ಹ್ಯಾಂಗ್ಝೌ
ಹ್ಯಾಂಗ್ಝೌ
杭州市 ಹ್ಯಾಂಗ್‌ಚೌ, Kincsay | |
|---|---|
ಮಹಾನಗರ | |
ಝೆಜಿಯಾಂಗ್‌ನಲ್ಲಿ ಹ್ಯಾಂಗ್‌ಝೌ ನಗರದ ವ್ಯಾಪ್ತಿ | |
| ದೇಶ | |
| ಪ್ರಾಂತ್ಯ | ಝೆಜಿಯಾಂಗ್ |
| ಮುನ್ಸಿಪಲ್ ಕೇಂದ್ರ | ಶಾಂಗ್ಚೆಂಗ್ ಜಿಲ್ಲೆ |
| ಸರ್ಕಾರ | |
| • ಮಾದರಿ | ಉಪ-ಪ್ರಾಂತೀಯ ನಗರ (ಪುರಸಭೆಗೆ ಮೇಲ್ಪಟ್ಟು) |
| • ಪಾಲಿಕೆ | ಹ್ಯಾಂಗ್ಝೌ ಮುನ್ಸಿಪಲ್ ಪೀಪಲ್ಸ್ ಕಾಂಗ್ರೆಸ್ |
| • ಕಾರ್ಯದರ್ಶಿ | ಲಿಯು ಫೀ |
| • ಹ್ಯಾಂಗ್‌ಝೌ ಮುನ್ಸಿಪಲ್ ಪೀಪಲ್ಸ್ ಕಾಂಗ್ರೆಸ್ ಅಧ್ಯಕ್ಷರು | ಲಿ ಹುವೊಲಿನ್ |
| ವಿಸ್ತಾರ | |
| • ನಗರ | ೧೬,೮೨೧.೧ km2 (೬೪೯೪.೭ sq mi) |
| • ನಗರ | ೮,೨೫೯.೯ km2 (೩೧೮೯.೨ sq mi) |
| • ಮೆಟ್ರೋ | ೮,೧೦೭.೯ km2 (೩೧೩೦.೫ sq mi) |
| ಜನಸಂಖ್ಯೆ (2020 ಜನಗಣತಿ)[೧] | |
| • ನಗರ | ೧,೧೯,೩೬,೦೧೦ |
| • ಸಾಂದ್ರತೆ | ೭೧೦/km2 (೧೮೦೦/sq mi) |
| • Urban | ೧,೦೭,೧೧,೨೩೮ |
| • ನಗರ ಸಾಂದ್ರತೆ | ೧೩೦೦/km2 (೩೪೦೦/sq mi) |
| • Metro | ೧,೩೦,೩೫,೩೨೯ |
| • Metro density | ೧೬೦೦/km2 (೪೨೦೦/sq mi) |
| • ರಾಷ್ಟ್ರೀಯ ಶ್ರೇಣಿ | ೫ನೇ (ಚೈನಾ) |
| Demonym(s) | ಹ್ಯಾಂಗ್‌ಝೌನೀಸ್[೨]... (ಇತರ ಉಲ್ಲೇಖಗಳು) (杭州人, Hángzhōurén) |
| ಜಿಡಿಪಿ (2025)[೩] | |
| • ನಗರ | CN¥ 2.3 ಟ್ರಿಲಿಯನ್ US$ 330.45 ಬಿಲಿಯನ್ |
| ಸಮಯದ ವಲಯ | |
| ಸಮಯ ವಲಯ | ಚೈನಾ ಸ್ಟಾಂಡರ್ಡ್ ಟೈಮ್ |
| ಅಂಚೆ | 310000 |
| ISO 3166 code | CN-ZJ-01 |
| ಜಾಲತಾಣ | Hangzhou.gov.cn |
ಹ್ಯಾಂಗ್ಝೌ [lower-alpha ೧] ಚೀನಾದ ಝೆಜಿಯಾಂಗ್ ಪ್ರಾಂತ್ಯದ ರಾಜಧಾನಿ ಮತ್ತು ಅತ್ಯಂತ ಜನನಿಬಿಡ ನಗರವಾಗಿದ್ದು, ಗ್ರ್ಯಾಂಡ್ ಕಾಲುವೆಯ ದಕ್ಷಿಣ ತುದಿ ಮತ್ತು ಹ್ಯಾಂಗ್‌ಝೌ ಕೊಲ್ಲಿಯಲ್ಲಿದೆ. [೭] ಚೀನಾದ ಎಂಟು ಪ್ರಾಚೀನ ರಾಜಧಾನಿಗಳಲ್ಲಿ ಒಂದೆಂದು ಪ್ರಸಿದ್ಧವಾಗಿರುವ ಹ್ಯಾಂಗ್‌ಝೌ ತನ್ನ ಸಾಂಸ್ಕೃತಿಕ ಪರಂಪರೆ ಮತ್ತು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ವೆಸ್ಟ್ ಲೇಕ್‌ಗೆ ಹೆಸರುವಾಸಿಯಾಗಿದೆ.
ಕ್ರಿ.ಪೂ. 221ರಲ್ಲಿ ಜಿಲ್ಲೆಯಾಗಿ ಸ್ಥಾಪಿಸಲ್ಪಟ್ಟ ಹ್ಯಾಂಗ್‌ಝೌ, ನಂತರ ವುಯುಯೆ ಸಾಮ್ರಾಜ್ಯದ (923–997) ಮತ್ತು ದಕ್ಷಿಣ ಸಾಂಗ್ ರಾಜವಂಶದ (1138–1276) ರಾಜಧಾನಿಯಾಗಿತ್ತು. [೮] ವೆಸ್ಟ್ ಲೇಕ್ ಕಲ್ಚರಲ್ ಲ್ಯಾಂಡ್‌ಸ್ಕೇಪ್, ಗ್ರ್ಯಾಂಡ್ ಕೆನಾಲ್ ಮತ್ತು ಲಿಯಾಂಗ್‌ಝು ನಗರದ ಪುರಾತತ್ವ ಅವಶೇಷಗಳಂತಹ ಒಟ್ಟೂ ಮೂರು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳನ್ನು ಹೊಂದಿದೆ, . [೯]
ಹ್ಯಾಂಗ್‌ಝೌವನ್ನು ಉಪಜಿಲ್ಲೆಯಂದು ನಮೂದಿಸಲಾಗಿದೆ. [೧೦] ಚೀನಾದ ಮುಖ್ಯ ಭೂಭಾಗದ ನಗರಗಳಲ್ಲಿ ಹ್ಯಾಂಗ್‌ಝೌ, ಜಿಡಿಪಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಜಾಗತಿಕ ನಾವೀನ್ಯತೆ ಸೂಚ್ಯಂಕದ ಪ್ರಕಾರ ಇದು 14 ನೇ ಸ್ಥಾನದಲ್ಲಿದೆ. [೧೧] [೧೨] ಅಲಿಬಾಬಾ ಗ್ರೂಪ್, ಆಂಟ್ ಗ್ರೂಪ್, ಡೀಪ್‌ಸೀಕ್, ಗೀಲಿ ಮತ್ತು ನೆಟ್‌ಈಸ್‌ನ ಪ್ರಧಾನ ಕಚೇರಿಗಳು ಇಲ್ಲಿವೆ. [೧೩] ನೇಚರ್ ಇಂಡೆಕ್ಸ್ ಪ್ರಕಾರ, ಇದು ವೈಜ್ಞಾನಿಕ ಸಂಶೋಧನಾ ಉತ್ಪಾದನೆಯಲ್ಲಿ, ಜಾಗತಿಕವಾಗಿ 10 ನೇ ಸ್ಥಾನದಲ್ಲಿದೆ. [೧೪]
ಆಧುನಿಕ ಇತಿಹಾಸ
[ಬದಲಾಯಿಸಿ]
ಮಿಂಗ್ ರಾಜವಂಶದ ಯುಗದ ಮಧ್ಯಭಾಗದವರೆಗೆ, ಬಂದರಿನಲ್ಲಿ ನಿಧಾನವಾಗಿ ಹೂಳು ತುಂಬಿಕೊಳ್ಳುವವರೆಗೂ ಈ ನಗರವು ಒಂದು ಪ್ರಮುಖ ಬಂದರಾಗಿಯೇ ಇತ್ತು. ಕ್ವಿಂಗ್ ಆಳ್ವಿಕೆಯಲ್ಲಿ, ಇದು ಸಾಮ್ರಾಜ್ಯಶಾಹಿ ಸೇನಾಪಡೆಗೆ ನೆಲೆಯಾಗಿತ್ತು. [೧೫]
೧೮೫೬ ಮತ್ತು ೧೮೬೦ ರಲ್ಲಿ, ತೈಪಿಂಗ್ ಸ್ವರ್ಗೀಯ ಸಾಮ್ರಾಜ್ಯವು ಹ್ಯಾಂಗ್‌ಝೌ ಅನ್ನು ಆಕ್ರಮಿಸಿಕೊಂಡಿತು. ಕ್ವಿಂಗ್ ಸೈನ್ಯದ ಆಕ್ರಮಣ ಮತ್ತು ಅಧಿಕಾರಾವಧಿಯಲ್ಲಿ ನಗರವು ತೀವ್ರವಾಗಿ ಹಾನಿಗೊಳಗಾಯಿತು.
ಕ್ವಿಂಗ್ ರಾಜವಂಶದ ಪತನದ ನಂತರ, ಕುವೊಮಿಂಟಾಂಗ್‌ನ ಯಶಸ್ವಿ ಉತ್ತರ ದಂಡಯಾತ್ರೆಯವರೆಗೆ, ಸೇನಾಧಿಕಾರಿಗಳು, ವಿಶೇಷವಾಗಿ ಅನ್ಹುಯಿ ಮತ್ತು ಝಿಲಿ ಗುಂಪುಗಳು ಹ್ಯಾಂಗ್‌ಝೌ ನಿಯಂತ್ರಣವನ್ನು ಸಾಧಿಸಲು ಹೋರಾಡುತ್ತಿದ್ದರು. ನಂತರ 1927 ರಿಂದ 1937 ರವರೆಗೆ ಚೀನಾ ಗಣರಾಜ್ಯವು ಸಂಪೂರ್ಣವಾಗಿ ವಹಿಸಿಕೊಂಡಿತು. 1937 ರಿಂದ 1945 ರವರೆಗೆ, ನಗರವನ್ನು ಜಪಾನ್ ಆಕ್ರಮಿಸಿಕೊಂಡಿತು. 1945 ರಲ್ಲಿ ಕುವೊಮಿಂಟಾಂಗ್ ಮರಳಿ, ಮೇ 3, 1949 ರವರೆಗೆ ಆಡಳಿತ ನಡೆಸಿತು.
ನಂತರ ಪೀಪಲ್ಸ್ ಲಿಬರೇಶನ್ ಆರ್ಮಿ ಹ್ಯಾಂಗ್‌ಝೌವನ್ನು ಪ್ರವೇಶಿ, ಚೀನೀ ಕಮ್ಯುನಿಸ್ಟ್ ಪಕ್ಷದ (CCP) ನಿಯಂತ್ರಣಕ್ಕೆ ಒಳಪಟ್ಟಿತು.
