ಹೊಸತು ತಿಂಗಳ ಪತ್ರಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೊಸತು (ತಿಂಗಳ ಪತ್ರಿಕೆ)
ಪ್ರಕಟಣೆ: ಬೆಂಗಳೂರು
ಈಗಿನ ಸಂಪಾದಕರು: ಡಾ. ಸಿದ್ದನಗೌಡ ಪಾಟೀಲ
ಜಾಲತಾಣ: http://www.navakarnataka.com
ಇವನ್ನೂ ನೋಡಿ ವರ್ಗ:ಕನ್ನಡ ಪತ್ರಿಕೆಗಳು

ಹೊಸತು Archived 2016-03-03 ವೇಬ್ಯಾಕ್ ಮೆಷಿನ್ ನಲ್ಲಿ. : 'ನೆಮ್ಮದಿಯ ನಾಳೆ ನಮ್ಮದು' ಎಂಬ ಆಶಯದೊಂದಿಗೆ ನವಕರ್ನಾಟಕ ಪ್ರಕಾಶನ ಸಂಸ್ಥೆ ಪ್ರಕಟಿಸುತ್ತಿರುವ ತಿಂಗಳ ಪತ್ರಿಕೆ. ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾಗುತ್ತಿರುವ 'ಹೊಸತು' ತಿಂಗಳ ಪತ್ರಿಕೆ ಅದರ ಮುಖ ಪುಟದಲ್ಲಿ 'ನೆಮ್ಮದಿಯ ನಾಳೆ ನಮ್ಮದು' ಎಂಬ ಘೋಷವಾಕ್ಯದಿಂದ ಪ್ರಕಟವಾಗುತ್ತಿದೆ. ಕಳೆದ ೧೭ ವರ್ಷಗಳಿಂದ ಸಾಮಾಜಿಕ, ರಾಜಕೀಯ, ಆರ್ಥಿಕ, ಕೃಷಿ, ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ತತ್ವಜ್ಞಾನಕ್ಕೆ ಸಂಬಂಧ ಪಟ್ಟ ಹಲವಾರು ವಿಷಯಗಳ ಕುರಿತು ಉನ್ನತ ಮಟ್ಟದ ಲೇಖನಗಳನ್ನು ಪ್ರಕಟಿಸುತ್ತಿದೆ. ಕರ್ನಾಟಕದ ವೈಚಾರಿಕ ವಲಯದಲ್ಲಿ ಹೆಚ್ಚಿನ ಸಂಖೆಯಲ್ಲಿ ಪ್ರಸಾರದಲ್ಲಿರುವ ಈ ಪತ್ರಿಕೆ ಜನಪರವಾದ ನಿಲುವುಗಳನ್ನು ಹೊಂದಿದೆ. ನಾಡಿನ ಅಭಿವೃದ್ದಿಗಾಗಿ ವಿವಿಧ ಕ್ಷೇತ್ರಗಳಲ್ಲಿ ಶ್ರಮಿಸಿದ ಮಹನಿಯರ ಕುರಿತು., ಪ್ರಗತಿಪರ ಚಿಂತನೆಯುಳ್ಳ ವಿಶ್ವದ ಹಲವಾರು ವ್ಯಕ್ತಿಗಳ ಕುರಿತು ಸಂದರ್ಶನ, ಲೇಖನ ಈ ಪತ್ರಿಕೆಯ ಮಹತ್ವದ ಅಂಶಗಳು . ಕರ್ನಾಟಕವನ್ನು ಒಳಗೊಂಡು ವಿಶ್ವದಾದ್ಯಂತ ಜರಗುವ ಮಹತ್ವದ ವಿದ್ಯಮಾನಗಳನ್ನು ಜನಪರ ನಿಲುವಿನಿಂದ ವಿಶ್ಲೇಷಿಸುವ ಹಲವರು ಲೇಖನಗಳು ಹೊಸತು ಪತ್ರಿಕೆಯು ಮಹತ್ವದ ಭಾಗ. ಕವಿತೆ, ವಿಮರ್ಶೆ, ಮೌಲಿಕ ಪುಸ್ತಕಗಳ ವಿಮರ್ಶೆ ಹೇಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಕೊಡುಗೆ ನೀಡುತ್ತಿದೆ. ಚಿತ್ರ ಕಲೆ, ವ್ಯಂಗ್ಯ ಚಿತ್ರಗಳನ್ನು ಪ್ರಕಟಿಸುವುದರ ಮೂಲಕ ಕಲಾವಿದರಿಗೆ ಉತ್ತಮ ವೇದಿಕೆ ಒದಗಿಸಿದೆ. ಪ್ರತಿ ತಿಂಗಳು ೬೩ ಪುಟಗಳಲ್ಲಿ ಬರುವ ಈ ಪತ್ರಿಕೆ ಪ್ರತಿ ಹೊಸವರ್ಷದ ಮೊದಲ ತಿಂಗಳು ಸುಮಾರು ೨೫೦ ಪುಟಗಳ (ಜನವರಿ) ವಿಶೇಷ ಸಂಚಿಕೆಯನ್ನು ಪ್ರಕಟಿಸುತ್ತದೆ. ಈ ವಿಶೇಷ ಸಂಚಿಕೆಗಳು ಬೌಥಿಕ ಹಸಿವಿನ ಓದುಗರಿಗೆ ಸಂಗ್ರಹಯೋಗ್ಯವಾಗಿದೆ.

‘ಹೊಸತು’ ತಿಂಗಳ ಪತ್ರಿಕೆಯ ಕಿರು ಪರಿಚಯ[ಬದಲಾಯಿಸಿ]

ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾಗುತ್ತಿರುವ ‘ಹೊಸತು’ ತಿಂಗಳ ಪತ್ರಿಕೆ, ‘ನೆಮ್ಮದಿಯ ನಾಳೆ ನಮ್ಮದು’ ಎಂಬ ಘೋಷವಾಕ್ಯದೊಂದಿಗೆ ೧೯೯೯ರಿಂದ ಪ್ರಕಟವಾಗುತ್ತಿದೆ. ಸಾಮಾಜಿಕ, ರಾಜಕೀಯ, ಆರ್ಥಿಕ, ಕೃಷಿ, ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ವಿಜ್ಞಾನ, ತತ್ವಜ್ಞಾನಕ್ಕೆ ಸಂಬಂಧಪಟ್ಟ ಹಾಗೂ ಇತರೆ ಹಲವಾರು ವಿಷಯಗಳ ಕುರಿತು ಉನ್ನತ ಮಟ್ಟದ ಲೇಖನಗಳನ್ನು ಇದು ಒಳಗೊಂಡಿರುತ್ತದೆ. ಕರ್ನಾಟಕದ ವೈಚಾರಿಕ ಮತ್ತು ಪ್ರಗತಿಪರ ವಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಸಾರದಲ್ಲಿರುವ ಈ ಪತ್ರಿಕೆ ಜನಪರವಾದ ನಿಲುವನ್ನು ಹೊಂದಿದೆ. ನಾಡಿನ ಅಭಿವೃದ್ಧಿಗಾಗಿ ವಿವಿಧ ಕ್ಷೇತ್ರಗಳಲ್ಲಿ ಶ್ರಮಿಸಿದ ಮಹನೀಯರ ಕುರಿತು, ಪ್ರಗತಿಪರ ಚಿಂತನೆಯುಳ್ಳ ವಿಶ್ವದ ಹಲವಾರು ವ್ಯಕ್ತಿಗಳ ಕುರಿತು ಸಂದರ್ಶನ, ಲೇಖನ ಈ ಪತ್ರಿಕೆಯ ಮಹತ್ವದ ಅಂಶಗಳು. ಕರ್ನಾಟಕವನ್ನೂ ಒಳಗೊಂಡಂತೆ ವಿಶ್ವದಾದ್ಯಂತ ಜರುಗುವ ಮಹತ್ವದ ವಿದ್ಯಮಾನಗಳನ್ನು ಜನಪರ ನಿಲುವಿನಿಂದ ವಿಶ್ಲೇಷಿಸುವ ಲೇಖನಗಳು ‘ಹೊಸತು’ ಪತ್ರಿಕೆಯ ಮಹತ್ವದ ಭಾಗ. ಕವಿತೆ, ಕತೆ, ವಿಮರ್ಶೆ, ಹೊಸ ಮೌಲಿಕ ಪುಸ್ತಕಗಳ ಪರಿಚಯ ಹೀಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಕೊಡುಗೆ ನೀಡುತ್ತಿದೆ. ಚಿತ್ರಕಲೆ, ವ್ಯಂಗ್ಯಚಿತ್ರಗಳನ್ನು ಪ್ರಕಟಿಸುವುದರ ಮೂಲಕ ಕಲಾವಿದರಿಗೆ ಉತ್ತಮ ವೇದಿಕೆ ಒದಗಿಸಿದೆ. ಪ್ರತಿ ತಿಂಗಳು ೬೪ ಪುಟಗಳಲ್ಲಿ ಬರುವ ಈ ಪತ್ರಿಕೆ ಪ್ರತಿ ಹೊಸ ವರ್ಷದ ಮೊದಲ ತಿಂಗಳು (ಜನವರಿ) ಸುಮಾರು ೨೫೦ ಪುಟಗಳ ವಿಶೇಷ ಸಂಚಿಕೆಯನ್ನು ಪ್ರಕಟಿಸುತ್ತಿದೆ. ಈ ವಿಶೇಷ ಸಂಚಿಕೆಗಳು ಬೌದ್ಧಿಕ ಹಸಿವುಳ್ಳ ಓದುಗರಿಗೆ ಸಂಗ್ರಹ ಯೋಗ್ಯವಾಗಿವೆ.

