ವಿಷಯಕ್ಕೆ ಹೋಗು

ಹ್ಯೂ ಗಾಫ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
The Viscount Gough
Daguerreotype of Gough wearing the Army Gold Cross, 1850
ಜನನ(೧೭೭೯-೧೧-೦೩)೩ ನವೆಂಬರ್ ೧೭೭೯
Woodstown, Ireland
ಮರಣ2 March 1869(1869-03-02) (aged 89)
Booterstown, Ireland
ಸಮಾಧಿ ಸ್ಥಳ
Stillorgan, Ireland
ವ್ಯಾಪ್ತಿಪ್ರದೇಶUnited Kingdom
ಶಾಖೆBritish Army
ಸೇವಾವಧಿ1794–1849
ಶ್ರೇಣಿ(ದರ್ಜೆ)Field Marshal
ಅಧೀನ ಕಮಾಂಡ್Commander-in-Chief in China
Commander-in-Chief in India
ಭಾಗವಹಿಸಿದ ಯುದ್ಧ(ಗಳು)French Revolutionary Wars
Peninsular War
First Opium War
Gwalior Campaign
First Anglo-Sikh War
Second Anglo-Sikh War
ಪ್ರಶಸ್ತಿ(ಗಳು)Knight of the Order of St Patrick
Knight Grand Cross of the Order of the Bath
Knight Grand Commander of the Order of the Star of India
Knight Bachelor
Army Gold Cross

ಹ್ಯೂ ಗಾಫ್(3 ನವೆಂಬರ್ 1779 – 2 ಮಾರ್ಚ್ 1869). ಐರಿಷ್ ಸೈನಿಕ. ಲಿಮರಿಕ್‍ನ ವೂಡ್ಸ್ ಡೌನನಲ್ಲಿ 1779ರ ನವೆಂಬರ್ 3ರಂದು ಹುಟ್ಟಿದ.

ವೃತ್ತಿ ಜೀವನ

[ಬದಲಾಯಿಸಿ]

ಈತ ಸೈನ್ಯಕ್ಕೆ ಸೇರಿದ್ದು ೧೭೯೩ರಲ್ಲಿ[] . ಎರಡು ವರ್ಷಗಳ ಅನಂತರ ಗುಡ್ ಹೋಪ್ ಭೂಶಿರದ ಆಕ್ರಮಣ ಕಾರ್ಯಾಚರಣೆಯಲ್ಲೂ 1797-1800ರಲ್ಲಿ ವೆಸ್್ಟ ಇಂಡೀಸಿನಲ್ಲಿ ನಡೆದ ಆಕ್ರಮಣ ಯುದ್ಧಗಳಲ್ಲೂ ಭಾಗವಹಿಸಿದ. 15ನೆಯ ವಂಯಸ್ಸಿಗೆ ಅಡ್ಜುಟಂಟ್ ಆಗಿ 25ನೆಯ ವಯಸ್ಸಿನಲ್ಲಿ ಮೇಜರ್ ಆಗಿಯೂ ಮೇಲೇರಿದ ಈತ ಪೋರ್ಚುಗಲ್-ಸ್ಪೇನ್‍ಗಳಲ್ಲಿ ವೆಲಿಂಗ್ಟನ್ ಡ್ಯೂಕನ ಸೇನೆಯ 87ನೆಯ ರೆಜಿಮೆಂಟಿನ ಸೇನಾನಿಯಾಗಿದ್ದ. ಈ ಯುದ್ಧದಲ್ಲಿ ತೀವ್ರವಾಗಿ ಗಾಯ ಗೊಂಡರೂ ವಿಜಯ ಸಾಧಿಸಿದ. ಇದಕ್ಕೆ ಪ್ರತಿಫಲವೂ ಕಾದಿತ್ತು. ಗಾಫ್ಗೆ ಲೆಫ್ಟೆನೆಂಟ್ ಕರ್ನಲ್ ದರ್ಜೆಗೆ ಬಡ್ತಿ ಸಿಕ್ಕಿತು. ಅನಂತರ ವಿಟೋರೀಯದ ಟಾರೀಫಾ ಬಂದರಿನ ರಕ್ಷಣೆಗಾಗಿ ಈತ ನಡೆಸಿದ ಕದನದಲ್ಲಿ ಮತ್ತೆ ಗಾಯಗೊಂಡ. ಧೈರ್ಯ ಸಾಹಸ ಸಂಘಟನೆ ನಿರ್ದೇಶನಗಳಿಗಾಗಿ 1815ರಲ್ಲಿ ಈತನಿಗೆ ನೈಟ್ ಪದವಿ ಲಭ್ಯವಾಯಿತು.1821-24ರಲ್ಲಿ ದಕ್ಷಿಣ ಐರ್ಲೆಂಡಿನ ರೈತರ ವಿರುದ್ಧ ನಡೆಸಲಾಗುತ್ತಿದ್ದ ಕಾರ್ಯಾಚರಣೆಯಲ್ಲಿ ಗಾಫ್ ನಿರತನಾಗಿದ್ದ. 1830ರಲ್ಲಿ ಈತನಿಗೆ ಮೇಜರ್ ಜನರಲ್ ದರ್ಜೆ ದೊರಕಿತು.

ಪೂರ್ವ ವಸಾಹತುಗಳಲ್ಲಿ

[ಬದಲಾಯಿಸಿ]

ಗಾಫ್ 1837ರಲ್ಲಿ ಮೈಸೂರಿನಲ್ಲಿ ಸೇನಾಧಿಪತಿಯಾದ. 1840ರಲ್ಲಿ ಚೀನದ ವಿರುದ್ಧ ನಡೆಸಿದ ಓಪಿಯಂ ಯುದ್ಧದ ನೇತೃತ್ವ ವಹಿಸಿದ. 1843ರಲ್ಲಿ ಭಾರತದ ದಂಡನಾಯಕನಾಗಿ ನೇಮಕಗೊಂಡು ಆ ವರ್ಷದ ಡಿಸೆಂಬರಿನಲ್ಲಿ ಮರಾಠರ ಸೈನ್ಯವನ್ನೂ 1845-46ರಲ್ಲಿ ಸಿಖ್ ಸೈನ್ಯವನ್ನೂ ಸೋಲಿಸಿದ. ಎರಡನೆಯ ಸಿಖ್ ಯುದ್ಧದಲ್ಲೂ (1848-49) ವಿಜಯ ಬ್ರಿಟಿಷರದಾಯಿತಾದರೂ ಈ ಎರಡು ಯುದ್ಧಗಳಲ್ಲೂ ಬ್ರಿಟಿಷರಿಗೆ ಆದ ನಷ್ಟ ಅಗಾಧ. ಇವನ ನಾಯಕತ್ವದ ಹಲವು ದೋಷಗಳು ಆಗ ಟೀಕೆಗೆ ಒಳಗಾದವು. ಇವನ ಸ್ಥಾನದಲ್ಲಿ ಚಾಲ್ರ್್ಸ ನೇಪಿಯರನ ನೇಮಕವಾಯಿತು. 1862ರಲ್ಲಿ ಗಾಫ್ ಫೀಲ್ಡ್-ಮಾರ್ಷಲ್ ಆದ.

ಈತ ತೀರಿಕೊಂಡದ್ದು 1869ರ ಮಾರ್ಚ್ 2 ರಂದು.

ಉಲ್ಲೇಖಗಳು

[ಬದಲಾಯಿಸಿ]
  1. Chichester, H. M. "Gough, Hugh, first Viscount Gough (1779–1869)". Oxford Dictionary of National Biography (2004 ed.). Oxford University Press. {{cite web}}: Missing or empty |url= (help) doi:10.1093/ref:odnb/11135
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: