ಹೆರ್ನಾಂಡೊ ಕಾರ್ಟೆಸ್
| Hernán Cortés | |
|---|---|
| 18th-century portrait of Cortés based on the one sent by the conqueror to Paolo Giovio, which has served as a model for many of his representations since the 16th century | |
| ಅಧಿಕಾರ ಅವಧಿ 25 June 1526 – 3 July 1526 | |
| ಪೂರ್ವಾಧಿಕಾರಿ | Alonso de Estrada Rodrigo de Albornoz |
| ಉತ್ತರಾಧಿಕಾರಿ | Luis Ponce de León |
| ಅಧಿಕಾರ ಅವಧಿ 30 December 1521 – 12 October 1524 | |
| ಪೂರ್ವಾಧಿಕಾರಿ | Cristóbal de Tapia |
| ಉತ್ತರಾಧಿಕಾರಿ | Triumvirate: Alonso de Estrada Rodrigo de Albornoz Alonso de Zuazo |
| ಅಧಿಕಾರ ಅವಧಿ 13 August 1521 – 24 December 1521 | |
| Monarch | Charles I of Spain |
| ಪೂರ್ವಾಧಿಕಾರಿ | Office established |
| ಉತ್ತರಾಧಿಕಾರಿ | Cristóbal de Tapia |
| ವೈಯಕ್ತಿಕ ಮಾಹಿತಿ | |
| ಜನನ | Hernando Cortés de Monroy y Pizarro Altamirano Did not recognize date. Try slightly modifying the date in the first parameter. Medellín, Castile |
| ಮರಣ | 2 December 1547 (aged 61–62) Castilleja de la Cuesta, Spain |
| ರಾಷ್ಟ್ರೀಯತೆ | Castilian |
| ಸಂಗಾತಿ(ಗಳು) | Catalina Suárez
(m. ೧೫೧೬; died ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".)Juana de Zúñiga (m. ೧೫೨೯) |
| Domestic partner | La Malinche Isabel Moctezuma |
| ಮಕ್ಕಳು | Don Martín Cortés, 2nd Marquess of the Valley of Oaxaca Doña María Cortés Doña Catalina Cortés Doña Juana Cortės Martín Cortés Leonor Cortés Moctezuma |
| ವೃತ್ತಿ | Conquistador |
| ಸಹಿ | |
ಹೆರ್ನಾಂಡೊ ಕಾರ್ಟೆಸ್ (ಡಿಸೆಂಬರ್ 1485 – 2 ಡಿಸೆಂಬರ್ 1547) ಸ್ಪೇನ್ ದೇಶದ ದಂಡಯಾತ್ರಿ.ಮೆಕ್ಸಿಕೋ ದೇಶದ ವಿಜಯಿ.
ಜನನ
[ಬದಲಾಯಿಸಿ]ಸ್ಪೇನ್ ದೇಶದ ಮೆಡೆಲ್ಲಿನ್ ಎಂಬ ಹಳ್ಳಿಯಲ್ಲಿ ಜನಿಸಿದ. 1511ರಲ್ಲಿ ವೇಲ ಸ್ಕ್ವೆಜóನ ನೇತೃತ್ವದಲ್ಲಿ ನಡೆದ ಕ್ಯೂಬ ದಾಳಿಯಲ್ಲಿ ಪ್ರಸಿದ್ಧಿಗೆ ಬಂದ.
ದಂಡಯಾತ್ರೆ
[ಬದಲಾಯಿಸಿ]
ವೇಲಸ್ಕ್ವೆಜ್‍ನ ಆದೇಶದಂತೆ 1519 ರಲ್ಲಿ ಮೆಕ್ಸಿಕೋ ವಿಜಯಕ್ಕಾಗಿ ನೌಕೆಯಲ್ಲಿ ಹೊರಟ. ಇವನ ಪ್ರಾಬಲ್ಯದಿಂದ ಭೀತನಾದ ವೇಲಸ್ಕ್ವೆಜ್ ಮೆಕ್ಸಿಕೋ ವಿಜಯದ ಸನ್ನದನ್ನು ರದ್ದು ಪಡಿಸಿದ. ಆದರೂ ಆ ಆಜ್ಞೆಯನ್ನು ಉಪೇಕ್ಷಿಸಿ, ಕಾರ್ಟೆಸ್ ಯುಕಟಾನ್ ಪ್ರದೇಶವನ್ನು ತಲಪಿ ಅಲ್ಲಿನ ನಿವಾಸಿಗಳೊಂದಿಗೆ ಸ್ನೇಹ ಗಳಿಸಿದ. ಅನಂತರ ಟಬಾಸ್ಕೊನಗರವನ್ನು ವಶಪಡಿಸಿಕೊಂಡ. ಅಲ್ಲಿಯ ನಿವಾಸಿಗಳು ಇವನಿಗೆ ಅನೇಕ ಬೆಲೆಬಾಳುವ ವಸ್ತುಗಳನ್ನು ಅರ್ಪಿಸಿದರು. ತರುವಾಯ ಆಕ್ವಿಲರ್ ನ್ನು ಸಂಧಿಸಿದಾಗ ಅವರ ದೊರೆಯಾದ ಮಾಂಟೆಜೂಮನಿಂದ ಇವನಿಗೆ ಕಾಣಿಕೆಗಳು ಬಂದುವು.

ವೀರಾಕ್ರೂಝ್ ಪ್ರದೇಶದಲ್ಲಿ ಒಂದು ನಗರವನ್ನು ಸ್ಥಾಪಿಸಿ ಅದಕ್ಕೆ ಸ್ವಯಮಾಡಳಿತದ ಹಕ್ಕನ್ನು ನೀಡಿದ (1519). ಅನಂತರ ಮೆಕ್ಸಿಕೋ ನಗರದತ್ತ ಧಾವಿಸಿದ. ಮಾರ್ಗದಲ್ಲಿ ಟ್ಲಾಕ್ಸ್‍ಕಲದ ನಿವಾಸಿಗಳು ಮೊದಲಿಗೆ ಇವರೊಂದಿಗೆ ಹೋರಾಡಿದರೂ ಅನಂತರ ಮಾಂಟೆಜೂಮನ ದಬ್ಬಾಳಿಕೆಯನ್ನೆದುರಿಸಲು ಇವನನ್ನು ಕೂಡಿಕೊಂಡರು. ಈ ಮಧ್ಯೆ ಮಾಂಟೆಜೂಮನ ಪಿತೂರಿಯ ವಿಷಯ ತಿಳಿದು ಬಂದುದರಿಂದ ಅವನ ಸೈನ್ಯವನ್ನು ಹತಮಾಡಿ ಅವನ ರಾಜಧಾನಿ ಟಿನೊಚ್‍ಟಿಟ್ಲಾನ್ ಮೇಲೆ ನುಗ್ಗಿದ. ಸರೋವರದ ನಡುವೆ ಇದ್ದ ಮರದ ಮೂರು ಸೇತುವೆಗಳ ಮೂಲಕ ಪ್ರವೇಶಿಸಬೇಕಾಗಿದ್ದ ಆ ಸುಂದರ ನಗರದ ಮಹಾದ್ವಾರದಲ್ಲಿ, ತಮ್ಮ ಅಧಿದೇವತೆ ಕ್ವೆಟ್ಜಲ್‍ಕೊಟ್‍ಲ್‍ನೇ ಬಂದಿರುವನೆಂದು ಭೀತರಾದ ಮಾಂಟೆಜೂಮ ಮತ್ತು ಅವನ ಪರಿವಾರದವರು ಕಾರ್ಟೆಸನನ್ನು ಭೀತಿಗೌರವಗಳೊಡನೆ ಸ್ವಾಗತಿಸಿದರು. ಮಾಂಟೊಜೂವನನ್ನು ತನ್ನ ಶಿಬಿರದಲ್ಲಿ ವಾಸಿಸುವಂತೆ ನಿರ್ಬಂಧಿಸಿ, ಈತ ಆ ರಾಜ್ಯವನು ತನ್ನ ಹತೋಟಿಯಲ್ಲಿರಿಸಿಕೊಂಡ. ಆ ವೇಳೆಗೆ ವೇಲಸ್ಕ್ವೆಜ್ ನಿಂದ ಕಳಿಸಲಾದ ಪನ್ ಫಿಲೊ ಡಿ ನರ್ವೆಯಿಜ಼್ ನಾಯಕತ್ವದಲ್ಲಿ ಸ್ಪ್ಯಾನಿಷ್ ಸೈನ್ಯ ತನ್ನ ವಿರುದ್ಧ ಬಂದ ಸಂಗತಿ ತಿಳಿದು ಬಂದುದರಿಂದ, ಕಾರ್ಟೆಸ್ ಅದನ್ನೆದುರಿಸಬೇಕಾಯಿತು. ಆ ಕದನದಲ್ಲಿ ಮಾಂಟೆಜೂಮ ಸತ್ತರೂ ಕಾರ್ಟೆಸ್ ಗೆದ್ದು ತನ್ನ ಅಧಿಕಾರವನ್ನು ಸ್ಥಿರಗೊಳಿಸಿಕೊಂಡ, ಅನಂತರ ಸ್ಪೇನ್ ಚಕ್ರವರ್ತಿಯ ಕೃಪೆ ಲಭ್ಯವಾಯಿತು. ಮೆಕ್ಸಿಕೋದಲ್ಲಿ ಈತ ಸ್ಪೇನಿನ ಮಹಾದಂಡನಾಯಕನಾದ. ಕ್ಯಾಲಿಫೋರ್ನಿಯದ ಹಲವು ಪ್ರದೇಶಗಳನ್ನು ವಶಪಡಿಸಿಕೊಂಡು ಅನಂತರ ಸ್ವೇನಿಗೆ ಹಿಂತಿರುಗಿದ. ಇವನ ಶತ್ರುಗಳ ಪ್ರಭಾವದಿಂದ ಚಕ್ರವರ್ತಿಯ ಕೃಪೆ ಕಳೆದುಕೊಂಡು ತನ್ನ ಜಮೀನ್ದಾರಿಕೆಗೆ ಈತ ಮರಳಬೇಕಾಯಿತು.
ನಿಧನ
[ಬದಲಾಯಿಸಿ]ಕಾರ್ಟೆಸ್ ಮೃತನಾದ್ದು 1547 ರ ಡಿಸೆಂಬರ್ 2 ರಂದು.
ಪ್ರಸಿದ್ಧಿ
[ಬದಲಾಯಿಸಿ]ಕಾರ್ಟೆಸ್ ಮೆಕ್ಸಿಕೋದಲ್ಲಿ (ಹೊಸ ಸ್ಪೇನ್) ಕೈಕೊಂಡ ಕಾರ್ಯಗಳಿಂದ ಇವನಿಗೆ ಪ್ರಸಿದ್ಧಿ ದೊರಕಿತು. ದೇಶದ ಭೂಮಿಯನ್ನು ಜನರಲ್ಲಿ ಹಂಚಿದ್ದಲ್ಲದೆ ಗಣಿ ಅಭಿವೃದ್ಧಿಗೆ ಮತ್ತು ವ್ಯವಸಾಯಕ್ಕೆ ಕಾರ್ಟೆಸ್ ಹೆಚ್ಚಿನ ಪ್ರೋತ್ಸಾಹ ನೀಡಿದ. ವಸಾಹತು ಸ್ಥಾಪನೆಯಲ್ಲಿ ಆಸಕ್ತಿ ವಹಿಸಿದ. ಸೈನ್ಯ ಪಡೆಗಳನ್ನು ಕಳಿಸಿ ಗ್ವಾಟೆಮಾಲ ಮತ್ತು ಹಾಂಡುರಸ್ ಪ್ರದೇಶಗಳನ್ನು ಸ್ವಾಧೀನ ಪಡಿಸಿಕೊಂಡ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- The letters by Cortés, in which Cortés describes the events related to the conquest of Mexico
- Genealogy of Hernán Cortés
- Origin of the Surname Cortés
- The change of Hernán Cortés's self-image by means of the conquest
- Hernando Cortes on the Web – web directory with thumbnail galleries
- Conquistadors, with Michael Wood – website for 2001 PBS documentary
- Ibero-American Electronic Text Series presented online by the University of Wisconsin Digital Collections Center.
- Hernan Cortes – The Conquistador of the Aztecs; Informational Link Blog about the History of Cortes, the Aztecs, along with a variety of sources, pictures and educational resources
- Latin American studies center, material on Cortés
- Fernand Cortez opera by Gaspare Spontini, Jean-Paul Penin
- "Cortes, Hernando"[Usurped!] Belinda H. Nanney
- "Hernán Cortés, marqués del Valle de Oaxaca", Encyclopædia Britannica
ಉಲ್ಲೇಖಗಳು
[ಬದಲಾಯಿಸಿ]
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |