ಹಾಯ್ ಬೆಂಗಳೂರ್
ಗೋಚರ
ಹಾಯ್ ಬೆಂಗಳೂರ್ ಕನ್ನಡದ ಕಪ್ಪು ಸುಂದರಿ ಎಂದೇ ಪ್ರಚಲಿತದಲ್ಲಿರುವ ಕನ್ನಡ ವಾರಪತ್ರಿಕೆ.ಕನ್ನಡದ ಪ್ರತಿಭಾವಂತ ಲೇಖಕ ಹಾಗೂ ಪ್ರಭಾವಿ ಪತ್ರಕರ್ತರಾದ ರವಿ ಬೆಳಗೆರೆ ಯವರ ಸಾರಥ್ಯದಲ್ಲಿ ಮುನ್ನೆಡೆಯುತ್ತಿದೆ.
ಸ್ಥಾಪನೆ
[ಬದಲಾಯಿಸಿ]೧೯೯೫ರಲ್ಲಿ ಬೆಂಗಳೂರಿನ ಪದ್ಮನಾಭ ನಗರದಲ್ಲಿನ ಕಛೆರಿಯಲ್ಲಿ ರವಿ ಬೆಳಗೆರೆಯವರ ಸಾರಥ್ಯದಲ್ಲಿ ಹಾಗೂ ಆರ್.ಟಿ.ವಿಠಲಮೂರ್ತಿ, ರಾ.ಸೊಮನಾಥ,ಜೋಗಿ ಮತ್ತು ಇ.ಹೆಚ್.ಸಂಗಮದೇವರವರುಗಳ ಸಮಕ್ಷಮದಲ್ಲಿ ಪ್ರಕಟಗೊಂಡಿತು.
ಸಾರ ಸಂಗ್ರಹ
[ಬದಲಾಯಿಸಿ]- ಲವ್ ಲವಿಕೆ.
- ಬಾಟಮ್ ಐಟಂ.
- ಖಾಸ್ ಬಾತ್.
ಪತ್ರಿಕಾ ಲೋಕದಲ್ಲೇ ಸಂಚಲನ ಮೂಡಿಸಿ ಐದು ವರ್ಷಗಳವರೆಗು ಹೆಚ್ಚು ಪ್ರಕಟವಾಗಿದ್ದು ಪಾಪಿಗಳ ಲೋಕದಲ್ಲಿ ,ಇದರ ಪ್ರಮುಖ ವಿಷಯ ಪಾತಕ ಲೋಕದ ಸುದ್ದಿಯಾಗಿತ್ತು.
ಇತರೆ ಸಾರ ಸಂಗ್ರಹಗಳು
[ಬದಲಾಯಿಸಿ]- ಹಗರಣಗಳು.
- ವ್ಯವಹಾರಗಳು.
- ರಾಜಕೀಯ ಹಿನ್ನೆಲೆಗಳು.
- ಕೊಲೆ.
- ಅಪರಾಧ.
ಹೀಗೆ ಮುಂತಾದುವುಗಳನ್ನು ಸಮಾಜದ ಕಣ್ಣಿಗೆ ಅತಿ ಸೂಕ್ಷ್ಮವಾಗಿ ಪರಿಚಯಿಸಿದ ಹಿಗ್ಗಳಿಕೆ ಈ ಪತ್ರಿಕೆಯಾಗಿದೆ ಈ ಎಲ್ಲಾ ಸಾರಸಂಗ್ರಹ ಲೇಖನಗಳನ್ನು ಹೊರೆತು ಪಡೆಸಿ ಮನೋವಿಜ್ಣಾನ ಕ್ಷೇತ್ರ, ಕ್ರೀಡೆ, ವಿಜ್ಣಾನ ಮತ್ತು ಸಿನೆಮಾ ಕ್ಷೇತ್ರಗಳನ್ನು ಒಳಗೊಂಡ ವಾರ ಪತ್ರಿಕೆಯಾಗಿದೆ.
ಮಾರುಕಟ್ಟೆಯ ಜಾಹಿರಾತುಗಳಿಲ್ಲದೇ ಪ್ರಕಾಶಿತವಾಗುತ್ತಿರುವ ಕನ್ನಡ ಪತ್ರಿಕೆಗಳಲ್ಲೊಂದು.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |