ವಿಷಯಕ್ಕೆ ಹೋಗು

ಹೇಮಂಗ ಬಿಸ್ವಾಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೇಮಂಗ ಬಿಸ್ವಾಸ್
೧೯೮೦ ರ ದಶಕದಲ್ಲಿ ಬಿಸ್ವಾಸ್‌ರವರು.
ಜನನ(೧೯೧೨-೧೨-೧೪)೧೪ ಡಿಸೆಂಬರ್ ೧೯೧೨
ಸಾವು22 ನವೆಂಬರ್ 1987(1987-11-22)
ರಾಷ್ಟ್ರೀಯತೆಭಾರತೀಯ
ವೃತ್ತಿಸಂಗೀತಗಾರ, ಲೇಖಕ, ರಾಜಕೀಯ ಕಾರ್ಯಕರ್ತ
Spouseರಾನು ದತ್ತಾ[]
ಮಕ್ಕಳು

ಹೇಮಂಗ ಬಿಸ್ವಾಸ್ (೧೪ ಡಿಸೆಂಬರ್ ೧೯೧೨ - ೨೨ ನವೆಂಬರ್ ೧೯೮೭) ಇವರು ಭಾರತೀಯ ಗಾಯಕ, ಸಂಯೋಜಕ, ಲೇಖಕ ಮತ್ತು ರಾಜಕೀಯ ಕಾರ್ಯಕರ್ತರಾಗಿದ್ದು, ಬಂಗಾಳಿ ಮತ್ತು ಅಸ್ಸಾಮಿ ಭಾಷೆಯ ಸಾಹಿತ್ಯಗಳಲ್ಲಿ ಹೆಸರುವಾಸಿಯಾಗಿದ್ದಾರೆ.[]

ಆರಂಭಿಕ ಜೀವನ

[ಬದಲಾಯಿಸಿ]

ಬಿಸ್ವಾಸ್‌ರವರು ೧೯೧೨ ರ ಡಿಸೆಂಬರ್ ೧೪ ರಂದು ಬ್ರಿಟಿಷ್ ಭಾರತದ (ಈಗ ಬಾಂಗ್ಲಾದೇಶದಲ್ಲಿದೆ) ಸಿಲ್ಹೆಟ್‌ನ ಹಬಿಗಂಜ್‌ನ ಬಂಗಾಳಿ ಹಿಂದೂ ಕುಟುಂಬದಲ್ಲಿ ಹರಕುಮಾರ್ ಮತ್ತು ಸರೋಜಿನಿ ಬಿಸ್ವಾಸ್ ದಂಪತಿಗೆ ಜನಿಸಿದರು. ಅವರು ಹಬಿಗಂಜ್‌ನ ಮಧ್ಯಮ ಇಂಗ್ಲಿಷ್ ಶಾಲೆಗೆ ಹೋದರು. ಅವರು ೧೯೨೫ ರಿಂದ ೧೯೨೭ ರವರೆಗೆ ದಿಬ್ರುಗಢದ ಜಾರ್ಜ್ ಇನ್ಸ್ಟಿಟ್ಯೂಷನ್‌ನಲ್ಲಿ ಅಧ್ಯಯನ ಮಾಡಿದರು. ಆಗ, ನಿಲ್ಮನಿ ಫುಕಾನ್ ಅದರ ಮುಖ್ಯೋಪಾಧ್ಯಾಯರಾಗಿದ್ದರು. ಅಲ್ಲಿ, ಅವರು ಅಸ್ಸಾಮಿ ಸಂಸ್ಕೃತಿಯಲ್ಲಿ ಆಸಕ್ತಿ ಹೊಂದಿದರು. ಅವರು ೧೯೩೦ ರಲ್ಲಿ, ಹಬಿಗಂಜ್ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದರು. ಅವರು ೧೯೩೦-೧೯೩೧ ರವರೆಗೆ ಸಿಲ್ಹೆಟ್‌ನ ಎಂಸಿ ಕಾಲೇಜಿನಲ್ಲಿ ಅಧ್ಯಯನ ಮಾಡಿದರು. ಬಿಸ್ವಾಸ್ ತಮ್ಮ ಕಾಲೇಜು ವರ್ಷಗಳಲ್ಲಿ ಕಮ್ಯುನಿಸಂನ ಮೌಲ್ಯಗಳನ್ನು ಅಳವಡಿಸಿಕೊಂಡರು ಮತ್ತು ಸಮಾನ ಹಕ್ಕುಗಳ ಬಗ್ಗೆ ಕವಿತೆಗಳು ಮತ್ತು ನಾಟಕಗಳನ್ನು ಬರೆದಿದ್ದಾರೆ. ಈ ಸಮಯದಲ್ಲಿ ಅವರು "ಗಣ ಸಂಗೀತವನ್ನು" ಪ್ರದರ್ಶಿಸಲು ಪ್ರಾರಂಭಿಸಿದರು. ಅವರು ತಮ್ಮ ಔಪಚಾರಿಕ ಶಿಕ್ಷಣವನ್ನು ಪೂರ್ಣಗೊಳಿಸಲಿಲ್ಲ. ಬಿಸ್ವಾಸ್‌ರವರು ಈ ಪ್ರದೇಶದಾದ್ಯಂತ ಚಹಾ ತೋಟದ ಕಾರ್ಮಿಕರು, ರೈತರು ಮತ್ತು ದೀನದಲಿತರ ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ಆಂದೋಲನದಲ್ಲಿ ತೊಡಗಿಸಿಕೊಂಡರು. ಅವರ ರಾಜಕೀಯ ನಂಬಿಕೆಗಳಿಗಾಗಿ, ಅವರನ್ನು ೧೯೩೦ ರಲ್ಲಿ ಬಂಧಿಸಲಾಯಿತು. ಅವರು ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸೋಸಿಯೇಷನ್‌ನೊಂದಿಗೆ ಸಂಬಂಧ ಹೊಂದಿದ್ದರು.[] ಅವರು ೧೯೫೯ ರಲ್ಲಿ, ಪ್ರೌಢಶಾಲಾ ಶಿಕ್ಷಕಿ ರಾನು ದತ್ತಾ ಅವರನ್ನು ವಿವಾಹವಾದರು. ಅವರ ಮಗ, ಮೊಯಿನಕ್ ಬಿಸ್ವಾಸ್ (ಜಾದವ್ಪುರ ವಿಶ್ವವಿದ್ಯಾಲಯದಲ್ಲಿ ಚಲನಚಿತ್ರ ಅಧ್ಯಯನಗಳ ಪ್ರಾಧ್ಯಾಪಕ ಮತ್ತು ಚಲನಚಿತ್ರ ನಿರ್ಮಾಪಕ) ೧೯೬೦ ರಲ್ಲಿ, ಜನಿಸಿದರು ಮತ್ತು ಅವರ ಮಗಳು, ರೊಂಗಿಲಿ ಬಿಸ್ವಾಸ್ (ಬರಹಗಾರ ಮತ್ತು ಅರ್ಥಶಾಸ್ತ್ರದ ಪ್ರಾಧ್ಯಾಪಕ) ೧೯೬೭ ರಲ್ಲಿ ಜನಿಸಿದರು.

ಸಂಗೀತ ಕೆಲಸ

[ಬದಲಾಯಿಸಿ]
ದೇಬಬ್ರತ ಬಿಸ್ವಾಸ್, ಒಮರ್ ಶೇಖ್, ನಿರಂಜನ್ ಸೇನ್ ಮತ್ತು ಇತರರೊಂದಿಗೆ ಹೇಮಂಗರವರು.

ಹೇಮಂಗ ಬಿಸ್ವಾಸ್‌ರವರು ಹಲವಾರು ಜನಪ್ರಿಯ ಬಂಗಾಳಿ ಹಾಡುಗಳಿಗೆ ಕಾರಣರಾಗಿದ್ದರು. ಜನರ ಕಲೆಯ ಆದರ್ಶವನ್ನು ಭಾಷಾಂತರಿಸುವ ವಿಧಾನದ ಬಗ್ಗೆ ಸಲೀಲ್ ಚೌಧರಿ ಮತ್ತು ಅವರ ನಡುವೆ ಒಮ್ಮೆ ತೀವ್ರ ಚರ್ಚೆ ನಡೆಯಿತು.[]

ಅವರು ಭೂಪೇನ್ ಹಜಾರಿಕಾ, ದೇಬಬ್ರತಾ ಬಿಸ್ವಾಸ್ ಮತ್ತು ಪೀಟ್ ಸೀಗರ್ ಅವರೊಂದಿಗೆ ಡ್ಯುಯೆಟ್ ಹಾಡಿದರು. ತಮ್ಮ ಸಂಗೀತದ ಮೂಲಕ, ಜನಸಾಮಾನ್ಯರನ್ನು ತಮ್ಮ ಹಕ್ಕುಗಳಿಗಾಗಿ ಹೋರಾಡಲು, ಅವರು ಒಗ್ಗಟ್ಟಾಗಿರಲು ಮತ್ತು ಯಾವುದೇ ರೀತಿಯ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಲು ಪ್ರೇರೇಪಿಸಲು ಅವರು ಆಶಿಸಿದ್ದರು. ಎಲ್ಲರಿಗೂ ಸಮಾನ ಹಕ್ಕುಗಳ ಬಗ್ಗೆ ಅವರ ನಂಬಿಕೆಗಳು ಸಿದ್ಧಾರ್ಥ ಶಂಕರ್ ರಾಯ್ ನೇತೃತ್ವದ ಅಂದಿನ ಕಾಂಗ್ರೆಸ್ ಸರ್ಕಾರವನ್ನು ಕಾರ್ಮಿಕ ವರ್ಗದ ಜನರಿಗೆ ಸಹಾಯ ಹಸ್ತವನ್ನು ಚಾಚುವಂತೆ ವಿನಂತಿಸಲು ಮತ್ತು ಒತ್ತಾಯಿಸಲು ಪದೇ ಪದೇ ಪ್ರಯತ್ನಿಸಲು ಕಾರಣವಾಯಿತು. ಕಾರ್ಮಿಕರ ಜೀವನ ಮಟ್ಟವನ್ನು ಸುಧಾರಿಸಲು ಪ್ರೇರೇಪಿಸಲು ಬಾಂಚ್ಬೋ ರೆ ಬಾಂಚ್ಬೋ ಅಮ್ರಾವನ್ನು ರಚಿಸಲಾಯಿತು. ದಿ ಇಂಟರ್ನ್ಯಾಷನಲ್ ಅನ್ನು ಬಂಗಾಳಿ ಭಾಷೆಗೆ ಅನುವಾದಿಸಿದ್ದು ಮತ್ತು ಅಮ್ರಾ ಕಾರ್ಬೊ ಜಾಯ್, ಅಜಾದಿ ಹೊಯ್ನಿ ತೋರ್ ಮತ್ತು ನೀಗ್ರೋ ಭಾಯ್ ಅಮರ್ನಂತಹ ಹಾಡುಗಳನ್ನು ಅವರು ಹಾಡಿದ್ದು ಬಂಗಾಳಿ ಎಡಪಂಥೀಯ ಚಳವಳಿಗೆ ಸಹಾಯ ಮಾಡಿತು.[][]

ಅವರು ಭಾವೈಯಾ ಮತ್ತು ಭಾಟಿಯಾಲಿಯಿಂದ ಪ್ರಭಾವಿತರಾದರು ಮತ್ತು ತಮ್ಮದೇ ಆದ ಶೈಲಿಯನ್ನು ರಚಿಸಿದರು. ಅದು ಆ ಜಾನಪದ ಸಂಪ್ರದಾಯಗಳನ್ನು ಸಿಲ್ಹೆಟ್ ಸಂಸ್ಕೃತಿಯೊಂದಿಗೆ ಸಂಯೋಜಿಸಿತು. ಅದನ್ನು ಅವರು ಬಹಿರಾನಾ ಎಂದು ಕರೆದರು. ಅವರು ೧೯೭೮ ರಲ್ಲಿ ಅಥವಾ ಆಸುಪಾಸಿನಲ್ಲಿ ಮಾಸ್ ಸಿಂಗರ್ಸ್ (ಸಾಮೂಹಿಕ ಹಾಡುಗಳ ಗುಂಪು) ಅನ್ನು ರಚಿಸಿದರು.

ಚಲನಚಿತ್ರಗಳು

[ಬದಲಾಯಿಸಿ]

ಹೇಮಂಗ ಬಿಸ್ವಾಸ್‌ರವರು ಮೇಘೆ ಢಾಕಾ ತಾರಾ (ದಿ ಕ್ಲೌಡ್ ಕ್ಯಾಪ್ಡ್ ಸ್ಟಾರ್) (೧೯೬೦), ಲಾಲೋನ್ ಫಕೀರ್ (ದೇಹಾ ತಾರಿ ದಿಲಾಮ್ ಚಾರಿಯೊ), ಉತ್ಪಲ್ ದತ್ತಾ ಅವರ ಕಲ್ಲೋಲ್ ಮತ್ತು ಕೋಮಲ್ ಗಾಂಧರ್ ಚಿತ್ರಗಳಲ್ಲಿ ಹಿನ್ನೆಲೆ ಗಾಯಕರಾಗಿದ್ದರು.

ಧ್ವನಿಮುದ್ರಿಕೆ

[ಬದಲಾಯಿಸಿ]
  • ಹೇಮಂಗ ಬಿಸ್ವಾಸ್ಸರ್ ಗಾನ್
  • ಶಂಖಚಿಲ್

ಗ್ರಂಥಸೂಚಿ

[ಬದಲಾಯಿಸಿ]

ಬೆಂಗಾಳಿ

[ಬದಲಾಯಿಸಿ]
  • ಶಂಖಚಿಲರ್ ಗಾನ್
  • ಹೇಮಂಗ ಬಿಸ್ವಾಸ್ಸರ್ ಗಾನ್
  • ಲೋಕಸಂಗೀತ ಸಮಿತಿ
  • ಬಾಂಗ್ಲಾ ಓ ಅಸ್ಸಾಂ
  • ಅಬರ್ ಚಿನ್ ದೇಖೇ ಎಲಾಮ್

ಅಸ್ಸಾಮಿ

[ಬದಲಾಯಿಸಿ]
  • ಕುಲ್ ಖುರಾರ್ ಸುತಾಲ್
  • ಅಕೌ ಸಿನ್ ಸಾಯಿ ಅಹಿಲು
  • ಜಿವೊನ್ ಕ್ಸಿಲ್ಪಿ ಜ್ಯೋತಿ ಪ್ರಸಾದ್

ಇದನ್ನೂ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Late singer's wife found dead in pond". The Times of India. Retrieved 2019-01-21.
  2. "Jasimuddin.org". Sos-arsenic.net. Retrieved 2012-10-10.
  3. Shrivastava (2008). Broadcast Journalism. Sterling Publishers Pvt. Limited. ISBN 9788120735972.
  4. "Paper-Aesthetics and Politics". Scribd.com. 2009-07-16. Retrieved 2012-10-10.
  5. "IPTA tribute to folk artiste - Hemanga Biswas's birth centenary celebrations begin". The Telegraph (in ಇಂಗ್ಲಿಷ್). Kolkata. Retrieved 2019-01-21.
  6. "Death anniversary of Hemanga Biswas observed in Sylhet". The Daily Star (in ಇಂಗ್ಲಿಷ್). 2008-11-25. Retrieved 2019-01-21.


ಬಾಹ್ಯ ಕೊಂಡಿಗಳು

[ಬದಲಾಯಿಸಿ]