಿ ಸರ್ವಜ್ಞ
  • 3.
  • ಅಂದಿನ ಪುಷ್ಪದತ್ತ ಬಂದ ವರರುಚಿಯಾಗಿ
  • ಮುದವ ಸಾರೆ, ಸರ್ವಜ್ಞನೆಂದೆನಿಸಿ
  • ನಿಂದವನು ನಾನೆ ಸರ್ವಜ್ಞ
  • 4.
  • ಸಣ್ಣನೆಯ ಮಳಲೊಳಗೆ ನುಣ್ಣನೆಯ ಶಿಲೆಯೊಳಗೆ
  • ಬಣ್ಣೆಸಿಬರೆದ ಪಟದೊಳಗೆಯಿರುವಾತ
  • ತಣ್ಣೊಳಗೆ ಇರನೇ ಸರ್ವಜ್ಞ
  • 5.
  • ಹೊಲಸು ಮಾಂಸದ ಹುತ್ತ ಎಲುವಿನಾ ಹಂದರವು
  • ಹೊಲೆಬಲಿದ ತನುವಿನೊಳಗಿರ್ದುಮದರೊಳಗೆ
  • ಕುಲವನರಸುವರೆ ಸರ್ವಜ್ಞ
  • 6.
  • ಎಲುವಿನೀ ಕಾಯಕ್ಕೆ ಸಲೆ ಚರ್ಮದ ಹೊದಿಕೆ
  • ಮಲ ಮೂತ್ರ ಕ್ರಿಮಿಗಳೊಳಗಿರ್ದ ದೇಹಕ್ಕೆ
  • ಕುಲವಾವುದಯ್ಯ ಸರ್ವಜ್ಞ
  • 7.
  • ಸರ್ವಜ್ಞನೆಂಬುವನು ಗರ್ವದಿಂದಾದವನೆ ?
  • ಸರ್ವರೊಳಗೊಂದು ನುಡಿಗಲಿತು ವಿದ್ಯೆಯ
  • ಪರ್ವತವೇ ಆದ ಸರ್ವಜ್ಞ
  • 8.
  • ಗುರುವಿನಾ ವಿಸ್ತರದ, ಪರಿಯನಾನೇನೆಂಬೆ
  • ಮೆರೆವ ಬ್ರಹ್ಮಾಂಡದೊಳಹೊರಗೆ
  • ಅವ ಬೆಳಗಿ ಪರಿಪೂರ್ಣನಿರ್ಪ ಸರ್ವಜ್ಞ
  • 9.
  • ಊರಿಂಗೆ ದಾರಿಯನು ಆರು ತೋರಿದರೇನು?
  • ಸಾರಾಯದಾ ನಿಜವ ತೋರುವ ಗುರುವು ತಾ
  • ನಾರಾದರೇನು? ಸರ್ವಜ್ಞ
  • 10.
  • ಪರತತ್ವ ತನ್ನೊಳಗೆ ಎರವಿಲ್ಲದಿರುತಿರ್ದು
  • ಪರದೇಶಿಯಂತೆ ಇರುತಿರ್ಪಯೋಗಿಯನು
  • ಪರಮಗುರುವೆಂಬೆ ಸರ್ವಜ್ಞ
  • 11.
  • ಹರನಿಚ್ಛೆಯಿಲ್ಲದಲೆ ಹರಿದು ಹೋಗದು ಪಾಪ
  • ಹರಭಕ್ತಿಯುಳ್ಳ ಗುರುವರನು ಓರ್ವನೇ
  • ನರ ದೈವವೆಂಬೆ ಸರ್ವಜ್ಞ
  • 12.
  • ಬಂಧುಗಳು ಆದವರು ಬಂದುಂಡು ಹೋಗುವರು
  • ಬಂಧನವ ಕಳೆಯಲರಿಯರಾ ಗುರುವಿಗಿಂತ
  • ಬಂಧುಗಳುಂಟೆ ಸರ್ವಜ್ಞ
  • 13.
  • ಜೀವ, ಸದ್ಗುರುನಾಥ, ಕಾಯ ಪುಸಿಯನೆ ತೋರಿ
  • ಮಾಯನಾಶವನು ಹರಿಸುತ್ತ ಶಿಷ್ಯಂಗೆ
  • ತಾಯಿಯಂತಾದ ಸರ್ವಜ್ಞ
  • 14.
  • ತಂದೆಗೂ ಗುರುವಿಗೂ ಒಂದು ಅಂತರವುಂಟು
  • ತಂದೆ ತೋರುವನು ಸದ್ಗುರುವ. ಗುರುರಾಯ
  • ಬಂಧನವ ಕಳೆವ ಸರ್ವಜ್ಞ
  • 15.
  • ಗುರುವಿಂಗೆ ದೈವಕ್ಕೆ, ಹಿರಿದು ಅಂತರವುಂಟು
  • ಗುರುತೋರ್ವ ದೈವದೆಡೆಯನು ದೈವತಾ
  • ಗುರುವ ತೋರುವನೇ? ಸರ್ವಜ್ಞ
  • 16.
  • ಗುರುಪಾದಕೆರಗಿದರೆ, ಶಿರಸು ತಾ ಮಣಿಯಕ್ಕು
  • ಪರಿಣಾಮವಕ್ಕು ಪದವಕ್ಕು ಕೈಲಾಸ
  • ನೆರಮನೆಯಕ್ಕು ಸರ್ವಜ್ಞ
  • 17.
  • ಒಂದರೊಳಗೆಲ್ಲವು ಸಂದಿಸುವದನು ಗುರು
  • ಚಂದದಿಂ ತೋರಿಕೊಡದಿರಲು ಶೊಷ್ಯನವ
  • ಕೊಂದನೆಂದರಿಗು ಸರ್ವಜ್ಞ
  • 18.
  • ಲಿಂಗಕ್ಕೆ ಕಡೆ ಎಲ್ಲಿ, ಲಿಂಗದೆಡೆ ಎಲ್ಲಿ
  • ಲಿಂಗದೊಳು ಜಗವು ಅಡಗಿಹುದು ಲಿಂಗವನು
  • ಹಿಂಗಿದವರುಂಟೆ? ಸರ್ವಜ್ಞ
  • 19.
  • ದೆಶಕ್ಕೆ ಸಜ್ಜನನು, ಹಾಸ್ಯಕ್ಕೆ ಹನುಮಂತ
  • ಕೇಶವನು ಭಕ್ತರೊಳಗೆಲ್ಲ ಮೂರು ಕ
  • ಣ್ಣೇಶನೆ ದೈವ ಸರ್ವಜ್ಞ
  • 20.
  • ಉಂಬಳಿಯ ಇದ್ದವನು ಕಂಬಳಿಯ ಹೊದೆಯುವನೇ?
  • ಶಂಭುವಿರಲಿಕ್ಕೆ ಮತ್ತೊಂದು ದೈವವ
  • ನಂಬುವನೇ ಹೆಡ್ಡ ಸರ್ವಜ್ಞ
  • 21.
  • ಅಂಜದಲೆ ಕೊಂಡಿಹರೆ ನಂಜು ಅಮೃತವದಕ್ಕು
  • ಅಂಜಿ ಅಳುಕುತಲಿ ಕೊಂಡಿಹರೆ, ಅಮೃತವು
  • ನಂಜಿನಂತಕ್ಕು ಸರ್ವಜ್ಞ
  • 22.
  • ಎಂಜಲೂ ಅಶೌಚ
  • ಸಂಜೆಯೆಂದೆನಬೇಡ ಕುಂಜರವು ವನವ ನೆನವಂತೆ ಬಿಡದೆನಿ
  • ರಂಜನನ ನೆನೆಯೊ ಸರ್ವಜ್ಞ
  • 23.
  • ಭೂತೇಶಗೆರಗುವನು ಜಾತಿ ಮಾದಿಗನಲ್ಲ
  • ಜಾತಿಯಲಿ ಹುಟ್ಟಿ ಶಿವನಿಗೆ ಶರಣೆನ್ನ
  • ದಾತ ಮಾದಿಗನು ಸರ್ವಜ್ಞ
  • 24.
  • ಕುಲಗೆಟ್ಟವರು ಚಿಂತೆ ಯೊಳಗಿಪ್ಪರಂತಲ್ಲ
  • ಕುಲಗೆಟ್ಟು ಶಿವನ ಮರೆಹೊಕ್ಕ ಋಷಿಗಳಿಗೆ
  • ಕುಲಗೋತ್ರವುಂಟೆ? ಸರ್ವಜ್ಞ
  • 25.
  • ಜಾತಿಹೀನನ ಮನೆಯ ಜ್ಯೊತಿ ತಾ ಹೀನವೆ?
  • ಜಾತಂಗೆ ಜಾತನೆನಲೇಕೆ? ಅರುವಿಡಿ
  • ದಾತನೇ ಜಾತ ಸರ್ವಜ್ಞ
  • 26.
  • ಯಾತರ ಹೂವೇನು ? ನಾತವಿದ್ದರೆ ಸಾಕು
  • ಜಾತಿಯಲಿ ಜಾತಿಯೆನಬೇಡ ಶಿವನೊಲಿ
  • ದಾತನೆ ಜಾತ ಸರ್ವಜ್ಞ
  • 27.
  • ಅಕ್ಕರವು ತರ್ಕಕ್ಕೆ ಲೆಕ್ಕವು ಗಣಿತಕ್ಕೆ
  • ಮಿಕ್ಕವೋದುಗಳು ತಿರುಪೆಗೆ ಮೋಕ್ಷಕಾ
  • ರಕ್ಕರವೇ ಸಾಕು ಸರ್ವಜ್ಞ
  • 28.
  • ಎಲ್ಲರನು ನೆರೆ ಬೇಡಿ, ಹಲ್ಲು ಬಾಯ್ದೆರೆಯುವರೇ?
  • ಬಲ್ಲಿದಾ ಶಿವನ ಭಜಿಸಿದರೆ ಶಿವ ತಾನು
  • ಇಲ್ಲೆನ್ನಲರಿಯನು ಸರ್ವಜ್ಞ
  • 29.
  • ಇಂದ್ರನಾನೆಯನೇರಿ ಒಂದನೂ ಕೊಡಲರಿಯ
  • ಚಂದ್ರಶೇಖರನು ಮುದಿ ಎತ್ತನೇರಿ ಬೇ
  • ಕೆಂದುದನು ಕೊಡುವ ಸರ್ವಜ್ಞ
  • 30.
  • ಸಾರವನು ಬಯಸುವರೆ, ಕ್ಷಾರವನು ಬೆರಿಸುವುದು
  • ಮಾರಸಂಹರನ ನೆನೆದರೆ ಮೃತ್ಯುವು
  • ದೂರಕ್ಕೆ ದೂರ ಸರ್ವಜ್ಞ
  • 31.
  • ಕಾಯ ಕಮಲದ ಸಜ್ಜೆ, ಜೀವರತನುವೆ ಲಿಂಗ
  • ಭವ ಪುಶ್ಪದಿಂ ಶಿವಪೂಜೆ ಮಾಡುವರ
  • ದೇವರೆಂದೆಂಬೆ ಸರ್ವಜ್ಞ
  • 32.
  • ಓದು ವಾದಗಳೇಕೆ, ಗಾದಿಯ ಮಾತೇಕೆ
  • ವೇದ ಪುರಾಣ ನಿನಗೇಕೆ? ಲಿಂಗದಾ
  • ಹಾದಿಯರಿದವಗೆ ಸರ್ವಜ್ಞ
  • 33.
  • ಒಪ್ಪಾದ ನುಡಿಯೇಕೆ? ಪುಷ್ಪವೇರಿಸಲೇಕೆ?
  • ಅರ್ಪಿತನ ಗೊಡವೆ ತನಗೇಕೆ? ಲಿಂಗದ
  • ನೆಪ್ಪನರಿದವಗೆ ಸರ್ವಜ್ಞ
  • 34.
  • ಗಂಗೆ ಗೋದಾವರಿಯು, ತುಂಗಭದ್ರೆಯು ಮತ್ತೆ
  • ಹಿಂಗದೆ ಮುಳುಗಿ ಫಲವೇನು? ನಿನ್ನಲ್ಲೆ
  • ಲಿಂಗದರುವಿಲ್ಲ ಸರ್ವಜ್ಞ
  • 35.
  • ಮೆಟ್ಟಿದಾ ಕಲ್ಲಿಂಗೆ, ಮೊಟ್ಟೆ ಪತ್ರಿಯ ಹಾಕಿ
  • ಕಟ್ಟಿದಾ ಲಿಂಗ ಅಡಿಮಾಡಿ ಶರಣೆಂಬ
  • ಭ್ರಷ್ಟನ ಕಂಡ್ಯಾ ? ಸರ್ವಜ್ಞ
  • 36.
  • ಗುರುವಿಂದ ಬಂಧುಗಳು, ಗುರುವಿಂದ ದೈವಗಳು
  • ಗುರುವಿಂದಲಿಹುದು ಪುಣ್ಯವದು, ಜಗಕೆಲ್ಲ
  • ಗುರುವಿಂದ ಮುಕ್ತಿ ಸರ್ವಜ್ಞ
  • 37.
  • ಶಿವಪೂಜೆ ಮಾಡಿದಡೆ, ಶಿವನ ಕೊಂಡಾಡಿದಡೆ
  • ಶಿವನಲ್ಲಿ ನೆನೆಹ ನಿಲಿಸಿದಡೆ ಶಿವಲೋಕ
  • ವವಗೆ ಕಾಣಯ್ಯ ಸರ್ವಜ್ಞ
  • 38.
  • ನಿಷ್ಠೆ ಇದ್ದಡೆ ಶಿವನು, ಗಟ್ಟಿಗೊಂಡೊಳಗಿರ್ಪ
  • ನಿಷ್ಠೆಯಿಲ್ಲದಲೆ ಭಜಿಸಿದೊಡೆ ಶಿವನವನ
  • ಬಿಟ್ಟು ಬಯಲಪ್ಪ ಸರ್ವಜ್ಞ
  • 39.
  • ಇಟ್ಟಾವಿಭೂತಿ ತಾ ಪಟ್ಟಗಟ್ಟಿರುತಿಕ್ಕು
  • ಇಟ್ಟಾವಿಭೂತಿಯರಿಯದಿರೆ ಸೀಳಿದಾ
  • ಬಟ್ಟೆಯಂತಕ್ಕು ಸರ್ವಜ್ಞ
  • 40.
  • ಲಿಂಗದಲಿ ಮನವಾಗಿ, ಲಿಂಗದಲಿ ನೆನಹಾಗಿ
  • ಲಿಂಗದಲಿ ನೋಟ, ನುಡಿಕೂಟವಾದವನು
  • ಲಿಂಗವೇ ಅಕ್ಕು ಸರ್ವಜ್ಞ
  • 41.
  • ದೇಹಿಯನಬೇಡ, ನಿರ್ದೇಹಿ ಜಂಗಮಲಿಂಗ
  • ದೇಹ ಗುಣದಾಸೆಯಳಿದೊಡೆ ಆತ ನೀರ್ದೇಹಿ
  • ಕಾಣಯ್ಯ ಸರ್ವಜ್ಞ
  • 42.
  • ವಂಶವನು ಪುಗನೆಂದಿ, ಗಾಶಿಸನು ಪರಧನವ
  • ಸಂಶಯವನಳಿದ ನಿಜಸುಖಿ ಮಹಾತ್ಮನು
  • ಹಿಂಸೆಗೊಡಬಡನು ಸರ್ವಜ್ಞ
  • 43.
  • ಅರ್ಪಿತದ ಭೇದವನು
  • ತಪ್ಪದೆಲೆ ತಿಳಿದಾತ ಸರ್ಪಭುಷಣನ ಸಮನಹನು ನಿಜಸುಖದೋ
  • ಳೊಪ್ಪುತ್ತಲಿಹನು ಸರ್ವಜ್ಞ
  • 44.
  • ಭೋಗಿಸುವ ವಸ್ತುಗಳ ಭೋಗಿಸು ಶಿವಗಿತ್ತು
  • ರಾಗದಿಂ ಸತ್ಯವೆರಸಿಹ ಪ್ರಸಾದಿಯ
  • ಶ್ರಿ ಗುರುವು ಎಂಬೆ ಸರ್ವಜ್ಞ
  • 45.
  • ಲಿಂಗವಿರಹಿತನಾಗಿ ನುಂಗದಿರು ಏನುವನು
  • ತಿಂಗಳಲಿ ಸತ್ತ ಕೊಳೆ ನಾಯಿ ಮಾಂಸವನು
  • ನುಂಗಿದೆಂತಕ್ಕು ಸರ್ವಜ್ಞ
  • 46.
  • ಅಂಜದಲೆ ಕೊಂಡಿಹರೆ, ನಂಜು ಅಮೃತವದಕ್ಕು
  • ಅಂಜಿ, ಅಳುಕುತಲಿ ಕೊಂಡಿಹರೆ ಅಮೃತವು
  • ನಂಜಿನಂತಕ್ಕು ಸರ್ವಜ್ಞ
  • 47.
  • ಸಿರಿಯು ಬಂದರೆ ಲೇಸು, ತೀರದ ಜವ್ವನ ಲೇಸು
  • ಮರಣವಿಲ್ಲದಾ ಮಗಲೇಸು ಲಿಂಗಕ್ಕೆ
  • ಶರಣುವೆ ಲೇಸು ಸರ್ವಜ್ಞ
  • 48.
  • ಸೋಕಿಡಾ ಸುಖಂಗಳ
  • ನೇಕವನು ಶಿವಗಿತ್ತು
  • ತಾ ಕಿಂಕರತೆಯ ಕೈಕೊಂಡ ಮನುಜನೇ ಲೋಕಕ್ಕೆ ಶರಣ ಸರ್ವಜ್ಞ
  • 49.
  • ಮಲಯಜದ ಮರದೊಳಗೆ ಸಲೆ ಗಂಧವಿಪ್ಪಂತೆ
  • ಸುಲಲಿತವು ಆದ ಶರಣರಾಹೃದಯದಲಿ
  • ನೆಲಸಿಹನು ಶಿವನು ಸರ್ವಜ್ಞ
  • 50.
  • ಕಿಚ್ಚಿನೊಳು ಸುಘೃತವು, ಒಚ್ಚತದಿ ಕರ್ಪುರವು
  • ಅಚ್ಚಳಿದು ನಿಜದಿ ನಿಂದಂತೆ, ಭೇದವನು
  • ಮುಚ್ಚುವನೆ ಶರಣ ಸರ್ವಜ್ಞ
  • 51.
  • ಗಂಗೆಯಾ ತಡೆ ಲೇಸು, ಮಂಗಳನ ಬಲ ಲೇಸು
  • ಜಂಗಮ ಭಕ್ತನಾ ನಡೆ ಲೇಸು, ಶರಣರಾ
  • ಸಂಗವೇ ಲೇಸು ಸರ್ವಜ್ಞ
  • 52.
  • ಆಕಾಶಪಥ ಮೀರಿ, ದೇಕವಸ್ತುವ ತಿಳಿದು
  • ಸಾಕಾರವಳಿದು ನಿಜವಾದ ಐಕ್ಯಂಗೆ
  • ಏಕತ್ರ ನೋಡು ಸರ್ವಜ್ಞ
  • 53.
  • ನಾನು-ನೀನುಗಳದು, ತಾನು ಲಿಂಗದಿ ಉಳಿದು
  • ನಾನಾ ಭ್ರಮೆಗಳ ಅತಿಗಳೆದು ನಿಂದಾತ
  • ತಾನೈಕ್ಯ ನೋಡು ಸರ್ವಜ್ಞ
  • 54.
  • ಹೀನಂಗೆ ಗತಿಯಿಲ್ಲ, ದೀನಗನುಚಿತವಲ್ಲ
  • ಏನು ಇಲ್ಲದವಗೆ ಭಯವಿಲ್ಲ ಐಕ್ಯಂಗೆ
  • ತಾನೆಂಬುದಿಲ್ಲ ಸರ್ವಜ್ಞ
  • 55.
  • ಆಗಿಲ್ಲ ಹೋಗಿಲ್ಲ, ಮೇಗಿಲ್ಲ ಕೆಳಗಿಲ್ಲ
  • ತಾಗಿಲ್ಲ ತಪ್ಪು ತಡೆಯಿಲ್ಲ ಲಿಂಗಕ್ಕೆ
  • ದೇಗುಲವೆ ಇಲ್ಲ ಸರ್ವಜ್ಞ
  • 56.
  • ಅಲಸದಾ ಶಿವಪೂಜೆ ಹುಲುಸುಂಟು ಕೇಳಯ್ಯ
  • ಬಲುಕವಲು ಒಡೆದು ಬೇರಿಂದ ತುದಿತನಕ
  • ಹಲಸು ಕಾತಂತೆ ಸರ್ವಜ್ಞ
  • 57.
  • ಉಂಡುಂಡು ತಿರುಗುವಾ ಭಂಡರಾ ಕಳೆ ಬೇಡ
  • ಕಂಡು ಲಿಂಗವನು ಪೂಜಿಸಿದವಗೆ ಯಮ
  • ದಂಡ ಕಾಣಯ್ಯ ಸರ್ವಜ್ಞ
  • 58.
  • ಆತುಮದ ಲಿಂಗವನು
  • ಪ್ರೀತಿಯಲಿ ಪೂಜಿಪಗೆ ಆತಂಕವಿಲ್ಲ ಭಯವಿಲ್ಲ
  • ದಶವಿಧದ ಪಾತಕಗಳಿಲ್ಲ ಸರ್ವಜ್ಞ
  • 59.
  • ಲಿಂಗವನು ಅಂದವನ ಅಂಗ ಹಿಂಗಿರಬೇಕು
  • ತೆಂಗಿನಕಾಯಿ ಪರಿಪೂರ್ಣ ಬಲಿದು ಜಲ
  • ಹಿಂಗಿದಪ್ಪಂದ ಸರ್ವಜ್ಞ
  • 60.
  • ಅಂಗವನು ಲಿಂಗವನು ಸಂಗೊಳಿಸಲೆಂತಕ್ಕು
  • ಲಿಂಗದಾ ನೆನಹು ಘನವಾಗೆ ಶಿವಲಿಂಗ
  • ಹಿಂಗಿರದು ಅವನ ಸರ್ವಜ್ಞ
  • 61.
  • ಒಮ್ಮನದ ಶಿವಪೂಜೆ ಗಮ್ಮನೆ ಮಾಡುವದು
  • ಇಮ್ಮನವ ಪಿಡಿದು ಕೆಡಬೇಡ ವಿಧಿವಶವು
  • ಸರಿಮ್ಮನೇ ಕೆಡಗು ಸರ್ವಜ್ಞ
  • 62.
  • ಅಷ್ಟವಿಧದರ್ಚನೆಯ ನೆಷ್ಟು ಮಾಡಿದರೇನು?
  • ನಿಷ್ಠೆ ನೆಲೆಗೊಳದೆ ಭಜಿಸುವಾ ಪೂಜೆ ತಾ
  • ನಷ್ಟ ಕಾಣಯ್ಯ ಸರ್ವಜ್ಞ
  • 63.
  • ಇಷ್ಟಲಿಂಗದಿ ಮನವ ನೆಟ್ಟನೆಯ ನಿಲಿಸದಲೆ
  • ಕಷ್ಟಭ್ರಮೆಗಳಲಿ ಮುಳುಗಿದನು ಕರ್ಮದಾ
  • ಬಟ್ಟೆಗೆ ಹೋಹ ಸರ್ವಜ್ಞ
  • 64.
  • ಎಷ್ಟು ಬಗೆಯಾರತಿಯ ಮುಟ್ಟಿಸಿದ ಫಲವೇನು?
  • ನಿಷ್ಠೆಯಿಲ್ಲದವನ ಶಿವಪೂಜೆ ಹಾಳೂರ
  • ಕೊಟ್ಟಗುರಿದಂತೆ ಸರ್ವಜ್ಞ
  • 65.
  • ಒಸೆದೆಂಟು ದಿಕ್ಕಿನಲ್ಲಿ ಮಿಸುನಿ ಗಿಣ್ಣಲು ಗಿಂಡಿ
  • ಹಸಿದು ಮಾಡುವನ ಪೂಜೆಯದು ಬೋಗಾರ
  • ಪಸರ ವಿಟ್ಟಂತೆ ಸರ್ವಜ್ಞ
  • 66.
  • ಬತ್ತಿ ಹೆತ್ತುಪ್ಪವನು ಹತ್ತಿಸಿದ ಫಲವೇನು?
  • ನಿತ್ಯ ನೆಲೆಗೊಳದೆ ಭಜಿಸುವಾ ಪೂಜೆ ತಾ
  • ಹತ್ತಿಗೇಡೆಂದ ಸರ್ವಜ್ಞ
  • 67.
  • ಎಣಿಸುತಿರ್ಪುದು ಬಾಯಿ ಪೆÇಣರುತಿರ್ಪುದು ಬೆರಳು
  • ಕ್ಷಣಕ್ಕೊಮ್ಮೆ ಒಂದನೆಣಿಸುವಾ ಜಪಕೊಂದು
  • ಕುಣಿಕೆಯುಂಟೆಂದ ಸರ್ವಜ್ಞ
  • 68.
  • ಎಣಿಸುತಿರ್ಪುದು ಬೆರಳು
  • ಗುಣಿಸುತಿರ್ಪುದು ಜಿಹ್ವೆ ಮನಹೋಗಿ ಹಲವ ನೆನೆದರದು ಹಾಳೂರ
  • ಶುನಕನಂತಕ್ಕು ಸರ್ವಜ್ಞ
  • 69.
  • ಕೊಲುವ ಕೈಯೊಳು ಪೂಜೆ, ಮೆಲುವ ಬಾಯೊಳು ಮಂತ್ರ
  • ಸಲೆ ಪಾಪವೆರೆದ ಮನದೊಳಗೆ ಪೂಜಿಪನೆ
  • ಹೊಲೆಯ ಕಾಣಯ್ಯ ಸರ್ವಜ್ಞ
  • 70.
  • ಲಿಂಗಪೂಜಿಸುವಾತ ಜಂಗಮಕ್ಕೆ ನೀಡಿದೊಡೆ
  • ಲಿಂಗದಾ ಕ್ಷೇಮ ಘನವಾಗಿ ಆ ಲಿಂಗ
  • ಹಿಂಗದಿರುತಿಹುದು ಸರ್ವಜ್ಞ
  • 71.
  • ಲಿಂಗಕ್ಕೆ ತೋರಿಸುತ ನುಂಗುವಾತನೇ ಕೇಳು
  • ಲಿಂಗವುಂಬುವದೆ  ? ಇದನರಿದು ಕಪಿಯೆ ನೀ
  • ಜಂಗಮಕೆ ನೀಡು ಸರ್ವಜ್ಞ
  • 72.
  • ಲಿಂಗಪ್ರಸಾದವನು ಅಂಗಕ್ಕೆ ಕೊಂಬುವರು
  • ಗಂಗಾಳದೊಳಗೆ ಕೈ ತೊಳೆದು ಚಲ್ಲುವಾ
  • ಮಂಗಗಳ ನೋಡು ಸರ್ವಜ್ಞ
  • 73.
  • ಹಲವನೋದಿದಡೇನು? ಚೆಲುವನಾದದಡೇನು ?
  • ಕುಲವೀರನೆನೆಸಿ ಫಲವೇನು? ಲಿಂಗದಾ
  • ಒಲುಮೆ ಇಲ್ಲದಲೆ ಸರ್ವಜ್ಞ
  • 74.
  • ಓದುವಾದಗಳೇಕೆ ? ಗಾದೆಯ ಮಾತೇಕೆ?
  • ವೇದ ಪುರಾಣವು ನಿನಗೇಕೆ ಲಿಂಗದಾ
  • ಹಾದಿಯರಿಯದಲೆ ಸರ್ವಜ್ಞ
  • 75.
  • ಕಂಡವರ ಕಂಡು ತಾ ಕೊಂಡ ಲಿಂಗವ ಕಟ್ಟಿ
  • ಕೊಂಡಾಡಲರಿಯದಧಮಂಗೆ ಲಿಂಗವದು
  • ಕೆಂಡದಂತಿಹುದು ಸರ್ವಜ್ಞ
  • 76.
  • ಕಟ್ಟಲೂ ಬಿಡಲು ಶಿವ ಬಟ್ಟಲವ ಕದ್ದನೇ
  • ಕಟ್ಟಲೂ ಬೇಡ ಬಿಡಲೂ ಬೇಡ
  • ಕಣ್ಣು ಮನ ನಟ್ಟರೆ ಸಾಕು ಸರ್ವಜ್ಞ
  • 77.
  • ಆ ದೇವ ಈ ದೇವ ಮಹಾದೇವನೆನಬೇಡ
  • ಆ ದೇವರ ದೇವ ಭುವನದಾ ಪ್ರಾಣಿಗಳಿ
  • ಗಾದವನೇ ದೇವ ಸರ್ವಜ್ಞ
  • 78.
  • ಚಿತ್ರವನು ನವಿಲೊಳು ವಿ ಚಿತ್ರವನು ಗಗನದೊಳು
  • ಪತ್ರ ಪುಷ್ಪಗಳ ವಿವಿಧವರ್ಣಗಳಿಂದ
  • ಚಿತ್ರಿಸಿದರಾರು ಸರ್ವಜ್ಞ
  • 79.
  • ಇಂಗಿನನೊಳು ನಾತವನು ತೆಂಗಿನೊಳಗೆಳೆ ನೀರು
  • ಭ್ರಂಗ ಕೋಗಿಲೆಯ ಕಂಠದೊಳು ಗಾಯನವ
  • ತುಂಬಿದವರಾರು ಸರ್ವಜ್ಞ
  • 80.
  • ಕಳ್ಳಿಯೊಳು ಹಾಲು, ಮುಳು ಗಳ್ಳಿಯೊಳು ಹೆಜ್ಜೇನು
  • ಎಳ್ಳಿನೊಳಗೆಣ್ಣೆ ಹನಿದಿರಲು, ಶಿವಲೀಲೆ
  • ಸುಳ್ಳೆನ್ನಬಹುದೆ? ಸರ್ವಜ್ಞ
  • 81.
  • ಎಲ್ಲ ದೈವವ ಬೇಡಿ ಹುಲ್ಲು ಬಾಯ್ತೆರೆಯದೆಲೆ
  • ಬಲ್ಲ ದಾಶಿವನ ಭಜಿಸಿ ಬೇಡಿದಾತ
  • ಇಲ್ಲೆನಲಿಕರಿಯ ಸರ್ವಜ್ಞ
  • 82.
  • ಆದಿ ದೈವವನು ತಾ ಭೇದಿಸಲಿ ಕರಿಯದಲೆ
  • ಹಾದಿಯಾಕಲ್ಲಿಗೆಡೆಮಾಡಿ ನಮಿಸುವಾ
  • ಮಾದಿಗರ ನೋಡು ಸರ್ವಜ್ಞ
  • 83.
  • ತನ್ನಲಿಹ ಲಿಂಗವನು ಮನ್ನಿ ಸಲಿಕರಿಯದಲೆ
  • ಬಿನ್ನಣದಿ ಕಟಿದ ಪ್ರತಿಮೆಗಳಿಗೆರಗುವಾ
  • ಅನ್ಯಾಯ ನೋಡು ಸರ್ವಜ್ಞ
  • 84.
  • ಉಣಬಂದ ಜಂಗಮಕೆ ಉಣಬಡಿಸಲೊಲ್ಲದಲೆ
  • ಉಣದಿಪ್ಪ ಲಿಂಗಕುಣಬಡಿಸಿ ಕೈಮುಗಿವ
  • ಬಣಗುಗಳ ನೋಡ ಸರ್ವಜ್ಞ
  • 85.
  • ಕಲ್ಲು ಕಲ್ಲೆಂಬುವಿರಿ ಕಲ್ಲೊಳಗಿರ್ಪುದೇ ದೈವ
  • ಕಲ್ಲಲ್ಲಿ ಕಳೆಯನಿಲಿಸಿದಾ ಗುರುವಿನಾ
  • ಸೊಲ್ಲೇದೈವ ಸರ್ವಜ್ಞ
  • 86.
  • ಗುಡಿಯ ಬೋದಿಗೆ ಕಲ್ಲು
  • ನಡುರಂಗ ತಾ ಕಲ್ಲು ಕಡೆಮೂಲೆ ಸೆರಗು ತಾ ಕಲ್ಲು ವರವನ್ನು
  • ಕೊಡುವಾತ ಬೇರೆ ಸರ್ವಜ್ಞ
  • 87.
  • ಪ್ರಾಣನೂ ಪರಮಮನು ಕಾಣದಲೆ ಒಳಗಿರಲು
  • ಮಾಣದೇ ಸಿಲೆಯ ಹಿಡಿದದಕೆ ಮೂರ್ಖ ತಾ
  • ಪ್ರಾಣಾತ್ಮನೆಂಬ ಸರ್ವಜ್ಞ
  • 88.
  • ಕಲ್ಲು ಗುಂಡಿನ ಮೇಲೆ ಮಲ್ಲಿಗೆಯ ಅರಳಿಕ್ಕಿ
  • ನಿಲ್ಲದಲೆ ಹಣೆಯ ಬಡಿವರ್ಗೆ ಬುಗುಟಿಲ್ಲ
  • ದಿಲ್ಲ ಕಾಣಯ್ಯ ಸರ್ವಜ್ಞ
  • 89.
  • ಉತ್ಪತ್ತಿಗೆ ಬೊಮ್ಮಗಡ ಸ್ಥಿತಿಗೆ ವಿಷ್ಣುಗಡ
  • ಹತವ ಗೈವುದಕ್ಕೆ ರುದ್ರಗಣ, ಇವರುಗಳ
  • ಸ್ಥಿತಿಯನರಿಯೆಂದ ಸರ್ವಜ್ಞ
  • 90.
  • ಬೊಮ್ಮನಿರ್ಮಿಪನೆಂಬ ಮರ್ಮತಿಯ ನೀ ಕೇಳು
  • ಬೊಮ್ಮನಾ ಸತಿಗೆ ಮೂಗಿಲ್ಲವಾಮೂಗ
  • ನಿರ್ಮಿಸನದೇಕೆ ಸರ್ವಜ್ಞ
  • 91.
  • ಹುಟ್ಟಿಸುವನಜನೆಂಬ, ಕಷ್ಟದಾ ನುಡಿಬೇಡ
  • ಹುಟ್ಟಿಪನು ತನ್ನ ಶಿರಹರಿಯೆ ಮತ್ತೊಂದು
  • ಹುಟ್ಟಿಸನದೇಕೆ ಸರ್ವಜ್ಞ
  • 92.
  • ಹತ್ತು ಭವವನು ಎತ್ತಿ, ಎತ್ತು ಎಮ್ಮೆಯ ಕಾದು
  • ಮತ್ತೆ ಪಾಂಡವರಿಗಾಳಾದ ಹರಿಯು ತಾ
  • ನೆತ್ತಣಾ ದೈವ ಸರ್ವಜ್ಞ
  • 93.
  • ನರಸಿಂಹನವತಾರ
  • ಹಿರಿದಾದ ಅದ್ಭುತವು
  • ಶರಭನು ಗುರಿಂದ ಕೊಲುವಾಗ ನರಿಯಂದವಾದ ಸರ್ವಜ್ಞ
  • 94.
  • ಪಾಲಿಸುವ ಹರಿಯು ತಾ, ಸೋಲನೆಂದೆನಬೇಡ
  • ಶೂಲಿ ತ ಮಗನ ತಲೆ ಚಿಗುಟಿ ಹರಿ ಏಕೆ
  • ಪಾಲಿಸದೆ ಹೋದ ಸರ್ವಜ್ಞ
  • 95.
  • ಹರನವನ ಕೊಲುವಂದು, ಎರಳೆಯನು ಎಸೆವಂದು
  • ಮರಳಿ ವರಗಳನು ಕೊಡುವಂದು ಪುರಹರಗೆ
  • ಸರಿಯಾದ ಕಾಣೆ ಸರ್ವಜ್ಞ
  • 96.
  • ಹರಿ ಬೊಮ್ಮನೆಂಬವರು, ಹರನಿಂದಲಾದವರು
  • ಅರಸಿಗೆ ಆಳು ಸರಿಯಹನೆ ಶಿವನಿಂದ
  • ಮೆರೆವರಿನ್ನಾರು ಸರ್ವಜ್ಞ
  • 97.
  • ಹರಿದಲೆಯ ಬೊಮ್ಮಂಗೆ, ಕುರಿದಲೆಯ ದಕ್ಷಂಗೆ
  • ನೆರೆಹತ್ತು ಜನನವಾಹರಿಗೆ ಇವರುಗಳು
  • ಸರಿಯಹರೆ ಸರ್ವಜ್ಞ
  • 98.
  • ಧರೆಯ ತೇರನು ಮಾಡಿ, ಅಜನ ಸಾರಥಿ ಮಾಡಿ
  • ಹರಿಯ ಶರವಮಾಡಿ ತ್ರಿಪುರವನು ಆಳಿದಂತೆ
  • ಸರಿಯಾರು ಹೇಳಿ ಸರ್ವಜ್ಞ
  • 99.
  • ಇಂದ್ರನಾನೆಯನೇರಿ ಒಂದನೂ ಕೊಡಲರಿಯ
  • ಚ್‍ಂದ್ರಶೇಖರನು ಮುದಿಯೆತ್ತನೇರಿ
  • ಬೇಕೆಂದುದನು ಕೊಡುವ ಸರ್ವಜ್ಞ
  • 100.
  • ಉಂಬಳಿಯ ಇದ್ದವರ, ಕಂಬಳಿಯ ಹೊದೆಯುವರೆ
  • ಶಂಭುವಿದ್ದಂತೆ ಮತ್ತೊಂದು ದೈವವನು
  • ನಂಬುವನೆ ಹೆಡ್ಡ ಸರ್ವಜ್ಞ
  • 101.
  • ಎಲುವಿನ ಕಾಯಕ್ಕೆ | ಸಲೆ ಚರ್ಮವನು ಹೊದಿಸಿ
  • ಮಲ-ಮೂತ್ರ-ಕ್ರಿಮಿಯು ಒಳಗಿರ್ಪ - ದೇಹಕ್ಕೆ
  • ಕುಲವಾವುದಯ್ಯ ಸರ್ವಜ್ಞ
  • 102.
