ವಿಷಯಕ್ಕೆ ಹೋಗು

ARM ಆರ್ಕಿಟೆಕ್ಚರ್ (ವಿನ್ಯಾಸ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ARM
DesignerARM Holdings
Bits32
Introduced1983
VersionARMv7
DesignRISC
TypeRegister-Register
EncodingFixed
BranchingCondition code
EndiannessBi
ExtensionsNEON, Thumb, Jazelle, VFP
Registers
16

ARM (ಎಆರ್ಎಂ) ಎನ್ನುವುದು ARM ಹೋಲ್ಡಿಂಗ್ಸ್ ಎನ್ನುವ ಕಂಪನಿ ಅಭಿವೃದ್ಧಿಪಡಿಸಿರುವ 32 ಬಿಟ್ ರಿಡ್ಯೂಸ್ಡ್ ಇನಸ್ಟ್ರಕ್ಷನ್ ಸೆಟ್ ಕಂಪ್ಯೂಟರ್ (RISC) ಇನಸ್ಟ್ರಕ್ಷನ್ ಸೆಟ್ ಆರ್ಕಿಟೆಕ್ಚರ್(ISA). (ರೆಡ್ಯೂಸಡ್ ಇನ್ಸ್‌ಟ್ರಕ್ಷನ್ ಸೆಟ್ ಕಂಪ್ಯೂಟಿಂಗ್ - ಸಂಕ್ಷಿಪ್ತವಾಗಿ RISC ಎಂದು ಕೆರಯಲಾಗುವ- ಇದು CPU ರಚನೆ ವ್ಯವಸ್ಥೆ ಪ್ರತಿನಿಧಿಸುತ್ತದೆ ಇದರಿಂದಾಗಿ ಸೂಚನೆಗಳನ್ನು ಸರಳಿಕರಸಿಬಹುದಾಗಿದ್ದು, ಇದರಿಂದ ಸೂಚನೆಗಳನ್ನು ಕಡಿಮೆ ಪ್ರಮಾಣದಲ್ಲಿ ಆದರೆ ವೇಗವಾಗಿ ಅನುಷ್ಠಾನಗೊಳ್ಳುವುದರಿಂದ ಹೆಚ್ಚಿನ ಕಾರ್ಯಕ್ಷಮತೆಯನ್ನು ಪಡೆಯಬಹುದು.). ಹಿಂದೆ ಇದನ್ನು, ಅಡ್ವಾನ್ಸಡ್ RISC ಮಷೀನ್ ಎಂದೂ ಹಾಗು ಅದಕ್ಕೂ ಹಿಂದೆ ಇದನ್ನು ಆಕ್ರಾನ್ RISC ಮಷೀನ್ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. 32-ಬಿಟ್ ISA ಗಳ ಪೈಕಿ ಸಂಖ್ಯೆಯ ದೃಷ್ಟಿಯಿಂದ ಬಹಳ ವ್ಯಾಪಕವಾಗಿ ಬಳಸಲಾಗುತ್ತಿರುವ ವಿನ್ಯಾಸವೆಂದರೆ ARM ವಿನ್ಯಾಸ(ಆರ್ಕಿಟೆಕ್ಚರ್).[][] ಮೂಲತಃ ಅಕಾರ್ನ್ ಕಂಪ್ಯೂಟರ್ಸ್, ಇವುಗಳನ್ನು ಡೆಸ್ಕಟಾಪ್ ಕಂಪ್ಯೂಟರ್‌ಗಳಲ್ಲಿ ಬಳಸಲಾಗುವ ಪ್ರೊಸೆಸರ್‌ಗಳಂತೆ (ಪ್ರೊಸೆಸರ್: ಸಂಸ್ಕಾರಕ) ಯೋಚಿಸಿತು. ಈ ಮಾರುಕಟ್ಟೆಯನ್ನು, IBM-PCಗೆ ಸರಿಹೊಂದುವ ಕಂಪ್ಯೂಟರ್‌ಗಳಲ್ಲಿ ಬಳಕೆಯಾಗುವ, x86 ಫ್ಯಾಮಿಲಿ (ಪ್ರೊಸೆಸರ್) ಆವರಿಸಿಕೊಂಡಿದೆ. AR ಪ್ರೊಸೆಸರ್‌ಗಳ ತಂತ್ರಜ್ಞಾನದಿಂದಾಗಿ, ಇವುಗಳು ಕಡಿಮೆ ವಿದ್ಯುತ್ ಬಳಕೆ ಮಾಡುವ ಸಾಧನಗಳಿಗೆ (ಅಪ್ಲಿಕೇಷನ್) ಸೂಕ್ತವಾಗಿದೆ. ಇದರ ಕಡಿಮೆ ಬೆಲೆ ಮತ್ತು ಚಿಕ್ಕ ಗಾತ್ರದ ಮೈಕ್ರೋಪ್ರೊಸೆಸರ್ ಮತ್ತು ಮೈಕ್ರೋಕಂಟ್ರೋಲರ್‌ಗಳಿಂದಾಗಿ, ಇದನ್ನು ಮೋಬೈಲ್ ಮತ್ತು ಎಂಬೆಡೆಡ್ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ ಪ್ರಬಲವಾಗಿಸಿವೆ. ಇತ್ತೀಚಿನ 2007ರವರೆಗೆ, ಒಂದು ಶತಕೋಟಿಗೂ ಹೆಚ್ಚಾಗಿ ಮಾರಾಟವಾದ ಮೊಬೈಲ್ ಪೋನ್‌ಗಳಲ್ಲಿ, ಸುಮಾರು ಶೇ.98 ಪೋನ್‌ಗಳ ಪೈಕಿ ಒಂದಾದರೂ ARM ಪ್ರೊಸೆಸರ್ ಬಳಸಲಾಗಿದೆ.[] ಇದಲ್ಲದೆ, 2009ರವರೆಗೆ, ಎಂಬೆಡೆಡ್ 32-ಬಿಟ್ RISC ಪ್ರೊಸೆಸರ್‌ಗಳ ಪೈಕಿ, ARM ಪ್ರೊಸೆಸರ್‌ಗಳು ಶೇ. 90ರಷ್ಟನ್ನು ಆವರಿಸಿಕೊಂಡಿದೆ. ARM ಪ್ರೊಸೆಸರ್‌ಗಳನ್ನು ಈ ಕೆಳಕಂಡ ಸಾಧನಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ:PDA (ಪಿಡಿಎ), ಮೊಬೈಲ್ ಫೋನ್‌, ಡಿಜಿಟಲ್ ಮಿಡಿಯಾ ಮತ್ತು ಮ್ಯೂಸಿಕ್ ಪ್ಲೇಯರ್‌, ಹ್ಯಾಂಡ್ ಹೆಲ್ಡ್ ಗೇಮ್ ಕನ್ಸೋಲ್,ಕ್ಯಾಲ್ಯ್ಕುಲೇಟರ್ ಗಳಂತಹ ಅನೇಕ ಎಲೆಕ್ಟ್ರಾನಿಕ್ ಉಪಕರಣಗಳು; ಹಾರ್ಡ್ ಡ್ರೈವ್, ಮತ್ತು ರೂಟರ್ಸ್ ಗಳಂತಹ ಇತರ ಕಂಪ್ಯೂಟರ್ ಸಾಧನಗಳು. ARM ಆರ್ಕಿಟಿಕ್ಚರ‍್ಗೆ(ವಿನ್ಯಾಸ) ಅನುಮತಿ(ಪರವಾನಿಗೆ/ಲೈಸೆನ್ಸ್) ಪಡೆಯಬೇಕು. ARM ಪರವಾನಿಗೆಯನ್ನು ಹಾಲಿಯಾಗಿ ಮತ್ತು ಪೂರ್ವದಲ್ಲಿ ಪರವಾನಿಗೆ ಪಡೆದಿರುವ ಕಂಪನಿಗಳೆಂದರೆ: ಅಲ್ಕಾಟೆಲ್-ಲೂಸೆಂಟ್, Apple Inc.,(ಆಪಲ್) ಆಟ್ಮೆಲ್, ಬ್ರಾಡ್‌ಕಾಮ್, ಸಿರಸ್ ಲಾಜಿಕ್, ಡಿಜಿಟಲ್ ಇಕ್ವಿಪ್‌ಮೆಂಟ್ ಕಾರ್ಪೋರೇಷನ್ , ಫ್ರೀ ಸ್ಕೇಲ್, ಇಂಟೆಲ್(ಡಿಇಸಿ ಮೂಲಕ), LG(ಎಲ್‌ಜಿ), ಮಾರ್ವೆಲ್ ಟೆಕ್ನಾಲಾಜಿ ಗ್ರೂಪ್, NEC (ಎನ್ಇಸಿ), NVIDIA(ಎನ್‌ವಿಡಿಯಾ), NXP(ಎನ್ಎಕ್ಸ್‌ಪಿ; ಇದಕ್ಕೂ ಮುಂಚೆ ಫಿಲಿಪ್ಸ್ ಆಗಿತ್ತು), ಒಕಿ, ಕ್ವಾಲ್ಕೊಮ್, ಸ್ಯಾಮ್ಸಂಗ್, ಶಾರ್ಪ್, STಮೈಕ್ರೋಎಲೆಕ್ಟ್ರಾನಿಕ್ಸ್, ಸಿಂಬಯೋಸ್ ಲಾಜಿಕ್, ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್, VLSI (ವಿಎಲ್ಎಸ್ಐ) ಟೆಕ್ನಾಲಾಜಿ, ಯಮಾಹಾ ಮತ್ತು ಝೀಲ್ಯಾಬ್ಸ್. ARM ಪ್ರೊಸೆಸರ್‌ಗಳನ್ನು, ARM ಮತ್ತು ARM ಲೈಸೆನ್ಸ್ ಹೊಂದಿರುವವರು ಅಭಿವೃದ್ದಿ ಪಡಿಸುತ್ತಾರೆ. ARM ಹೋಲ್ಡಿಂಗ್ಸ್ ಅಭಿವೃದ್ದಿಪಡಿಸಿರುವ ಪ್ರಮುಖ ARM ಪ್ರೊಸೆಸರ್‌ಗಳು: ARM7, ARM9, ARM11 ಮತ್ತು ಕಾರ್ಟೆಕ್ಸ್. ARM ಪರವಾನಿಗೆಯನ್ನು ಪಡೆದಿರುವ ಸಂಸ್ಥೆಗಳು ಅಭಿವೃದ್ಧಿ ಪಡಿಸಿರುವ ARM ಪ್ರೊಸೆಸರ್‌ಗಳ ಉದಾಹರಣೆಗಳು:DEC ಸ್ಟ್ರಾಂಗ್ARM, ಫ್ರೀಸ್ಕೇಲ್ i.MX, ಮಾರ್ವೆಲ್‌ನ (ಹಿಂದೆ ಇಂಟೆಲ್) ಎಕ್ಸ್‌ಸ್ಕೇಲ್, NVIDIAದ ಟೆಗ್ರಾ , ST-ಎರಿಕ್ಸನ್ ನ ನೊಮ್ಯಾಡಿಕ್, ಕ್ವಾಲ್ಕೊಮ್‌ನ , ಸ್ನಾಪ್‌ಡ್ರಾಗನ್ ಮತ್ತು ದಿ ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್OMAP ಸರಣಿಯ ಉತ್ಪನ್ನಗಳು.

ಇತಿಹಾಸ

[ಬದಲಾಯಿಸಿ]

BBC ಮೈಕ್ರೊಪ್ರೊಸೆಸರ್‌ಗಳಲ್ಲಿ ಸ್ವಲ್ಪ ಮಟ್ಟದ ಯಶಸ್ಸನ್ನು ಕಂಡಿದ್ದ ಆಕ್ರಾನ್ ಕಂಪ್ಯೂಟರ್ಸ್ ಲಿಮೆಟೆಡ್, ಸರಳ MOS ತಂತ್ರಜ್ಙಾನ ಆಧಾರಿತ 6502 ಪ್ರೊಸೆಸರ್‌ಗಳ ತಯಾರಿಕೆಯಿಂದ ಮುಂದುವರೆದು 1981ರಲ್ಲಿ ಬಿಡುಗಡೆಗೊಂಡು ಮಾರುಕಟ್ಟೆಯನ್ನು ವ್ಯಾಪಿಸಿಕೊಳ್ಳುತ್ತಿದ್ದ IBM PCಗಳ ಮಾರುಕಟ್ಟೆಯ ಅವಶ್ಯಕತೆಗಳನ್ನು ಪೂರೈಸುವತ್ತ ಗಮನಕೊಡತೊಡಗಿತು. ಆಕ್ರಾನ್ ಬಿಸಿನೆಸ್ ಕಂಪ್ಯೂಟರ್ (ABC) ಯೋಜನೆಯಡಿಯಲ್ಲಿ BBC ಮೈಕ್ರೋ ಫ್ಲಾಟ್‌ಫಾರಂನ ಜೊತೆಯಲ್ಲಿ ಹಲವು ಪ್ರೊಸೆಸರ್‌ಗಳು ಎರಡನೆಯ ಪ್ರೊಸೆಸರ್‌ ಸ್ಥಾನದಲ್ಲಿ ಕೆಲಸ ಮಾಡಬೇಕಿತ್ತು. ಆದರೆ, ಆಗ ಇದ್ದ ಪ್ರೊಸೆಸರ್‌ಗಳಾದ ಮೋಟೋರೋಲಾ 6800, ಮತ್ತು ನಾಷಿನಲ್ ಸೆಮಿಕಂಡಕ್ಟರ್ 32016 ಇದಕ್ಕೆ ಸರಿಹೊಂದುತ್ತಿರಲಿಲ್ಲ. ಇದಲ್ಲದೆ, 6502 ಪ್ರೊಸೆಸರ್ ಗ್ರಾಫಿಕ್ಸ್ ಬೇಸಡ್ ಯುಸರ್ ಇಂಟರ್ಫೇಸ್ ಅನ್ನು ಕಾರ್ಯಗತಗೊಳಿಸುವಷ್ಟು ಶಕ್ತಿಯುತವಾಗಿರಲಿಲ್ಲ. ಆಕ್ರಾನ್ ಆಗ ಇದ್ದ ಎಲ್ಲಾ ಪ್ರೊಸೆಸರ್‌ಗಳನ್ನು ಪರೀಕ್ಷಿಸಿತು, ಆದರೆ ಯಾವುದೂ ಅದರ ಅವಶ್ಯಕತೆಯನ್ನು ಪೂರೈಸುತ್ತಿರಲಿಲ್ಲ. ಈ ಹಂತದಲ್ಲಿ ಅಕ್ರಾನ್ ತನ್ನದೇ ಆದ ಪ್ರೊಸೆಸರ್‌ ಅನ್ನು ವಿನ್ಯಾಸಗೊಳಿಸುವ ಬಗ್ಗೆ ಗಂಭೀರ ಚಿಂತನೆ ಆರಂಭಿಸಿತು, ಆಗ ಅದರ ಇಂಜಿನೀಯರುಗಳು ಬರ್ಕಲಿ RISC ಪ್ರಾಜೆಕ್ಟ್‌ ಎನ್ನುವ ಸಂಶೋಧನೆಯ ಬಗ್ಗೆ ತಿಳಿದುಕೊಂಡರು. ಅವರಿಗೆ ಪದವಿ ಓದುತ್ತಿರುವ ವಿದ್ಯಾರ್ಥಿಗಳು ಸಕ್ಷಮವಾದ 32-ಬಿಟ್ ಪ್ರೊಸೆಸರ್ ವಿನ್ಯಾಸಗೊಳಿಸಲು ಸಾಧ್ಯವಾಗುವದಾದರೆ, ಆಕ್ರಾನ್ ಸಂಸ್ಥೆ ಕೂಡ ಅವುಗಳನ್ನು ರಚಿಸಬಹುದು ಎಂದೆನಿಸಿತು. ಫೀನಿಕ್ಸ್ ನಲ್ಲಿದ ವೆಸ್ಟರ್ನ್ ಡಿಸೈನ್ ಸೆಂಟರ‍್ಗೆ, ಆಕ್ರಾನ್ ಇಂಜಿನಿಯರುಗಳಾದ ಸ್ಟೀವ್ ಫರ್ಬರ್ ಮತ್ತು ಸೋಫಿ ವಿಲ್ಸನ್ ಭೇಟಿ ನೀಡಿದಾಗ, ಇಂಥ ಸಂಶೋಧನೆಯ ಕಾರ್ಯಕ್ಕೆ ಹೆಚ್ಚಿನ ಸಂಪನ್ಮೂಲ ಅಥವಾ ಅತ್ಯಾಧುನಿಕವಾದ ಸಂಶೋಧನೆ ಹಾಗು ಅಭಿವೃದ್ಧಿ ಕೇಂದ್ರದ ಅವಶ್ಯಕತೆ ಇಲ್ಲ ಎಂದು ಮನವರಿಕೆಯಾಯಿತು ಆನಂತರ, ವಿಲ್ಸನ್ 6502 ಅನ್ನು ಎರಡನೆಯ ಪ್ರೊಸೆಸರ್‌ನ್ನಾಗಿ ಹೊಂದಿದ್ದ BBC ಮೈಕ್ರೋಗೆ BBC ಬೇಸಿಕ್ ದಲ್ಲಿ 6502 ಸೆಕೆಂಡ್ ಪ್ರೊಸೆಸರ್ ಕಾರ್ಯನಿರ್ವಹಿಸಬಹುದಾದಂಥ ಇನ್‌ಸ್ಟ್ರಕ್ಷನ್ ಸೆಟ್ (ಸೂಚನಾ ಸಮೂಹ) ಅಭಿವೃದ್ಧಿಪಡಿಸಲು ಹಾಗೂ ಬಿಬಿಸಿ ಬೆಸಿಕ್ ನಲ್ಲಿ ಪ್ರೊಸೆಸರ್ ನ ಸಿಮ್ಯುಲೇಷನ್ ಬರೆದ(ಸಿಮ್ಯುಲೇಶನ್‌: ಕೆಲವು ನೈಜ ಸಂಗತಿ, ಸ್ಥಿತಿಗತಿಗಳು ಅಥವಾ ಪ್ರಕ್ರಿಯೆಯ ತದ್ರೂಪವನ್ನು ಸೃಸ್ಟಿಸಿ ಅಂಥ ಸನ್ನಿವೇಶದಲ್ಲಿ ವಾಸ್ತವದ ಕಾರ್ಯ ನಿರ್ವಹಣೆ ಮಾಡುವುದಕ್ಕೆ ಸಿಮ್ಯುಲೇಶನ್(=ಅನುಕರಣೆ) ಎನ್ನುತ್ತಾರೆ.).

ಇದು, ಆಕ್ರಾನ್ ಇಂಜನಿಯರುಗಳಿಗೆ ಅವುರುಗಳು ಸರಿಯಾದ ದಾರಿಯಲ್ಲಿ ಸಾಗುತ್ತಿರುವ ವಿಶ್ವಾಸ ಮೂಡಿಸಿತು. ಈ ನಿಟ್ಟಿನಲ್ಲಿ ಇನ್ನಷ್ಟು ಮುಂದೆ ಸಾಗಲು, ಅವರಿಗೆ ಮತ್ತಷ್ಟು ಸಂಪನ್ಮೂಲಗಳು ಬೇಕಾದವು. ಈ ಹಂತದಲ್ಲಿ ವಿಲ್ಸನ್, ಅಕ್ರಾನ್ CEO(ಸಿ.ಇ.ಒ)ಹರ್ಮನ್ ಹೌಸೇರ್ ಅನ್ನು ಭೇಟಿಯಾಗಿ ತಮ್ಮ ಕಾರ್ಯಯೋಜನೆ ವಿವರಿಸಲು ನಿರ್ಧರಿಸಿದರು.
ಈ ಕಾರ್ಯಯೋಜನೆಗೆ ಒಪ್ಪಿಗೆ ದೊರೆತ ಬಳಿಕ ವಿಲ್ಸನ್ ವಿನ್ಯಾಸಮಾಡಿದ್ದ ಮಾಡಲ್‌ಯನ್ನು (ಮಾದರಿ) ಹಾರ್ಡ್‌ವೇರ್‌ನಲ್ಲಿ (ಯಂತ್ರಾಂಶ) ಅಳವಡಿಸಿಕೊಳ್ಳಲು ಒಂದು ಪುಟ್ಟ ತಂಡ ರಚಿಸಲಾಯಿತು. 
ಮುಖ್ಯವಾಗಿ ರೂಟರ್ ಗಳಲ್ಲಿ ಬಳಕೆಯಾಗುವ ಕಾನೆಕ್ಸಾನ್ಟ್ ARM ಪ್ರೊಸೆಸರ್

ಅಕ್ರಾನ್ RISC ಮಷೀನ್: ARM2

[ಬದಲಾಯಿಸಿ]

ಆಕ್ರಾನ್ RISC ಮಷೀನ್ ಪ್ರಾಜೆಕ್ಟ್ ಅಧಿಕೃತವಾಗಿ ಆಕ್ಟೋಬರ್ 1983ರಲ್ಲಿ ಪ್ರಾರಂಭವಾಯಿತು. VLSI Technology,INC (ವಿ.ಎಲ್.ಎಸ್.ಐ. ಟೆಕ್ನಾಲಜಿ) ಯನ್ನು ಸಿಲಿಕಾನ್ ಪಾಲುದಾರನಾಗಿ ಆಯ್ಕೆಮಾಡಲಾಯಿತು, ಏಕೆಂದರೆ ಇದಕ್ಕೂ ಮೊದಲು ಅದು ಆಕ್ರಾನ್ ಸಂಸ್ಥೆಗೆ ROM(ಆರ್.ಒ.ಎಂ.) ಗಳನ್ನು ಮತ್ತು ಕೆಲವು ಆಕ್ರಾನ್ ಸಂಸ್ಥೆಗೆಂದೆ ವಿಶೇಷವಾಗಿ ತಯಾರಿಸಲಾದ ಚಿಪ್‌ಗಳನ್ನು ಸರಬರಾಜು ಮಾಡಿತ್ತು.

ಈ ವಿನ್ಯಾಸ ರಚನೆ ವಿಲ್ಸನ್ ಮತ್ತು ಫರ್ಬರ್‌ರ ಮುಂದಾಳತ್ವದಲ್ಲಿ ನಡೆಯಿತು. ಆಗ ಇದ್ದ ಆಕ್ರಾನ್‌ನ ಕಂಪ್ಯೂಟರ್ ಮಾದರಿಗಳಲ್ಲಿ ಬಳಸಲಾಗಿದ್ದ MOS ಟೆಕ್ನಾಲಜಿ 6502 ಯ ರೀತಿಯಲ್ಲಿಯೆ ಇನ್‌ಪುಟ್/ಔಟ್‌ಪುಟ್(ಇಂಟರ್ಪಟ್)ಗಳನ್ನು ಹ್ಯಾಂಡಲ್ ಮಾಡುವಲ್ಲಿ ಅತಿ ಕಡಿಮೆ ಲೊ-ಲೇಟನ್ಸಿ ಸಾಧಸಿವುದು, ಹೊಸ ವಿನ್ಯಾಸದ ರಚನೆಯ ಮುಖ್ಯ ಉದ್ದೇಶವಾಗಿತ್ತು. 6502 ಮೆಮೊರಿ ಆಕ್ಸಸ್ ಅರ್ಕಿಟೆಕ್ಚರ್‌ನಿಂದಾಗಿ,ತಯಾರಿಕರು ದುಬಾರಿಯಾದ ಡೈರೆಕ್ಟ್ ಮೆಮೊರಿ ಆಕ್ಸಸ್ ಹಾರ್ಡ್‌ವೇರ್‌ಗಳನ್ನು ಬಳಸದೆ,ವೇಗವಾದ ಮಷೀನ್‌‌ಗಳನ್ನು ತಯಾರಿಸಲು ಸಾಧ್ಯವಾಯಿತು. VLSI, ಮೊದಲ ARM ಸಿಲಿಕಾನ್‌ ಅನ್ನು 26 ಏಪ್ರಿಲ್ 1985ರಂದು ತಯಾರಿಸಿತು-ಇದು ಯಶಸ್ವಿಯಾಗಿ ಕಾರ್ಯನಿರ್ವಹಿಸಿತು, ಇದನ್ನು ನಂತರ ARM1 ಎಂದು ಕರೆಯಲಾಯಿತು.[] ಇದರ ಮೊದಲ "ನಿಜ" ಉತ್ಪನವಾದ ARM2 ಇದರ ನಂತರದ ವರ್ಷದಲ್ಲಿ ಬಿಡುಗಡೆಯಾಯಿತು.

