ಹೊಸರಿತ್ತಿಯ ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಗಾಂಧೀ ಗುರುಕುಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

(೧೯೦೬, ಜೂನ್, ೬-೧೯೭೧, ರ ಮೇ, ೧೫)

'ಗಾಂಧಿ ಗುರುಕುಲ' ತಲೆಯೆತ್ತಿದ ಬಗೆ[ಬದಲಾಯಿಸಿ]

ಕರ್ನಾಟಕದ ವಾರ್ಧಾ.’ ಎಂದೆ ಹೆಸರಾದ ’ಹೊಸರಿತ್ತಿ’ಯ ಗಾಂಧಿಗುರುಕುಲ. ಕರ್ನಾಟಕದಲ್ಲಿ ವಿವಿಧ ರಾಷ್ಟ್ರೀಯ ನಾಯಕರ ಹೆಸರಿನಲ್ಲಿ ಶಾಲೆಗಳು ಇದ್ದರೂ ’ಹೊಸರಿತ್ತಿಯ ಗಾಂಧೀ ಗುರುಕುಲ’ ಅವೆಲ್ಲವುಗಳಿಗಿಂತಾ ತೀರಾ ಭಿನ್ನವಾಗಿದೆ. ಪಾಠಕ್ರಮದ ಜೊತೆಜೊತೆಗೆ, ’ಮಹಾತ್ಮಾ ಗಾಂಧೀಜಿಯವರ ತತ್ವಾದರ್ಶಗಳು’ ಹಾಗೂ ಸರಳ ಗ್ರಾಮೀಣ ಜೀವನ ಶೈಲಿಯನ್ನು ರೂಪಿಸಿಕೊಳ್ಳಲು ಅನುವಾಗುವಂತಹ ’ಸ್ವಾವಲಂಭಿ ಶಿಕ್ಷಣ’ ನೀಡುವುದು ಇಲ್ಲಿಯ ವಿಶೇಷ. ಇಲ್ಲಿನ ಕೃಷಿಕ ಕುಟುಂಬದ ವಿದ್ಯಾರ್ಥಿಗಳಿಗೆ ಮಾತ್ರ ಇಲ್ಲಿ ಪ್ರವೇಶಾವಕಾಶ. ಮಕ್ಕಳ ಎಳೆಯ ಪ್ರಾಯದಲ್ಲೇ ರಾಷ್ಟ್ರಾಭಿಮಾನ ಮೂಡುವಂತಹ ಚಟುವಟಿಕೆಗಳನ್ನು ಪ್ರೇರೇಪಿಸುವ ಗುರುಕುಲ ಪ್ರಾಯಶಃ ಕರ್ನಾಟಕದಲ್ಲಿರುವುದು ಇದೊಂದೇ.

'ಹಳ್ಳಿಕೇರಿ ಗುದ್ಲೆಪ್ಪ'ನವರ ಪ್ರೇರಣೆ[ಬದಲಾಯಿಸಿ]

'ಹೊಸರಿತ್ತಿ' ಗ್ರಾಮದಲ್ಲಿ ಜನಿಸಿದ 'ಹಳ್ಳಿಕೇರಿ ಗುದ್ಲೆಪ್ಪ' ನವರ ಗುರುಕುಲದ ಕನಸಿನ ಮೇರೆಗೆ 'ಮಹಾತ್ಮಗಾಂಧಿಯವರ ಗ್ರಾಮಗಳ ಉದ್ಧಾರದ ಪರಿಕಲ್ಪನೆ'ಯನ್ನು ಅನುಷ್ಠಾನ ಗೊಳಿಸಲು ಮಾಡಿದ ಸಾಧನೆಯೇ ಈ 'ಮಾದರಿ ಗುರುಕುಲ'ವಾಗಿ ಇಂದು ಮೈದಳೆದಿದೆ. ಗುರುಕುಲದ ನಿರ್ಮಾಣಕ್ಕೆ ಒಂದು ಯೋಜನೆಯನ್ನು ಹೆಣೆದರು. ಅದರಲ್ಲಿ ಒಕ್ಕಲುತನ, ಹೈನುಗಾರಿಕೆ, ಬಡಿಗ, ಚಮ್ಮಾರಿಕೆ, ಒಳಗೊಂಡಿದ್ದು, ಮೊದಲ ಭಾಗ, ಸಾಹಿತ್ಯ, ಸಂಗೀತ, ಚಿತ್ರಕಲೆ, ಎರಡನೆಯ ಭಾಗ, ಗೃಹ ವಿಜ್ಞಾನ, ನೂಲುವುದು, ಬಟ್ಟೆನೇಯುವುದು, ವಿನ್ಯಾಸ ಶಿಕ್ಷಣದ ಮೂರನೆಯ ಭಾಗವಾಗಿದೆ. ಒಟ್ಟಿನಲ್ಲಿ ವಿದ್ಯಾರ್ಥಿಗಳಾಗಲೀ ಶಿಕ್ಷಕರಾಗಲೀ ಯಾವುದಾದಕ್ಕೂ ಹೊರಗೆ ವಂಚಿತರಾಗದೆ, ಎಲ್ಲಾ ಸೌಲಭ್ಯಗಳೂ ಇಲ್ಲೇ ದೊರೆಯುವಂತೆ ಮಾಡಿಕೊಳ್ಳಬೇಕು. ರಾಷ್ಟ್ರದ ಅಭಿವೃದ್ಧಿಗೆ ನೆರವು ಆಗುವಂತಿರಬೇಕು. ತತ್ವ, ಆಚರಣೆ, ಗಾಂಧಿ ಆದರ್ಶಗಳು ಮಂತ್ರವಾಗಿರಬೇಕು. ಅದನ್ನು ಸಾಕಾರಗೊಳಿಸಲು ದೇಶದ ಎಲ್ಲಾವಿವಿಧ ಭಾಗಗಳ ಪ್ರಸಿದ್ಧ ವಸತಿ ಶಿಕ್ಷಣ ಸಂಸ್ಥೆಗಳಿಗೆ ಭೇಟಿನೀಡಿದರು. ಗ್ರಾಮೀಣ ಮಕ್ಕಳಿಗೆ ಉಪಯುಕ್ತವಾಗುವಂತಹ ಸ್ವಾವಲಂಭಬೆಯ ಶಿಕ್ಷಣದ ಬಗ್ಗೆ ಅಗತ್ಯ ವಿವರಗಳನ್ನು ಸಂಗ್ರಹಿಸಿದರು. ’ವಾರ್ಧಾ ಆಶ್ರಮದ ಶಿಕ್ಷಣ ತಜ್ಞ’, ’ಹಂದ್ರಾಳ್’ ರಿಂದ ’ವಿಶೇಷ ಯೋಜನೆ’ ಸಂಗ್ರಹಿಸಿ, ರೂಪಿಸಿ, ೧೯೬೮ ರಲ್ಲಿ ರಾಜ್ಯಸರ್ಕಾರಕ್ಕೆ ಸಲ್ಲಿಸಿದರು. ಆದರೆ ಸರಕಾರದ ರಾಷ್ಟ್ರೀಯ ನೀತಿ ಶಿಕ್ಷಣ ಯೋಜನೆಗೆ ಹೊಂದಾಣಿಕೆಯಾಗದಿದ್ದರಿಂದ ಅನುಮತಿ ದೊರೆಯಲಿಲ್ಲ. ಆದರೆ ಗುದ್ಲೆಪ್ಪನವರ ಅನುಯಾಯಿ 'ಗೋಪಣ್ಣ' ಹಾಗೂ ಹಲವಾರು ಸಹೃದಯಿಗಳ ಸಹಕಾರದಿಂದ ಗಾಂಧೀ ಗುರುಕುಲ ಮುಂದೆ ಆರಂಭವಾಯಿತು.

ಜನನ ಹಾಗೂ ಬಾಲ್ಯ[ಬದಲಾಯಿಸಿ]

ಹಳ್ಳಿಕೇರಿ ಗುದ್ಲೆಪ್ಪನವರು ಹಾವೇರಿ ಜಿಲ್ಲೆಯ ಹೊಸರಿತ್ತಿ ಯಲ್ಲಿ ೧೯೦೬ ಜೂನ್ ೬ ರಂದು ಜನಿಸಿದರು. ತಂದೆ ವೀರಪ್ಪ, ತಾಯಿ ವೀರಮ್ಮ. ಪ್ರಾಥಮಿಕ ಶಿಕ್ಷಣದ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ "ಧಾರವಾಡದ ಕರ್ನಾಟಕ ಹೈಸ್ಕೂಲು" ಸೇರಿಕೊಂಡರು. ಬಾಲ್ಯದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗಣಿತ ಅವರ ಪ್ರೀತಿಯ ವಿಷಯವಾಗಿತ್ತು. ಸನ್, ೧೯೨೭ ರಲ್ಲಿ, ಧಾರವಾಡದ ’ಕರ್ನಾಟಕ ಕಾಲೇಜ್’ ನಲ್ಲಿ ಅವರ ವ್ಯಾಸಂಗ ಜರುಗುತ್ತಿತ್ತು. ಅವರಿಗೆ ಪಾಠಹೇಳಿಕೊಡುತ್ತಿದ್ದ ಶಿಕ್ಷಕರು ಗುದ್ಲೆಪ್ಪನವರ ಅಪಾರ ಜ್ಞಾಪಕ ಶಕ್ತಿ ಮತ್ತು ಲೆಕ್ಕಗಳನ್ನು ಕ್ಷಣಾರ್ಧದಲ್ಲಿ ಬಿಡಿಸುವ ಚಾಕಚಕ್ಯತೆಗೆ ದಂಗಾಗಿದ್ದರು. ಅವರನ್ನು ಇಂಗ್ಲೆಂಡ್ ನ ’ಕೇಂಬ್ರಿಡ್ಜ್ ವಿಶ್ವವಿದ್ಯಾಲಯ’ ಕ್ಕೆ ಕಳಿಸಿಕೊಡಲು ಏರ್ಪಾಟನ್ನೂ ನಡೆಸಿದ್ದರು. ಅದೇ ರೀತಿ ಗುದ್ಲೆಪ್ಪನವರು ಸಿದ್ಧರಾಗಿ ಇನ್ನೇನು ವಿದೇಶಕ್ಕೆ ಹೋಗುವ ತರಾತುರಿಯಲ್ಲಿದ್ದರು. ೧೯೨೪ ರಮಯ. ಬೆಳಗಾವಿಯಲ್ಲಿ ಮಹಾತ್ಮ ಗಾಂಧಿಯವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಿತ್ತು. ಆ ಸಮಾರಂಭದಲ್ಲಿ ಅನೇಕ ಮಹಾನಾಯಕರುಗಳು ಉಪಸ್ಥಿತರಿದ್ದರು. 'ವಲ್ಲಭ್ ಭಾಯಿ ಪಟೇಲ್', 'ಜವಹರ್ ಲಾಲ್ ನೆಹರು', ಆ ಧೀಮಂತ ವ್ಯಕ್ತಿಗಳ ಮಾತುಗಳು ಗುದ್ಲೆಪ್ಪನವರ ಹೃದಯದಲ್ಲಿ ಸುಪ್ತವಾಗಿದ್ದ ರಾಷ್ಟ್ರಾಭಿಮಾನವನ್ನು ಕೆರಳಿಸಿದವು. ಅಲ್ಲಿಗೆ ಅವರ 'ಇಂಗ್ಲೆಂಡ್ ಪ್ರಯಾಣ'ದ ಮಾತು ನಿಂತೇ ಹೋಯಿತು. ಅಂದಿನಿಂದ ತಮ್ಮ ಜೀವನದ ಪರಮೋದ್ದೇಶಗಳೊಂದಾಗಿದ್ದ, ಸ್ವಾತಂತ್ರ್ಯ ಸಮರದಲ್ಲಿ ಒಬ್ಬ ನಿಷ್ಠಾವಂತ ಸೇವಕನಾಗಿ ಗಾಂಧೀಜಿಯವರ ಚಳುವಳಿಯಲ್ಲಿ ಭಾಗವಹಿಸಲು ಆರಂಭಿಸಿದರು. ’ಬಾಪೂಜಿ’ಯವರ ತತ್ವಗಳು ಅವರಿಗೆ ಬಹಳವಾಗಿ ಹಿಡಿಸಿದವು. ಬದುಕಿನುದ್ದಕ್ಕೂ ಖಾದಿ ಉಡುಪನ್ನು ಧರಿಸಿದ್ದಲ್ಲದೆ, ಅದರ ಪ್ರಚಾರವನ್ನೂ ಮಾಡಿದರು. ಗ್ರಾಮಸುಧಾರಣೆ, ಕರ್ನಾಟಕ ಏಕೀಕರಣಕ್ಕೆ ಹೋರಾಟ, ಸ್ವರಾಜ್ಯದ ಅನುಪಮ ಕನಸು, ಹೀಗೆ ಹಲವಾರು ರಾಷ್ಟ್ರಸೇವೆಯ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಯ ಒದಗಿದಾಗ ಜೈಲುವಾಸವನ್ನೂ ಅನುಭವಿಸಿದರು ೧೯೨೪ ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಯಂಸೇವಕರಾಗಿದ್ದರು. ಗಾಂಧೀಜಿಯಿಂದ ಪ್ರಭಾವಿತರಾದ ಗುದ್ಲೆಪ್ಪನವರು "ಸ್ವಾತಂತ್ರ್ಯ ಆಂದೋಲನ"ದಲ್ಲಿ ಸೇರ್ಪಡೆಯಾದರು. ೧೯೨೮ ರಿಂದ ೧೯೪೨ ರ ವರೆಗಿನ ಅವಧಿಯಲ್ಲಿ "ಹೊಸರಿತ್ತಿ"ಯಲ್ಲಿ ಕೈಗೊಂಡ ಅನೇಕ ವಿಧಾಯಕ ಕಾರ್ಯಕ್ರಮಗಳು :

  • "ಭಾರತೀಯ ತರುಣ ಸಂಘ",
  • "ಗಾಂಧೀ ಆಶ್ರಮ",
  • "ಗ್ರಾಮಿಣ ಮಕ್ಕಳಿಗಾಗಿ ಪ್ರೌಢಶಾಲೆ" ಪ್ರಾರಂಭಿಸಿದರು.

ಸತ್ಯಾಗ್ರಹದ ಸಮಯದಲ್ಲಿ ಕಾರಾಗೃಹವಾಸ[ಬದಲಾಯಿಸಿ]

  • ೧೯೩೦ರಲ್ಲಿ ದಂಡಿಯಾತ್ರೆಗೆ ಕರ್ನಾಟಕದ ಪ್ರಥಮ ಸತ್ಯಾಗ್ರಹಿಯಾಗಿ ಆಯ್ಕೆಯಾದರು.
  • ಉಪ್ಪಿನ ಸತ್ಯಾಗ್ರಹದಲ್ಲಿ ಎರಡು ಬಾರಿ ಜೈಲುವಾಸ ಅನುಭವಿಸಿದರು.
  • ೧೯೩೨ರಲ್ಲಿ ಅಸಹಕಾರ ಆಂದೋಲನದಲ್ಲಿ ಎರಡು ವರ್ಷ ಜೈಲುಶಿಕ್ಷೆಗೊಳಗಾದರು.
  • ೧೯೪೨ರಲ್ಲಿ "ಭಾರತ್ ಛೋಡೋ ಆಂದೋಳನ" ದಲ್ಲಿ, ಭಾಗವಹಿಸಿದ್ದಕ್ಕಾಗಿ, ೩ ವರ್ಷ ಜೈಲುವಾಸಕ್ಕೊಳಗಾದರು.

