ಹಾಕ್-ಐ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಾಕ್-ಐ ಎನ್ನುವುದು ಕ್ರಿಕೆಟ್, ಟೆನ್ನಿಸ್ ಮತ್ತು ಇತರ ಕ್ರೀಡೆಗಳಲ್ಲಿ ಬಳಸಲಾಗುವ ಸಂಕೀರ್ಣವಾದ ವ್ಯವಸ್ಥೆಯಾಗಿದೆ ಮತ್ತು ಇದನ್ನು ಚೆಂಡಿನ ಹಾದಿಯನ್ನು ದೃಶ್ಯಾತ್ಮಕವಾಗಿ ಪತ್ತೆ ಹಚ್ಚಲು ಮತ್ತು ಅದರ ಹೆಚ್ಚು ಅಂಕಿಅಂಶಾತ್ಮಕವಾದ ಸಂಭಾವ್ಯ ಹಾದಿಯನ್ನು ಚಲಿಸುವ ಚಿತ್ರವಾಗಿ ದಾಖಲಿಸಿರುವುದನ್ನು ಪ್ರದರ್ಶಿಸಲು ಬಳಸಲಾಗುತ್ತದೆ.[೧] ಟೆನ್ನಿಸ್‌ನಂತಹ ಕೆಲವು ಕ್ರೀಡೆಗಳಲ್ಲಿ, ಇದೀಗ ಇದು ತೀರ್ಪು ನೀಡುವ ಪ್ರಕ್ರಿಯೆಯ ಭಾಗವಾಗಿದೆ. ಕ್ರಿಕೆಟ್‌ನಲ್ಲಿ ಕೆಲವೊಂದು ಸಂದರ್ಭಗಳಲ್ಲಿ ಚೆಂಡಿನ ಮುಂದಿನ ಹಾದಿಯನ್ನು ಊಹಿಸಲು ಸಹ ಬಳಸಲಾಗುತ್ತದೆ. ಇದನ್ನು ಯುನೈಟೆಡ್ ಕಿಂಗ್‌ಡಮ್‌ನಲ್ಲಿನ ಹ್ಯಾಂಪಷೈರ್ನಲ್ಲಿನ ರೋಮ್ಸೇಯಲ್ಲಿನ ರೋಕ್ ಮ್ಯಾನರ್ ರಿಸರ್ಚ್ ಲಿಮಿಟೆಡ್ನ ಇಂಜಿನೀಯರ್‌ಗಳು ಅಭಿವೃದ್ಧಿಪಡಿಸಿದರು. ಯುನೈಟೆಡ್ ಕಿಂಗ್‌ಡಮ್ ಪೇಟೆಂಟ್ ಅನ್ನು ಸಲ್ಲಿಸಲಾಯಿತು ಆದರೆ ಡಾ. ಪಾಲ್ ಹಾಕಿನ್ಸ್ ಮತ್ತು ಡೇವಿಡ್ ಶೆರ್ರಿಯವರು ಅದನ್ನು ಹಿಂತೆಗೆದುಕೊಂಡರು.[೨] ನಂತರ, ತಂತ್ರಜ್ಞಾನವು ಹಾಕ್-ಐ ಇನ್ನೋವೇಶನ್ಸ್ ಲಿಮಿಟೆಡ್ ಎಂಬ ಪ್ರತ್ಯೇಕ ಕಂಪನಿಯಾಗಿ ಟೆಲಿವಿಷನ್ ನಿರ್ಮಾಣ ಕಂಪನಿಯಾದ ಸನ್‌ಸೆಟ್ + ವೈನ್ನೊಂದಿಗೆ ಜಂಟಿ ಉದ್ಯಮವಾಗಿ ಪ್ರಾರಂಭವಾಯಿತು, ಈ ಟೆಲಿವಿಷನ್ ನಿರ್ಮಾಣ ಕಂಪನಿಯನ್ನು ಸೋನಿಯು ಮಾರ್ಚ್ ೨೦೧೧ ರಲ್ಲಿ ಸಂಪೂರ್ಣವಾಗಿ ಖರೀದಿ ಮಾಡಿತ್ತು.[೩]

ಕಾರ್ಯಾಚರಣೆಯ ವಿಧಾನಗಳು[ಬದಲಾಯಿಸಿ]

ಎಲ್ಲಾ ಹಾಕ್-ಐ ವ್ಯವಸ್ಥೆಗಳು ದೃಶ್ಯ ಚಿತ್ರಗಳನ್ನು ಬಳಸಿದ ತ್ರಿಕೋಣೀಕರಣ ತತ್ವದ ಮೇಲೆ ಮತ್ತು ಆಟವಾಡುವ ಪ್ರದೇಶದ ಸುತ್ತಲೂ ನಾಲ್ಕು ವಿಭಿನ್ನ ಸ್ಥಳಗಳು ಮತ್ತು ಕೋನಗಳಲ್ಲಿ ನೆಲೆಸಿರುವ ಕನಿಷ್ಠ ನಾಲ್ಕು ಅತೀ-ವೇಗದ ವೀಡಿಯೋ ಕ್ಯಾಮೆರಾಗಳು ಒದಗಿಸುವ ಸಮಯಾಧಾರಿತ ದತ್ತಾಂಶದ ಮೇಲೆ ಆಧಾರಿತವಾಗಿದೆ.[೨] ವ್ಯವಸ್ಥೆಯು ಅತೀ ವೇಗದ ವೀಡಿಯೋ ಪ್ರೊಸೆಸರ್ಗಳು ಒದಗಿಸುವ ವೀಡಿಯೋ ಫೀಡ್‌ಗಳು ಮತ್ತು ಚೆಂಡಿನ ಟ್ರ್ಯಾಕರ್ ಅನ್ನು ತ್ವರಿತವಾಗಿ ಪ್ರಕ್ರಿಯೆಗೊಳಿಸುತ್ತದೆ. ದತ್ತಾಂಶ ಸಂಗ್ರಹವು ಆಟವಾಡುವ ಪ್ರದೇಶದ ಪೂರ್ವನಿರ್ಧಾರಿತ ಮಾದರಿಯನ್ನು ಮತ್ತು ಆಟದ ನಿಯಮಗಳ ಬಗೆಗಿನ ದತ್ತಾಂಶವನ್ನು ಒಳಗೊಂಡಿರುತ್ತದೆ.

ಪ್ರತಿ ಕ್ಯಾಮೆರಾವು ಕಳುಹಿಸಿದ ಪ್ರತಿ ಪೂರ್ಣ ಚಿತ್ರದಲ್ಲಿ, ಚೆಂಡಿನ ಚಿತ್ರಕ್ಕೆ ಅನುರೂಪವಾಗಿರುವ ಪಿಕ್ಸೆಲ್‌ಗಳ ಸಮೂಹವನ್ನು ವ್ಯವಸ್ಥೆಯು ಗುರುತಿಸುತ್ತದೆ. ಅದು ತದನಂತರ ಪ್ರತಿ ಚೌಕಟ್ಟಿಗೆ ಚೆಂಡಿನ ೩D ಸ್ಥಾನವನ್ನು ಒಂದೇ ಸಮಯಾವಧಿಯಲ್ಲಿ ಕನಿಷ್ಠ ಎರಡು ವಾಸ್ತವಿಕವಾಗಿ ಪ್ರತ್ಯೇಕವಾಗಿರುವ ಕ್ಯಾಮೆರಾಗಳಲ್ಲಿ ಹೋಲಿಸುವುದರ ಮೂಲಕ ಲೆಕ್ಕಾಚಾರ ಮಾಡುತ್ತದೆ. ಚೌಕಟ್ಟುಗಳ ಶ್ರೇಣಿಯು ಚೆಂಡು ಪ್ರಯಾಣಿಸಿದ ಹಾದಿಯ ದಾಖಲೆಯನ್ನು ಸೃಷ್ಟಿಸುತ್ತದೆ. ಹಾಗೆಯೇ ಇದು ಚೆಂಡಿನ ಭವಿಷ್ಯದ ಸಾಗುವ ಹಾದಿಯನ್ನು ಸಹ "ಊಹಿಸುತ್ತದೆ ಮತ್ತು ಅಲ್ಲಿ ಅದು ದತ್ತಾಂಶಮೂಲದಲ್ಲಿ ಈಗಾಗಲೇ ಪ್ರೋಗ್ರಾಂ ಮಾಡಲಾಗಿರುವ ಆಟವಾಡುವ ಪ್ರದೇಶದ ಯಾವುದೇ ಗುಣಲಕ್ಷಣದೊಂದಿಗೆ ಸಂವಹಿಸುತ್ತದೆ. ಹಾಗೆಯೇ ವ್ಯವಸ್ಥೆಯು ಆಟದ ನಿಯಮಗಳ ಉಲ್ಲಂಘನೆಗಳನ್ನು ನಿರ್ಧರಿಸಲು ಈ ಸಂವಹನಗಳನ್ನು ಸಹ ಅರ್ಥ ಕಲ್ಪಿಸಿಕೊಳ್ಳುತ್ತದೆ.[೨]

ಚೆಂಡಿನ ಹಾದಿಯ ಮತ್ತು ಆಟದ ಪ್ರದೇಶದ ಗ್ರಾಫಿಕ್ ಚಿತ್ರವನ್ನು ವ್ಯವಸ್ಥೆಯು ರಚಿಸುತ್ತದೆ, ಇದರರ್ಥ ಮಾಹಿತಿಯನ್ನು ತೀರ್ಪುಗಾರರು, ದೂರದರ್ಶನ ವೀಕ್ಷಕರು ಮತ್ತು ತರಬೇತಿ ಸಿಬ್ಬಂದಿಯವರಿಗೆ ನೈಜ ಸಮಯದಲ್ಲಿ ಒದಗಿಸಬಹುದು.

ಅಪ್ಪಟವಾದ ಪತ್ತೆಹಚ್ಚುವಿಕೆ ವ್ಯವಸ್ಥೆಯು ಪೂರಕ ದತ್ತಾಂಶ ಮೂಲದೊಂದಿಗೆ ಹಾಗೂ ಆರ್ಕೈವಿಂಗ್ ಸಾಮರ್ಥ್ಯಗಳೊಂದಿಗೆ ಸಂಯೋಜಿತವಾಗಿರುತ್ತದೆ ಹಾಗೂ ಇದರಿಂದ ವೈಯಕ್ತಿಕ ಆಟಗಾರರು, ಆಟಗಳು, ಪ್ರತಿ ಚೆಂಡಿನ ಹೋಲಿಕೆಗಳು ಹಾಗೂ ಇತರವುಗಳ ಬಗ್ಗೆ ಅಂಕಿಅಂಶಗಳು ಮತ್ತು ಪ್ರವೃತ್ತಿಗಳನ್ನು ಹಿಂಪಡೆಯಲು ಮತ್ತು ವಿಶ್ಲೇಷಣೆ ಮಾಡಲು ಸಾಧ್ಯವಾಗುತ್ತದೆ.

ಹಾಕ್-ಐ ಇನ್ನೋವೇಶನ್ ಲಿಮಿಟೆಡ್[ಬದಲಾಯಿಸಿ]

ಎಲ್ಲಾ ತಂತ್ರಜ್ಞಾನ ಮತ್ತು ಬೌದ್ಧಿಕ ಹಕ್ಕನ್ನು ವಿಂಚೆಸ್ಟರ್, ಹ್ಯಾಂಪಶೈರ್ನಲ್ಲಿರುವ ಹಾಕ್-ಐ ಇನ್ನೋವೇಶನ್ಸ್ ಲಿಮಿಟೆಡ್ ಎನ್ನುವ ಪ್ರತ್ಯೇಕ ಕಂಪನಿಯು ನಿರ್ಮಿಸಿತು.

೨೦೦೬ ರ ಜೂನ್ ೧೪ ರಂದು, ವಿಸ್ಡೆನ್ ಗ್ರೂಪ್ ನೇತೃತ್ವದ ಹೂಡಿಕೆದಾರರ ಸಮೂಹವು ಕಂಪನಿಯನ್ನು ಕೊಂಡುಕೊಂಡಿತು,[೪] ಮತ್ತು ಅವರಲ್ಲಿ ಅಮೇರಿಕದ ಶ್ರೀಮಂತ ಮನೆತನದ ಸದಸ್ಯ ಮತ್ತು ವ್ಯಾಪಾರದ ಪರಂಪರೆಯ ಮಾರ್ಕ್ ಗೆಟ್ಟಿ ಅವರು ಸೇರಿದ್ದರು. ಸ್ವಾಧೀನ ಪಡಿಸಿಕೊಳ್ಳುವಿಕೆಯು ಕ್ರಿಕೆಟ್‌ನಲ್ಲಿ ವಿಸ್ಡೆನ್‌ನ ಅಸ್ತಿತ್ವವನ್ನು ಇನ್ನಷ್ಟು ಬಲಗೊಳಿಸುವುದು ಮತ್ತು ಅದಕ್ಕೆ ಟೆನ್ನಿಸ್ ಮತ್ತು ಇತರ ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ಪ್ರವೇಶಿಸುವುದರ ಜೊತೆಗೆ ಬಾಸ್ಕೆಟ್‌ಬಾಲ್ಗಾಗಿ ಹಾಕ್-ಐ ಕಾರ್ಯನಿರ್ವಹಣೆಯ ವ್ಯವಸ್ಥೆಯೊಂದನ್ನು ಜಾರಿ ಮಾಡುವುದಾಗಿತ್ತು. ಹಾಕ್-ಐ ವೆಬ್‌ಸೈಟ್‌ನ ಪ್ರಕಾರ, ದೂರದರ್ಶನದಲ್ಲಿ ತೋರಿಸುವುದಕ್ಕಿಂತಲೂ ಇನ್ನೂ ಹೆಚ್ಚಿನ ದತ್ತಾಂಶವನ್ನು ವ್ಯವಸ್ಥೆಯು ತೋರಿಸುತ್ತದೆ ಮತ್ತು ಅದನ್ನು ಸುಲಭವಾಗಿ ಇಂಟರ್‌ನೆಟ್‌ನಲ್ಲಿ ತೋರಿಸಬಹುದು.

೨೦೧೦ ರ ಸೆಪ್ಟೆಂಬರ್‌ನಲ್ಲಿ ಮಾರಾಟಕ್ಕೆ ಲಭ್ಯವಾದ ಇದು ಸಂಪೂರ್ಣ ಘಟಕವಾಗಿ ೨೦೧೧ ರ ಮಾರ್ಚ್‌ನಲ್ಲಿ ಜಪಾನಿನ ಎಲೆಕ್ಟ್ರಾನಿಕ್ ಬೃಹತ್ ಕಂಪನಿಯಾದ ಸೋನಿಗೆ ಮಾರಾಟ ಮಾಡಲ್ಪಟ್ಟಿತು.[೩]

ಕ್ರಿಕೆಟ್[ಬದಲಾಯಿಸಿ]

ತಂತ್ರಜ್ಞಾನವನ್ನು ಮೊದಲು ೨೦೦೧ ರ ಮೇ ೨೧ ರಂದು ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆದ ಟೆಸ್ಟ್ ಪಂದ್ಯದಲ್ಲಿ ಚಾನೆಲ್ ೪ ಬಳಸಿತು. ಇದನ್ನು ಮೂಲಭೂತವಾಗಿ ಬಹುಪಾಲು ಟೆಲಿವಿಷನ್ ನೆಟ್ವರ್ಕ್‌ಗಳು ಚಲಿಸುವ ಹಂತದಲ್ಲಿ ಚೆಂಡಿನ ಪಥವನ್ನು ಪತ್ತೆ ಹಚ್ಚಲು ಬಳಸಿದವು. ೨೦೦೮/೨೦೦೯ ರ ಚಳಿಗಾಲದ ಅವಧಿಯಲ್ಲಿ ಮರುಪರಿಶೀಲನೆ ವ್ಯವಸ್ಥೆಯೊಂದನ್ನು ಐಸಿಸಿ ಪ್ರಯೋಗಿಸಿತು ಮತ್ತು ಇಲ್ಲಿ ತಂಡವೊಂದು ಎಲ್‌ಬಿಡಬ್ಲ್ಯೂ ನಿರ್ಣಯದ ವಿರುದ್ಧ ತಂಡವೊಂದು ಸಮ್ಮತಿಸದಿದ್ದರೆ ಮೂರನೇ ಅಂಪೈರ್‌ಗೆ ನಿರ್ಣಯವನ್ನು ಕೈಗೊಳ್ಳುವಂತೆ ವಹಿಸುವ ಸಂದರ್ಭದಲ್ಲಿ ಹಾಕ್ಐ ಅನ್ನು ಬಳಸಲಾಯಿತು. ಚೆಂಡು ಬ್ಯಾಟ್ಸ್‌ಮನ್‍‌ಗೆ ತಾಕುವವರೆಗೆ ಹೇಗೆ ಚಲಿಸಿತು ಎಂಬ ಕುರಿತಂತೆ ಮೂರನೇ ಅಂಪೈರ್ ನೋಡಲು ಸಾಧ್ಯವಾಗುತ್ತಿತ್ತು ಆದರೆ ಚೆಂಡು ಬ್ಯಾಟ್ಸ್‌ಮನ್‌ಗೆ ತಾಕಿದ ನಂತರದ ಊಹಾತ್ಮಕ ಚೆಂಡಿನ ಪಥವನ್ನು ನೋಡಲಾಗುತ್ತಿರಲಿಲ್ಲ.[೫]

ಲೆಗ್ ಬಿಫೋರ್ ವಿಕೆಟ್ ನಿರ್ಣಯವನ್ನು ವಿಶ್ಲೇಷಣೆ ಮಾಡುವಲ್ಲಿ ಇದನ್ನು ಕ್ರಿಕೆಟ್ ಪ್ರಸಾರದಲ್ಲಿ ಬಹುಮುಖ್ಯವಾಗಿ ಬಳಸಲಾಗುತ್ತಿದ್ದು, ಇಲ್ಲಿ ಚೆಂಡು ಸ್ಟಂಪ್‌ಗಳಿಗೆ ತಾಗುತ್ತಿತ್ತೇ ಎಂದು ನೋಡಲು ಬ್ಯಾಟ್ಸ್‌ಮನ್ನ ಕಾಲುಗಳ ಮೂಲಕ ಚೆಂಡಿನ ಸಂಭಾವ್ಯ ಹಾದಿಯನ್ನು ಕಲ್ಪಿಸುತ್ತದೆ. ಲೆಗ್ ಬಿಫೋರ್ ನಿರ್ಧಾರಗಳಿಗೆ ಸಂಬಂಧಿಸಿದಂತೆ ಸಾಂಪ್ರದಾಯಿಕ ನಿಧಾನ ಚಲನೆಯ ಅಥವಾ ಹಾಕ್-ಐ ವೀಕ್ಷಣೆಗಾಗಿ ಮೂರನೇ ಅಂಪೈರ್‌ಗಳೊಂದಿಗೆ ಸಲಹೆ ಮಾಡುವುದನ್ನು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪ್ರಸ್ತುತ ಅನುಮೋದಿಸಲಾಗಿದೆ, ಆದರೆ ಕ್ರಿಕೆಟ್‌ನಲ್ಲಿ ಅದರ ನಿಖರತೆಯ ಬಗ್ಗೆ ಇನ್ನೂ ಶಂಕೆಗಳು ಉಳಿದೇ ಇವೆ.[೬]

ಬೌಲಿಂಗ್ ವೇಗದ ಬಗ್ಗೆ ಇದರ ನೈಜ ಸಮಯದ ಒಳಗೊಳ್ಳುವಿಕೆಯ ಕಾರಣದಿಂದ, ಈ ವ್ಯವಸ್ಥೆಯನ್ನು ಬೌಲಿಂಗ್‌ನ ದಿಕ್ಕು ಮತ್ತು ಅಂತರ, ತಿರುಗುವಿಕೆ/ತಿರುವಿನ ಕುರಿತ ಮಾಹಿತಿಯಂತಹ ಬೌಲರ್‌ನು ಚೆಂಡೆಸೆಯುವ ಕುರಿತ ಮಾಹಿತಿಯನ್ನು ತೋರಿಸಲು ಸಹ ಬಳಸಲಾಗುತ್ತದೆ. ಓವರ್‌ನ ಮುಕ್ತಾಯದ ನಂತರ, ನಿಧಾನಗತಿಯ ಚೆಂಡೆಸತಗಳು, ಬೌನ್ಸರ್‌ಗಳು ಮತ್ತು ಲೆಗ್ ಕಟರ್‌ಗಳಂತರ ಬೌಲರ್‌ನ ಪರಿವರ್ತನೆಗಳನ್ನು ಏಕಕಾಲಕ್ಕೆ ಆಗಾಗ್ಗೆ ತೋರಿಸಲಾಗುತ್ತದೆ. ಪಂದ್ಯದ ಸಂದರ್ಭದಲ್ಲಿ ಬೌಲರ್‌ನ ಸಂಪೂರ್ಣ ದಾಖಲೆಯನ್ನು ಸಹ ತೋರಿಸಲಾಗುತ್ತದೆ.

ಹಾಕ್-ಐ ನ ವಿಶ್ಲೇಷಣೆಯಿಂದ ಬ್ಯಾಟ್ಸ್‌ಮನ್‌ಗಳೂ ಸಹ ಲಾಭವನ್ನು ಪಡೆದುಕೊಳ್ಳಬಹುದು, ಏಕೆಂದರೆ ಬ್ಯಾಟ್ಸ್‌ಮನ್‌ಗಳು ಎಷ್ಟು ಚೆಂಡಿನಲ್ಲಿ ಎಷ್ಟೆಷ್ಟು ರನ್ ಗಳಿಸಿದ್ದಾರೆ ಎಂಬುದರ ದಾಖಲೆಯನ್ನೂ ಸಹ ನೋಡಬಹುದಾಗಿದೆ. ಇವುಗಳನ್ನು ಸಾಮಾನ್ಯವಾಗಿ ಬ್ಯಾಟ್ಸ್‌ಮನ್‌ನ ೨-ಡಿ ಛಾಯಾರೇಖರೂಪದಲ್ಲಿ ಮತ್ತು ಬ್ಯಾಟ್ಸ್‌ಮನ್‌ಗಳು ಎದುರಿಸಿದ ಚೆಂಡನ್ನು ಬಣ್ಣದ ಬಿಂದುಗಳಲ್ಲಿ ತೋರಿಸಲಾಗುತ್ತದೆ. ಚೆಂಡು ನಿಖರವಾಗಿ ಪುಟಿದ ಸ್ಥಳ ಅಥವಾ ಬೌಲರ್‌ನು ಎಸೆದ ಚೆಂಡಿನ ವೇಗವು (ಬ್ಯಾಟ್ಸ್‌ಮನ್‌ನ ಪ್ರತಿಕ್ರಿಯೆ ಸಮಯವನ್ನು ಅಂದಾಜಿಸಲು) ಸಹ ಪಂದ್ಯದ ನಂತರದ ವಿಶ್ಲೇಷಣೆಗೆ ಸಹಾಯ ಮಾಡಬಹುದು.