ನಾಡಿನ ಹೆಸರಾಂತ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಎಚ್.ಎಸ್. ದೊರೆಸ್ವಾಮಿಯವರು ‘ಹೊಸತು’ವಿನ ಆಗಸ್ಟ್ ೧೯೯೯ರ ಮೊದಲ ಸಂಚಿಕೆಯನ್ನು ಬಿಡುಗಡೆ ಮಾಡಿದ್ದರು. ಡಾ|| ಜಿ.ಆರ್ ಎಂದೇ ಪ್ರಖ್ಯಾತರಾಗಿರುವ ಚಿಂತಕ, ಮೇಧಾವಿ, ಹಲವು ಭಾಷೆಗಳನ್ನು ತಿಳಿದಿರುವ ಹೆಸರಾಂತ ವಿದ್ವಾಂಸರು, ಪ್ರಪಂಚಾದ್ಯಂತ ಶಿಷ್ಯರನ್ನು ಹೊಂದಿರುವ ಪ್ರೀತಿಯ ಮೇಷ್ಟ್ರು ಡಾ|| ಜಿ. ರಾಮಕೃಷ್ಣ ಅವರು ಮೊದಲ ೧೨ ವರುಷಗಳ ಕಾಲ ಸಂಪಾದಕರಾಗಿದ್ದರು. ಈಗ ಗೌರವ ಸಂಪಾದಕರಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ಈಗ ಸಂಪಾದಕರಾಗಿ ‘ಹೊಸತು’ ಸಂಚಿಕೆಯನ್ನು ಮುನ್ನಡೆಸುತ್ತಿರುವವರು ಸಾಮಾಜಿಕ ಹೋರಾಟಗಾರರೂ, ಜನಪರ ಚಳವಳಿಗಳ ನಾಯಕರೂ ಆದ ಡಾ|| ಸಿದ್ದನ ಗೌಡ ಪಾಟೀಲರು.

ಹೊಸತು ಬಿಡುಗಡೆ ಸಮಾರಂಭ[ಬದಲಾಯಿಸಿ]

ಮೊದಲ ಸಂಚಿಕೆಯ ಬಿಡುಗಡೆ ಸಮಾರಂಭ ದಿನಾಂಕ ೩೧, ೭, ೧೯೯೯, ಶನಿವಾರ ಸಂಜೆ ೫.೩೦ಕ್ಕೆ ಮಿಥಿಕ್ ಸೊಸೈಟಿ ಸಭಾಂಗಣದಲ್ಲಿ ಶ್ರೀ ಎಚ್ ಎಸ್ ದೂರೆಸ್ವಾಮಿ ಅವರಿಂದ ಬಿಡುಗಡೆಯಾಯಿತು.