ಗುದ್ಲೆಪ್ಪನವರು ಕಾಂಗ್ರೆಸ್ ಪಕ್ಷದಲ್ಲಿ ನಿರ್ವಹಿಸಿದ ಪದವಿಗಳು[ಬದಲಾಯಿಸಿ]

  • ೧೯೪೬ ರಿಂದ ೧೯೬೦ ರವರೆಗೆ ನಿರಂತರ ೧೫ ವರ್ಷ "ಧಾರವಾಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು".
  • ೧೯೫೦ ರಿಂದ ೧೯೫೫ ರವರೆಗೆ "ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ"ಯಾಗಿದ್ದರು.
  • ೧೯೫೨ರಲ್ಲಿ "ಮುಂಬಯಿ ರಾಜ್ಯ ವಿಧಾನಸಭೆಗೆ ಹಾವೇರಿ ತಾಲೂಕಿನಿಂದ ಅಯ್ಕೆಯಾದರು."
  • ೧೯೫೪ರಲ್ಲಿ ಚೀನಾ ಪ್ರವಾಸವನ್ನು ಮಾಡಿದರು.
  • ೧೯೬೦ರಲ್ಲಿ "ರಾಷ್ಟ್ರೀಯ ನಿಯೋಗದ ಪ್ರತಿನಿಧಿ"ಯಾಗಿ ಇಂಗ್ಲಂಡ,ಜರ್ಮನಿ ಹಾಗು ಇಜಿಪ್ತ ದೇಶಗಳಿಗೆ ಭೆಟ್ಟಿ ನೀಡಿದರು.
  • ೧೯೫೬ ರಿಂದ ೧೯೬೧ ರವರೆಗೆ "ಕರ್ನಾಟಕ ರಾಜ್ಯ ಗಾಮೋದ್ಯೋಗ ಮಂಡಳಿಯ ಅಧ್ಯಕ್ಷರಾಗಿದ್ದರು".
  • ೧೯೬೦ ರಲ್ಲಿ "ಮೈಸೂರು ವಿಧಾನ ಪರಿಷತ್ತಿಗೆ ಆಯ್ಕೆಯಾದರು". ೧೯೬೧ ರಿಂದ ೧೯೬೬ ರವರೆಗೆ "ವಿಧಾನ ಪರಿಷತ್ ಸಭಾಪತಿ"ಯಾಗಿದ್ದರು.
  • ೧೯೬೭ ರಲ್ಲಿ "ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾದರು".
  • ೧೯೭೧ರಲ್ಲಿ "ಎರಡನೆ ಅವಧಿಗೆ ವಿಧಾನ ಪರಿಷತ್ ಸಭಾಪತಿಯಾದರು".

'ಗಾಂಧೀ ಗುರುಕುಲ ಶಾಲೆ'ಗೆ ಪ್ರವೇಶ ಪಡೆಯಲು ಅರ್ಹತೆಗಳು[ಬದಲಾಯಿಸಿ]

ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಕೃಷಿ ಕುಟುಂಬದ ಗಂಡುಮಕ್ಕಳಿಗೆ ಕೇವಲ ಈ ಗುರುಕುಲದಲ್ಲಿ ಪ್ರವೇಶ. ಐದನೆಯ ತರಗತಿಯ ಪ್ರವೇಶಕ್ಕೆ, ಮೊದಲು ಲಿಖಿತ, ಮೌಖಿಕ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಪ್ರವೇಶಾಂಕ್ಷಿಗಳು ತಮ್ಮ ಹಿಂದಿನ ತರಗತಿಗಳಲ್ಲಿ ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾಗಿರಬೇಕು. ೪೦ ವಿದ್ಯಾರ್ಥಿಗಳ ಕಕ್ಷದಲ್ಲಿ ಕನ್ನಡ ಮಾಧ್ಯಮ. ಸಾಮಾನ್ಯ ಶಿಕ್ಷಣದ ಜೊತೆಗೆ ವಿವಿಧ ಉದ್ಯೋಗ ತರಬೇತಿ. ಕೈತೋಟ, ಕೃಷಿ, ನೂಲುವುದು, ನೇಯುವುದ್ದು, ರೇಷ್ಮೆ ಕೃಷಿ, ಆಧುನಿಕ ಕೃಷಿ, ಸಾಧನೆಗಳ ಬಗ್ಗೆ ತಿಳುವಳಿಕೆ. ಇದರ ಜೊತೆಜೊತೆಗೆ, ವಿಧ್ಯಾರ್ಥಿಗಳ ದೈಹಿಕ, ಸಾಂಸ್ಕೃತಿಕ ಹಾಗೂ ಬೌದ್ಧಿಕ ವಿಕಾಸವನ್ನು ಸಾದಿಸುವುದು ನಾಗರಿಕ ಪ್ರಜ್ಞೆ ಮೂಡಿಸುವುದು ಮುಖ್ಯ ಉದ್ದೇಶ. ಸುಸಜ್ಜಿತ ಶಾಲಾ ಕಟ್ಟಡ, ವಿದ್ಯಾರ್ಥಿಗಳ ವಸತಿ ಗೃಹ, ವಿಶಾಲ ಆಟದ ಮೈದಾನ, ಪರಿಶುದ್ಧ ಪರಿಸರದಲ್ಲಿದೆ.