ಇದನ್ನು BBC ಮೈಕ್ರೋದಲ್ಲಿ ಎರಡನೇ ಪ್ರೊಸೆಸರ್ ಆಗಿ ಬಳಸಿದಾಗ, ಇದರ ಮೊದಲ ನಿಜಾವಾದ ಪ್ರಯೋಜನ ಪಡೆಯಲಾಯಿತು. ಇದನ್ನು ಸಿಮ್ಯುಲೇಷನ್ ಸಾಪ್ಟ್‌ವೇರ್ ಅಭಿವೃದ್ಧಿ ಪಡಿಸಿ ಸಪೋರ್ಟ್ ಚಿಪ್‌ಗಳ (VIDC, IOC, MEMC)ಕೆಲಸವನ್ನು ಪೂರ್ಣಮಾಡಲು ಬಳಸಲಾಯಿತು. ಇದಲ್ಲದೆ, ಇದರಿಂದ ARM2ಯನ್ನು ಅಭಿವೃದ್ಧಿ ಮಾಡಲು ಬಳಸಲಾಗುತ್ತಿದ್ದ CAD(ಕ್ಯಾಡ್) ಸಾಪ್ಟ್‌ವೇರ್‌ನ ಕಾರ್ಯಕ್ಷಮತೆಯ ವೇಗ ಹೆಚ್ಚಿಸಲು ಕೂಡ ಬಳಸಲಾಯಿತು. ವಿಲ್ಸನ್ ತರುವಾಯ,ARM ಅಸೆಂಬ್ಲಿ ಲ್ಯಾಂಗ್ವೇಜಿನಲ್ಲಿ BBC ಬೇಸಿಕ್ ಅನ್ನು ಕೋಡ್ ಮಾಡಿದನು. ಈ ಸೂಚನಾ ಸಮೂಹ (ಇನ್‌ಸ್ಟ್ರಕ್ಷನ್ ಸೆಟ್) ಅನ್ನು ಅಭಿವೃದ್ಧಿ ಮಾಡಿದ್ದರಿಂದ ಸಿಕ್ಕ ಅಳವಾದ ಜ್ಞಾನ, ಬಳಸಿ ಈ ಕೋಡನ್ನು ಅತ್ಯಂತ ಸಾಂದ್ರವಾಗಿ ಮಾಡಲು ಸಾಧ್ಯವಾಯಿತು. ಹೀಗಾಗಿ, ಯಾವುದೇ ARM ಎಮುಲೇಟರ್ ಅನ್ನು ಪರೀಕ್ಷಿಸಲು ARM BBC ಬೇಸಿಕ್ ಉತ್ತಮವಾದ ಮಾಪನವಾಯಿತು. ARM ಅಧಾರಿತ ಕಂಪ್ಯೂಟರ್ ಅನ್ನು ತಯಾರಿಸುವ ಇವರ ಮೂಲ ಉದ್ದೇಶ, 1987ರಲ್ಲಿ ಆಕ್ರಾನ್ ಆರ್ಕಿಮೆಡಿಸ್ ಬಿಡುಗಡೆಯಾಗುವುದರೊಂದಿಗೆ ಸಾಕಾರವಾಯಿತು. ಈ ARM CPU ಪ್ರಾಜೆಕ್ಟ್ ಅನ್ನು ಎಷ್ಟೊಂದು ರಹಸ್ಯವಾಗಿ ಇಡಲಾಗಿತ್ತು ಎಂದರೆ, 1985ರಲ್ಲಿ ಆಕ್ರಾನ್ನಿನ ನಿಯಂತ್ರಣ ಷೇರುಗಳನ್ನು ತೆಗೆದುಕೊಳ್ಳಲು ಹವಣಿಸುತ್ತಿದ್ದ ಓಲಿವಿಟ್ಟಿ ಸಂಸ್ಥೆಗೆ ಕೂಡ ಮಾತುಕತೆ ಮುಗಿದು ಪೂರ್ಣವಾಗಿ ಇತ್ಯರ್ಥವಾಗುವ ತನಕ, ಅದನ್ನು (ಸಿ.ಪಿ.ಯು)ಅಭಿವೃದ್ಧಿ ಪಡಿಸುತ್ತಿರುವ ತಂಡದ ಬಗ್ಗೆ ಸುಳಿವನ್ನು ನೀಡಲಾಗಿರಲಿಲ್ಲ. 1992 ರಲ್ಲಿ ಅಕಾರ್ನ್ ಮತ್ತೊಂದು ಬಾರಿ, ARM ತಂತ್ರಜ್ಞಾನಕ್ಕಾಗಿ ಕ್ವೀನ್ಸ್ ಅವಾರ್ಡ್ ಫಾರ್ ಟೆಕ್ನಾಲಜಿ (ಹೊಸ ತಂತ್ರಜ್ಞಾನಕ್ಕಾಗಿ ಕೊಡುವ ಕ್ವೀನ್ಸ್ ಪ್ರಶಸ್ತಿ)ಪ್ರಶಸ್ತಿ ಪಡೆಯಿತು. ARM2 ನಲ್ಲಿ ಒಂದು 32-ಬಿಟ್‌ನ ಡಾಟಾ ಬಸ್, ಒಂದು 26-ಬಿಟ್‌ನ ಅಡ್ರೆಸ್ ಸ್ಪೇಸ್ ಮತ್ತು ಹದಿನಾರು 32-ಬಿಟ್‌ನ ರೆಜಿಸ್ಟರ್ ಗಳು ಅಡಕವಾಗಿವೆ.

32-ಬಿಟ್ ರೆಜಿಸ್ಟರ‍್ನ್ ಮೇಲಿನ 4 ಹಾಗು ಕೊನೆಯ 2 ಬಿಟ್‌ಗಳು ಸ್ಟೇಟಸ್ ಫ್ಲಾಗ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರಣ, ಅದರ ಪ್ರೊಗ್ರಾಮ್ ಕೌಂಟರ್ 26 ಬಿಟ್‌ಗೆ ಸೀಮಿತವಾಗಿತ್ತು, ಹೀಗಾಗಿ ಪ್ರೊಗ್ರಾಮ್ ಕೋಡ್ ಮೆಮೊರಿಯ ಮೊದಲ 64 Mbyte ಒಳಗಡೆ ಇರಬೇಕಾಗಿತ್ತು. ARM2 ಪ್ರಾಯಶ: ಜಗತ್ತಿನಲ್ಲಿಯೆ ಅತಿ ಸರಳ, ಉಪಯುಕ್ತವಾದ 32-ಬಿಟ್ ಮೈಕ್ರೋಪ್ರೊಸೆಸರ್ ಆಗಿತ್ತು. ಇದರಲ್ಲಿ ಕೇವಲ 30,000 ಟ್ರಾನ್ಸಿಸ್ಟರ್‌ಗಳಿದ್ದವು (ಇದರ ಟ್ರಾನ್ಸಿಸ್ಟರ್ ಕೌಂಟ್ (ಟ್ರಾನ್ಸಿಸ್ಟರ್ ಸಂಖ್ಯೆ) ಅನ್ನು ಆರು ವರ್ಷ ಮುಂಚಿನ ಮೋಟೋರೋಲಾದ 68000 ಮಾಡಲ್‌ಗೆ ಹೋಲಿಸಿನೋಡಿ). ಇದು ಇಷ್ಟೊಂದು ಸರಳವಾಗಿರಲು ಕಾರಣ ಇದರಲ್ಲಿ ಯಾವುದೇ ಮೈಕ್ರೊಕೋಡ್ (ಇದು 68000ರ ಸುಮಾರು ನಾಲ್ಕನೆ ಒಂದು ಭಾಗ ಅಥವಾ ಮೂರನೇ ಒಂದು ಭಾಗವಾಗಿರುತ್ತದೆ) ಹಾಗು ಆಗಿನ ಕಾಲದ ಬಹುತೇಕ CPUಗಳ ಹಾಗೆ ಯಾವುದೇ ಕ್ಯಾಷ್(ಸಿದ್ಧ ಸ್ಮೃತಿಕೋಶ) ಅನ್ನು ಹೊಂದಿರಲಿಲ್ಲ. ಇದರ ಸರಳವಾದ ವಿನ್ಯಾಸದಿಂದಾಗಿ ಇದು ಇಂಟೆಲ್ 80286 ಗಿಂತ ಉತ್ತಮವಾಗಿ ಕೆಲಸ ನಿರ್ವಹಿಸಿದರು ಕೂಡ, ಅದಕ್ಕಿಂತ ಕಡಿಮೆ ವಿದ್ಯುತ್ ಬಳಸುತ್ತಿತ್ತು.[] ಇದಾದ ನಂತರ ARM3ಯನ್ನು 4KB ಕ್ಯಾಷ್ ನೊಂದಿಗೆ ಅಭಿವೃದ್ಧಿಗೊಳಿಸಲಾಯಿತು. ಈ ಕ್ಯಾಷ್‌ನಿಂದಾಗಿ ಇದರ ಕಾರ್ಯಕ್ಷಮತೆ ಇನ್ನೂ ಜಾಸ್ತಿಯಾಯಿತು.

ಆಪೆಲ್, DEC, ಇಂಟೆಲ್: ARM6, ಸ್ಟ್ರಾಂಗ್ARM,ಎಕ್ಸ್‌ಸ್ಕೇಲ್

[ಬದಲಾಯಿಸಿ]

1980 ರ ಕೊನೆಯ ಭಾಗದಲ್ಲಿ, ಆಪೆಲ್ ಕಂಪ್ಯೂಟರ್ ಮತ್ತು VLSI ಟೆಕ್ನಾಲಜಿ , ಆಕ್ರಾನ್ ಜೊತೆಗೂಡಿ ARM ಕೋರ್‌ನ ಹೊಸ ಮಾದರಿಗಳನ್ನು ಅಭಿವೃದ್ಧಿ ಪಡಿಸುವತ್ತ ಗಮನಕೊಟ್ಟವು. ಈ ಕೆಲಸವನ್ನು ಆಕ್ರಾನ್ ಎಷ್ಟೊಂದು ಪ್ರಮುಖವಾಗಿ ಪರಿಗಣಿಸುತ್ತೆಂದರೆ, 1990ರಲ್ಲಿ ತನ್ನ ವಿನ್ಯಾಸ ಮಾಡುವ(ಡಿಸೈನ್) ತಂಡವನ್ನು ಅಡ್ವಾನ್ಸಡ್ RISC ಮಷೀನ್ಸ್ ಲಿಮಿಟೆಡ್ ಎನ್ನುವ ಹೊಸ ಸಂಸ್ಥೆಯನ್ನಾಗಿ ಪರಿವರ್ತಿಸಿತು. ಹೀಗಾಗಿ, ಕೆಲವು ಸಲ ARM ಅನ್ನು ಆಕ್ರಾನ್ RISC ಮಷೀನ್ ಎಂದು ವಿಸ್ತಾರ ಮಾಡುವ ಬದಲು ಅಡ್ವಾನ್ಸಡ್ RISC ಮಷೀನ್ ಎಂದು ವಿಸ್ತಾರ ಮಾಡಲಾಗುತ್ತದೆ. ARM ಹೋಲ್ಡಿಂಗ್ಸ್ ಎನ್ನುವ ಮಾತೃ ಸಂಸ್ಥೆ ಲಂಡನ್ ಷೇರುಪೇಟೆ ಮತ್ತು NASDAQ (ನ್ಯಾಸ್‌ಡ್ಯಾಕ್) ನಲ್ಲಿ ಸೂಚಿತವಾದ ನಂತರ ಅಡ್ವಾನ್ಸಡ್ RISC ಮಷೀನ್ ಎನ್ನುವ ಸಂಸ್ಥೆ, ARM Ltd (ARM ಲಿಮಿಟೆಡ್) ಎಂದಾಯಿತು.[] ಆಪೆಲ್-ARM ಸಹಯೋಗದಿಂದಾಗಿ ARM6 ಅಭಿವೃದ್ಧಿಯಾಗಿ 1992ರ ಪ್ರಾರಂಭದಲ್ಲಿ ಬಿಡುಗಡೆ ಆಯಿತು. ಅಪೆಲ್, ARM-ಅಧಾರಿತ ARM 610 ಅನ್ನು ಆಪೆಲ್ ನ್ಯೂಟನ್ PDA ಯಲ್ಲಿ ಬಳಸಿತು. ಆಕ್ರಾನ್ ಅವರ Risc PC ಯಲ್ಲಿ ARM 610 ಅನ್ನು ಮುಖ್ಯ CPUಯನ್ನಾಗಿ ಬಳಸಿತು. DEC ARM6 ವಿನ್ಯಾಸದ ಪರವಾನಿಗೆಯನ್ನು ಪಡೆದು(ಇದು ಸ್ವಲ್ಪ ಗೊಂದಲ ಉಂಟು ಮಾಡಿತು, ಏಕೆಂದರೆ ಅಲ್ಫಾ ಮೈಕ್ರೋಪ್ರೊಸೆಸರ್ ಅನ್ನು ಕೂಡ ಅಭಿವೃದ್ಧಿ ಮಾಡಿದ್ದು ಇವರೆ)[ಸೂಕ್ತ ಉಲ್ಲೇಖನ ಬೇಕು] ಸ್ಟ್ರಾಂಗ್ARM ಅನ್ನು ಅಭಿವೃದ್ಧಿ ಪಡಿಸಿದರು. 233 MHz ದಲ್ಲಿ ಈ CPU ಕೇವಲ 1 ವ್ಯಾಟ್ ವಿದ್ಯುತ್ ಉಪಯೋಗಿಸುತ್ತದೆ (ಇನ್ನೂ ಇತ್ತೀಚಿನ ಮಾದರಿಗಳು ಇನ್ನೂ ಕಡಿಮೆ ಉಪಯೋಗಿಸುತ್ತದೆ). ಇವರು ಅಭಿವೃದ್ಧಿ ಪಡಿಸಿದ್ದು ದಾವೆಯೊಂದರ ಇತ್ಯರ್ಥಕ್ಕೆಂದು ಇಂಟೆಲ್‌ ಸಂಸ್ಥೆಗೆ ಹಸ್ತಾಂತರವಾಯಿತು. ಈ ಅವಕಾಶವನ್ನು ಬಳಸಿಕೊಂಡ ಇಂಟೆಲ್ ಅದರ ಹಳೆಯದಾಗಿದ್ದ i960 ಲೈನ್(ಸರಣಿ) ಗಳಿಗೆ ಪೂರಕವಾಗಿ ಸ್ಟ್ರಾಂಗ್ARM ಬಳಸಿದರು. ನಂತರ ಇಂಟೆಲ್, ಈ ವಿನ್ಯಾಸವನ್ನು ಇಂಟೆಲ್ ಯಶಸ್ವಿಯಾಗಿ ಅಳವಡಿಸಿಕೊಂಡು ತನ್ನದೆ ಅದ ಹೆಚ್ಚು ಸಕ್ಷಮವಾದ ಎಕ್ಸ್‌ಸ್ಕೇಲ್ ಅಭಿವೃದ್ಧಿ ಪಡಿಸಿತು. ಇದನ್ನು ನಂತರ ಮಾರ್ವೆಲ್‌ ಸಂಸ್ಥೆಗೆ ಮಾರಾಟಮಾಡಿದೆ.

ಪರವಾನಿಗೆಗಳಿಂದಾಗಿ ಬೆಳವಣಿಗೆ

[ಬದಲಾಯಿಸಿ]

ಇಷ್ಟೆಲ್ಲಾ ಬದಲಾವಣೆಗಳ ನಡುವೆಯೂ ARM ಕೋರ್ ಗಾತ್ರ ಸರಿಸುಮಾರು ಅದೇ ಪ್ರಮಾಣದಲ್ಲಿದೆ. ARM2ರಲ್ಲಿ 30,000 ಟ್ರಾನ್ಸಿಸ್ಟರ್‌ಗಳಿದ್ದರೆ ARM6 ಯಲ್ಲಿ ಇದು ಕೇವಲ 35,000ದಷ್ಟಿದೆ. ARMನ ಮುಖ್ಯ ವಹೀವಾಟು IP ಕೋರ್‌ಗಳನ್ನು ಮಾರಾಟ ಮಾಡುವುದು. ಪರವಾನಿಗೆ ಪಡೆದ ಸಂಸ್ಥೆಗಳು ಈ ಕೋರ್ ಅಧಾರದ ಮೇಲೆ ಮೈಕ್ರೋಕಂಟ್ರೊಲರ್‌ಮತ್ತು CPUಗಳನ್ನು ಅಭಿವೃದ್ಧಿ ಮಾಡುತ್ತಾರೆ.

ಇದನ್ನು ಬಹಳ ಯಶಸ್ವಿಯಾಗಿ ARM7DMI ಆಳವಡಿಸಿಲಾಗಿದ್ದು, ಸುಮಾರು ಲಕ್ಷಾಂತರ ಸಂಖ್ಯೆಲ್ಲಿ ಮಾರಾಟವಾಗಿದೆ. ಇದರ ಪ್ರಮುಖವಾದ ಉದ್ದೇಶವೆಂದರೆ, ಮೂಲ ಡಿಸೈನ್(ಮಾದರಿ) ಉತ್ಪಾದಕ ARM ಕೋರ್‌ ಜೊತೆಯಲ್ಲಿ ಕೆಲವು ಆಯ್ದ(ಐಚ್ಛಿಕ)ಭಾಗಗಳನ್ನು ಸೇರಿಸಿ ಒಂದು ಸಂಪೂರ್ಣ CPU ತಯಾರಿಸುತ್ತಾರೆ. ಇದನ್ನು(ಸಿಪಿಯು) ಹಳೆಯ ಸೆಮಿಕಂಡಕ್ಟರ್ ಫ್ಯಾಬ್‌ಗಳ ಮೇಲೆ ತಯಾರಿಸಬಹುದಾಗಿರುವ ಕಾರಣ ಇದನ್ನು ತಯಾರಿಸುವ ವೆಚ್ಚ ಕಡಿಮೆಯಾಗುತ್ತದೆ ಹಾಗು ಉತ್ತಮ ಕಾರ್ಯಕ್ಷಮತೆ ಹೊಂದಿರುತ್ತದೆ. ARM7TDMI ಆಧಾರಿತ ಎಂಬೆಡೆಡ್ ಸಿಸ್ಟಂಗಳ ಮಾದರಿಗಳನ್ನು ವಿನ್ಯಾಸ ಮಾಡುವಲ್ಲಿ ಆಟ್ಮೆಲ್ ಬಹಳ ಹಿಂದಿನಿಂದಲೂ ಸಕ್ರಿಯವಾಗಿದೆ.

ARM 2005ರಲ್ಲಿ ಸುಮಾರು 1.6 ಶತಕೋಟಿಗಳಷ್ಟು ಕೋರ್ ಗಳಿಗೆ ಪರವಾನಿಗೆ ನೀಡಿತು.

2005 ರಲ್ಲಿ ಸುಮಾರು 1 ಶತಕೋಟಿ ARM ಕೋರ್ ಗಳನ್ನು ಮೊಬೈಲ್ ಫೋನ್ ಗಳಲ್ಲಿ ಬಳಸಲಾಯಿತು.[]As of ಜನವರಿ 2008ಐಸಪ್ಲಿ ಎನ್ನುವ ಮಾರುಕಟ್ಟೆ ಸಮೀಕ್ಷಾ ಸಂಸ್ಥೆಯ ವರದಿ, ಇಲ್ಲಿಯವರೆಗೆ ಸುಮಾರು 10 ಶತಕೋಟಿಗಿಂತಲೂ ಹೆಚ್ಚು ARM ಕೋರ್ ಗಳನ್ನು ತಯಾರಿಸಲಾಗಿದ್ದು, 2011ರ ವೇಳೆಗೆ ವರ್ಷವೊಂದಕ್ಕೆ 5 ಶತಕೋಟಿ ARM ಕೋರ್ ಗಳು ಬಳಕೆಯಾಗಲಿದೆ ಎಂದು ತಿಳಿಸಿದೆ.[] 

ಸ್ಮಾರ್ಟ್ ಫೋನ್ ಗಳಲ್ಲಿ, ಪರ್ಸನೆಲ್ ಡಿಜಿಟಲ್ ಅಸಿಸ್ಟೆಂಟ್ಸ್ ಮತ್ತು ಇತರ ಹ್ಯಾಂಡ್ ಹೆಲ್ಡ್ ಡಿವೈಸಸ್ (ಕೈಯಲ್ಲಿ ಹಿಡಿದು ಕೊಳ್ಳಬಹುದಾದ ಸಾಧನಗಳು) ಬೆಂಬಲಿಸುವ ಅರ್ಕಿಟೆಕ್ಚರ್(ವಿನ್ಯಾಸ) ಎಂದರೆ ARMv5. ಎಕ್ಸ್‌ಸ್ಕೇಲ್ (ಎಕ್ಸ್‌ಸ್ಕೇಲ್) ಮತ್ತು ARM926 ಪ್ರೊಸೆಸರ್ ಗಳು ARMv5TEಯಾಗಿವೆ. ಇವುಗಳನ್ನು ಸ್ಟ್ರಾಂಗ್ARM,ARM9TDMI ಮತ್ತು ARM7TDMI ಆಧಾರಿತ ARMv4 ಪ್ರೊಸೆಸರ್ ಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಹೈ-ಎಂಡ್ (ಹೆಚ್ಚು ಸಕ್ಷಮವಾದ) ಉಪಕರಣಗಳಲ್ಲಿ ಕಂಡುಬರುತ್ತವೆ. ಆದರೆ, ಲೋಅರ್ ಎಂಡ್ (ಕಡಿಮೆ ಸಕ್ಷಮವಾದ) ಉಪಕರಣಗಳು ಹಳೆಯ ಕೋರ್ ಗಳನ್ನು ಅವುಗಳ ಪರವಾನಿಗೆಯ ಕಡಿಮೆ ಬೆಲೆಯಿಂದಾಗಿ ಬಳಸಬಹುದು. ಉತ್ತಮ ಮಟ್ಟದ ARMv5 ಕೋರ್ ಗಳಿಗಿಂತಲೂ ARMv6 ಕೋರ್ ಗಳು ಒಂದು ಪಟ್ಟು ಹೆಚ್ಚು ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದವು ಮತ್ತು ಇವುಗಳನ್ನು ಕೆಲವು ಸಂದರ್ಭಗಳಲ್ಲಿ ಬಳಸಲಾಗುತ್ತದೆ. ಆದರೆ ಕಾರ್ಟೆಕ್ಸ್ ಪ್ರೊಸೆಸರ್‌ಗಳು (ARMv7) ಈಗ ಹಿಂದಿನ ಎಲ್ಲಾ ಅವೃತ್ತಿಗಳಗಿಂತಲೂ(ಪೀಳಿಗೆ) ಹೆಚ್ಚು ವೇಗದಲ್ಲಿ ಕಾರ್ಯನಿರ್ವಹಿಸಿ, ಸಕ್ಷಮವಾಗಿ ವಿದ್ಯುತ್ ಬಳಸುತ್ತದೆ. ಕಾರ್ಟೆಕ್ಸ್-A, ಹಿಂದೆ ARM9 ಅಥವಾ ARM11 ಬಳಸುತ್ತಿದ್ದ ಸ್ಮಾರ್ಟ್ ಫೋನ್‌ಗಳ ಅವಶ್ಯಕತೆಯಿರುವ ಅಪ್ಲಿಕೇಷನ್ ಪ್ರೊಸೆಸರ್‌ ಅಭಿವೃದ್ಧಿಪಡಿಸುವ ಗುರಿಹೊಂದಿದೆ. ಕಾರ್ಟೆಕ್ಸ್-R, ರಿಯಲ್ ಟೈಮ್ ಅಪ್ಲಿಕೇಷನ್‌ಗಳನ್ನು, ಕಾರ್ಟೆಕ್ಸ್-M ಮೈಕ್ರೋಕಂಟ್ರೋಲರ್ ಅಭಿವೃದ್ದಿ ಪಡಿಸುವ ಗುರಿ ಹೊಂದಿದೆ. 2009ರಲ್ಲಿ ಕೆಲವು ಉತ್ಪಾದಕರು ARM ಅರ್ಕಿಟೆಕ್ಚರ್ (ವಿನ್ಯಾಸ)CPU ಗಳನ್ನು ಹೊಂದಿರುವ ನೆಟ್‌ಬುಕ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದರು.ಇದರಿಂದಾಗಿ,ಅಲ್ಲಿಯವರೆಗೂ ಮಾರುಕಟ್ಟೆಯನ್ನು ಅವರಿಸಿಕೊಂಡಿದ್ದ ಇಂಟೆಲ್ ಆಟಂ ಆಧಾರಿತ ನೆಟ್‌ಬುಕ್‌ಗಳಿಗೆ ಪ್ರತಿಸ್ಪರ್ಧೆ ದೊರೆತ ಹಾಗೆಯಾಗಿದೆ.[]

ARM ಕೋರ್ ಗಳು

[ಬದಲಾಯಿಸಿ]

ARM ಅವರ ಡಿಸೈನ್‌ಗಳಲ್ಲಿ ARMಕೋರ್‌ಗಳನ್ನು ಬಳಸುವ ಅನೇಕ ಮಾರಾಟಗಾರರ ಕುರಿತಂತೆ ಮಾಹಿತಿ ನೀಡುತ್ತದೆ (2003ರ ಲೈನ್ ಕಾರ್ಡ್, ನೋಡಿರಿ). KEIL, ARM ಅಧಾರಿತ ಪ್ರೊಸೆಸರ್‌ಗಳ ಮಾರಾಟಾಗಾರರ ಕಿರು ಮಾಹಿತಿಯನ್ನು, ಇನ್ನೂ ಹೆಚ್ಚು ಉತ್ತಮ ರೀತಿಯಲ್ಲಿ ನೀಡುತ್ತದೆ.

ಸಮೂಹ(ಫ್ಯಾಮಿಲಿ)

ವಿನ್ಯಾಸದ ಆವೃತ್ತಿ

ಕೋರ್

ಲಕ್ಷಣಗಳು

ಕ್ಯಾಷ್ (I/D)/ MMU

ಲಾಕ್ಷಣಿಕ MIPS @ MHz

ಎಲ್ಲಿ ಬಳಸಲಾಗಿದೆ

ARM1

ARMv1 (ಬಳಕೆಯಲ್ಲಿಲ್ಲದ/ಹಳತಾಗಿ ಹೋಗಿರುವ) ARM1 ಇಲ್ಲ BBC ಮೈಕ್ರೋದ ಎರಡನೇ ಪ್ರೊಸೆಸರ್

ARM ಇವ್ಯಾಲ್ಯುಏಷನ್ ಸಿಸ್ಟಂ

ARM2 ARMv2 (ಬಳಕೆಯಲ್ಲಿಲ್ಲದ) ARM2

ಆರ್ಕಿಟೆಕ್ಚರ್(ವಿನ್ಯಾಸ) 2 MUL(ಮಲ್ಟಿಪ್ಲೈ (ಗುಣಿಸುವ) ಸೂಚನೆಯನ್ನು(ಇನ್‌ಸ್ಟ್ರಕ್ಷನ್) ಸೇರಿಸಿತು

ಇಲ್ಲ 4 MIPS @ 8 MHz
0.33 DMIPS/MHz
ಆಕ್ರಾನ್ ಆರ್ಕಿಮಿಡಿಸ್, ಚೆಸ್ ಮಷೀನ್
ARMv2a (ಬಳಕೆಯಲ್ಲಿಲ್ಲದ) ARM250 ಇಂಟಿಗ್ರೇಟೆಡ್ (ಸಂಘಟಿತ) MEMC (MMU), ಗ್ರಾಫಿಕ್ಸ್ ಮತ್ತು IO ಪ್ರೊಸೆಸರ್ (ಸಂಸ್ಕಾರಕ). ವಿನ್ಯಾಸ 2a SWP ಮತ್ತು SWPB (ಸ್ವಾಪ್ (ಬದಲಿ)) ಸೂಚನೆಗಳನ್ನು ಸೇರಿಸಿದೆ.

ಇಲ್ಲ, MEMC1a

7 MIPS @ 12 MHz ಅಕ್ರಾನ್ ಆರ್ಕಿಮಿಡಿಸ್
ARM3 ARMv2a (ಬಳಕೆಯಲ್ಲಿಲ್ಲದ) ARM2a ARMನಲ್ಲಿ ಮೊದಲ ಬಾರಿಗೆ ಪ್ರೊಸೆಸರ್ ಕ್ಯಾಷ್ ಅನ್ನು ಬಳಸಲಾಯಿತು. 4K ಯುನಿಫೈಡ್ (ಏಕೀಕೃತ) 12 MIPS @ 25 MHz
0.50 DMIPS/MHz
ಅಕ್ರಾನ್ ಆರ್ಕಿಮಿಡಿಸ್
ARM6

ARMv3 (ಬಳಕೆಯಲ್ಲಿಲ್ಲದ)

ARM60 ಪ್ರಪ್ರಥಮವಾಗಿ

v3 ವಿನ್ಯಾಸ 32 ಬಿಟ್ ಮೆಮೊರಿಯ ಅಡ್ರೆಸ್ಸಿಂಗ್ ಅನ್ನು ಬೆಂಬಲಿಸಿತು (26 ಬಿಟ್ಸ್‌ಗಳಿಗೆ ಹೋಲಿಸಿದಾಗ).

ಇಲ್ಲ 10 MIPS @ 12 MHz

3DO ಇಂಟರ್ಅಕ್ಟೀವ್ ಮಲ್ಟಿಪ್ಲೇಯರ್, ಸಾರ್ಲಿಂಕ್ GPS(ಜಿಪಿಎಸ್) ರಿಸಿವರ್

ARM600 ARM60, ಕ್ಯಾಷ್ ಮತ್ತು ಕೊಪ್ರೊಸೆಸರ್ ಬಸ್ ಗಳಂತೆ (FPA 10 ಫ್ಲೋಟಿಂಗ್ ಪಾಯಿಂಟ್ ಘಟಕಕ್ಕಾಗಿ).

4K ಯುನಿಫೈಡ್ (ಏಕೀಕೃತ)

28 MIPS @ 33 MHz
ARM610 ARM60 ಹಾಗೆ, ಕ್ಯಾಷ್, ಕೊಪ್ರೊಸೆಸರ್ ಬಸ್ ಇಲ್ಲ.

4K ಯುನಿಫೈಡ್ (ಏಕೀಕೃತ)

17 MIPS @ 20 MHz
0.65 DMIPS/MHz
ಆಕ್ರಾನ್ Risc PC 600, ಆಪಲ್ ನ್ಯೂಟನ್ 100 ಸಿರೀಸ್ (ಸರಣಿ/ಶ್ರೇಣಿ)
ARM7

ARMv3 (ಬಳಕೆಯಲ್ಲಿಲ್ಲದ)

ARM700

8 KB ಯುನಿಫೈಡ್(ಏಕೀಕೃತ)

40 MHz

ಆಕ್ರಾನ್ Risc PC ಪ್ರೊಟೊಟೈಪ್ CPU ಕಾರ್ಡ್

ARM710 ARM700 ರಂತೆ 8 KB ಯುನಿಫೈಡ್ (ಏಕೀಕೃತ) 40 MHz ಅಕ್ರಾನ್ Risc PC 700
ARM710a ARM700 ರಂತೆ 8 KB ಯುನಿಫೈಡ್ (ಏಕೀಕೃತ) 40 MHz
0.68 DMIPS/MHz
ಅಕ್ರಾನ್ Risc PC 700, ಅಪಲ್ eMate 300
ARM7100

ARM710a ರಂತೆ, ಇಂಟಿಗ್ರೇಟೆಡ್ (ಸಂಘಟಿತ) SoC.

8 KB ಯುನಿಫೈಡ್ (ಏಕೀಕೃತ) 18 MHz ಪ್ಸಿಯಾನ್ ಸಿರೀಸ್ 5
ARM7500 ARM710a ರಂತೆ, ಇಂಟಿಗ್ರೇಟೆಡ್ (ಸಂಘಟಿತ) SoC. 4 KB ಯುನಿಫೈಡ್ (ಏಕೀಕೃತ) 40 MHz ಅಕ್ರಾನ್ A7000
ARM7500FE ARM7500 ರಂತೆ, "FE" ಸೇರಿಸಿದ FPA ಮತ್ತು EDO ಮೆಮರಿ ಕಂಟ್ರೋಲರ್ (ನಿಯಂತ್ರಕ). 4 KB ಯುನಿಫೈಡ್ (ಏಕೀಕೃತ) 56 MHz
0.73 DMIPS/MHz
ಆಕ್ರಾನ್ A7000+ ನೆಟ್‌ವರ್ಕ್ ಕಂಪ್ಯೂಟರ್
ARM7TDMI ARMv4T ARM7TDMI(-S)

3 ಹಂತದ ಪೈಪ್ ಲೈನ್, ತಮ್

ಇಲ್ಲ 15 MIPS @ 16.8 MHz
63 DMIPS @ 70 MHz
ಗೇಮ್ ಬಾಯ್ ಅಡ್ವಾನ್ಸ್, ನಿನ್‌ಟೆಂಡೊ DS, iPod, ಲೆಗೊ NXT, ಅಟ್ಮೆಲ್ AT91SAM7, ಜ್ಯೂಸ್ ಬಾಕ್ಸ್, NXP ಸೆಮಿಕಂಡಕ್ಟರ್ಸ್ LPC2000 ಮತ್ತು LH754xx Archived 2009-11-24 ವೇಬ್ಯಾಕ್ ಮೆಷಿನ್ ನಲ್ಲಿ.
ARM710T

ARM7TDMI, ಕ್ಯಾಷ್

8 KB ಯುನಿಫೈಡ್ (ಏಕೀಕೃತ), MMU

36 MIPS @ 40 MHz ಪ್ಸಿಯಾನ್ ಸಿರೀಸ್ 5mx, ಪ್ಸಿಯಾನ್ ರೇವೊ/ರೇವೊ ಪ್ಲಸ್/ಡೈಯಮಂಡ್ ಮೆಕೊ
ARM720T

ARM7TDMI ರಂತೆ, ಕ್ಯಾಷ್

8 KB ಏಕೀಕೃತ, MMU ಫಾಸ್ಟ್ ಕಾಂಟೆಕ್ಸ್ಟ್ ಸ್ವಿಚ್ ಎಕ್ಸಟೆನ್ಷನ್ ಜೊತೆಯಲ್ಲಿ

60 MIPS @ 59.8 MHz

ಸಿಪಿಟ್ ವೈರ್‌ಲೆಸ್ ಮೆಸೆಂಜರ್ , NXP ಸೆಮಿಕಂಡಕ್ಟರ್ಸ್ LH7952x Archived 2009-11-24 ವೇಬ್ಯಾಕ್ ಮೆಷಿನ್ ನಲ್ಲಿ.

ARM740T ARM7TDMI ರಂತೆ, ಕ್ಯಾಷ್ MPU
ARMv5TEJ ARM7EJ-S

5 ಹಂತದ ಪೈಪ್ ಲೈನ್, ತಮ್, ಜಾಸೆಲ್ DBX, ವಿಸ್ತೃತ DSP ಸೂಚನೆಗಳು (ಇನ್‌ಸ್ಟ್ರಕ್ಷನ್)

ಇಲ್ಲ
ಸ್ಟ್ರಾಂಗ್ARM ARMv4 SA-110 16 KB /16 KB, MMU 203 MHz
1.0 DMIPS/MHz
ಅಪಲ್ ನ್ಯೂಟನ್ 2x00 ಸಿರೀಸ್, ಅಕ್ರಾನ್ Risc PC, ರೆಬೆಲ್/ಕೋರಲ್ ನೆಟ್‌ವಿಂಡರ್, ಚಾಲೈಸ್ CATS, ಪ್ಸಿಯಾನ್ ನೆಟ್ ಬುಕ್
SA-1110 SA-110 ರಂತೆ, ಇಂಟಿಗ್ರೇಟೆಡ್ (ಸಂಘಟಿತ) SoC 16 KB/16 KB, MMU 233 MHz LART (ಕಂಪ್ಯೂಟರ್), ಇಂಟೆಲ್ ಅಸ್ಸಾಬೆಟ್, ಐಪಾಕ್ H36x0, ಬಲೂನ್2, ಸಾರಸ್ SL-5x00, HP ಜೊರಾಂಡಾ 7xx, ಜೊರಾಂಡಾ 560 ಸಿರೀಸ್ , ಪಾಲ್ಮ್ ಸೈರ್ 31
ARM8 ARMv4 ARM810[೧೦]

5 ಹಂತದ ಪೈಪ್ ಲೈನ್, ಸ್ಟಾಟಿಕ್ ಬ್ರಾಂಚ್ ಪ್ರಿಡಿಕ್ಷನ್, ಡಬಲ್ ಬ್ಯಾಂಡ್‌ವಿಡ್ತ್ ಮೆಮೊರಿ

8 KB ಯುನಿಫೈಡ್ (ಏಕೀಕೃತ), MMU 84 MIPS @ 72 MHz
1.16 DMIPS/MHz
ಅಕ್ರಾನ್ Risc PC ಪ್ರೊಟೊಟೈಪ್ CPU ಕಾರ್ಡ್
ARM9TDMI ARMv4T ARM9TDMI 5 ಹಂತದ ಪೈಪ್ ಲೈನ್, ತಮ್ ಇಲ್ಲ
ARM920T ARM9TDMI ರಂತೆ, ಕ್ಯಾಷ್ 16 KB/16 KB, MMU, FCSEಯೊಂದಿಗೆ (ಫಾಸ್ಟ್ ಕಾಂಟೆಕ್ಸ್ಟ್ ಸ್ವಿಚ್ ಎಕ್ಸ್‌ಟೆನ್ಷನ್)[೧೧] 200 MIPS @ 180 MHz ಅರ್ಮಾಡಿಲ್ಲೊ, ಅಟ್ಮೆಲ್ AT91SAM9, GP32, GP2X (ಮೊದಲನೆಯ ಕೋರ್), ಟಾಪ್‌ವೈರ್ ಸೋಡಿಯಾಕ್ (ಮೋಟೋರೋಲಾ i. MX1), ಹೆಲ್ವೆಟ್ ಪಾಕಾರ್ಡ್ HP-49/50 ಕ್ಯಾಲುಕಲೇಟರ್ಸ್ , ಸನ್ ಸ್ಪಾಟ್, ಸಿರಸ್ ಲಾಜಿಕ್ EP9302, EP9307, EP9312, EP9315, ಸ್ಯಾಮ್ಸಂಗ್ S3C2442 (HTC TyTN, FIC ನಿಯೋ ಫ್ರಿರನ್ನರ್ [೧೨]), ಸ್ಯಾಮ್ಸಂಗ್ S3C2410 (ಟಾಮ್‌ಟಾಮ್ ನಾವಿಗೇಷನ್ ಡಿವೈಸಸ್‌)[೧೩]
ARM922T ARM9TDMI ರಂತೆ, ಕ್ಯಾಷ್ ಗಳು 8 KB/8 KB, MMU

NXP ಸೆಮಿಕಂಡಕ್ಟರ್ಸ್ LH7A40x Archived 2009-05-21 ವೇಬ್ಯಾಕ್ ಮೆಷಿನ್ ನಲ್ಲಿ.

ARM940T ARM9TDMI ರಂತೆ, ಕ್ಯಾಷ್ ಗಳು 4 KB/4 KB, MPU GP2X (ಎರಡನೆಯ ಕೋರ್), ಮೀಜೂ M6 ಮಿನಿ ಪ್ಲೇಯರ್[೧೪][೧೫]
ARM9E ARMv5TE ARM946E-S ತಮ್, ವಿಸ್ತೃತ DSP ಸೂಚನೆಗಳು(ಇನ್‌ಸ್ಟ್ರಕ್ಷನ್), ಕ್ಯಾಷ್ ಗಳು ವೇರಿಯಬಲ್ (ಚರಾಂಶ), ಬಿಗಿ ಕಪಲ್ಡ್ ಮೆಮೊರಿ, MPU ನಿನ್‌ಟೆಂಡೊ DS, ನೋಕಿಯಾ N-Gage, ಕ್ಯಾನನ್ ಪವರ್ಶಾಟ್ A470, ಕ್ಯಾನನ್ EOS 5D ಮಾರ್ಕ್ II,[೧೬] ಕಾನೆಕ್ಸಾನ್ಟ್ 802.11 ಚಿಪ್ಸ್, ಸ್ಯಾಮ್ಸಂಗ್ S5L2010
ARM966E-S ತಮ್, ವಿಸ್ತೃತ DSP ಸೂಚನೆಗಳು (ಇನ್‌ಸ್ಟ್ರಕ್ಷನ್) ಕ್ಯಾಷ್ ರಹಿತ, TCM ಗಳು ST ಮೈಕ್ರೋ STR91xF, ಇಥರ್ನೆಟ್ ಒಳಗೊಂಡಿದೆ[೧೭]
ARM968E-S ARM966E-S ಕ್ಯಾಷ್ ರಹಿತ, TCM ಗಳು NXP ಸೆಮಿಕಂಡಕ್ಟರ್ಸ್ LPC2900 Archived 2009-06-12 ವೇಬ್ಯಾಕ್ ಮೆಷಿನ್ ನಲ್ಲಿ.
ARMv5TEJ ARM926EJ-S ತಮ್, ಜಾಸೆಲ್ DBX, ವಿಸ್ತೃತ DSP ಸೂಚನೆಗಳು (ಇನ್‌ಸ್ಟ್ರಕ್ಷನ್) ವೇರಿಯಬಲ್ (ಚರಾಂಶ), TCM ಗಳು, MMU 220 MIPS @ 200 MHz, ಮೋಬೈಲ್ ಫೋನಗಳು: ಸೋನಿ ಎರಿಕ್‌ಸನ್ (K, W ಸಿರೀಸ್); ಸೀಮನ್ಸ್ ಮತ್ತು ಬೆನ್‌ಕ್ಯೂ (x65 ಸಿರೀಸ್ ಮತ್ತು ಹೊಸದು); LG ಅರೀನ; ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್ OMAP1710, OMAP1610, OMAP1611, OMAP1612, OMAP-L137, OMAP-L138; ಕ್ವಾಲ್‌ಕಾಮ್ MSM6100, MSM6125, MSM6225, MSM6245, MSM6250, MSM6255A, MSM6260, MSM6275, MSM6280, MSM6300, MSM6500, MSM6800; ಫ್ರೀಸ್ಕೇಲ್ i.MX21, i.MX27, ಅಟ್ಮೆಲ್ AT91SAM9, NXP ಸೆಮಿಕಂಡಕ್ಟರ್ಸ್ LPC3000 Archived 2009-11-27 ವೇಬ್ಯಾಕ್ ಮೆಷಿನ್ ನಲ್ಲಿ., GPH Wiz, NEC C10046F5-211-PN2-A SoC – Wii(ವೀ) ಯಲ್ಲಿ ಬಳಸಲಾದ, ATi ಹಾಲಿವುಡ್ ಗ್ರಾಫಿಕ್ಸ್ ಚಿಪ್ ನ ಅನ್‌ಡಾಕ್ಯುಮೆಂಟೆಡ್ ಕೋರ್,[೧೮] ಸ್ಕ್ವೀಸ್ ಬಾಕ್ಸ್ ಡ್ಯುಯೆಟ್ ನ ಕಂಟ್ರೋಲರ್‌ನಲ್ಲಿ ಬಳಸಲಾಗುವ ಸಾಮ್ಸಂಗ್ S3C2412. ಸ್ಕ್ವೀಸ್ ಬಾಕ್ಸ್ ರೇಡಿಯೊ ; ನಿಯೊಮ್ಯಾಜಿಕ್ MiMagic ಫ್ಯಾಮಿಲಿ MM6, MM6+, MM8, MTV; ಬಫಲೋ ಟೆರಾಸ್ಟೇಷನ್ ಲೈವ್ (NAS); ಟೆಲಿಚಿಪ್ಸ್ TCC7801, TCC7901; ಚಿಪ್ ನ ಮೇಲೆ ಝೀಲ್ಯಾಬ್ಸ್ ನ ZMS-05 ಸಿಸ್ಟಂ; ವೆಸ್ಟರ್ನ್ ಡಿಜಿಟಲ್ ಮೈಬುಕ್ I ವರ್ಲ್ಡ್ ಎಡಿಷನ್.
ARMv5TE ARM996HS ಕ್ಲಾಕ್‌ಲೆಸ್ ಪ್ರೊಸೆಸರ್, ಆಸ್ ARM966E-S ಕ್ಯಾಷ್ ಗಳಿಲ್ಲದ, TCM ಗಳು, MPU
ARM10E ARMv5TE ARM1020E 6 ಹಂತದ ಪೈಪ್ ಲೈನ್, ತಮ್, ವಿಸ್ತೃತ DSP ಸೂಚನೆಗಳು (ಇನ್‌ಸ್ಟ್ರಕ್ಷನ್), (VFP) 32 KB/32 KB, MMU
ARM1022E ಆಸ್ ARM1020E 16 KB/16 KB , MMU
ARMv5TEJ ARM1026EJ-S ತಮ್, ಜಾಸೆಲ್ DBX, ವಿಸ್ತೃತ DSP ಸೂಚನೆಗಳು (ಇನ್‌ಸ್ಟ್ರಕ್ಷನ್), (VFP) ವೇರಿಯಬಲ್ (ಚರಾಂಶ), MMU ಅಥವಾ MPU ವೆಸ್ಟರ್ನ್ ಡಿಜಿಟಲ್ ಮೈಬುಕ್ II ವರ್ಲ್ಡ್ ಎಡಿಷನ್;ಕಾನೆಕ್ಸಾನ್ಟ್ so4610 ಮತ್ತು so4615 ADSL SoC
ಎಕ್ಸ್‌ಸ್ಕೇಲ್ ARMv5TE 80200/IOP310/IOP315 I/O ಪ್ರೊಸೆಸರ್, ತಮ್, ವಿಸ್ತೃತ DSP ಸೂಚನೆಗಳು (ಇನ್‌ಸ್ಟ್ರಕ್ಷನ್)
80219 400/600 MHz ಥೆಕಸ್ N2100
IOP321 600 BogoMips @ 600 MHz ಲೈಯೊನಿಕ್ಸ್
IOP33x
IOP34x 1–2 ಕೋರ್, RAID ಅಕ್ಸೆಲರೇಷನ್ 32K/32KL1, 512K L2, MMU
PXA210/PXA250 ಅಪ್ಲಿಕೇಷನ್ಸ್ ಪ್ರೊಸೆಸರ್, 7 ಹಂತದ ಪೈಪ್ ಲೈನ್ PXA210: 133 ಮತ್ತು 200 MHz, PXA250: 200, 300, ಮತ್ತು 400 MHz ಸಾರಸ್ ಸಾರಸ್ SL-5600, iPAQ H3900, ಸೋನಿ CLIÉ NX60, NX70V, NZ90
PXA255 32 KB/32 KB, MMU 400 BogoMips @ 400 MHz; 371–533 MIPS @ 400 MHz[೧೯] ಗಮ್‌ಸ್ಟಿಕ್ಸ್ ಬೇಸಿಕ್ಸ್ & ಕಾನೆಕ್ಸ್, ಪಾಲ್ಮ್ ಟಂಗ್‌ಸ್ಟನ್ E2, ಸಾರಸ್ SL-C860, ಮೆಂಟರ್ ರೇಂಜರ್ & ಸ್ಟ್ರೈಡರ್, iRex ILiad
PXA263 200, 300 ಮತ್ತು 400 MHz ಸೋನಿ CLIÉ NX73V, NX80V
PXA26x default 400 MHz, up to 624 MHz ಪಾಲ್ಮ್ ಟಂಗ್‌ಸ್ಟನ್ T3
PXA27x ಅಪ್ಲಿಕೇಷನ್ಸ್ ಪ್ರೊಸೆಸರ್ 32 KB/32 KB, MMU 800 MIPS @ 624 MHz ಗಮ್‌ಸ್ಟಿಕ್ಸ್ ವೆರ್ಡೆಕ್ಸ್ ,"ಟ್ರೈಸೆಪ್ಸ್-ಮಾಡ್ಯೂಲ್ಸ್" Archived 2011-07-28 ವೇಬ್ಯಾಕ್ ಮೆಷಿನ್ ನಲ್ಲಿ. PXA270 COM, HTC ಯುನಿವರ್ಸಲ್, HP hx4700, ಸಾರಸ್ SL-C1000, 3000, 3100, 3200, ಡೆಲ್ ಅಕ್ಸಿಂ x30, x50, ಮತ್ತು x51 ಸಿರೀಸ್(ಶ್ರೇಣಿ), ಮೋಟೋರೋಲಾ Q, ಬಲೂನ್3, ಟ್ರಾಲ್‌ಟೆಕ್ ಗ್ರೀನ್‌ಪೋನ್, ಪಾಲ್ಮ್ TX, ಮೋಟೋರೋಲಾ Ezx ಫ್ಲಾಟ್‌ಪಾರಂ A728, A780, A910, A1200, E680, E680i, E680g, E690, E895, Rokr E2, Rokr E6, ಫುಜಿತ್ಸು ಸೀಮನ್ಸ್ LOOX N560, ತೋಷಿಬಾ Portégé G500, Trēo 650-755p, ಸಿಪಿಟ್ Z2, HP iPaq 614c ಬಿಸಿನೆಸ್ ನ್ಯಾವಿಗೇಟರ್.
PXA800(E)F
PXA3XX (ಗುಪ್ತನಾಮ : "ಮೊನಾಹಾನ್ಸ್") 32 KB/32 KB L1, TCM, MMU 1000 MIPS @ 1.25 GHz ಸ್ಯಾಮ್ಸಂಗ್ Omnia
PXA900 ಬ್ಲಾಕ್‌ಬೆರ್ರಿ 8700, ಬ್ಲಾಕ್‌ಬೆರ್ರಿ ಪರ್ಲ್ (8100)
IXC1100

ಕಂಟ್ರೋಲ್ ಪ್ಲೇನ್ ಪ್ರೊಸೆಸರ್

IXP2400/IXP2800
IXP2850
IXP2325/IXP2350
IXP42x NSLU2 IXP460/IXP465
ARM11 ARMv6 ARM1136J(F)-S[೨೦] 8 ಹಂತದ ಪೈಪ್ ಲೈನ್, SIMD, ತಮ್, ಜಾಸೆಲ್ DBX, (VFP), ವಿಸ್ತೃತ DSP ಸೂಚನೆಗಳು (ಇನ್‌ಸ್ಟ್ರಕ್ಷನ್) ವೇರಿಯಬಲ್ (ಚರಾಂಶ), MMU 740 @ 532–665 MHz (i.MX31 SoC), 400–528 MHz ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್ OMAP2420 (ನೋಕಿಯಾ E90, ನೋಕಿಯಾ N93, ನೋಕಿಯಾ N95, ನೋಕಿಯಾ N82), ಝೂನ್ , BUGbase[೨], ನೋಕಿಯಾ N800, ನೋಕಿಯಾ N810, ಕ್ವಾಲ್‌ಕಾಮ್ MSM7200 (ಇದರ ಜೊತೆಯಲ್ಲಿ ಎಟೆನ್ ಗ್ಲೊಪಿಶ್, HTC TyTN II, HTC Nike ರಲ್ಲಿ ಬಳಸಲಾಗುವ ಸಂಘಟಿತ (ಇಂಟಿಗ್ರೇಟೆಡ್)ARM926EJ-S ಕೋಪ್ರೊಸೆಸರ್ @274 MHz), ಫ್ರೀ ಸ್ಕೇಲ್ i.

MX31 (ಒರಿಜಿನಲ್ (ಅಸಲಿ) ಝೂನ್ 30gb ಮತ್ತು ತೋಷಿಬಾ ಗಿಗಾಬೀಟ್ S ರಲ್ಲಿ ಬಳಸಲಾಗುತ್ತದೆ), ಫ್ರೀ ಸ್ಕೇಲ್ MXC300-30 (ನೋಕಿಯಾ E63, ನೋಕಿಯಾ E71, ನೋಕಿಯಾ 5800, ನೋಕಿಯಾ E51, ನೋಕಿಯಾ 6700 ಕ್ಲಾಸಿಕ್, ನೋಕಿಯಾ 6120 ಕ್ಲಾಸಿಕ್, ನೋಕಿಯಾ 6210 ನ್ಯಾವಿಗೇಟರ್, ನೋಕಿಯಾ 6220 ಕ್ಲಾಸಿಕ್, ನೋಕಿಯಾ 6290, ನೋಕಿಯಾ 6710 ನ್ಯಾವಿಗೇಟರ್, ನೋಕಿಯಾ 6720 ಕ್ಲಾಸಿಕ್, ನೋಕಿಯಾ E75, ನೋಕಿಯಾ N97, ನೋಕಿಯಾ N81), HTC ಡ್ರೀಮ್ ನಲ್ಲಿ ಕಾಣಿಸುವ ಹಾಗೆ ಕ್ವಾಲ್‌ಕಾಮ್ MSM7201A, HTC ಮ್ಯಾಜಿಕ್ , ಮೋಟೋರೋಲಾ Z6, HTC ಹೀರೋ , & ಸಾಮ್ಸಂಗ್ SGH-i627 (ಪ್ರೊಪೆಲ್ ಪ್ರೊ)

ARMv6T2 ARM1156T2(F)-S 9 ಹಂತದ ಪೈಪ್ ಲೈನ್, SIMD, ತಮ್-2, (VFP), ವಿಸ್ತೃತ DSP ಸೂಚನೆಗಳು(ಇನ್‌ಸ್ಟ್ರಕ್ಷನ್) ವೇರಿಯಬಬಲ್‌ (ಚರಾಂಶ), MPU
ARMv6KZ ARM1176JZ(F)-S ARM1136EJ(F)-S ರಂತೆ ವೇರಿಯಬಲ್ (ಚರಾಂಶ), MMU+ಟ್ರಸ್ಟ್‌ಜೋನ್ ಆಪಲ್ iPhone, ಆಪಲ್ iPod ಟಚ್, ಕಾನೆಕ್ಸಾನ್ಟ್ CX2427X, ಮೋಟೋರೋಲಾ RIZR Z8, ಮೋಟೋರೋಲಾ RIZR Z10, NVIDIA ಗೋಫೋರ್ಸ್ 6100;[೨೧] ಟೆಲಿಚಿಪ್ಸ್ TCC9101, TCC9201, TCC8900, ಫುಜಿತ್ಸು MB86H60, ಸಾಮ್ಸಂಗ್ S3C6410 (e.g. ಸಾಮ್ಸಂಗ್ ಮೊಮೆಂಟ್), S3C6430[೨೨]
ARMv6K ARM11 MPCore ARM1136EJ(F)-S ರಂತೆ, 1–4 ಕೋರ್ SMP ಚರಾಂಶ, MMU Nvidia APX 2500
ಸಮೂಹ(ಫ್ಯಾಮಿಲಿ) ವಿನ್ಯಾಸದ ಆವೃತ್ತಿ ಕೋರ್ ಲಕ್ಷಣಗಳು ಕ್ಯಾಷ್ (I/D)/MMU ಲಾಕ್ಷಣಿಕ MIPS @ MHz ಎಲ್ಲಿ ಬಳಸಲಾಗಿದೆ
ಕಾರ್ಟೆಕ್ಸ್ ARMv7-A ಕಾರ್ಟೆಕ್ಸ್-A5 VFP, NEON, ಜಾಸೆಲ್ RCT ಮತ್ತು DBX, ತಮ್-2, 8-ಹಂತದ ಪೈಪ್ ಲೈನ್, 1–4 ಕೋರ್ SMP ವೇರಿಯಬಲ್ (ಚರಾಂಶ) (L1), MMU+ಟ್ರಸ್ಟ್‌ಜೋನ್‌ 1500 ವರೆಗೆ (1.5 DMIPS/MHz) "ಸ್ಪಾರೋ" (ಗುಪ್ತನಾಮ: ARM)[೨೩][೨೪][೨೫]
ಕಾರ್ಟೆಕ್ಸ್-A8 VFP, NEON, ಜಾಸೆಲ್ RCT, ತಮ್-2, 13-ಹಂತದ ಸೂಪರ್ ಸ್ಕೆಲರ್ ಪೈಪ್ ಲೈನ್ ವೇರಿಯಬಲ್ (ಚರಾಂಶ)L1+L2), MMU+ಟ್ರಸ್ಟ್‌ಜೋನ್ 2000 ವರೆಗೆ (2.0 DMIPS/MHz 600 MHz ವೇಗದಿಂದ ಶುರುವಾಗಿ 1 GHz ಕ್ಕೂ ಹೆಚ್ಚಿನ ವೇಗದವರೆಗೆ) ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್ OMAP3xxx ಸಿರೀಸ್, SBM7000, ಒರೆಗಾನ್ ಸ್ಟೇಟ್ ಯುನಿವರ್ಸಿಟಿ OSWALD, ಗಮ್‌ಸ್ಟಿಕ್ಸ್ ಒವೆರೊ ಅರ್ತ್, ಪಾಂಡೋರಾ, ಆಪಲ್ iPod ಟಚ್(3ನೇ ಜನರೇಷನ್),iPadಆಪಲ್ A4, ಅರ್ಕೋಸ್ 5, ಫ್ರೀ ಸ್ಕೇಲ್ i.MX51-SOC, ಬೀಗಲ್‌ಬೋರ್ಡ್, ಆಪಲ್ iPhone 3GS, ಮೋಟೋರೋಲಾ ಡ್ರಾಯಿಡ್ , ಪಾಲ್ಮ್ ಪ್ರಿ, ರಾಕ್‌ಚಿಪ್ RK2806 ಮತ್ತು RK2808, ಸಾಮ್ಸಂಗ್ i8910, ಸೋನಿ ಎರಿಕ್‌ಸನ್ ಸಾಟಿಯೋ, ಟಚ್ ಬುಕ್ , ನೋಕಿಯಾ N900, ಚಿಪ್ ನ ಮೇಲ್ ಝೀಲ್ಯಾಬ್ಸ್ ZMS-08 ಸಿಸ್ಟಂ.
ಕಾರ್ಟೆಕ್ಸ್-A9 ಅಪ್ಲಿಕೇಷನ್ ಪ್ರೊಫೈಲ್, (VFP), (NEON), ಜಾಸೆಲ್ RCT ಮತ್ತು DBX, ತಮ್-2, ಔಟ್-ಆಫ್-ಆರ್ಡರ್ ಸ್ಪೆಕುಲೇಟಿವ್ ಇಶ್ಯೂ ಸೂಪರ್‌ಸ್ಕೇಲಾರ್ MMU+ಟ್ರಸ್ಟ್‌ಜೋನ್‌ 2.5 DMIPS/MHz
ಕಾರ್ಟೆಕ್ಸ್-A9 MPCore ಕಾರ್ಟೆಕ್ಸ್-A9 ರಂತೆ, 1–4 ಕೋರ್ SMP MMU+ಟ್ರಸ್ಟ್‌ಜೋನ್ 10,000 DMIPS @ 2 GHz ಆನ್ ಪೆರ್ಪಾರ್ಮೆನ್ಸ್ ಆಪ್ಟಿಮೈಸೆಡ್ TSMC 40G (ಕ್ವಾಡ್ ಕೋರ್?) (2.5 DMIPS/MHz ಪ್ರತಿ ಕೋರ್ ಗೆ) ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್ OMAP4430/4440, ST-ಎರಿಕ್‌ಸನ್ U8500, Nvidia ಟೆಗ್ರಾ2
ARMv7-R ಕಾರ್ಟೆಕ್ಸ್-R4(F) ಎಂಬೆಡೆಡ್ ಪ್ರೊಫೈಲ್, ತಮ್-2, (FPU) ಚರಾಂಶ ಕ್ಯಾಷ್ , ಐಚ್ಛಿಕ MPU 600 DMIPS @ 475 MHz ಬ್ರಾಡ್‌ಕಾಮ್ ಬಳಕೆದಾರನಾಗಿದೆ, TMS570 ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್
ARMv7-ME ಕಾರ್ಟೆಕ್ಸ್-M4 (ಗುಪ್ತನಾಮ: "ಮೆರ್ಲಿನ್")[೨೬] ಮೈಕ್ರೋಕಂಟ್ರೋಲರ್ ಪ್ರೊಫೈಲ್, ತಮ್ ಮತ್ತು ತಮ್-2 ಎರಡೂ, FPU. ಹಾರ್ಡ್‌ವೇರ್, SIMD ಮತ್ತು ಡಿವೈಡ್ (ಭಾಗಹರ) ಸೂಚನೆಗಳು (ಇನ್‌ಸ್ಟ್ರಕ್ಷನ್). ಐಚ್ಛಿಕ MPU . 1.25 DMIPS/MHz
ARMv7-M ಕಾರ್ಟೆಕ್ಸ್-M3 ಮೈಕ್ರೋಕಂಟ್ರೋಲರ್ ಪ್ರೊಫೈಲ್, ಕೇವಲ ತಮ್-2 ಮಾತ್ರ. ಹಾರ್ಡ್‌ವೇರ್ ಡಿವೈಡ್ (ಭಾಗಹರ)ಸೂಚನೆ (ಇನ್‌ಸ್ಟ್ರಕ್ಷನ್). ಕ್ಯಾಷ್ ರಹಿತ, ಐಚ್ಛಿಕ MPU. 125 DMIPS @ 100 MHz ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್ ಸ್ಟೆಲಾರಿಸ್ ಮೈಕ್ರೋಕಂಟ್ರೋಲರ್ ಫ್ಯಾಮಿಲಿ(ಸಮೂಹ), STಮೈಕ್ರೋಎಲೆಕ್ಟ್ರಾನಿಕ್ಸ್ STM32, NXP ಸೆಮಿಕಂಡಕ್ಟರ್ಸ್ LPC1700 Archived 2009-12-21 ವೇಬ್ಯಾಕ್ ಮೆಷಿನ್ ನಲ್ಲಿ., ತೋಷಿಬಾ TMPM330FDFG Archived 2011-06-14 ವೇಬ್ಯಾಕ್ ಮೆಷಿನ್ ನಲ್ಲಿ., ಎಂಬರ್‌ ರವರ EM3xx ಸಿರೀಸ್ (ಶ್ರೇಣಿ), ಆಟ್ಮೆಲ್ AT91SAM3, ಯುರೋಪ್ ಟೆಕ್ನಾಲಜಿಸ್ EasyBCU Archived 2010-03-10 ವೇಬ್ಯಾಕ್ ಮೆಷಿನ್ ನಲ್ಲಿ., ಎನರ್ಜಿಮೈಕ್ರೋEFM32
ARMv6-M ಕಾರ್ಟೆಕ್ಸ್-M0 (ಗುಪ್ತನಾಮ: "ಸ್ವಿಪ್ಟ್")[೨೭] ಮೈಕ್ರೋಕಂಟ್ರೋಲರ್ ಪ್ರೊಫೈಲ್, ತಮ್-2 subset (16-ಬಿಟ್ ತಮ್ ಸೂಚನೆಗಳು (ಇನ್‌ಸ್ಟ್ರಕ್ಷನ್) & BL, MRS, MSR, ISB, DSB, ಮತ್ತು DMB). ಕ್ಯಾಷ್ ರಹಿತ. 0.9 DMIPS/MHz NXP ಸೆಮಿಕಂಡಕ್ಟರ್ಸ್ NXP LPC1100 Archived 2009-09-24 ವೇಬ್ಯಾಕ್ ಮೆಷಿನ್ ನಲ್ಲಿ.,[೨೮] ಟ್ರಿಯಾಡ್ ಸೆಮಿಕಂಡಕ್ಟರ್,[೨೯] ಮೆಲಫಾಸ್,[೩೦] ಚುಂಗ್‌ಬುಕ್ ಟೆಕ್ನೋಪಾರ್ಕ್,[೩೧] ನುವೊಟನ್,[೩೨] ಆಸ್ಟ್ರಿಮೈಕ್ರೋಸಿಸ್ಟಂಸ್ [೩೩]
ಕಾರ್ಟೆಕ್ಸ್-M1 FPGA targeted, ಮೈಕ್ರೋಕಂಟ್ರೋಲರ್ ಪ್ರೊಫೈಲ್, ತಮ್-2 ಉಪಭಾಗ(ಸಬ್‌ಸೆಟ್)16-ಬಿಟ್ ತಮ್ ಸೂಚನೆಗಳು (ಇನ್‌ಸ್ಟ್ರಕ್ಷನ್) & BL, MRS, MSR, ISB, DSB, ಮತ್ತು DMB). ಯಾವುದೂ ಇಲ್ಲ, ಬಿಗಿ ಕಪಲ್ಡ್ ಮೆಮೊರಿ ಐಚ್ಛಿಕ. 136 DMIPS @ 170 MHz[೩೪] ತನಕ (0.8 DMIPS/MHz,[೩೫] MHz ಸಾಧಿಸಬಹುದು FPGA-ಮೇಲೆ ಅವಲಂಭಿತ) ಆಕ್ಟೆಲ್ ProASIC3, ProASIC3L, IGLOO ಮತ್ತು ಫ್ಯೂಶನ್ PSC ಡಿವೈಸಸ್, ಅಲ್ಟೆರಾ ಸೈಕ್ಲೋನ್ III Archived 2009-09-09 ವೇಬ್ಯಾಕ್ ಮೆಷಿನ್ ನಲ್ಲಿ., ಇತರ FPGA ಉತ್ಪನ್ನಗಳಿಗೆ ಕೂಡ ಬೆಂಬಲುಸುತ್ತದೆ ಉದಾಹರಣೆಗೆ ಸಿನ್‌ಪ್ಲಿಸಿಟಿ Archived 2011-07-16 ವೇಬ್ಯಾಕ್ ಮೆಷಿನ್ ನಲ್ಲಿ.[೩೬]
ಸಮೂಹ(ಫ್ಯಾಮಿಲಿ) ವಿನ್ಯಾಸದ ಆವೃತ್ತಿ ಕೋರ್ ಲಕ್ಷಣಗಳು ಕ್ಯಾಷ್ (I/D)/MMU ಲಾಕ್ಷಣಿಕ MIPS @ MHz ಎಲ್ಲಿ ಬಳಸಲಾಗಿದೆ

ಆರ್ಕಿಟೆಕ್ಚರ್ (ವಿನ್ಯಾಸ)

[ಬದಲಾಯಿಸಿ]

"ARM ಅರ್ಕಿಟೆಕ್ಚರ್ ರೆಫೆರೆನ್ಸ್ ಮ್ಯಾನುಯಲ್" ಎನ್ನುವ ARM ವಿನ್ಯಾಸಗಳ ಬಗೆಗಿನ ಕೈಪಿಡಿ ಬಹಳ ಹಿಂದಿನಿಂದಲೂ ಬಳಕೆಯಲ್ಲಿದೆ. ಈ ಕೈಪಿಡಿಯಲ್ಲಿ ARMಪ್ರೊಸೆಸರ್ ಗಳು ಬೆಂಬಲಿಸುವ ಇಂಟರ್ಫೆಸ್‌ಗಳ ವಿವರ (ಇನ್‌ಸ್ಟ್ರಕ್ಷನ್ ಸೆಮಾಂಟಿಕ್ಸ್‌ಗಳನ್ನು ಒಳಗೊಂಡಂತೆ), ಸ್ವಲ್ಪ ವ್ಯತಾಸವಾಗಬಹುದಾದ ಅಳವಡಿಕೆಗಳ ವಿವರಣೆಗಳಿರುತ್ತದೆ. ಕಾಲಾಂತರದಲ್ಲಿ ವಿನ್ಯಾಸವು ಬೆಳವಣಿಗೆ ಹೊಂದುತ್ತಾ ಬಂದಿದೆ. v7 ಆರ್ಕಿಟೆಕ್ಚರ್‌ನಲ್ಲಿ (ವಿನ್ಯಾಸದಲ್ಲಿ) ಮೂರು "ಪ್ರೋಫೈಲ್" ಗಳನ್ನು ವ್ಯಾಖನಿಸಲಾಗಿದೆ: "A"(ಅಪ್ಲಿಕೆಷನ್) ಪ್ರೋಫೈಲ್, "R" (ರಿಯಲ್ ಟೈಮ್) ಪ್ರೋಫೈಲ್, ಮತ್ತು "M"(ಮೈಕ್ರೋಕಂಟ್ರೋಲರ್) ಪ್ರೋಫೈಲ್. ಪ್ರೋಫೈಲ್‌ಗಳನ್ನು ವಿನ್ಯಾಸಗಳ ಉಪವಿಭಾಗಗಳಾಗಲು ಸಾಧ್ಯವಿದೆ. ಉದಾಹರಣೆಗಾಗಿ, ARMv7-M ಪ್ರೋಫೈಲ್ ಕೇವಲ ತಮ್ ಪ್ರೊಸೆಸರ್ ಮೋಡ್ ಮಾತ್ರವನ್ನೆ ಬೆಂಬಲಿಸುತ್ತದೆ ಎಂದು ಗುರಿತಿಸಲ್ಪಟಿದೆ. ಹೀಗಾಗಿ ಅದು ಕೇವಲ ತಮ್2 ಸೂಚನೆಗಳನ್ನು ಮಾತ್ರ ಅನುಷ್ಠಾನಗೊಳಿಸುತ್ತದೆ. ARMv6-M ಪ್ರೋಫೈಲ್, ARMv7-M ಪ್ರೊಫೈಲ್ (ಕಡಿಮೆ ಸೂಚನೆಗಳನ್ನು ಬೆಂಬಲಿಸುವ) ಉಪವಿಭಾಗವಾಗಿದೆ.

ಇನ್‌ಸ್ಟ್ರಕ್‌ಷನ್ ಸೆಟ್ (ಸೂಚನಾ ಸಮೂಹ)

[ಬದಲಾಯಿಸಿ]

ವಿನ್ಯಾಸವನ್ನು(ಡಿಸೈನ್) ಸರಳ,ಸುಲಭ ಮತ್ತು ವೇಗವಾಗಿಸಲು, ಹಿಂದೆ ಆಕ್ರಾನ್ ಮೈಕ್ರೋಕಂಪ್ಯೂಟರ್‌ಗಳಲ್ಲಿ ಬಳಸಲಾಗುತ್ತಿದ್ದ ಬಹಳ ಸರಳವಾಗಿದ್ದ 8-ಬಿಟ್ 6502 ಪ್ರೊಸೆಸರ್ ರೀತಿಯಲ್ಲಿಯೆ, ಮೂಲದ ARM ಅಳವಡಿಕೆಯನ್ನು ಮೈಕ್ರೋಕೋಡ್ ಇಲ್ಲದೆ ಹಾರ್ಡ್‌ವೈರ್ ಮಾಡಲಾಯಿತು.

RISC ಲಕ್ಷಣಗಳು

[ಬದಲಾಯಿಸಿ]

ARM ಆರ್ಕಿಟೆಕ್ಚರ್ (ವಿನ್ಯಾಸ) ಈ ಕೆಳಕಂಡ RISC ಲಕ್ಷಣಗಳನ್ನು ಒಳಗೊಂಡಿದೆ:

  • ಲೋಡ್/ಸ್ಟೋರ್ ಆರ್ಕಿಟೆಕ್ಚರ್(ವಿನ್ಯಾಸ)
  • ತಪ್ಪಾಗಿ ಜೋಡಿಸಲಾದ ಮೆಮರಿ ಆಕ್ಸೆಸ್‌ಗಳನ್ನು ಬೆಂಬಲಿಸುವುದಿಲ್ಲ (ಕೆಲವೊಂದು ಲೋಡ್/ಸ್ಟೋರ್ ಮಲ್ಟಿಪಲ್ ವರ್ಡ್ ಸೂಚನೆಗಳಿಗೆ ಸಂಬಂಧಪಟ್ಟ ಸೂಚನೆಗಳನ್ನು ಹೊರತುಪಡಿಸಿ; ಆದರೆ ಈಗ ARM6 ಕೋರ್‌ಗಳು ಬೆಂಬಲಿಸುತ್ತವೆ).
  • ಏಕರೂಪದ 16 x 32-ಬಿಟ್ ರೆಜಿಸ್ಟರ್ ಫೈಲ್.
  • 32 ಬಿಟ್‌ ಗಾತ್ರಕ್ಕೆ ಸೀಮಿತವಾದ ಸೂಚನೆ(ಫಿಕ್ಸ್‌ಡ್ ಇನ್‌ಸ್ಟ್ರಕ್‌ಷನ್), ಹೀಗಾಗಿ ಡಿಕೋಡಿಂಗ್ ಮತ್ತು ಪೈಪ್‌ಲೈನಿಂಗ್ ಸುಲಭವಾಗುತ್ತದೆ. ಅದರೆ, ಕೋಡ್ ಡೆನ್ಸಿಟಿ (ಕೋಡ್‌ನ ಸಾಂದ್ರತೆ) ಕಡಿಮೆಯಾಗುತ್ತದೆ. ನಂತರ, "ತಮ್ ಮೋಡ್" ವಿಧಾನವು ಕೋಡ್ ಡೆನ್ಸಿಟಿಯನ್ನು (ಕೋಡ್ ಸಾಂದ್ರತೆ) ಹೆಚ್ಚಿಸಿತು.
  • ಬಹುತೇಕವಾಗಿ ಸಿಂಗಲ್-ಸೈಕಲ್(ಒಂದು ಬಾರಿ) ಕಾರ್ಯನಿರ್ವಣೆ.

ಸಮಕಾಲೀನ ಪ್ರೊಸೆಸರ್ ಗಳಾದ ಇಂಟೆಲ್ 80286 ಮತ್ತು ಮೋಟೋರೋಲಾ 68020ಗಳಿಗೆ ಹೋಲಿಸಿದಾಗಿ, ಇದರ ಅತೀ ಸರಳವಾದ ಡಿಸೈನ್‌(ರಚನೆ)ಅನ್ನು ಸರಿದೂಗಿಸುವು ಸಲುವಾಗಿ ಇದಕ್ಕೆ ಕೆಲವು ಹೆಚ್ಚುವರಿ ಲಕ್ಷಣಗಳನ್ನು ಸೇರಿಸಲಾಯಿತು.

  • ಬಹುತೇಕ ಸೂಚನೆಗಳು ನಿಬಂಧನೆಗಳ ಸೂಚನೆಗಳಿಗೆ(ಕಂಡಿಷ್‌ನಲ್)ಒಳಪಟ್ಟಂತೆ ಕಾರ್ಯರೂಪಕ್ಕೆ ಬರುತ್ತವೆ, ಹೀಗಾಗಿ ಬ್ರಾಂಚ್ ಪ್ರಿಡ್ಕ್‌ಟರ್, ಇಲ್ಲದರಿರುವುದರಿಂದ ಬ್ರಾಂಚ್ ಒವರ್‌ಹೆಡ್ ಸ್ವಲ್ಪ ಕಡಿಮೆಮಾಡಬಹುದು.
  • ಅವಶ್ಯಕತೆಯಿದ್ದಾಗ ಮಾತ್ರ ಅರ್ಥಿಮೆಟಿಕ್ ಸೂಚನೆಗಳು ನಿಬಂಧನೆಗಳನ್ನು ಅವಶ್ಯಕತೆಯಿದಲ್ಲಿ ಮಾತ್ರ ಬದಲಾಯಿಸುತ್ತದೆ.
  • 32-ಬಿಟ್ ಬ್ಯಾರೆಲ್ ಶಿಫ್ಟರ್ ಅನ್ನು ಅನೇಕ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರದೆ ಬಳಸಬಹುದಾಗಿದೆ.
  • ಶಕ್ತಿ ಶಾಲಿಯಾದ ಆಡ್ರೆಸಿಂಗ್ ಮೋಡ್‌ಗಳು.
  • ಫಾಸ್ಟ್ ಲೀಫ್ ಫಂಕ್‌ಷನ್ ಕಾಲ್ಸ್(ಕಾರ್ಯನಿರ್ವಹಣೆಯ ಕರೆ) ಒಂದು ಲಿಂಕ್ ರೆಜಿಸ್ಟರ್.
  • ಸರಳ, ಆದರೆ ವೇಗವಾದ ಸ್ವಿಚ್ಡ್ ರೆಜಿಸ್ಟರ್ ಬ್ಯಾಂಕ್‌ಗಳೊಂದಿಗಿನ 2-ಆದ್ಯತೆ-ಶ್ರೇಣಿಯ ಇಂಟರ್ಪಟ್ ಸಬ್‌ಸಿಸ್ಟಂ.

ಕಂಡಿಷನಲ್ ಎಕ್ಸಿಕ್ಯೂಷನ್(ನಿಯಮಾಧೀನ ಅನುಷ್ಠಾನ)

[ಬದಲಾಯಿಸಿ]

ನಿಯಮಾಧೀನ ಅನುಷ್ಠಾನವಾಗುವ (ಕಂಡಿಷನಲ್ ಎಕ್ಸಿಕ್ಯೂಷನ್)ಲಕ್ಷಣವು (ಪ್ರೆಡಿಕೆಶನ್ ಎಂದು ಕರೆಯಲ್ಪಡುವ), ಪ್ರತಿ ಸೂಚನೆಯ 4-ಬಿಟ್ ಕಂಡಿಷನ್ ಕೋಡ್ ಸೆಲೆಕ್ಟರ್(ಪ್ರೆಡಿಕೇಟ್)ಮೂಲಕ ಕಾರ್ಯಗತಗೊಳಿಸಲ್ಪಡುತ್ತದೆ.ನಾಲ್ಕು-ಬಿಟ್‌ನ ಒಂದು ಕೋಡ್‌ ಅನ್ನು ಕೆಲವು ನಿಯಮಾಧೀನವಲ್ಲದ ಸೂಚನೆಗಳಿಗೆಂದು "ಎಸ್ಕೇಪ್ ಕೋಡ್" ಆಗಿ ಮೀಸಲಿಡಲಾಗಿರುತ್ತದೆ.ಆದರೆ ಬಹುತೇಕವಾಗಿ ಎಲ್ಲಾ ಸಮಾನ್ಯ ಸೂಚನೆಗಳು ನಿಯಮಾಧೀನವಾಗಿರುತ್ತದೆ. ಹೆಚ್ಚಿನ CPU ಆರ್ಕಿಟೆಕ್ಚರ್‌ಗಳು(ವಿನ್ಯಾಸ) ಬ್ರಾಂಚ್ ಸೂಚನೆಗಳ ಮೇಲೆ ಮಾತ್ರ ಕಂಡಿಷನ್ ಕೋಡ್ ಹೊಂದಿರುತ್ತದೆ. ಇದರಿಂದಾಗಿ ಮೆಮರಿ ಆಕ್ಸೆಸ್ ಸೂಚನೆಗಳಲ್ಲಿ ಡಿಸ್‌ಪ್ಲೇಸ್ಮೆಂಟ್‌ಗೆಂದು ಲಭ್ಯವಿರುವ ಎನ್ಕೋಡಿಂಗ್ ಬಿಟ್ ಗಳಲ್ಲಿ ಗಮನಾರ್ಹವಾಗಿ ಇಳಿಕೆಯಾಗುತ್ತದೆ. ಆದರೆ ಇದೇ ವೇಳೆ, ಇದು ಚಿಕ್ಕ if ಹೇಳಿಕೆಗಳಿಗಾಗಿ ಕೋಡ್ ಉತ್ಪಾದಿಸುವಾಗ ಬ್ರಾಂಚ್ ಸೂಚನೆಗಳನ್ನು ದೂರವಿಡುತ್ತದೆ. ಇದಕ್ಕೆ ಪ್ರಮಾನಕ ಉದಾಹರಣೆಯೆಂದರೆ ಸಬ್‌ಟ್ರ್ಯಾಕ್‌ಷನ್(ವ್ಯವಕಲನ; ಕಳೆಯುವುದು) ಅಧಾರಿತ ಯೂಕ್ಲಿಡೀಯನ್ ಅಲ್ಗಾರಿತಮ್: 'C' ಪ್ರೊಗ್ರಾಮಿಂಗ್ ಭಾಷೆಯಲ್ಲಿ ಲೂಪ್ ರೀತಿಯಿರುತ್ತದೆ:

 while (i !=j)
 {
 if (i > j)
 i -= j;
 else
 j -= i;
 }

ARM ಅಸೆಂಬ್ಲಿಯಲ್ಲಿ ಲೂಪ್ ಈ ರೀತಿಯಲ್ಲಿರುತ್ತದೆ:

 loop CMP Ri, Rj ; set condition "NE" if (i !=j),
 ; "GT" if (i > j),
 ; or "LT" if (i < j)
 SUBGT Ri, Ri, Rj ; if "GT" (greater than), i = i-j;
 SUBLT Rj, Rj, Ri ; if "LT" (less than), j = j-i;
 BNE loop ; if "NE" (not equal), then loop

ಇದು then ಮತ್ತು else ಕ್ಲಾಸ್‌ಗಳ ಬಳಿ ಬ್ರಾಂಚ್ ಆಗುವುದನ್ನು (ಕವಲೊಡೆಯುವುದನ್ನು)ತಪ್ಪಿಸುತ್ತದೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಒಂದು ವೇಳೆ Ri ಮತ್ತು Rj ಸಮಾನವಾಗಿದ್ದರೆ ಆಗ ಯಾವುದೇ SUB ಸೂಚನೆಗಳು ಕಾರ್ಯರೂಪಕ್ಕೆ ಬರುವುದಿಲ್ಲ. ಇದರಿಂದಾಗಿ ಲೂಪ್ ನ ಮೇಲಿನ ಹಂತದಲ್ಲಿ while ಅನ್ನು ಚೆಕ್‌ಮಾಡಲು ಒಂದು ಕಂಡಿಷನಲ್ ಬ್ರಾಂಚ್ ನ ಅವಶ್ಯಕತೆ ಹೆಚ್ಚುತ್ತದೆ. ಉದಾಹರಣೆಗಾಗಿ, SUBLE (ಗಿಂತ ಕಡಿಮೆ ಅಥವಾ ಸಮಾನ) ಬಳಕೆಯಾಗಿದ್ದರೆ. ತಮ್ ಕೋಡ್ ಅಧಿಕ ಪ್ರಮಾಣದ ಎನ್ಕೋಡಿಂಗ್ ಗೆ ಕೊಡುವ ಉಪಾಯಗಳಲ್ಲಿ ಒಂದು ನಾನ್ ಬ್ರಾಂಚ್ ಸೂಚನೆಗಳಿಂದ ನಾಲ್ಕು ಬಿಟ್ selector ನ್ನು ತೆಗೆದು ಹಾಕುವುದಾಗಿದೆ.

ಇತರ ಲಕ್ಷಣಗಳು

[ಬದಲಾಯಿಸಿ]

ಇನ್‌ಸ್ಟ್ರಕ್ಷನ್ ಸೆಟ್‌ನ (ಸೂಚನಾ ಸಮೂಹ), ಇನ್ನೊಂದು ಲಕ್ಷಣವೆಂದರೆ, ಅದು shifts ಮತ್ತು rotates ಗಳನ್ನು "ಡಾಟಾ ಪ್ರೊಸೆಸಿಂಗ್" (ಅಂಕಗಣಿತೀಯ, ತಾರ್ಕಿಕ ಮತ್ತು ರೆಜಿಸ್ಟರ್-ರೆಜಿಸ್ಟರ್ ಚಲನೆ) ಸೂಚನೆಗಳಾಗಿ ಫೋಲ್ಡ್ ಮಾಡುವ ಸಾಮರ್ಥ್ಯ ಹೊಂದಿದೆ. ಉದಾಹರಣೆಗಾಗಿ, C ಲ್ಯಾಂಗ್ವೇಜಿನ ಸ್ಟೇಟ್‌ಮೆಂಟ್

a += (j << 2);

ARMನಲ್ಲಿ ಇದನ್ನು ಸಿಂಗಲ್-ವರ್ಡ್(ಒಂದು ಪದ), ಸಿಂಗಲ್-ಸೈಕಲ್ (ಏಕ ಚಕ್ರ) ವನ್ನಾಗಿ ಅಳವಡಿಸಬಹುದಾಗಿದೆ.

ADD Ra, Ra, Rj, LSL #2

ಇದು ನಿರೀಕ್ಷೆಗಿಂತ ಹೆಚ್ಚು ಸಾಂದ್ರತೆ ಹೊಂದಿದ ಕೆಲವೇ ಮೆಮರಿ ಆಕ್ಸೇಸ್‌ಗಳನ್ನು ಒಳಗೊಂಡ ವಿಶಿಷ್ಟ ARM ಪ್ರೊಗ್ರಾಮ್ ಆಗಿ ಪರಿಣಮಿಸುತ್ತದೆ. ಹೀಗೆ ಪೈಪ್‌ಲೈನ್‌ನ ಬಳಕೆ ಅತ್ಯಂತ ಸಮರ್ಥ ರೀತಿಯಲ್ಲಾಗುತ್ತದೆ. ಬಹಳಷ್ಟು ಜನರ ಪ್ರಕಾರ ARM ನ ಕಾರ್ಯನಿರ್ವಹಣಾ ವೇಗವು ಅತಿ ಕಡಿಮೆಯಾಗಿದ್ದರೂ, ಅದು ಅತ್ಯಂತ ಜಟಿಲ CPU ವಿನ್ಯಾಸಗಳೊಂದಿಗೆ ಉತ್ತಮ ಪೈಪೋಟಿ ನಡೆಸುತ್ತದೆ. ARM ಪ್ರೊಸೆಸರ್‌ಗಳಲ್ಲಿ ಇತರ RISC ವಿನ್ಯಾಸಗಳಲ್ಲಿ ಕಾಣಿಸದ ಕೆಲವು ವಿಶಿಷ್ಟ ಗುಣಗಳು ಇವೆ. ಅವುಗಳು PC-ಅನುಗುಣವಾಗಿ ಅಡ್ರೆಸ್ಸಿಂಗ್ (ವಾಸ್ತವದಲ್ಲಿ, ARM ಮೇಲೆ PC ಅದರ ಒಂದು ರೆಜಿಸ್ಟರ್). ಇದಲ್ಲದೆ ಪ್ರಿ-ಇಂಕ್ರಿಮೆಂಟ್ ಅಡ್ರೆಸ್ಸಿಂಗ್ ಮೋಡ್‌, ಮತ್ತು ಪೋಸ್ಟ್ ಇಂಕ್ರಿಮೆಂಟ್ ಅಡ್ರೆಸ್ಸಿಂಗ್ ಮೋಡ್‌ಗಳು. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ARM ಸುಮಾರು ವರ್ಷಗಳಿಂದ ಇದೆ. ಅದರ ಇನ್‌ಸ್ಟ್ರಕ್ಷನ್ ಸೆಟ್ (ಸೂಚನಾ ಸಮೂಹ) ಅನೇಕ ಮಾರ್ಪಡುಗಳನ್ನು ಕಂಡಿದೆ. ಹೀಗಾಗಿ ಮೊದಮೊದಲು ಬಂದ ಕೆಲವು ARM ಪ್ರೊಸೆಸರ್‌ಗಳಲ್ಲಿ (ARM7TDMI ಗಿಂತ ಮುಂಚಿನವು) ಕೆಲವು ಸೌಲಭ್ಯವಿರಲಿಲ್ಲ, ಉದಾಹರಣೆಗೆ 2-ಬೈಟ್ ಪ್ರಮಾಣವನ್ನು ಸ್ಟೋರ್ ಮಾಡಿಕೊಳ್ಳುವ ಸೂಚನೆಯಿಲ್ಲ, ಹೀಗಾಗಿ ಸರಿಯಾಗಿ ಹೇಳಿದರೆ ಅವುಗಳಿಗೆ, "ವಾಲಟೈಲ್ int16_t" ರೀತಿಯ C ಆಬ್ಜೆಕ್ಟ್‌ ವರ್ತಿಸುವ ರೀತಿಯಲ್ಲಿ ಕೋಡನ್ನು ಜನರೇಟ್ ಮಾಡಲು ಆಗುವುದಿಲ್ಲ.

ಪೈಪ್‌ಲೈನ್ಸ್ ಮತ್ತು ಅಳವಡಿಕೆಯಲ್ಲಿನ ಸಮಸ್ಯೆಗಳು

[ಬದಲಾಯಿಸಿ]

ARM7 ಮತ್ತು ಅದಕ್ಕೂ ಮುಂಚಿನ ಅಳವಡಿಕೆಗಳಲ್ಲಿ ಪೈಪ್‌ಲೈನಿನ ಮೂರು ಹಂತಗಳಿವೆ; ಈ ಹಂತಗಳೆಂದರೆ ಫೆಚ್, ಡಿಕೋಡ್, ಮತ್ತು ಎಕ್ಸಿಕ್ಯೂಟ್. ಹೆಚ್ಚು ಪರಿಣಾಮಕಾರಿಯಾದ ಡಿಸೈನ್‌ಗಳಾದ ARM9ಗಳಲ್ಲಿ ಇನ್ನೂ ಹೆಚ್ಚು ಆಳವಾದ ಪೈಪ್‌ಲೈನ್‌ಗಳಿದೆ. ಕಾರ್ಟೆಕ್ಸ್-A8ರಲ್ಲಿ ಹದಿಮೂರು ಹಂತಗಳಿವೆ. ಹೆಚ್ಚಿನ ಕಾರ್ಯಕ್ಷಮತೆಗಾಗಿ ಮಾಡಬೇಕಾದ ಹೆಚ್ಚುವರಿ ಮಾರ್ಪಡುಗಳೆಂದರೆ ಫಾಸ್ಟರ್ ಆಡರ್ ಮತ್ತು ವ್ಯಾಪಕವಾದ ಬ್ರಾಂಚ್ ಪ್ರಿಡಿಕ್ಷನ್ ಲಾಜಿಕ್‌ಗಳನ್ನು ಅಳವಡಿಸಿಕೊಳ್ಳುವುದು. ARM7DI ಮತ್ತು ARM7DMIಗಳ ಕೋರ್‌ಗಳ ನಡುವೆ ವತ್ಯಾಸವಿದೆ, ಉದಾಹರಣೆಗೆ, ARM7DMI ರಲ್ಲಿ ಸುಧಾರಿತ ಮಲ್ಟಿಪ್ಲೈಯರ್ ಇದೆ (ಹೀಗಾಗಿ "M" ಅನ್ನು ಸೇರಿಸಲಾಗಿತು).

ಕೊಪ್ರೊಸೆಸರ್ (ಸಹಸಂಸ್ಕಾರಕ)

[ಬದಲಾಯಿಸಿ]

ಈ ಆರ್ಕಿಟೆಕ್ಚರ್‌ನಲ್ಲಿ(ವಿನ್ಯಾಸ)ಸುಲಭವಾಗಿ ಕೊಪ್ರೊಸೆಸರ್‌ಗಳನ್ನು ಬಳಸಿ ಸೂಚನಾ ಸಮೂಹಗಳನ್ನು (ಇನ್‌ಸ್ಟ್ರಕ್ಷನ್ ಸೆಟ್) ವಿಸ್ತಾರಮಾಡಬಹುದು. ಇವುಗಳನ್ನು MCR, MRC, MRRC, MCRR ಹಾಗು ಇದೆ ರೀತಿಯ ಇತರ ಸೂಚನೆಗಳನ್ನು ಬಳಸಿ ವಿಸ್ತರಿಸಬಹುದು. ಕೊಪ್ರೊಸೆಸರ್ ಸ್ಥಳಾವಕಾಶವನ್ನು ತಾರ್ಕಿಕವಾಗಿ 16 ಕೊಪ್ರೊಸೆಸರ್‌ಗಳಾಗಿ ವಿಗಂಡಿಸಬಹುದು. ಇವುಗಳಿಗೆ 0 ಯಿಂದ 15ರ ಸಂಖ್ಯೆಯನ್ನು ನೀಡಲಾಗಿದೆ. ಕೊಪ್ರೊಸೆಸರ್ 15(cp15) ಅನ್ನು ಕ್ಯಾಷ್‌ಗಳನ್ನು ನಿರ್ವಹಿಸಲು, ಮತ್ತು MMUಆಪರೇಷನ್‌ (ಕ್ರಿಯೆ) ಕೆಲವು ವಿಶಿಷ್ಟ ಕಂಟ್ರೋಲ್ ಫಂಕ್‌ಷನ್‌ಗಳಲ್ಲಿ (ನಿಯಂತ್ರಕ ಕೆಲಸ) ಬಳಸಲಾಗುತ್ತದೆ. ARM-ಅಧಾರಿತ ಮೆಷೀನುಗಳಲ್ಲಿ, ಪರಿಫರಲ್ ಡಿವೈಸ್‌ಗಳನ್ನು ‌(ಬಾಹ್ಯೋಪಕರಣ)ಸಾಮಾನ್ಯವಾಗಿ, ಅದರ ಫಿಸಿಕಲ್ ರೆಜಿಸ್ಟರ್‌ಗಳನ್ನು ARM ಮೆಮೊರಿ ಸ್ಪೇಸ್‌ಗೆ(ಸ್ಥಳಾವಕಾಶ) ಮ್ಯಾಪ್ ಮಾಡಿ ಅಥವಾ ಕೊಪ್ರೊಸೆಸರ್ ಸ್ಪೇಸ್ ಅಥವಾ ಇನ್ನೊಂದು ಡಿವೈಸ್‌ಗೆ(ಬಸ್)ಕನೆಕ್ಟ್ ಮಾಡಿ, ಅದಕ್ಕೆ ಪ್ರೊಸೆಸರ್ ಜೋಡಿಸಲಾಗುತ್ತದೆ. ಕೊಪ್ರೊಸೆಸರ್ ಆಕ್ಸೆಸ್‌ಗೆ ಬಹಳ ಕಡಿಮೆ ಲೇಟೆನ್ಸಿ ಇರುತ್ತದೆ (ಉದಾಹರಣೆಗೆ ಎಕ್ಸ್‌ಸ್ಕೇಲ್ ಇಂಟರ್ಪಟ್ ಕಂಟ್ರೋಲರ್) ಹೀಗಾಗಿ ಕೆಲವು ಪೆರಿಫರೆಲ್ಸ್‌(ಸಾಧನಗಳನ್ನು) ಎರಡೂ ರೀತಿಯಲ್ಲಿ (ಮೆಮೊರಿ ಮತ್ತು ಕೊಪ್ರೊಸೆಸರ್ ಮೂಲಕ) ಅಕ್ಸೆಸ್ ಮಾಡಲು ಸೂಕ್ತವಾದ ರಚನೆಯನ್ನು ಹೊಂದಿರುತ್ತದೆ. ಇತರ ಬೇರೆ ಸಂದರ್ಭಗಳಲ್ಲಿ, ಚಿಪ್ ತಯಾರಕರು ಕೊಪ್ರೊಸೆಸರ್ ತಂತ್ರಜ್ಞಾನ ಬಳಸಿ ಯಂತ್ರಾಂಶವನ್ನು(ಹಾರ್ಡ್‌ವೇರ್)ತಯಾರಿಸುತ್ತಾರೆ.

ಉದಾಹರಣೆಗೆ: ಇಮೇಜ್(ಚಿತ್ರಣ) ಅನ್ನು ಸಂಸ್ಕರಿಸುವ(ಪ್ರೋಸೆಸ್) ಯಂತ್ರವು ಕೇವಲ ಒಂದು ಚಿಕ್ಕ ARM7TDMI ಕೋರ್ ಜೊತೆಯಲ್ಲಿ ಒಂದು ಕೊಪ್ರೊಸೆಸರ್(ಸಹಸಂಸ್ಕಾರಕ) ಹೊಂದಿರುತ್ತದೆ. ಇದು HDTV ಪ್ರಿಮಿಟಿವ್ಸ್‌ಗಳನ್ನು ಟ್ರಾನ್ಸ್‌ಕೋಡ್ ಮಾಡುವ ವಿಶಿಷ್ಟ ಸೂಚನೆ ಸಮೂಹಗಳನ್ನು ಬೆಂಬೆಲಿಸುತ್ತದೆ.

ARM7TDMI ನಂತರದ ಪ್ರೊಸೆಸರ್‌ಗಳು ಕಂಪೈಲ್ ಆದ ಕೋಡ್‌ ಡೆನ್ಸಿಟಿ(ಕೋಡ್ ಸಾಂದ್ರತೆ) ಹೆಚ್ಚಿಸುವ ಸಲುವಾಗಿ ತಮ್ ಮೋಡ್ ಅನ್ನು ಆಳವಡಿಸಿಕೊಂಡಿವೆ. ("TDMI" ಯಲ್ಲಿನ "T" ತಮ್‌ ಲಕ್ಷಣವನ್ನು ಸೂಚಿಸುತ್ತದೆ.) ಈ ಮೋಡ್‌ನಲ್ಲಿದಾಗ, ಪ್ರೊಸೆಸರ್ 16-ಬಿಟ್ ಸೂಚನೆಗಳನ್ನು ಎಕ್ಸಿಕ್ಯೂಟ್ ಮಾಡುತ್ತದೆ (ಅನುಷ್ಠಾನ ಗೊಳಿಸುತ್ತದೆ). ಇವುಗಳಲ್ಲಿ ಬಹುತೇಕ 16-ಬಿಟ್-ಪ್ರಮಾಣದ ತಮ್ ಸೂಚನೆಗಳನ್ನು ಮೂಮೂಲಿನ ARM ಸೂಚನೆಗಳಿಗೆ ನೇರವಾಗಿ ಮ್ಯಾಪ್ ಮಾಡಲಾಗುತ್ತದೆ. ಕೆಲವು ಸೂಚನೆಗಳ ಅಪರ್ಯಾಂಡ್(ಪರಿಕರ್ಮ್ಯ)ಗಳನ್ನು ಅಡಕವಾಗಿಸಿ, ಹಾಗು ಆಗಬಹುದಾದ ಸಂಭಾವನೀಯಗಳ ಸಂಖ್ಯೆಯನ್ನು ಪೂರ್ಣ ARM ಮೋಡ್ ಸೂಚನೆಗೆ ಹೋಲಿಸಿದಾಗ ಕಡಿಮೆ ಮಾಡುವುದರಿಂದ ಸ್ಪೇಸ್ (ಜಾಗ) ಉಳಿತಾಯವಾಗುತ್ತದೆ. ತಮ್ ನಲ್ಲಿ, ಚಿಕ್ಕದಾದ ಆಪ್‌ಕೋಡ್‌ಗಳು ಕಡಿಮೆ ಫಂಕ್‌ಷನ್‌ಗಳನ್ನು ಮಾಡುತ್ತದೆ(ಫಂಕ್‌ಷನಾಲಿಟಿ). ಉದಾಹರಣೆಗೆ, ಕೇವಲ ಬ್ರಾಂಚ್‌ಗಳು ನಿಯಮಾಧೀನವಾಗಿರುತ್ತದೆ, ಹಾಗು ಬಹುತೇಕ ಅಪ್‌ಕೋಡ್‌ಗಳು, CPUವಿನ ಸಮಾನ್ಯ ಉದ್ದೇಶಗಳ ರೆಜಿಸ್ಟರ್‌ಗಳ ಅರ್ಧದಷ್ಟನ್ನು ಮಾತ್ರ ಆಕ್ಸೆಸ್ ಮಾಡಲು ಸೀಮಿತವಾಗಿರುತ್ತದೆ. ಚಿಕ್ಕದಾದ ಆಪ್‌ಕೋಡ್‌ಗಳು ಒಟ್ಟಾರೆಯಾಗಿ ಕೋಡ್‌ ಡೆನ್ಸಿಟಿ(ಕೋಡ್ ಸಾಂದ್ರತೆ) ಗಣನೀಯವಾಗಿ ಹೆಚ್ಚಿಸುತ್ತದೆ. ಆದರೆ ಕೆಲವು ಕಾರ್ಯ ನಿರ್ವಹಿಸಲು ಹೆಚ್ಚಿನ ಸೂಚನೆಗಳ ಅವಶ್ಯಕತೆಯಿದೆ. ಮೆಮೊರಿ ಪೋರ್ಟ್ ಅಥವಾ ಬಸ್ ಪ್ರಮಾಣವು 32 ಬಿಟ್‌ಗಳಿಗಿಂತ ಕಡಿಮಯಾಗಿ ನಿಬಂಧನೆಗೆ ಒಳಗಾದ ಪಕ್ಷದಲ್ಲಿ, ಚಿಕ್ಕದಾದ ತಮ್ ಅಪ್‌ಕೋಡ್‌ಗಳು 32-ಬಿಟ್ ARM ಕೋಡ್‌ ಹೋಲಿಸಿದಾಗ ಹೆಚ್ಚಿನ ಕಾರ್ಯಕ್ಷಮತೆಯನ್ನು ಪ್ರದರ್ಶಿಸುತ್ತದೆ. ಇದು ಏಕೆಂದರೆ, ಚಿಕ್ಕ ಪ್ರೋಗ್ರಾಮ್ ಕೋಡ್ ಪ್ರೊಸೆಸರ್‌ನ ಚಿಕ್ಕದಾದ ಮೆಮೊರಿ ಪ್ರಮಾಣದಲ್ಲಿ ಲೋಡ್ ಆಗಿರಬಹುದು. ಗೇಮ್ ಬಾಯ್ ಅಡ್ವಾನ್ಸ್ ನಂತಹ ಎಂಬೆಡೆಡ್ ಹಾರ್ಡ್‌ವೇರ್‌ಗಳು ವಿಶಿಷ್ಟವಾಗಿ ಪೂರ್ಣ ಪ್ರಮಾಣದ 32-ಬಿಟ್ ಡಾಟಾಪಾತಿನ ಅತಿ ಕಡಿಮೆ ಪ್ರಮಾಣದ RAM ಆಕ್ಸೆಸ್ ಮಾಡುತ್ತದೆ; ಇದರಲ್ಲಿ ಬಹುತೇಕ 16 ಬಿಟ್ ಮೂಲಕ ಅಥವಾ ಅದ್ದಕಿಂತಲೂ ಚಿಕ್ಕ ಬೇರೆಯ ಡಾಟಾಪಾತಿನ ಮೂಲಕ ಆಕ್ಸೆಸ್ ಆಗುತ್ತದೆ. ಈ ಸಂದರ್ಭದಲ್ಲಿ, ತಮ್ ಕೋಡ್‌‌ ಅನ್ನು ಕಂಪೈಲ್ ಮಾಡುವುದು ಸರಿ ಹೋಗುತ್ತದೆ. ಇದನ್ನು CPU ಕೇಂದ್ರಿಕೃತ ವಿಭಾಗಗಳಿಗೆ 32-ಬಿಟ್ ARM ಸೂಚನೆಗಳನ್ನು ಬಳಸಿ ಇವುಗಳನ್ನು ಹೆಚ್ಚು ಸಕ್ಷಮಗೊಳಿಸಲಾಗುತ್ತದೆ. 32-ಬಿಟ್ ಬಸ್ ನಿಂದ ಆಕ್ಸೆಸ್ ಆಗಬಹುದಾದ ಮೆಮೊರಿಯಲ್ಲಿ ಇನ್ನೂ ದೊಡ್ಡ ಪ್ರಮಾಣದ ಸೂಚನೆಗಳನ್ನು ಕೊಡಲಾಗುತ್ತದೆ. ತಮ್ ಇನ್‌ಸ್ಟ್ರಕಷನ್(ಸೂಚನೆ) ಡಿಕೋಡರ್ ಇದ್ದ ಮೊದಲ ಪ್ರೊಸೆಸರ್ ಅಂದರೆ ARM7TDMI. ಎಲ್ಲಾ ARM9 ಮತ್ತು ನಂತರದ ಆವೃತ್ತಿಗಳು,ಎಕ್ಸ್‌ಸ್ಕೇಲ್ ಒಳಗೊಂಡಂತೆ ತಮ್ ಇನ್‌ಸ್ಟ್ರಕಷನ್(ಸೂಚನೆ) ಡಿಕೋಡರ್ ಹೊಂದಿವೆ.