  • ಹೊಲಸು ಮಾಂಸದ ಹುತ್ತು | ಎಲುವಿನ ಹಂಜರವು
  • ಹೊಲೆ ಬಲಿದ ತನುವಿನೊಳಗಿರ್ದು - ಮತ್ತದರ
  • ಕುಲವನೆಣಿಸುವರೆ ಸರ್ವಜ್ಞ
  • 103.
  • ದಿಟವೆ ಪುಣ್ಯದ ಪುಂಜ | ಸಟೆಯೆ ಪಾಪದ ಬೀಜ
  • ಕುಟಿಲ ವಂಚನೆಯ ಪೆÇಗದಿರು - ನಿಜವ ಪಿಡಿ
  • ಘಟವ ನೆಚ್ಚದಿರು ಸರ್ವಜ್ಞ
  • 104.
  • ಸುರತರು ಮರನಲ್ಲ | ಸುರಭಿಯೊಂದಾವಲ್ಲ
  • ಪರುಷ ಪಾಷಾಣದೊಳಗಲ್ಲ - ಗುರುವು ತಾ
  • ನರರೊಳಗಲ್ಲ ಸರ್ವಜ್ಞ
  • 105.
  • ಜ್ಯೋತಿಯಿಂದವೆ ನೇತ್ರ | ರಾತ್ರಿಯಲಿ ಕಾಂಬಂತೆ
  • ಸೂತ್ರದಲಿ ಧಾತನರಿವಂತೆ - ಶಿವನ ಗುರು
  • ನಾಥನಿಂದರಿಗು ಸರ್ವಜ್ಞ
  • 106.
  • ಮಂಡೆ ಬೋಳಾದೊಡಂ | ದಂಡು ಕೋಲ್ವಿಡಿದೊಡಂ
  • ಹೆಂಡತಿಯ ಬಿಟ್ಟು ನಡೆದೊಡಂ - ಗುರುಮುಖವ
  • ಕಂಡಲ್ಲದಿಲ್ಲ ಸರ್ವಜ್ಞ
  • 107. ಬ್ರಹ್ಮವೆಂಬುದು ತಾನು | ಒಮ್ಮಾರು ನೀಳವೇ
  • ಒಮ್ಮೆ ಸದ್ಗುರುವಿನುಪದೇಶ - ವಾಲಿಸಲು
  • ಗಮ್ಮನೆ ಮುಕ್ತಿ ಸರ್ವಜ್ಞ
  • 108.
  • ಊರಿಂಗೆ ದಾರಿಯ | ನಾರು ತೋರಿದರೇನು
  • ಸಾರಾಯಮಪ್ಪ ಮತವನರುಹಿಸುವ ಗುರು
  • ಆರಾದೊಡೇನು ಸರ್ವಜ್ಞ
  • 109.
  • ತುಪ್ಪವಾದಾ ಬಳಿಕ | ಹೆಪ್ಪನೆರೆದವರುಂಟೆ
  • ನಿಃಪತ್ತಿಯಾದ ಗುರುವಿನುಪದೇಶದಿಂ
  • ತಪ್ಪದೇ ಮುಕ್ತಿ ಸರ್ವಜ್ಞ
  • 110.
  • ಪರುಷ ಲೋಹವ ಮುಟ್ಟಿ | ವರುಷವಿರಬಲ್ಲುದೇ
  • ಪರುಷವೆಂತಂತೆ ಶಿಷ್ಯಂಗೆ - ಗುರುವಿನ
  • ಸ್ಪರುಶನವೆ ಮೋಕ್ಷ ಸರ್ವಜ್ಞ
  • 111.
  • ಮೊಸರ ಕಡೆಯಲು ಬೆಣ್ಣೆ | ಒಸೆದು ತೋರುವ ತೆರದಿ
  • ಹಸನುಳ್ಳ ಗುರುವಿನುಪದೇಶ - ದಿಂ ಮುಕ್ತಿ
  • ವಶವಾಗದಿಹುದೆ ಸರ್ವಜ್ಞ
  • 112.
  • ಗುರುಪಾದ ಸೇವೆ ತಾ ದೊರಕೊಂಡಿತಾದೊಡೆ
  • ಹಿರಿದಪ್ಪ ಪಾಪ ಹರೆವುದು - ಕರ್ಪುರದ
  • ಗಿರಿಯ ಸುಟ್ಟಂತೆ ಸರ್ವಜ್ಞ
  • 113.
  • ಎತ್ತಾಗಿ ತೊತ್ತಾಗಿ | ಹಿತ್ತಿಲದ ಗಿಡವಾಗಿ
  • ಮತ್ತೆ ಪಾದದ ಕೆರವಾಗಿ - ಗುರುವಿನ
  • ಹತ್ತಿಲಿರು ಎಂದ ಸರ್ವಜ್ಞ
  • 114.
  • ಸಾಣೆಕಲ್ಲೊಳು ಗಂಧ | ಮಾಣದೆ ಎಸೆವಂತೆ
  • ಜಾಣ ಶ್ರೀಗುರುವಿನುಪದೇಶ - ದಿಂ ಮುಕ್ತಿ
  • ಕಾಣಿಸುತಿಹುದು ಸರ್ವಜ್ಞ
  • 115.
  • ಬೆಟ್ಟ ಕರ್ಪುರ ಉರಿದು | ಬೊಟ್ಟಿಡಲು ಬೂದಿಲ್ಲ
  • ನೆಟ್ಟನೆ ಗುರುವಿನರಿದನ - ಕರ್ಮವು
  • ಮುಟ್ಟಲಂಜುವವು ಸರ್ವಜ್ಞ
  • 116.
  • ವಿಷಯಕ್ಕೆ ಕುದಿಯದಿರು | ಅಶನಕ್ಕೆ ಹದೆಯದಿರು
  • ಅಸಮಾಕ್ಷನಡಿಯನಗಲದಿರು - ಗುರುಕರುಣ
  • ವಶವರ್ತಿಯಹುದು ಸರ್ವಜ್ಞ
  • 117.
  • ತಂದೆಗೆ ಗುರುವಿಗೆ | ಒಂದು ಅಂತರವುಂಟು
  • ತಂದೆ ತೋರುವನು ಶ್ರೀಗುರುವ - ಗುರುರಾಯ
  • ಬಂಧನವ ಕಳೆವ ಸರ್ವಜ್ಞ
  • 118.
  • ಹಸಿಯ ಸೌದೆಯ ತಂದು | ಹೊಸೆದರುಂಟೇ ಕಿಚ್ಚು
  • ವಿಷಯಂಗಳುಳ್ಳ ಮನುಜರಿಗೆ - ಗುರುಕರುಣ
  • ವಶವರ್ತಿಯಹುದೆ ಸರ್ವಜ್ಞ
  • 119.
  • ಒಂದೂರ ಗುರುವಿರ್ದು | ವಂದನೆಯ ಮಾಡದೆ
  • ಸಂಧಿಸಿ ಕೂಳ ತಿನುತಿರ್ಪವನ - ಇರವು
  • ಹಂದಿಯ ಇರವು ಸರ್ವಜ್ಞ
  • 120.
  • ಲಿಂಗದ ಗುಡಿಯೆಲ್ಲಿ ? ಲಿಂಗಿಲ್ಲದೆಡೆಯೆಲ್ಲಿ ?
  • ಲಿಂಗದೆ ಜಗವು ಅಡಗಿಹುದು - ಲಿಂಗವನು
  • ಹಿಂಗಿ ಪರ ಉಂಟೆ ಸರ್ವಜ್ಞ
  • 121.
  • ಓರ್ವನಲ್ಲದೆ ಮತ್ತೆ | ಈರ್ವರುಂಟೇ ಮರುಳೆ
  • ಸರ್ವಜ್ಞನೋರ್ವ ಜಗಕೆಲ್ಲ - ಕರ್ತಾರ
  • ನೋರ್ವನೇ ದೇವ ಸರ್ವಜ್ಞ
  • 122.
  • ಎಂಜಲು ಶೌಚವು | ಸಂಜೆಯೆಂದೆನ ಬೇಡ
  • ಕುಂಜರ ವನವ ನೆನೆವಂತೆ - ಬಿಡದೆ ನಿ
  • ರಂಜನನ ನೆನೆಯ ಸರ್ವಜ್ಞ
  • 123.
  • ಭೂತೇಶ ಶರಣೆಂಬ | ಜಾತಿ ಮಾದಿಗನಲ್ಲ
  • ಜಾತಿಯಲಿ ಹುಟ್ಟಿ ಭೂತೇಶ - ಶರಣೆನ್ನ
  • ದಾತ ಮಾದಿಗನು ಸರ್ವಜ್ಞ
  • 124.
  • ಯಾತರ ಹೂವಾದರು | ನಾತರೆ ಸಾಲದೆ
  • ಜಾತಿ-ವಿಜಾತಿ ಯೆನಬೇಡ - ಶಿವನೊಲಿ
  • ದಾತನೇ ಜಾತಿ ಸರ್ವಜ್ಞ
  • 125.
  • ಮಾಯಾಮೋಹವ ನೆಚ್ಚಿ | ಕಾಯವನು ಕರಗಿಸುತೆ
  • ಆಯಾಸಗೊಳುತ ಇರಬೇಡ - ಓಂ ನಮಶ್ಯಿ
  • ವಾಯವೆಂದೆನ್ನಿ ಸರ್ವಜ್ಞ
  • 126.
  • ಮುನಿವಂಗೆ ಮುನಿಯದಿರು | ಕನೆವಂಗೆ ಕನೆಯದಿರು
  • ಮನಸಿಜಾರಿಯನು ಮರೆಯದಿರು - ಶಿವನ ಕೃಪೆ
  • ಘನಕೆ ಘನವಕ್ಕು ಸರ್ವಜ್ಞ
  • 127.
  • ನರರ ಬೇಡುವ ದೈವ | ವರವೀಯ ಬಲ್ಲುದೇ
  • ತಿರಿವವರನಡರಿ ತಿರಿವಂತೆ - ಅದನರಿ
  • ಹರನನೆ ಬೇಡು ಸರ್ವಜ್ಞ
  • 128.
  • ಲಿಂಗವ ಪೂಜಿಸುವಾತ | ಜಂಗಮಕೆ ನೀಡದೊಡೆ
  • ಲಿಂಗದ ಕ್ಷೋಭೆ ಘನವಕ್ಕು - ಮಹಲಿಂಗ
  • ಹಿಂಗುವುದು ಅವನ ಸರ್ವಜ್ಞ
  • 129.
  • ಉಣ ಬಂದ ಲಿಂಗಕ್ಕೆ | ಉಣಲಿಕ್ಕದಂತಿರಿಸಿ
  • ಉಣದಿರ್ಪ ಲಿಂಗಕ್ಕುಣ ಬಡಿಸಿ - ಕೈ ಮುಗಿವ
  • ಬಣಗುಗಳ ನೋಡ ಸರ್ವಜ್ಞ
  • 130.
  • ಒಮ್ಮನದಲ್ಲಿ ಶಿವಪೂಜೆಯ | ಗಮ್ಮನೆ ಮಾಡುವುದು
  • ಇಮ್ಮನವಿಡಿದು ಕೆಡಬೇಡ - ವಿಧಿವಶವು
  • ಸುಮ್ಮನೆ ಕೆಡಗು ಸರ್ವಜ್ಞ
  • 131.
  • ಅಂಗವನು ಲಿಂಗವನು | ಸಂಗೊಳಿಸಲೆಂತಕ್ಕು ?
  • ಲಿಂಗದೆ ನೆನಹು ಘನವಾಗೆ - ಆ ಅಂಗ
  • ಲಿಂಗವಾಗಿಕ್ಕು ಸರ್ವಜ್ಞ
  • 132. ಕಂಗಳಿಚ್ಛೆಗೆ ಪರಿದು | ಭಂಗಗೊಳದಿರು ಮನುಜ
  • ಲಿಂಗದಲಿ ಮನವ ನಿಲ್ಲಿಸಿ - ಸತ್ಯದಿ ನಿಲೆ
  • ಲಿಂಗವೇಯಹೆಯೊ ಸರ್ವಜ್ಞ
  • 133.
  • ಓದುವಾದಗಳೇಕೆ | ಗಾದೆಯ ಮಾತೇಕೆ
  • ವೇದ-ಪುರಾಣ ನಿನಗೇಕೆ - ಲಿಂಗದ
  • ಹಾದಿಯನರಿದವಗೆ ಸರ್ವಜ್ಞ
  • 134.
  • ನೋಟ ಶಿವಲಿಂಗದಲಿ | ಕೂಟ ಜಂಗಮದಲ್ಲಿ
  • ನಾಟಿ ತನು ಗುರುವಿನಲಿ ಕೂಡೆ - ಭಕ್ತನ ಸ
  • ಘಾಟವದು ನೋಡ ಸರ್ವಜ್ಞ
  • 135.
  • ನಾನು-ನೀನುಗಳಳಿದು | ತಾನೆ ಲಿಂಗದಿ ನಿಂದು
  • ನಾನಾ ಭ್ರಮೆಗಳ ನೆರೆ ಹಿಂಗಿ - ನಿಂದವನು
  • ತಾನೈಕ್ಯ ನೋಡ ಸರ್ವಜ್ಞ
  • 136.
  • ತನ್ನ ನೋಡಲಿಯೆಂದು | ಕನ್ನಡಿ ಕರೆವುದೇ
  • ತನ್ನಲ್ಲಿ ಜ್ಞಾನ ಉದಿಸಿದ - ಮಹತುಮನು
  • ಕನ್ನಡಿಯಂತೆ ಸರ್ವಜ್ಞ
  • 137.
  • ಹೆಣ್ಣನು ಹೊನ್ನನು | ಹಣ್ಣಾದ ಮರವನು
  • ಕಣ್ಣಲಿ ಕಂಡು - ಮನದಲಿ ಬಯಸದ
  • ಅಣ್ಣಗಳಾರು ಸರ್ವಜ್ಞ
  • 138.
  • ತಿರಿದು ತಂದಾದೊಡಂ | ಕರೆದು ಜಂಗಮಕಿಕ್ಕು
  • ಪರಿಣಾಮವಕ್ಕು ಪದವಕ್ಕು - ಕೈಲಾಸ
  • ನೆರೆಮನೆಯಕ್ಕು ಸರ್ವಜ್ಞ
  • 139.
  • ಆಡದೆಲೆ ಕೊಡುವವನು | ರೂಢಿಯೊಳಗುತ್ತಮನು
  • ಆಡಿ ಕೊಡುವವನು ಮಧ್ಯಮನು - ಅಧಮ
  • ತಾನಾಡಿಯೂ ಕೊಡದವನು ಸರ್ವಜ್ಞ
  • 140.
  • ಮಾನವನ ದುರ್ಗುಣವ | ನೇನೆಂದು ಬಣ್ಣಿಸುವೆ
  • ದಾನಗೈಯಲು ಕನಲುವ - ದಂಡವನು
  • ಮೋನದಿಂ ತೆರುವ ಸರ್ವಜ್ಞ
  • 141.
  • ಅಂತಕ್ಕು ಇಂತಕ್ಕು | ಎಂತಕ್ಕು ಎನಬೇಡ
  • ಚಿಂತಿಸಿ ಸುಯ್ವುತಿರಬೇಡ ಶಿವನಿರಿಸಿ
  • ದಂತಿಹುದೆ ಲೇಸು ಸರ್ವಜ್ಞ
  • 142.
  • ಸಿರಿಯು ಸಂಸಾರವು | ಸ್ಥಿರವೆಂದು ನಂಬದಿರು
  • ಹಿರಿದೊಂದು ಸಂತೆ ನೆರೆದೊಂದು - ಜಾವಕ್ಕೆ
  • ಹರೆದು ಹೋಹಂತೆ ಸರ್ವಜ್ಞ
  • 143.
  • ದಂತಪಂಕ್ತಿಗಳೊಳಗೆ | ಎಂತಿಕ್ಕು ನಾಲಗೆಯು
  • ಸಂತತ ಖಳರ ಒಡನಿರ್ದು - ಬಾಳುವು
  • ದಂತೆ ಕಂಡಯ್ಯ ಸರ್ವಜ್ಞ
  • 144.
  • ಹಸಿಯದಿರೆ ಕಡುಗಾದ | ಬಿಸಿನೀರ ಕೊಂಬುದು
  • ಹಸಿವಕ್ಕು ಸಿಕ್ಕ ಮಲ ಬಿಡುಗು - ದೇಹ ತಾ
  • ಸಸಿನವಾಗುವುದು ಸರ್ವಜ್ಞ
  • 145.
  • ಹಸಿವಿಲ್ಲದುಣಬೇಡ | ಹಸಿದು ಮತ್ತಿರಬೇಡ
  • ಬಿಸಿ ಬೇಡ ತಂಗುಳವು ಬೇಡ - ವೈದ್ಯನ
  • ಗಸಣಿಸಿಯೇ ಬೇಡ ಸರ್ವಜ್ಞ
  • 146.
  • ಜಾತಿ ಹೀನನ ಮನೆಯ | ಜ್ಯೋತಿ ತಾ ಹೀನವೇ
  • ಜಾತಿ-ವಿಜಾತಿಯೆನಬೇಡ - ದೇವನೊಲಿ
  • ದಾತನೇ ಜಾತ ಸರ್ವಜ್ಞ
  • 147.
  • ಕ್ಷಣಮಾತ್ರವಾದರೂ | ಗುಣಿಗಳೊಡನಾಡುವುದು
  • ಗುಣಹೀನರುಗಳ ಒಡನಾಟ - ಬಹುದುಃಖ
  • ದಣಲೊಳಿರ್ದಂತೆ ಸರ್ವಜ್ಞ
  • 148.
  • ಬಸವ ಗುರುವಿನ ಹೆಸರ | ಬಲ್ಲವರಾರಿಲ್ಲ
  • ಪುಸಿಮಾತನಾಡಿ ಕೆಡದಿರಿ - ಲೋಕಕ್ಕೆ
  • ಬಸವನೇ ಕರ್ತ ಸರ್ವಜ್ಞ
  • 149.
  • ಹಸಿದೊಡಂಬಲಿ ಮುದ್ದು | ಬಿಸಿಲಿಗೆ ಕೊಡೆ ಮುದ್ದು
  • ಬಸುರಲ್ಲಿ ಬಂದ ಶಿಶು ಮುದ್ದು - ಲೋಕಕ್ಕೆ
  • ಬಸವಣ್ಣನೇ ಮುದ್ದು ಸರ್ವಜ್ಞ
  • 150.
  • ಕತ್ತೆ ಬೂದಿಯ ಹೊರಳಿ | ಭಕ್ತನಂತಾಗುವುದೆ
  • ತತ್ವವರಿಯದಲೆ ಭಸಿತವಿಟ್ಟರೆ ಶುದ್ಧ
  • ಕತ್ತೆಯಂತಕ್ಕು ಸರ್ವಜ್ಞ
  • 151.
  • ಬಲ್ಲವರ ಒಡನಾಡೆ | ಬೆಲ್ಲವನು ಸವಿದಂತೆ
  • ಅಲ್ಲದಜ್ಞಾನಿಯೊಡನಾಡೆ - ಮೊಳಕೈಗೆ
  • ಕಲ್ಲು ಹೊಡೆದಂತೆ ಸರ್ವಜ್ಞ
  • 152.
  • ಬಂದುದನೆ ತಾ ಹಾಸಿ | ಬಂದುದನೆ ತಾ ಹೊದೆದು
  • ಬಂದುದನೆ ಮೆಟ್ಟಿ ನಿಂತರೆ - ವಿಧಿ ಬಂದು
  • ಮುಂದೇನ ಮಾಳ್ಕು ಸರ್ವಜ್ಞ
  • 153.
  • ಸಿರಿ ಬಂದ ಕಾಲದಲಿ | ಕರೆದು ದಾನವ ಮಾಡು
  • ಪರಿಣಾಮವಕ್ಕು ಪದವಕ್ಕು - ಕೈಲಾಸ
  • ನೆರೆಮನೆಯಕ್ಕು ಸರ್ವಜ್ಞ
  • 154.
  • ಏನ ಬೇಡುವಡೊಬ್ಬ | ದಾನಿಯನೆ ಬೇಡುವುದು
  • ದೀನನ ಬೇಡಿ ಬಳಲಿದಡೆ - ಆ ದೀನ
  • ನೇನ ಕೊಟ್ಟಾನು ಸರ್ವಜ್ಞ
  • 155.
  • ಕೋಡಿಯನು ಕಟ್ಟಿದರೆ | ಕೇಡಿಲ್ಲವಾ ಕೆರೆಗೆ
  • ಮಾಡು ಧರ್ಮಗಳ ಮನಮುಟ್ಟಿ - ಕಾಲನಿಗೆ
  • ಈಡಾಗದ ಮುನ್ನ ಸರ್ವಜ್ಞ
  • 156.
  • ಅನ್ನದಾನಗಳಿಗಿಂತ | ಇನ್ನು ದಾನಗಳಿಲ್ಲ
  • ಅನ್ನಕ್ಕೆ ಮೇಲು ಹಿರಿದಿಲ್ಲ - ಲೋಕಕ್ಕೆ
  • ಅನ್ನವೇ ಪ್ರಾಣ ಸರ್ವಜ್ಞ
  • 157.
  • ಉಣ್ಣದೊಡವೆಯ ಗಳಿಸಿ | ಮಣ್ಣಾಗೆ ಬಚ್ಚಿಟ್ಟು
  • ಚೆನ್ನಾಗಿ ಬಳಿದು ಮೆತ್ತಿದನ - ಬಾಯೊಳಗೆ
  • ಮಣ್ಣು ಕಂಡಯ್ಯ ಸರ್ವಜ್ಞ
  • 158.
  • ಕೊಟ್ಟಿರ್ದ ಕಾಲದಲಿ | ಅಟ್ಟುಣ್ಣಲರಿಯದೆ
  • ಹುಟ್ಟಿಕ್ಕಿ ಜೇನು ಅನುಮಾಡಿ - ಪರರಿಗೆ
  • ಕೊಟ್ಟು ಹೋದಂತೆ ಸರ್ವಜ್ಞ
  • 159.
  • ಹೆಣ್ಣಿಂದ ಇಹವುಂಟು | ಹೆಣ್ಣಿಂದ ಪರವುಂಟು
  • ಹೆಣ್ಣಿಂದ ಸಕಲ ಫಲವುಂಟು - ಮರೆದರೆ
  • ಹೆಣ್ಣಿಂದ ಮರಣ ಸರ್ವಜ್ಞ
  • 160.
  • ಮಜ್ಜಿಗೂಟಕೆ ಲೇಸು | ಮಜ್ಜನಕೆ ಮಡಿ ಲೇಸು
  • ಕಜ್ಜಾಯ ತುಪ್ಪ ಉಣ ಲೇಸು - ಮನೆಗೊಬ್ಬ
  • ಅಜ್ಜಿಯೇ ಲೇಸು ಸರ್ವಜ್ಞ
  • 161.
  • ಸಿರಿ ಬಲ ಉಳ್ಳಾಗ | ಮರೆಯದವನೇ ಜಾಣ
  • ಕೊರತೆಯಾದಾಗ ಕೊಡುವೆನಿದ್ದರೆ ಎಂದು
  • ಅರಚುವವನೆ ಹೆಡ್ಡ ಸರ್ವಜ್ಞ
  • 162.
  • ನಿತ್ಯ ನೀರೊಳು ಮುಳುಗಿ | ಹತ್ಯಾನೆ ಸ್ವರ್ಗಕ್ಕೆ
  • ಹತ್ತೆಂಟು ಕಾಲ ಜಲದೊಳಗಿಹ ಕಪ್ಪೆ
  • ಹತ್ತವ್ಯಾಕಯ್ಯ ಸರ್ವಜ್ಞ
  • 163.
  • ಅನ್ನ ದೇವರ ಮುಂದೆ | ಇನ್ನು ದೇವರು ಉಂಟೆ
  • ಅನ್ನವಿರುವನಕ ಪ್ರಾಣವು - ಜಗದೊಳ
  • ಗನ್ನವೇ ದೈವ ಸರ್ವಜ್ಞ
  • 164.
  • ನಂಬು ಪರಶಿವನೆಂದು | ನಂಬು ಗುರುಚರಣವನು
  • ನಂಬಲಗಸ್ತ್ಯ ಕುಡಿದನು - ಶರಧಿಯನು
  • ನಂಬು ಗುರುಪದವ ಸರ್ವಜ್ಞ
  • 165.
  • ಬಂಧುಗಳಾದವರು ಮಿಂದುಂಡು ಹೋಹರು
  • ಬಂಧನವ ಕಳೆಯಲರಿಯರು - ಗುರುವಿಂದ
  • ಬಂಧನವಳಿಗು ಸರ್ವಜ್ಞ
  • 166.
  • ಮೆಟ್ಟಿಪ್ಪುದಾಶೆಯನು | ಕಟ್ಟಿಪ್ಪುದಿಂದ್ರಿಯವ
  • ತೊಟ್ಟಿಪ್ಪುದುಳ್ಳ ಸಮತೆಯನು - ಶಿವಪದವ
  • ಮುಟ್ಟಿಪ್ಪುದಯ್ಯ ಸರ್ವಜ್ಞ
  • 167.
  • ಚಿತ್ತೆಯ ಮಳೆ ಹೊಯ್ದು | ಮುತ್ತಾಗಬಲ್ಲುದೆ
  • ಚಿತ್ತದ ನೆಲೆಯನರಿಯದೆ - ಬೋಳಾದ
  • ರೆತ್ತಣ ಯೋಗ ಸರ್ವಜ್ಞ
  • 168.
  • ಇಂದ್ರಿಯವ ತೊರೆದಾತ | ವಂದ್ಯನು ಜಗಕೆಲ್ಲ
  • ಬಿಂದುವಿನ ಬೇಧವರಿದ ಮಹಾತ್ಮನು
  • ಬೆಂದ ನುಲಿಯಂತೆ ಸರ್ವಜ್ಞ
  • 169.
  • ಜ್ಞಾನಿ ಸಂಸಾರದೊಳು | ತಾನಿರಬಲ್ಲನು
  • ಭಾನು ಮಂಡಲದಿ ಹೊಳೆವಂತೆ - ನಿರ್ಲೇಪ
  • ಏನಾದಡೇನು ಸರ್ವಜ್ಞ
  • 170.
  • ಸತ್ಯವ ನುಡಿವಾತ | ಸತ್ತವನೆನಬೇಡ
  • ಹೆತ್ತ ತಾಯ್ ಮಗನ ಕರೆವಂತೆ - ಸ್ವರ್ಗದವ
  • ರಿತ್ತ ಬಾಯೆಂಬ ಸರ್ವಜ್ಞ
  • 171.
  • ಜ್ಞಾನಿಯನಜ್ಞಾನಿಯೆಂದು | ಹೀನ ತಾ ನುಡಿದರೆ
  • ಆನೆಯನೇರಿ ಸುಖದಿಂದಲಿ - ಹೋಹಂಗೆ
  • ಶ್ವಾನ ಬೊಗಳ್ದೇನು ಸರ್ವಜ್ಞ
  • 172.
  • ತುಂಬಿದಾ ಕೆರೆಭಾವಿ | ತುಂಬಿಹುದೆನಬೇಡ
  • ನಂಬಿರಬೇಡ ಲಕ್ಶ್ಮಿಯನು - ಬಡತನವು
  • ಬೆಂಬಳಿಯೊಳಿಹುದು ಸರ್ವಜ್ಞ
  • 173.
  • ಕೇಡನೊಬ್ಬನಿಗೆ ಬಯಸೆ | ಕೇಡು ತಪ್ಪದು ತನಗೆ
  • ಕೂಡಿ ಕೆಂಡವನು ತೆಗೆದೊಡೆ - ತನ್ನ ಕೈ
  • ಕೂಡೆ ಬೇವಂತೆ ಸರ್ವಜ್ಞ
  • 174.
  • ಅರಸು ಮುನಿದೂರೊಳಗೆ | ಇರುವುದೇ ಕರ ಕಷ್ಟ
  • ಅರಸು ಮನ್ನಣೆಯು ಕರಗಿದ - ಠಾವಿಂದ
  • ಸರಿವುದೇ ಲೇಸು ಸರ್ವಜ್ಞ
  • 175.
  • ಆಶೆಯುಳ್ಳನ್ನಕ್ಕರ - ದಾಸನಾಗಿರುತಿಪ್ಪ
  • ಆಶೆಯ ತಲೆಯನಳಿದರೆ - ಕೈಲಾಸ
  • ದಾಚೆಯಲಿಪ್ಪ ಸರ್ವಜ್ಞ
  • 176.
