ಹರ್ಮನ್ ಕರ್ಜ್
ಹರ್ಮನ್ ಕರ್ಜ್ (30 ನವೆಂಬರ್ 1813 – 10 ಒಕ್ಟೋಬರ್ 1873) ಹೆಸರಾಂತ ಜರ್ಮನ್ ಕಾದಂಬರಿಕಾರ. ಜನನ ಹಾಯ್ಟ್ಲಿಂಗೆನಿನಲ್ಲಿ. ಪಿಲ್ಲರ್ಸ್ ಹೀಮತ್ ಜಾಹ್ರೆ ಮತ್ತು ಡೆರ್ ಸೊನೆನ್ ವಿರ್ಟ್ ಎಂಬ ಈತನ ಐತಿಹಾಸಿಕ ಕಾದಂಬರಿಗಳು ಇವನ ಖ್ಯಾತಿಯನ್ನು ಇಂದಿಗೂ ಉಳಿಸಿವೆ. ಮಾಲ್ಬ್ರೌನ್ ಮತ್ತು ಟ್ಯೂಂಬಿಗೆನ್ ನಗರಗಳಲ್ಲಿ ಈತನ ವಿದ್ಯಾಭ್ಯಾಸ ನಡೆಯಿತು. ಅನಂತರ ಬರೆಹವೇ ಈತನ ವೃತ್ತಿಯಾಯಿತು; ತಾನು ಹುಟ್ಟಿ ಬೆಳೆದ ಪ್ರಾಂತ್ಯದ ಬದುಕನ್ನೇ ಕಣ್ಣಿಗೆ ಕಟ್ಟುವಂತೆ ಚಿತ್ರಿಸುವ ಶ್ರೇಷ್ಠಕೃತಿಗಳನ್ನು ಬರೆದ. ಮೂರು ಸಂಪುಟಗಳಲ್ಲಿರುವ ಎeóರ್Áಹಿಲಂಗೆನ್ (1858-63) ಎಂಬುದು ಸ್ವಾಬಿಯನ್ ಜೀವನವನ್ನು ವರ್ಣರಂಜಿತವಾಗಿ ಚಿತ್ರಿಸುವ ಈತನ ಒಂದು ಕಥಾಸಂಕಲನ. ತನ್ನ ಬರಹಗಳಿಂದ ಹಣ ಮತ್ತು ಹೆಸರು ಬರಲಿಲ್ಲವಾದರೂ ಬರೆವ ಹವ್ಯಾಸವನ್ನು ಮುಂದುವರಿಸಿ ಇಂಗ್ಲಿಷ್, ಸ್ಟ್ಯಾನಿಷ್, ಇಟಾಲಿಯನ್ ಮತ್ತು ಮಧ್ಯ ಜರ್ಮನ್ ಭಾಷೆಗಳಿಂದ ಕೆಲವು ಶ್ರೇಷ್ಠ ಕೃತಿಗಳ ಭಾಷಾಂತರ ಮಾಡಿದ. ಸಾಹಿತ್ಯಕ್ಕೆ ಮೀಸಲಾದ ಪತ್ರಿಕೆಯೊಂದರ ಸಂಪಾದಕನಾಗಿಯೂ (1843-54) ರಾಜಕಾರಣಿಯಾಗಿಯೂ ದುಡಿದ. ಅನಂತರ ಟ್ಯೂಂಬಿಗೆನಿನಲ್ಲಿ ವಿಶ್ವವಿದ್ಯಾನಿಲಯದ ಗ್ರಂಥಪಾಲನಾಗಿ ಕೆಲಸಮಾಡುತ್ತಿದ್ದು ಅದೇ ನಗರದಲ್ಲಿ ನಿಧನನಾದ. ಈತನ ಮಗಳಾದ ಐಸೋಲ್ಡ್ ಕರ್ಜ್ ಸಹ ಈತನಂತೆಯೇ ಕವನಗಳನ್ನೂ ಕಾದಂಬರಿಗಳನ್ನೂ ಬರೆದಿದ್ದಾಳೆ. ಹರ್ಮನ್ ಫಿಷರ್ ಎಂಬುವನ ಸಂಪಾದಕತ್ವದಲ್ಲಿ ಈತನ ಎಲ್ಲಿ ಕೃತಿಗಳೂ 12 ಸಂಪುಟಗಳಲ್ಲಿ ಪ್ರಕಟವಾಗಿವೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Chisholm, Hugh, ed. (1911). . Encyclopædia Britannica (11th ed.). Cambridge University Press.
{{cite encyclopedia}}
: Cite has empty unknown parameters:|separator=
and|HIDE_PARAMETER=
(help)