ಡಿಬಗ್‌‌ಗಿಂಗ್ (ದೋಷ ನಿದಾನ)

[ಬದಲಾಯಿಸಿ]

ಎಲ್ಲಾ ARM ಪ್ರೊಸೆಸರ್‌ಗಳು ಹಾರ್ಡ್‌ವೇರ್ ಡಿಬಗ್‌(ದೋಷ ನಿದಾನ/ದೋಷ ಪರಿಹರಿಸುವ) ಮಾಡುವ ಸಾಮರ್ಥ್ಯ ಹೊಂದಿರುತ್ತದೆ. ಇವುಗಳಿಲ್ಲದೆ, ಕೋಡ್‌ಗಳ ರಿಸೆಟ್ ನಿಂದ ಆರಂಭಿಸಿ ಕೋಡ್‌ನ ಬ್ರೇಕ್‌ ಪಾಯಿಂಟ್ ತನಕ ಹಾಲ್ಟಿಂಗ್ ಮತ್ತು ಸ್ಟೇಪ್ಪಿಂಗ್ ಗಳಂತಹ ಕೆಲವು ಮೂಲಭೂತ ಕ್ರಿಯೆಗಳನ್ನು, ಸಾಫ್ಟ್‌ವೇರ್ ಡಿಬಗರ್‌ಗೆ ನೆರವೆರಿಸಲು ಸಾಧ್ಯವಾಗುವುದಿಲ್ಲ. ಈ ಸಾಮರ್ಥ್ಯವನ್ನು JTAG ಗಳ ಬೆಂಬಲದಿಂದ ಕಲ್ಪಿಸಲಾಗುತ್ತದೆ. ಆದರೂ ಕೆಲವು ಹೊಸ ಕೋರ್‌‌ಗಳು ಕೆಲವೊಮ್ಮೆ ARMನ ಎರಡು-ವೈರ್‌ಗಳ "SWD" ಪ್ರೊಟೋಕಾಲ್ ಅನ್ನು ಬೆಂಬಲಿಸುತ್ತದೆ. ARM7TDMI ಕೋರುಗಳಲ್ಲಿ "D", JTAG ನ ಡಿಬಗ್(ದೋಷ ನಿದಾನ)ಬೆಂಬಲವನ್ನು ಸೂಚಿಸುತ್ತದೆ, ಹಾಗು "I" EmbeddedICE ಡಿಬಗ್‌ ಅಂಶವನ್ನು ಸೂಚಿಸುತ್ತದೆ. ARM7 ಮತ್ತು ARM9 ಕೋರ್ ಪೀಳಿಗೆಗಳಿಗೆ, JTAG ಗಿಂತ EmbeddedICE ಡಿಬಗ್‌ನ ಪ್ರಶ್ನಾತೀತ ಮಾನದಂಡವಾಗಿತ್ತು. ಆದರೆ, ಇದರ ವಿನ್ಯಾಸದ ದೃಷ್ಟಿಯಿಂದ ಇದರ ವಿನ್ಯಾಸವನ್ನು ಹಾಗೆ ರೂಪಿಸಿರಲಾಗಿರಲಿಲ್ಲ. ARMv7 ವಿನ್ಯಾಸ, ವಿನ್ಯಾಸದ ಹಂತದ ಬೇಸಿಕ್ ಡಿಬಗ್ ಅಂಶಗಳನ್ನು ವಿಶ್ಲೇಷಿಸುತ್ತದೆ. ಇವುಗಳು: ಬ್ರೇಕ್‌ಪಾಯಿಂಟ್, ವಾಚ್‌ಪಾಯಿಂಟ್, ಮತ್ತು "ಡಿಬಗ್ ಮೋಡ್" ನಲ್ಲಿ ಸೂಚನೆಯನ್ನು ಅನುಷ್ಠಾನಗೊಳಿಸುವುದನ್ನು ಒಳಗೊಂಡಿರುತ್ತದೆ; ಇದೇ ರೀತಿಯ ಅಂಶಗಳು EmbeddedICE ನಲ್ಲಿ ಕೂಡ ಲಭ್ಯವಿದೆ. "ಹಾಲ್ಟ್ ಮೋಡ್" ಮತ್ತು "ಮಾನಿಟರ್" ಮೋಡ್ ಗಳಲ್ಲಿ ಡಿಬಗ್ ಆಗುತ್ತದೆ. ಆದರೆ ಡಿಬಗ್ ಸೌಕರ್ಯವನ್ನು ಆಕ್ಸೆಸ್ ಮಾಡುವಂತಹ ಟ್ರಾನ್ಸಪೋರ್ಟ್ ತಂತ್ರವನ್ನು ಆರ್ಕಿಟೆಕ್ಚರ್‌ನಲ್ಲಿ ಸೂಚಿಸಲಾಗಿಲ್ಲ, ಆದರೆ ಇದರ ಅಳವಡಿಕೆಯು ಸಮಾನ್ಯವಾಗಿ JTAG ಬೆಂಬಲವನ್ನು ಹೊಂದಿರುತ್ತದೆ. ARM "ಕೋರ್‌ಸೈಟ್" ಎನ್ನುವ ಪ್ರತೇಕವಾದ ಡಿಬಗ್ ವಿನ್ಯಾಸ ಇದೆ. ಆದರೆ, ವಿನ್ಯಾಸದ ದೃಷ್ಟಿಯಿಂದ, ಇದು ARMv7 ಪ್ರೊಸೆಸರ್‌ಗಳಿಗೆ ಬೇಡ.

DSPಸುಧಾರಿತ ಸೂಚನೆಗಳು

[ಬದಲಾಯಿಸಿ]

ARM ಆರ್ಕಿಟೆಕ್ಚರ್ (ವಿನ್ಯಾಸ) ಅನ್ನು ಡಿಜಿಟಲ್ ಸಿಗ್ನಲ್ ಸಂಸ್ಕರಣೆ (ಪ್ರೋಸೆಸಿಂಗ್) ಮತ್ತು ಮಲ್ಟಿಮೀಡಿಯಾ ಅಪ್ಲಿಕೇಷನ್‌ಗಳಿಗಾಗಿ ಉತ್ತಮಪಡಿಸಲು, ಕೆಲವು ಹೊಸ ಸೂಚನೆಗಳನ್ನು ಸಮೂಹಕ್ಕೆ ಸೇರಿಸಲಾಯಿತು.[೩೭] ಇವುಗಳನ್ನು ARMv5TE ಮತ್ತು ARMv5TE ವಿನ್ಯಾಸಗಳ ಹೆಸರಿನಲ್ಲಿ "E" ಯನ್ನು ಸೇರಿಸುವುದರೊಂದಿಗೆ ಸೂಚಿಸಲಾಗಿದೆ. E-ಅವೃತ್ತಿ ಎಂದರೆ ಇವುಗಳಲ್ಲಿ T,D,M ಮತ್ತು I ಕೂಡ ಇದೆ ಎಂದು ಸೂಚಿಸುತ್ತದೆ. ಹೊಸ ಸೂಚನೆಗಳು ಡಿಜಿಟಲ್ ಸಿಗ್ನಲ್ ಪ್ರೊಸೆಸರ್ ವಿನ್ಯಾಸಗಳಲ್ಲಿ (ಆರ್ಕಿಟೆಕ್ಚರ್) ಇದ್ದೇಇರುತ್ತದೆ. ಇವುಗಳ ಹಲವು ವಿಭಿನ್ನವಾದ ಮಾದರಿಗಳಿಂದಾಗಿ ಸೈನ್ಡ್ ಮಲ್ಟಿಪ್ಲೈ, ಅಕ್ಯೂಮುಲೇಟ್, ಸಾಟುರೇಟೆಡ್ ಆಡ್ ಮತ್ತು ಸಬ್‌ಟ್ರಾಕ್ಟ್, ಹಾಗು ಲೀಡಿಂಗ್ ಜೀರೋಗಳನ್ನು(ಸೊನ್ನೆ) ಕೌಂಟ್ ಮಾಡಬಹುದು.

ಜಾಸೆಲ್

[ಬದಲಾಯಿಸಿ]

ಜಾಸೆಲ್ ತಂತ್ರಜ್ಞಾನವು, ಜಾವಾ ಬೈಟ್‌ಕೋಡ್‌ ಅನ್ನು ನೇರವಾಗಿ ARM ಆರ್ಕಿಟೆಕ್ಚರ್ (ವಿನ್ಯಾಸ), ಮೂರನೇ ಎಕ್ಸಿಕ್ಯೂಷನ್ ಸ್ಟೇಟ್ ರೀತಿಯಲ್ಲಿ (ಮತ್ತು ಸೂಚನಾ ಸಮೂಹ(ಇನ್‌ಸ್ಟ್ರಕ್ಷನ್ ಸೆಟ್)) ARM ಮತ್ತು ತಮ್-ಮೋಡ್‌ ಜೊತೆಯಲ್ಲಿಯೇ, ಅನುಷ್ಠಾನಗೊಳಿಸಲು ಸಹಾಯಮಾಡುತ್ತದೆ. ARMv5TEJ ವಿನ್ಯಾಸ, ಮತ್ತು ARM9EJ-S ಮತ್ತು ARM7EJ-S ಕೋರ್‌ಗಳ ಹೆಸರಿನಲ್ಲಿರುವ "J", ಈ ಸ್ಟೇಟ್‌ಗೆ ಬೆಂಬಲ ನೀಡುತ್ತದೆ ಎಂದು ಸೂಚಿಸುತ್ತದೆ. ARMv6 ನಂತರದಕ್ಕೆ ಈ ಸ್ಟೇಟಿನ ಬೆಂಬಲ ಅಗತ್ಯವಿದೆ (ARMv7-M ಪ್ರೋಫೈಲ್ ಹೊರತುಪಡಿಸಿ). ಆದರೆ ಹೊಸ ಕೋರ್‌ಗಳು ಇದನ್ನು ಅಲ್ಪಪ್ರಮಾಣದಲ್ಲಿ ಆಳವಡಿಸಿಕೊಂಡಿವೆ, ಹೀಗಾಗಿ ಇದು ಯಾವುದೆ ರೀತಿಯಲ್ಲಿ ಹಾರ್ಡ್‌ವೇರ್ ಆಕ್ಸಿಲರೇಷನ್‌ ಮಾಡುವುದಿಲ್ಲ.

ತಮ್-2 ತಂತ್ರಜ್ಞಾನವನ್ನು 2003ರಲ್ಲಿ ಬಿಡುಗಡೆಯಾದ ARM1156 ಕೋರ್‌ನಲ್ಲಿ ಮೊದಲ ಬಾರಿಗೆ ಪರಿಚಿಯಿಸಲಾಯಿತು. ತಮ್-2, ಕಿರಿದಾದ 16-ಬಿಟ್‌ಗಳ ಸೂಚನ ಸಮೂಹದ (ಇನ್‌ಸ್ಟ್ರಕ್ಷನ್ ಸೆಟ್) ತಮ್‌ಗೆ ಹೆಚ್ಚುವರಿಯಾಗಿ 32-ಬಿಟ್ ಸೂಚನೆಗಳನ್ನು (ಇನ್‌ಸ್ಟ್ರಕ್ಷನ್) ಕೊಟ್ಟು ವಿಸ್ತರಿಸುತ್ತದೆ. ಹೀಗಾಗಿ ಸೂಚನಾ ಸಮೂಹಕ್ಕೆ(ಇನ್‌ಸ್ಟ್ರಕ್ಷನ್ ಸೆಟ್) ಸ್ವಲ್ಪ ಅಧಿಕವಾದ ಅವಕಾಶ ಸಿಗಹಾಗೆ ಆಗುತ್ತದೆ. ತಮ್-2 ನ ಮುಖ್ಯ ಉದ್ದೇಶವೆಂದರೆ, ತಮ್ ನ ಹಾಗೆ ಕೋಡ್ ಡೆನ್ಸಿಟಿ (ಕೋಡ್ ಸಾಂದ್ರತೆ) ಹಾಗು 32-ಬಿಟ್ ಮೆಮೊರಿಯ ARM ಸೂಚನಾ ಸಮೂಹದ (ಇನ್‌ಸ್ಟ್ರಕ್ಷನ್ ಸೆಟ್) ಹಾಗೆ ಕಾರ್ಯಕ್ಷಮತೆ ಹೊಂದುವುದು. ಈ ಉದ್ದೇಶವು ARMv7 ಯಲ್ಲಿ ಸಾಧಿಸಲಾಗಿದೆ ಎಂದು ಹೇಳಲಾಗುತ್ತದೆ. ತಮ್-2, ARM ಮತ್ತು ತಮ್ ಇನ್‌ಸ್ಟ್ರಕ್ಷನ್ ಸೆಟ್(ಸೂಚನಾ ಸಮೂಹ) ಎರಡನೂ, ಬಿಟ್-ಫೀಲ್ಡ್ ಮ್ಯಾನಿಪುಲೇಷನ್, ಟೇಬಲ್ ಬ್ರಾಂಚ್ ಮತ್ತು ಕಂಡಿಷನಲ್ ಎಕ್ಸಿಕ್ಯೂಷನ್ ಗಳನ್ನು ಒಳಗೊಂಡಂತೆ ಇನ್ನೂ ಅನೇಕ ಸೂಚನೆಗಳಿಂದ ವಿಸ್ತರಿಸುತ್ತದೆ. ಯುನಿಫೈಡ್ ಆಸೆಂಬ್ಲಿ ಲ್ಯಾಂಗ್ವೇಜ್ ಎನ್ನುವ ಹೊಸ ಲ್ಯಾಂಗ್ವೇಜ್, ಒಂದೇ ಸೋರ್ಸ್ ಕೋಡಿನ ತಮ್-2 ಅಥವಾ ARM ಸೂಚನೆಗಳನ್ನು ಬೆಂಬಲಿಸುತ್ತದೆ; ARMv7 ನ ತಮ್ ನ ಆವೃತ್ತಿಗಳು ARM ಕೋಡ್‌ಗಳಷ್ಟೆ ಸಕ್ಷಮವಾಗಿದೆ (ಇಂಟರ್ಪಟ್ ಹ್ಯಾಂಡ್ಲರ್ಸ್ ಅನ್ನು ನಮೂದಿಸಲು ಶಕ್ತವಾಗಿದೆ). ಇದಕ್ಕೆ ಸ್ವಲ್ಪ ಎಚ್ಚರಿಕೆಯ ಅಗತ್ಯ ಹಾಗು ಹೊಸ "IT" (if-then) ಸೂಚನೆಯನ್ನು ಬಳಸ ಬೇಕಾಗುತ್ತದೆ. ಇದರಿಂದಾಗಿ ಒಂದು ಟೆಸ್ಟ್ ಕಂಡಿಷನ್(ಮಾಪಕ ಮಾನದಂಡ) ಅಧಾರವಾಗಿ ನಾಲ್ಕು ಕ್ರಮಾನುಕ್ರಮದ ಸೂಚನೆಗಳು ಅನುಷ್ಟಾನಗೊಳ್ಳಲು ಸಾಧ್ಯವಿದೆ. ಇದನ್ನು ARM ಕೋಡ್‌ಗೆ ಕಂಪೈಲ್ ಮಾಡುವಾಗ ಇದನ್ನು ಪರಿಗಣಿಸಲಾಗುವುದಿಲ್ಲ. ಆದರೆ, ತಮ್-2 ಗೆ ಕಂಪೈಲ್ ಮಾಡುವಾಗ ಇದು ನಿಜವಾದ ಸೂಚನೆಯನ್ನು(ಇನ್‌ಸ್ಟ್ರಕ್ಷನ್) ಜನರೇಟ್ ಮಾಡುತ್ತದೆ. ಉದಾಹರಣೆಗೆ:

; if (r0 == r1)
CMP r0, r1
ITE EQ ; ARM: no code ... Thumb: IT instruction
; then r0 = r2;
MOVEQ r0, r2 ; ARM: conditional; Thumb: condition via ITE 'T' (then)
; else r0 = r3;
MOVNE r0, r3 ; ARM: conditional; Thumb: condition via ITE 'E' (else)
; recall that the Thumb MOV instruction has no bits to encode "EQ" or "NE"

ಎಲ್ಲಾ ARMv7 ಚಿಪ್‌ಗಳು, ತಮ್-2 ಸೂಚನಾ ಸಮೂಹವನ್ನು (ಇನ್‌ಸ್ಟ್ರಕ್ಷನ್ ಸೆಟ್) ಬೆಂಬಲಿಸುತ್ತವೆ. ಕಾರ್ಟೆಕ್ಸ್-M3 ಯಂತಹ ಕೆಲವು ಚಿಪ್‌ಗಳು, ಕೇವಲ ತಮ್-2 ಸೂಚನಾ ಸಮೂಹವನ್ನು(ಇನ್‌ಸ್ಟ್ರಕ್ಷನ್ ಸೆಟ್) ಮಾತ್ರ ಬೆಂಬಲಿಸುತ್ತದೆ. ಕಾರ್ಟೆಕ್ಸ್ ಮತ್ತು ARM11 ಶ್ರೇಣಿಯ ಇತರ ಚಿಪ್‌ಗಳು "ARM ಇನ್‌ಸ್ಟ್ರಕ್ಷನ್ ಸೆಟ್ ಮೋಡ್" ಮತ್ತು "ತಮ್-2 ಇನ್‌ಸ್ಟ್ರಕ್ಷನ್ ಸೆಟ್ ಮೋಡ್" ಎರಡನೂ ಬೆಂಬಲಿಸುತ್ತವೆ.[೩೮][೩೯][೪೦]

ತಮ್ ಎಕ್ಸಿಕ್ಯೂಷನ್ ಎನ್‌ವೈರ್ನಮೆಂಟ್ (ತಮ್EE)

[ಬದಲಾಯಿಸಿ]

ತಮ್EE ಅಥವಾ ತಮ್-2EE ಎಂದು ಕರೆಯಲಾಗುವ, ಜಾಸೆಲ್ RCT(ರನ್ ಟೈಮ್ ಕಂಪೈಲೆಷನ್ ಟಾರ್ಗೆಟ್), ಎಂದು ಮಾರಾಟಮಾಡಲಾಗುವ, ಇದನ್ನು 2005 ರಲ್ಲಿ ಘೋಷಿಸಲಾಯಿತು. ಇದು ಮೊದಲ ಬಾರಿಗೆ ಕಾರ್ಟೆಕ್ಸ್-A8 ಪ್ರೊಸೆಸರ್‌ನಲ್ಲಿ ಕಾಣಿಸಿಕೊಂಡಿತು. ತಮ್EE ನಾಲ್ಕನೇ ಪ್ರೊಸೆಸರ್ ಮೋಡಿನಲ್ಲಿದೆ, ತಮ್-2 ಎಕ್ಸೆಟೆಂಟೆಡೆಡ್ ಸೂಚನ ಸಮೂಹಕ್ಕೆ(ಇನ್‌ಸ್ಟ್ರಕ್ಷನ್ ಸೆಟ್)ಸ್ವಲ್ಪ ಬದಲಾವಣೆ ಮಾಡಲಾಗಿದೆ. ಈ ಬದಲಾವಣೆಗಳು ಸೂಚನಾ ಸಮೂಹವನ್ನು ನಿಯಂತ್ರಿತ ಎಕ್ಸೆಕ್ಯೂಷನ್ ಎನ್ವರ್ನೆಮೆಂಟ್ ನಲ್ಲಿ ರನ್‌ಟೈಮ್‌ನಲ್ಲಿ ಉತ್ಪತ್ತಿಯಾಗುವ(ಜನರೇಟೆಡ್) ಕೋಡ್‌ಗೆ ಸರಿಹೊಂದಿಸುತ್ತದೆ(ಉದಾಹರಣೆಹೆ: JIT ಕಂಪೈಲೇಷನ್‌ನಿಂದಾಗಿ). ಲಿಂಬೊ, ಜಾವಾ, C#, ಪೆರ್ಲ್ ಮತ್ತು ಪೈಥಾನ್ ಗಳಂತಹ ಲ್ಯಾಂಗ್ವೇಂಜ್‌ಗಳಿಗೆ ತಮ್EE ಟಾರ್ಗೆಟ್ ಆಗಿದೆ. ಇದು JIT ಕಂಪೈಲರ್‌ಗೆ , ಅದರ ಕಾರ್ಯನಿರ್ವಹಣಿಯ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರದ, ಚಿಕ್ಕದಾದ ಕಂಪೈಲಡ್ ಕೋಡ್ ಕೊಡಲು ಸಾಧ್ಯವಾಯಿತು. ತಮ್EE ಕೊಟ್ಟ ಹೊಸ ಲಕ್ಷಣಗಳು: ಅಟೋಮಾಟ್ಯಿಕ್ ನಲ್ ಪಾಯಿಂಟರ್ ಇದು ಪ್ರತಿ ಲೋಡ್ ಅನ್ನು ಪರೀಕ್ಷಿಸುತ್ತದೆ, ಸೂಚನೆಯನ್ನು ಸ್ಟೋರ್ ಮಾಡುತ್ತದೆ, ಅರೇ ಬೌಂಡ್ಸ್ ಚೆಕ್ ಅನ್ನು ಮಾಡುವಂತಹ ಸೂಚನೆ, ರೆಜಿಸ್ಟರ್ r8-r15 ಕ್ಕೆ ಆಕ್ಸೆಸ್ ನೀಡುತ್ತದೆ (ಇಲ್ಲಿ ಜಾಸೆಲ್/DBX ಜಾವಾ VM ಸ್ಟೇಟ್ ಇದೆ) ಹಾಗು ಹ್ಯಾಂಡಲರ್ ಅನ್ನು ಕಾಲ್ ಮಾಡುವ ಒಂದು ವಿಶಿಷ್ಟ ಸೂಚನೆಗಳನ್ನು ನೀಡುತ್ತದೆ.[೪೧] ಹ್ಯಾಂಡಲರ್‌ಗಳು ಆಗಾಗ ಕಾಲ್ ಆಗುವ ಕೋಡಿನ ಚಿಕ್ಕ ವಿಭಾಗಗಳು. ಇವುಗಳನ್ನು ಹೊಸ ಆಬ್ಜೆಕ್ಟ್‌ಗೆ ಮೆಮೊರಿಯನ್ನು ನಿಗದಿಮಾಡುವಂತಹ, ಹೈ ಲೆವೆಲ್ ಲ್ಯಾಂಗ್ವೇಜ್‌‌ನ ವಿಶಿಷ್ಟ ಲಕ್ಷಣವನ್ನು ಅಳವಡಿಸಲು ಬಳಸಲಾಗುತ್ತದೆ. ಈ ವ್ಯತಾಸಗಳನ್ನು ಕೆಲವು ಆಪ್‌ಕೋಡ್‌ಗಳನ್ನು ರಿಪರ್ಪಸ್ ಮಾಡುವುದರಿಂದ ಹಾಗು ಕೋರ್ ಹೊಸ ತಮ್EE ಮೋಡ್‌ನಲ್ಲಿದೆ ಎನ್ನುವುದರಿಂದ ಉಂಟಾಗುತ್ತದೆ.