ಟೆನಿಸ್[ಬದಲಾಯಿಸಿ]

೨೦೦೪ ರ ಯುಎಸ್ ಓಪನ್ ಪಂದ್ಯಾವಳಿಯಲ್ಲಿ ಜೆನ್ನಿಫರ್ ಕ್ಯಾಪ್ರಿಯಾಟಿ ಅವರ ವಿರುದ್ಧ ಪರಾಭವಗೊಂಡ ಸೆರೆನಾ ವಿಲಿಯಮ್ಸ್ ಅವರು ಹಲವು ಪ್ರಮುಖ ಆಟದ ನಿರ್ಣಯಗಳನ್ನು ಪ್ರಶ್ನೆ ಮಾಡಿದ್ದರು ಮತ್ತು ಟಿವಿ ಮರುಪ್ರಸಾರದಲ್ಲಿ ಅವುಗಳು ನಿಜವಾಗಿಯೂ ತಪ್ಪಾಗಿತ್ತು ಎಂದು ಕಂಡುಬಂದಿತ್ತು. ನಿರ್ಣಯಗಳನ್ನು ಹಿಂಪಡೆಯದಿದ್ದರೂ, ಪಂದ್ಯದ ಪ್ರಮುಖ ಅಂಪೈರ್ ಆಗಿದ್ದ ಮೇರಿಯಾನಾ ಆಲ್ವೆಸ್ ಅವರನ್ನು ಪಂದ್ಯಾವಳಿಯಿಂದ ಮತ್ತು ನಂತರದ ಯುಎಸ್ ಓಪನ್ ಪಂದ್ಯಾವಳಿಗಳಿಂದ ವಜಾ ಮಾಡಲಾಗಿತ್ತು. ಈ ತಪ್ಪುಗಳು ಪ್ರಮುಖವಾಗಿ ಲೈನ್ ಕಾಲಿಂಗ್ ಸಹಾಯದ ಬಗ್ಗೆ ಯೋಚಿಸಲು ಪ್ರೇರೇಪಿಸಿತು, ಏಕೆಂದರೆ ಆ ಸಮಯದಲ್ಲಿ ಆಟೋ-ರೆಫರೆನ್ಸ್ ವ್ಯವಸ್ಥೆಯನ್ನು ಪರೀಕ್ಷಿಸಲಾಗುತ್ತಿತ್ತು ಮತ್ತು ಅದು ತೀರಾ ನಿಖರವಾಗಿರುವುದಾಗಿ ಕಂಡು ಬಂದಿತು.[೭]

೨೦೦೫ ರ ಕೊನೆಯಲ್ಲಿ ನ್ಯೂಯಾರ್ಕ್ ನಗರದಲ್ಲಿ ಹಾಕ್-ಐ ಅನ್ನು ಇಂಟರ್‌ನ್ಯಾಷನಲ್ ಟೆನ್ನಿಸ್ ಫೆಡರೇಶನ್ (ಐಟಿಎಫ್) ಪರೀಕ್ಷಿಸಿತು ಮತ್ತು ಅದನ್ನು ವೃತ್ತಿಪರ ಬಳಕೆಗಾಗಿ ಅಂಗೀಕಾರ ನೀಡಿತು. ನ್ಯೂಯಾರ್ಕ್‌ನಲ್ಲಿ ನಡೆದ ಪರೀಕ್ಷೆಗಳು ಮ್ಯಾಕ್‌ಕ್ಯಾಮ್ಗೆ ಸಮನಾಗಿರುವ ಐಟಿಎಫ್‌ನ ಅತೀ ವೇಗ ಕ್ಯಾಮರಾ ಸಾಧನಗಳಿಂದ ೮೦ ಹೊಡೆತಗಳನ್ನು ಮಾಪನ ಮಾಡುವುದನ್ನು ಒಳಗೊಂಡಿತ್ತು ಎಂದು ಹಾಕ್-ಐ ವರದಿ ಮಾಡಿತು. ಆಸ್ಟ್ರೇಲಿಯದಲ್ಲಿ ನಡೆದ ಪ್ರದರ್ಶನ ಟೆನ್ನಿಸ್ ಪಂದ್ಯಾವಳಿಯ ಸಂದರ್ಭದಲ್ಲಿ ಈ ವ್ಯವಸ್ಥೆಯ ಪ್ರಾರಂಭಿಕ ಪರೀಕ್ಷಾ ಕಾಲದಲ್ಲಿ (ಸ್ಥಳೀಯ ಟಿವಿಯಲ್ಲಿ ನೋಡಿದಂತೆ), ಟೆನ್ನಿಸ್ ಚೆಂಡೊಂದನ್ನು "ಔಟ್" ಎಂದು ತೋರಿಸಿದ್ದಾಗಿಯೂ, ಆದರೆ ಅದಕ್ಕೆ ಸಂಬಂಧಿಸಿದ ಪದವು "ಇನ್" ಆಗಿದ್ದ ಸಂದರ್ಭವೂ ಇತ್ತು.[ಸೂಕ್ತ ಉಲ್ಲೇಖನ ಬೇಕು] ಇದನ್ನು ವೃತ್ತವಾಗಿ ನಕ್ಷೆಯಾಕಾರದ ಪ್ರದರ್ಶನದಲ್ಲಿ ಟೆನ್ನಿಸ್ ಚೆಂಡನ್ನು ತೋರಿಸಿದ ರೀತಿಯಲ್ಲಿನ ದೋಷವಾಗಿತ್ತೇ ಹೊರತು ಪದಲೋಪವಾಗಿರಲಿಲ್ಲ ಎಂದು ವಿವರಿಸಲಾಯಿತು.[ಸೂಕ್ತ ಉಲ್ಲೇಖನ ಬೇಕು] ಇದನ್ನು ತಕ್ಷಣವೇ ಸರಿಪಡಿಸಲಾಯಿತು.

ಹಾಕ್-ಐ ಅನ್ನು ೦}ವಿಂಬಲ್ಡನ್, ಕ್ವೀನ್ಸ್ನಲ್ಲಿನ ಸ್ಟೆಲ್ಲಾ ಅರ್ಟೋಯಿಸ್, ಆಸ್ಟ್ರೇಲಿಯನ್ ಓಪನ್, ಡೇವಿಸ್ ಕಪ್ ಮತ್ತು ಟೆನ್ನಿಸ್ ಮಾಸ್ಟರ್ಸ್ ಕಪ್ನಂತಹ ಹಲವು ಪ್ರಮುಖ ಟೆನ್ನಿಸ್ ಪಂದ್ಯಾವಳಿಗಳಲ್ಲಿನ ದೂರದರ್ಶನ ಪ್ರಸಾರಗಳಲ್ಲಿ ಬಳಸಲಾಯಿತು. ೨೦೦೬ ಯುಸ್ ಓಪನ್ನಲ್ಲಿ ಹಾಕ್-ಐ ತಂತ್ರಜ್ಞಾನದ ಅಧಿಕೃತ ಬಳಕೆಯನ್ನು ಮಾಡುವುದಾಗಿಯೂ ಮತ್ತು ಅಲ್ಲಿ ಪ್ರತಿ ಆಟಗಾರನೂ ಪ್ರತಿ ಸೆಟ್‌ಗೆ ಎರಡು ಬಾರಿ ಮರು ಪ್ರಶ್ನಿಸುವ ಅವಕಾಶವಿರುವುದಾಗಿ ಯುಎಸ್ ಓಪನ್ ಟೆನ್ನಿಸ್ ಚಾಂಪಿಯನ್‌ಶಿಪ್ ಸಂಘಟನೆಯು ಘೋಷಿಸಿತು.[೮] ಇದನ್ನು ಐಬಿಎಮ್ ಜಾರಿಗೊಳಿಸಿದ ಪಾಯಿಂಟ್‌ಟ್ರ್ಯಾಕರ್ ಎಂದು ಕರೆಯಲಾಗುವ ಬೃಹತ್ ಪ್ರಮಾಣದ ಟೆನ್ನಿಸ್ ಸಿಮ್ಯುಲೇಷನ್‌ಗಳಲ್ಲೂ ಸಹ ಬಳಸಲಾಯಿತು.

ಪಶ್ಚಿಮ ಆಸ್ಟ್ರೇಲಿಯದ ಪರ್ತ್ನಲ್ಲಿ ನಡೆದ ೨೦೦೬ ರ ಹಾಪ್‌ಮನ್ ಕಪ್ನಲ್ಲಿ ಆಟಗಾರರು ಲೈನ್ ಕರೆಗಳನ್ನು ಮರುಪ್ರಶ್ನಿಸಲು ಅವಕಾಶ ಮಾಡಿಕೊಟ್ಟ ಪ್ರಥಮ ಉನ್ನತ ಮಟ್ಟದ ಟೆನ್ನಿಸ್ ಪಂದ್ಯಾವಳಿಯಾಗಿತ್ತು, ಅವುಗಳನ್ನು ನಂತರ ರೆಫರಿಗಳು ಹಾಕ್-ಐ ತಂತ್ರಜ್ಞಾನವನ್ನು ಬಳಸಿ ವಿಮರ್ಶಿಸುತ್ತಿದ್ದರು. ಈ ತಂತ್ರಜ್ಞಾನವು ಚೆಂಡಿನ ಸ್ಥಿತಿಯ ಮಾಹಿತಿಯನ್ನು ಕಂಪ್ಯೂಟರಿಗೆ ಒದಗಿಸುವ ೧೦ ಕ್ಯಾಮೆರಾಗಳನ್ನು ಬಳಸಿತ್ತು.

೨೦೦೬ ರ ಮಾರ್ಚ್‌ನಲ್ಲಿ ನಡೆದ ನಾಸ್ಡಾಕ್-೧೦೦ ಓಪನ್ ಪಂದ್ಯಾವಳಿಯಲ್ಲಿ, ಪ್ರಥಮ ಬಾರಿಗೆ ಟೆನ್ನಿಸ್ ಟೂರ್ ಪಂದ್ಯಾವಳಿಯೊಂದರಲ್ಲಿ ಅಧಿಕೃತವಾಗಿ ಮೊದಲ ಬಾರಿಗೆ ಹಾಕ್-ಐ ಅನ್ನು ಬಳಸಲಾಯಿತು. ನಂತರ ಅದೇ ವರ್ಷ, ಯುಎಸ್ ಓಪನ್ ಪಂದ್ಯಾವಳಿಯು ಆಟದ ಸಂದರ್ಭದಲ್ಲಿ ಹಾಕ್-ಐ ವ್ಯವಸ್ಥೆಯನ್ನು ಬಳಸಿದ ಮತ್ತು ಲೈನ್ ತೀರ್ಪುಗಳನ್ನು ಪ್ರಶ್ನಿಸಲು ಆಟಗಾರರಿಗೆ ಅವಕಾಶ ನೀಡಿದ ಪ್ರಥಮ ಗ್ರಾಂಡ್ ಸ್ಲಾಮ್ ಪಂದ್ಯಾವಳಿಯಾಯಿತು.

