1998 ರಷ್ಯಾ ಹಣಕಾಸು ಬಿಕ್ಕಟ್ಟು
| Point in time | 1998 |
|---|---|
| ಆರಂಭದ ಸಮಯ | ೧೭ ಆಗಸ್ಟ್ 1998 |
| ಅಂತ್ಯದ ಸಮಯ | ೧೫ ನವೆಂಬರ್ 1998 |
1998 ರಷ್ಯಾ ಆರ್ಥಿಕ ಬಿಕಟ್ಟು ಅಥವಾ ರೂಬಲ್ ಬಿಕ್ಕಟ್ಟು ಆಗಸ್ಟ್ 17 1998ರಂದು ರಷ್ಯಾ ದೇಶ ತನ್ನ ಸಾಲ ಮರುಪಾವತಿಯನ್ನು ಸಂಪೂರ್ಣ ಸ್ಥಗಿತಗೊಳಿಸಿ ತನ್ನ ಕರೆನ್ಸಿ ರೂಬಲ್ ಅನ್ನು ಅಪಮೌಲ್ಯಗೊಳಿಸಿತು.[೧]
ಮೂಲ
[ಬದಲಾಯಿಸಿ]ಸೋವಿಯತ್ ರಷ್ಯಾ 1991ರಲ್ಲಿ ಹಲವು ದೇಶಗಳಾಗಿ ಛಿದ್ರವಾದಾಗ, ಹೊಸದಾಗಿ ಆರಂಭಗೊಂಡ ದೇಶಗಳನ್ನು ತನ್ನ ಅಂಕೆಯಲ್ಲಿ ಇಟ್ಟುಕೊಳ್ಳಲು, ರಷ್ಯಾ ಅವುಗಳಿಂದ ಭಾರಿ ಪ್ರಮಾಣದಲ್ಲಿ ಸಾಮಾನುಗಳನ್ನು ಆಯಾತ ಮಾಡಲು ಒಪ್ಪಿಕೊಂಡಿತು. ಇದರ ಪರಿಣಾಮ ರಷ್ಯಾ ದೇಶವು ಹೊಸ ದೇಶಗಳಿಗೆ ಹಣಕಾಸು ಸರಬರಾಜು ಮಾಡುವಂತಿತ್ತು. ಆದರೆ ರಷ್ಯಾದಲ್ಲಿನ ಆಂತರಿಕ ಹಣಕಾಸು ಚಟುವಟಿಕೆಗಳು ಇದರಿಂದ ಹೊಡೆದ ತಿಂದವು. ದೇಶದ ಒಳಗಿನ ವೆಚ್ಚಗಳಿಗೋಸ್ಕರ ಸಾಲ ಮಾಡುವಂಥ ಪರಿಸ್ಠಿತಿ ಉದ್ಭವ ಆಯಿತು. 1997ರ ಹೊತ್ತಿಗೆ ಈ ಸಾಲಗಳು ಭಾರಿ ಪ್ರಮಾಣದಲ್ಲಿ ಬೆಳೆದವು.[೨]
1996ರ ವೇಳೆಯಲ್ಲಿ ಪೆಟ್ರೋಲ್, ನೈಸರ್ಗಿಕ ಅನಿಲ ಮತ್ತು ಲೋಹಗಳ ಬೆಲೆ ಕುಸಿತದಿಂದಾಗಿ ರಷ್ಯಾದ ಆದಾಯ ತೀವ್ರ ಪ್ರಮಾಣದಲ್ಲಿ ತಗ್ಗಿತು. ಇದರ ಜೊತೆಗೆ ಪ್ರತಿ ಅಮೆರಿಕನ್ ಡಾಲರ್ ಒಂದಕ್ಕೆ 5.3 ರಿಂದ 7.1 ಕೇಬಲ್ ಎಂಬ ನಿಶ್ಚಿತ ಮಟ್ಟಿಗೆ ಇಟ್ಟಿದ್ದು ಸಾಲ ಮರುಪಾವತಿಗೆ ಬಲು ತ್ರಾಸದಾಯಕ ಆಗಿ ಕಂಡುಬಂದಿತು. ಈ ಎಲ್ಲಾ ಕಾರಣಗಳಿಂದಾಗಿ ರಷ್ಯಾ ದೇಶದ ವಿತ್ತೀಯ ಆದಾಯ ಕೊರತೆ ಒಟ್ಟು ಆದಾಯದ ಹತ್ತರಷ್ಟು ಹೆಚ್ಚಾಯಿತು. ಚೆಚನ್ಯಾದ ಜೊತೆಗಿನ ಯುದ್ಧವು ಪ್ರತಿ ದಿನಕ್ಕೆ ಮೂರು ಕೋಟಿ ಅಮೆರಿಕನ್ ಡಾಲರ್ ನಷ್ಟ ವೆಚ್ಚ ಆಗುತ್ತಿತ್ತು. ಚೆಚನ್ಯಾದ ಯುದ್ಧವನ್ನು ಮುಗಿಸುವ ಹೊತ್ತಿಗೆ ಒಟ್ಟು 5.5 ಬಿಲಿಯನ್ ಡಾಲರ್ ಗಳಷ್ಟು ಖರ್ಚಾಯ್ತು
1997ರ ಏಷ್ಯನ್ ಹಣಕಾಸು ಬಿಕ್ಕಟ್ಟು ರಷ್ಯಾಕ್ಕೆ ಇನ್ನು ಹೆಚ್ಚಿನ ತ್ರಾಸು ನೀಡಿತು ಒಟ್ಟಾರೆ ಆದಾಯ ಖರ್ಚಿನ ಪ್ರಮಾಣಕ್ಕಿಂತ ಎರಡರಷ್ಟು ಹೆಚ್ಚಾಯಿತು [೩]
ಬಿಕ್ಕಟ್ಟು
[ಬದಲಾಯಿಸಿ]ರಷ್ಯಾಕ್ಕೆ ತನ್ನ ಕರೆನ್ಸಿಯನ್ನು ಅಪಮೌಲ್ಯ ಗೊಳಿಸದೆ ಬೇರೆ ದಾರಿ ಉಳಿದಿರಲಿಲ್ಲ ಹೀಗಾಗಿ 17 ಆಗಸ್ಟ್ 1998ರಂದು ಪ್ರಸಾದ ಸೆಂಟ್ರಲ್ ಬ್ಯಾಂಕ್ ಎರಡು ದೊಡ್ಡ ಘೋಷಣೆಗಳನ್ನು ಮಾಡಿತು ಮೊದಲನೇದು ರೂಬಲ್ ಅನ್ನು ಅಪ ಮೌಲ್ಯ ಗೊಳಿಸುವುದು. ಎರಡನೇದು 90 ದಿನಗಳ ಕಾಲ ಯಾವುದೇ ಪಾವತಿಯನ್ನು ಮಾಡುತ್ತಿರುವುದು.[೪] ಇದರಿಂದ ರಷ್ಯಾ ದ ಆಂತರಿಕ ಮತ್ತು ಬಾಹ್ಯ ವ್ಯಾಪಾರ ವಹಿವಾಟು ಬಹುಮಟ್ಟಿಗೆ ಸ್ಥಗಿತಗೊಂಡಿತು. ಕೃಷಿ ಉತ್ಪನ್ನಗಳಿಗೆ ನೀಡುತ್ತಿದ್ದ ಸಬ್ಸಿಡಿ ಶೇಕಡ 80ರಷ್ಟು ಕಡಿಮೆ ಮಾಡಲಾಯಿತು ಕಲ್ಲಿದ್ದಲು ಮತ್ತು ಇತರೆ ಅವಶ್ಯಕ ವಸ್ತುಗಳನ್ನು ಸರಬರಾಜು ಮಾಡಲು ಹಣ ಇಲ್ಲದಾದಾಗ ಕಾರ್ಮಿಕರು ದಂಗೆ ಎದ್ದು ಮುಷ್ಕರ ಆರಂಭಿಸಿದರು. ಇದರಿಂದ ವಿಚಲಿತಗೊಂಡ ರಷ್ಯಾ ಅಧ್ಯಕ್ಷ ಬೋರಿಸ್ ಎಲ್ಸಿನ್ ಪ್ರಧಾನಮಂತ್ರಿ ಪದವಿಯಿಂದ ಹೊಸದಾಗಿ ಸೆರ್ಗೈ ಕಿವಿಯೆಂಕೋರನ್ನು ನೇಮಿಸಿದರು ಸೆರ್ಗೈ ಕಿವಿಯೆಂಕೋ, ಐ.ಎಂ.ಎಫ್ ಮತ್ತು ವಿಶ್ವ ಬ್ಯಾಂಕಿನಿಂದ 5 ಮಿಲಿಯನ್ ಡಾಲರ್ ಗಳ ಸಾಲ ಪಡೆಯಲು ಯಶಸ್ವಿಯಾದರು. ದುರದೃಷ್ಟವಶಾತ್ ಆಹಣ ರಷ್ಯಾ ಒಳಗೆ ತರುತ್ತಂತೆಯೇ ಕಳ್ಳತನವಾಯಿತು.
ರಷ್ಯಾದ ನಿಶ್ಚಿತ ಕರೆನ್ಸಿ ಅನ್ನು ಅಮೇರಿಕನ್ ಡಾಲರ್ ಒಂದಕ್ಕೆ ಆರರಿಂದ 9 ರೂಗಳು ಎಂದು ದರ ಏರಿಸಲಾಯಿತು.

ರಷ್ಯಾದ ಸೆಂಟ್ರಲ್ ಬ್ಯಾಂಕ್ ಒಂದು ವರ್ಷದಲ್ಲಿ ಹತ್ತಿರ ಹತ್ತಿರ 27 ಬಿಲಿಯನ್ ಡಾಲರ್ ಗಳನ್ನು ಕರೆನ್ಸಿ ಉಳಿಸಲು ಖರ್ಚು ಮಾಡಿತ್ತು ರಷ್ಯಾದ ಪ್ರಧಾನಿಯಾಗಿ ಸಪ್ಟಂಬರ್ 98 ರಂದು ಪ್ರಧಾನಿ ಆಗಿ ಅವರನ್ನು ನೇಮಿಸಲಾಯಿತು[೫]
ಹೊರಬರುವಿಕೆ
[ಬದಲಾಯಿಸಿ]98 ರಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾದದ್ದು ರಷ್ಯಾಗೆ ವರವಾಗಿ ಪರಿಣಮಿಸಿತು. ರೂಬಲ್ ಮತ್ತೆ ಎರಡು ಶುರುವಾಯಿತು ಆರ್ಥಿಕ ಕುಸಿತದಿಂದ ಹೊರಬರಲು ರಷ್ಯಾಕ್ಕೆ 2000ನೆಯ ವರ್ಷದವರೆಗೂ ಬೇಕಾಯಿತು
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ↑ "Global Waves of Debt: Causes and Consequences". Retrieved 2025-12-25.
- ↑ "An Analysis of Russia's 1998 Meltdown: Fundamentals and Market Signals - Brookings". Retrieved 2025-12-25.
- ↑ "1998 Russian financial crisis explained simply". 23 September 2025. Retrieved 2025-12-25.
- ↑ "Online NewsHour: Russia Shake Up-- March 23, 1998". PBS. Archived from the original on 9 November 2010. Retrieved 2025-12-25.
- ↑ "Understanding the 1998 Russian Financial Crisis MarketBulls". 5 January 2024. Retrieved 2025-12-25.