ಹೀನಾರ್ಥ

ವಿಕಿಪೀಡಿಯ ಇಂದ
Jump to navigation Jump to search


Icono aviso borrar.png
ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ.
ಅಳಿಸುವಿಕೆಗೆ ಗುರುತು ಮಾಡಲು ಕಾರಣ: ಈ ಪುಟವು ವಿಕ್ಷನರಿಯಲ್ಲಿ ಹಾಕುವಂತಹ ವಸ್ತುವಿಷಯ ಒಳಗೊಂಡಿದೆ, ವಿಕಿಪೀಡಿಯಾಗೆ ತಕ್ಕುದಲ್ಲ


ಯಾವುದೇ ಒಂದು ಶಬ್ದಕ್ಕೆ ಎಲ್ಲಾ ಕಾಲಕ್ಕೂ ಒಂದೇ ಅರ್ಥ ಇರಬೇಕೆಂದೇನೂ ನಿಯಮವಿಲ್ಲ. ಬಹುಶಃ ಹಾಗೆ ಇರುವುದೂ ಇಲ್ಲ. ಒಂದು ಶಬ್ದಕ್ಕಿರುವ ಅರ್ಥ ಕಾಲ- ಕಾಲಕ್ಕೆ ಬದಲಾಗುತ್ತಾ ಬರುವುದುಂಟು. ಒಂದು ಶಬ್ದಕ್ಕೆ ಅರ್ಥ ಬರಬೇಕಾದರೆ ಆ ಶಬ್ದವನ್ನು ಉಚ್ಛರಿಸುವವ, ಅದನ್ನು ಕೇಳುವವ ಹಾಗೂ ಆ ಶಬ್ದವನ್ನುಉಚ್ಛರಿಸುವ ಸಂದರ್ಭ- ಮೂರೂ ಕಾರಣವಾಗುವವು. ಇದರಿಂದಾಗಿ ಯಾವುದೇ ಶಬ್ದವು ಖಾಯಂ ಆಗಿ ಒಂದೇ ಅರ್ಥವನ್ನು ಎಲ್ಲಾ ಕಾಲಕ್ಕೂ ಹೊಂದಿರಲಾರದು. ಅದು ಕಾಲ- ಕಾಲಕ್ಕೆ ಬಗೆ- ಬಗೆಯ ಅರ್ಥಗಳನ್ನು ಹೊಂದುತ್ತ ಬರುವುದು. ಹಳಗನ್ನಡದಲ್ಲಿ ಪ್ರಯೋಗದಲ್ಲಿದ್ದ ಎಷ್ಟೋ ಶಬ್ದಗಳ ಅರ್ಥಗಳು ಹೊಸಗನ್ನಡದ ಸಂದರ್ಭದಲ್ಲಿ ಭಿನ್ನ- ಭಿನ್ನವಾದುದನ್ನು ಕಾಣುವೆವು.

ಹೀನಾರ್ಥ[ಬದಲಾಯಿಸಿ]

ಒಂದು ಕಾಲದಲ್ಲಿ ಉತ್ತಮ ಅರ್ಥವನ್ನು ಹೊಂದಿದ್ದು ಅದು ಇಂದು. ಆ ಪದವನ್ನು ಬಳಕೆ ಮಾಡಿದರೆ ಕೆಟ್ಟ ಅರ್ಥವನ್ನು ಪಡೆದರೆ ಹೀನಾರ್ಥ[೧].

  1. ಇಂಗ್ಲಿಷ್‍ನಲ್ಲಿ 'Knave' ಎಂದರೆ 'ಬಾಲ ಸೇವಕ' ಎಂಬರ್ಥ ಇತ್ತು. ಇಂದು 'ಮೂರ್ಖ', 'ಮೋಸಗಾರ'.


ಶಬ್ದ ಮೊದಲಿದ್ದ ಅರ್ಥ ಈಗಿನ ಅರ್ಥ
ಅವಸ್ಥೆ ಸ್ಥಿತಿ ಹೀನಸ್ಥಿತಿ
ಟೀಕೆ ವ್ಯಾಖ್ಯಾನ , ವಿಶ್ಲೇಷಣೆ ಟೀಕಿಸು, ನಿಂದಿಸು
ಪೆದ್ದ ಪಂಡಿತ ದಡ್ಡ, ಮೂರ್ಖ
ಅಗ್ಗ ಶ್ರೇಷ್ಠ ಕನಿಷ್ಟ, ಸೋವಿ
ಗಾಳಿ ವಾಯು ಪಿಶಾಚಿ, ದೆವ್ವ, ಭೂತ
ಶಿಕ್ಷಾ ಶಿಕ್ಷಣ ದಂಡನೆ
ಆಳ್ ದೃಡವಾದ ಮನುಷ್ಯ ಸೇವಕ
ತಿಥಿ ಪಂಚಾಂಗ ರೀತಿ ಗೊತ್ತುಪಡಿಸಿದ ದಿನ ಸತ್ತವರ ದಿನ
ಕೂಳ್ ಆಹಾರ ಪಿಂಡ
ನಾರ್ಪ ಸುವಾಸನೆ ದುರ್ವಾಸನೆ
ಕೊದಿತ ಹೊಸದು ಕೊಳೆತದ್ದು

ಉದಾಹರಣೆ[ಬದಲಾಯಿಸಿ]

Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ಉಲ್ಲೇಖ[ಬದಲಾಯಿಸಿ]

  1. ರಾಜಪ್ಪ ದಳವಾಯಿ (೧೯೯೬). ಕನ್ನಡ ಸಾಹಿತ್ಯ ಕೋಶ. ಬೆಂಗಳೂರು: ದಳವಾಯಿ ಪ್ರಕಾಶನ ಬೆಂಗಳೂರು. pp. ೪೩೭-೩೮. Check date values in: |year= (help)
"https://kn.wikipedia.org/w/index.php?title=ಹೀನಾರ್ಥ&oldid=879703" ಇಂದ ಪಡೆಯಲ್ಪಟ್ಟಿದೆ