ಹಾಲುಮಡ್ಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Ailanthus triphysa
Scientific classification e
ಸಾಮ್ರಾಜ್ಯ: ಸಸ್ಯ
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: ಯೂಡೈಕಾಟ್‍ಗಳು
ಏಕಮೂಲ ವರ್ಗ: ರೋಸಿಡ್ಸ್
ಗಣ: ಸ್ಯಾಪಿಂಡೇಲ್ಸ್
ಕುಟುಂಬ: ಸಿಮರೌಬೇಸಿಯೇ
ಕುಲ: ಐಲಾಂತಸ್
ಪ್ರಜಾತಿ:
A. triphysa
Binomial name
Ailanthus triphysa
(Dennst.) Alston., in Trimen, Hand-Book Fl. Ceylon vi. Suppl., 41 (1931)
Synonyms[೧]
  • Adenanthera triphysa Dennst.
  • Ailanthus imberbiflora F.Muell.
  • A. imberbiflora var. macartneyi F.M.Bailey
  • A. kurzii Prain
  • A. malabarica DC.
  • A. philippinensis Merr.
  • Hebonga mollis Radlk.
  • H. obliqua Radlk.
  • H. siamensis Radlk.
  • Pongelion fauvelianum (Pierre ex Laness.) Pierre
  • P. imberbiflorum (F.Muell.) Pierre

ಹಾಲುಮಡ್ಡಿಯು ಸೈಮಾರುಬೇಸೀ ಕುಟುಂಬದ ಐಲಾಂತಸ್ ಮಲಬಾರಿಕ ಪ್ರಭೇದದ ಮರ. ಪಶ್ಚಿಮ ಘಟ್ಟದ ಮಲೆನಾಡಿನ, ನಿತ್ಯಹರಿದ್ವರ್ಣದ ತೇವಮಯ ಕಾಡುಗಳಲ್ಲಿ ಕಂಡುಬರುತ್ತದೆ. ಪರ್ಣಪಾತಿ ಮರ. ಫೆಬ್ರವರಿ-ಮಾರ್ಚ್‌ನಲ್ಲಿ ಹೂಮೂಡಿ, ಕಾಯಿ ಏಪ್ರಿಲ್-ಮೇನಲ್ಲಿ ಪಕ್ವವಾಗುವುವು.

ವಿವರ[ಬದಲಾಯಿಸಿ]

ಈ ಮರವು ೩೦ ಮೀ. ಎತ್ತರದವರೆಗೆ ಬೆಳೆಯಬಹುದು. ವ್ಯಾಸ ೧.೨ ಮಿ. ಇರಬಹುದು.[೨] ತೊಗಟೆಯು ಬೂದು ಬಣ್ಣದ್ದಾಗಿದ್ದು ಸ್ವಲ್ಪಮಟ್ಟಿಗೆ ಒರಟಾಗಿರುತ್ತದೆ. ಮುಟ್ಟಲು ಮರಳು ಕಾಗದವನ್ನು ಹೋಲುತ್ತದೆ.

ಉಪಯೋಗಗಳು[ಬದಲಾಯಿಸಿ]

ಇದರಿಂದ ಬರುವ ರಾಳವೇ ಸುವಾಸನೆಯುಳ್ಳ ಹಾಲುಮಡ್ಡಿ ಧೂಪ. ಈ ರಾಳವನ್ನು ಧೂಪದ್ರವ್ಯದಲ್ಲಿ ಬಳಸಬಹುದು. ತೊಗಟೆಯನ್ನು ಕತ್ತರಿಸಿದಾಗ, ಅಂಟಂಟಾದ ರಾಳ ಸ್ರವಿಸುತ್ತದೆ. ಇದು ಒಣಗಿದಾಗ ಭಿದುರವಾಗುತ್ತದೆ. ಈ ರಾಳವನ್ನು ಔಷಧೀಯ ಉದ್ದೇಶಗಳಿಗೂ ಬಳಸಬಹುದು. ಚೌಬೀನೆಯನ್ನು ಬೆಂಕಿಕಡ್ಡಿ ಮತ್ತು ಪ್ಲೈವುಡ್ ತಯಾರಿಸಲು ಬಳಸಬಹುದು.[೩]

ಚಿತ್ರಸಂಪುಟ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Ailanthus triphysa (Dennst.) Alston". Plants of the World Online (POWO). Royal Botanic Gardens, Kew/Science. Retrieved 19 April 2020.
  2. "AgroForestryTree Database". Archived from the original on 2012-03-09.
  3. International Union for Conservation of Nature and Natural Resources (1969). Proceedings and Papers of the Technical Meeting. Natural monuments. p. 120. Retrieved 9 September 2013.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: