ಹುಂಚ

ವಿಕಿಪೀಡಿಯ ಇಂದ
Jump to navigation Jump to search

ಹುಂಚ ಅಥವಾ ಹೊಂಬುಜ ಕ್ಷೇತ್ರ ಜೈನರ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಕರ್ನಾಟಕ ಮತ್ತು ಉತ್ತರ ಭಾರತದ ಜೈನರಿಗೆ ಇದೊಂದು ಪ್ರಮುಖವಾದ ಪುಣ್ಯಕ್ಷೇತ್ರ. ಇಲ್ಲಿ ೧೦ ಮತ್ತು ೧೧ನೇ ಶತಮಾನದ ಜೈನ ಬಸದಿಗಳನ್ನು ಕಾಣಬಹುದು. ಪಂಚಕೂಟ ಬಸದಿ, ಪದ್ಮಾವತಿ ದೇವಿ ಮತ್ತು ಪಾರ್ಶ್ವನಾಥ ತೀರ್ಥಂಕರರ ಜಿನಾಲಯಗಳು ಪ್ರಮುಖವಾದವು. ಇಲ್ಲಿ ಜೈನ ಮಠವೂ ಇದ್ದು. ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಈಗಿನ ಪೀಠಾಧಿಪತಿಗಳಾಗಿದ್ದಾರೆ. ಪಂಚಕೂಟದ ಬಸದಿ ಸಮೀಪದಲ್ಲಿಯೇ ಮುತ್ತಿನಕೆರೆ ಇದೆ. ಜೈನ ಧರ್ಮೀಯರಿಗೆ ಇಂದೊಂದು ಅತ್ಯಂತ ಪವಿತ್ರವಾದ ಸ್ಥಳವಾಗಿದೆ.

ಇಲ್ಲಿನ ಪದ್ಮಾವತಿ ದೇವಾಲಯವು ಜೈನ ಧರ್ಮೀಯರಿಗೆ ಪ್ರಮುಖ ಆರಾಧನಾ ಸ್ಥಳವಾಗಿದೆ. ಕರ್ನಾಟಕವಲ್ಲದೇ ದೂರದ ಉತ್ತರಭಾರತದಿಂದಲೂ ಜನರು ದೇವಿಯ ದರ್ಶನ ಪಡೆಯಲು ಆಗಮಿಸುತ್ತಾರೆ. ಪ್ರತಿ ಮಾರ್ಚ್ ತಿಂಗಳಿನಲ್ಲಿ ದೇವಿಯ ವಾರ್ಷಿಕ ರಥೋತ್ಸವವೂ ಜರುಗುತ್ತದೆ. ಆಗ ಸಹಸ್ರಾರು ಸಂಖ್ಯೆಯಲ್ಲಿ ಎಲ್ಲಾ ಧರ್ಮೀಯರು ಆಗಮಿಸುತ್ತಾರೆ. ಜೈನಮಠದಲ್ಲಿ ವಸತಿ ಮತ್ತು ಭೋಜನದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಹುಂಚವು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿಗೆ ಸೇರಿದೆ. ಹುಂಚವು ಜಿಲ್ಲಾ ಕೇಂದ್ರ ಸ್ಥಳ ಶಿವಮೊಗ್ಗದಿಂದ ೫೪ ಕಿಮೀ, ತೀರ್ಥಹಳ್ಳಿಯಿಂದ ೨೫ ಕಿಮೀ ಹಾಗೂ ತಾಲ್ಲೂಕು ಸ್ಥಳವಾದ ಹೊಸನಗರದಿಂದ ೧೮ ಕಿಮೀ ದೂರದಲ್ಲಿದೆ. ಹೋಗಿಬರಲು ಬಸ್ ಸೌಕರ್ಯ ಚೆನ್ನಾಗಿದೆ. ಪ್ರತಿನಿತ್ಯ ರಾತ್ರಿ ಬೆಂಗಳೂರಿಗೆ ತೆರಳಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮತ್ತು ಎಸ್‌ಆರ್‌ಎಸ್ ಟ್ರಾವಲ್ಸ್‌ನವರ ಬಸ್ ಸೌಕರ್ಯವೂ ಲಭ್ಯವಿದೆ.

ಸುತ್ತಲಿನ ನೋಡುವ ಸ್ಥಳಗಳೆಂದರೆ, ಕೊಡಚಾದ್ರಿ (ಹೊಸನಗರ ಮಾರ್ಗವಾಗಿ), ಕೊಲ್ಲೂರು, ಶೃಂಗೇರಿ ಮತ್ತು ನರಸಿಂಹರಾಜಪುರ.

ಈ ಮಠದ ವ್ಯಾಪ್ತಿಗೆ ವರಂಗ. ಕುಂದಾದ್ರಿ. ಹಾಗೂ ಬೆಂಗಳೂರಿನ ಪುಟ್ಟೇನಹಳ್ಳಿ ಜೈನ ಬಸದಿಯೂ ಸೇರುತ್ತದೆ


ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಹುಂಚ&oldid=920812" ಇಂದ ಪಡೆಯಲ್ಪಟ್ಟಿದೆ