ವಿಷಯಕ್ಕೆ ಹೋಗು

ಹ್ಯಾನ್ಸ್ ಯಾಕಾಪ್ ಕ್ರಿಸ್ಟೋಫಲ್ ಫಾನ್ ಗ್ರಿಮಲ್ಷೌಸನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗ್ರಿಮಲ್‍ಷೌಸನ್‍ನ್ನು ತೋರಿಸುತ್ತದೆ ಎಂದು ಸಾಧಿಸುವ ೧೬೪೧ರ ಭಾವಚಿತ್ರ

ಹ್ಯಾನ್ಸ್ ಯಾಕಾಪ್ ಕ್ರಿಸ್ಟೋಫಲ್ ಫಾನ್ ಗ್ರಿಮಲ್‍ಷೌಸನ್ (1621/22 - 17 ಆಗಸ್ಟ್ 1676)[] ಎನ್ನುವವನು ಒಬ್ಬ ಜರ್ಮನ್ ಸಾಹಿತಿ ಹಾಗೂ ಕಾದಂಬರಿಕಾರ.[] ಜರ್ಮನ್ ಸಾಹಿತ್ಯದ ಉತ್ತಮ ಕಾದಂಬರಿ ಎನಿಸಿದ ಸಿಂಪ್ಲಿಸಿಸಿಮಸ್‌ದ ಕರ್ತೃ.

ಜೀವನ, ಬರೆದ ಕೃತಿಗಳು

[ಬದಲಾಯಿಸಿ]

ತನ್ನ 10ನೆಯ ವಯಸ್ಸಿನಲ್ಲಿ ಸೈನಿಕರಿಂದ ಅಪಹೃತನಾದ ಈತ ಬಹುಕಾಲ ಸೈನಿಕನಾಗಿಯೇ ಉಳಿಯಬೇಕಾಯಿತು. ಮುಂದೆ ವಿದ್ಯಾಪಾರಂಗತನಾಗಿ ನ್ಯಾಯಾಧೀಶ ಹುದ್ದೆಯನ್ನು ಪಡೆದುದಲ್ಲದೆ ಉತ್ತಮ ಸಾಹಿತಿ ಎನಿಸಿಕೊಂಡ. ಜರ್ಮನಿಯ ಸಾಮಾಜಿಕ ಜೀವನವನ್ನು ಅಸ್ತವ್ಯಸ್ತಗೊಳಿಸಿದ ಮೂವತ್ತು ವರ್ಷಗಳ ಯುದ್ಧದಲ್ಲಿ ಭಾಗವಹಿಸಿದ ಈತ ಅಲ್ಲಿನ ಅನುಭವಗಳನ್ನೇ ತನ್ನ ಸಾಹಿತ್ಯ ಕೃತಿಗಳಲ್ಲಿ ಪಡಿಮೂಡಿಸಿದ. 1669ರಲ್ಲಿ ಈತನ ಪ್ರಸಿದ್ಧ ಕೃತಿ ಸಿಂಪ್ಲಿಸಿಸಿಮಸ್ ಕಾದಂಬರಿ ಪ್ರಕಟವಾಯಿತು. ಸಾಹಸಿ ಹುಡುಗನೊಬ್ಬ ಯುದ್ಧ ಪರಿಸ್ಥಿತಿಯಲ್ಲಿ ಜೀವನ ಪರಿಚಯ ಮಾಡಿಕೊಳ್ಳುವ ಘಟನೆಗಳನ್ನು ಕಾದಂಬರಿ ಚಿತ್ರಿಸುತ್ತದೆ. ಇದರಲ್ಲಿ ಕ್ರಿಸ್ಟೊಫಲ್‌ನ ಕಲಾ ನಿರೂಪಣಾಚಾತುರ್ಯ, ವಾಸ್ತವಿಕಾಂಶಗಳ ವಿವರಣೆ, ಪಾತ್ರಗಳ ಯಶಸ್ವೀ ಚಿತ್ರಣ, ಹಾಸ್ಯ, ಜೀವನ ದರ್ಶನ-ಇವುಗಳನ್ನು ಕಾಣಬಹುದು. ಹದಿನೇಳನೆಯ ಶತಮಾನದ ಜರ್ಮನಿಯ ಸಾಮಾಜಿಕ ಜೀವನದ ಹಾಗೂ ಮೂವತ್ತು ವರ್ಷಗಳ ಯುದ್ಧದ ಅಮಾನುಷತೆ, ಅನಾಹುತಗಳ ಸ್ಪಷ್ಟ ಚಿತ್ರಣವಿದೆ.

ಉಲ್ಲೇಖಗಳು

[ಬದಲಾಯಿಸಿ]
  1.  One or more of the preceding sentences incorporates text from a publication now in the public domainChisholm, Hugh, ed. (1911). "Grimmelshausen, Hans Jakob Christoffel von" . Encyclopædia Britannica. Vol. 12 (11th ed.). Cambridge University Press. p. 603. {{cite encyclopedia}}: Cite has empty unknown parameters: |separator= and |HIDE_PARAMETER= (help); Invalid |ref=harv (help)
  2.  Remy, A.F.J. (1913). "Johann Jacob Christoffel von Grimmelshausen" . Catholic Encyclopedia. Vol. 7. {{cite encyclopedia}}: Cite has empty unknown parameters: |HIDE_PARAMETER4=, |HIDE_PARAMETERq=, |HIDE_PARAMETER20=, |HIDE_PARAMETER8=, |HIDE_PARAMETER7=, |HIDE_PARAMETER6=, |HIDE_PARAMETER9=, and |HIDE_PARAMETER5= (help)


ಹೊರಗಿನ ಕೊಂಡಿಗಳು

[ಬದಲಾಯಿಸಿ]