ಸಾಂಸ್ಕೃತಿಕ ಕ್ರಾಂತಿಯ ಕೊನೆಯಲ್ಲಿ, ಹ್ಯಾಂಗ್‌ಝೌ 1975 ರ ಹ್ಯಾಂಗ್‌ಝೌ ಘಟನೆ ಎಂದು ಕರೆಯಲ್ಪಡುವ ಕಾರ್ಮಿಕರ ಹಿಂಸಾತ್ಮಕ ಹೋರಾಟದ ಸರಣಿಗೆ ವೇದಿಕೆಯಾಯಿತು. 1978 ರಲ್ಲಿ ಡೆಂಗ್ ಕ್ಸಿಯಾಪಿಂಗ್ ಅವರ ಸುಧಾರಣಾ ನೀತಿಗಳನ್ನು ಜಾರಿಗೆ ತರಲು ಪ್ರಾರಂಭಿಸಿದ ನಂತರ, ಹ್ಯಾಂಗ್‌ಝೌದ ಅಭಿವೃದ್ಧಿಯನ್ನು ಹೆಚ್ಚಲು ಆರಂಭವಾಯಿತು. ಯಾಂಗ್ಟ್ಜಿ ಡೆಲ್ಟಾದಲ್ಲಿ ನೆಲೆಗೊಂಡಿರುವುದೂ ಇದಕ್ಕೆ ಸಹಕಾರಿಯಾಯಿತು. ಸಧ್ಯಕ್ಕೆ, ಚೀನಾದ ಅತ್ಯಂತ ಶ್ರೀಮಂತ ಪ್ರಮುಖ ನಗರಗಳಲ್ಲಿ ಒಂದಾಗಿ, 2016ರ ಹನ್ನೊಂದನೇ G20 ಶೃಂಗಸಭೆಯನ್ನು ಆಯೋಜಿಸಿತ್ತು [೧೬]
ಫೆಬ್ರವರಿ 2020 ರಲ್ಲಿ, ವುಹಾನ್‌ನಿಂದ ಚೀನಾದಾದ್ಯಂತ ಹರಡಿದ ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ನಗರವು ಬಲವಾದ ಕರ್ಫ್ಯೂ ಕ್ರಮಗಳನ್ನು ಕೈಗೊಂಡಿತು. [೧೭] [೧೮]
1990 ರಲ್ಲಿ ಬೀಜಿಂಗ್ ಮತ್ತು 2010 ರಲ್ಲಿ ಗುವಾಂಗ್‌ಝೌ ನಂತರ, 2022 ರಲ್ಲಿ ಹ್ಯಾಂಗ್‌ಝೌ ಏಷ್ಯನ್ ಕ್ರೀಡಾಕೂಟವನ್ನು ಆಯೋಜಿಸಿದ ಮೂರನೇ ಚೀನಾದ ನಗರವಾಯಿತು . [೧೯]
ಜನಸಂಖ್ಯೆ
[ಬದಲಾಯಿಸಿ]| Year | Pop. | ±% |
|---|---|---|
| 1990 | ೧೮,೪೫,೦೫೫ | — |
| 2000 | ೩೬,೬೨,೦೫೪ | +98.5% |
| 2010 | ೫೮,೪೯,೫೩೭ | +59.7% |
| 2020 | ೯೨,೩೬,೦೩೨ | +57.9% |
| Year | Pop. | ±% |
|---|---|---|
| 2000 | ೬೮,೭೮,೭೨೨ | — |
| 2010 | ೮೭,೦೦,೩೭೩ | +26.5% |
| 2020 | ೧,೧೯,೩೬,೦೧೦ | +37.2% |
| 2022 | ೧,೨೩,೭೬,೦೦೦ | +3.7% |
| 2023 | ೧,೨೫,೨೨,೦೦೦ | +1.2% |
೨೦೨೩ ರ ಹೊತ್ತಿಗೆ, ಹ್ಯಾಂಗ್‌ಝೌ (ಕ್ಷಾವೊಶಾನ್ ಮತ್ತು ಯುಹಾಂಗ್ ಸೇರಿದಂತೆ) ೧೨.೫೨೨ ಮಿಲಿಯನ್ ಶಾಶ್ವತ ಜನಸಂಖ್ಯೆಯನ್ನೂ, ಅದರಲ್ಲಿ ೧೦.೫೪೩ ಮಿಲಿಯನ್ (೮೪.೨%) ಜನರು ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದರು. [೨೦] [೨೧]2010ರಲ್ಲಿ ಇದರ ಜನಸಂಖ್ಯೆ13.4 ಮಿಲಿಯನ್ ಎಂದು, ಒಇಸಿಡಿ (ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ) ಎಂದು ಅಂದಾಜಿಸಿತ್ತು.[೨೨] ಇತರ ಮೂಲಗಳು ಈ ಸಂಖ್ಯೆಯನ್ನು 21 ಮಿಲಿಯನ್‌ಗಿಂತಲೂ ಹೆಚ್ಚು ಇರಬಹುದು ಎಂದು ಹೇಳುತ್ತವೆ. ಹ್ಯಾಂಗ್‌ಝೌ ಮಹಾನಗರ ಪ್ರದೇಶವು ಶಾವೊಕ್ಸಿಂಗ್, ಜಿಯಾಕ್ಸಿಂಗ್ ಮತ್ತು ಹುಝೌ ಪ್ರಮುಖ ನಗರಗಳನ್ನು ಒಳಗೊಂಡಿದೆ. [೨೩] [೨೪]
ಹ್ಯಾಂಗ್‌ಝೌ ಜನರ ಜೀವಿತಾವಧಿ 83.18 ವರ್ಷಗಳಾಗಿದ್ದು, ಚೀನಾದ ಮುಂಚೂಣಿ ನಗರಗಳಲ್ಲಿ ಒಂದಾಗಿದೆ. [೨೫]
ಪ್ರವಾಸೋದ್ಯಮ
[ಬದಲಾಯಿಸಿ]





ಹ್ಯಾಂಗ್ಝೌ ಇತ್ತೀಚಿನ ಹಲವು ನಗರಾಭಿವೃದ್ಧಿಗಳನ್ನು ಕಂಡಿದ್ದರೂ, ಅದು ಇನ್ನೂ ತನ್ನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆ ಮತ್ತು ನೈಸರ್ಗಿಕ ಪರಿಸರವನ್ನು ಉಳಿಸಿಕೊಂಡಿದೆ. ಇಂದು, ಪ್ರವಾಸೋದ್ಯಮವು ಹ್ಯಾಂಗ್‌ಝೌನ ಆರ್ಥಿಕತೆಗೆ ಪ್ರಮುಖ ಅಂಶವಾಗಿದೆ. ಹ್ಯಾಂಗ್‌ಝೌ ಹಲವಾರು ಗಗನಚುಂಬಿ ಕಟ್ಟಡಗಳನ್ನು ಹೊಂದಿ, ಅತೀ ಹೆಚ್ಚು ಎತ್ತರದ ಕಟ್ಟಡಗಳ ಹೊಂದಿದ ನಗರಗಳಲ್ಲಿ, ವಿಶ್ವದ 19 ನೇ ನಗರವಾಗಿದ್ದು, ಚೀನಾದಲ್ಲಿ 9 ನೇ ನಗರವಾಗಿದೆ. [೨೬]
ಗಾದೆಗಳು
[ಬದಲಾಯಿಸಿ]ಹ್ಯಾಂಗ್‌ಝೌ ಮತ್ತು ಸುಝೌ ಬಗ್ಗೆ ಒಂದು ಪ್ರಾಚೀನ ಚೀನೀ ಗಾದೆ ಹೀಗಿದೆ:
ಮೇಲೆ ಸ್ವರ್ಗವಿದೆ, ಮತ್ತು ಕೆಳಗೆ ಸುಝೌ ಮತ್ತು ಹ್ಯಾಂಗ್‌ಝೌ. (上有天堂,下有苏杭)
ಈ ಪದಗುಚ್ಛವು "ಹೆವನ್ ಆನ್ ಅರ್ಥ್" ಎಂಬ ಇಂಗ್ಲಿಷ್ ಪದಗುಚ್ಛಗಳಿಗೆ ಹೋಲುವ ಅರ್ಥವನ್ನು ಹೊಂದಿದೆ. ಮಾರ್ಕೊ ಪೊಲೊ ತನ್ನ ಖಾತೆಗಳಲ್ಲಿ ಸುಝೌವನ್ನು "ಭೂಮಿ" ಎಂದು, ಹ್ಯಾಂಗ್ಝೌ ವನ್ನು "ಸ್ವರ್ಗ" ಎಂದೂ ಬಣ್ಣಿಸಿದ್ದಾರೆ. [೨೭] 2016 ರಲ್ಲಿ ನಗರದಲ್ಲಿ ನಡೆದ G20 ಶೃಂಗಸಭೆಯ ಸಮಯದಲ್ಲಿ ನಗರವು ತನ್ನನ್ನು "ಭೂಮಿಯ ಮೇಲಿನ ಸ್ವರ್ಗ" ಎಂದು ಪ್ರಸ್ತುತಪಡಿಸಿತು. [೨೮] ಹ್ಯಾಂಗ್‌ಝೌ ಬಗ್ಗೆ ಇನ್ನೊಂದು ಮಾತು:
ಸುಝೌದಲ್ಲಿ ಹುಟ್ಟಿ, ಹ್ಯಾಂಗ್‌ಝೌನಲ್ಲಿ ಬದುಕಿ, ಗುವಾಂಗ್‌ಝೌನಲ್ಲಿ ತಿಂದು, ಲಿಯುಜೌನಲ್ಲಿ ಕೊನೆ ಉಸಿರೆಳೆಯಿರಿ. (生在苏州,活在杭州,吃在广州,死在柳州)
ಪ್ರಾಚೀನ ಪುಸ್ತಕಗಳ ಪುನರೋತ್ಥಾನ
[ಬದಲಾಯಿಸಿ]ಝೆಜಿಯಾಂಗ್ ಗ್ರಂಥಾಲಯದೊಂದಿಗೆ ಸಂಯೋಜಿತವಾಗಿರುವ ಹ್ಯಾಂಗ್‌ಝೌ ಪ್ರಾಚೀನ ಪುಸ್ತಕ ಪುನಃಸ್ಥಾಪನೆ ಮತ್ತು ಪ್ರದರ್ಶನ ಕೇಂದ್ರವು, ಪ್ರಾಚೀನ ಚೀನೀ ಪಠ್ಯಗಳನ್ನು ಸಂರಕ್ಷಿಸಲು ಬಳಸುವ ಸಾಂಪ್ರದಾಯಿಕ ಕಾಗದ ಪುನಃಸ್ಥಾಪನೆ ಮತ್ತು ಬೈಂಡಿಂಗ್ ತಂತ್ರಗಳ ನಿಯಮಿತ ಸಾರ್ವಜನಿಕ ಪ್ರದರ್ಶನಗಳನ್ನು ನೀಡುತ್ತದೆ. ಈ ಕೇಂದ್ರವು ಜಿಯಾಂಗ್ನಾನ್ ಸಾಂಸ್ಕೃತಿಕ ದಾಖಲೆಗಳ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. [೨೯]
ಟಿಪ್ಪಣಿಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "China: Zhèjiāng (Prefectures, Cities, Districts and Counties) - Population Statistics, Charts and Map". www.citypopulation.de.
- ↑ Bayne, John (2006), "Images of the Chinese Photography and Consumerism in 1990s Hangzhou", Consuming China: Approaches to Cultural Change in Contemporary China, Abingdon: Routledge, p. 196, ISBN 9781135791438.
- ↑ "zh: 2024年杭州经济运行情况" (Press release). hangzhou.gov.cn. January 22, 2025. Archived from the original on ಜೂನ್ 18, 2025. Retrieved February 20, 2025.
- ↑ ಟೆಂಪ್ಲೇಟು:MW
- ↑ ಟೆಂಪ್ಲೇಟು:Cite The Britannica Dictionary
- ↑ "Hangzhou". Lexico UK English Dictionary. Oxford University Press. Archived from the original on May 18, 2021.
- ↑ Hu, Richard (2023). Reinventing the Chinese City. New York: Columbia University Press. ISBN 978-0-231-21101-7.
- ↑ Welter, Albert (2024-02-06). "The Hangzhou Region and the Spread of East Asian Buddhism". Religions (in ಇಂಗ್ಲಿಷ್). 15 (2): 201. doi:10.3390/rel15020201. ISSN 2077-1444.
{{cite journal}}: CS1 maint: unflagged free DOI (link) - ↑ Ma, Zhenhuan (2022-06-23). "Foreigners take in Hangzhou's cultural heritage sites". China Daily. Retrieved 2025-04-15.
- ↑ 中央机构编制委员会印发《关于省级市若干问题的意见》的通知. 中编发[1995]5号. 豆丁网. 1995-02-19. Archived from the original on May 29, 2014. Retrieved May 28, 2014.
- ↑ 吳碧娥 (2024-09-12). "WIPO發布2024全球百大科技集群 中國連兩年數量居冠". 聯合新聞網 (in ಚೈನೀಸ್). Retrieved 2025-04-13.
- ↑ "Science and Technology Cluster Ranking 2024". WIPO (in ಅಮೆರಿಕನ್ ಇಂಗ್ಲಿಷ್). Retrieved 2025-04-15.
- ↑ 邵婷 (2024-11-20). "杭州市2024年度总部企业榜单发布 643家企业上榜". 都市快报. Retrieved 2025-04-13 – via 杭州网.
- ↑ "Leading 200 science cities | | Supplements | Nature Index". www.nature.com. Retrieved 2025-11-14.
- ↑ Cassel, Pär (2003), "Excavating Extraterritoriality: The "Judicial Sub-Prefect" as a Prototype for the Mixed Court in Shanghai", Late Imperial China, vol. 24, pp. 156–182
- ↑ "China to host 2016 G20 summit in Hangzhou". PRC Central Government Official Website. 2015. Archived from the original on November 18, 2015. Retrieved 2015-12-20.
- ↑ "China locks down Hangzhou, mega-city far from epicentre of coronavirus outbreak". South China Morning Post. 6 February 2020. Retrieved 7 February 2020.
- ↑ "More Chinese cities shut down as novel coronavirus death toll rises". CNA. 5 February 2020. Archived from the original on August 1, 2020. Retrieved 7 February 2020.
- ↑ "Hangzhou of China selected to host 2022 Asian Games". Xinhua. 2015-09-16. Archived from the original on November 25, 2015. Retrieved 2015-09-16.
- ↑ "2023年杭州市国民经济和社会发展统计公报" [2023 Hangzhou National Economic and Social Development Statistical Bulletin]. Hangzhou Municipal People's Government. 15 March 2024. Retrieved 17 May 2024.
- ↑ "杭州市2020年第七次人口普查主要数据公报" [Bulletin of the main data of Hangzhou's seventh census in 2020]. Hangzhou Municipal People's Government. 17 May 2021. Retrieved 17 May 2024.
- ↑ OECD Urban Policy Reviews: China 2015, OECD READ edition (in ಇಂಗ್ಲಿಷ್). OECD. ಏಪ್ರಿಲ್ 18, 2015. p. 37. doi:10.1787/9789264230040-en. ISBN 9789264230033. ISSN 2306-9341. Archived from the original on ಮಾರ್ಚ್ 27, 2017. Retrieved ಡಿಸೆಂಬರ್ 8, 2017 – via OECD iLibrary.
- ↑ Economic and Social Development Report of Hangzhou Metropolitan Circles (2007–2012) (in ಸರಳೀಕೃತ ಚೈನೀಸ್). Social Sciences Academic Press(China). ಅಕ್ಟೋಬರ್ 1, 2012. Archived from the original on ಮೇ 12, 2013. Retrieved ಫೆಬ್ರವರಿ 20, 2013.
- ↑ "Hangzhou City Profile 2017" (PDF). Jones Lang LaSalle IP, Inc. 2017. Archived (PDF) from the original on December 9, 2017. Retrieved December 8, 2017.
- ↑ "83.63岁!杭州公布最新期望寿命" [83.63 years old! Hangzhou releases latest life expectancy]. Hangzhou Municipal Health Commission. 23 May 2022. Archived from the original on 17 ಮೇ 2024. Retrieved 17 May 2024.
- ↑ "Number of 150m+ Completed Buildings – The Skyscraper Center". Skyscrapercenter.com. Archived from the original on 2 December 2017. Retrieved 5 November 2018.
- ↑ J.M. Dent (1908), "Chapter LXVIII: On the Noble and Magnificent City of Kin-Sai", The travels of Marco Polo the Venetian, p. 289, archived from the original on April 2, 2016, retrieved October 16, 2016
- ↑ Hannah Beech (September 2, 2016). "China's Hanghzou Clears Out Pests—and People—as It Prepares to Host the G20 Summit". Archived from the original on October 17, 2016. Retrieved October 16, 2016.
- ↑ "浙江省文化和旅游厅关于古籍修复技艺展示中心的介绍". 浙江省文化和旅游厅. Retrieved 2023-10-26.
ಹೆಚ್ಚಿನ ಓದಿಗೆ
[ಬದಲಾಯಿಸಿ]- Cotterell, Arthur (2007). The Imperial Capitals of China: An Inside View of the Celestial Empire. London: Pimlico. p. 304. ISBN 978-1-84595-009-5.
- Gernet, Jacques (1962). Daily Life in China on the Eve of the Mongol Invasion, 1250–1276. Stanford: Stanford University Press. ISBN 0-8047-0720-0.
{{cite book}}: ISBN / Date incompatibility (help)
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಹ್ಯಾಂಗ್ಝೌ ಸರ್ಕಾರಿ ವೆಬ್ಸೈಟ್
- ಗೂಗಲ್ ಸಾಂಸ್ಕೃತಿಕ ಸಂಸ್ಥೆಯಲ್ಲಿರುವ ಹ್ಯಾಂಗ್‌ಝೌನ ಕಲಾ ಕರಕುಶಲ ವಸ್ತು ಸಂಗ್ರಹಾಲಯ.
- EN.GOTOHZ.COM ಅನ್ನು Archived August 17, 2020[Date mismatch], ವೇಬ್ಯಾಕ್ ಮೆಷಿನ್ ನಲ್ಲಿ. . – ಹ್ಯಾಂಗ್ಝೌ ಪ್ರವಾಸೋದ್ಯಮ ಆಯೋಗದ ಅಧಿಕೃತ ವೆಬ್ಸೈಟ್
- TRAVELWESTLAKE - ಹ್ಯಾಂಗ್‌ಝೌನ ಅಧಿಕೃತ ಪ್ರಯಾಣ ಮಾರ್ಗದರ್ಶಿ
- ಟ್ರಾವೆಲ್ಝೆಜಿಯಾಂಗ್ Archived 2017-02-02 ವೇಬ್ಯಾಕ್ ಮೆಷಿನ್ ನಲ್ಲಿ. – ಝೆಜಿಯಾಂಗ್ ಪ್ರಾಂತ್ಯದ ಅಧಿಕೃತ ಪ್ರಯಾಣ ಮಾರ್ಗದರ್ಶಿ
Geographic data related to ಹ್ಯಾಂಗ್ಝೌ at OpenStreetMap
- Pages with non-numeric formatnum arguments
- Pages using infobox settlement with bad settlement type
- Pages using multiple image with auto scaled images
- Articles containing Chinese-language text
- Pages using infobox settlement with possible demonym list
- Pages using infobox settlement with image map1 but not image map
- Pages using infobox settlement with no coordinates
- Articles with Respell capitalisation issues (lowercase input)
- Articles with Respell capitalisation issues (uppercase input)
- ಸರಳೀಕೃತ ಚೀನಿ-ಭಾಷೆಯ ಪಠ್ಯ ಹೊಂದಿರುವ ಲೇಖನಗಳು
- Pages with Wu Chinese IPA
- CS1 maint: unflagged free DOI
- CS1 uses ಚೈನೀಸ್-language script (zh)
- CS1 ಚೈನೀಸ್-language sources (zh)
- CS1 ಅಮೆರಿಕನ್ ಇಂಗ್ಲಿಷ್-language sources (en-us)
- CS1 ಸರಳೀಕೃತ ಚೈನೀಸ್-language sources (zh-hans)
- CS1 errors: ISBN date
- Webarchive template warnings
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Pages needing interwikilinks
- Pages with unreviewed translations