ದೈನಂದಿನ ದಿನಚರ್ಯೆ[ಬದಲಾಯಿಸಿ]

ಬೆಳಿಗ್ಯೆ ೫ ಗಂಟೆಗೆ ಆರಂಭ, ರಾತ್ರಿ ೧೦ ಗಂಟೆಗೆ ಕೊನೆಗೊಳ್ಳುತ್ತದೆ. ಎಲ್ಲವೂ ಶಿಕ್ಷಕ ಹಾಗೂ ಮುಖ್ಯೋಪಾಧ್ಯರ ಮೇಲ್ವಿಚಾರಣೆಯಲ್ಲಿ ವಸತಿ ಗೃಹ ಸ್ವಚ್ಛತೆ, ಸರತಿಯ ಪ್ರಕಾರ, ವಿದ್ಯಾರ್ಥಿಗಳೇ ನಿರ್ವಹಿಸುತ್ತಾರೆ. ಸುಸಜ್ಜಿತ ಗ್ರಂಥಾಲಯ, ವಾಚನಾಲಯ, ರಜೆಯದಿನಗಳಲ್ಲಿ ವಿದ್ಯಾರ್ಥಿಗಳು ರಾತ್ರಿ ಉಪಯೋಗಿಸಿಕೊಳ್ಳುತ್ತಾರೆ. ದಿನಕ್ಕೊಬ್ಬರಂತೆ ಶಿಕ್ಷಕರು ಮೇಲ್ವಿಚಾರಣೆ ಅಗತ್ಯವಿದೆ. ವಸ್ತುಭಂಡಾರವಿದೆ.ನಾಡಹಬ್ಬ ಮತ್ತು ರಾಷ್ಟ್ರೀಯ ಆವಶ್ಯಕ ವಸ್ತುಗಳನ್ನು ಪಡೆಯಲು

ಕೃಷಿ ಚಟುವಟಿಕೆ[ಬದಲಾಯಿಸಿ]

ಮನೆಗೆ ಬೇಕಾದ ತರಕಾರಿಗಳು, ಧಾನ್ಯಗಳು, ಹಾಲು, ಹಣ್ಣುಗಳು, ಗುರುಕುಲದ ಜಮೀನಿನಲ್ಲಿ ವಿದ್ಯಾರ್ಥಿಗಳೇ ಬೆಳೆಸುತ್ತಾರೆ. ಗೋಶಾಲೆಯಲ್ಲಿ ಗೋವುಗಳಿವೆ. ಹಿರಿಯ ವಿದ್ಯಾರ್ಥಿಗಳು ಅಥವಾ ಮಾಲಿಗಳು ಹಾಲು ಹಿಂಡುತ್ತಾರೆ. ಈ ಕಲಿತ ವಿದ್ಯಾರ್ಥಿಗಳಲಿ ಹಲವರು, ಮಾದರಿ ಕೃಷಿಕರಾಗಿದ್ದರೆ. ಉತ್ತಮ ಫಸಲು ತೆಗೆದಿದ್ದಾರೆ. ಹಳ್ಳಿಯಿಂದ ಬಂದ ವಿದ್ಯರ್ಥಿಗಳು ಖುಶಿಯಿಂದ ಬಿಡುವಿನ ವೇಳೆಯಲ್ಲಿಜಮೀನುಗಳಿಗೆ ಹಾಜರಾಗುತ್ತಾರೆ. ಗೋಶಾಲೆಯಿಂದ ಗಂಜಲ ಹರಿದು, ತೋಟದ ಮೂಲೆಯಲ್ಲಿನ ಸ್ಲರಿಯಾಗಿ ಮಾರ್ಪಟ್ಟಿವೆ. ಕೃಷಿ ತ್ಯಾಜ್ಯಗಳು ಒಂದು ಗುಂಡಿಯಲ್ಲಿ ಹಾಕಿ ಎರೆ ಗೊಬ್ಬರ ವಾಗಿಸಿ, ಜಮೀನಿಗೆ ಉಪಯೋಗವಾಗುತ್ತದೆ. ಹಿರಿಯ ವಿದ್ಯಾರ್ಥಿಗಳು ಧಾನ್ಯದ ರಾಶಿ, ಚಾಕಿ ಸಾಗಾಣಿಕೆ ನೇಕಾರಿಕೆ, ನಡೆಸಿದರೆ, ಕಿರಿಯರು, ಕಳೆ ತೆಗೆಯುವುದು, ತರಕಾರಿ ಬಿಡಿಸುವುದು, ರೇಷ್ಮೆ ಹುಳುಗಳಿಗೆ ಎಲೆ ಸಂಗ್ರಹಿಸುವುದು, ಗೋಶಾಲೆಯ ಕಸ ಹೊಡೆಯುವುದು, ಇಂತಹ ಕೆಲಸ ಮಾಡುತ್ತಾರೆ.

