ಹೆನ್ರಿ ಕ್ಯಾರಿ
ಗೋಚರ


ಹೆನ್ರಿ ಕ್ಯಾರಿ 1687-1743. ಆಂಗ್ಲಕವಿ ಮತ್ತು ಸಂಗೀತಗಾರ. ಜಾರ್ಜ್ ಸ್ಯಾವಿಲನ ಜಾರಜಪುತ್ರನೆಂದು ಭಾವಿಸಲಾಗಿದೆ. ಅನೇಕ ವಿಕಟಕವಿತೆ, ಹಾಸ್ಯಪ್ರಹಸನ ಮತ್ತು ಗೀತೆಗಳನ್ನು ರಚಿಸಿದ್ದಾನೆ. ಹಲವು ಗೀತೆಗಳಿಗೆ ತನ್ನದೇ ರಾಗರಚನೆಗಳನ್ನು ಅಳವಡಿಸಿದ್ದಾನೆ. ಈತನ ನಂಬಿ ಪಂಬಿ ಕವಿತೆ ಆಂಬ್ರೋಸ್ ಫಿಲಿಪ್ಪ್‍ನನ್ನು ಕುರಿತ ಅಣಕಗೀತೆಯಾದರೂ ಭಾಷಾದೃಷ್ಟಿಯಿಂದ ಉತ್ತಮವಾದುದು. ಈತನ ಸ್ಯಾಲಿ ಇನ್ ಅವರ್ ಆಲಿ ಎಂಬ ಗೀತೆ ಇಂಗ್ಲಿಷ್ ಸಾಹಿತ್ಯದಲ್ಲಿ ಬಹು ಪ್ರಸಿದ್ಧವೆನಿಸಿದ ಗೀತೆಗಳಲ್ಲೊಂದೆನಿಸಿದೆ. ಗಾಡ್ ಸೇವ್ ದಿ ಕಿಂಗ್ ಗೀತೆಯೂ ಇವನದೇ ಎಂದು ಹೇಳಲಾಗಿದೆಯಾದರೂ ಅದಕ್ಕೆ ಸಾಕಷ್ಟು ಆಧಾರಗಳಿಲ್ಲ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Works by Henry Carey at Project Gutenberg
- Works by or about ಹೆನ್ರಿ ಕ್ಯಾರಿ at Internet Archive
- Works by ಹೆನ್ರಿ ಕ್ಯಾರಿ at LibriVox (public domain audiobooks)

- ಟೆಂಪ್ಲೇಟು:IMSLP
- Free scores by Henry Carey in the Choral Public Domain Library (ChoralWiki)
- Free scores Mutopia Project
ಉಲ್ಲೇಖಗಳು
[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: