ಹಸಲರು
ಕೆಳದಿ ಅರಸರ (ಕ್ರಿ.ಶ. 1499-1763) ಆಳ್ವಿಕೆಯ ಕಾಲದಲ್ಲಿ ಹಸಲರು ಸಮುದಾಯವು ಮಲೆನಾಡು ಪ್ರದೇಶದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿತ್ತು. ಹಸಲರು ಮೂಲತಃ ಕರಾವಳಿ ಮತ್ತು ಮಲೆನಾಡು ಭಾಗದ ಕಾಡುಗಳಲ್ಲಿ ವಾಸಿಸುತ್ತಿದ್ದ ಆದಿವಾಸಿಗಳಾಗಿದ್ದರು. [೧]
ಕೆಳದಿ ರಾಜ್ಯದ ಅವಧಿಯಲ್ಲಿ ಇವರ ಮುಖ್ಯ ಪಾತ್ರಗಳು ಈ ಕೆಳಗಿನಂತಿವೆ:[೨]
- ಕೃಷಿ ಕಾರ್ಮಿಕರು: ಕೆಳದಿ ಅರಸರು ಕೃಷಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರು. ವಿಶೇಷವಾಗಿ ಶಿವಪ್ಪ ನಾಯಕನ ಕಾಲದಲ್ಲಿ ಜಾರಿಗೆ ಬಂದ ಕಂದಾಯ ಪದ್ಧತಿಯಲ್ಲಿ ಹಸಲರು ಅಡಿಕೆ ತೋಟಗಳು ಮತ್ತು ಗದ್ದೆಗಳಲ್ಲಿ ಪರಿಣಿತ ಕಾರ್ಮಿಕರಾಗಿ ದುಡಿಯುತ್ತಿದ್ದರು.
- ಅರಣ್ಯ ಉತ್ಪನ್ನಗಳ ಸಂಗ್ರಹ: ಇವರು ಜೇನುತುಪ್ಪ, ಗಿಡಮೂಲಿಕೆಗಳು ಮತ್ತು ಇತರ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ ಅಂದಿನ ಆರ್ಥಿಕತೆಗೆ ಕೊಡುಗೆ ನೀಡುತ್ತಿದ್ದರು.
- ರಕ್ಷಣೆ ಮತ್ತು ಸೇವೆ: ಸ್ಥಳೀಯ ಪಾಳೆಯಗಾರರು ಮತ್ತು ಕೆಳದಿ ಸೈನ್ಯಕ್ಕೆ ಮಲೆನಾಡಿನ ಗುಪ್ತ ಹಾದಿಗಳ ಬಗ್ಗೆ ಹಸಲರು ಮಾಹಿತಿ ನೀಡುತ್ತಿದ್ದರು. ಅಲ್ಲದೆ, ಕಠಿಣ ಪರಿಶ್ರಮಕ್ಕೆ ಹೆಸರಾದ ಇವರು ಅರಮನೆ ಮತ್ತು ಕೋಟೆಗಳ ನಿರ್ಮಾಣ ಕಾರ್ಯಗಳಲ್ಲಿಯೂ ನೆರವಾಗುತ್ತಿದ್ದರು.
- ಸಾಂಪ್ರದಾಯಿಕ ಕಸುಬುಗಳು: ಕಾಡು ಮತ್ತು ಅಡಿಕೆ ತೋಟಗಳ ನಿರ್ವಹಣೆಯಲ್ಲಿ ಇವರು ನೈಪುಣ್ಯ ಹೊಂದಿದ್ದರು. ಹಸಲರು ತಮ್ಮದೇ ಆದ ಸ್ವತಂತ್ರ ಕುಲವನ್ನಾಗಲೀ ಅಥವಾ ಆಡಳಿತವನ್ನಾಗಲೀ ನಡೆಸದಿದ್ದರೂ, ಮಲೆನಾಡಿನ ಆರ್ಥಿಕ ಬೆನ್ನೆಲುಬಾಗಿದ್ದರು.
ಕೆಳದಿ ಸಂಸ್ಥಾನದ ಇತಿಹಾಸದಲ್ಲಿ ಹಸಲರು ಜನಾಂಗವು ಮುಖ್ಯವಾಗಿ ಕೃಷಿ, ಅರಣ್ಯ ಉತ್ಪನ್ನಗಳ ಸಂಗ್ರಹಣೆ ಮತ್ತು ಕೆಳದಿ ಅರಸರ ಸೈನ್ಯದಲ್ಲಿ ಬೆಂಬಲಿತ ವರ್ಗವಾಗಿ ಪಾತ್ರ ವಹಿಸಿದ್ದರು. ಮಲೆನಾಡು ಭಾಗದಲ್ಲಿ ನೆಲೆಸಿದ್ದ ಇವರು, ಕೆಳದಿ ನಾಯಕರ ಆಡಳಿತಾವಧಿಯಲ್ಲಿ ಪ್ರಮುಖವಾಗಿ ಸಾಗುವಳಿ, ಕೃಷಿ ಕಾರ್ಮಿಕರಾಗಿ ಮತ್ತು ಆಡಳಿತಕ್ಕೆ ಬೇಕಾದ ಅರಣ್ಯ ಸಂಪನ್ಮೂಲಗಳ ಪೂರೈಕೆಯಲ್ಲಿ ತೊಡಗಿಸಿಕೊಂಡಿದ್ದರು. [೩]ಹ
ಜೀವನ ಮತ್ತು ಆಹಾರ ಕ್ರಮ:
ಮೂಲತಃ ಹಸಲರು ಬೇಟೆಗಾರರಾಗಿದ್ದು, ಕಾಡು ಕುರಿ ಮತ್ತು ಇನ್ನಿತರ ಪ್ರಾಣಿಗಳಾನ್ನು ಬೇಟೆಯಾಡುತ್ತಿದ್ದರು, ಕ್ರಮೇಣ ನೆಡುತೋಪು ಕೆಲಸದಲ್ಲಿ ತೊಡಗಿಕೋಡು ಕೃಷಿ ಕಾರ್ಮಿಕರಾದರು. ಸಹ್ಯಾದ್ರಿ ಘಟ್ಟದ (ಪಶ್ಚಿಮ ಘಟ್ಟ) ಚಹಾ ಮತ್ತು ಕಾಫಿ ತೋಟಗಳಲ್ಲಿ ಹಸಲರು ಪ್ರಮುಖ ಕಾರ್ಮಿಕರಾಗಿದ್ದಾರೆ. ಹಸಲರು ಬಹುತೇಕ ತಮ್ಮ ಹೆಚ್ಚಿನ ಸಮಯವನ್ನು ಗದ್ದೆ ಅಥವಾ ತೋಟಗಳಲ್ಲೇ ಕಳೆಯುತ್ತಾರೆ . ಅಡಕೆಯ ಮರ ಹತ್ತುವ ಕಲೆಯಲ್ಲಿ ನಿಪುಣರಾಗಿದ್ದಾರೆ. ಒಬ್ಬ ಜಮೀನುದಾರರೊಂದಿಗೆ ಶಾಶ್ವತವಾಗಿ ಕೆಲಸ ಮಾಡುವ ಹಸಲರನ್ನು (ಮುಲಾಡಾ) ಎಂದು ಕರೆಯುತ್ತಾರೆ. ತುಳು ಅವರ ಮಾತೃಭಾಷೆ, ಆದರೆ ಕನ್ನಡವನ್ನು ಹೆಚ್ಚಾಗಿ ಮಾತನಾಡುತ್ತಾರೆ. ಅಕ್ಕಿ ಅವರ ಪ್ರಧಾನ ಆಹಾರವಾಗಿದೆ, ಸ್ಥಳೀಯವಾಗಿಲಭ್ಯವಿರುವ ತರಕಾರಿಗಳನ್ನು ಗೆಡ್ಡೆ ಗೆಣಸು ಕಾಡು ಪ್ರಾಣಿ ಪಕ್ಷಿಗಳನ್ನು ತಿನ್ನುತ್ತಾರೆ. ಅಕ್ಕಿ, ಗೋಡಂಬಿ ಹಣ್ಣಿನ ರಸ ಮತ್ತು ಬೈನೆ ಮರದ ರಸವನ್ನು ಹುದುಗಿಸಿ ಮಧ್ಯರಸವನ್ನು ಪಡೆದು ಸೇವಿಸುತ್ತಾರೆ. ಅವರು ಜೇನುತುಪ್ಪ ಮತ್ತು ಇತರ ಅರಣ್ಯ ಆಹಾರ ಉತ್ಪನ್ನಗಳನ್ನು ಸಂಗ್ರಹಿಸುತ್ತಾರೆ. ಅವರು ಕೋಲಾ ಎಂದು ಕರೆಯಲ್ಪಡುವ ಭೂತಾ ಪೂಜಾದಲ್ಲಿ ಪಾಲ್ಗೊಳ್ಳುತ್ತಾರೆ.ಸಿಗಂದೂರು ಚೌಡೇಶ್ವರಿ ಮತ್ತು ಬೂತಪ್ಪ ಮೂಲತಃ ಹಸಲರು ಕುಟುಂಬಕ್ಕೆ ಸೆರಿದ ಮನೆ ದೇವರು ಇವಾಗಲು ಅಲ್ಲಿನ ಬೂತಪ್ಪ ಪೂಜೆ ಮಾಡುವುದು ಹಸಲರು ಕುಟುಂಬ.ಹಿಂದೂ ಜಾತಿ ಪದ್ದತಿ ಯಿಂದ ದೂರ ಸ್ವತಂತ್ರ ವಾಗಿ ಕಾಡಲ್ಲೆ ಬೆಳೆದವರು ಅಂತರವನ್ನು ಬಯಸುತ್ತಾರೆ . ಹಸಲರು ಗುರಿಕಾರಾ ಎಂದು ಕರೆಯಲ್ಪಡುವ ಆನುವಂಶಿಕ ಮುಖ್ಯಸ್ಥನನ್ನು ಹೊಂದಿರುತ್ತಾರೆ. ಇತರ ಹಿರಿಯರ ಸಹಾಯದಿಂದ ಮುಖ್ಯಸ್ಥ, ವಿವಾದಗಳನ್ನು ಪರಿಹರಿಸುತ್ತದೆ. ಅಪರಾಧದ ಮೇಲೆ ಶಿಕ್ಷೆಯನು ವಿಧಿಸಲಾಗುತ್ತದೆ [೪] [೫] [೬].
ಉಡುಗೆ:
ಸಾಮಾನ್ಯವಾಗಿ ಮಹಿಳೆಯರು ಸಿರೆ ಮತ್ತು ಕುಪ್ಪಸ ಧರಿಸುತ್ತಾರೆ. ಪುರುಷರು ಪಂಚೆ ಧರಿಸುತ್ತಾರೆ. ಒಣ ಅಡಿಕೆ ಎಲೆಗಳಿಂದ ತಯಾರಿಸಿದ ಮಂಡೆ ಹಾಳೆ ಅಥವಾ ಹಾಳೆ ಟೋಪಿ ಎಂದು ಕರೆಯೂವ ಟೋಪಿಯನ್ನು ಧರಿಸುತ್ತಾರೆ. ಹೆಗಲಿಗೊಂದು ಚೀಲ, ನಡಕ್ಕೊಂದು(ನಡುವಿಗೊಂದು) ಕೂಡಗೋಲು ಧರಿಸಿ ತೋಟಗಳಲ್ಲಿ ಮತ್ತು ಗದ್ದೆಗಳಲ್ಲಿ ಕೆಲಸ ಮಾಡುತ್ತಾರೆ[೭].
ಜನಸಂಖ್ಯೆ:
2001 ರ ಜನಗಣತಿಯ ಪ್ರಕಾರ ಹಸಲರು ಜನಸಂಖ್ಯೆ 20,820 ಮತ್ತು 2011 ರ ಜನಗಣತಿಯ ಪ್ರಕಾರ 24,466 ರಷ್ಟು ಇದೆ. ಹಸಲರಲ್ಲಿ ಸಾಕ್ಷರತೆಯು ತುಂಬಾ ಕಡಿಮೆ ಇದೆ. ಇತ್ತೀಚೆಗೆ ಅವರು ಮಕ್ಕಳನ್ನು ಪ್ರಾಥಮಿಕ ಶಾಲೆಗೆ ಕಳುಹಿಸಲು ಪ್ರಾರಂಭಿಸಿದ್ದಾರೆ [೮].
ಜನಪ್ರಿಯ ಸಂಸ್ಕೃತಿ ಮತ್ತು ಕಲೆಯಲ್ಲಿ:
ಹಸಲರು ಬುಡಕಟ್ಟು ಜನಾಂಗದ ತ್ಯಾಗ ಮತ್ತು ಶ್ರಮದ ಪ್ರತಿಫಲವಾಗಿ ಶಿವಮೊಗ್ಗ ಜಿಲ್ಲೆಯ 'ಲಿಂಗನಮಕ್ಕಿ ಅಣೆಕಟ್ಟೆಯು' ನಿರ್ಮಾಣಗೊಂಡಿದೆ ಎಂದು ಹೇಳುತ್ತರೆ. ಬಹುತೇಕ ಹಸಲರು ಸಮುದಾಯವನ್ನು 1964ರಲ್ಲಿ ಲಿಂಗನಮಕ್ಕಿ ಆಣೆಕಟ್ಟು ಕಟ್ಟುವ ಸಂದರ್ಭದಲ್ಲಿ ಅಣೆಕಟ್ಟಿನ ಹಿನ್ನೀರಿನ ಪ್ರದೇಶಕ್ಕೆ ಸ್ಥಳಾಂತರಗೊಳಿಸಲಾಯಿತು. ಆದರೆ ಹಸಲರು ಹಿನ್ನಿರಿನ ನಡುಗಡ್ಡೆಯಲ್ಲಿ ಶೋಚನೀಯ ಜೀವನ ನಡೆಸುತ್ತಿದ್ದಾರೆ. ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ 'ದ್ವೀಪ' ಚಿತ್ರವು ಅರಣ್ಯ ಮೂಲ ಬುಡಕಟ್ಟು ಹಸಲರ ಜನರ ಕಥನವನ್ನು ಈ ಲಿಂಗನಮಕ್ಕಿಯ ಅಣೆಕಟ್ಟಿನ ಹಿನ್ನಲೆಯಾಗಿ ಹುಟ್ಟಿಕೊಂಡ ಅವರ ಸಮಸ್ಯೆಗಳ ಕುರಿತಾಗಿ ಹೇಳುತ್ತದೆ. [೯].
ಉಲ್ಲೇಖಗಳು:
- ↑
{{cite web}}: Empty citation (help) - ↑
{{cite web}}: Empty citation (help) - ↑ ಹಸಲರು.
{{cite web}}: Missing or empty|title=(help); Missing or empty|url=(help) - ↑ http://documents.worldbank.org/curated/en/326141468260650104/text/multi0page.txt
- ↑ http://oldrol.lbp.world/UploadArticle/157.pdf
- ↑ https://joshuaproject.net/people_groups/18774/IN
- ↑ http://oldrol.lbp.world/UploadArticle/157.pdf
- ↑ https://joshuaproject.net/people_groups/18774/IN
- ↑ https://zeenews.india.com/kannada/culture/hasalaru-tribes-of-malenadu-region-924