ಗೌರವ ಸಂಪಾದಕ[ಬದಲಾಯಿಸಿ]

ಡಾ. ಜಿ.ರಾಮಕೃಷ್ಣ

ಹೊಸತು Archived 2015-10-23 ವೇಬ್ಯಾಕ್ ಮೆಷಿನ್ ನಲ್ಲಿ. ತಿಂಗಳ ಪತ್ರಿಕೆಯು ೧೯೯೯ರ ಆಗಸ್ಟ್ ತಿಂಗಳಿನಲ್ಲಿ ಪ್ರಾರಂಭಗೊಂಡಿದ್ದು ಅದರ ಸಂಪಾದಕರಾಗಿ ೨೦೧೨ರ ಏಪ್ರಿಲ್ ವರೆಗೂ ಕಾರ್ಯನಿರ್ವಹಿಸಿದ್ದು ೨೦೧೨ರ ಮೇಯಿಂದ ಗೌರವ ಸಂಪಾದಕರಾಗಿ ಮುಂದುವರೆಸಿದ್ದಾರೆ.

ಡಾ. ಜಿ. ರಾಮಕೃಷ್ಣ ಜನಪರ ಚಿಂತನೆಯ ಮೂಲಕ ಜನಸಮುದಾಯದ ಚಳುವಳಿಗಳಿಗೆ ಉಸಿರಾದವರು. ಜನಪರ ಹೋರಾಟಗಳಿಗೆ ತಾತ್ವಿಕ ಸ್ಪಷ್ಡತೆಯ ಮಾರ್ಗದರ್ಶನವನ್ನು ನೀಡುತ್ತಲೇ ದನಿಯಿಲ್ಲದವರಿಗೆ ದನಿಯಾದವರು. ಬಡವರ, ದಲಿತರ, ಮಹಿಳೆಯರ, ಅಲ್ಪಸಂಖ್ಯಾತರ ಹೋರಾಟಗಳಿಗೆ ಜೊತೆಯಾಗಿ ನಿಜವಾದ ಅರ್ಥದಲ್ಲಿ 'ಸಂಗಾತಿ' ಯೆನಿಸಿ ಕೊಂಡರು. ಅಪಾರ ಪಾಂಡಿತ್ಯ, ಕಠಿಣ ಶ್ರಮ ಮತ್ತು ವಿನಯ ಮತ್ತು ಹೃದಯವಂತಿಕೆಯ ಲಕ್ಷಣಗಳನ್ನುಳ್ಳ ಅಪರೂಪದ ಮಾರ್ಕ್ಸ್ ವಾದಿ ಚಿಂತಕರಾಗಿ ಎಡಪಂಥೀಯ ಆಲೋಚನೆಗೆ ಗಾಂಭೀರ್ಯ ಒದಗಿಸಿದವರು.

ಕೃಪೆ : ಸೌಜನ್ಯ ಸೌಹಾರ್ದ ಸಂಚಿಕೆ

ಸಂಪಾದಕ[ಬದಲಾಯಿಸಿ]

ಡಾ. ಸಿದ್ದನಗೌಡ ಪಾಟೀಲ

೨೦೧೨ ಮೇ ಸಂಚಿಕೆಯಿಂದ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಸಹಸಂಪಾದಕರು[ಬದಲಾಯಿಸಿ]

  • ಅಬ್ದುಲ್ ರೆಹಮಾನ್ ಪಾಷ .ಎಂ
  • ಇಂದಿರಾ ಕುಮಾರಿ
  • ಸಿ.ಆರ್. ಕೃಷ್ಣರಾವ್
  • ಡಾ. ಎನ್. ಗಾಯತ್ರಿ
  • ಎಸ್. ಸುರೇಂದ್ರ

ಸಮಾಲೋಚಕ ಮಂಡಲಿ[ಬದಲಾಯಿಸಿ]

ಪ್ರಶಸ್ತಿ[ಬದಲಾಯಿಸಿ]

ಸಂದೇಶ ಪ್ರಶಸ್ತಿ ೨೦೦೭, ಮಂಗಳೂರು[ಶಾಶ್ವತವಾಗಿ ಮಡಿದ ಕೊಂಡಿ]

ಹೊಸತು ಸಂಚಿಕೆ[ಬದಲಾಯಿಸಿ]

ಹಿಂದಿನ ತಿಂಗಳ ಸಂಚಿಕೆ ಓದಬೇಕೆಂದರೆ ಕ್ಲಿಕ್ ಮಾಡಿ

ಹೊರಗಿನ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

, https://groups.yahoo.com/neo/groups/MangaloreanCatholics/conversations/messages/5509[ಶಾಶ್ವತವಾಗಿ ಮಡಿದ ಕೊಂಡಿ]