  • ಧಾರುಣಿ ನಡುಗುವುದು | ಮೇರುವಲ್ಲಾಡುವುದು
  • ವಾರಿಧಿ ಬತ್ತಿ ಬರೆವುದು - ಶಿವಭಕ್ತಿ
  • ಯೋರೆಯಾದಂದು ಸರ್ವಜ್ಞ
  • 177.
  • ಮಂದಿಯಿಲ್ಲದರಸು | ತಂದೆ ಇಲ್ಲದ ಕಂದ
  • ಬಂಧುಗಳಿಲ್ಲದಿಹ ಬಡತನ - ಇವು ತಾನು
  • ಎಂದಿಗೂ ಬೇಡ ಸರ್ವಜ್ಞ
  • 178.
  • ಅನ್ನವಿಕ್ಕದನಿಂದ | ಕುನ್ನಿ ತಾ ಕರ ಲೇಸು
  • ಉನ್ನತವಪ್ಪತಿಥಿಗಿಕ್ಕದ ಬದುಕು - ನಾಯ
  • ಕುನ್ನಿಯಿಂ ಕಷ್ಟ ಸರ್ವಜ್ಞ
  • 179.
  • ಉರಿಯುದಕ ಶೀತವು | ಉರಗಪತಿ ಭೀಕರವು
  • ಗುರುವಾಜ್ಞೆಗಂಜಿ ಕೆಡುವವು - ಇದ ನರ
  • ರರಿಯದೆ ಕೆಡುಗು ಸರ್ವಜ್ಞ
  • 180.
  • ಶೇಷನಿಂ ಹಿರಿದಿಲ್ಲ | ಆಸೆಯಿಂ ಕೀಳಿಲ್ಲ
  • ರೋಷದಿಂದಧಮಗತಿಯಿಲ್ಲ - ಪರದೈವ
  • ಈಶನಿಂದಿಲ್ಲ ಸರ್ವಜ್ಞ
  • 181.
  • ಕೊಟ್ಟು ಹುಟ್ಟಲಿಲ್ಲ | ಮುಟ್ಟಿ ಪೂಜಿಸಲಿಲ್ಲ
  • ಸಿಟ್ಟಿನಲಿ ಶಿವನ ಬೈದರೆ - ಶಿವ ತಾನು
  • ರೊಟ್ಟಿ ಕೊಡುವನೆ ಸರ್ವಜ್ಞ
  • 182.
  • ಹಸಿವರಿತು ಉಂಬುದು | ಬಿಸಿನೀರ ಕುಡಿವುದು
  • ಹಸಿವಕ್ಕು ವಿಷಯ ಘನವಕ್ಕು - ವೈದ್ಯಗೆ
  • ಬೆಸಸ ಬೇಡೆಂದ ಸರ್ವಜ್ಞ
  • 183.
  • ಲಿಂಗಕೆ ತೋರಿಸುತ | ನುಂಗುವಾತನೆ ಕೇಳು
  • ಲಿಂಗ ಉಂಬುವುದೆ ? ಪೆÇಡಮಡು - ತೆಲೊ ಪಾಪಿ
  • ಜಂಗಮಕೆ ನೀಡು ಸರ್ವಜ್ಞ
  • 184.
  • ಹೆಂಡಿರು ಮಕ್ಕಳಿಗೆಂದು | ದಂಡಿಸದಿರು ದೇಹವನು
  • ಭಂಡ ವಸ್ತುವನು ಕೊಡದುಣದೆ - ಬೈಚಿಡಲು
  • ಕಂಡವರಿಗಹುದು ಸರ್ವಜ್ಞ
  • 185.
  • ಮಾತು ಬಂದಲ್ಲಿ ತಾ | ಸೋತು ಬರುವುದು ಲೇಸು
  • ಮಾತಿಂಗೆ ಮಾತು ಮಥಿಸೆ - ವಿಧಿ ಬಂದು
  • ಆತುಕೊಂಡಿಹುದು ಸರ್ವಜ್ಞ
  • 186.
  • ಕಣ್ಣು ನಾಲಗೆ ಮನವು | ತನ್ನವೆಂದೆನ ಬೇಡ
  • ಅನ್ಯರು ಕೊಂದರೆನ ಬೇಡ - ಇವು ಮೂರು
  • ತನ್ನನೇ ಕೊಲುಗು ಸರ್ವಜ್ಞ
  • 187.
  • ನುಡಿಸುವುದಸತ್ಯವನು | ಕೆಡಿಸುವುದು ಧರ್ಮವನು
  • ಒಡಲನೆ ಕಟ್ಟಿ ಹಿಡಿಸುವುದು - ಲೋಭದ
  • ಗಡಣ ಕಾಣಯ್ಯ ಸರ್ವಜ್ಞ
  • 188.
  • ಸೊಡರಿಂಗೆ ಎಣ್ಣೆಯ | ಕೊಡನೆತ್ತಿ ಹೊಯಿವರೆ
  • ಬಡವನೆಂದು ಕೊಡದೆ ಇರಬೇಡ - ಇರವರಿದು
  • ಕೊಡುವುದೇ ಲೇಸು ಸರ್ವಜ್ಞ
  • 189.
  • ಒಡಲೆಂಬ ಹುತ್ತಕ್ಕೆ | ನುಡಿವ ನಾಲಗೆ ಸರ್ಪ
  • ಕಡುರೋಷವೆಂಬ ವಿಷವೇರೆ - ಸಮತೆ ಗಾ
  • ರುಡಿಗನಂತಕ್ಕು ಸರ್ವಜ್ಞ
  • 190.
  • ಅಪಮಾನದೂಟದಿಂ | ದುಪವಾಸ ಕರ ಲೇಸು
  • ನೃಪನೆದ್ದು ಬಡಿವ ಅರಸನೋಲಗದಿಂದ
  • ತಪವಿಹುದೆ ಲೇಸು ಸರ್ವಜ್ಞ
  • 191.
  • ಹಿರಿದು ಪಾಪವ ಮಾಡಿ - ಹರಿವರು ಗಂಗೆಗೆ
  • ಹರಿವ ನೀರಲ್ಲಿ ಕರಗುವೊಡೆ - ಯಾ ಪಾಪ
  • ಎರೆಯ ಮಣ್ಣಲ್ಲ ಸರ್ವಜ್ಞ
  • 192.
  • ಅಂತಿರ್ದರಿಂತಿರ್ದ | ರೆಂತಿರ್ದರೆನಬೇಡ
  • ಕುಂತಿಯಣುಗರು ತಿರಿದರು - ಮಿಕ್ಕವರು
  • ಎಂತಿರ್ದರೇನು ಸರ್ವಜ್ಞ
  • 193.
  • ಉಳ್ಳಲ್ಲಿ ಉಣಲೊಲ್ಲ | ಉಳ್ಳಲ್ಲಿ ಉಡಲೊಲ್ಲ
  • ಉಳ್ಳಲ್ಲಿ ದಾನಗೊಡಲೊಲ್ಲ - ನವನೊಡವೆ
  • ಕಳ್ಳಗೆ ನೃಪಗೆ ಸರ್ವಜ್ಞ
  • 194.
  • ಕೊಡುವಾತನೇ ಮೃಢನು | ಪಡೆವಾತನೇ ನರನು
  • ಒಡಲು-ಒಡವೆಗಳು ಕೆಡೆದು ಹೋಗದ ಮುನ್ನ
  • ಕೊಡು ಪಾತ್ರವನರಿದು ಸರ್ವಜ್ಞ
  • 195.
  • ಅನ್ನವನಿಕ್ಕುವುದು | ನನ್ನಿಯನು ನುಡಿವುದು
  • ತನ್ನಂತೆ ಪರರ ಬಗೆದೊಡೆ - ಕೈಲಾಸ
  • ಬಿನ್ನಾಣವಕ್ಕು ಸರ್ವಜ್ಞ
  • 196.
  • ಆನೆ ಮುಕುರದೊಳಡಗಿ | ಭಾನು ಸರಸಿಯೊಳಡಗಿ
  • ನಾನೆನ್ನ ಗುರುವಿನೊಳಡಗಿ - ಸಂಸಾರ
  • ತಾನದೆತ್ತಣದು ಸರ್ವಜ್ಞ
  • 197.
  • ಎಂಜಲು ಹೊಲೆಯಿಲ್ಲ | ಸಂಜೆಗತ್ತಲೆಯಿಲ್ಲ
  • ಅಂಜಿಕೆಯಿಲ್ಲ ಭಯವಿಲ್ಲ - ಜ್ಞಾನವೆಂ
  • ಬಂಜನವಿರಲು ಸರ್ವಜ್ಞ
  • 198.
  • ಬಲ್ಲೆನೆಂಬಾ ಮಾತು | ಎಲ್ಲವೂ ಹುಸಿ ನೋಡಾ
  • ಬಲ್ಲರೆ ಬಲ್ಲೆನೆನಬೇಡ - ಸುಮ್ಮನಿರ
  • ಬಲ್ಲರೆ ಬಲ್ಲ ಸರ್ವಜ್ಞ
  • 199.
  • ಏನಾದಡೇನಯ್ಯ | ತಾನಾಗದನ್ನಕ್ಕ
  • ತಾನಾಗಿ ತನ್ನನರಿದಡೆ - ಲೋಕ ತಾ
  • ನೇನಾದಡೇನು ಸರ್ವಜ್ಞ
  • 200.
  • ಆನೆ ನೀರಾಟದಲಿ | ಮೀನ ಕಂಡಂಜುವುದೇ
  • ಹೀನಮಾನವರ ಬಿರುನುಡಿಗೆ - ತತ್ವದ
  • ಜ್ಞಾನಿ ಅಂಜುವನೆ ಸರ್ವಜ್ಞ

Bschandrasgr (ಚರ್ಚೆ) ೦೯:೦೩, ೧೬ ಜನವರಿ ೨೦೧೭ (UTC)