ಹೆರುವಣಿಕೆ

ವಿಕಿಪೀಡಿಯ ಇಂದ
Jump to navigation Jump to search

ಟಿ.ಎಫ್.ಆರ್(TFR) ಇಲ್ಲವೇ ಟೋಟಲ್ ಫರ್ಟಿಲಿಟಿ ರೇಟ್ (ಕನ್ನಡದಲ್ಲಿ ಹೆರುವೆಣಿಕೆ) ಅಂದರೆ ಒಂದು ಕುಟುಂಬದಲ್ಲಿ ಹೆಣ್ಣಿಗೆ ಅವಳ ಜೀವಿತಾವಧಿಯಲ್ಲಿ ಸರಾಸರಿ ಎಷ್ಟು ಮಕ್ಕಳಾಗುತ್ತವೆ ಅನ್ನುವುದರ ಅಳತೆ [೧]. ಯಾವುದೇ ಜನಾಂಗದ ಜನಸಂಖ್ಯೆ ಏರದೇ ಇಳಿಯದೇ ಸಮತೋಲನ ಸಾಧಿಸಲು ಆ ಜನಾಂಗದ ಹೆರುವೆಣಿಕೆ ಮಟ್ಟ 2.1ರಷ್ಟಿರಬೇಕು ಅನ್ನುವುದನ್ನು ಪ್ರಪಂಚದ ಎಲ್ಲ ನಾಡುಗಳು ಒಪ್ಪಿ ಅದಕ್ಕೆ ತಕ್ಕಂತೆ ತಮ್ಮ ಜನಸಂಖ್ಯಾ ನೀತಿ ರೂಪಿಸಿಕೊಳ್ಳುತ್ತವೆ. ಸದ್ಯಕ್ಕೆ 2.4 ಹೆರುವೆಣಿಕೆ ಇರುವ ಭಾರತವೂ 2.1ರ ಸಮತೋಲನದ ಗುರಿ ತಲುಪುವ ಪ್ರಯತ್ನ ಮಾಡುತ್ತಿದೆ.

ವಿಶ್ವ ಐತಿಹಸಿಕ TFR (1950–2015)
UN, medium variant, 2010 rev.[೨]
ಇಸವಿ ಹೆರುವಣಿಕೆ
1950–1955 4.95
1955–1960 4.89
1960–1965 4.91
1965–1970 4.85
1970–1975 4.45
1975–1980 3.84
1980–1985 3.59
1985–1990 3.39
1990–1995 3.04
1995–2000 2.79
2000–2005 2.62
2005–2010 2.52
2010–2015 2.36

ಪ್ರಪಂಚ[ಬದಲಾಯಿಸಿ]

ಪ್ರಪಂಚ ಇತಿಹಾಸದಲ್ಲಿ ಅತೀ ಕಡಿಮೆ ಹೆರುವಣಿಕೆ (೦.೪೧) ನೊಂದಾಯಿತ ಪ್ರದೇಶ ಚೀನಾ ದಲ್ಲಿರುವ Jiamusi ಜಿಲ್ಲೆಯ Xiangyang [೩].

೨೦೦೯ರಂತೆ, ಯೂರೂಪ್ನ ಸರಾಸರಿ ಹೆರುವಣಿಕೆ ಸಂಖ್ಯೆಯು ಪ್ರತೀ ಮಹಿಳೆಗೆ ೧.೫೯ ಮಕ್ಕಳು ಅಗಿರುತ್ತದೆ[೪].

ಅಭಿವೃದ್ದಿಶೀಲ ಮತ್ತು ಅಭಿವೃದ್ದಿ ಹೊಂದಿದ ದೇಶಗಳು[ಬದಲಾಯಿಸಿ]

ಅಭಿವೃದ್ದಿ ಹೊಂದಿದ ದೇಶಗಳ ಹೆರುವಣಿಕೆ ಸಮಾನ್ಯವಾಗಿ ಅತಿ ಕಡಿಮೆ ಇರುತ್ತದೆ. ಇದಕ್ಕೆ ಕಾರಣವೆಂದರೆ ಉತ್ತಮ ಆರೊಗ್ಯ, ಶಿಕ್ಷಣ ಮತ್ತು ನಗರೀಕರಣ. ಜನನ ನಿಯಂತ್ರಣ ವು ಸಾಮನ್ಯವಾಗಿ ಪ್ರಚುರವಾಗಿದ್ದು, ಸಿಗುತಲಿರುತ್ತದೆ.[೫]. ಅಭಿವೃದ್ದಿಶೀಲ ಮತ್ತು ಅಭಿವೃದ್ದಿ ಹೊಂದಿರದ ದೇಶಗಳಲ್ಲಿ ಕುಟುಂಬದಲ್ಲಿ ಕೆಲಸಗಳಿಗೆ ಮಕ್ಕಳು ಬೆಕೆಂಬ ಯೂಚನೆ ಇರುವುದರಿಂದ ಮತ್ತು ಜನನ ನಿಯಂತ್ರಣದ ತಿಳುವಳಿಕೆ ಕಡಿಮೆ ಇರುವದರಿಂದ ಹೆರುವಣಿಕೆ ಸಂಖ್ಯೆ ಜಾಸ್ತಿ ಇರುತ್ತದೆ.[೬]. [೭]

A ದೇಶ ಅನುಸಾರ ಹೆರುವಣಿಕೆ ತೊರಿಸುವ ವಿಶ್ವ ಭೂಪಟ CIA World Factbook's 2014
ಚಿತ್ರ:ಹೆರುವಣಿಕೆ ತೊರಿಸುವ ವಿಶ್ವ ಭೂಪಟ
ದೇಶಾವರು ಹೆರುವಣಿಕೆ ತೊರಿಸುವ ವಿಶ್ವ ಭೂಪಟ

ಭಾರತ[ಬದಲಾಯಿಸಿ]

೨೦೧೧ರ ಜನಗಣತಿಯ ಪ್ರಕಾರ ಭಾರತದ ಹೆರುವೆಣಿಕೆ ೨.೪ ಅಗಿರುತ್ತದೆ.

ಕರ್ನಾಟಕ[ಬದಲಾಯಿಸಿ]

2011ರ ಜನಗಣತಿಯ ಪ್ರಕಾರ ಕರ್ನಾಟಕದ ಟಿ.ಎಫ್.ಆರ್ (ಹೆರುವೆಣಿಕೆ) ಪ್ರಮಾಣ ಸಮತೋಲನ ಮಟ್ಟಕ್ಕಿಂತ ಕೆಳಗಿಳಿದು 1.9ಕ್ಕೆ ಕುಸಿದಿದೆ.

ಹೆರುವಣಿಕೆ ಕುಸಿತ[ಬದಲಾಯಿಸಿ]

  • ಹೆರುವೆಣಿಕೆ ಸಮತೋಲನದ ಮಟ್ಟಕ್ಕಿಂತ ಕೆಳಗೆ ಕುಸಿದರೆ ಏನಾಗುತ್ತೆ ಅನ್ನುವುದನ್ನು ತಿಳಿಯಲು ಚೈನಾ, ಸಿಂಗಾಪುರ, ಇಟಲಿ, ಜಪಾನಿನಂತಹ ಹಲವಾರು ದೇಶಗಳಲ್ಲಿ ಆಗುತ್ತಿರುವ ತಲ್ಲಣಗಳನ್ನು ಗಮನಿಸಬೇಕು. ಚೈನಾದಲ್ಲಿ ಒಂದೇ ಮಗು ಹೊಂದಬೇಕು ಅನ್ನುವ ನೀತಿಯಿಂದ ಇನ್ನು ಒಂದು ತಲೆಮಾರಿನ ಅವಧಿಯಲ್ಲಿ ಚೈನಾ ಒಂದು ವಯೋವೃದ್ಧರೇ ತುಂಬಿರುವ ದೇಶವಾಗುವ ಸಾಧ್ಯತೆಯನ್ನು ಕಂಡ ಅಲ್ಲಿನ ಸರ್ಕಾರ ಈಗ ತನ್ನ ನೀತಿಯನ್ನು ಸಡಿಲಿಸಿಕೊಂಡು ಎರಡು ಮಕ್ಕಳಿಗೆ ಅವಕಾಶ ಕಲ್ಪಿಸುತ್ತಿದೆ.
  • ಒಂದೇ ಮಗುವಿನ ನೀತಿಯಿಂದಾಗಿ ಲಕ್ಷಾಂತರ ಕುಟುಂಬಗಳಲ್ಲಿ ಒಂದೇ ಮಗುವಿದ್ದು, ಆ ಮಗು ಅಕಾಲಿಕ ಸಾವಿಗೀಡಾಗಿ ತಂದೆ-ತಾಯಿಯರು ಅನಾಥರಾದ ಸಾವಿರಾರು ಪ್ರಕರಣಗಳು ಚೀನಾದಲ್ಲಿ ಸಂಭವಿಸಿದ್ದು ಸರ್ಕಾರದ ನೀತಿ ಮರುಶೀಲನೆಗೆ ಕಾರಣಗಳಲ್ಲೊಂದಾಗಿತ್ತು. ಯುರೋಪಿನ ಇತಿಹಾಸದಲ್ಲಿ ತನ್ನದೇ ಆದ ಸಾಂಸ್ಕೃತಿಕ, ರಾಜಕೀಯ ಹೆಜ್ಜೆ ಗುರುತು ಹೊಂದಿರುವ ಇಟಲಿ ಇಂದು ಸಾಯುತ್ತಿರುವ ದೇಶವೆಂದು ಅಲ್ಲಿನ ಚಿಂತಕರು ಗುರುತಿಸುತ್ತಿದ್ದಾರೆ. [೮]

ಉಲ್ಲೆಖಗಳು[ಬದಲಾಯಿಸಿ]