ಹುಬ್ಬುಗಂಟು
ಹುಬ್ಬುಗಂಟು ಒಂದು ಮುಖಭಾವವಾಗಿದೆ ಮತ್ತು ಇದರಲ್ಲಿ ಹುಬ್ಬುಗಳನ್ನು ಒಟ್ಟಾಗಿ ತಂದು ಹಣೆಯನ್ನು ಸುಕ್ಕುಗಟ್ಟಿಸಲಾಗುತ್ತದೆ. ಸಾಮಾನ್ಯವಾಗಿ ಇದು ಅಸಮಾಧಾನ, ದುಃಖ ಅಥವಾ ಚಿಂತೆ, ಅಥವಾ ಕಡಿಮೆವೇಳೆ ಗೊಂದಲ ಅಥವಾ ಏಕಾಗ್ರತೆಯನ್ನು ಸೂಚಿಸುತ್ತದೆ. ಹುಬ್ಬುಗಂಟಿನ ನೋಟ ಸಂಸ್ಕೃತಿಯ ಅನುಸಾರವಾಗಿ ಬದಲಾಗುತ್ತದೆ.
ವಿವರಣೆ
[ಬದಲಾಯಿಸಿ]ಚಾರ್ಲ್ಸ್ ಡಾರ್ವಿನ್ ಹುಬ್ಬುಗಂಟಿಕ್ಕುವ ಪ್ರಧಾನ ಕ್ರಿಯೆಯನ್ನು ಹುಬ್ಬನ್ನು ಸುಕ್ಕುಬೀಳಿಸುವುದು ಎಂದು ವರ್ಣಿಸಿದನು. ಇದರಿಂದ ಮೇಲಿನ ತುಟಿಯು ಏರಿಕೆಯಾಗಿ ಬಾಯಿಯ ಮೂಲೆಗಳು ಕೆಳಗೆ ತಿರುಗುತ್ತವೆ.[೧] ಹುಬ್ಬುಗಂಟಿನ ನೋಟವು ಸಂಸ್ಕೃತಿಯಿಂದ ಸಂಸ್ಕೃತಿಗೆ ಬದಲಾಗುತ್ತದಾದರೂ, ಹುಬ್ಬುಗಂಟು ಒಂದು ಋಣಾತ್ಮಕ ಮುಖಭಾವವಾಗಿ ಗುರುತಿಸಲ್ಪಡುವಲ್ಲಿ ಸ್ವಲ್ಪ ಪ್ರಮಾಣದ ಸಾರ್ವತ್ರಿಕತ್ವವಿದೆ ಎಂದು ಕಾಣುತ್ತದೆ. ವಾಸ್ತವವಾಗಿ, ಕೋಪ ಅಥವಾ ಜುಗುಪ್ಸೆಯ ಘಟಕವಾಗಿ ಹುಬ್ಬುಗಂಟನ್ನು ಸಂಸ್ಕೃತಿಗಳಾದ್ಯಂತ ಗುರುತಿಸಲ್ಪಡುವ ಒಂದು ಸಾರ್ವತ್ರಿಕ ಮುಖಭಾವವಾಗಿ ವ್ಯಾಪಕವಾಗಿ ಗುರುತಿಸಲಾಗಿದೆ. ಈ ಸಾರ್ವತ್ರಿಕತ್ವವು ನಕಾರಾತ್ಮಕ ಭಾವನಾತ್ಮಕ ಸ್ಥಿತಿಗಳ ಸಾಮಾಜಿಕ ಸಂವಹನವನ್ನು ಅನುಮತಿಸುವ ಹುಬ್ಬುಗಂಟಿನ ಹಂಚಿಕೊಂಡ ಹೊಂದಿಸಬಲ್ಲ ಗುಣವನ್ನು ಸೂಚಿಸುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ Darwin, Charles R. (1872). The Expression of the Emotions in Man and Animals. London: John Murray. pp. 148–152.