ಸುಧಾರಿತ SIMD (NEON)

[ಬದಲಾಯಿಸಿ]

ಸುಧಾರಿತ SIMD ವಿಸ್ತೃತ ರೂಪವನ್ನು, NEON ತಂತ್ರಜ್ಞಾನವೆಂದು ಮಾರಾಟಮಾಡಲಾಗುತ್ತದೆ. ಇದು 64-ಬಿಟ್ ಮತ್ತು 128-ಬಿಟ್ ಗಳ ಸಿಂಗಲ್ ಇನ್ಸ್‌ಟ್ರಕ್ಷನ್ ಮಲ್ಟಿಪಲ್ ಡಾಟಾ (SIMD) ನ ಒಟ್ಟುಗೂಡಿದ ಸೂಚನಾ ಸಮೂಹ. ಇದು ಸಿಗ್ನಲ್ ಪ್ರೋಸೆಸಿಂಗ್ ಉಪಯುಕ್ತತೆಗಳಲ್ಲಿ ಮತ್ತು ಮೀಡಿಯಾಗೆ ಮಾನಕವಾದ ಅಕ್ಸಿಲರೇಷನ್ ಒದಗಿಸುತ್ತದೆ. NEON 10 MHz ನಲ್ಲಿ ಕಾರ್ಯನಿರ್ವಹಿಸುವ CPUಗಳಲ್ಲಿ MP3 ಆಡಿಯೋವನ್ನು ಡಿಕೋಡ್ ಮಾಡಬಲ್ಲದು. ಇಷ್ಟೆ ಅಲ್ಲದೆ, ಇದು GSM AMR (ಅಡಾಪ್ಟಿವ್ ಮಲ್ಟಿ-ರೇಟ್) ಸ್ಪೀಚ್ ಕೊಡೆಕ್ ಅನ್ನು 13 MHz ಗಿಂತ ಹೆಚ್ಚಿಲಿದಿದ್ದರೆ ರನ್ ಮಾಡಬಹುದು. ಇದರಲ್ಲಿ ಪರಿಪೂರ್ಣ ಸೂಚನಾ ಸಮೂಹ, ಬೇರೆ ಬೇರೆ ರೆಜಿಸ್ಟರ್ ಫೈಲ್‌ಗಳು ಮತ್ತು ಸ್ವತಂತ್ರವಾಗಿ ಕಾರ್ಯನಿರ್ವಹಿಸಬಲ್ಲ ಯಂತ್ರಾಂಶಗಳನ್ನು ಹೊಂದಿದೆ. NEON 8-, 16-, 32 ಮತ್ತು 64-ಬಿಟ್ ಇಂಟಿಜರ್ ಮತ್ತು ಸಿಂಗಲ್-ಪ್ರಿಸಿಷನ್ (32-ಬಿಟ್) ಪ್ಲೋಟಿಂಗ್ ಪಾಯಿಂಟ್ ಡಾಟಾ ಮತ್ತು ಆಡಿಯೋ ಮತ್ತು ವಿಡಿಯೋ ಸಂಸ್ಕರಣ ಮಾಡಲು ಜೊತೆಯಲ್ಲಿ ಗ್ರಾಫಿಕ್ಸ್ ಮತ್ತು ಗೇಮಿಂಗ್ ಪ್ರೊಸೆಸಿಂಗ್ ಗಳಿಗೆ SIMD ಆಪರೇಷನ್‌ಗಳಿಗೆ ಬೆಂಬಲನೀಡುತ್ತದೆ. NEONನಲ್ಲಿ SIMD ಏಕಕಾಲಕ್ಕೆ 16 ಆಪರೇಷನ್‌ಗಳಿಗೆ ಬೆಂಬಲ ನೀಡುತ್ತದೆ.

VFP (ವೆಕ್ಟಾರ್ ಫ್ಲೋಟಿಂಗ್ ಪಾಯಿಂಟ್) ತಂತ್ರಜ್ಞಾನವು, ARM ವಿನ್ಯಾಸಕ್ಕೆ ವಿಸ್ತಾರಕ ಕೊಪ್ರೊಸೆಸರ್(ಸಹಸಂಸ್ಕಾರಕ) ಅನ್ನು ಒದಗಿಸುತ್ತದೆ. ಇದು, ಸಂಪೂರ್ಣವಾಗಿ ಬೈನರಿ ಪ್ಲೋಟಿಂಗ್-ಪಾಯಿಂಟ್ ಆರ್ತಿಮೆಟಿಕ್‌ಗೆ ANSI/IEEE Std 754-1985 ಸ್ಟಾಂಡರ್ಡ್ ಎನ್ನುವ ಮಾನದಂಡಕ್ಕೆ ಸರಿಹೊಂದುವ ಸಿಂಗಲ್ ಪ್ರಿಸಿಷನ್ ಮತ್ತು ಡಬಲ್-ಪ್ರಿಸಿಷನ್ ಪ್ಲೋಟಿಂಗ್ ಪಾಯಿಂಟ್ ಕಾಂಪ್ಯೂಟೇಷನ್ ಗಳನ್ನು, ಕಡಿಮೆ ವೆಚ್ಚದಲ್ಲಿ ಒದಗಿಸುತ್ತದೆ. PDAs, ಸ್ಮಾರ್ಟ್‌ಫೋನ್, ಧ್ವನಿಗಳನ್ನು ಸಂಕುಚಿತ ಮತ್ತು ವಿಸ್ತಾರ ಮಾಡುವ ಸಾಧನ, ತ್ರೀ-ಡೈಮೆನ್‌ಷನಲ್ ಗ್ರಾಫಿಕ್ಸ್ ಮತ್ತು ಡಿಜಿಟಲ್ ಆಡೀಯೊ, ಪ್ರಿಂಟರ್, ಸೆಟ್‌-ಟಾಪ್ ಬಾಕ್ಸ್, ಮತ್ತು ಅಟೋಮೇಟಿವ್ ಅಪ್ಲಿಕೇಷನ್‌ಗಳಂತಹ ಅನೇಕ ವೈವಿಧ್ಯಮಯ ಸಾಧನಗಳಿಗೆ ಸರಿಹೊಂದುವಂತಹ ಪ್ಲೋಟಿಂಗ್-ಪಾಯಿಂಟ್ ಕಾಂಪ್ಯೂಟೇಷನ್‌ಗಳನ್ನು VFP ಒದಗಿಸುತ್ತದೆ. VFP ವಿನ್ಯಾಸ ಚಿಕ್ಕ ವೆಕ್ಟಾರ್ ಸೂಚನೆಗಳ ಅನುಷ್ಠಾನವನ್ನು ಕೂಡ ಬೆಂಬಲಿಸುತ್ತದೆ. ಆದರೆ ಇವುಗಳು ಪ್ರತಿ ವೆಕ್ಟಾರ್ ಅಂಶದ ಒಂದಾದಮೇಲೆ ಒಂದರ ಹಾಗೆ ಆಪರೇಟ್ ಮಾಡುತ್ತದೆ. ಹೀಗಾಗಿ ಇದು ನಿಜವಾದ SIMD (ಸಿಂಗಲ್ ಇನ್‌ಸ್ಟ್ರಕ್ಷನ್ ಮಲ್ಟಿಪಲ್ ಡಾಟಾ) ಪ್ಯಾರಾಲೆಲ್ಲಿಸಂ ಗಳ ಕಾರ್ಯಕ್ಷಮತೆಯನ್ನು ತೋರಿಸುವುದಿಲ್ಲ.

ಈ ಮೋಡ್ ಅನ್ನು ಗ್ರಾಪಿಕ್ಸ್ ಮತ್ತು ಸಿಗ್ನಲ್ ಸಂಸ್ಕಾರಕ ಅಪ್ಲಿಕೇಷನ್‌ಗಳ್ಲಿ ಈಗಲೂ ಉಪಯೋಗಿಸಬಹುದು. ಆದರೆ. ಇದು ಕೋಡ್ ಗಾತ್ರದ ಪ್ರಮಾಣ, ಹಾಗು ಸೂಚನೆಯ ಫೆಚ್ ಮತ್ತು ಡಿಕೋಡ್ ಒವರ್‌ಹೆಡ್‌ ಅನ್ನು ಕಡಿಮೆ ಮಾಡುತ್ತದೆ.  

ARM-ಅಧಾರಿತ ಪ್ರೊಸೆಸರ್‌ಗಳಲ್ಲಿ ಸಿಗುವ ಇತರ ಫ್ಲೋಟಿಂಗ್ ಪಾಯಿಂಟ್ ಮತ್ತು SIMD ಕೊಪ್ರೊಸೆಸರ್‌ಗಳೆಂದರೆ FPA, FPE, iwMMXt. ಇವುಗಳು VFP ರೀತಿಯಲ್ಲಿ ಕೆಲಸ ಮಾಡಬಲ್ಲವಾದರೂ ಕೂಡ, ಅವುಗಳೊಂದಿಗೆ ಅಪ್‌ಕೋಡ್-ಕಾಂಪಿಟಿಬಲ್ ಆಗಿರುವುದಿಲ್ಲ.

ಸೆಕ್ಯೂರಿಟಿ ಎಕ್ಸೆಟೆನ್ಷನ್ಸ್ (ಟ್ರಸ್ಟ್‌ಜೋನ್‌ )

[ಬದಲಾಯಿಸಿ]

ಟ್ರಸ್ಟ್‌ಜೋನ್‌ ‌ ಟೆಕ್ನಾಲಜಿಯೆಂದು ಮಾರಾಟಮಾಡಲಾಗುವ ಸೆಕ್ಯೂರಿಟಿ ಎಕ್ಸೆಟೆನ್ಷನ್ಸ್ ಗಳು, ARMv6KZ ಗಳಲ್ಲಿ ಮತ್ತು ಆನಂತರದ ಅಪ್ಲಿಕೇಷನ್ ಪ್ರೊಫೈಲ್ ಆರ್ಕಿಟೆಕ್ಚರ್‌ಗಳಲ್ಲಿ (ವಿನ್ಯಾಸ) ಕಂಡುಬರುತ್ತದೆ. ಇದು ಹೆಚ್ಚುವರಿಯಾದ ಸೆಕ್ಯೂರಿಟಿಗೆಂದೆ ಮೀಸಲಾದ ಕೋರ್ SoC ಗೆ ಪರ್ಯಾಯವಾಗಿ ಸೆಕ್ಯೂರಿಟಿಯನ್ನು ಕಡಿಮೆ ವೆಚ್ಚದಲ್ಲಿ ಒದಗಿಸುತ್ತದೆ. ಇದು ಎರಡು ವರ್ಟ್ಯುಅಲ್ ಪ್ರೊಸೆಸರ್‌ಗಳನ್ನು ಹಾರ್ಡ್‌ವೇರ್ ಅಧಾರಿತ ಆಕ್ಸೆಸ್ ಕಂಟ್ರೋಲ್ ಮೂಲಕ ಸೆಕ್ಯೂರಿ ಒದಗಿಸುತ್ತದೆ. ಇದು ಅಪ್ಲಿಕೇಷನ್ ಕೋರ್‌ಗೆ ಎರಡು ಸ್ಟೇಟ್‌ಗಳ ಮಧ್ಯೆ ಅದಲುಬದಲು (ಸ್ವಿಚ್) ಮಾಡಲು ಸಾಧ್ಯವಾಗುತ್ತದೆ. ಈ ಸ್ಟೇಟ್‌ಗಳನ್ನು ವರ್ಲ್ಡ್ ಎಂದು ಕರೆಯಲಾಗುತ್ತದೆ. (ಕೇಪಬಿಲಿಟಿ ಡೋಮೈನ್‌ಗಳ ಬೇರೆ ಹೆಸರುಗಳಿಂದಾಗಬಹುದಾದ ಗೊಂದಲ ನಿವಾರಿಸಲು). ಇದನ್ನು ಹೆಚ್ಚು ಟ್ರಸ್ಟೆಡ್ ವರ್ಲ್ಡ್ ಗಳಿಂದ ಮಾಹಿತಿಯು ಕಡಿಮೆ ಟ್ರಸ್ಟೆಡ್ ವರ್ಲ್ಡ್ ಗೆ ಸೋರಿಕೆಯಾಗುವುದನ್ನು ತಪ್ಪಿಸಲು ಬಳಸಲಾಗುತ್ತದೆ. ಈ ವರ್ಲ್ಡ್ ಸ್ವಿಚ್ ಸಾಮಾನ್ಯವಾಗಿ ಪ್ರೊಸೆಸರ್ ನ ಇತರ ಎಲ್ಲಾ ಸಾಮರ್ಥಕ್ಕಿಂತ ಸ್ವತಂತ್ರವಾಗಿದೆ. ಹೀಗಾಗಿ, ಪ್ರತಿ ವರ್ಲ್ಡ್ ಒಂದೇ ಕೋರ್ ಬಳಸಿಕೊಂಡೂ ಕೂಡ ಪ್ರತ್ಯೇಕವಾಗಿ ಸ್ವತಂತ್ರ ಕೆಲಸ ನಿರ್ವಹಿಸಬಹುದು. ಮೆಮೊರಿ ಮತ್ತು ಬಾಹ್ಯೋಪಕರಣಗಳಿಗೆ(ಪೆರಿಫೆರಲ್ಸ್) ಕೋರ್‌ನ ಯಾವ ವರ್ಲ್ಡ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎನ್ನುವ ಮಾಹಿತಿ ನೀಡಲಾಗುತ್ತದೆ. ಈ ಮಾಹಿತಿಯನ್ನು ಬಳಸಿಕೊಂಡು ಡಿವೈಸ್‌ಗಳ ಕೋಡ್‌ಗಳಿಗೆ ಮತ್ತು ಸೀಕ್ರೆಟ್ಸ್‌ಗಳಿಗೆ ಆಕ್ಸೆಸ್ ಕಂಟ್ರೋಲ್ ನೀಡಲಾಗುತ್ತದೆ. ಟ್ರಸ್ಟ್‌ಜೋನ್‌ ಟೆಕ್ನಾಲಜಿಯ ವಿಶಿಷ್ಟ (ಅಳವಡಿಕೆ)ಅಪ್ಲಿಕೇಷನ್‌ಗಳೆಂದರೆ, ಕಡಿಮೆ ಟ್ರಸ್ಟೆಡ್ ವರ್ಲ್ಡ್ ನಲ್ಲಿ ಆಪರೇಟಿಂಗ್ ಸಿಸ್ಟಂ ಅನ್ನು ಬಳಸುವುದು. ಹೆಚ್ಚು ಟ್ರಸ್ಟೆಡ್ ವರ್ಲ್ಡ್ ನಲ್ಲಿ ಚಿಕ್ಕ ಸೆಕ್ಯೂರಿಟಿ ವಿಶಿಷ್ಟ ಕೋಡ್ ಬಳಕೆ ಮಾಡಬಹುದು(ಟ್ರಸ್ಟ್‌ಜೋನ್‌ ಸಾಪ್ಟ್‌ವೇರ್ ಎಂದು ಕರೆಯಲಾಗುವ, ಇದು ಟ್ರಸ್ಟೆಡ್ ಲಾಜಿಕ್[ಶಾಶ್ವತವಾಗಿ ಮಡಿದ ಕೊಂಡಿ] ಸಂಸ್ಥೆಯಿಂದ ಅಭಿವೃದ್ದಿ ಪಡಿಸಲಾದ Trusted Foundations(TM) Software ನ ಪ್ರಶಸ್ತವಾದ ಆವೃತ್ತಿ). ಇದರಿಂದಾಗಿ, ARM ಆಧಾರಿತ ಡಿವೈಸ್‌ಗಳಲ್ಲಿ(ಸಾಧನ) ಮೀಡಿಯಾದ ಬಳಕೆಯನ್ನು ನಿಯಂತ್ರಿಸಲು ಹೆಚ್ಚು ಬಿಗಿಯಾದ ಡಿಜಿಟಲ್ ರೈಟ್ಸ್ ಮ್ಯಾನೇಜ್‌ಮೆಂಟ್ ಅನ್ನು ಸಾಧಿಸಬಹುದು.[೪೨] ಇದಲ್ಲದೆ, ಡಿವೈಸ್(ಸಾಧನವನ್ನು) ಅನ್ನು ಪೂರ್ವಾನುಮತಿಯಿಲ್ಲದೆ ಬಳಸುವುದನ್ನು ತಪ್ಪಿಸಬಹುದು. ಆದರೆ ವಾಸ್ತವದಲ್ಲಿ, ಟ್ರಸ್ಟ್‌ಜೋನ್‌ ಅಳವಡಿಕೆಯ ವಿವರಗಳು ಸ್ವಾಮ್ಯಕ್ಕೆ ಒಳಪಟ್ಟಿವೆ. (ಪ್ರೊಪ್ರೈಯಟರಿ). ಈ ವಿವರಗಳು ಬಹಿರಂಗವಾಗಿಲ್ಲದ ಕಾರಣ, ಇದು ಥ್ರೇಟ್ ಮಾಡಲ್‌ಗೆ ಯಾವ ರೀತಿಯ, ಯಾವ ಹಂತದ ಸೆಕ್ಯೂರಿಟಿ ಕೊಡುತ್ತದೆ, ಎನ್ನುವುದು ಅಸ್ಪಷ್ಟವಾಗಿದೆ.

ನೋ-ಎಕ್ಸಿಕ್ಯೂಟ್ ಪೇಜ್ ಪ್ರೊಟೆಕ್ಷನ್

[ಬದಲಾಯಿಸಿ]

ARMv6ಗಳವರೆಗೆ, ARM ವಿನ್ಯಾಸ(ಆರ್ಕಿಟೆಕ್ಚರ್) ನೋ-ಎಕ್ಸಿಕ್ಯೂಟ್ ಪೇಜ್ ಪ್ರೊಟೆಕ್ಷನ್ ಅನ್ನು ಬೆಂಬಲಿಸುತ್ತದೆ. ಇದನ್ನು XN ಎಂದು ಕರೆಯುತ್ತಾರೆ, ಇದರ ವಿಸ್ತೃತ ರೂಪ eXecute Never (ಎಕ್ಸಿಕ್ಯೂಟ್ ನೆವರ್).[೪೩]

ARM ಪರವಾನಿಗೆ (ಲೈಸೆನ್ಸೀಸ್)

[ಬದಲಾಯಿಸಿ]

ARM ಲಿಮಿಟೆಡ್ ಅದರ ARM ವಿನ್ಯಾಸಗಳನ್ನು ಆಧರಿಸಿ CPUಗಳನ್ನು ತಯಾರಿಸಿ ಮಾರಾಟ ಮಾಡುವುದಿಲ್ಲ; ಬದಲಾಗಿ ಅದು ಅಗತ್ಯವಿರುವ ಗ್ರಾಹಕರಿಗೆ ಪ್ರೊಸೆಸರ್ ಅರ್ಕಿಟೆಕ್ಚರ್ ವಿನ್ಯಾಸದ ಪರವಾನಿಗೆಯನ್ನು ನೀಡುತ್ತದೆ. ARM ಹಲವಾರು ರೀತಿಯ ಪರವಾನಿಗೆಯನ್ನು ನೀಡುತ್ತದೆ. ಈ ಪರವಾನಿಗೆಯು ಬೆಲೆ ಮತ್ತು ಉಪಯುಕ್ತತೆಯಲ್ಲಿ ವೈವಿಧ್ಯಮಯವಾಗಿರುತ್ತದೆ. ಪರವಾನಿಗೆ ಪಡೆದ ಎಲ್ಲರಿಗೂ, ARM ಸಂಸ್ಥೆ, ARM ಕೋರಿನ ಯಂತ್ರಾಂಶದ ವಿವರಣೆಯೊಂದಿಗೆ, ಪೂರ್ಣ ತಂತ್ರಾಂಶ ಅಭಿವೃದ್ಧಿಯ ಸಾಧನಗಳು (ಕಂಪೈಲರ್, ಡಿಬಗ್ಗರ್,SDK(ಎಸ್.ಡಿ.ಕೆ) ) ಹಾಗು ಅವರು ತಯಾರಿಸುವ ARM CPUವಿರುವ ಸಿಲಿಕಾನ್ ಅನ್ನು ಮಾರಾಟ ಮಾಡುವ ಹಕ್ಕುಗಳನ್ನು ನೀಡುತ್ತದೆ. ಫ್ಯಾಬ್‌ಲೆಸ್ ಪರವಾನಿಗೆ ಹೊಂದಿರುವವರು, ತಯಾರಿಸಲು ಸಿದ್ಧವಿರುವ, ಪ್ರಮಾಣಿಕರಣಗೊಂಡ IP ಕೋರ್ ಅನ್ನು ಪಡೆಯಲು ಇಚ್ಚೆಪಡುತ್ತಾರೆ. ಈ ಗ್ರಾಹಕರಿಗೆ, ಅವರಿಗೆ ಬೇಕಾದ ARM ಕೋರಿನ ಗೇಟ್ ನೆಟ್ಲಿಸ್ಟ್ ವಿವರಣೆಯೊಂದಿಗೆ, ಸಿಮುಲೆಷನ್ ಮಾದರಿಯ ತಿರುಳು,ಹಾಗು ಇಂಟಿಗ್ರೇಷನ್ ಮತ್ತು ವೆರಿಪಿಕೆಷನ್ ಅನ್ನು ರಚಿಸಲು ಸಹಾಯವಾಗುವ ಟೆಸ್ಟ್ ಪ್ರೊಗ್ರಾಂಗಳನ್ನು ನೀಡುತ್ತದೆ. ಆದರೆ ಇದಕ್ಕಿಂತ ಹೆಚ್ಚನ್ನು ಅಪೇಕ್ಷಿಸುವ ಇಂಟಿಗ್ರೇಟೆಡ್ ಡಿವೈಸ್ ಮ್ಯಾನುಫಾಕ್ಚರ್ (IDM) ಮತ್ತು ಫೌಂಡ್ರಿ ಆಪರೇಟರ್ಗಳನ್ನು ಒಳಗೊಂಡ ಗ್ರಾಹಕರು, ಪ್ರೊಸೆಸರ್ IP ಅನ್ನು ಸಿಂಥಸೈಸಬಲ್ RTL ಮತ್ತು ವೆರಿಲೋಗ್ ರೂಪದಲ್ಲಿ ಪಡೆಯಬಯಸುತ್ತಾರೆ. ಗ್ರಾಹಕರು ಹತ್ತಿರ ಸಿಂಥಸೈಸಬಲ್ RTL ಇದ್ದಾಗ, ಅವರುಗಳು ವಿನ್ಯಾಸ ಹಂತದಲ್ಲಿ ಬದಲಾವಣೆ ಮತ್ತು ವಿಸ್ತರಣೆಯ ಮೂಲಕ ಅವರಿಗೆ ಅಗತ್ಯವಿರುವ ಕೆಲಸಕ್ಕೆ ಹೆಚ್ಚು ಉಪಯೋಗವಾಗುವ ಹಾಗೆ ರೂಪಿಸಿಕೊಳ್ಳಬಹುದು. ಇದರಿಂದ ತಯಾರಕರಿಗೆ, ವಿಶಿಷ್ಟವಾದ ವಿನ್ಯಾಸದ ಗುರಿಗಳನ್ನು ತಲುಪಲು ಸಾಧ್ಯವಾಗುತ್ತದೆ. ಈ ಗುರಿಯನ್ನು, ಬದಲಾಯಿಸಲಾಗದ ನೆಟ್ ಲಿಸ್ಟ್ ನೊಂದಿಗೆ ಸಾಧ್ಯವಿಲ್ಲ. (ಹೈ ಕ್ಲಾಕ್ ಸ್ಪೀಡ್, ಅತಿ ಕಡಿಮೆ ವಿದ್ಯುತ್ ಬಳಕೆ, ಇನ್ಸ್ಟ್ರಕ್ಷ್ನ ಸೆಟ್ ವಿಸ್ತರಣೆಗಳು, ಇತ್ಯಾದಿ.). ARM ಸಂಸ್ಥೆ, ಪರವಾನಿಗೆ ಹೊಂದಿರುವವರಿಗೆ ARM ವಿನ್ಯಾಸವನ್ನು ಪುನಃ ಮಾರಲು ಅವಕಾಶ ನೀಡುವುದಿಲ್ಲ, ಆದರೆ ಪರವಾನಿಗೆದಾರರು ಅವರು ತಯಾರಿಸಿದ ಉತ್ಪನ್ನಗಳನ್ನು ಧಾರಾಳವಾಗಿ ಮಾರಬಹುದು (ಚಿಪ್ ಡಿವೈಸ್, ಎವಾಲುಯೇಷನ್ ಬೋರ್ಡ್ಸ್, ಕಂಪ್ಲೀಟ್ ಸಿಸ್ಟಂಸ್, ಇತ್ಯಾದಿ.). ಮರ್ಚೆಂಟ್ ಫೌಂಡ್ರಿಗಳಿಗೆ ಸ್ವಲ್ಪ ವಿಶೇಷ ನಿಯಮವುಂಟು. ಅವರುಗಳು ARM ಕೋರ್‌ಗಳಿರುವ ಅಂತಿಮ ಉತ್ಪನ್ನ ಸಿಲಿಕೋನ್ ಅನ್ನು ಮಾರಾಟ ಮಾಡುವುದರ ಜೊತೆಗೆ, ಇತರ ಗ್ರಾಹಕರಿಗೆ ARM ಕೋರ್‌ಗಳನ್ನು ಪುನಃತಯಾರಿಸಿ ಮಾರುವ ಹಕ್ಕನ್ನು ಹೊಂದಿದ್ದಾರೆ. ಇತರ IP ಮಾರಾಟಗಾರರ ಹಾಗೆಯೇ, ARM ಅದರ IP ಬೆಲೆಯನ್ನು ನಿರೀಕ್ಷಿತ ಮೌಲ್ಯದ ಆಧಾರದ ಮೇಲೆ ನಿರ್ಧರಿಸುತ್ತದೆ. ವಿನ್ಯಾಸದ ದೃಷ್ಟಿಯಿಂದ, ಕಡಿಮೆ ಸಕ್ಷಮವಾಗಿರುವ ARM ಕೋರ್‌ಗಳ ಪರವಾನಿಗೆಯ ಬೆಲೆ, ಹೆಚ್ಚು ಸಕ್ಷಮವಾಗಿರುವ ಕೋರ್‌ಗಳ ಪರವಾನಿಗೆ ಬೆಲೆಗಿಂತ ಕಡಿಮೆಯಿರುತ್ತದೆ. ಆದರೆ, ಸಿಲಿಕಾನ್ ಇಂಪ್ಲಿಟೇಷನ್ ಪ್ರಕಾರ, ಸಿಂಥಸೈಸ್ ಮಾಡಲು ಯೋಗ್ಯವಾದ ಕೋರ್, ಹಾರ್ಡ್ ಮ್ಯಾಕ್ರೊ ಕೋರ್‌ಗಿಂತ ಹೆಚ್ಚು ಬೆಲೆ. ಬೆಲೆಯ ವಿಷಯ ಇನ್ನಷ್ಟು ಜಟಿಲಮಾಡಲು, ARM ಪರವಾನಿಗೆ ಹೊಂದಿರುವ ಮೆರ್ಚೆಂಟ್ ಫೌಂಡ್ರಿಗಳು(ಸಾಮ್ಸಂಗ, ಫುಜಿಸ್ಟು ಯಂತಹ), ಅವರ ಫ್ಯಾಬ್ ಗ್ರಾಹಕರಿಗೆ ಪರವಾನಿಗೆಯನ್ನು ಕಡಿಮೆ ಬೆಲೆಗೆ ನೀಡಬಹುದು. ಫೌಂಡ್ರಿಗಳ ಇನ್-ಹೌಸ್ ನಿರ್ಮಾಣ ಸೇವೆಗಳ ಮೂಲಕ ARM ಕೋರ್‌ಗಳನ್ನು ಪಡೆಯುವ ಸಲುವಾಗಿ, ಅದಕ್ಕೆ ಬದಲಾಗಿ ARM ಪರವಾನಿಗೆ ಪಡೆಯಲು ನೀಡಿದ ಶುಲ್ಕವನ್ನು ಕಡಿಮೆಮಾಡಬಹುದು ಅಥವಾ ಪೂರ್ತಿ ಮನ್ನಾ ಮಾಡಬಹುದು. ಸೆಮಿಕಂಡಕ್ಟರ್‌ಗೆಂದೆ ಮೀಸಲಾದ (ಡೇಡಿಕೇಟೆಡ್) ಫೌಂಡ್ರಿಗಳಿಗೆ( TSMC ಮತ್ತು UMC ತರಹ) ಹೋಲಿಸಿದಾಗ ಇನ್-ಹೌಸ್ ರಚನೆ ಮಾಡುವ ಸೇವೆಯೊದಗಿಸದ ಫುಜಿತ್ಸು ಫುಜಿಸ್ಟು/ಸಾಮ್ಸಂಗ್ ಪ್ರತಿ ತಯಾರಾದ ವೇಪರ್‌ಗೆ 2 ರಿಂದ 3 ಪಟ್ಟು ಹೆಚ್ಚಿನ ಬೆಲೆ ನಿಗದಿಮಾಡುತ್ತಾರೆ. ಕಡಿಮೆ ಮತ್ತು ಮಧ್ಯಮ ಗಾತ್ರದ ಉಪಯೋಗಗಳಿಗೆ, ಡಿಸೈನ್ ಸರ್ವಿಸ್ ಫೌಂಡ್ರಿಗಳು ಒಟ್ಟಾರೆ ಅತಿ ಕಡಿಮೆ ಬೆಲೆ ನೀಡುತ್ತಾರೆ (ಪರವಾನಿಗೆ ಶುಲ್ಕದ ಮೇಲೆ ರಿಯಾಯಿತು ನೀಡುವುದರ ಮೂಲಕ). ಅಧಿಕ ಪ್ರಮಾಣದಲ್ಲಿ ಉತ್ಪಾದನೆಯಾಗುವ ಭಾಗಗಳಿಗೆ, ದೀರ್ಘಾವಧಿಯಲ್ಲಿ ವೆಚ್ಚವನ್ನು ಕಡಿಮೆ ಮಾಡಲು ಕಡಿಮೆ ವೇಪರ್‌ನ ಬೆಲೆಯು ARM's NRE(ನಾನ್-ರಿಕರಿಂಗ್ ಇಂಜಿನಿಯರಿಂಗ್) ವೆಚ್ಚಗಳ ಪ್ರಭಾವವನ್ನು ಕಡಿಮೆಮಾಡುತ್ತದೆ, ಹೀಗಾಗಿ ಡೆಡಿಕೇಟೆಡ್ ಫೌಂಡ್ರಿಯನ್ನು ಸೂಕ್ತ ಆಯ್ಕೆಯನ್ನಾಗಿಸುತ್ತದೆ. ಹಲವಾರು ಸೆಮಿಕಂಡಕ್ಟರ್ ಅಥವಾ IC ರಚಿಸುವ ಸಂಸ್ಥೆಗಳು ARM ಪರವಾನಿಗೆಯನ್ನು ಹೊಂದಿದ್ದಾರೆ. ಈ ಕೆಳಕಂಡ ಕಂಪನಿಗಳು ಒಂದಲ್ಲ ಒಂದು ರೂಪದ ARM ಪರವಾನಿಗೆಯನ್ನು ಹೊಂದಿದ್ದಾರೆ: ಅನಲಾಗ್ ಡಿವೈಸಸ್, ಅಟ್ಮೆಲ್ , ಬ್ರಾಡ್‌ಕಾಮ್, ಸಿರಿಸ್ ಲಾಜಿಕ್ , ಎನರ್ಜಿ ಮೈಕ್ರೊ, ಫಾರಡೇ ಟೆಕ್ನಾಲಜಿ, ಫ್ರೀಸ್ಕೇಲ್ , ಫ್ಯೂಜಿಸ್ಟು, ಇಂಟೆಲ್ (ಡಿಜಿಟಲ್ ಎಕ್ವಿಪ್‌ಮೆಂಟ್ ಕಾರ್ಪೊರೇಷನ್ ಯೊಂದಿಗಿನ ಇತ್ಯರ್ಥದೊಂದಿಗೆ), IBM(ಐಬಿಎಂ) , ಇನ್ಪೀನಿಯಾನ್ ಟೆಕ್ನಾಲಜೀಸ್, ನಿನ್ಟೆಂಡೋ o, NXP ಸೆಮಿಕಂಡಕ್ಟರ್ಸ್, ಒಕಿ , ಕ್ವಾಲ್‌ಕಾಮ್ , ಸಾಮ್‌ಸಂಗ್ , ಶಾರ್ಪ್ , STಮೈಕ್ರೊಎಲೆಕ್ಟ್ರಾನಿಕ್ಸ್ , ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್ ಮತ್ತು VLSI(ವಿ.ಎಲ್.ಎಸ್.ಐ). ARM ಪರವಾನಿಗೆ ನಿಯಮಗಳನ್ನು NDAಯಡಿಯಲ್ಲಿ ಸೇರಿಸಲಾಗಿದೆ. ARM ಅನ್ನು, IP ಉದ್ಯಮದಲ್ಲಿ ಅತಿ ಹೆಚ್ಚು ಬೆಲೆಯ CPU ಕೋರ್‌ಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು] ARM ಅದರ ಪರವಾನಿಗೆಯನ್ನು 200ಕ್ಕೂ ಹೆಚ್ಚು ಸೆಮಿಕಂಡಕ್ಟರ್ ತಯಾರಕರು ಪಡೆದಿದ್ಧಾರೆ. ಈ ಅಂಶ, ಮೊಬೈಲ್ ಕಂಪ್ಯೂಟರ್‌ಗಳಲ್ಲಿ ARM ಅಥವಾ ಇಂಟೆಲ್ ವಿನ್ಯಾಸಗಳಲ್ಲಿ ಯಾವ ಆರ್ಕಿಟೆಕ್ಚರ್ ಬಳಸಬೇಕು ಎಂದು ಈಗ ಪ್ರಸ್ತುತ ನಡೆಯುತ್ತಿರುವ ವಾದದಲ್ಲಿ ತನಗೆ ಲಾಭದಾಯಕವಾಗ ಬಹುದು ಎನ್ನುವುದು ARMನ ಲೆಕ್ಕಚಾರ.[ಸೂಕ್ತ ಉಲ್ಲೇಖನ ಬೇಕು]

ಪರವಾನಿಗೆಗಳ ಅಂದಾಜು ವೆಚ್ಚ

[ಬದಲಾಯಿಸಿ]

ARMಯ 2006 ವಾರ್ಷಿಕ ವರದಿ ಮತ್ತು ಲೆಕ್ಕಪತ್ರಗಳ ಪ್ರಕಾರ 2.45 ದಶಲಕ್ಷ ಘಟಕಗಳಿಗೆ ಪರವಾನಿಗೆಯನ್ನು ನೀಡಿದ್ದರಿಂದ ಒಟ್ಟಾರೆ £88.7 ದಶಲಕ್ಷ GBP ($164.1 ದಶಲಕ್ಷ USD), ರಾಯಧನ(ರಾಯಲ್ಟಿ) ವರದಿ ಮಾಡುತ್ತದೆ.[೪೪] ಇದರಂತೆ, ಪ್ರತಿ ಪರವಾನಿಗೆಯ ಮೌಲ್ಯ ಸುಮಾರು £0.036 GBP ($0.067 USD) ಎಂದಾಯಿತು. ಆದರೆ, ಇದು ಹೊಸ ಅತಿ ಹೆಚ್ಚು ಬೆಲೆಬಾಳುವ ಕೋರ್‌ಗಳನ್ನು ಹಾಗು ಹಳೆಯ ಕಡಿಮೆ ಮೌಲ್ಯದ ಕೋರ್‌ಗಳನ್ನು ಒಳಗೊಂಡ ಎಲ್ಲಾ ಕೋರ್‌ಗಳ ಸರಾಸರಿ ಮೌಲ್ಯ. ಅದೆ ವರ್ಷ, ARMಯ ಪ್ರೊಸೆಸರ್ ಕೋರ್‌ಗಳ ಪರವಾನಿಗೆಯಿಂದ ಗಳಿಸಿದ ಅದಾಯ ಸುಮಾರು £65.2 ದಶಲಕ್ಷ GBP ($119.5 ದಶಲಕ್ಷ).[೪೫] ಆ ವರ್ಷ ಪ್ರೊಸೆಸರ್ ಪರವಾನಿಗೆ ಪಡೆಯಲು 65 ಗ್ರಾಹಕರು ಸಹಿಮಾಡಿದರು.[೪೬] ಇದರ ಪ್ರಕಾರ ಪ್ರತಿ ಪರವಾನಿಗೆಯ ಮೌಲ್ಯ ಸುಮಾರು £1 ದಶಲಕ್ಷ GBP($1.84 ದಶಲಕ್ಷ USD) ಆಗುತ್ತದೆ. ಮತ್ತೆ, ಈ ಸರಾಸರಿ ಮೊತ್ತವು ಹೊಸ ಮತ್ತು ಹಳೆಯ ಕೋರ್‌ಗಳನ್ನು ಒಳಗೊಂಡಿದೆ. ARMರ 2006ರಲ್ಲಿ ಪ್ರೊಸೆಸರ್ ಕೋರ್‌‌ಗಳಿಂದ ಗಳಿಸಿದ ಅದಾಯದ ಪೈಕಿ ರಾಯಲ್ಟಿಯಿಂದ 60%, ಹಾಗು ಪರವಾನಿಗೆಗಳಿಂದ 40%ಗಳಿಸಿತು. ARM ಪ್ರತಿ ಯುನಿಟ್‌ನಿಂದ ರಾಯಧನ(ರಾಯಲ್ಟಿ) ಮತ್ತು ಪರವಾನಿಗೆ ಎರಡನ್ನೂ ಸೇರಿ ಸುಮಾರು £0.06 GBP ($0.11 USD)ಗಳಿಸುತ್ತದೆ. ಅದರೆ, ಹೊಸ ತಂತ್ರಜ್ಞಾನಗಳು ಸಾಸಾಮಾನ್ಯವಾಗಿ ಒನ್-ಆಪ್ ಪರವಾನಿಗೆಯನ್ನು ಪಡೆಯುತ್ತವೆ, ಈಗಾಗಲೆ ಬಳಕೆಯಲ್ಲಿರುವ ಉತ್ಪನ್ನಗಳು ಯೂನಿಟ್ ವ್ಯಾಪಾರ (ಮತ್ತು ಅದರ ರಾಯಲ್ಟಿ)ದಲ್ಲಿ ಪ್ರಾಬಲ್ಯ ತೋರುತ್ತವೆ. ಹೀಗಾಗಿ, ಈ ಮೇಲಿನ ಅಂಕಿಅಂಶಗಳು ಯಾವುದೇ ಒಂದು ARM ಉತ್ಪನ್ನದ ನಿಜವಾದ ಬೆಲೆಯನ್ನು ಸೂಚಿಸುವುದಿಲ್ಲ.

Unix-ಮಾದರಿಗಳಲ್ಲಿ

[ಬದಲಾಯಿಸಿ]

ARM ಆರ್ಕಿಟೆಕ್ಚರ್ (ವಿನ್ಯಾಸ) ಅನ್ನು Unix ಮತ್ತು Unix ಮಾದರಿಯ ಈ ಅಪರೇಟಿಂಗ್ ಸಿಸ್ಟಂಗಳು ಬೆಂಬಲ ನೀಡುತ್ತವೆ: GNU/Linux, BSD, QNX, ಬೆಲ್ ಲ್ಯಾಬ್ಸ್ ನ Plan 9 , Inferno, Solaris, iPhone OS, WebOS ಮತ್ತು Android.

ARM ಪ್ರೊಸೆಸರ್‌ಗಳನ್ನು ಬೆಂಬಲಿಸುವ GNU/Linux ಅವೃತ್ತಿಗಳು :

ARM ಪ್ರೊಸೆಸರ್‌ಗಳನ್ನು ಬೆಂಬಲಿಸುವ BSDಯ ಆವೃತ್ತಿಗಳು:

ಇವನ್ನೂ ಗಮನಿಸಿ

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
  1. ಮಾರ್ಕ್ ಹಾಚ್ಮಾನ್, ಬರೆದಿರುವ "ARM ಕೋರ್ಸ್ ಕ್ಲೈಮ್ಬ್ ಇನ್ಟು 3G ಟೆರಿಟರಿ " Archived 2011-06-07 ವೇಬ್ಯಾಕ್ ಮೆಷಿನ್ ನಲ್ಲಿ., 2002.
  2. ಜಿಮ್ ಟರ್ಲಿ, ಬರೆದಿರುವ "ದಿ ಟೂ ಪರ್ಸೆಂಟ್ ಸಲ್ಯೂಷನ್" Archived 2007-09-26 ವೇಬ್ಯಾಕ್ ಮೆಷಿನ್ ನಲ್ಲಿ. 2002.
  3. "ARMಡ್ ಫಾರ್ ದಿ ಲಿವಿಂಗ್ ರೂಮ್".
  4. "ಸಮ್ ಫ್ಯಾಕ್ಟ್ಸ್ ಅಬೌಟ್ ದಿ ಆಕ್ರಾನ್ RISC ಮಷೀನ್" ರೋಜರ್ ವಿಲ್ಸನ್ comp.arch ಗೆ ಪೋಸ್ಟ್ ಮಾಡಿರುವ ಲೇಖನ, ನವೆಂಬರ್ 2 1988, ಪಡೆದದ್ದು 25 ಮೇ 2007.
  5. ಪಾಟರ್‌ಸನ್, ಜೇಸನ್. ದಿ ಅಕ್ರಾನ್ ಆರ್ಕಿಮಿಡಿಸ್", ದಿ ಹಿಸ್ಟರಿ ಆಫ್ ಕಂಪ್ಯೂಟರ್ಸ್ ಡ್ಯುರಿಂಗ್ ಮೈ ಲೈಫ್ ಟೈಮ್ – ದಿ 1980's (ಪಡೆದದ್ದು 12 ಮಾರ್ಚಿ 2008)].
  6. "ARM ಕಾರ್ಪೋರೇಟ್ ಬ್ಯಾಕ್‌ಗ್ರೌಂಡರ್", ARM ಟೆಕ್ನಾಲಜಿ .
  7. ಟಾಮ್ ಕ್ರಾಸಿಟ್ ನ "ARMಡ್ ಫಾರ್ ದಿ ಲಿವಿಂಗ್ ರೂಮ್" 2006.
  8. "ARM ಅಚೀವ್ಸ್ 10 ಬಿಲಿಯನ್ ಪ್ರೊಸೆಸರ್ ಮೈಲ್‌ಸ್ಟೋನ್", ARM ಟೆಕ್ನಾಲಜಿ , 22 ಜನವರಿ 2008.
  9. ""ARM ನೆಟೆಬುಕ್ ಶಿಪ್ಸ್ ವಿತ್ ಡಿಟ್ಯಾಚಬಲ್ ಟ್ಯಾಬ್ಲೇಟ್"". Archived from the original on 2013-01-03. Retrieved 2010-06-02. ಲೇಖಕ: ಎರಿಕ್ ಬ್ರೌನ್ 2009
  10. "ARM810 – ಡಾನ್ಸಿಂಗ್ ಟು ದಿ ಬೀಟ್ ಆಫ್ ಎ ಡಿಪರೆಂಟ್ ಡ್ರಮ್" ARM ಹೋಲ್ಡಿಂಗ್ಸ್ ಹಾಟ್ ಚಿಪ್ಸ್ ನಲ್ಲಿ 1996-08-07 ರಂದು ಕೊಟ್ಟ ಪ್ರತ್ಯಾಕ್ಷಿಕೆ.
  11. ರೆಜಿಸ್ಟರ್, FCSE PID ರೆಜಿಸ್ಟರ್ ARM920T ಟೆಕ್ನಿಕಲ್ ರೆಪೆರೆನ್ಸ್ ಮ್ಯಾನುಯಲ್
  12. "Neo1973: GTA01Bv4 versus GTA02 comparison". Archived from the original on 2012-03-18. Retrieved 2007-11-15.
  13. "S3C2410". Retrieved 2010-01-13.
  14. "Rockbox Samsung SA58xxx series". Archived from the original on 2008-07-20. Retrieved 2008-02-22.
  15. "Rockbox Meizu M6 Port – Hardware Information". Archived from the original on 2008-05-12. Retrieved 2008-02-22.
  16. [೧]
  17. "STR9 – STR912 – STR912FW44 microcontroller – documents and files download page". Mcu.st.com. Retrieved 2009-04-18.
  18. ಸ್ಟಾರ್ಲೆಟ್.
  19. "Benchmarks – Albatross". Albatross-uav.org. 2005-06-18. Retrieved 2009-04-18.
  20. "ARM1136J(F)-S – ARM Processor". Arm.com. Retrieved 2009-04-18.
  21. "GoForce 6100". Nvidia.com. Retrieved 2009-04-18.
  22. "Samsung S3C6410 and S3C6430 Series ARM Proccessors". Samsung. Retrieved 2009-10-08., ಮತ್ತು ಕ್ವಾಲ್‌ಕಾಮ್ MSM7627, ಪಾಲ್ಮ್ ಪಿಕ್ಸಿ ಮತ್ತು ಮೋಟೋರೋಲಾ ಕಾಲಗರಿ/ಡಿವೊರ್ ರಲ್ಲಿ ಕಾಣಿಸುವ ಹಾಗೆ
  23. Merrit, Rick (2009-10-21). ""ARM stretches out with A5 core, graphics, FPGAs"". EE Times. Retrieved 2009-10-28.
  24. Clarke, Peter (2009-02-03). "ARM tips plans for Swift and Sparrow processor cores". EE Times. Retrieved 2009-04-18.
  25. Segan, Sascha (2009-04-09). "ARM's Multicore Chips Aim for Netbooks". PC Magazine. Retrieved 2009-04-18.
  26. Benz, Benjamin (2010-02-02). "Cortex Nachwuchs bei ARM". Heise.de. Retrieved 2010-05-03.
  27. Clarke, Peter (2009-02-23). "ARM preps tiny core for low-power microcontrollers". EE Times. Retrieved 2009-11-30.
  28. Walko, John (2009-03-23). "NXP first to demo ARM Cortex-M0 silicon". EE Times. Retrieved 2009-06-29.
  29. "ಆರ್ಕೈವ್ ನಕಲು". Archived from the original on 2011-07-16. Retrieved 2010-06-02.
  30. http://www.electronicsweekly.com/Articles/2009/06/10/46252/Cortex-m0-used-in-low-power-touch-controller.htm
  31. http://www.design-reuse.com/news/22137/arm-Cortex-m0-processor.html
  32. "ಆರ್ಕೈವ್ ನಕಲು". Archived from the original on 2020-01-22. Retrieved 2013-08-04.
  33. http://www10.edacafe.com/nbc/articles/view_article.php?articleid=752000
  34. "ARM ಎಕ್ಸೆಟೆಂಡ್ಸ್ ಕಾರ್ಟೆಕ್ಸ್ ಫ್ಯಾಮಿಲಿ ವಿತ್ ಫರ್ಸ್ಟ್ ಪ್ರೊಸೆಸರ್ ಆಪ್ಟಿಮೈಸ್ಡ್ ಫಾರ್ FPGA", ARM ಪತ್ರಿಕಾ ಪ್ರಕಟನೆ, ಮಾರ್ಚಿ 19, 2007. ಏಪ್ರಿಲ್ 11, 2007ರಲ್ಲಿ ಮರುಸಂಪಾದಿಸಲಾಗಿದೆ.
  35. "ARM ಕಾರ್ಟೆಕ್ಸ್-M1", ARM ಉತ್ಪನ್ನಗಳ ವೆಬ್‌ಸೈಟ್. ಏಪ್ರಿಲ್ 11, 2007ರಲ್ಲಿ ಮರುಸಂಪಾದಿಸಲಾಗಿದೆ.
  36. ARM ಎಕ್ಸೆಟೆಂಡ್ಸ್ ಕಾರ್ಟೆಕ್ಸ್ ಫ್ಯಾಮಿಲಿ ವಿತ್ ಫರ್ಸ್ಟ್ ಪ್ರೊಸೆಸರ್ ಆಪ್ಟಿಮೈಸ್ಡ್ ಫಾರ್ FPGA .
  37. "ARM DSP Instruction Set Extensions". Arm.com. Retrieved 2009-04-18.
  38. "ARM Processor Instruction Set Architecture". Arm.com. Retrieved 2009-04-18.
  39. "ARM aims son of Thumb at uCs, ASSPs, SoCs". Linuxdevices.com. Archived from the original on 2012-12-09. Retrieved 2009-04-18.
  40. "ARM Information Center". Infocenter.arm.com. Retrieved 2009-04-18.
  41. ಟಾಮ್ ಆರ್. ಹಾಲ್ಫಹಿಲ್ ರ"Arm ಸ್ಟ್ರೆಂಥೆನ್ಸ್ ಜಾವಾ ಕಂಪೈಲರ್ಸ್: ನ್ಯೂ 16-ಬಿಟ್ ತಮ್-2EE ಇನ್ಸಟ್ರಕ್ಷನ್ಸ್ ಕಂನ್ಸರ್ವ್ ಸಿಸ್ಟಂ ಮೆಮೊರಿ" 2005.
  42. "ARM Announces Availability of Mobile Consumer DRM Software Solutions Based on ARM T". News.thomasnet.com. Archived from the original on 2018-09-18. Retrieved 2009-04-18.
  43. "APX and XN (execute never) bits have been added in VMSAv6 [Virtual Memory System Architecture]", ARM ಅರ್ಕಿಟೆಕ್ಚರ್ ರೆಪೆರೆನ್ಸ್ ಮ್ಯಾನುಯಲ್, ಪಡೆದದ್ದು 2009/12/01.
  44. "ಬಿಸಿನೆಸ್ ರಿವ್ಯೂ/ಫೈನ್ಯಾನ್‌ಷನಲ್ ರಿವ್ಯೂ/IFRS", p. 10, ARM ಅನ್ಯುಯಲ್ ರಿಪೋರ್ಟ್ ಅಂಡ್ ಅಕೌಂಟ್ಸ್ , 2006. ಪಡೆದದ್ದು ಮೇ 7, 2007 .
  45. Based on total £110.6 million GBP ($202.5 million USD) divided by "License revenues by product"; "ಬಿಸಿನೆಸ್ ರಿವ್ಯೂ/ಫೈನ್ಯಾನ್‌ಷನಲ್ ರಿವ್ಯೂ/IFRS" ಮತ್ತು "ಕೀ ಪರ್ಫಾರ್ಮನ್ಸ್ ಇನ್‌ಡಿಕೇಟರ್ಸ್" ಕ್ರಮವಾಗಿ, p. 10 / p. 3 ARM ಅನ್ಯುಯಲ್ ರಿಪೋರ್ಟ್ ಅಂಡ್ ಅಕೌಂಟ್ಸ್, 2006. ಪಡೆದದ್ದು ಮೇ 7, 2007.
  46. "ಕೀ ಪರ್ಫಾರ್ಮನ್ಸ್ ಇನ್‌ಡಿಕೇಟರ್ಸ್", p. 3, ARM ಅನ್ಯುಯಲ್ ರಿಪೋರ್ಟ್ ಅಂಡ್ ಅಕೌಂಟ್ಸ್, 2006. ಪಡೆದದ್ದು ಮೇ 7, 2007.
  47. "Debian GNU/Linux on ARM". Retrieved 2009-06-01.
  48. "ELinOS supported boards". Archived from the original on 2012-03-13. Retrieved 2010-04-22.
  49. "Architectures/ARM". Retrieved 2009-06-01.
  50. "Gentoo Linux ARM Development". Retrieved 2009-06-01.
  51. "New release for ARM cpus". 2007-01-25. Archived from the original on 2012-06-20. Retrieved 2009-09-17.
  52. "Platform Support for MontaVista Linux". Retrieved 2010-02-16.
  53. "Slackware Linux for ARM". Archived from the original on 2011-08-19. Retrieved 2009-06-01.
  54. "T2 SDE". Retrieved 2010-03-12.
  55. "Ubuntu on Arm". Canonical Ltd. 2009. Retrieved 2009-06-15.
  56. "ARM". Retrieved 2009-06-01.
  57. "Wind River - Board Support Packages". Archived from the original on 2012-03-13. Retrieved 2010-02-16.
  58. "FreeBSD/ARM Project". Retrieved 2009-06-01.
  59. "Hardware supported by NetBSD". Retrieved 2009-06-01.
  60. "OpenBSD/armish". Retrieved 2009-06-01.
  61. "OpenSolaris Project: ARM Platform Port". Sun Microsystems. Archived from the original on 2012-03-13. Retrieved 2010-06-02.

ಬಾಹ್ಯ ಕೊಂಡಿಗಳು

[ಬದಲಾಯಿಸಿ]

commons:Category:ARM Microprocessors