ಹೆಚ್.ಡುಂಡಿರಾಜ್

ವಿಕಿಪೀಡಿಯ ಇಂದ
Jump to navigation Jump to search
ಡುಂಡಿರಾಜ್ ಅವರಿಗೆ ಅಭಿನಂದನೆ - ಮಂಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್

ಡುಂಡಿರಾಜ್ - ಕನ್ನಡದ ಪ್ರಮುಖ ಹಾಸ್ಯ ಸಾಹಿತಿಗಳಲ್ಲಿ ಒಬ್ಬರು. ವೃತ್ತಿಯಲ್ಲಿ ಬ್ಯಾಂಕ್ ಅಧಿಕಾರಿಯಾಗಿರುವ ಡುಂಡಿರಾಜ್ ತಮ್ಮ ಹನಿಗವನಗಳ ಮೂಲಕ ಜನಪ್ರಿಯತೆ ಗಳಿಸಿದ್ದಾರೆ.

ಜೀವನ[ಬದಲಾಯಿಸಿ]

ಕಾರ್ಪೊರೇಷನ್ ಬ್ಯಾಂಕ್ ಉದ್ಯೋಗಿಯಾಗಿರುವ ಡುಂಡಿರಾಜ್, ಮಂಗಳೂರು, ಬೆಳಗಾವಿ ಶಾಖೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ಸಾಹಿತ್ಯ[ಬದಲಾಯಿಸಿ]

ವೃತ್ತಿಯಿಂದ ಬ್ಯಾಂಕ್ ಉದ್ಯೋಗಿಯಾದರೂ, ಪ್ರವೃತ್ತಿಯಿಂದ ಸಾಹಿತ್ಯವನ್ನು ಅದರಲ್ಲೂ ವಿಶೇಷವಾಗಿ ಹಾಸ್ಯ ಸಾಹಿತ್ಯವನ್ನು ಬರೆಯುವರು. ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿನ ಮಾತು ಕ(ವಿ)ತೆ ಅಂಕಣದ ಮೂಲಕ ಅಂಕಣಕಾರರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಹರಟೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ಧಾರೆ.

ಕೃತಿಗಳು[ಬದಲಾಯಿಸಿ]

ಕವನ ಸಂಕಲನಗಳು ನಮ್ಮ ಗೋಡೆಯ ಹಾಡು, ನೀನಿಲ್ಲದೆ, ನನ್ನ ಕವಿತೆ ನನ್ನ ಹಾಗೆ, ಆಯದ ಕವನಗಳು, ಏನಾಯಿತು

ಹನಿಗವನ ಸಂಗ್ರಹಗಳು

ಪಾಡ್ಯ ಬಿದಿಗೆ ತದಿಗೆ, ನೂರು ಹನಿಗವನಗಳು, ಇನ್ನೂರು ಇನಿಗವನಗಳು, ಪಂಚ್-ಕ-ಜಾಯ್, ಹನಿಕೇತನ

ನಾಟಕಗಳು

ಓಡುವವರು,ಅಧ್ವಾನಪುರ,ಅಜ್ಜಿಕಥೆ(ಮಕ್ಕಳ ನಾಟಕ), ಸಿನಿಮಹಾತ್ಮೆ, ಹುಡುಕಾಟ,ಕೊರಿಯಪ್ಪನ ಕೊರಿಯೋಗ್ರಫಿ ( ಎರಡು ನಾಟಕಗಳು)

ಇತರ

ಯಾರಿಗೂ ಹೇಳ್ಬೇಡಿ (ನಗೆ ಲೇಖನಗಳು) ನವನೀತ ( ನವಸಾಕ್ಷರರಿಗಾಗಿ) ಸೂಜಿಮಲ್ಲಿಗೆ ( ಕಿರುಗವನಗಳ ಆಂಥಾಲಜಿ -ಸಂಪಾದಿತ ಕೃತಿ) ಧ್ವನಿ ಸುರುಳಿಗಳು - ಸಲ್ಲಾಪ ( ಪ್ರೇಮ ಗೀತೆಗಳು), ಉ-punಕಾಯ್ ( ಹನಿಗವನಗಳು)

ಪ್ರಶಸ್ತಿ, ಗೌರವಗಳು[ಬದಲಾಯಿಸಿ]

  • ೧೯೮೨ - ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ( ನಮ್ಮ ಗೋಡೆಯ ಹಾಡು)
  • ೧೯೮೫ - ಮುದ್ದಣ ಕಾವ್ಯ ರಾಜ್ಯ ಪ್ರಶಸ್ತಿ (ನೀನಿಲ್ಲದೆ)
  • ೧೯೮೯-೯೦ - ಅತ್ಯುತ್ತಮ ಹಾಸ್ಯ ನಾಟಕ - ಅಖಿಲ ಭಾರತ ಬಾನುಲಿ ನಾಟಕ ಸ್ಪರ್ಧೆ ( ನಾಳೆ ಬನ್ನಿ)
  • ೧೯೯೦ - ಕರ್ನಾಟಕ ಸರಕಾರದ ಬಹುಮಾನ (ನವನೀತ)
  • ೧೯೯೪ - ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ (ಅಜ್ಜಿ ಕಥೆ)
  • ೧೯೯೬ - ಚುಟುಕುರತ್ನ ಪ್ರಶಸ್ತಿ
  • ೧೯೯೬ - ಅಧ್ಯಕ್ಷತೆ - ಹನಿಗವನಗೋಷ್ಠಿ , ೬೫ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
  • ೨೦೦೬-೦೭ - ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಪುರಸ್ಕಾರ(ರೇಡಿಯೋ ರಂಗ ನಾಟಕಕ್ಕೆ ಸಲ್ಲಿಸಿರುವ ಸೇವೆಗೆ)

ಹೊರಗಿನ ಸಂಪರ್ಕಗಳು[ಬದಲಾಯಿಸಿ]