ಹುಳುಹಿಡುಕನ ಗಿಡ

ವಿಕಿಪೀಡಿಯ ಇಂದ
Jump to navigation Jump to search

ಈ ಸಸ್ಯವು ಡ್ರೊಸೀರ ಬರ್ಮಾನೈ (Drosera burmannii Vahl.) ಎಂಬ ವೈಜ್ಞಾನಿಕ ಹೆಸರನ್ನು ಒಳಗೊಂಡಿದ್ದು, ಡ್ರೊಸೀರೇಸಿ ಎಂಬ ಸಸ್ಯ ಕುಟುಂಬಕ್ಕೆ ಸೇರಿದೆ. ಇದು ಏಕಋತು ಮೂಲಿಕೆಯಾಗಿದೆ.[೧]

ಈ ಜಾತಿಯ ಸಸ್ಯಗಳು ಉತ್ತರ ಮತ್ತು ಪೂರ್ವ ಆಸ್ಟ್ರೇಲಿಯಾ, ಭಾರತ, ಚೀನಾ, ಜಪಾನ್, ಮತ್ತು ಆಗ್ನೇಯ ಏಷ್ಯಾಗಳಲ್ಲಿ ಕಾಣಸಿಗುತ್ತವೆ.

ಡ್ರೊಸೀರ ಬರ್ಮಾನೈ

ಇತರ ಹೆಸರುಗಳು[ಬದಲಾಯಿಸಿ]

  • ಕ್ರಿಮಿಭಕ್ಷ
  • ಪುಷಕಾ

ಸಸ್ಯವರ್ಣನೆ[ಬದಲಾಯಿಸಿ]

ಈ ಮೂಲಿಕೆಯು ಕಡಲಂಚಿನ ಸಸ್ಯಾವರಣದಲ್ಲಿ ಬೆಳೆಯುತ್ತದೆ. ಇದು ಭತ್ತದ ಗದ್ದೆಯಲ್ಲಿ ಕೊಯ್ಲಾದ ನಂತರ ಹುಲುಸಾಗಿ ಬೆಳೆಯುತ್ತದೆ. ಕಳ್ಳಿ ಕುರುಚಲು ಗಿಡಗಳನ್ನೊಳಗೊಂಡ ಸಸ್ಯಾವರಣದ ಸಮೀಪವಿರುವ ಒದ್ದೆ ನೆಲದಲ್ಲಿ, ಕೆರೆಯಂಗಳದಲ್ಲಿ ಮೂಡಿಬರುತ್ತದೆ.[೨] ಚಮಚದಾಕಾರದ ಎಲೆಗಳು ಕುಬ್ಜವಾದ ಕಾಂಡದ ಮೇಲಿದ್ದು, ನೆಲಕ್ಕೆ ಅಂಟಿಕೊಂಡಂತೆ ಹರಡಿರುತ್ತವೆ. ಕನಿಷ್ಟ ೧ ರಿಂದ ೩ ಸೆ. ಮೀ ವರೆಗೆ ಹರಡಿಕೊಂಡಿರುತ್ತದೆ. ಈ ಜಾತಿಯ ಸಸ್ಯಗಳು ಹಸಿರು, ಕಡು ಹಸಿರು, ಕೆಂಪು ಹಸಿರು ಮತ್ತು ಚಿನ್ನದಂತ ಹಸಿರು ಬಣ್ಣಗಳಲ್ಲಿ ಕಂಡುಬರುತ್ತದೆ.[೩]

ಉಪಯೋಗಗಳು[ಬದಲಾಯಿಸಿ]

  1. ಗಿಡದ ಸಮೂಲವನ್ನು ಅರೆದು ಕಾಲಿನ ಅಣಿ (ಕಲ್ಲೂತ್ತು) ಇರುವ ಕಡೆ ಲೇಪಿಸಿದರೆ, ಕಲ್ಲೂತ್ತು ಗುಣವಾಗುತ್ತದೆ.
  2. ಸಮೂಲದ ರಸವನ್ನು ಮೊಸರಿನೊಡನೆ ಕುಡಿಸುವುದರಿಂದ ಮೂತ್ರ ತಡೆಯು ಗುಣವಾಗುತ್ತದೆ.
  3. ಗಿಡದ ಸ್ವರಸವು ಮಕ್ಕಳ ನಾಯಿ ಕೆಮ್ಮಿಗೆ ಔಷಧವಾಗಿದೆ.
  4. ಹಗೇವು ಅಥವಾ ಕಣಜದೊಳಗೆ ಹೋದವರು ಮೂರ್ಛೆ ಹೋದಾಗ ಗಿಡದ ಸಮೂಲವನ್ನು ಕುಟ್ಟಿ ಹಿಂಡಿ ರಸ ಮಾಡಿ ಕುಡಿಸಿದರೆ, ಬೇಗ ಎಚ್ಚರಗೊಳ್ಳುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. ಕರ್ನಾಟಕದ ಔಷಧೀಯ ಸಸ್ಯಗಳು, ಡಾ. ಮಾಗಡಿ ಆರ್. ಗುರುದೇವ, ದಿವ್ಯಚಂದ್ರ ಪ್ರಕಾಶನ, ಮೂರನೆಯ ಮುದ್ರಣ ೨೦೧೦, ಪುಟ ೩೪೭
  2. https://florabase.dpaw.wa.gov.au/browse/profile/3093
  3. http://www.carnivorousplants.org/howto/GrowingGuides/D_burmannii.php