ಚರ್ಚೆಪುಟ:ಕನ್ನಡ ಜಾನಪದ
ಗೋಚರ
(ಚರ್ಚೆಪುಟ:ಜಾನಪದ ಸಾಹಿತ್ಯ ಇಂದ ಪುನರ್ನಿರ್ದೇಶಿತ)
ಶೀರ್ಷಿಕೆ ಬದಲಾವಣೆ ಕುರಿತು
[ಬದಲಾಯಿಸಿ]- @Pavanaja:, ನಿರ್ವಾಹಕರಾದ ಪವನಜ ಅವರಿಗೆ ನಮಸ್ಕಾರ!
ಈ ಪುಟದ ಹೆಸರು 'ಜಾನಪದ ಸಾಹಿತ್ಯ' ಎಂದಿದೆ;"ಜನಪದ ಸಾಹಿತ್ಯ" ಎಂದಾಗಬೇಕು. ಜಾನಪದ ಎಂಬುದು ಇಡೀ ಅಧ್ಯಯನ ವಿಷಯ. ಅದರೊಳಗೆ ಜನಪದ ಸಾಹಿತ್ಯ, ಜನಪದ ವೈದ್ಯ, ಜನಪದ ನೃತ್ಯ ಇತ್ಯಾದಿ ವಿಭಾಗಗಳು ಬರುತ್ತವೆ. ಮಾಧ್ಯಮ ಸಹಿತ ಎಲ್ಲೆಡೆ ಜನಪದಕ್ಕೂ ಜಾನಪದಕ್ಕೂ ವ್ಯತ್ಯಾಸವಿಲ್ಲದೆ ತಪ್ಪಾಗಿಯೇ ಬಳಕೆಯಾಗುತ್ತಿದೆ. ಹೀಗಾಗಿ ನೀವು ಲೇಖನದ ಶೀರ್ಷಿಕೆ ಸರಿಪಡಿಸುವುದು ಅತ್ಯಂತ ತುರ್ತು ಎಂದು ಭಾವಿಸಿ ನಿಮ್ಮ ಗಮನಕ್ಕೆ ತರುತ್ತಿದ್ದೇನೆ.
ಜಾನಪದ ಸಾಹಿತ್ಯ X ಜನಪದ ಸಾಹಿತ್ಯ √
User:NinadMysuru NinadMysuru (ಚರ್ಚೆ) ೧೩:೧೧, ೨೯ ಸೆಪ್ಟೆಂಬರ್ ೨೦೨೦ (UTC)
ಪುಟದ ಹೆಸರು
[ಬದಲಾಯಿಸಿ]- ಈ ಲೇಖನ ಮೈಸೂರು ವಿಶ್ವವಿದ್ಯಾಲಯದ ವಿಶ್ವಕೋಶದ ಲೇಖನ - ಅದನ್ನು ವಿಕೀಕರಣ ಮಾಡಿದೆ ಅಷ್ಟೆ. ಅದರಲ್ಲಿ ಶೀರ್ಷಿಕೆ 'ಕನ್ನಡ ಜಾನಪದ' ಎಂದೇ ಇದೆ. ಈ ಲೇಖನ ಕನ್ನಡ ಜನಪದದ ಎಲ್ಲಾ ವಿಷಯಗಳನ್ನು ಒಟ್ಟಾಗಿ ಚರ್ಚಿಸುತ್ತದೆ. ಕನ್ನಡದಲ್ಲಿ ಸಾಹಿತ್ಯದ ಬಗ್ಗೆ ಹೆಚ್ಚು ಸಂಶೋದನೆಯಾಗಿರುವುದರಿಂದ ಆ ಪ್ರಕಾರದ ವಿಷಯ ಹೆಚ್ಚಾಗಿ ಲೇಖನದಲ್ಲಿ ಇದೆ. ಇದು ಸಮಗ್ರ 'ಕನ್ನಡ ಜಾನಪದ' ವಿಚಾರ ಚರ್ಚಿಸಿರುವ ಲೇಖನ. ಹಾಗಾಗಿ 'ಕನ್ನಡ ಜಾನಪದ' ಎಂಬ ಹೆಸರು ಸರಿಯಾದುದು. ಅದನ್ನು ಇಲ್ಲಿ ವಿಕೀಕರಣಗೊಳಿಸುವಾಗ ಸಾಹಿತ್ಯ ವಿಚಾರ ಹೆಚ್ಚು ಇರುವುದರಿಂದ ಅದನ್ನು "ಜಾನಪದ ಸಾಹಿತ್ಯ" ಎಂದು ಸರಳವಾಗಿ ಶೀರ್ಷಿಕೆ ಕೊಟ್ಟಿದೆ. "ಜಾನಪದ" ಎಂಬ ಪದದ ಹುಟ್ಟನ್ನು ವಿಚಾರ ಮಾಡಿದರೆ- ಸರಳವಾಗಿ "ಯಾವುದೇ ವಿಚಾರವು, ಜನಪದಕ್ಕೆ ಸಂಬಂಧ ಪಟ್ಟುದು ಜಾನಪದ" ಎಂದಾಗುವುದು, ಆದ್ದರಿಂದ ಆ ಹೆಸರೂ ತಪ್ಪಾಗಿ ಕಾಣದು. ರೂಢಿಯಲ್ಲಿ ವಿಭಾಗಗಳಿಗೆ ಕೇವಲ ಜನಪದ ಎಂದೂ, ಸಮಗ್ರ ಜನಪದ-ವಿಚಾರಕ್ಕೆ ಜಾನಪದ ಎಂದೂ ಪ್ರತ್ಯೇಕಿಸಿರಬಹುದು. ವಾಸ್ತವವಾಗಿ ಜಾನಪದ ಎಂದರೆ ಜನಪದಕ್ಕೆ ಸಂಬಂಧಪಟ್ಟ ವಿಷಯ ಎಂದೇ ಅರ್ಥ. ಆದರೆ ಮೈ.ವಿ.ವಿಶ್ವಕೋಶದ ಈ ಲೇಖನದ ಮೂಲ, ಸಮಗ್ರ ಜಾನಪದಕ್ಕೆ ಸಂಭಂಧಿಸಿದೆ. ಅಗತ್ಯ ವಾದರೆ ಮೂಲ ಹೆಸರು 'ಕನ್ನಡ ಜಾನಪದ' ಎಂಬ ಹೆಸರನ್ನೇ ಉಳಿಸಿಕೊಳ್ಳಬಹುದು.-
- ಆದರೆ ಲೇಖನದ ಮೊದಲ ಪ್ಯಾರಾದಲ್ಲಿ ನಿನಾದ ಮೈಸೂರು ಇವರು ತಮ್ಮ ತಕರಾರು ಅನಿಸಿಕೆ ಬರೆದಿರುವುದು ದೊಡ್ಡ ತಪ್ಪು.
- ಮಾನ್ಯ ಪವನಜರ ಆಭಿಪ್ರಾಯದಂತೆ ಆಗಲಿ.
- Bschandrasgr (ಚರ್ಚೆ) ೧೪:೨೧, ೨೯ ಸೆಪ್ಟೆಂಬರ್ ೨೦೨೦ (UTC)
- Folk ಪದಕ್ಕೆ ಜನಪದ ಎಂದೂ, Folklore ಪದಕ್ಕೆ ಜಾನಪದ ಎಂದೂ ಬಹಳ ವಿದ್ವತ್ಪೂರ್ಣವಾಗಿ ಡಾ. ಹಾ. ಮಾ. ನಾಯಕರು ತುಂಬಾ ಹಿಂದೆಯೇ ಬಳಕೆಗೆ ತಂದಿದ್ದಾರೆ. "ಕನ್ನಡ ಜಾನಪದ" ಎಂದಾದರೆ ಖಂಡಿತ ತಪ್ಪಿಲ್ಲ. ಯಾಕೆಂದರೆ ಆಗ ಕೇವಲ ಸಾಹಿತ್ಯ ಬರುವುದಿಲ್ಲ. ಜಾನಪದದ ಇತರೆ ವಿಷಯಗಳೂ ಅಲ್ಲಿ ದಾಖಲಾಗುವುದರಿಂದ ಅದು ಸರಿಯಾದ ಶೀರ್ಷಿಕೆಯೇ ಆಗುತ್ತದೆ. ಜಾನಪದ ಈಗ ಅಧ್ಯಯನ ಶಿಸ್ತಾಗಿ ಬೆಳೆಯುತ್ತಿದೆ. ಸರಿಯಾದ ಪದಬಳಕೆಯನ್ನು ಮಾಡಿಕೊಳ್ಳುವ ಅಗತ್ಯ ಖಂಡಿತ ಇದೆ. ಕನ್ನಡ ಜಾನಪದ ಖಂಡಿತ ಸರಿ, ಆದರೆ ಜಾನಪದ ಸಾಹಿತ್ಯ ಸರಿಯಾದ ಬಳಕೆಯಲ್ಲ. ಲೇಖನದ ಮೊದಲಲ್ಲಿ ನಾನು ಬರೆದದ್ದು ಓದುವವರು ಪ್ರಾರಂಭದಲ್ಲೇ ಅರ್ಥೈಸಿಕೊಳ್ಳಲಿ ಎಂಬ ಸದುದ್ದೇಶದಿಂದ, ತಕರಾರು ಖಂಡಿತ ಅಲ್ಲ. NinadMysuru (ಚರ್ಚೆ) ೦೧:೩೦, ೩೦ ಸೆಪ್ಟೆಂಬರ್ ೨೦೨೦ (UTC)