೨೦೦೭ ರ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯು ಲೈನ್ ಕರೆಗಳನ್ನು ಪ್ರಶ್ನಿಸುವ ಸಂದರ್ಭದಲ್ಲಿ ಹಾಕ್-ಐ ತಂತ್ರಜ್ಞಾನದ ಬಳಕೆಯನ್ನು ಜಾರಿಗೊಳಿಸಿದ ೨೦೦೭ ನೇ ವರ್ಷದ ಪ್ರಥಮ ಗ್ರಾಂಡ್-ಸ್ಲಾಮ್ ಪಂದ್ಯಾವಳಿಯಾಯಿತು ಮತ್ತು ಇಲ್ಲಿನ ಲಾರ್ಡ್ ಲೇವರ್ ಅರೆನಾದಲ್ಲಿ ಆಟವಾಡುವ ಪ್ರತಿ ಟೆನ್ನಿಸ್ ಆಟಗಾರನಿಗೆ ಪ್ರತಿ ಸೆಟ್‌ಗೆ ೨ ತೀರ್ಪುಗಳನ್ನು ಪ್ರಶ್ನಿಸಲು ಮತ್ತು ಒಂದು ವೇಳೆ ಟೈಬ್ರೇಕ್ ಆಟವಾಡಿದರೆ ಮತ್ತೊಂದು ಹೆಚ್ಚುವರಿ ಮರುಪ್ರಶ್ನಿಸಲು ಅವಕಾಶ ನೀಡಲಾಯಿತು. ಅಂತಿಮ ಸೆಟ್‌ನ ಅಡ್ವಾಂಟೇಜ್ ಸಂದರ್ಭದಲ್ಲಿ, ಪ್ರತಿ ೧೨ ಆಟಗಳಿಗೆ ಪ್ರತಿ ಆಟಗಾರನಿಗೆ ೨ ಬಾರಿ ಪ್ರಶ್ನಿಸಲು ಅವಕಾಶವಿತ್ತು, ಅಂದರೆ, ೬ ಸಮ, ೧೨ ಸಮ. ಆ ಸಂದರ್ಭದಲ್ಲಿ ಹಾಕ್-ಐ ತಪ್ಪಾಗಿ ತೀರ್ಪು ನೀಡುತ್ತಿದ್ದ ಕಾರಣದಿಂದ ಪಂದ್ಯಾವಳಿಯಲ್ಲಿ ವಿವಾದಗಳು ಹುಟ್ಟಿಕೊಂಡವು. ೨೦೦೮ ರಲ್ಲಿ, ಟೆನ್ನಿಸ್ ಆಟಗಾರರಿಗೆ ೨ ರ ಬದಲಾಗಿ ೩ ತಪ್ಪಾದ ತೀರ್ಪುಗಳನ್ನು ಪ್ರಶ್ನಿಸಲು ಅವಕಾಶವನ್ನು ನೀಡಲಾಯಿತು. ಯಾವುದೇ ಬಳಸದೇ ಬಿಡುವ ಪ್ರಶ್ನಿಸುವ ಅವಕಾಶವು ಮುಂದಿನ ಸೆಟ್‌ಗೆ ಮುಂದೂಡವು ಅವಕಾಶವಿರಲಿಲ್ಲ. ಒಮ್ಮೆ, ಅಮೇಲಿಯೋ ಮೌರೆಸ್ಮೋ ಅವರ ಪಂದ್ಯವೊಂದರಲ್ಲಿ, ಇನ್ ಎಂದು ಕರೆಯಲಾದ ತೀರ್ಪೊಂದನ್ನು ಅವರು ಪ್ರಶ್ನಿಸಿದರು, ಚೆಂಡು ಮಿಲಿಮೀಟರ್‌ಗಿಂತ ಕಡಿಮೆ ಅಂತರದಲ್ಲಿ ಔಟ್ ಎಂದು ಹಾಕ್-ಐ ತೋರಿಸಿತು ಆದರೆ ಅದು ಇನ್ ಎಂದು ತೀರ್ಪು ನೀಡಲಾಯಿತು. ಪರಿಣಾಮವಾಗಿ, ಆ ಅಂಕಕ್ಕೆ ಮತ್ತೊಮ್ಮೆ ಆಟವಾಡಲಾಯಿತು ಮತ್ತು ಮೌರೆಸ್ಮೋ ಅವರು ತಾವು ಪ್ರಶ್ನಿಸಿದ ಅಂಕವನ್ನು ಕಳೆದುಕೊಳ್ಳಲಿಲ್ಲ.

Ball compared with impact.
ಅಪ್ಪಳಿಸುವಿಕೆಯೊಂದಿಗೆ ಚೆಂಡನ್ನು ಹೋಲಿಸಿದಾಗ.

ಕೆಲವು ಚಿಕ್ಕಪುಟ್ಟ ವಿವಾದಗಳೊಡನೆ ಹಾಕ್-ಐ ತಂತ್ರಜ್ಞಾನವನ್ನು ೨೦೦೭ ದುಬೈ ಟೆನ್ನಿಸ್ ಚಾಂಪಿಯನ್‌ಶಿಪ್ನಲ್ಲಿ ಬಳಸಲಾಯಿತು. ಪ್ರಸ್ತುತ ಚಾಂಪಿಯನ್ ಆಗಿದ್ದ ರಫೆಲ್ ನಡಾಲ್ ಅವರು ಚಾಂಪಿಯನ್‌ಶಿಪ್‌ನಿಂದ ಹೊರಬಿದ್ದ ನಂತರ ಔಟ್ ಆಗಿದ್ದ ಚೆಂಡೊಂದರ ಬಗ್ಗೆ ತಪ್ಪಾಗಿ ತೀರ್ಪು ನೀಡಿದ ಈ ವ್ಯವಸ್ಥೆಯನ್ನು ಟೀಕಿಸಿದರು. ಅಂಪೈರ್ ಅವರು ಚೆಂಡನ್ನು ಔಟ್ ಎಂದು ತೀರ್ಪು ನೀಡಿದ್ದರು; ಆದರೆ ಮೈಕಲೆ ಯೂಜ್ನಿ ಅವರು ಈ ನಿರ್ಧಾರವನ್ನು ಪ್ರಶ್ನಿಸಿದಾಗ, ಚೆಂಡು ೩ ಮಿಮೀ ಅಂತರದಲ್ಲಿ ಒಳಗಿತ್ತು ಎಂಬುದಾಗಿ ಹಾಕ್-ಐ ತೀರ್ಪು ನೀಡಿತ್ತು.[೯] ನಂತರ ಯೂಜ್ನಿ ಅವರು ಮಾತನಾಡುತ್ತಾ ಚೆಂಡಿನ ಗುರುತು ಹೊರಗಿದ್ದಿರಬಹುದೆಂದು ತಾವು ಯೋಚಿಸಿದ್ದಾಗಿ ತಿಳಿಸಿದ್ದಲ್ಲದೇ, ಇಂತಹ ಪ್ರಕಾರದ ತಂತ್ರಜ್ಞಾನದ ದೋಷವನ್ನು ಲೈನ್ಸ್‌ಮೆನ್ ಮತ್ತು ಅಂಪೈರ್‌ಗಳು ಸುಲಭವಾಗಿ ಮಾಡಬಹುದಾಗಿತ್ತು ಎಂದು ನುಡಿದರು. ಈ ವ್ಯವಸ್ಥೆಯ ಆವೇ ಮಣ್ಣಿನ ಅಂಕಣದಲ್ಲಿರುತ್ತಿದ್ದರೆ, ಹಾಕ್-ಐ ತಪ್ಪಾಗಿದೆಯಂದು ಗುರುತು ಸ್ಪಷ್ಟವಾಗಿ ತೋರಿಸುತ್ತಿತ್ತು ಎನ್ನುತ್ತಾ ತಮ್ಮ ಅಸಮಾಧಾನವನ್ನು ಹೊರಹಾಕಿದರು.[೧೦] ಗಟ್ಟಿ ಅಂಕಣದಲ್ಲಿ ಚೆಂಡು ಉಳಿಸಿದ ಗುರುತು, ಅಂಗಣದೊಂದಿಗೆ ಚೆಂಡು ಸಂಪರ್ಕದಲ್ಲಿದ್ದ ಒಟ್ಟ ಪ್ರದೇಶದ ಭಾಗವಾಗಿದೆ (ಗುರುತನ್ನು ಸೃಷ್ಟಿಸಲು ಸ್ವಲ್ಪ ಮಟ್ಟಿನ ಒತ್ತಡದ ಅವಶ್ಯಕತೆ ಇರುತ್ತದೆ)[ಸೂಕ್ತ ಉಲ್ಲೇಖನ ಬೇಕು].

೨೦೦೭ ವಿಂಬಲ್ಡನ್ ಚಾಂಪಿಯನ್‌ಶಿಪ್ನಲ್ಲೂ ಸಹ ಸೆಂಟರ್ ಕೋರ್ಟ್ ಮತ್ತು ಕೋರ್ಟ್ ೧ ರಲ್ಲಿ ಕಾರ್ಯನಿರ್ವಹಣೆಯ ಸಹಾಯಕಾವಾಗಿ ಹಾಕ್-ಐ ವ್ಯವಸ್ಥೆಯನ್ನು ಜಾರಿಗೊಳಿಸಿತು ಮತ್ತು ಪ್ರತಿ ಆಟಗಾರನಿಗೆ ಪ್ರತಿ ಸೆಟ್‌ಗೆ ೩ ತಪ್ಪು ಎಂದು ಭಾವಿಸುವ ನಿರ್ಣಯಗಳನ್ನು ಪ್ರಶ್ನಿಸಲು ಅವಕಾಶ ನೀಡಲಾಗಿತ್ತು. ಒಂದು ವೇಳೆ ಟೈಬ್ರೇಕರ್‌ಗೆ ಸೆಟ್ ತೆರಳಿದರೆ, ಪ್ರತಿ ಆಟಗಾರನಿಗೆ ಒಂದು ಹೆಚ್ಚುವರಿ ಮರು ಪ್ರಶ್ನಿಸುವ ಅಧಿಕಾರವನ್ನು ನೀಡಲಾಗಿತ್ತು. ಹೆಚ್ಚಿನದಾಗಿ, ಟೈಬ್ರೇಕ್ ಇರದ ಅಂತಿಮ ಸೆಟ್‌ನ ಸಂದರ್ಭದಲ್ಲಿ (ಮಹಿಳೆಯರ ಅಥವಾ ಮಿಶ್ರ ಪಂದ್ಯದಲ್ಲಿ ಮೂರನೇ ಸೆಟ್, ಪುರುಷರ ಪಂದ್ಯದಲ್ಲಿ ಐದನೇ ಸೆಟ್) ಒಂದು ವೇಳೆ ಆಟವು ೬-೬ ಮತ್ತು ೧೨-೧೨ ರಲ್ಲಿ ಸಮನಾಗಿದ್ದರೆ ಮರು ಪ್ರಶ್ನಿಸುವ ಅವಕಾಶವನ್ನು ಮೂರಕ್ಕೆ ಪುನಃ ಸಂಯೋಜಿಸಲಾಗುತ್ತಿತ್ತು. ರೋಜರ್ ಫೆಡರರ್ ವಿರುದ್ಧದ ಮೊದಲನೇ ಸುತ್ತಿನ ಪಂದ್ಯದಲ್ಲಿ ಟೇಮುರ್ಜ್ ಗ್ಯಾಬಶ್ವಿಲಿ ಅವರು ಸೆಂಟರ್ ಕೋರ್ಟ್‌ನಲ್ಲಿ ಮೊಟ್ಟ ಮೊದಲ ಹಾಕ್-ಐ ಅವಕಾಶವನ್ನು ಬಳಸಿಕೊಂಡರು. ಹೆಚ್ಚಿನದಾಗಿ, ಫೆಡರರ್ ವಿರುದ್ಧದ ಫೈನಲ್ ಪಂದ್ಯದಲ್ಲಿ ರಫೆಲ್ ನಡಾಲ್ ಅವರು ಔಟ್ ಎಂದು ತೀರ್ಪಿತ್ತ ಹೊಡೆತವೊಂದನ್ನು ಪ್ರಶ್ನಿಸಿದರು. ನಯವಾಗಿ ಲೈನ್‌ಗೆ ಸವರಿಕೊಂಡತೆ ಚೆಂಡು ಇನ್ ಎಂದು ಹಾಕ್-ಐ ತೋರಿಸಿತು. ಇದು ಫೆಡರರ್ ಅವರನ್ನು ಕೆರಳಿಸಿತು ಮತ್ತು ಅವರು ಪಂದ್ಯದ ಉಳಿದ ಅವಧಿಗೆ ಹಾಕ್-ಐ ತಂತ್ರಜ್ಞಾನವನ್ನು ಆಫ್ ಮಾಡಿಡುವಂತೆ ಅಂಪೈರ್ ಅವರಿಗೆ (ಯಶಸ್ವಿಯಾಗದೇ) ವಿನಂತಿಸಿದರು.[೧೧]

ರೋಜರ್ ಫೆಡರರ್ ಮತ್ತು ಥಾಮಸ್ ಬೆಡ್ರಿಚ್ ನಡುವಿನ ೨೦೦೯ ರ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಬೆಡ್ರಿಚ್ ಅವರು ಔಟ್ ಎಂಬ ತೀರ್ಪನ್ನು ಪ್ರಶ್ನಿಸಿದರು. ಇದನ್ನು ಪ್ರಶ್ನಿಸಿದಾಗ ಅಂಗಣದ ಮೇಲೆ ಅವರಿಸಿದ ನೆರಳಿನ ಸಂಭಾವ್ಯ ಕಾರಣದಿಂದ ಹಾಕ್-ಐ ವ್ಯವಸ್ಥೆಯು ಲಭ್ಯವಿರಲಿಲ್ಲ.. ಪರಿಣಾಮವಾಗಿ, ಮೂಲ ತೀರ್ಪು ಅಂತಿಮವಾಯಿತು.[೧೨]

ಇವಾನ್ ಲ್ಯೂಬಿಸಿಕ್ ಮತ್ತು ಆಂಡಿ ಮುರ್ರೆ ನಡುವಿನ ೨೦೦೯ ರ ಇಂಡಿಯನ್ ವೆಲ್ಸ್ ಮಾಸ್ಟರ್ಸ್ ಟೂರ್ನಿಯ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ, ಮುರ್ರೆ ಅವರು ಔಟ್ ಎಂಬ ತೀರ್ಪನ್ನು ಪ್ರಶ್ನಿಸಿದರು. ಆ ಕ್ಷಣದ ಮರು ಪ್ರಸಾರವು ಚೆಂಡು ಸ್ಪಷ್ಟವಾಗಿ ಔಟ್ ಎಂದು ತೋರಿಸುತ್ತಿದ್ದರೂ ಗೆರೆಯ ಮಧ್ಯಭಾಗದಲ್ಲಿ ಚೆಂಡು ಪುಟಿದಿದ್ದಾಗಿ ಹಾಕ್-ಐ ವ್ಯವಸ್ಥೆಯು ಸೂಚಿಸಿತು. ಆದರೆ ಹಾಕ್-ಐ ವ್ಯವಸ್ಥೆಯು ಚೆಂಡಿನ ಮೊದಲ ಪುಟಿದೇಳುವಿಕೆಗೆ ಬದಲಾಗಿ ಗೆರೆಯ ಮೇಲಿದ್ದ ಎರಡನೆಯ ಪುಟಿಯುವಿಕೆಯನ್ನು ತಪ್ಪಾಗಿ ಗ್ರಹಿಸಿತ್ತೆಂದು ನಂತರ ಬಹಿರಂಗಪಡಿಸಲಾಯಿತು.[೧೩] ಪಂದ್ಯದ ನಂತರದಲ್ಲಿ ತೀರ್ಪಿನ ಬಗ್ಗೆ ಮುರ್ರೆ ಅವರು ಲ್ಯೂಬಿಸಿಕ್ ಅವರಲ್ಲಿ ಕ್ಷಮೆ ಯಾಚಿಸಿದ್ದಲ್ಲದೇ ಅದು ಔಟ್ ಆಗಿತ್ತೆಂದು ಒಪ್ಪಿಕೊಂಡರು.

ಹಾಕ್-ಐ ವ್ಯವಸ್ಥೆಯನ್ನು ಮೂಲತಃ ಟಿವಿ ಪ್ರಸಾರಕ್ಕೆಂದು ಮರು ಪ್ರಸಾರದ ವ್ಯವಸ್ಥೆಯಾಗಿ ಅಭಿವೃದ್ಧಿಗೊಳಿಸಲಾಯಿತು. ಇಲ್ಲಿಯವರೆಗೆ ಅದು ಇನ್ ಮತ್ತು ಔಟ್‌ಗಳನ್ನು ನೇರವಾಗಿ ಸೂಚಿಸುತ್ತಿರಲಿಲ್ಲ, ಕೇವಲ ಆಟೋ-ರೆಫರೆನ್ಸ್ ವ್ಯವಸ್ಥೆಯನ್ನು ತಕ್ಷಣದ ಲೈನ್ ಕಾಲಿಂಗ್‌ಗೆ ಅಭಿವೃದ್ಧಿ ಪಡಿಸಿದ್ದರಿಂದ ಅದು ಮಾತ್ರ ನೇರವಾಗಿ ಇನ್/ಔಟ್ ಎಂದು ತೋರಿಸುತ್ತದೆ. ಎರಡೂ ವ್ಯವಸ್ಥೆಗಳು ಮರುಪ್ರಸಾರಗಳನ್ನು ಪ್ರದರ್ಶಿಸಬಲ್ಲದು.

ಹಾಕ್-ಐ ಇನ್ನೋವೇಶನ್ಸ್ ವೆಬ್‌ಸೈಟ್ ಪ್ರಕಾರ [೧೪] ವ್ಯವಸ್ಥೆಯು ಸರಾಸರಿ ೩.೬ ಮಿಮೀ ದೋಷದೊಂದಿಗೆ ಕಾರ್ಯನಿರ್ವಹಿಸುತ್ತದೆ. ಟೆನ್ನಿಸ್ ಚೆಂಡಿನ ಪ್ರಮಾಣಿತ ವ್ಯಾಸವು ಚೆಂಡಿನ ವ್ಯಾಸಕ್ಕೆ ಸಂಬಂಧಿಸಿದಂತೆ ೫% ದೋಷವನ್ನು ಸಮೀಕರಿಸಿ ೬೭ ಮಿಮೀ ಆಗಿದೆ. ಇದು ಸರಿಸುಮಾರು ಚೆಂಡಿನ ತುಪ್ಪುಳಕ್ಕೆ ಸರಿಸಮಾನವಾಗಿದೆ.

ನಿಯಮಗಳ ಏಕೀಕರಣ[ಬದಲಾಯಿಸಿ]

೨೦೦೮ ರ ಮಾರ್ಚ್‌ವರೆಗೆ, ಇಂಟರ್‌ನ್ಯಾಷನಲ್ ಟೆನ್ನಿಸ್ ಫೆಡರೇಶನ್ (ಐಟಿಎಫ್), ಅಸೋಸಿಯೇಷನ್ ಆಫ್ ಟೆನ್ನಿಸ್ ಪ್ರೊಫೆಶನಲ್ಸ್ (ಎಟಿಪಿ), ಮಹಿಳಾ ಟೆನ್ನಿಸ್ ಫೆಡರೇಶನ್ (ಡಬ್ಲ್ಯೂಟಿಎ), ಗ್ರಾಂಡ್ ಸ್ಲಾಮ್ ಕಮಿಟಿ ಮತ್ತು ಇನ್ನೂ ಹಲವು ವೈಯಕ್ತಿಕ ಪಂದ್ಯಾವಳಿಗಳು ಹಾಕ್-ಐ ನಿಯಮಗಳನ್ನು ಹೇಗೆ ಬಳಸಬೇಕೆಂಬ ಬಗ್ಗೆ ಸಂಘರ್ಷಪೂರ್ಣ ನಿಯಮಗಳನ್ನು ಹೊಂದಿದ್ದವು. ಇದಕ್ಕೆ ಪ್ರಮುಖ ಉದಾಹರಣೆಯು ಪ್ರತಿ ಸೆಟ್‌ಗೆ ಆಟಗಾರನೊಬ್ಬನಿಗೆ ಅನುಮತಿಸುವ ತೀರ್ಪನ್ನು ಪ್ರಶ್ನಿಸುವ ಅವಕಾಶವಾಗಿದ್ದು, ಇದು ಹಲವಾರು ಪಂದ್ಯಾವಳಿಯಲ್ಲಿ ವಿಭಿನ್ನವಾಗಿತ್ತು.[೧೫] ಕೆಲವು ಪಂದ್ಯಾವಳಿಯಲ್ಲಿ ಪಂದ್ಯದ ಸಂದರ್ಭದಲ್ಲಿ ಅನಿಯಮಿತ ತೀರ್ಪುಗಳನ್ನು ಪ್ರಶ್ನಿಸುವ ಅವಕಾಶದೊಂದಿಗೆ ಆಟಗಾರರಿಗೆ ದೋಷವನ್ನು ಸರಿಪಡಿಸಿಕೊಳ್ಳುವ ಹೆಚ್ಚಿನ ಅವಕಾಶವನ್ನು ಅನುಮತಿಸಲಾಗಿತ್ತು.[೧೫] ಹಲವು ಪಂದ್ಯಾವಳಿಗಳಲ್ಲಿ ಪ್ರತಿ ಸೆಟ್‌ಗೆ ಆಟಗಾರರಿಗೆ ಎರಡು ಅಥವಾ ಮೂರು ಅವಕಾಶಗಳನ್ನು ನೀಡಲಾಗುತ್ತಿತ್ತು.[೧೫] ೨೦೦೮ ರ ಮಾರ್ಚ್ ೧೯ ರಂದು, ಈ ಹಿಂದೆ ನಮೂದಿಸಿದ ಸಂಯೋಜಕ ಸಂಘಟನೆಗಳು ನಿಯಮಗಳ ಏಕಪ್ರಕಾರದ ವ್ಯವಸ್ಥೆಯನ್ನು ಘೋಷಿಸಿದವು: ಪ್ರತಿ ಸೆಟ್‌ಗೆ ಮೂರು ಜಯಶಾಲಿಯಾಗದ ಮರು ಪ್ರಶ್ನಿಸುವ ಅವಕಾಶ ಮತ್ತು ಟೈ ಬ್ರೇಕರ್‌ಗೆ ಸೆಟ್ ತಲುಪಿದರೆ ಒಂದು ಹೆಚ್ಚುವರಿ ಅವಕಾಶ. ಮುಂದಿನ ನಿಗದಿತ ಪುರುಷ ಮತ್ತು ಮಹಿಳಾ ಟೂರ್ ಪಂದ್ಯಾವಳಿಯಾದ ೨೦೦೮ ಸೋನಿ ಎರಿಕ್ಸನ್ ಓಪನ್ ನಲ್ಲಿ ಈ ಹೊಸ, ಪ್ರಮಾಣಿತ ನಿಯಮಗಳನ್ನು ಮೊದಲ ಬಾರಿಗೆ ಜಾರಿಗೆ ತರಲಾಯಿತು.[೧೬]

ಸಾಕರ್[ಬದಲಾಯಿಸಿ]

ಹಾಕ್-ಐ ಅನ್ನು ಅಸೋಸಿಯೇಷನ್ ಫುಟ್‌ಬಾಲ್ನಲ್ಲಿ ಬಳಕೆ ಮಾಡಲು ಉದ್ದೇಶಿಸಲಾಯಿತು, ಆದರೆ ಕ್ರೀಡೆಯ ಪ್ರಮುಖ ಆಡಳಿತ ಮಂಡಳಿಗಳಿಂದ ಸಾಮಾನ್ಯ ಅನುಮೋದನೆಯನ್ನು ಇನ್ನೂ ಪಡೆಯಬೇಕಾಗಿದೆ. ಗೋಲು-ಗೆರೆಯ ಬಳಿಯಲ್ಲಿನ ಘಟನೆಗಳ ಫಲಿತಾಂಶಗಳನ್ನು ಅರ್ಧ ಸೆಕೆಂಡುಗಳೊಳಗೆ ಮ್ಯಾಚ್ ರೆಫರಿಗೆ ಒದಗಿಸಲಾಗುವುದು ಎಂದು ಪರೀಕ್ಷೆಗಳು ಸೂಚಿಸಿದ ಬಳಿಕ ಇಂಗ್ಲೆಂಡ್‌ನ ಆಡಳಿತ ಮಂಡಳಿಯಾದ ದಿ ಪುಟ್‌ಬಾಲ್ ಅಸೋಸಿಯೇಷನ್ ಹಾಕ್-ಐ ವ್ಯವಸ್ಥೆಯು "ಫಿಫಾದಿಂದ ಪರಿಶೀಲನೆಗೆ ಸಿದ್ಧವಾಗಿದೆ" ಎಂದು ಘೋಷಿಸಿತು, (ಆದರೆ ಗೋಲುಗಳನ್ನು ತಕ್ಷಣವೇ ಅಂದರೆ ಐದು ಸೆಕೆಂಡುಗಳ ಒಳಗೇ ಸೂಚಿಸಬೇಕೆಂದು ಆಟದ ನಿಯಮಗಳ ಆಡಳಿತ ಮಂಡಳಿಯು IFAB ಒತ್ತಾಯ ಹೇರಿತು).[೧೭]

ಒಂದು ವೇಳೆ ಹಾಕ್-ಐ ವ್ಯವಸ್ಥೆಯ ಅಭಿವೃದ್ಧಿ ಮಾಡಿದವರು ಶೇಕಡಾ ೧೦೦ ಯಶಸ್ವಿಯ ಭರವಸೆಯನ್ನು ನೀಡಿದರೆ ಇದನ್ನು ಪರಿಗಣಿಸಬಹುದೆಂದು ಫಿಫಾ ಪ್ರಧಾನ ಕಾರ್ಯದರ್ಶಿಯವರಾದ ಜೆರೋಮ್ ವಾಲ್ಕೆ ಅವರು ತಿಳಿಸಿದರು. ಆಟದ ಮೈದಾನದಲ್ಲಿನ ವಿವಾದಗಳನ್ನು ಪರಿಹರಿಸಲು ವೀಡಿಯೋ ತಂತ್ರಜ್ಞಾನವನ್ನೇ ಬಳಸುವುದಕ್ಕೆ ಪುಟ್‌ಬಾಲ್‌ನ ಆಡಳಿತ ಮಂಡಳಿಯು ಈ ಹಿಂದೆ ಒಲವು ತೋರಿತ್ತು. ಪುಟ್‌ಬಾಲ್‌ನಲ್ಲಿ ಹಾಕ್-ಐ ನ ಸರಿಹೊಂದುವಿಕೆಯ ಕುರಿತಾದ ಪರೀಕ್ಷೆಯು ಮುಂದುವರಿಯುವ ನಿರೀಕ್ಷೆ ಇದೆ ಮತ್ತು ವ್ಯವಸ್ಥೆಯನ್ನು ಆವಿಷ್ಕಾರಗೊಳಿಸಿದ ಡಾ. ಪೌಲ್ ಹಾಕಿನ್ಸ್ ಅವರ ಪ್ರಕಾರ ಪ್ರೀಮಿಯರ್ ಲೀಗ್ನಲ್ಲಿ ಪ್ರಾಯೋಗಿಕ ಪರೀಕ್ಷೆಯು ನಡೆಯುವ ಸಂಭವವಿದೆ. "ವಿವರವನ್ನು ಪಡೆಯಲು ಮುಂದಿನ ವಾರದ ಅವಧಿಯಲ್ಲಿ ನಾವು ಫಿಫಾದೊಂದಿಗೆ ಮಾತನಾಡುತ್ತೇವೆ, ಆದರೆ ಇದು ಧನಾತ್ಮಕವಾಗಿ ಕಂಡುಬರುತ್ತಿದೆಯೆಂದು ನಾನು ಭಾವಿಸುತ್ತೇನೆ" ಎಂದು ಹಾಕಿನ್ಸ್ ಹೇಳುತ್ತಾರೆ.[೧೮]

ಸ್ನೂಕರ್‌[ಬದಲಾಯಿಸಿ]

ವಿಶ್ವ ಸ್ನೂಕರ್ ಚಾಂಪಿಯನ್‌ಶಿಪ್ ೨೦೦೭ ರಲ್ಲಿ ಟೆಲಿವಿಷನ್ ಪ್ರಸಾರದ ಇತಿಹಾಸದಲ್ಲಿ ಮೊದಲ ಬಾರಿಗೆ ನಿರ್ದಿಷ್ಟವಾಗಿ ಸಂಭಾವ್ಯ ಸ್ನೂಕರ್‌ ಆಟಗಾರರ ಆಟಕ್ಕೆ ಸಂಬಂಧಿಸಿದಂತೆ ಆಟಗಾರರ ಅಭಿಪ್ರಾಯಗಳನ್ನು ತೋರಿಸಲು ಬಿಬಿಸಿಯು ಹಾಕ್-ಐ ಅನ್ನು ಬಳಸಿತು.[೧೯] ನೈಜವಾದ ಹೊಡೆತಗಳು ಕ್ರಮ ತಪ್ಪಿದಾಗ ಆಟಗಾರರು ಉದ್ದೇಶಿಸಿದ ಹೊಡೆತವನ್ನು ತೋರಿಸಲು ಸಹ ಈ ವ್ಯವಸ್ಥೆಯನ್ನು ಬಳಸಲಾಯಿತು. ಇದೀಗ ಪ್ರತಿ ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಹಾಗೂ ಕೆಲವು ಇತರ ಪ್ರಮುಖ ಪಂದ್ಯಾವಳಿಗಳಲ್ಲಿ ಬಿಬಿಸಿಯು ಈ ವ್ಯವಸ್ಥೆಯನ್ನು ಬಳಸುತ್ತಿದೆ. ಬಿಬಿಸಿಯು ಈ ವ್ಯವಸ್ಥೆಯನ್ನು ವಿರಳವಾಗಿ ಬಳಸುತ್ತದೆ, ಉದಾಹರಣೆಗಾಗಿ ವೆಂಬ್ಲೇಯಲ್ಲಿ ನಡೆದ ೨೦೦೯ ಮಾಸ್ಟರ್ಸ್ ಪಂದ್ಯಾವಳಿಯಲ್ಲಿ ಹಾಕ್-ಐ ಅನ್ನು ಪ್ರತಿ ಫ್ರೇಮ್‌ಗೆ ಒಮ್ಮೆ ಅಥವಾ ಎರಡು ಬಾರಿ ಬಳಸಲಾಯಿತು. ಟೆನ್ನಿಸ್‌ಗೆ ತದ್ವಿರುದ್ಧವಾಗಿ, ಸ್ನೂಕರ್‌ನಲ್ಲಿ ಹಾಕ್-ಐ ಅನ್ನು ಎಂದಿಗೂ ರೆಫರಿಯ ನಿರ್ಣಯಗಳಿಗೆ ಸಹಾಯ ಮಾಡಲು ಬಳಸಲಿಲ್ಲ.

ಗೇಲಿಕ್ ಆಟಗಳು[ಬದಲಾಯಿಸಿ]

ಐರ್ಲೆಂಡ್‌ನಲ್ಲಿ, ಹಾಕ್-ಐ ಅನ್ನು ಗೇಲಿಕ್ ಪುಟ್‌ಬಾಲ್ ಮತ್ತು ಹರ್ಲಿಂಗ್ನಲ್ಲಿ ಬಳಕೆ ಮಾಡಲು ಗೇಲಿಕ್ ಅಥ್ಲೆಟಿಕ್ ಅಸೋಸಿಯೇಷನ್ ಪರಿಗಣಿಸಿದೆ. ೨೦೧೧ ರ ಏಪ್ರಿಲ್ ೨ ರಂದು ಡಬ್ಲಿನ್‌ನ ಕ್ರೋಕ್ ಪಾರ್ಕ್ ನಲ್ಲಿ ಪ್ರಾಯೋಗಿಕ ಪರೀಕ್ಷೆಯು ನಡೆಯಿತು. ಡಬ್ಲಿನ್ ಮತ್ತು ಡೌನ್ ನಡುವಿನ ಪುಟ್‌ಬಾಲ್ ಮತ್ತು ಡಬ್ಲಿನ್ ಮತ್ತು ಕಿಲ್ಕೆನ್ನಿ ನಡುವಿನ ಹರ್ಲಿಂಗ್ ಅನ್ನು ಒಳಗೊಂಡ ಡಬಲ್ ಹೆಡರ್ ನಡೆಯಿತು.[೨೦]

ಸಂದೇಹಗಳು[ಬದಲಾಯಿಸಿ]

ಕ್ರಿಕೆಟ್ ಮತ್ತು ಟೆನ್ನಿಸ್‌ನಂತಹ ಕ್ರೀಡೆಗಳಿಗೆ ತಂದುಕೊಟ್ಟ ನೋಟಗಳಿಗೆ ವಿಶ್ವದಾದ್ಯಂತದ ಕ್ರೀಡಾ ಅಭಿಮಾನಿಗಳಿಗೆ ಹಾಕ್-ಐ ಇದೀಗ ಚಿರಪರಿಚಿತವಾಗಿದೆ. ಈ ಹೊಸ ತಂತ್ರಜ್ಞಾನವನ್ನು ಬಹುತೇಕ ಭಾಗ ಒಳಪಡಿಸಿಕೊಂಡಿದ್ದರೂ, ಇತ್ತೀಚೆಗೆ ಕೆಲವು ನಿರ್ದಿಷ್ಟ ಖ್ಯಾತನಾಮರು ಟೀಕಿಸಿದರು[ಸೂಕ್ತ ಉಲ್ಲೇಖನ ಬೇಕು]. ಕ್ರಿಕೆಟ್‌ನ ಆಸ್ಟ್ರೇಲಿಯದ ಮಾಧ್ಯಮಗಳು ಆಂಡ್ರ್ಯೂ ಸೈಮಂಡ್ಸ್ ಅವರು ಬ್ಯಾಟಿಂಗ್ ಮಾಡುತ್ತಿರುವಾಗ ಅನಿಲ್ ಕುಂಬ್ಳೆ ಅವರು ಮಾಡಿದ ನಿರ್ದಿಷ್ಟ ಎಲ್‌ಬಿಡಬ್ಲ್ಯೂ ಮನವಿಯ ಕುರಿತಂತೆ ಟೀಕಿಸಿದವು. ಹಾಕ್-ಐ ಸೂಚಿಸಿದಂತೆ ಚೆಂಡು ಸ್ಟಂಪ್‌ಗಳ ಮೇಲೆ ಹಾದು ಹೋಗುವಂತಿದ್ದರೂ ಬರಿಗಣ್ಣಿಗೆ ಅದು ಸಂಪೂರ್ಣವಾಗಿ ಔಟ್ ಎಂದು ತೋರಿಸುತ್ತಿತ್ತು.[೨೧] ನಡಾಲ್ ಮತ್ತು ಫೆಡರರ್ ನಡುವಿನ ೨೦೦೮ ರ ವಿಂಬಲ್ಡನ್‌ ಪಂದ್ಯಾವಳಿಯ ಫೈನಲ್‌ನಲ್ಲಿ, ಔಟ್ ಎಂದು ಕಂಡುಬಂದ ಚೆಂಡನ್ನು ಸುಮಾರು ೧ ಮಿಮೀನಷ್ಟು ಒಳಗಿತ್ತು ಎಂದು ತಿಳಿಸಲಾಗಿತ್ತು, ಇದು ತಿಳಿಯಪಡಿಸಿದ ದೋಷದ ವ್ಯತ್ಯಾಸದ ಒಳಗೇ ಇತ್ತು.[೨೨] ಈ ವ್ಯವಸ್ಥೆಯ ೩.೬ ಮಿಮೀ ಅಂಕಿಅಂಶದ ದೋಷದ ವ್ಯತ್ಯಾಸವು ಅತೀ ದೊಡ್ಡದಾಗಿದೆ ಎಂದು ಕೆಲವು ವೀಕ್ಷಕ ವಿವರಣೆಗಾರರು ಟೀಕಿಸಿದ್ದಾರೆ.[೨೩] ಇತರ ಕೆಲವರು ಈ ೩.೬ ಮಿಮೀ ಅಂತರವು ಅಸಾಧಾರಣವಾಗಿ ನಿಖರವಾಗಿರುವುದೆಂದೂ ಮತ್ತು ಈ ದೋಷದ ವ್ಯತ್ಯಾಸವು ಕೇವಲ ಚೆಂಡಿನ ಪ್ರಮಾಣೀಕರಿಸಿದ ಪಥಕ್ಕಾಗಿ ಮಾತ್ರವೆಂದು ಸೂಚಿಸುತ್ತಾರೆ. ಚೆಂಡು ಬ್ಯಾಟ್ಸ್‌ಮನ್‌ಗೆ ತಗಲುತ್ತಿತ್ತೇ ಎಂಬ ಬಗ್ಗೆ ಚೆಂಡಿನ ಪಥವನ್ನು ಊಹಿಸಲು ಪ್ರಸಾರದಲ್ಲಿ ಇದರ ಬಳಕೆಯು ಪ್ರಮುಖವಾಗಿ ಚೆಂಡಿನ ಭವಿಷ್ಯದ ಪಥಕ್ಕೆ ಪರಿಣಾಮ ಬೀರುವ ಮೈದಾನದ ಸ್ಥಿತಿಗತಿಗಳಲ್ಲಿ ಅಂದರೆ ಚೆಂಡು ಮೈದಾನದತ್ತ ಧಾವಿಸುತ್ತಿದ್ದಾಗ ಅಥವಾ ಬ್ಯಾಟ್ಸ್‌ಮನ್‌ಗೆ ತಗುಲುವ ಮುನ್ನ ಕೇವಲ ಅಲ್ಪಾವಧಿಯ ಪುಟಿಯುವಿಕೆಯ ಸಂದರ್ಭದಲ್ಲಿ ಅದನ್ನು ಊಹಿಸುವ ಸಾಧ್ಯತೆ ಕಡಿಮೆ ಇರುತ್ತದೆ.[೨೪] ಪ್ರಸ್ತುತ, ಈ ವ್ಯವಸ್ಥೆಯನ್ನು ದೂರದರ್ಶನ ಪ್ರಸಾರ ಮತ್ತು ವಿಶ್ಲೇಷಣೆಗಾಗಿ ಬಳಸುತ್ತಿದ್ದರೂ ಈ ಮೇಲಿನಂತಹ ಸಂದರ್ಭಗಳಲ್ಲಿ ಅಧಿಕೃತವಾಗಿ ಬಳಸಲಾಗುವುದಿಲ್ಲ.

೨೦೦೮ ರಲ್ಲಿ, ಪ್ರಮುಖ-ವಿಮರ್ಶೆಯ ನಿಯತಕಾಲಿಕದ[೨೫] ಲೇಖನವೊಂದು ಈ ಹಲವು ಗೊಂದಲಗಳನ್ನು ಬಲಪಡಿಸಿತು. ಲೇಖಕರು ವ್ಯವಸ್ಥೆಯ ಉಪಯುಕ್ತತೆಯನ್ನು ಒಪ್ಪಿದರು, ಆದರೆ ಇದು ಬಹುಶಃ ತಪ್ಪಾಗಿರಬಹುದೆಂದು ಮತ್ತು ದೋಷದ ವ್ಯತ್ಯಾಸವನ್ನು ಗುರುತಿಸುವಲ್ಲಿ ಇದರ ವೈಫಲ್ಯವು ಸಂಗತಿಗಳ ಹುಸಿಯಾದ ನಿಖರವಾದ ಚಿತ್ರಣವನ್ನು ನೀಡಿತು ಎಂಬುದನ್ನು ಗಮನಿಸಿದರು. ಹಾಗೆಯೇ ಈ ವ್ಯವಸ್ಥೆಯ ನಿಖರತೆಯ ಸಂಭಾವ್ಯ ಮಿತಿಗಳನ್ನು ಆಟಗಾರರು, ಅಧಿಕಾರಿಗಳು, ವೀಕ್ಷಕ ವಿವರಣೆಗಾರರು ಅಥವಾ ಪ್ರೇಕ್ಷಕರು ಒಪ್ಪದೇ ಅವರು ಅದನ್ನು ಮಾರ್ಪಡಿಸಲಸಾಧ್ಯವಾದ ಸತ್ಯದ ಚಿತ್ರಣವನ್ನು ನೀಡುತ್ತಿದೆ ಎಂದು ಪರಿಗಣಿಸಿದರು ಎಂದೂ ಸಹ ಲೇಖಕರು ವಾದಿಸಿದರು. ಉದಾಹರಣೆಗಾಗಿ, ಕ್ರಿಕೆಟ್ ಚೆಂಡು ಪುಟಿದ ನಂತರ ಅದರ ಬಾಗಿದ ಪಥವನ್ನು ಅಂದಾಜಿಸುವಲ್ಲಿ ಹಾಕ್-ಐಗೆ ಕಷ್ಟವಾಗಬಹುದು ಎಂದು ವಾದಿಸಿದರು: ಚೆಂಡು ಪುಟಿಯುವ ಮತ್ತು ಬ್ಯಾಟ್ಸ್‌ಮನ್‌ಗೆ ತಗಲುವ ನಡುವಿನ ಸಮಯವು ನಿಖರವಾದ ವಕ್ರರೇಖೆಯನ್ನು ರಚಿಸುವಲ್ಲಿ ಅಗತ್ಯವಾದ ಮೂರು ಚೌಕಟ್ಟುಗಳನ್ನು (ಕನಿಷ್ಠ) ರೂಪಿಸಲು ಅತೀ ಅಲ್ಪಾವಧಿಯಾಗಬಹುದು. ಚೆಂಡು ಪುಟಿಯುವಾಗ ಅದರ ವಕ್ರಗೊಳಿಸಿದ ಸ್ಥಿತಿ ಮತ್ತು ಮೈದಾನದಲ್ಲಿ ಎಳೆದ ಗೆರೆಗಳೊಂದಿಗಿನ ಸಂಪೂರ್ಣವಾಗಿರದ ಕರಾರುವಾಕ್ಕಾಗಿರುವಿಕೆಯಾಗಿರುವುದರಿಂದ ಅಂತಹ ಅಂಶಗಳನ್ನು ಟೆನ್ನಿಸ್‌ನಲ್ಲಿ ಗೆರೆಯ ಕುರಿತಾದ ನಿರ್ಣಯಗಳ ಹಾಕ್-ಐ ನ ನಿರೂಪಿಸವಿಕೆಯು ನಿರ್ಲಕ್ಷಿಸಿದೆ ಎಂದೂ ಸಹ ಲೇಖನವು ವಾದಿಸಿತು. ಹಾಕ್-ಐ ನ ತಯಾರಕರು ಹಲವು ಇಂತಹ ಲೇಖನಗಳನ್ನು ಬಲವಾಗಿ ಪ್ರತಿರೋಧಿಸಿದರು, ಆದರೆ ಲೇಖಕರು ಅವರ ವಾದವನ್ನು ಹಿಂಪಡೆಯಲಿಲ್ಲ.

ಕಂಪ್ಯೂಟರ್ ಆಟಗಳಲ್ಲಿ ಬಳಕೆ[ಬದಲಾಯಿಸಿ]

ಚಿತ್ರ:BLIC-2005-Hawkeye.jpg
ಆಟದಲ್ಲಿ ಹಾಕ್-ಐ

ಹಾಕ್-ಐ ಬ್ರಾಂಡ್‌ನ ಉಪಯೋಗ ಮತ್ತು ಸಿಮ್ಯುಲೇಷನ್ ಅನ್ನು ವೀಡಿಯೋ ಆಟವಾದ ಬ್ರಿಯಾನ್ ಲಾರ್ ಇಂಟರ್‌ನ್ಯಾಷನಲ್ ಕ್ರಿಕೆಟ್ ೨೦೦೫ ಎಂಬ ವೀಡಿಯೋ ಆಟದಲ್ಲಿ ಆಟವು ಬಹುತೇಕ ದೂರದರ್ಶನ ಪ್ರಸಾರದಂತೆ ಕಂಡುಬರುವಂತೆ ಮಾಡಲು ಬಳಸಲಾಗುವಂತೆ ಮತ್ತು ಬ್ರಿಯಾನ್ ಲಾರ್ ಇಂಟರ್‌ನ್ಯಾಷನಲ್ ಕ್ರಿಕೆಟ್ ೨೦೦೭, ಆಷಸ್ ಕ್ರಿಕೆಟ್ ೨೦೦೯ ಮತ್ತು ಇಂಟರ್‌ನ್ಯಾಷನಲ್ ಕ್ರಿಕೆಟ್ ೨೦೧೦ನಲ್ಲಿ ಬಳಸಲು ಕೋಡ್‌ಮಾಸ್ಟರ್ಸ್ಗೆ ಪರವಾನಗಿ ನೀಡಲಾಯಿತು. ಅಂದಿನಿಂದ ಅಂತಹುದೇ ಆವೃತ್ತಿಯನ್ನು ಸ್ಮಾಷ್ ಕೋರ್ಟ್ ಟೆನ್ನಿಸ್ ೩ನ Xbox ೩೬೦ ಆವೃತ್ತಿಯಲ್ಲಿ ಅಳವಡಿಸಿಕೊಳ್ಳಲಾಗಿದೆ, ಆದರೆ ಅದು ಹಾಕ್-ಐ ವೈಶಿಷ್ಟ್ಯವನ್ನು ಬಳಸದ ಚೆಂಡಿನ ಸಾಮಾನ್ಯ ಚಾಲೆಂಜ್‌ನಲ್ಲಿ ಕಂಡುಬಂದಿದ್ದರೂ ಇದು PSP ಆವೃತ್ತಿಯಲ್ಲಿ ಕಂಡು ಬಂದಿಲ್ಲ.

ಇವನ್ನೂ ಗಮನಿಸಿ‌[ಬದಲಾಯಿಸಿ]

  • ಮ್ಯಾಕ್‌ಕ್ಯಾಮ್

ಉಲ್ಲೇಖಗಳು‌[ಬದಲಾಯಿಸಿ]

  1. ಟೂ ಬ್ರಿಟಿಷ್ ಸೈಂಟಿಸ್ಟ್ಸ್ ಕಾಲ್ ಇನ್ ಟು ಕ್ವೆಷ್ಚನ್ ಹಾಕ್-ಐಸ್ ಆಕ್ಯುರೆಸಿ - ಟೆನ್ನಿಸ್ - ESPN. Sports.espn.go.com (೨೦೦೮-೦೬-೧೯). ೨೦೧೦-೦೮-೧೫ ರಂದು ಪಡೆಯಲಾಗಿದೆ.
  2. ೨.೦ ೨.೧ ೨.೨ ವೀಡಿಯೋ ಪ್ರೊಸೆಸರ್ ಸಿಸ್ಟಮ್ಸ್ ಫಾರ್ ಬಾಲ್ ಟ್ರ್ಯಾಕಿಂಗ್ ಇನ್ ಬಾಲ್ ಗೇಮ್ಸ್ esp@cenet ಪೇಟೆಂಟ್ ಡಾಕ್ಯುಮೆಂಟ್, ೨೦೦೧-೦೬-೧೪
  3. ೩.೦ ೩.೧ "Hawk-Eye ball-tracking firm bought by Sony". BBC News. 7 March, 2011. Retrieved 2011-03-07. {{cite web}}: Check date values in: |date= (help)
  4. "Cricinfo - Hawk-Eye bought by Wisden Group". Content-usa.cricinfo.com. Retrieved 2009-06-01.
  5. "About ICC - Rules and Regulations". Icc-cricket.yahoo.com. 2009-01-01. Archived from the original on 2008-12-26. Retrieved 2009-06-01.
  6. "Nine admits Hawk-Eye not foolproof » The Roar - Your Sports Opinion". The Roar. 2008-01-24. Retrieved 2009-06-01.
  7. ಕ್ಯಾನ್ ಕ್ಯಾಮೆರಾಸ್ ಎಂಡ್ ಸಾಫ್ಟ್‌ವೇರ್ ರಿಪ್ಲೇಸ್ ರೆಫರೀಸ್? - ಪಾಪ್ಯುಲರ್ ಮೆಕ್ಯಾನಿಕ್ಸ್. PopularMechanics.com (೨೦೧೦-೦೫-೧೨). ೨೦೧೦-೦೯-೦೩ರಂದು ಪಡೆಯಲಾಗಿದೆ.
  8. "ಆರ್ಕೈವ್ ನಕಲು". Archived from the original on 2006-08-21. Retrieved 2011-04-11.
  9. 12:00PM Friday Mar 02, 2007 By Barry Wood (2007-03-02). "Tennis: Nadal blames line calling system for losing - 02 Mar 2007 - nzherald: Sports news - New Zealand and International Sport news and results". nzherald. Archived from the original on 2007-09-29. Retrieved 2009-06-01.{{cite web}}: CS1 maint: numeric names: authors list (link)
  10. "Gulfnews: Hawk-Eye leaves Nadal and Federer at wits' end". Archive.gulfnews.com. 2007-03-03. Archived from the original on 2009-01-29. Retrieved 2009-06-01.
  11. Pavia, Will (2007-07-10). "HawkEye creator defends his system after Federers volley". The Times. London. Retrieved 2010-05-04.
  12. "Berdych joins Federer in anti-Hawk-Eye club". 2009-01-27. Archived from the original on 2012-09-21. Retrieved 2009-06-29.
  13. "ಹಾಕ್-ಐ ವೆಬ್‌ಸೈಟ್" (PDF). Archived from the original (PDF) on 2011-10-04. Retrieved 2011-04-11.
  14. http://www.hawkeyeinnovations.co.uk/?page_id=೧೦೧೧[ಶಾಶ್ವತವಾಗಿ ಮಡಿದ ಕೊಂಡಿ]
  15. ೧೫.೦ ೧೫.೧ ೧೫.೨ Newman, Paul (೨೦೦೭-೦೬-೨೩). "Hawk-Eye makes history thanks to rare British success story at Wimbledon". The Independent. Archived from the original on 2011-08-18. Retrieved ೨೦೧೦-೧೨-೦೩. {{cite web}}: Check date values in: |accessdate= and |date= (help)
  16. "Hawk-Eye challenge rules unified". BBC News. 2008-03-19. Retrieved 2008-08-22.
  17. ಯೂಸಸ್ ಇನ್ ಪುಟ್‌ಬಾಲ್ (ಸಾಕರ್): ಟೈಮ್ಸ್ಆನ್‌ಲೈನ್ ವೆಬ್‌ಸೈಟ್.
  18. GOAL.com, ಹಾಕ್-ಐ ಗೋಲ್-ಲೈನ್ ತಂತ್ರಜ್ಞಾನಕ್ಕೆ ಫಿಫಾ ಹಸಿರು ನಿಶಾನೆ ಮಾರ್ಚ್ ೧೪, ೨೦೧೧.
  19. "Press Office - BBC Sport to feature Hawk-eye in World Snooker Championship coverage". BBC. Retrieved 2009-06-01.
  20. ಯೂಸಸ್ Archived 2012-09-03 at Archive.is ಇನ್ ಗೇಲಿಕ್ ಫುಟ್‌ಬಾಲ್ ಎಂಡ್ ಹರ್ಲಿಂಗ್. ದಿ ಐರಿಷ್ ಟೈಮ್ಸ್.
  21. ಆಸ್ಟ್ರೇಲಿಯ ಮಾಧ್ಯಮದ ಕೆಲವು ವಿಭಾಗಗಳು ಅಂಪೈರ್ ಸ್ಟೀವ್ ಬಕ್ನರ್ ಅವರು ತಿರಸ್ಕರಿಸಿದ ಆಂಡ್ರೂ ಸೈಮಂಡ್ಸ್ ಅವರ ವಿರುದ್ಧ ಅನಿಲ್ ಕುಂಬ್ಳೆ ಅವರು ಮಾಡಿದ ಎಲ್‌ಬಿಡಬ್ಲ್ಯೂ ಮನವಿಯ ಹಾಕ್-ಐ ವಿಶ್ಲೇಷಣೆಯನ್ನು ಪ್ರಶ್ನಿಸಿದ್ದಾರೆ. Archived 2011-10-04 ವೇಬ್ಯಾಕ್ ಮೆಷಿನ್ ನಲ್ಲಿ.. (ಪಿಡಿಎಫ್). ೨೦೧೦-೦೮-೧೫ರಂದು ಪಡೆಯಲಾಗಿದೆ.
  22. IEEE ಸ್ಪೆಕ್ಟ್ರಮ್: ವಿಂಬಲ್ಡನ್‌ನಲ್ಲಿ ಮತ್ತೆ ಆಸಕ್ತಿಯ ಕೇಂದ್ರಬಿಂದುವಾದ ಹಾಕ್-ಐ. Spectrum.ieee.org. ೨೦೧೦-೦೮-೧೫ರಂದು ಪಡೆಯಲಾಗಿದೆ.
  23. ಬಿಗ್ ಡಿಬೇಟ್: ಹಾಕ್-ಐ ಅನ್ನು ರೋಜರ್ ಫೆಡರರ್ ಟೀಕಿಸಿದ್ದು ಸರಿಯೇ? ಕ್ರೀಡೆ ದಿ ಗಾರ್ಡಿಯನ್ ೨೦೧೦-೦೮-೧೫ರಂದು ಪಡೆಯಲಾಗಿದೆ.
  24. ಹಾಕ್-ಐ ಕ್ರಿಕೆಟ್ ಸಿಸ್ಟಮ್. Topendsports.com (೨೦೦೧-೦೪-೨೧). ೨೦೧೦-೦೮-೧೫ರಂದು ಪಡೆಯಲಾಗಿದೆ.
  25. ಕಾಲಿನ್ಸ್, ಹೆಚ್. ಮತ್ತು ಇವಾನ್ಸ್, ಆರ್. ೨೦೦೮. "ಯು ಕೆನಾಟ್ ಬೀ ಸೀರಿಯಸ್! 'ಹಾಕ್-ಐ'" ಗೆ ವಿಶೇಷ ಗಮನದೊಂದಿಗೆ ತಂತ್ರಜ್ಞಾನದ ಕುರಿತಂತೆ ಸಾರ್ವಜನಿಕರ ಅರಿವು. ಪಬ್ಲಿಕ್ ಅಂಡರ್‌ಸ್ಟಾಂಡಿಂಗ್ ಸೈನ್ಸ್ ೧೭:೩

ಬಾಹ್ಯ ಕೊಂಡಿಗಳು‌[ಬದಲಾಯಿಸಿ]

"https://kn.wikipedia.org/w/index.php?title=ಹಾಕ್-ಐ&oldid=1204514" ಇಂದ ಪಡೆಯಲ್ಪಟ್ಟಿದೆ