'ಬಹುಮುಖ ಉದ್ದೇಶಗಳ ಶಾಲೆಯಾಗಿ'ಯೂ 'ಉತ್ತಮ-ಫಲಿತಾಂಷಕ್ಕೆ ಹೆಸರುವಾಸಿಯಾಗಿದೆ'[ಬದಲಾಯಿಸಿ]

ಸ್ಥಾಪನೆಯಾದಾಗಿನಿಂದ ಇದುವರೆವಿಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರತಿವರ್ಷವೂ ನೂರಕ್ಕೆ ನೂರರರಷ್ಟು ಫಲಿತಾಂಷ ಗಳಿಸುತ್ತಾ ಬಂದಿದೆ. ಇಲ್ಲಿನ ವಿದ್ಯಾರ್ಥಿಗಳು ಕ್ರೀಡಾಕೂಟಗಳಲ್ಲಿ ಭಾಗವಹಿಸುವ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಒಳ್ಳೆಯ ಹೆಸರನ್ನು ಸಂಪಾದಿಸಿದ್ದಾರೆ. ಪರಿಸರದಲ್ಲಿ ಖಾದಿಯ ವ್ಯಾಪಕ

ಖಾದಿ ಬಟ್ಟೆಯ ಸಮರ್ಥ ಬಳಕೆ[ಬದಲಾಯಿಸಿ]

ಇಲ್ಲಿನ ವಿದ್ಯಾರ್ಥಿಗಳು ಶಿಕ್ಷಕರು, ಸಿಬ್ಬಂದಿವರ್ಗ, ಆಡಳಿತ ಮಂಡಳಿ, ಖಾದಿಬಟ್ಟೆಯನ್ನೇ ಬಳಸುತ್ತಾರೆ. ೩ ಜನ ದರ್ಜಿಗಳಿದ್ದು ಎಲ್ಲರ ಆವಶ್ಯಕತೆಗಳನ್ನು ಪೂರೈಸುತ್ತಾರೆ. ರಾಜ್ಯ ಖಾದಿ ಉದ್ಯಮ ನಿಗಮ ರಿಯಾಯತಿ ದರದಲ್ಲಿ ಬಟ್ಟೆಯನ್ನು ನೀಡುತ್ತದೆ. ಮಾದರಿ ವಿದ್ಯಾಲಯ.

ಸನ್, ೧೯೫೯ ರ ಸಮಯ[ಬದಲಾಯಿಸಿ]

ಜಿ. ಆರ್. ಕುಲಕರ್ಣಿ’ (ಗೋಪಣ್ಣ) ಎಂಬ ಪ್ರತಿಭಾವಂತ ಯುವಕ, ತನ್ನ ಹಲವಾರು ಕನಸುಗಳನ್ನು ತನ್ನ ತಲೆಯ ತುಂಬಾ ಇಟ್ಟುಕೊಂಡಿದ್ದನು. ಅದರಲ್ಲಿ ಸ್ವಾರಾಜ್ಯದ ಕಲ್ಪನೆ ಅತ್ಯಂತ ಪ್ರಧಾನವಾಗಿತ್ತು. ಗ್ರಾಮ ಸ್ವರಾಜ್ಯದ ಕನಸನ್ನು ತುಂಬಿಕೊಂಡ ಗುದ್ಲೆಪ್ಪನವರು, "ಗೋಪಣ್ಣ ನಿಮ್ಮ ಪದವಿಯ ಉಪಯೋಗ ಯಾವುದೋ ನಗರಕ್ಕೆ ಸೀಮಿತವಾಗಿರದೆ, ಅದನ್ನು ನಿನ್ನ ದೇಶದ ಜನರೊಂದಿಗೆ ಹಂಚಿಕೊಳ್ಳಬಾರದೇಕೆ" ಎಂದು ಪ್ರಶ್ನಿಸಿದರು. "ಪದವಿ ಪಡೆದ ತಕ್ಷಣ ನಿನ್ನ ಈ ಗ್ರಾಮಕೆ ಬಾ, ನಾವಿಬ್ಬರೂ ಕೂಡಿ ಒಂದು ಗುರುಕುಲ ವನ್ನು ತೆರೆಯೋಣ" ; "ನೀನು ಮಕ್ಕಳಿಗೆ ಕಲಿಸು." ಎಂದಿದ್ದರು. ಅದರಂತೆ ಗುದ್ಲೆಪ್ಪನವರ ಬಗೆಗೆ ಅತ್ಯಂತ ಅಭಿಮಾನಿಯಾಗಿದ್ದ ಗೋಪಣ್ಣನವರು, ತಮ್ಮ ಪರೀಕ್ಷೆ ಮುಗಿದಕೂಡಲೇ 'ಪದವಿ-ಸರ್ಟಿಫಿಕೇಟ್’ ಕೈಯಲ್ಲಿ ಹಿಡಿದು, 'ಹೊಸರಿತ್ತಿ'ಗೆ ಆಗಮಿಸಿದರು. ಅಂದಿನಿಂದ ಅವರ ಜೀವನವೆಲ್ಲಾ ಗುದ್ಲೆಪ್ಪನವರ ಕನಸನ್ನು ನನಸಾಗಿಸುವ ಕಾರ್ಯವೊಂದೇ ಅವರ ಜೀವನದ ಪ್ರಮುಖ ಮುದ್ದೆಯಾಯಿತು.

ಜಿ. ಆರ್. ಕುಲಕರ್ಣಿ’ (ಗೋಪಣ್ಣ) ಹಾಗೂ ಗುದ್ಲೆಪ್ಪನವರು ಸೇರಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು[ಬದಲಾಯಿಸಿ]

ಹೀಗೆ 'ರಾಷ್ಟ್ರೀಯ ಗುರುಕುಲ'ವೊಂದು ಸಣ್ಣಪ್ರಮಾಣದಲ್ಲಿ ಸನ್, ೧೯೬೦ ರಲ್ಲಿ ಶುರುವಾಗಿಯೇಬಿಟ್ಟಿತು. ಹಾಗೆ ಪ್ರಾರಂಭವಾದ ಗುರುಕುಲದ ಗುರಿಗಳು ಯೋಜನೆಗಳು ಮತ್ತು ಅವನ್ನು ಸಾಧಿಸಿ ಪ್ರಗತಿಯತ್ತ ಕೊಂಡೊಯ್ಯುವ ಮಾತುಗಳೇ ಗೋಪಣ್ಣನವರ ಮೈಮನಗಳಲ್ಲಿ ತುಂಬಿದ್ದವು. ತಮ್ಮ ವೈಯಕ್ತಿಕ ಜೀವನದ ಆವಶ್ಯಕತೆಗಳನ್ನೂ ಅವರು ಬದಿಗಿಟ್ಟು ರಾಷ್ಟ್ರಸೇವೆಯ ಕೈಂಕರ್ಯವನ್ನೆ ಪ್ರಧಾನವಾಗಿ ಕೈಗೆತ್ತಿಕೊಂಡರು. ಈ ತಮ್ಮ ಜವಾಬ್ದಾರಿಯುತವಾದ ಮಾರ್ಗದಲ್ಲಿ ವಿವಾಹವಾದರೆ ಕುಂದು ಕೊರತೆಗಳನ್ನು ಎದುರಿಸಬೇಕಾಗಬಹುದೆಂದು ತಮ್ಮ ವಿವಾಹವನ್ನು ಅವರು ಜೀವನ ಪೂರ್ತಿ ಅವಿವಾಹಿತರಾಗಿಯೇ ಮುಂದು ವರೆಯುವ ನಿರ್ಧಾರ ಕೈಗೊಂಡರು. ೧೯೮೪ ಅಕ್ಟೋಬರ್ ೨ ರಂದು, 'ಗಾಂಧಿಜಯಂತಿ'ಯ ಶುಭದಿನದಂದು, 'ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಗಾಂಧೀ ಗುರುಕುಲ’ ಶುರುವಾಯಿತು. ಆ ಸಮಯದಲ್ಲಿದ ಮುಖ್ಯಮಂತ್ರಿ 'ಡಿ. ದೇವರಾಜ ಅರಸ್' ರವರು, ೪ ಲಕ್ಷರೂ ಸಹಾಯಧನವನ್ನು ಎರಡು ಕಂತುಗಳಲ್ಲಿ ನೀಡಿದ್ದರು. ಗೋಪಣ್ಣನವರು, ೧೯೮೩ ರಲ್ಲೇ ಗುರುಕುಲದ ಸಹಶಿಕ್ಷಕ, ಮುಖೋಪಾಧ್ಯರಾಗಿ, ತಮ್ಮ ೫೮ ನೆಯ ವಯಸ್ಸಿನಲ್ಲಿ ನಿವೃತ್ತರಾದರು. ತಾವುಗಳಿಸಿದ ವೇತನದ ಹಣವನ್ನೆಲ್ಲಾ ಗುರುಕುಲದ ಕಾರ್ಯಕ್ಕೆ ಧಾರೆ ಎರೆದಿದ್ದಾರೆ. ತಮ್ಮ ೮೦ ರ ಇಳಿವಯಸ್ಸಿನಲ್ಲೂ ಗುರುಕುಲದ ಸನ್ನಿಹದಲ್ಲೇ ಇದ್ದು ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದರು.

'ಹೊಸರಿತ್ತಿ' ಗ್ರಾಮ[ಬದಲಾಯಿಸಿ]

ಹಾವೇರಿ ಜಿಲ್ಲೆಯ ಒಂದು ಗ್ರಾಮ. ಇಲ್ಲಿ ಹರಿಯುವ 'ವರದಾನದಿ', ಕೃಪೆಯಲ್ಲಿ ಹತ್ತಿ ಬೆಳೆ ಬೆಳೆಯುತ್ತದೆ. ಬಿಳಿಜೋಳ, ಮೆಣಸಿನಕಾಯಿ, ಗ್ರಾಮದ ಅಂಚಿನಲ್ಲಿ ೩೨ ಎಕರೆ ವಿಶಾಲವಾದ ಕಟ್ಟಡ ಹೊಂದಿರುವ 'ಗುರುಕುಲ'. ಅದರ ಮುಂಭಾಗದಲ್ಲಿ ಗಾಂಧಿ ಅನುಯಾಯಿ, 'ಹಳ್ಳಿಕೇರಿ ಗುದ್ಲೆಪ್ಪನವರ ಕಂಚಿನ ಪ್ರತಿಮೆ'. ಗುರುಕುಲದ ಈಗಿನ ಕಾರ್ಯದರ್ಶಿ, 'ಗೋಪಾಲ್ ರಾವ್ ಕುಲಕರ್ಣಿ', ಅಧ್ಯಕ್ಷರು, 'ಡಾ. ದೀನಬಂಧು ಹಳ್ಳಿಕೇರಿ'.

'ಶಾಲಾಮಕ್ಕಳಿಗೆ ಅಚ್ಚುಕಟ್ಟಿನ ದಿನಚರಿ'[ಬದಲಾಯಿಸಿ]

ಇಲ್ಲಿ ಕಲಿಯುವ ಯುವ ವಿದ್ಯಾರ್ಥಿಗಳು (೫ ರಿಂದ ೧೦ ನೆಯ ತರಗತಿಯಲ್ಲಿ) ಸರಳಬದುಕು, ಸ್ವಾವಲಂಭನೆ, ಗ್ರಾಮೀಣ ಸಂಸ್ಕೃತಿಯ ಬಗ್ಗೆ ಕಾಳಜಿ, ಮರೆಯುತ್ತಿರುವ ಗುಡಿ ಕೈಗಾರಿಕೆಗಳ ಬಗ್ಗೆ ಪರಿಣತಿ, ಖಾದಿ ಉಡುಗೆ ತೊಡಿಗೆ ಗಾಂಧೀಜಿಯ ಗ್ರಾಮ ಸ್ವರಾಜ್ಯದಗುರಿಗಳು, ನಿರ್ವ್ಯಸನತೆ, ಅಷ್ಠಾಂಗ ನಮಸ್ಕಾರ, ವಿವಿಧ ಯೋಗಾಸನಗಳು, ದೇವತಾ ಪ್ರಾರ್ಥನೆ, ರಾಷ್ಟ್ರಗೀತೆ, ಶ್ರಮದಾನ, ಸಹಕಾರ, 'ಆದರ್ಶ ಆಶ್ರಮದ ಅಚ್ಚುಕಟ್ಟಿನ ದಿನಚರಿಗಳು', ಶಿಕ್ಷಣ ಎಳೆಯವಯಸ್ಸಿನಲ್ಲೇ 'ರಾಷ್ಟ್ರಾಭಿಮಾನ'ವನ್ನು ಮೂಡಿಸಲು ಸಹಾಯಯಕವಾಗುತ್ತವೆ.

'ಗುದ್ಲೆಪ್ಪನವರ ಸಮಾಧಿ'[ಬದಲಾಯಿಸಿ]

ವೆಲ್ಲೂರ್’ ನ ಆಸ್ಪತ್ರೆಯಲ್ಲಿ ತಮ್ಮ ಕೊನೆಯ ದಿನಗಳನ್ನು ಕಳೆಯುತ್ತಿದ್ದಾಗ, ಕರ್ನಾಟಕದ ಆಗಿನ ರಾಜ್ಯಪಾಲ, ’ಧರ್ಮವೀರ’ರಿಗೆ ಪತ್ರಬರೆದು ಗುರುಕುಲದ ನಿರ್ಮಾಣದ ತಮ್ಮ ಕನಸನ್ನು ಸಾಕಾರಗೊಳ್ಳಲು ಸಹಾಯಮಾಡುವಂತೆ ಕೇಳಿಕೊಂಡಿದ್ದರು. ಆಶ್ವಾಸನೆಯ ನೀಡಿದ್ದ ರಾಜ್ಯಪಾಲರ ಸಹಾಯ ಬರುವುದರೊಳಗೇ, ೧೯೭೧, ರ ಮೇ, ೧೫ ರಂದು ’ಗುದ್ಲೆಪ್ಪ’ನವರು ಇಹಲೋಕದಿಂದ ವಿದಾಯಹೇಳಿದ್ದರು. ಗುರುಕುಲದ ಮೈದಾನದಲ್ಲೇ ಎಡಬದಿಯಲ್ಲಿ 'ಗುದ್ಲೆಪ್ಪ' ಮತ್ತು ಅವರ ಧರ್ಮಪತ್ನಿ ಗಂಗಮ್ಮನವರ ಸಮಾಧಿಯನ್ನು ನಿರ್ಮಿಸಿದ್ದಾರೆ