ಹಿಂದಿರುಗಿ ಬರಲಿಲ್ಲ

ವಿಕಿಪೀಡಿಯ ಇಂದ
Jump to navigation Jump to search

ತಾಯಿನಾಡು ಪತ್ರಿಕೆಯ ೨೨-೦೮-೧೯೫೪ರ ಸಂಚಿಕೆಗೆ ಪತ್ರಕರ್ತ ಹೆಚ್.ಆರ್.ನಾಗೇಶರಾವ್ ಪುಸ್ತಕ ಪ್ರಿಯ ಅಂಕಿತ ನಾಮದಲ್ಲಿ ಈ ಕೃತಿ ಕುರಿತು ಬರೆದ ವಿಮರ್ಶೆ.

ಕಾದಂಬರಿ. ಲೇಖಕರು - ಶ್ರೀ ಕೋ.ಚೆನ್ನಬಸಪ್ಪ, ಪ್ರಕಾಶಕರು - ಹೆಚ್.ವೆಂಕಟರಾಮಯ್ಯ ಅಂಡ್ ಸನ್ಸ್, ವಿದ್ಯಾನಿಧಿ ಬುಕ್ ಡಿಪೋ, ಮೈಸೂರು, ಬೆಲೆ ರೂ.೧-೮-೦

ಬಳ್ಳಾರಿ ಜಿಲ್ಲೆಯ ಬಡ ರೈತ ಕುಟುಂಬದ ಮಗ ಜಯದೇವ, ಕಷ್ಟ ರೀತಿಯಲ್ಲಿ ವ್ಯಾಸಂಗ ಮುಂದುವರಿಸಿ ಬಿ.ಎ. ಆನರ್ಸ್ ಫೈನಲಿನಲ್ಲಿರುವಾಗ ಮತ್ತು ಅವನ ತಂದೆ-ತಾಯಿಯ ಸರ್ವ ತ್ಯಾಗವೂ ಇನ್ನೇನು ಫಲಕ್ಕೆ ಬರುವುದೆಂದು ನಿರೀಕ್ಷಿಸಿದ್ದಾಗ `ಚಲೇ-ಜಾವ್' ಚಳವಳಿ ಪ್ರಾರಂಭವಾಗುತ್ತದೆ. ಜಯದೇವನೂ ಹೋರಾಟದಲ್ಲಿ ಧುಮ್ಮಿಕ್ಕಿ ಜೈಲು ಕಾಣುತ್ತಾನೆ. ಅವನ ಚಟುವಟಿಕೆಯ ಫಲವಾಗಿ, ತಂದೆಯ ಅಲ್ಪ ಸ್ವಲ್ಪ ಜಮೀನನ್ನು ಸರ್ಕಾರ ಹರಾಜು ಹಾಕಿಸುತ್ತದೆ. ಮಗನ ಕೊರಗಿನಲ್ಲಿ ತಾಯಿ ಸಾಯುತ್ತಾಳೆ. ಸ್ವಾತಂತ್ರ್ಯ ಬಂದ ನಂತರವೂ ರಾಷ್ಟ್ರದಲ್ಲಿ ಪರಿಸ್ಥಿತಿ ಬದಲಾವಣೆ ಆಗುವುದಿಲ್ಲ. ಕಮ್ಯೂನಿಸ್ಟ್ ಮನೋಭಾವಕ್ಕೆ ಜಯದೇವ ಹಿಂದಿರುಗುತ್ತಾನೆ. ಮತ್ತೆ ಬಂಧನ ಆಗುತ್ತದೆ. ತಂದೆ ಎದೆ ಒಡೆದು ಸಾಯುತ್ತಾರೆ. ಈ ಬಾರಿ ಜೈಲಿಗೆ ಹೋದವನು ಹಿಂದಿರುಗಿ ಬರುವುದೇ ಇಲ್ಲ. ಅವನನ್ನು ಬಿಡುಗಡೆ ಮಾಡಲಾಯಿತು ಎನ್ನುತ್ತದೆ ಸರ್ಕಾರ, ಇಲ್ಲ `ಗುಂಡಿಟ್ಟು ಕೊಲ್ಲಲಾಯಿತು' ಎನ್ನುತ್ತಾರೆ, ಕಮ್ಯೂನಿಸ್ಟರು. ಅವನ ಹೆಂಡತಿ ಮತ್ತು ಮಗುವಿನ ಪಾಲಿಗೆ ಮಾತ್ರ ಅವನು, `ಹಿಂದಿರುಗಿ ಬರಲಿಲ್ಲ'. ಈ ೩೫೧ ಪುಟಗಳ ಕಾದಂಬರಿಯ ಕಥೆ ಇದು. ಸರಳವಾಗಿ ಮನಕಲಕುವಂತೆ ಶ್ರೀ ಚೆನ್ನಬಸಪ್ಪನವರು ಬರೆದಿದ್ದಾರೆ.